For Quick Alerts
ALLOW NOTIFICATIONS  
For Daily Alerts

ಕುತ್ತಿಗೆಯ ಹಿಂಭಾಗದಲ್ಲಿ ಕಾಣಿಸಿಕೊಳ್ಳುವ 'ಗಂಟಲುವಾಳ ರೋಗ'ಕ್ಕೆ ಮನೆಮದ್ದುಗಳು

|

ಗಂಟಲುವಾಳ ರೋಗ ಎಂದರೆ ಥೈರಾಯ್ಡ್ ಗ್ರಂಥಿಗಳು ಅಸಾಮಾನ್ಯವಾಗಿ ಹಿಗ್ಗುವುದು. ಇದು ಒಂದು ರೀತಿಯ ಥೈರಾಯ್ಡ್ ಸಮಸ್ಯೆಯಾಗಿದೆ ಮತ್ತು ಇದರಿಂದ ಯಾವುದೇ ಹಾನಿಯು ಆಗದು. ಇದನ್ನು ಐಯೋಡಿನ್ ಕೊರತೆಯಿಂದ ಬರುವಂತಹ ಕಾಯಿಲೆ ಎಂದು ಕರೆಯಲಾಗುತ್ತದೆ. ಯಾಕೆಂದರೆ ದೇಹದಲ್ಲಿ ಇರುವಂತಹ ಐಯೋಡಿನ್ ಗೊಯಿಟ್ರಿ ಕಾಯಿಲೆಗೆ ಪ್ರಮುಖ ಕಾರಣವಾಗಿರುವುದು. ಥೈರಾಯ್ಡ್ ಗ್ರಂಥಿಯು ಹಿಗ್ಗಿಕೊಳ್ಳುವುದು ಮತ್ತು ಇದರಿಂದ ಕುತ್ತಿಗೆ ಮತ್ತು ಧ್ವನಿಪೆಟ್ಟಿಗೆ ಕೂಡ ಹಿಗ್ಗಿಕೊಳ್ಳುವುದು.

ಸಣ್ಣ ಮತ್ತು ನೊಡ್ಯುಲರ್ ಗೊಯಿಟ್ರಿ ಎನ್ನುವ ಎರಡು ವಿಧಗಳು ಇವೆ ಮತ್ತು ಇದು ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸುವುದಿಲ್ಲ. ಗೊಯಿಟ್ರಿಯ ಸಾಮಾನ್ಯ ಲಕ್ಷಣಗಳು ಎಂದರೆ ಕೆಮ್ಮು, ಕರ್ಕಶತೆ, ನುಗ್ಗಲು ಮತ್ತು ಉಸಿರಾಡಲು ಕಷ್ಟವಾಗುವುದು ಮತ್ತು ಕುತ್ತಿಗೆಯ ಹಿಂಭಾಗದಲ್ಲಿ ಊತ ಕಾಣಿಸಿಕೊಳ್ಳುವುದು. ಐಯೋಡಿನ್ ಕೊರತೆ, ಗ್ರೇವ್ ರೋಗ, ಹಾಷಿಮೋಟೋನ ರೋಗ, ಬಹುಗ್ರಂಥೀಯ ಗಾಯ್ಟರ್, ಒಂಟಿ ಥೈರಾಯ್ಡ್ಗಂ ಟುಗಳು, ಥೈರಾಯ್ಡ್ ಕ್ಯಾನ್ಸರ್, ಮತ್ತು ಉರಿಯೂತ. ಥೈರಾಯ್ಡ್ ಗ್ರಂಥಿಗಳು ಹಿಗ್ಗಿಕೊಳ್ಳುವುದು.

ಪರಿಶುದ್ಧ ತೆಂಗಿನೆಣ್ಣೆ

ಪರಿಶುದ್ಧ ತೆಂಗಿನೆಣ್ಣೆ

ತೆಂಗಿನ ಎಣ್ಣೆಯಲ್ಲಿ ಉನ್ನತ ಮಟ್ಟದ ಲೌರಿಕ್ ಆಮ್ಲವು ಇರುವ ಕಾರಣದಿಂದಾಗಿ ಇದು ಊತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ನೀವು ಲೌರಿಕ್ ಆಮ್ಲವನ್ನು ಸೇವನೆ ಮಾಡಿದ ವೇಳೆ ಅದು ದೇಹದಲ್ಲಿ ಮೊನೊಲೌರಿನ್ ಆಗಿ ಪರಿವರ್ತನೆ ಆಗುವುದು. ಇದರಲ್ಲಿ ಸೂಕ್ಷ್ಮಣು ವಿರೋಧಿ ಗುಣಗಳು ಇವೆ ಮತ್ತು ಇದು ಆಹಾರದಲ್ಲಿ ಇರುವಂತಹ ಐಯೋಡಿನ್ ನ್ನು ಹೀರಿಕೊಳ್ಳಲು ನೆರವಾಗುವುದು. ಪರಿಶುದ್ಧ ತೆಂಗಿನೆಣ್ಣೆಯಲ್ಲಿ ಉರಿಯೂತ ಶಮನಕಾರಿ ಗುಣವು ಇರುವ ಕಾರಣದಿಂದಾಗಿ ಇದು ಊತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸ್ಮೂಥಿ, ಚಾ ಅಥವಾ ಕಾಫಿ, ಸೂಪ್ ಮತ್ತು ಅಡುಗೆಗೆ ಪರಿಶುದ್ಧವಾದ ತೆಂಗಿನೆಣ್ಣೆ ಬಳಸಿಕೊಳ್ಳಬಹುದು.

ಹರಳೆಣ್ಣೆ

ಹರಳೆಣ್ಣೆ

ಹರಳೆಣ್ಣೆಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣದಿಂದಾಗಿ ಇದು ಗೊಯಿಟ್ಟಿಯಿಂದಾಗಿ ಉಂಟಾಗಿರುವಂತಹ ಊತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಊತದ ಗಾತ್ರವನ್ನು ಕಡಿಮೆ ಮಾಡುವುದು. ಕೆಲವು ಹನಿ ಹರಳೆಣ್ಣೆ ತೆಗೆದುಕೊಂಡು ಅದನ್ನು ಅಂಗೈಗೆ ಹಾಕಿದ ಬಳಿಕ

ಊತ ಇರುವಂತಹ ಜಾಗಕ್ಕೆ ಹಚ್ಚಿಕೊಂಡು ನಿಧಾನವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. ರಾತ್ರಿ ಮಲಗುವ ಮೊದಲು ಹಚ್ಚಿಕೊಂಡು ಹಾಗೆ ಬಿಟ್ಟು ಬಿಡಿ ಮತ್ತು ರಾತ್ರಿ ವೇಳೆ ಊತವು ತುಂಬಾ ಕಡಿಮೆ ಆಗಿರುವುದನ್ನು ನೀವು ಕಾಣಬಹುದಾಗಿದೆ.

ಬೆಂಟೋನೈಟ್ ಕ್ಲೇ

ಬೆಂಟೋನೈಟ್ ಕ್ಲೇ

ಬೆಂಟೋನೈಟ್ ಕ್ಲೇಯಲ್ಲಿ ಇರುವಂತಹ ವಿಷಕಾರಿ ಅಂಶ ಹೀರಿಕೊಳ್ಳುವಂತಹ ಶಕ್ತಿಯಿಂದಾಗಿ ಇದು ಗೊಯಿಟ್ರಿಯಿಂದಾಗಿ ಉಂಟಾಗಿರುವಂತಹ ಊತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಗೊಯಿಟ್ರಿಯಿಂದ ವಿಷಕಾರಿ ಅಂಶವನ್ನು ಹೀರಿಕೊಳ್ಳುವುದು ಮತ್ತು ಊತವನ್ನು ತಗ್ಗಿಸುವುದು.

ನಯವಾದ ಪೇಸ್ಟ್ ಮಾಡಿಕೊಳ್ಳಲು ನೀವು ಬೆಂಟೋನೈಟ್ ಕ್ಲೇ ಗೆ ಸ್ವಲ್ಪ ನೀರು ಹಾಕಿಕೊಳ್ಳಿ. ಇದನ್ನು ಊತವಿರುವಂತಹ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಅದು ಅಲ್ಲಿ ಹಾಗೆ ಒಣಗಲು ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ.

ಅರಿಶಿನ

ಅರಿಶಿನ

ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಹೊಂದಿರುವಂತಹ ಅರಶಿನದಲ್ಲಿ ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ.ಗೊಯಿಟ್ರಿಯ ಚಿಕಿತ್ಸೆಗೆ ನೀವು ಅರಶಿನವನ್ನು ಬಳಸಿಕೊಂಡರೆ ಅದರಿಂದ ಉರಿಯೂತ ಕಡಿಮೆ ಆಗುವುದು ಮತ್ತು ಥೈರಾಯ್ಡ್ ಹಾರ್ಮೋನುಗಳಲ್ಲಿ ಇರುವಂತಹ ಯಾವುದೇ ರೀತಿಯ ಅಸಮತೋಲನವನ್ನು ಇದು ಸರಿಪಡಿಸಲು ನೆರವಾಗುವುದು. ಒಂದು ಕಪ್ ನೀರನ್ನು ಬಿಸಿ ಮಾಡಿ ಮತ್ತು ಅದಕ್ಕೆ ½ ಚಮಚ ಅರಶಿನ ಹಾಕಿಕೊಳ್ಳಿ. ಇದು ದಪ್ಪಗಿನ ಪೇಸ್ಟ್ ಆದ ಬಳಿಕ ಅದಕ್ಕೆ ಅರ್ಧ ಚಮಚ ಕರಿಮೆಣಸಿನ ಹುಡಿ ಹಾಕಿ ಮತ್ತು 70 ಮಿ.ಲೀ.ಆಲಿವ್ ತೈಲ ಹಾಕಿ. ಇದನ್ನು ಈಗ ನೀವು ಗ್ಯಾಸ್ ನಿಂದ ತೆಗೆದು, ಒಂದು ಗಟ್ಟಿ ಮುಚ್ಚಳ ಇರುವಂತಹ ಡಬ್ಬದಲ್ಲಿ ಹಾಕಿಡಿ. ಈ ಪೇಸ್ಟ್ ನ್ನು ನೀವು ಪ್ರತಿನಿತ್ಯ ಒಂದು ಚಮಚ ತೆಗೆದುಕೊಳ್ಳಿ.

ಗ್ರೀನ್ ಟೀ

ಗ್ರೀನ್ ಟೀ

ಆ್ಯಂಟಿಆಕ್ಸಿಡೆಂಟ್ ಮತ್ತು ಇತರ ನೈಸರ್ಗಿಕ ಫ್ಲೊರೈಡ್ ನ್ನು ಹೊಂದಿರುವಂತಹ ಗ್ರೀನ್ ಟೀಯು ಗೊಯಿಟ್ರಿ ಕಾಯಿಲೆಗೆ ತುಂಬಾ ಪರಿಣಾಮಕಾರಿಯಾದ ಔಷಧಿ ಯಾಗಿದೆ. ಪ್ರತನಿತ್ಯ ಗ್ರೀನ್ ಟೀ ಸೇವನೆ ಮಾಡುವುದರಿಂದ ಗೊಯಿಟ್ರಿಯನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ ಅದು ಬರದಂತೆ ಕೂಡ ತಡೆಯ ಬಹುದು. ಗ್ರೀನ್ ಟೀಯಲ್ಲಿ ಇರುವಂತಹ ಫ್ಲೋರೈಡ್ ಥೈರಾಯ್ಡ್ ಗ್ರಂಥಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ನೆರವಾಗುವುದು. ಒಂದು ಕಪ್ ನೀರನ್ನು ಬಿಸಿ ಮಾಡಿ ಮತ್ತು ಅದರಲ್ಲಿ ಗ್ರೀನ್ ಟೀ ಬ್ಯಾಗ್ ನ್ನು ಹಾಕಿಬಿಡಿ. ಕೆಲವು ನಿಮಿಷ ಬಿಟ್ಟು ಟೀ ಬ್ಯಾಗ್ ತೆಗೆಯಿರಿ. ಇದಕ್ಕೆ ಜೇನುತುಪ್ಪ ಹಾಕಿ. ಪ್ರತಿನಿತ್ಯ ನೀವು 2ರಿಂದ 3 ಕಪ್ ಕುಡಿಯಿರಿ.

ಮೊರಿಂಗಾ

ಮೊರಿಂಗಾ

ಈ ಗಿಡಮೂಲಿಕೆಯು ದೇಹದಲ್ಲಿ ಉರಿಯೂತವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಶಮನಕ್ಕೆ ನೆರವಾಗುವುದು. ಥೈರಾಯ್ಡ್ ಗ್ರಂಥಿಗಳಲ್ಲಿ ಉಂಟಾಗಿರುವಂತಹ ಊತವನ್ನು ಇದು ಕಡಿಮೆ ಮಾಡುವುದು. ಒಂದು ಚಮಚ ಒಣಗಿದ ಮೊರಿಂಗಾ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಇದನ್ನು ಕುದಿಯುವ ಒಂದು ಕಪ್ ನೀರಿಗೆ ಹಾಕಿ. ಕೆಲವು ನಿಮಿಷ ಕಾಲ ಹಾಗೆ ಇರಲಿ ಮತ್ತು ಬಳಿಕ ಇದನ್ನು ಸೋಸಿಕೊಳ್ಳಿ. ಇದನ್ನು ನೀವು ದಿನಕ್ಕೆ ಒಂದು ಸಲ ಕುಡಿಯ ಬಹುದು.

ಬಾರ್ಲಿ ನೀರು

ಬಾರ್ಲಿ ನೀರು

ದೇಹಕ್ಕೆ ಬೇಕಾಗಿರುವಂತಹ ಪೈಥೋ ನ್ಯೂಟ್ರಿಯೆಂಟ್ಸ್ ಮತ್ತು ಆ್ಯಂಟಿಆಕ್ಸಿಡೆಂಟ್ ಬಾರ್ಲಿ ನೀರಿನಲ್ಲಿ ಇದೆ. ಇದು ಗೊಯಿಟ್ರ ವನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಸುವುದು ಇದರಿಂದ ಗೊಯಿಟ್ರದ ಸಮಸ್ಯೆಯು ನಿವಾರಣೆ ಆಗುವುದು. ಅರ್ಧ ಕಪ್ ಬಾರ್ಲಿಯನ್ನು ಸರಿಯಾಗಿ ತೊಳೆಯಿರಿ. ಇದನ್ನು ನೀರಿನಲ್ಲಿ ಹಾಕಿ ನೆನೆಸಿಡಿ ಮತ್ತು ಕೆಲವು ನಿಮಿಷ ಬಿಟ್ಟು ಬೇಯಿಸಿ. ತುರಿದಿರುವಂತಹ ಲಿಂಬೆ, ಒಂದು ಕಪ್ ಲಿಂಬೆ ರಸ ಮತ್ತು ಒಂದು ಕಪ್ ಸಕ್ಕರೆ ನೀರಿಗೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಬಾರ್ಲಿಯನ್ನು ಈಗ ಸೋಸಿಕೊಳ್ಳಿ ಮತ್ತು ಮುಚ್ಚಳ ಮುಚ್ಚಿದ ಜಾರ್ ನಲ್ಲಿ ಇದನ್ನು ಹಾಕಿ ಫ್ರಿಡ್ಜ್ ನಲ್ಲಿ ಹಾಕಿಡಿ. ಪ್ರತಿನಿತ್ಯ ನೀವು ಇದನ್ನು ಕುಡಿಯಿರಿ.

ಬೀಟ್ ರೂಟ್

ಬೀಟ್ ರೂಟ್

ಬೀಟ್ ರೂಟ್ ನಲ್ಲಿ ಕಂಡುಬರುವಂತಹ ಬೆಟಾಲೈನ್ ವರ್ಣದ್ರವ್ಯಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇದೆ ಎಂದು ಕಂಡು ಕೊಳ್ಳಲಾಗಿದೆ. ಇದು ಗೊಯಿಟ್ರಿ ಚಿಕಿತ್ಸೆಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಬೀಟ್ ರೂಟ್ ಸೇವನೆಯಿಂದಾಗಿ ಉರಿಯೂತವನ್ನು ಕಡಿಮೆ ಮಾಡಿ ಕೊಳ್ಳಬಹುದು. ಬೀಟ್ ರೂಟ್ ನ್ನು ನೀವು ಕುದಿಸಿ, ಬೇಯಿಸಿ ಅಥವಾ ಸುಟ್ಟು ತಿನ್ನಬಹುದು. ಇದನ್ನು ಜ್ಯೂಸ್ ಅಥವಾ ಸ್ಮೂಥಿ ಮಾಡಿಯು ಕುಡಿಯ ಬಹುದು.

English summary

Simple Home Remedies For Goitre

Goitre is an abnormal enlargement of the thyroid gland. It is one of the most common thyroid disorders and is mostly harmless. It is also termed as iodine deficiency disorder because the lack of iodine content in the body is the most common cause of goitre. The thyroid glands get swollen up, which will lead to the swelling of the neck or the voice box (larynx). Diffuse small goitre and nodular goitre are the two types and do not necessarily show any symptoms in all cases. The most common symptoms of goitre are coughing, hoarseness, difficulty in swallowing and breathing, and a visible swelling[2] at the base of your neck. The enlarging of the thyroid glands are caused by iodine deficiency, Grave's disease, Hashimoto's disease, multinodular goitre, solitary thyroid nodules, thyroid cancer, and inflammation.
Story first published: Thursday, February 21, 2019, 17:21 [IST]
X
Desktop Bottom Promotion