For Quick Alerts
ALLOW NOTIFICATIONS  
For Daily Alerts

    ಇಂತಹ ಸೆಕ್ಸ್ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲ ಮಹಿಳೆಯರಲ್ಲಿಯೂ ಕಂಡುಬರುತ್ತದೆಯಂತೆ!

    By S.kalagi
    |

    ಲೈಂಗಿಕ ಆರೋಗ್ಯದ ಸಮಸ್ಯೆಗಳಿಂದ ಲೈಂಗಿಕ ಜೀವನ ಹಾಳಾಗಿ ಜೀವನದಲ್ಲಿ ಹತಾಶೆಯ ಭಾವನೆ ಆವರಿಸುತ್ತದೆ. ಜೊತೆಗೆ ಇದರಿಂದ ಸಂಗಾತಿಗಳ ಸಂಬಂಧದಲ್ಲಿ ಬಿರುಕು ಸಹ ಕಾಣಿಸಿಕೊಳ್ಳಬಹುದು. ಬೆಲ್ಜಿಯಂನ ಕುಟುಂಬ ಹಾಗೂ ಲೈಂಗಿಕ ವಿಜ್ಞಾನಗಳ ಅಧ್ಯಯನ ಕೇಂದ್ರವು ಲೈಂಗಿಕ ವಿಚಾರಗಳ ಕುರಿತು ಹಲವಾರು ಸಂಶೋಧನೆಗಳನ್ನು ಕೈಗೊಂಡಿದೆ. 'ದಿ ಜರ್ನಲ್ ಆಫ್ ಸೆಕ್ಷುವಲ್ ಮೆಡಿಸಿನ್'ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನಾ ವರದಿಯಲ್ಲಿ ಲೈಂಗಿಕ ನಿಶ್ಯಕ್ತಿ, ಲೈಂಗಿಕ ನಿರಾಸಕ್ತಿ, ನಿಮಿರುವಿಕೆಯ ದೌರ್ಬಲ್ಯ, ಸಂತೃಪ್ತಿಯ ಹಂತ ತಲುಪಲು ವಿಫಲತೆ ಹಾಗೂ ಲೈಂಗಿಕ ಮಿಲನ ಸಂದರ್ಭದಲ್ಲಿ ಉಂಟಾಗುವ ನೋವುಗಳು ಯಾವ ರೀತಿಯಲ್ಲಿ ವ್ಯಕ್ತಿಯ ವಯಸ್ಸಿನೊಂದಿಗೆ ತಳುಕು ಹಾಕಿಕೊಂಡಿವೆ ಎಂಬುದನ್ನು ವಿವರಿಸಲಾಗಿದೆ.

    ಈ ಸಂಶೋಧನೆಯಲ್ಲಿ 16 ರಿಂದ 74 ವಯೋಮಾನದ ಭಿನ್ನ ಲಿಂಗಿ ಲೈಂಗಿಕಾಸಕ್ತಿಯ 15,048 ಹೆಣ್ಣು ಮಕ್ಕಳನ್ನು ಒಳಪಡಿಸಲಾಗಿತ್ತು. ಅವರ ಲೈಂಗಿಕ ಜೀವನ, ಯಾವುದೇ ರೀತಿಯ ಲೈಂಗಿಕ ಸಮಸ್ಯೆಗಳನ್ನು ಎದುರಿಸಿದ್ದರೆ ಅದರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಪ್ರಶ್ನೆಗಳಿಗೆ ಬಂದ ಉತ್ತರಗಳನ್ನು ಸೊನ್ನೆಯಿಂದ 3 ರವರೆಗೆ ಅಂಕಗಳನ್ನು ನೀಡಿ ವರ್ಗೀಕರಿಸಲಾಯಿತು. ಸೊನ್ನೆ ಎಂದರೆ ಯಾವುದೇ ಸಮಸ್ಯೆ ಇಲ್ಲದಿರುವುದು ಹಾಗೂ 3 ಎಂದರೆ ಅತಿಯಾದ ಸಮಸ್ಯೆ ಎಂದಾಗಿತ್ತು.ಮುಂದೆ ಓದಿ..

    ಸಂಶೋಧನೆಯ ಫಲಿತಾಂಶಗಳ ಪ್ರಕಾರ

    ಸಂಶೋಧನೆಯ ಫಲಿತಾಂಶಗಳ ಪ್ರಕಾರ

    ಸಂಶೋಧನೆಯ ಫಲಿತಾಂಶಗಳ ಪ್ರಕಾರ ಬಹುತೇಕ ಸಮಸ್ಯೆಗಳು ವಯಸ್ಸಾದಂತೆ ಹೆಚ್ಚಾಗಿದ್ದು ಹಾಗೂ ಇನ್ನು ಕೆಲ ಸಮಸ್ಯೆಗಳು ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲ ವಯೋಮಾನದ ಹೆಣ್ಣು ಮಕ್ಕಳನ್ನು ಒಂದೇ ರೀತಿಯಾಗಿ ಬಾಧಿಸಿದ್ದು ಕಂಡು ಬಂದಿತು. ನಿಜವಾಗಿಯೂ ಇದೊಂದು ಆಘಾತಕಾರಿ ಅಂಶವೆಂದೇ ಹೇಳಬಹುದು. ಏಕೆಂದರೆ ಕೆಲ ಲೈಂಗಿಕ ಸಮಸ್ಯೆಗಳು ವಯೋಮಾನದ ನಿರ್ಬಂಧವಿಲ್ಲದೆ ಯಾವುದೇ ಹೆಣ್ಣು ಮಕ್ಕಳಿಗೆ ಬಾಧಿಸಬಹುದು ಎಂಬುದು ಆತಂಕದ ವಿಷಯವೇ ಆಗಿದೆ.ಯಾವ ರೀತಿಯ ಲೈಂಗಿಕ ಸಮಸ್ಯೆಗಳು ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತವೆ ಎಂಬುದನ್ನು ನೋಡೋಣ ಬನ್ನಿ.

    ಲೈಂಗಿಕ ನಿರಾಸಕ್ತಿ

    ಲೈಂಗಿಕ ನಿರಾಸಕ್ತಿ

    ಸಂಶೋಧನೆಯ ಪ್ರಕಾರ ಕಡಿಮೆ ವಯೋಮಾನದ ಹೆಂಗಸರಲ್ಲಿ ಲೈಂಗಿಕ ನಿರಾಸಕ್ತಿ ಸಮಸ್ಯೆ ಅಷ್ಟೊಂದು ಇಲ್ಲದಿದ್ದರೂ 20 ರಿಂದ 24 ವಯೋಮಾನದ ಶೇ.10 ರಷ್ಟು ಹೆಣ್ಣು ಮಕ್ಕಳು ಈ ಸಮಸ್ಯೆಯನ್ನು ಎದುರಿಸಿದ್ದು ಕಂಡು ಬಂದಿದೆ. 25 ರಿಂದ 29 ವಯೋಮಾನದ ಶೇ.20 ರಷ್ಟು ಹಾಗೂ 50 ರಿಂದ 60 ವಯೋಮಾನದ ಬಹುತೇಕ ಹೆಣ್ಣು ಮಕ್ಕಳು ಈ ಸಮಸ್ಯೆ ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ವಯಸ್ಸು ಹೆಚ್ಚಾದಂತೆ ಲೈಂಗಿಕ ನಿರಾಸಕ್ತಿ ಸಹ ಹೆಚ್ಚಳವಾಗಿದ್ದು ಕಂಡು ಬಂದರೂ ಇದು ವಯಸ್ಸಾದ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಮಾತ್ರ ವಾಸ್ತವ.

    Most Read: ಯಾವತ್ತೂ ಒಳ ಚಡ್ಡಿಯನ್ನು ಪ್ರತ್ಯೇಕವಾಗಿ ಒಗೆಯಬೇಕಂತೆ! ಯಾಕೆ ಗೊತ್ತೇ?

    ಲೈಂಗಿಕ ನಿರಾಸಕ್ತಿ

    ಲೈಂಗಿಕ ನಿರಾಸಕ್ತಿ

    ಕೆಲಸದ ಒತ್ತಡ, ಮಾನಸಿಕ ಖಿನ್ನತೆ, ದೈಹಿಕ ಸಮತೋಲನ, ಸಂಬಂಧಗಳಲ್ಲಿನ ಕಲಹ, ಖಿನ್ನತೆ ನಿರೋಧಕ ಔಷಧಿಗಳು ಹೀಗೆ ಹಲವಾರು ಕಾರಣಗಳಿಂದ ಲೈಂಗಿಕ ನಿರಾಸಕ್ತಿ ಉಂಟಾಗಬಹುದು. ಹೀಗಾಗಿ ಇಂಥ ಸಮಸ್ಯೆ ಎದುರಿಸುತ್ತಿರುವ ಪ್ರತಿಯೊಬ್ಬರೂ ಸಮಸ್ಯೆಯ ಮೂಲ ಕಾರಣ ಕಂಡು ಹಿಡಿದು ವೈದ್ಯರ ಸಲಹೆಯ ಅನುಸಾರ ಸಮಸ್ಯೆಯ ನಿವಾರಣೆಗೆ ಮುಂದಾಗುವುದು ಲೈಂಗಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

    ಒಸರುವಿಕೆಯ ವೈಫಲ್ಯ

    ಒಸರುವಿಕೆಯ ವೈಫಲ್ಯ

    ಲುಬ್ರಿಕೇಶನ್ ಅಥವಾ ದ್ರವದ ಒಸರುವಿಕೆಯ ವೈಫಲ್ಯ ಸಮಸ್ಯೆಯು ಪ್ರಮುಖ ಲೈಂಗಿಕ ಸಮಸ್ಯೆಗಳಲ್ಲೊಂದಾಗಿದೆ. 16 ರಿಂದ 49 ವಯೋಮಾನದ ಹೆಣ್ಣು ಮಕ್ಕಳಲ್ಲಿ ಈ ಸಮಸ್ಯೆ ಬಹುತೇಕ ಬಾಧಿಸಿದ್ದು ಸಂಶೋಧನೆಗಳಲ್ಲಿ ಕಂಡು ಬಂದಿದೆ. ಮೆನೊಪಾಸ್ ಆದ ನಂತರ ಹಾಗೂ ಹಾರ್ಮೋನ್‌ಗಳ ವೈಪರೀತ್ಯದಿಂದ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ.

    ಮಿಲನ ಸಂದರ್ಭದಲ್ಲಿ ಸರಿಯಾಗಿ ಲುಬ್ರಿಕೇಶನ್ ಆಗದಿದ್ದಲ್ಲಿ ಕ್ರಿಯೆಯು ಕಷ್ಟವೆನಿಸಬಹುದು ಅಥವಾ ತೀರಾ ನೋವು ಕಾಣಿಸಬಹುದು. ನಿರ್ಜಲೀಕರಣ, ವೈದ್ಯರ ಸಲಹೆ ಪಡೆಯದೆ ತೆಗೆದುಕೊಳ್ಳುವ ಔಷಧಿಗಳು, ನರ್ಸಿಂಗ್ ಅಥವಾ ಮೆನೊಪಾಸ್ ಸಂದರ್ಭದಲ್ಲಿನ ಹಾರ್ಮೋನ್‌ಗಳ ವೈಪರೀತ್ಯದಿಂದ ಯೋನಿಯಲ್ಲಿ ಒಣಗುವಿಕೆ ಕಂಡುಬರುವ ಸಾಧ್ಯತೆ ಇದೆ. ಇದಕ್ಕೆ ವೈಯಕ್ತಿಕ ದ್ರವ ಬಳಸುವುದೇ ಪರಿಹಾರವಾಗಿದೆ.

    ಸಂತೃಪ್ತಿಯ ಪರಾಕಾಷ್ಠೆ ತಲುಪಲು ಆಗದಿರುವುದು

    ಸಂತೃಪ್ತಿಯ ಪರಾಕಾಷ್ಠೆ ತಲುಪಲು ಆಗದಿರುವುದು

    ಮಿಲನ ಕ್ರಿಯೆಯ ಕ್ಲೈಮ್ಯಾಕ್ಸ್ ಹಂತದ ಸುಖ ಅನುಭವಿಸಲು ವಿವಿಧ ವಯೋಮಾನದ ಹೆಣ್ಣು ಮಕ್ಕಳು ವಿಫಲರಾಗಿದ್ದು ಸಂಶೋಧನೆಯಲ್ಲಿ ಕಂಡು ಬಂದಿದೆ. 20 ರಿಂದ 24 ವಯೋಮಾನದ ಶೇ.25.4 ರಷ್ಟು ಹೆಣ್ಣು ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬಂದಿದ್ದು, 20, 30 ಹಾಗೂ 40 ನೇ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಕ್ರಮವಾಗಿ ಈ ಸಮಸ್ಯೆ ಕಡಿಮೆಯಾಗಿದೆ. ಆದರೆ 50 ವಯಸ್ಸಿನ ಆಸುಪಾಸಿನ ಹೆಣ್ಣು ಮಕ್ಕಳಲ್ಲಿ ಸಮಸ್ಯೆ ಜಾಸ್ತಿಯಾಗಿದ್ದು ಕಂಡು ಬಂದಿದೆ.

    ಸಂತೃಪ್ತಿಯ ಪರಾಕಾಷ್ಠೆ

    ಸಂತೃಪ್ತಿಯ ಪರಾಕಾಷ್ಠೆ

    ಹಾಗಾದರೆ 20 ರ ವಯೋಮಾನದ ಹೆಣ್ಣು ಮಕ್ಕಳು ಮಿಲನ ಸಂತೃಪ್ತಿ ಅನುಭವಿಸಲು ವಿಫಲರಾಗುವುದು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ವಯಸ್ಸಿನ ಹೆಣ್ಣು ಮಕ್ಕಳು ಹೊಸಬರೊಂದಿಗೆ ಕ್ರಿಯೆ ನಡೆಸುವುದರಿಂದ ಸಂತೃಪ್ತಿಯ ಪರಾಕಾಷ್ಠೆ ತಲುಪಲು ಸಮಸ್ಯೆಯಾಗುತ್ತದೆ ಎಂಬುದು ತಿಳಿದು ಬಂದಿದೆ. ವಯಸ್ಸಾದಂತೆ ಹೆಣ್ಣು ಮಕ್ಕಳು ನಿರ್ದಿಷ್ಟ ಹಾಗೂ ಪರಿಚಿತ ಸಂಗಾತಿಯೊಂದಿಗೆಯೇ ಹೆಚ್ಚು ಬಾರಿ ಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಸುಖ ಹೆಚ್ಚಾಗುತ್ತದೆ. ಅಂದರೆ ಸಂಗಾತಿಯು ಸಂಪೂರ್ಣ ಪರಿಚಿತನಾಗಿರುವುದು, ಆತ ಯಾವ ರೀತಿ ಕ್ರಿಯೆ ನಡೆಸುತ್ತಾನೆ ಎಂಬುದು ತಿಳಿದಿರುವುದು ಮುಂತಾದ ಅಂಶಗಳಿಂದ ನಿರಾಯಾಸವಾಗಿ ಹೆಚ್ಚಿನ ಸಂತೃಪ್ತಿ ಪಡೆಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

    MOst Read: ಮಹಿಳೆಯರ ಪರಾಕಾಷ್ಠೆಯ ಬಗ್ಗೆ ದೊಡ್ಡ ರಹಸ್ಯ ಬಹಿರಂಗ!

    ಮಿಲನ ಸಂದರ್ಭದಲ್ಲಿ ನೋವು

    ಮಿಲನ ಸಂದರ್ಭದಲ್ಲಿ ನೋವು

    ಮಿಲನ ಸಂದರ್ಭದಲ್ಲಿ ವಿಪರೀತ ನೋವು ಅನುಭವಿಸುವ ಹೆಣ್ಣು ಮಕ್ಕಳ ಅಂಕಿ ಅಂಶಗಳು ಬಹುತೇಕ ಸಂತೃಪ್ತಿ ವೈಫಲ್ಯದ ಅಂಕಿ ಅಂಶಗಳನ್ನೇ ಹೋಲುತ್ತವೆ. 16 ರಿಂದ 19 ವಯೋಮಾನದ ಶೇ.7.2 ರಷ್ಟು ಹೆಣ್ಣು ಮಕ್ಕಳು ಈ ರೀತಿ ಹೆಚ್ಚಿನ ನೋವು ಅನುಭವಿಸಿದ್ದು, 30 ಹಾಗೂ 40ರ ವಯಸ್ಸಿನವರು ಕಡಿಮೆ ನೋವು ಅನುಭವಿಸಿದ್ದಾರೆ. ಆದರೆ ವಯಸ್ಸು 50 ಆಗುತ್ತಿದ್ದಂತೆಯೇ ಮಿಲನ ಕ್ರಿಯೆಯ ನೋವು ಜಾಸ್ತಿಯಾಗಿದ್ದು ಕಂಡು ಬಂದಿದೆ. 50 ನೇ ವಯಸ್ಸಿನ ಆಸುಪಾಸಿನಲ್ಲಿ ಎದುರಾಗುವ ಮೆನೋಪಾಸ್ ಹಾಗೂ ಅದರಿಂದಾಗುವ ಹಾರ್ಮೋನ್ ವೈಪರೀತ್ಯಗಳು ಸಹ ಈ ನೋವಿಗೆ ಕಾರಣವಾಗಿವೆ.

    ಮಿಲನ

    ಮಿಲನ

    ಮಿಲನ ಕ್ರಿಯೆಯ ಸಂದರ್ಭದಲ್ಲಿ ಯೋನಿ, ಚಂದ್ರನಾಡಿ ಅಥವಾ ಯೋನಿಯ ಪದರಿನಲ್ಲಿ ಉಂಟಾಗುವ ನೋವನ್ನು 'ಡಿಸ್ಪರೂನಿಯಾ'ಎಂದು ಕರೆಯಲಾಗಿದ್ದು ಇದೊಂದು ಕ್ಲಿಷ್ಟಕರ ಸಮಸ್ಯೆಯಾಗಿದೆ. ಯೋನಿಯ ಒಣಗುವಿಕೆ, ಯೋನಿಯ ಸೋಂಕು ಅಥವಾ ಮಾನಸಿಕ ಆಘಾತ ಹೀಗೆ ವಿವಿಧ ಕಾರಣಗಳಿಂದ ಮಿಲನ ಕ್ರಿಯೆಯ ನೋವು ಉಂಟಾಗುತ್ತದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ. ನೋವಿನ ಲಕ್ಷಣಗಳನ್ನು ಆಧರಿಸಿ ತಜ್ಞ ವೈದ್ಯರು ನೋವಿಗೆ ಕಾರಣವನ್ನು ಕಂಡು ಹಿಡಿಯುತ್ತಾರೆ. ಮಿಲನ ಕ್ರಿಯೆಯ ಭಂಗಿಗಳನ್ನು ಬದಲಾಯಿಸಿ ಹಾಗೂ ಲುಬ್ರಿಕೆಂಟ್‌ಗಳನ್ನು ಬಳಸಿದಾಗ ಈ ರೀತಿಯ ನೋವು ಕಡಿಮೆಯಾಗುತ್ತದೆಯಾ ಎಂಬುದನ್ನು ಮೊದಲು ಪರಿಶೀಲಿಸಬೇಕು. ಆದಾಗ್ಯೂ ನೋವು ಕಡಿಮೆಯಾಗದಿದ್ದಲ್ಲಿ ವೈದ್ಯರನ್ನು ಕಾಣುವುದು ಸೂಕ್ತ.

    English summary

    These sex Problems That Can Affect ALL Women

    Sexual problems can be extremely frustrating, not only because they put a damper on your sex life, but also because they can seriously affect your relationships. Fortunately, plenty of research is being done on the subject, most recently by the Institute for Family and Sexuality Studies in Belgium. A new study, published in The Journal of Sexual Medicine, looked at how age correlates to different types of sexual dysfunction, including a lack of sexual desire, a lack of sexual arousal, difficulty or inability reaching orgasm, and pain during sex.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more