For Quick Alerts
ALLOW NOTIFICATIONS  
For Daily Alerts

ಅಪ್ಪಿತಪ್ಪಿಯೂ ಇಂತಹ ಹಸಿ ಆಹಾರಗಳನ್ನು ತಿನ್ನಬೇಡಿ-ಇವೆಲ್ಲಾ ಆರೋಗ್ಯಕ್ಕೆ ಬಹಳ ಅಪಾಯಕಾರಿ!

|

ಜಪಾನ್‌ನ ಜನಪ್ರಿಯ ಸುಶಿ ಬಗ್ಗೆ ನೀವು ಕೇಳಿರಬಹುದು. ಇದು ಹಸಿ ಮೀನನ್ನು ಬಳಸಿಕೊಂಡು ತಯಾರಿಸುವಂತಹ ಖಾದ್ಯವಾಗಿದೆ. ಇದು ಜಪಾನ್ ನ ಜನರಿಗೆ ಪಂಚಪ್ರಾಣ. ಯಾಕೆಂದರೆ ಇದನ್ನು ಮೀನಿನ ತೆಳು ಪದರ, ತರಕಾರಿ ಮತ್ತು ಅವಕಾಡೊ ಬಳಸಿ ತಯಾರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಅಲ್ಲಿನವರ ನಂಬಿಕೆಯಾಗಿದೆ. ಯಾಕೆಂದರೆ ಒಮೆಗಾ-3 ಕೊಬ್ಬಿನಾಮ್ಲ ಹಾಗೂ ವಿಟಮಿನ್‌ಗಳು ಇದರಿಂದ ದೇಹಕ್ಕೆ ಲಭ್ಯವಾಗುವುದು.

ಆದರೆ ಸುಶಿಯಲ್ಲಿ ಕೆಲವೊಂದು ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ಜೀವಿಗಳಾಗಿರುವ ಅನಿಸಕಿಯಾಸಿಸ್ ಕಂಡುಬರಬಹುದು. ಇದರಿಂದಾಗಿ ವಾಂತಿ, ಭೇದಿ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಸಣ್ಣ ಮಕ್ಕಳು, ಗರ್ಭಿಣಿಯರು ಅಥವಾ ಬಾಣಂತಿಯರು ಇದನ್ನು ಸೇವಿಸಬಾರದು. ಪ್ರತಿರೋಧಕ ವ್ಯವಸ್ಥೆ ಸಮಸ್ಯೆ ಇರುವವರು ಹಸಿ ಮೀನು ಅಥವಾ ಅರ್ಧ ಬೇಯಿಸಿರುವಂತಹ ಮೀನನ್ನು ಸೇವನೆ ಮಾಡಬಾರದು. ಪಾದರಸ ಅಂಶ ಅಧಿಕವಿರುವಂತಹ ಮೀನುಗಳಾಗಿರುವ ಟ್ಯುನಾ, ಶಾರ್ಕ್, ಸ್ವಾರ್ಡ್ ಫಿಶ್ ನ್ನು ತಿನ್ನಬಾರದು.

ಹಂದಿ ಮಾಂಸ

ಹಂದಿ ಮಾಂಸ

ಹಸಿ ಅಥವಾ ಅರೆ ಬೇಯಿಸಿರುವಂತಹ ಹಂದಿ ಮಾಂಸದಲ್ಲಿ ಕೂಡ ಸಲ್ಮೊನೆಲ್ಲಾ, ಇ ಕೊಲಿ ಮತ್ತು ಲಿಸ್ಟೆರಿಯಾದಂತಹ ಬ್ಯಾಕ್ಟೀರಿಯಾಗಳು ಇರಬಹುದು. ಸರಿಯಾಗಿ ಬೇಯಿಸದೆ ಇರುವಂತಹ ಹಂದಿ ಮಾಂಸ ತಿನ್ನುವುದರಿಂದ ಅಥವಾ ಅದನ್ನು ತುಂಡು ಮಾಡಿರುವಂತಹ ಮರದ ತುಂಡು ಅಥವಾ ಪಾತ್ರೆಗಳಿಂದಲೂ ಹಸಿ ಹಂದಿ ಮಾಂಸವನ್ನು ಬಳಸಲಾಗುತ್ತದೆ. ಇದರಿಂದಲೂ ಅನಾರೋಗ್ಯಕ್ಕೆ ಒಳಗಾಗು ಸಾಧ್ಯತೆಗಳು ಇವೆ. ಹಂದಿ ಮಾಂಸವನ್ನು 145 ಡಿಗ್ರಿ ಉಷ್ಣತೆಯಲ್ಲಿ ಬೇಯಿಸಬೇಕು ಮತ್ತು ಅದನ್ನು ಬಡಿಸುವ ಮೊದಲು ಮೂರು ನಿಮಿಷ ಕಾಲ ಹಾಗೆ ಬಿಡಬೇಕು.

ಮಾಂಸ ಟಾರ್ಟರ್

ಮಾಂಸ ಟಾರ್ಟರ್

ಸರಿಯಾಗಿ ಬೇಯಿಸದೆ ಇರುವಂತಹ ಮಾಂಸವು ನಮಗೆ ಯಾವಾಗಲೂ ಇಷ್ಟವಾಗುವುದಿಲ್ಲ. ಆದರೆ ಇತರ ಕೆಲವೊಂದು ವಿಧಾನಗಳು ಕೂಡ ಸುರಕ್ಷಿತವಲ್ಲ. ಸ್ಟೀಕ್ ಅಥವಾ ಚಿಕನ್ ಟಾರ್ಟರ್ ಮಾಂಸವನ್ನು ಅರೆಬೇಯಿಸಿ ನೀಡಲಾಗುತ್ತದೆ. ಹಸಿ ಮಾಂಸ ಮತ್ತು ಕೋಳಿ ಮಾಂಸವು ಆಹಾರವನ್ನು ವಿಷವಾಗಿಸುವ ಸಾಧ್ಯತೆಯು ಹೆಚ್ಚಾಗಿರುವುದು. ಇಂತಹ ಮಾಂಸದಲ್ಲಿ ಬ್ಯಾಕ್ಟೀರಿಯಾಗಳಾಗಿರುವಂತಹ ಇ ಕೊಲಿಯಿಂದ ಸಾಲ್ಮೊನೆಲ್ಲಾ ಇರಬಹುದು. ಇದರಿಂದ ಅನಾರೋಗ್ಯ ಕಾಡಬಹುದು. ಸುರಕ್ಷಿತವಾಗಬೇಕಿದ್ದರೆ ಆಗ ನೀವು ಸರಿಯಾಗಿ ಬೇಯಿಸಿರುವಂತಹ ಆಹಾರ ಸೇವನೆ ಮಾಡಿ.

ಹಸಿ ಮೊಟ್ಟೆ

ಹಸಿ ಮೊಟ್ಟೆ

ತಾಜಾ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾವು ಇರುವುದು. ಇದರಿಂದಾಗಿ ಆಹಾರವು ವಿಷವಾಗುವುದು. ಮೊಟ್ಟೆಯ ಬಿಳಿ ಮತ್ತು ಅದರ ಹಳದಿ ಭಾಗವು ಗಟ್ಟಿಯಾಗುವ ತನಕ ಮೊಟ್ಟೆಯನ್ನು ಸರಿಯಾಗಿ ಬೇಯಿಸಿ. ಮೊಟ್ಟೆ ಮತ್ತು ಮೊಟ್ಟೆ ಹೊಂದಿರುವಂತಹ ಆಹಾರವನ್ನು ಅಡುಗೆ ಮಾಡಿದ ಕೂಡಲೇ ರೆಫ್ರಿಜರೇಟರ್ ನಲ್ಲಿಡಿ. ಹಸಿ ಮೊಟ್ಟೆಗಳನ್ನು ಬಳಸಲ್ಪಡುವಂತಹ ಆಹಾರಕ್ಕಾಗಿ ಸಂಸ್ಕರಿಸಿದ ಮೊಟ್ಟೆಗಳನ್ನು ಬಳಸಿಕೊಳ್ಳಿ.

Most Read: ಕಟ್ಟೆಚ್ಚರ: ಸ್ವಲ್ಪ ಎಚ್ಚರ ತಪ್ಪಿದರೂ ವಿಷ ಹೊಟ್ಟೆ ಸೇರಲಿದೆ!

ಹಿಟ್ಟು ಮತ್ತು ಕಣಕ

ಹಿಟ್ಟು ಮತ್ತು ಕಣಕ

ಕುಕ್ಕೀಸ್ ಮಾಡಲು ನೀವು ಹಿಟ್ಟನ್ನು ತಯಾರಿಸಿದ ವೇಳೆ ಹಸಿಯಾಗಿರುವಾಗ ಅದು ತುಂಬಾ ರುಚಿಕರವಾಗಿರುವುದು. ಆದರೆ ಹಿಟ್ಟು ಸರಿಯಾಗಿ ಬೇಯಿಸದೆ ಇದ್ದರೆ ಆಗ ಅದರಿಂದ ಅನಾರೋಗ್ಯ ಕಾಡಬಹುದು. ಹಿಟ್ಟಿನಲ್ಲಿ ಇ ಕೊಲಿ ಬ್ಯಾಕ್ಟೀರಿಯಾವು ಇರಬಹುದು. ಕಣಕ ಅಥವಾ ಹಿಟ್ಟನ್ನು ನೀವು ರುಚಿ ನೋಡಬೇಡಿ ಮತ್ತು ಸರಿಯಾಗಿ ಬೇಯಿಸದೆ ಇರುವಂತಹ ಹಿಟ್ಟನ್ನು ಆಹಾರಕ್ಕೆ ಬಳಸಬೇಡಿ. ಹಿಟ್ಟು ಮತ್ತು ಕಣಕದೊಂದಿಗೆ ಮಕ್ಕಳು ಆಟವಾಡಬಾರದು. ನೀವು ಹಿಟ್ಟನ್ನು ಬಳಸಿದ ಬಳಿಕ ಕೈಯನ್ನು ಸರಿಯಾಗಿ ತೊಳೆಯಿರಿ.

ಹಸಿ ಆಲೂಗಡ್ಡೆ

ಹಸಿ ಆಲೂಗಡ್ಡೆ

ಬಟಾಟೆಯು ಹಸಿರಾದರೆ ಆಗ ನೀವು ಏನು ಮಾಡುವಿರಿ? ಬಟಾಟೆಯ ಹಸಿರು ಭಾಗದಲ್ಲಿ ಸೊಲನಿನೆ ಇದೆ. ಈ ಅಂಶದಿಂದ ಅನಾರೋಗ್ಯ ಬರಬಹುದು. ಹೀಗೆ ಸೇವನೆ ಮಾಡಿದರೆ ಅದರಿಂದ ಭೇದಿ, ಜ್ವರ, ತಲೆನೋವು ಅಥವಾ ವಾಂತಿ ಬರಬಹುದು. ಹಸಿರು ಭಾಗವನ್ನು ಕತ್ತರಿಸಿಕೊಳ್ಳಿ. ಅದರಲ್ಲಿ ಇರುವಂತಹ ಕಪ್ಪು ಕಣ್ಣನ್ನು ತೆಗೆಯಿರಿ. ಇದರ ಬಳಿಕ ಅದನ್ನು ತಯಾರಿಸಿಕೊಳ್ಳಿ. ಬಟಾಟೆಯನ್ನು ಸಂಪೂರ್ಣವಾಗಿ ಬೇಯಿಸಿದ ಬಳಿಕವಷ್ಟೇ ಅದನ್ನು ತಿನ್ನಿ. ಹಸಿ ಬಟಾಟೆ ತಿನ್ನಬೇಡಿ.

ಕಿಡ್ನಿ ಬೀನ್ಸ್

ಕಿಡ್ನಿ ಬೀನ್ಸ್

ಕೇವಲ ನಾಲ್ಕರಿಂದ ಐದು ಹಸಿ ಕಿಡ್ನಿ ಬೀನ್ಸ್ ತಿಂದರೆ ನೀವು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಬಹುದು. ಕೆಂಪು ಬಣ್ಣದಲ್ಲಿರುವಂತಹ ಈ ಬೀಜದಲ್ಲಿ ಪ್ರೋಟೀನ್ ಆಗಿರುವ ಲೆಕ್ಟಿನ್ ಅಥವಾ ಪಿಎಚ್ ಎ ಇದೆ. ಇದು ಬೇಯಿಸಿದ ವೇಳೆ ನಾಶವಾಗುತ್ತದೆ. ಇದರಿಂದಾಗಿ ನೀವು ಸುಮಾರು ಐದು ಗಂಟೆಗಳ ಕಾಲ ಕಿಡ್ನಿ ಬೀನ್ಸ್ ನ್ನು ನೀರಿನಲ್ಲಿ ನೆನೆಸಲು ಹಾಕಿ, ಇದರ ಬಳಿಕ ತೆಗೆದು ಅದನ್ನು ಸುಮಾರು 30 ನಿಮಿಷ ಕಾಲ ಬೇಯಿಸಿ. ನಿಧಾನಗತಿಯ ಕುಕ್ಕರ್ ನ್ನು ಇದನ್ನು ಬೇಯಿಸಲು ಬಳಸಬೇಡಿ. ಯಾಕೆಂದರೆ ಇದರಿಂದ ವಿಷವನ್ನು ನಾಶ ಮಾಡುವಷ್ಟು ಕಿಡ್ನಿ ಬೀನ್ಸ್ ಬಿಸಿಯಾಗದು. ಕ್ಯಾನ್ ನಲ್ಲಿರುವ ಬೀನ್ಸ್ ಸುರಕ್ಷಿತವಾಗಿರುವುದು. ಯಾಕೆಂದರೆ ಇದನ್ನು ಅದಾಗಲೇ ಬೇಯಿಸಿರಲಾಗುತ್ತದೆ.

Most Read: ಸೋರಿಯಾಸಿಸ್ ಎನ್ನುವ 'ಚರ್ಮ ರೋಗಕ್ಕೆ' ಪವರ್‌ಫುಲ್ ಮನೆಔಷಧಿಗಳು

ಲಿಮಾ ಬೀನ್ಸ್

ಲಿಮಾ ಬೀನ್ಸ್

ಕೆಲವೊಂದು ರೀತಿಯ ಆಹಾರ ಮತ್ತು ಸಸ್ಯಗಳಲ್ಲಿ ವಿಷಕಾರಿ ಸೈನೆಡ್ ಇರುವುದು. ಲಿಮಾ ಬೀನ್ಸ್ ನಲ್ಲಿ ಕೂಡ ಸೈನೆಡ್ ಇದೆ. ಅಮೆರಿಕಾದಲ್ಲಿ ಮಾರಾಟವಾಗುವಂತಹ ಲಿಮಾ ಬೀನ್ಸ್ ನಲ್ಲಿ ಸ್ವಲ್ಪ ಪ್ರಮಾಣದ ಸೈನೆಡ್ ಇದೆ.(ನೀವು ನಿಜವಾಗಿಯೂ ಅನಾರೋಗ್ಯಕ್ಕೆ ಒಳಗಾಗಬೇಕಾದರೆ ಆಗ ನಿಮ್ಮ ತೂಕಕ್ಕಿಂತ ಒಂದು ಪೌಂಡ್ ಹೆಚ್ಚಿನ ಲಿಮಾ ಬೀನ್ಸ್ ತಿನ್ನಬೇಕು.) ಕಾಡಿನಲ್ಲಿರುವಂತಹ ಲಿಮಾ ಬೀನ್ಸ್ ನಲ್ಲಿ ಹೆಚ್ಚಿನ ಸೈನೆಡ್ ಇದೆ. ಸುರಕ್ಷಿತವಾಗಿ ಇರಬೇಕಾದರೆ ಆಗ ನೀವು ಲಿಮಾ ಬೀನ್ಸ್ ನ್ನು ರಾತ್ರಿ ವೇಳೆ ನೆನೆಸಲು ಹಾಕಿ. ಎರಡು ಗಂಟೆಗಳ ಕಾಲ ಬೇಯಿಸಿದ ಬಳಿಕ ನೀವು ಇದನ್ನು ತಿನ್ನಿ.

ಕಹಿ ಬಾದಾಮಿ

ಕಹಿ ಬಾದಾಮಿ

ಲಿಮಾ ಬೀನ್ಸ್ ನಂತೆ ಕಹಿ ಬಾದಾಮಿಯಲ್ಲಿ ಕೂಡ ಸೈನೆಡ್ ಇದೆ. ಒಂದು ಹಿಡಿಯಷ್ಟು ಕಹಿ ಬಾದಾಮಿ ತಿಂದರೆ ಅನಾರೋಗ್ಯಕ್ಕೆ ಒಳಗಾಗಬಹುದು. ಅಮೆರಿಕಾದಲ್ಲಿ ಕಹಿ ಬಾದಾಮಿ ಮಾರಾಟಕ್ಕೆ ಅವಕಾಶವಿಲ್ಲ. ಮಾರುಕಟ್ಟೆಯಲ್ಲಿ ಸಿಗುವಂತಹ ಬಾದಾಮಿ ಸಿಹಿ ಬಾದಾಮಿಯಾಗಿದೆ. ಇದು ತಿನ್ನಲು ಸುರಕ್ಷಿತವಾಗಿದೆ.

ಕಾಡಿನ ಅಣಬೆ

ಕಾಡಿನ ಅಣಬೆ

ಕಾಡಿನಲ್ಲಿ ಬೆಳೆಯುವಂತಹ ಅಣಬೆಯಲ್ಲಿ ಅಗಾರಿಟಿನ್ ಮತ್ತು ಅಮಟಾಕ್ಸಿನ್ ಎನ್ನುವ ಅಂಶವು ಇರುವುದು. ಈ ಅಂಶದಿಂದಾಗಿ ಯಕೃತ್ ಗೆ ಹಾನಿಯಾಗಬಹುದು ಮತ್ತು ಇತರ ಕೆಲವೊಂದು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಸಿ ಅಥವಾ ಹಾಳಾಗಿರುವಂತಹ ಅಣಬೆಯಿಂದಾಗಿ ವಾಂತಿ, ಭೇದಿ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಇದರಿಂದ ಸರಿಯಾದ ರೀತಿಯಲ್ಲಿ ಇದನ್ನು ಸೇವಿಸಿ.

Most Read: ಮನೆಯ ಪ್ರವೇಶ ದ್ವಾರವು- ಮನೆ ಒಡೆಯನ ಸ್ವಭಾವ ಹೇಗಿರುತ್ತದೆ ಎಂಬುದನ್ನು ಸೂಚಿಸುತ್ತದೆಯಂತೆ!

ಮರಗೆಣಸು

ಮರಗೆಣಸು

ಕಹಿ ಬಾದಾಮಿ, ಲಿಮಾ ಬೀನ್ಸ್ ನಂತೆ ಹಸಿ ಮರಗೆಣಸಿನಲ್ಲಿ ಕೂಡ ಸ್ವಲ್ಪ ಮಟ್ಟಿನ ಸೈನೆಡ್ ಅಂಶವು ಇರುವುದು. ಇದರ ಸಿಪ್ಪೆ ತೆಗೆದು, ಸರಿಯಾಗಿ ಬೇಯಿಸಿ ತಿಂದರೆ ಆಗ ಅದು ಸುರಕ್ಷಿತವಾಗಿರುವುದು. ಆದರೆ ಇದನ್ನು ಹಸಿ ಅಥವಾ ಸರಿಯಾಗಿ ಬೇಯಿಸದೆ ತಿಂದರೆ ಅದರಿಂದ ಭೇದಿ, ಹೊಟ್ಟೆನೋವು ಮತ್ತು ವಾಂತಿ ಕಾಣಿಸಬಹುದು.

ರಬರ್ಬ್ ಎಲೆಗಳು

ರಬರ್ಬ್ ಎಲೆಗಳು

ಸೆಲೆರಿಯಂತೆ ಇರುವ ರಬರ್ಬ್ ಎಲೆಗಳು ಹಲವು ಖಾದ್ಯ ಮಾಡಲು ಬಳಸಲಾಗುವುದು ಮತ್ತು ಇದು ತಿನ್ನಲು ತುಂಬಾ ಸುರಕ್ಷಿತವಾಗಿರುವುದು. ಆದರೆ ಇದರಲ್ಲಿ ಆಕ್ಸಲಿಕ್ ಆಮ್ಲವಿದೆ. ಇದು ತುಂಬಾ ವಿಷಕಾರಿಯಾಗಿದೆ. ಇದನ್ನು ತಿನ್ನುವುದರಿಂದ ಬಾಯಿಯಲ್ಲಿ ಸುಟ್ಟ ಭಾವನೆ, ಉಸಿರಾಟದ ತೊಂದರೆ, ಭೇದಿ ಮತ್ತು ಹೊಟ್ಟೆ ನೋವು ಕಾಣಿಸಬಹುದು.

English summary

These Raw Foods are too Dangers for health

Made with lean fish, vegetables, and avocado, sushi can be a good way to get vitamins and omega-3 fatty acids. But sushi can have bacteria and parasites like anisakiasis, which can cause vomiting, diarrhea, and stomach pain. Small children, women who are pregnant or breastfeeding, and people with immune issues should skip raw or undercooked fish. Everyone should also avoid fish that could be high in mercury, like swordfish, bigeye tuna, and shark.
X
Desktop Bottom Promotion