For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಎತ್ತರವು ಅವರ ಆರೋಗ್ಯದ ಎಲ್ಲಾ ರಹಸ್ಯಗಳನ್ನು ಬಿಚ್ಚಿಡುತ್ತದೆಯಂತೆ!

|

ಮಹಿಳೆಯರು ಎಂದಾಕ್ಷಣ ಮೊದಲು ಮನಸ್ಸಿಗೆ ಬರುವುದು ಸೂಕ್ಷ್ಮ ವ್ಯಕ್ತಿತ್ವದವರು ಎನ್ನುವುದು. ಒಂದು ಕುಟುಂಬವೇ ಆಗಿರಲಿ ಅಥವಾ ಸಮಾಜವೇ ಇರಲಿ ಅಲ್ಲಿ ಒಂದು ಸಂಭ್ರಮದ ವಾತಾವರಣ ಸೃಷ್ಟಿಸುವ ಸಾಮಥ್ರ್ಯ ಇರುವುದು ಮಹಿಳೆಗೆ ಮಾತ್ರ. ಪ್ರತಿಯೊಂದು ವಿಷಯದಲ್ಲೂ ವಿಭಿನ್ನತೆಯನ್ನು ಕಾಣುತ್ತಾ, ಅದಕ್ಕೊಂದು ಹೊಸತನದ ಮೆರಗು ನೀಡಿ, ತನ್ನ ಸುತ್ತಲಿನ ಪರಿಸರದಲ್ಲಿ ಸಂತೋಷ ಹಾಗೂ ಸಡಗರವನ್ನು ನಿರ್ಮಿಸುವ ಸಾಮಥ್ರ್ಯ ಇರುವುದು ಕೇವಲ ಹೆಣ್ಣಿನಲ್ಲಿ ಮಾತ್ರ ಎನ್ನಬಹುದು. ಸೃಷ್ಟಿಯ ಸುಂದರ ಹಾಗೂ ಶ್ರೇಷ್ಠವಾದ ನಿರ್ಮಾಣ ಎಂದರೆ ಹೆಣ್ಣು. ಹೆಣ್ಣಿನ ಶ್ರೇಷ್ಠತೆ ಕೇವಲ ಮನುಷ್ಯ ಕುಲದಲ್ಲಷ್ಟೇ ಅಲ್ಲಾ, ಎಲ್ಲಾ ಜೀವ ಸಂಕುಲದಲ್ಲಿಯೂ ಹೆಣ್ಣು ಒಂದು ವಿಶೇಷವಾದ ಸಾಮಥ್ರ್ಯ ಹೊಂದಿರುತ್ತಾಳೆ.

ಒಂದು ಕುಟುಂಬದ ಆರೋಗ್ಯ ಹಾಗೂ ಕಾಳಜಿಯನ್ನು ನಿರ್ವಹಿಸುವವಳು ಹೆಣ್ಣು. ಹೆಣ್ಣಿನ ಬುದ್ಧಿವಂತಿಕೆ, ವರ್ತನೆ, ಸೌಂದರ್ಯ ಹಾಗೂ ಆರೋಗ್ಯವು ಒಂದು ಮನೆಯ ಬೆಳಗಲು ಬಹು ಮುಖ್ಯವಾದ ಸಂಗತಿಗಳಾಗಿರುತ್ತವೆ. ಯಾವ ಸಂಸಾರದಲ್ಲಿ ಹೆಣ್ಣು ಉತ್ತಮ ಆರೋಗ್ಯ ಹಾಗೂ ತನ್ನ ಕೆಲಸವನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಾಳೋ ಆ ಮನೆಯು ಸದಾ ಸಂತೋಷ ಹಾಗೂ ಸಮೃದ್ಧಿಯಿಂದ ಕೂಡಿರುವುದು ಎಂದು ಹೇಳಬಹುದು. ಇಂದಿನ ದಿನಮಾನದಲ್ಲಿ ಹೆಚ್ಚುತ್ತಿರುವ ಮಾಲಿನ್ಯ, ಕಲುಷಿತ ಆಹಾರ, ಜೀವನ ಕ್ರಮ, ಆನುವಂಶಿಕವಾಗಿ ಬರುವ ಕೆಲವು ಸಂಗತಿಗಳಿಂದಾಗಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವುದು ಸಹಜ.

ಹೆಣ್ಣು ಮನೆಗೆ ಎಷ್ಟು ಪ್ರಮುಖವಾದವಳೋ ಅಷ್ಟೇ ಪ್ರಮುಖವಾದದ್ದು ಅವಳ ಆರೋಗ್ಯ

ಹೆಣ್ಣು ಮನೆಗೆ ಎಷ್ಟು ಪ್ರಮುಖವಾದವಳೋ ಅಷ್ಟೇ ಪ್ರಮುಖವಾದದ್ದು ಅವಳ ಆರೋಗ್ಯ

ಹೆಣ್ಣು ಮನೆಗೆ ಎಷ್ಟು ಪ್ರಮುಖವಾದವಳೋ ಅಷ್ಟೇ ಪ್ರಮುಖವಾದದ್ದು ಅವಳ ಆರೋಗ್ಯ ಹಾಗೂ ಒಳಿತು. ಒಂದು ಮನೆಯಲ್ಲಿ ಇರುವ ಹೆಣ್ಣು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಂತೋಷದಿಂದ ಇದ್ದಾಳೆ ಎಂದಾದರೆ ಆ ಮನೆಯು ಸುಖ-ಸಮೃದ್ಧಿಯಿಂದ ಕೂಡಿರುತ್ತದೆ ಎನ್ನುವ ಮಾತುಗಳಿವೆ. ಆದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಪರಿಪೂರ್ಣತೆಯ ಆರೋಗ್ಯವನ್ನು ಹೊಂದಿರುವ ವ್ಯಕ್ತಿಗಳು ಬೆರಳೆಣಿಕೆಯಲ್ಲಿ ಸಿಗಬಹುದು ಅಷ್ಟೇ. ಬಹುತೇಕ ಮಹಿಳೆಯರು ಸಾಕಷ್ಟು ಕಷ್ಟ ಹಾಗೂ ಅನಾರೋಗ್ಯದಿಂದ ಬಳಲುವುದನ್ನು ನಾವು ಕಾಣಬಹುದು.

ಗರ್ಭಾವಸ್ಥೆ

ಗರ್ಭಾವಸ್ಥೆ

ಗರ್ಭಾವಸ್ಥೆ ಎನ್ನುವುದು ಪ್ರಕೃತಿಯಲ್ಲಿ ಅವಳಿಗಿರುವ ಒಂದು ವಿಶೇಷ ಶಕ್ತಿ ಅಥವಾ ಕೊಡುಗೆ ಎಂದು ಹೇಳಲಾಗುವುದು. ಆದರೆ ಅದೇ ಗರ್ಭಾವಸ್ಥೆಯಲ್ಲಿ ಅನುಭವಿಸಬೇಕಾದ ಕೆಲವು ಆರೋಗ್ಯ ಸಮಸ್ಯೆಗಳು ಅಥವಾ ಪ್ರಸವದ ನಂತರ ಕಾಣಿಸಿಕೊಳ್ಳುವ ಕೆಲವು ಆರೋಗ್ಯ ಸಮಸ್ಯೆಯು ಜೀವನ ಪರ್ಯಂತ ಕಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅದರಲ್ಲೂ ಮೂಳೆಗೆ ಸಂಬಂಧಿಸಿದ ಸಮಸ್ಯೆ ಹಾಗೂ ನೋವುಗಳು ಅಧಿಕವಾಗಿ ಇರುತ್ತವೆ ಎಂದು ಹೇಳಲಾಗುವುದು. ಈ ನಿಟ್ಟಿನಲ್ಲಿಯೇ ಮಹಿಳೆಯರ ಆರೋಗ್ಯ ಮತ್ತು ಮನಸ್ಸು ಎರಡು ಬಹಳ ಸೂಕ್ಷ್ಮತೆಯಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.

ಆಕೆ ಪ್ರಕೃತಿಯ ವಿಶೇಷ ಕೊಡುಗೆ ಹಾಗೂ ಸಮಾಜದ ಕೇಂದ್ರ ಬಿಂದು

ಆಕೆ ಪ್ರಕೃತಿಯ ವಿಶೇಷ ಕೊಡುಗೆ ಹಾಗೂ ಸಮಾಜದ ಕೇಂದ್ರ ಬಿಂದು

ಪ್ರಕೃತಿಯ ವಿಶೇಷ ಕೊಡುಗೆ ಹಾಗೂ ಸಮಾಜದ ಕೇಂದ್ರ ಬಿಂದು ಎನಿಸಿಕೊಳ್ಳುವ ಮಹಿಳೆಯರು ತಮ್ಮ ದೈಹಿಕ ವ್ಯಾಯಾಮ ಹಾಗೂ ಆನುವಂಶಿಕದ ಹಿನ್ನೆಲೆಯಲ್ಲಿ ವಿಶೇಷವಾದ ದೈಹಿಕ ಎತ್ತರವನ್ನು ಪಡೆದುಕೊಳ್ಳುತ್ತಾರೆ. ಇವರ ದೇಹದ ನಿಲುವು ಕೆಲವು ಆರೋಗ್ಯ ಸಮಸ್ಯೆಯಿಂದ ದೂರ ಇಟ್ಟರೆ. ಇನ್ನೂ ಕೆಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಗಳಿರುತ್ತವೆ ಎಂದು ಕೆಲವು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಮಹಿಳೆಯರ ಆರೋಗ್ಯದ ಗುಟ್ಟು ಅವರವರ ದೇಹದ ಎತ್ತರದಲ್ಲಿಯೇ ಇರುತ್ತದೆ ಎಂದು ಹೇಳಲಾಗುವುದು. ಹಾಗಾದರೆ ಯಾವ ಯಾವ ಎತ್ತರದಲ್ಲಿ ಇರುವ ಮಹಿಳೆಯರು ಏನೆಲ್ಲಾ ಸಾಮಾನ್ಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು ಎನ್ನುವುದನ್ನು ತಿಳಿಯಲು ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ವಿವರಣೆಯನ್ನು ನೋಡಿ ತಿಳಿಯಿರಿ.

Most Read: ಗುರುತು ಮರೆಮಾಚಿ ಕ್ಷೌರದಂಗಡಿ ನಡೆಸುತ್ತಿರುವ ಸಹೋದರಿಯರು!

ಮಹಿಳೆಯರ ಎತ್ತರ

ಮಹಿಳೆಯರ ಎತ್ತರ

ನಿಜ, ಮಹಿಳೆಯರ ಎತ್ತರ ಅವರ ಸೌಂದರ್ಯವನ್ನು ಮಾತ್ರ ನಿರ್ಧರಿಸುವುದಿಲ್ಲ. ಆರೋಗ್ಯ ವಿಚಾರದಲ್ಲೂ ತುಲನಾತ್ಮಕವಾಗಿ ಇರುತ್ತದೆ ಎಂದು ಹೇಳಬಹುದು. ಒಬ್ಬ ಮಹಿಳೆಯ ಎತ್ತರವು ಅವಳಿಗೆ ಬರುವ ಬುದ್ಧಿಮಾಂದ್ಯತೆ, ಹೃದಯ ಸಮಸ್ಯೆ, ಕ್ಯಾನ್ಸರ್, ಆನುವಂಶಿಕ ಸಮಸ್ಯೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ತೆರೆದಿಡುತ್ತದೆ. ಹಾಗಾಗಿ ಕೆಲವು ಆರೋಗ್ಯ ಸಮಸ್ಯೆಯು ಎತ್ತರದ ಆಧಾರದಲ್ಲಿಯೇ ದೂರ ಉಳಿಯುತ್ತವೆ ಎಂದು ಸಹ ಹೇಳಲಾಗುವುದು.

ಇವರು ಕ್ಯಾನ್ಸರ್ ಪೀಡಿತರಾಗಿರುವುದಿಲ್ಲ

ಇವರು ಕ್ಯಾನ್ಸರ್ ಪೀಡಿತರಾಗಿರುವುದಿಲ್ಲ

ಮೆಲನೋಮಾ, ಥೈರಾಯ್ಡ್, ಮೂತ್ರಪಿಂಡ, ಸ್ತನ, ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್‍ಗಳು ನಿರ್ದಿಷ್ಟವಾದ ಎತ್ತರಕ್ಕೆ ಸಂಬಂಧಿಸಿರುತ್ತದೆ ಎಂದು ಹೇಳಲಾಗುವುದು. ನ್ಯೂಯಾರ್ಕ್ ನಗರದ ಅಲ್ಬರ್ಟ್ ಐನ್ಸ್‍ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್ ಹಿರಿಯ ಸೋಂಕು ಶಾಸ್ತ್ರಜ್ಞ ಜೆಫ್ರಿ ಕಬಟ್ ನಡೆಸಿರುವ ಅಧ್ಯಯನದ ಪ್ರಕಾರ ಕೆಲವು ಮಾಹಿತಿಯನ್ನು ಅಂಗ್ರಹಿಸಿದ್ದಾರೆ. ಮೂರು ಹಂತದಲ್ಲಿ ನಡೆಸಿದ ಅಧ್ಯಯನದಲ್ಲಿ 5"10 ಅಡಿ ಎತ್ತರದಲ್ಲಿರುವ ಮಹಿಳೆಯರಲ್ಲಿ ಶೇ.30 ರಿಂದ 40 ರಷ್ಟು ಇಂತಹ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚು ಎಂದು ಹೇಳಿದ್ದಾರೆ. ಎತ್ತರ ಇರುವ ಮಹಿಳೆಯರಲ್ಲಿ ದೊಡ್ಡ ಅಂಗಗಳನ್ನು ಮತ್ತು ಹೆಚ್ಚಿನ ಜೀವಕೋಶಗಳನ್ನು ಹೊಂದಿರುತ್ತಾರೆ. ಆದ್ದರಿಂದ ಕ್ಯಾನ್ಸರ್‍ಗೆ ಕಾರಣವಾಗುವ ರೂಪಾಂತರಗಳು ಹೆಚ್ಚಾಗಿರುತ್ತವೆ. ಎಂದು ತಜ್ಞರು ವಿವರಿಸಿದ್ದಾರೆ. ಎತ್ತರವನ್ನು ಪ್ರಭಾವಿಸುವ ಹಾರ್ಮೋನ್‍ಗಳು ಮತ್ತು ಬೆಳವಣಿಗೆಯ ಅಂಗಗಳು ಕ್ಯಾನ್ಸರ್ ಅಪಾಯವನ್ನು ಸಹ ಉಂಟುಮಾಡುತ್ತವೆ.

ರಕ್ತ ಹೆಪ್ಪುಗಟ್ಟುವಿಕೆಯ ಕ್ರಿಯೆ ಕಡಿಮೆಯಾಗಿರುತ್ತದೆ:

ರಕ್ತ ಹೆಪ್ಪುಗಟ್ಟುವಿಕೆಯ ಕ್ರಿಯೆ ಕಡಿಮೆಯಾಗಿರುತ್ತದೆ:

ನೀವು 5"2 ಅಡಿ ಎತ್ತರವನ್ನು ಹೊಂದಿದ್ದೀರಿ ಹಾಗೂ ಅದಕ್ಕೆ ಅನುಗುಣವಾದ ಸಾಮಾನ್ಯವಾದ ತೂಕವನ್ನು ಹೊಂದಿದ್ದೀರಿ ಎಂದಾದರೆ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯು ಕಡಿಮೆಯಾಗಿರುತ್ತದೆ. ನಾರ್ವೆಯ ಟ್ರಾಮ್ಸೊ ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ ಹೆಚ್ಚು ಎತ್ತರವನ್ನು ಹೊಂದಿರುವ ಮಹಿಳೆಯರಲ್ಲಿ ದೀರ್ಘವಾದ ದೂರ ಹಾಗೂ ರಕ್ತದ ಹರಿವನ್ನು ಹೊಂದಿರುವುದರಿಂದ ರಕ್ತ ಹೆಪ್ಪುಗಟ್ಟುವಿಕೆ, ಪಾಶ್ರ್ವವಾಯುಗಳಂತಹ ಸಮಸ್ಯೆಗಳು ಅಧಿಕವಾಗಿರುತ್ತವೆ. ಹಾಗಾಗಿ ಎತ್ತರದಲ್ಲಿ ಇರುವ ಮಹಿಳೆಯರು ತಮ್ಮ ಎತ್ತರವನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ತಮ್ಮ ತೂಕದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡಬೇಕು. ತೂಕದ ಸಮಸ್ಯೆ ಹೊಂದಿರದ ಎತ್ತರದ ಮಹಿಳೆಯರಲ್ಲಿ ಹೆಪ್ಪು ಗಟ್ಟುವಿಕೆಯ ಸಮಸ್ಯೆ ಇರುವುದಿಲ್ಲ.

Most Read: ಭಯಹುಟ್ಟಿಸುವ ಕಾಯಿಲೆಗಳು-ಮಹಿಳೆಯರೇ ಇದಕ್ಕೆ ಮೊದಲ ಟಾರ್ಗೆಟ್!

90 ವರ್ಷದ ವರೆಗೂ ಹೆಚ್ಚು ಶಕ್ತಿ ವಂತರಾಗಿರುತ್ತಾರೆ

90 ವರ್ಷದ ವರೆಗೂ ಹೆಚ್ಚು ಶಕ್ತಿ ವಂತರಾಗಿರುತ್ತಾರೆ

ಆಲ್ಬರ್ಟ್ ಐನ್‍ಸ್ಟೀನ್ ಕಾಲೇಜ್ ಆಫ್ ಮೆಡಿಸಿನ್ಸ್ ಸಂಶೋಧಕರ ಪ್ರಕಾರ ದಿರ್ಘಾಯುಷ್ಯಕ್ಕೆ ಸಂಬಂಧಿಸಿರುವ ವಂಶಾವಳಿಯ ಹಿನ್ನೆಲೆ ಹೊಂದಿರುವ ಮಹಿಳೆಯರು ಅಧಿಕ ಶಕ್ತಿಯನ್ನು ಹೊಂದಿರುತ್ತಾರೆ. ಇನ್ಸುಲಿನ್ ರೂಪದ ಬೆಳವಣಿಗೆಯು ವಂಶಾವಳಿಯನ್ನು ಪ್ರತಿನಿಧಿಸುತ್ತದೆ. ಅಂತಹ ಹಿನ್ನೆಲೆ ಹೊಂದಿರುವ ಮಹಿಳೆಯರು ತಮ್ಮ 90 ವರ್ಷದ ಅವಧಿಯವರೆಗೂ ಸಾಕಷ್ಟು ಶಕ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

 ಇವರ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ:

ಇವರ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ:

ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ಸ್ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ 5"8 ಅಡಿ ಎತ್ತರದ ಮಹಿಳೆಯರು 5"3 ಅಡಿ ಎತ್ತರವನ್ನು ಹೊಂದಿರುವ ಮಹಿಳೆಯರಿಗಿಂತ ಶೇ.28ರಷ್ಟು ಕಡಿಮೆ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುವುದು. ಜಂಕ್ ಆಹಾರ ಮತ್ತು ಧೂಮಪಾನಗಳಂತಹ ಹವ್ಯಾಸಗಳಿಂದ ದೂರ ಉಳಿದರೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯವಾಗುವುದು. ಕೆಲವು ಉತ್ತಮ ಜೀನ್ ಹೊಂದಿರುವ ವ್ಯಕ್ತಿಗಳು ಅನೇಕ ಸಮಸ್ಯೆಗಳಿಂದ ದೂರ ಉಳಿಯುತ್ತಾರೆ. ಅಂತೆಯೇ ಕೆಲವು ಜೀನ್‍ಅಲ್ಲಿ ಎಲ್‍ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಬಹುಬೇಗ ಹೆಚ್ಚಿಸುವ ಸಾಮಥ್ರ್ಯ ಇರುತ್ತವೆ. ಅಂತಹವರು ಅಧಿಕ ಸಮಸ್ಯೆಯನ್ನು ಎದುರಿಸುವ ಸಧ್ಯತೆಗಳು ಹೆಚ್ಚು ಎಂದು ಹೇಳಿದ್ದಾರೆ.

ಇವರ ಮಾನಸಿಕ ಸ್ಥಿತಿ ಉತ್ತಮವಾಗಿ ಇರುತ್ತದೆ

ಇವರ ಮಾನಸಿಕ ಸ್ಥಿತಿ ಉತ್ತಮವಾಗಿ ಇರುತ್ತದೆ

ಎಡಿನ್‍ಬರ್ಗ್ ಕಾಲೇಜ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯ ನಡೆಸಿದ ಪ್ರಾಥಮಿಕ ಸಂಶೋಧನೆಯ ಪ್ರಕಾರ 5"1 ಅಡಿ ಎತ್ತರ ಇರುವ ಮಹಿಳೆಯರಿಗಿಂತ 5"7 ಅಡಿ ಎತ್ತರ ಹೊಂದಿರುವ ಮಹಿಳೆಯರಲ್ಲಿ ಮಾನಸಿಕ ಶಕ್ತಿ ಹೆಚ್ಚಿರುತ್ತದೆ. ಇವರಲ್ಲಿ ಬುದ್ಧಿಮಾಂದ್ಯತೆ ಪ್ರಮಾಣ ಕಡಿಮೆ ಎಂದು ಹೇಳಲಾಗುವುದು. ಕೆಲವೊಮ್ಮೆ ಬಾಲ್ಯದಲ್ಲಿದ್ದ ಅಸ್ವಸ್ಥತೆ, ಒತ್ತಡ, ಕಳಪೆ ಮಟ್ಟದ ಆಹಾರ ಹಾಗೂ ಪೌಷ್ಟಿಕಾಂಶದ ಕೊರತೆ ಹೊಂದಿದ್ದಲ್ಲಿ ಹೆಚ್ಚಿನ ಅಪಾಯಗಳನ್ನು ಅನುಭವಿಸುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

Most Read: ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ತಡೆಗಟ್ಟುವ 9 ವಿಧಾನಗಳು

ಗರ್ಭಾವಸ್ಥೆ ಮತ್ತು ಪ್ರಸವ ಇವರಿಗೆ ಕಠಿಣವಾಗಿರುವುದಿಲ್ಲ

ಗರ್ಭಾವಸ್ಥೆ ಮತ್ತು ಪ್ರಸವ ಇವರಿಗೆ ಕಠಿಣವಾಗಿರುವುದಿಲ್ಲ

ಯಾವ ಮಹಿಳೆ 5"6 ಅಡಿ ಎತ್ತರವನ್ನು ಹೊಂದಿರುತ್ತಾರೆ ಅವರು ಗರ್ಭಧಾರಣೆ ಹೊಂದಿರುವಾಗ ಮಧುಮೇಹ, ಪ್ರಸವ ಸೇರಿದಂತೆ ಇನ್ನಿತರ ಯಾವುದೇ ಸಮಸ್ಯೆಗಳನ್ನು ಹೆಚ್ಚು ಅನುಭವಿಸುವುದಿಲ್ಲ. ನ್ಯೂಯಾರ್ಕ್ ನಗರದ ಸಿಟಿ ಯೂನಿವರ್ಸಿಟಿಯಲ್ಲಿ ಸುಮಾರು 220,000ಕ್ಕಿಂತಳೂ ಹೆಚ್ಚು ಗರ್ಭಿಣಿಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಅಧ್ಯಯನದಲ್ಲಿ ಎತ್ತರಕ್ಕೆ ಸಂಬಂಧಿಸಿದ ಜೀನ್‍ಗಳು ಗ್ಲೂಕೋಸ್ ನಿಯಂತ್ರಣ ಅಥವಾ ಗ್ಲೂಕೋಸ್ ಸಹನೆಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಎಂದು ಕಂಡುಕೊಂಡಿದ್ದಾರೆ. ಸರಾಸರಿ ಗಾತ್ರದ ಮಹಿಳೆಯರು ಹಾಗೂ ಎತ್ತರದ ನಿಲುವನ್ನು ಹೊಂದಿರುವ ಮಹಿಳೆಯರಲ್ಲಿ "ಸಿ"ವಿಭಾಗದ ಅಪಾಯ ಕಡಿಮೆ ಇರುತ್ತದೆ. ನೈಸರ್ಗಿಕ ಪ್ರಸವವನ್ನು ಸುಲಭವಾಗಿ ಪಡೆದುಕೊಳ್ಳುವರು ಎನ್ನುವುದನ್ನು ಸ್ಪಷ್ಟಪಡಿಸಿದೆ.

English summary

Things A Woman's Height Tells About Her Health

We all know how important it is for us to keep an eye on our health, especially waistlines because of the risk of ailments like, diabetes and heart disease, but it's not the only measurement that matters. Your height too can indicate a wealth of information about your risk of conditions, from cancer through to dementia and heart disease.Small comfort for all the short and tall women out there: There isn't a perfect height for your health.
X
Desktop Bottom Promotion