For Quick Alerts
ALLOW NOTIFICATIONS  
For Daily Alerts

ಕಾಂಡೋಮ್‌‌ನಿಂದಾಗಿ ಆರೋಗ್ಯದ ಮೇಲೆ ಆಗುವ ಅಡ್ಡಪರಿಣಾಮಗಳು

|

ಕಾಂಡೋಮ್ ಎನ್ನುವ ಪದ ಕೇಳಿದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಬರುವುದು ಗರ್ಭಧಾರಣೆ ತಡೆಗಟ್ಟಲು, ಲೈಂಗಿಕ ರೋಗಗಳು ಬರೆದಂತೆ ಬಳಕೆ ಮಾಡಲಾಗುವುದು ಎಂದು. ಆದರೆ ನಿಮಗೆ ಗೊತ್ತೇ? ಕಾಂಡೋಮ್ ನಿಂದ ಕೂಡ ಆರೋಗ್ಯಕ್ಕೆ ಕೆಲವೊಂದು ಅಡ್ಡ ಪರಿಣಾಮಗಳಿವೆಯಂತೆ!

ನಮಗೆಲ್ಲಾ ಗೊತ್ತಿರುವ ಹಾಗೆ ಮನುಷ್ಯ ಕುಲಕ್ಕೆ ಕಾಂಡೋಮ್ ಎನ್ನುವುದು ದೊಡ್ಡ ಮಟ್ಟದ ಅವಿಷ್ಕಾರವಾಗಿದೆ, ಅಲ್ಲದೆ ಇದರಿಂದ ಹಲವಾರು ರೀತಿಯ ಲೈಂಗಿಕ ರೋಗಗಳನ್ನು ತಡೆಗಟ್ಟಬಹುದು ಹಾಗೂ ಬೇಡದ ಗರ್ಭ ಕೂಡ ತಡೆಯಬಹುದು. ಆದರೆ ಇದರಿಂದ ಕೂಡ ಕೆಲವೊಂದು ಅಡ್ಡಪರಿಣಾಮಗಳು ಇವೆಯಂತೆ, ಮುಂದೆ ಓದಿ

ಕಾಂಡೊಮ್ ಗಳಂದರೇನು?

ಕಾಂಡೊಮ್ ಗಳಂದರೇನು?

ಭಾರತ ಸರ್ಕಾದ ನಿರೋಧ್ ಎಂಬ ಹೆಸರಿನಲ್ಲಿ ಉಚಿತವಾಗಿ ವಿತರಿಸುವ, ಸುಲಭ ದರದಲ್ಲಿ ಔಷಧಿ ಅಂಗಡಿಗಳಲ್ಲಿಯೂ ದೊರಕುವ ಈ ಗರ್ಭನಿರೋಧಕ ವಸ್ತು ಪುರುಷರಿಗೆ ಮೀಸಲಾಗಿದ್ದು ಲ್ಯಾಟೆಕ್ಸ್ ಎಂಬ ರಬ್ಬರ್ ವಸ್ತುವಿನಿಂದ ತಯಾರಿಸಲಾಗಿರುತ್ತದೆ. ಇತ್ತೀಚೆಗೆ ಇದರ ಗುಣಮಟ್ಟವನ್ನು ಹೆಚ್ಚಿಸಲು ಪಾಲಿಯೂರಿಥೇನ್ ಅಥವಾ ಪಾಲಿಐಸೋಪ್ರೀನ್ ಎಂಬ ಕಚ್ಚಾವಸ್ತುವಿನಿಂದಲೂ ತಯಾರಿಸಲಾಗುತ್ತಿದ್ದು ಅನೈಚ್ಛಿಕ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳಿಂದ ರಕ್ಷಣೆ ಒದಗಿಸುತ್ತದೆ. ಕಾಂಡಮ್ಮುಗಳಲ್ಲಿ ಪುರುಷರಿಗೂ ಮಹಿಳೆಯರಿಗೂ ಅನ್ವಯವಾಗುವ ವಿಧಗಳಿದ್ದು ಎರಡೂ ವಿಧಗಳ ಉದ್ದೇಶ ಅನೈಚ್ಛಿಕ ಗರ್ಭಧಾರಣೆ ತಡೆಯುವುದು ಮತ್ತು ಲೈಂಗಿಕವಾಗಿ ಹರಡುವ ರೋಗಗಳಿಂದ ತಡೆಯುವುದೇ ಆಗಿದೆ.

ಲ್ಯಾಟೆಕ್ಸ್ ಅಲರ್ಜಿ

ಲ್ಯಾಟೆಕ್ಸ್ ಅಲರ್ಜಿ

ಹೆಚ್ಚಿನ ಕಾಂಡೋಮ್ ಗಳನ್ನು ಲ್ಯಾಟೆಕ್ಸ್ ನಿಂದ ಮಾಡಲಾಗುತ್ತದೆ. ಇದನ್ನು ರಬ್ಬರ್ ಮರದಿಂದ ಬರುವ ದ್ರವದಿಂದ ತಯಾರಿಸಲಾಗುವುದು. ದ ಅಮೆರಿಕನ್ ಅಕಾಡಮಿ ಆಫ್ ಅಲರ್ಜಿ, ಅಸ್ತಮಾ ಆ್ಯಂಡ್ ಇಮ್ಯೂನಾಲಜಿ ರಬ್ಬರ್ ನಲ್ಲಿ ಇರುವಂತಹ ಪ್ರೋಟೀನ್ ನಿಂದಾಗಿ ಕೆಲವೊಂದು ಜನರಿಗೆ ಅಲರ್ಜಿಯು ಕಾಣಿಸಿಕೊಳ್ಳುವುದು. ಇದು ತುಂಬಾ ಅಪರೂಪ. ಅಲರ್ಜಿಯ ಲಕ್ಷಣಗಳು ತುಂಬಾ ಭಿನ್ನವಾಗಿ ಇರಬಹುದು. ಇದು ತೀವ್ರ ಮಟ್ಟದ್ದಾಗಿರಬಹುದು, ಸೀನು, ಶೀತ, ತುರಿಕೆ, ಬೊಕ್ಕೆ ಬರ ಬಹುದು. ಇನ್ನು ತೀವ್ರವಾದ ಸೋಂಕಿನ ಲಕ್ಷಣಗಳೆಂದರೆ ಉಬ್ಬಸ, ಊತ, ನಿಶ್ಯಕ್ತಿ ಮತ್ತು ಲಘು ತಲೆನೋವು. ಕೆಲವೊಂದು ಸಂದರ್ಭಧಲ್ಲಿ ಲ್ಯಾಟೆಕ್ಸ್ ಅಲರ್ಜಿಯಿಂದಾಗಿ ಅನಾಫಿಲ್ಯಾಕ್ಸಿಸ್ ಎನ್ನುವ ಪ್ರಾಣಹಾನಿ ಉಂಟು ಮಾಡುವ ಪರಿಸ್ಥಿತಿ ಉಂಟಾಗ ಬಹುದು. ಇಂತಹ ಕಾಂಡೋಮ್ ಗಳು ಲೈಂಗಿಕ ಕ್ರಿಯೆ ವೇಳೆ ಹರಿದು ಹೋಗುವಂತಹ ಸಾಧ್ಯತೆಯು ಅಧಿಕವಾಗಿರುವುದು ಮತ್ತು ಇವುಗಳು ಯೋನಿಯ ದ್ರವಕ್ಕೆ ಹೊಂದಿಕೊಳ್ಳುವುದಿಲ್ಲ.

ಬೇರೆ ರೀತಿಯ ಎಸ್ ಟಿಡಿಗಳು ಬರಬಹುದು

ಬೇರೆ ರೀತಿಯ ಎಸ್ ಟಿಡಿಗಳು ಬರಬಹುದು

ಎಚ್ ಐವಿ ಮತ್ತು ಇತರ ಕೆಲವೊಂದು ಕಾಯಿಲೆಗಳಾದ ಸಿಫಿಲಿಸ್, ಕ್ಲಮೈಡಿಯ, ಗೊನೊರಿಯಾ ಮತ್ತು ಎಚ್ಪಿವಿ ಅಪಾಯವನ್ನು ತಡೆಯುವಲ್ಲಿ ಕಾಂಡೋಮ್ ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಅದಾಗ್ಯೂ, ಚರ್ಮದ ಹೊರಭಾಗದಲ್ಲಿ ಇರುವಂತಹ ಕೆಲವೊಂದು ಲೈಂಗಿಕ ಕಾಯಿಲೆಗಳಾದ ಹಾನಿಕಾರಕ ಸೋಂಕುಗಳು ಮತ್ತು ಮೊಲಸ್ಕಮ್ ಕಾಂಟಾಜಿಯಾಸಿಯಮ್ ಪಸರಿಸದಂತೆ ಇದು ತಡೆಯುವುದಿಲ್ಲ. ದ ಅಮೆರಿಕನ್ ಸೋಶಿಯಲ್ ಹೆಲ್ತ್ ಅಸೋಸಿಯೇಶನ್ ಪ್ರಕಾರ ಕಾಂಡೋಮ್ ಜನನೇಂದ್ರಿಯ ಹಾರ್ಪಿಸ್ ನ ಅಪಾಯವನ್ನು ಕಡಿಮೆ ಮಾಡುವುದು. ಆದರೆ ಚರ್ಮದ ಪ್ರತಿಯೊಂದು ಭಾಗದಲ್ಲಿ ಹರಡಿರುವಂತಹ ಹಾರ್ಪಿಸ್ ರೋಗದ ವೈರಸ್ ಹರಡುವುದನ್ನು ಇದು ತಡೆಯುವುದಿಲ್ಲ ಮತ್ತು ಇದು ಲೈಂಗಿಕ ಸಂಗಾತಿಗೆ ಹರಡಬಹುದು. ಎಸ್ ಟಿಡಿಯ ಕೆಲವೊಂದು ಚಿಹ್ನೆಗಳನ್ನು ಇಲ್ಲಿ ನಿಮಗೆ ತಿಳಿಸಲಾಗುವುದು.

ಗರ್ಭಧಾರಣೆಯ ಅಪಾಯ

ಗರ್ಭಧಾರಣೆಯ ಅಪಾಯ

ಬೇಡದೆ ಇರುವ ಗರ್ಭಧಾರಣೆ ತಡೆಯಲು ಹೆಚ್ಚಾಗಿ ಕಾಂಡೋಮ್ ಬಳಕೆ ಮಾಡಲಾಗುತ್ತದೆ. ಅದಾಗ್ಯೂ, ಇದನ್ನು ಸರಿಯಾಗಿ ಬಳಕೆ ಮಾಡಿದಾಗ ಅದು ಶೇ.98ರಷ್ಟು ರಕ್ಷಣೆ ನೀಡುವುದು ಮತ್ತು ಸರಿಯಾಗಿ ಬಳಕೆ ಮಾಡದೆ ಇರುವಾಗ 100ರಲ್ಲಿ 15 ಮಂದಿ ಮಹಿಳೆ ಗರ್ಭ ಧರಿಸುವ ಸಾಧ್ಯತೆಯು ಇರುವುದು. ಗರ್ಭ ಬೇಡವೆಂದು ಕಾಂಡೋಮ್ ಬಳಕೆ ಮಾಡುತ್ತಲಿದ್ದರೆ ಆಗ ನೀವು ತಾಜಾ ಕಾಂಡೋಮ್ ಬಳಕೆ ಮಾಡಿ ಮತ್ತು ಅದನ್ನು ಸರಿಯಾಗಿ ಬಳಸಿ. ದಿನಾಂಕ ಮೀರಿದ ಕಾಂಡೋಮ್ ಹರಿದು ಹೋಗಬಹುದು ಮತ್ತು ಲೈಂಗಿಕ ಕ್ರಿಯೆ ಮಧ್ಯೆ ಇದು ಹರಿದುಹೋಗಬಹುದು.

 ಸಂಗಾತಿಯ ಆರೋಗ್ಯಕ್ಕೆ ಅಪಾಯ

ಸಂಗಾತಿಯ ಆರೋಗ್ಯಕ್ಕೆ ಅಪಾಯ

ಟೆಕ್ಸಾಸ್ ನ ಡಲ್ಲಾಸ್ ನ ಇಬ್ಬರು ವೈದ್ಯರು ಹೇಳುವ ಪ್ರಕಾರ ಪುರುಷರು ಬಳಸುವ ಕಾಂಡೋಮ್ ಮಹಿಳೆಯರಲ್ಲಿ ಕ್ಯಾನ್ಸರ್ ಉಂಟು ಮಾಡಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ ಅದು ಕಾಂಡೋಮ್ ನಲ್ಲಿ ಬಳಸಲಾಗುವ ಟಾಲ್ಕ್ ಮತ್ತು ಒಣ ಲ್ಯೂಬ್ರಿಕೆಂಟ್. ಟಾಲ್ಕ್ ನಿಂದಾಗಿ ಗರ್ಭಕೋಶದ ಕ್ಯಾನ್ಸರ್ ಬರುವುದು ಎಂಧು ಅಧ್ಯಯನಗಳು ಕೂಡ ಹೇಳಿವೆ. ಮಹಿಳೆಗೆ ಇದರಿಂಧಾ ಬಂಜೆತನ ಬರಬಹುದು. ವೈದ್ಯರಾಗಿರುವ ಕ್ಯಾಂಡೇಸ್ ಕಾಸ್ಪರ್ ಮತ್ತು ಪಿ.ಜೆ. ಚಾಂಡ್ಲರ್ ಅವರು ಹೇಳುವ ಪ್ರಕಾರ ಅಮೆರಿಕನ್ ಫುಟ್ ಆ್ಯಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಶಸ್ತ್ರಚಿಕಿತ್ಸೆ ವೇಳೆ ಬಳಸುವ ಗ್ಲೌಸ್ ಗೆ ಟಾಲ್ಕ್ ಬಳಸುವುದರಿಂದ ಅಪಾಯ ಇದೆ ಎಂಧು ಹೇಳಿದೆ ಮತ್ತು ಇದನ್ನು ನಿಷೇಧ ಕೂಡ ಮಾಡಿದೆ. ಆದರೆ ಕಾಂಡೋಮ್ ಗೆ ಇದನ್ನು ಬಳಕೆ ಮಾಡಲಾಗುತ್ತದೆ. ಇದನ್ನು ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಶಿಯೇಶನ್ ನಲ್ಲಿ ಹೇಳಲಾಗಿದೆ.

 ಸ್ತ್ರೀಯರ ಕಾಂಡೋಮ್‌ಗಳು

ಸ್ತ್ರೀಯರ ಕಾಂಡೋಮ್‌ಗಳು

ಹಲವರಿಗೆ ಸ್ತ್ರೀಯರ ಕಾಂಡೋಮ್ ಇದೆ ಎಂಬುದೇ ತಿಳಿದಿಲ್ಲ. ಗಂಡಸರು ಮಿಲನದಲ್ಲಿ ಪಾಲ್ಗೊಂಡಾಗ ಇದನ್ನು ಧರಿಸಿದರೆ, ಹೆಂಗಸರು ಇದನ್ನು ಮಿಲನಕ್ಕೆ ಮೊದಲೆ ಎಂಟುಗಂಟೆಗಳ ಮೊದಲೆ ಬೇಕಾದರೂ ಧರಿಸಬಹುದು. ಇದು ಔಷಧಿ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಇದು ಹೆಂಗಸರಿಗೆ ಹೇಳಿ ಮಾಡಿಸಿದ ಕಾಂಡೋಮ್ ಆಗಿರುತ್ತದೆ. ಗರ್ಭನಿರೋಧಕ ಮಾತ್ರೆಗಳು ಹೆಂಗಸರಿಗೆ ಗರ್ಭವನ್ನು ತಡೆಯಲು ಇರುವ ಮಾರ್ಗಗಳಲ್ಲಿ ಒಂದಾಗಿದೆ. ಕೆಲವೊಂದು ಮಾತ್ರೆಗಳು, ಸ್ತ್ರೀಯರು ಅಪ್ಪಿ-ತಪ್ಪಿ ಮಿಲನದಲ್ಲಿ ಪಾಲ್ಗೊಂಡ ನಂತರ ಸಹ ಸೇವಿಸಬಹುದು. ಆದರೆ ಇದು ಅವರ ಆರೋಗ್ಯಕ್ಕೆ ಪೂರಕವಲ್ಲ. ಅವರಿಗೆ ಇದನ್ನು ಸೇವಿಸುವುದರಿಂದ ತಲೆನೋವು, ಋತು ಚಕ್ರದ ಏರು-ಪೇರು, ನಾಸಿಯಾ, ಸ್ತನ ಊದಿಕೊಳ್ಳುವಿಕೆ, ಅಧಿಕ ತೂಕ, ಮೂಡ್ ಬದಲಾವಣೆ, ಕಾಮಾಸಕ್ತಿಯ ಕೊರತೆ, ಯೋನಿ ಸ್ರಾವ ಇತ್ಯಾದಿ ಕಾಣಿಸಿಕೊಳ್ಳುತ್ತದೆ.

English summary

Side effects of condoms!

In order for condoms to be effective, you have to use a new one correctly every single time you have sex. That means putting on a condom before there’s any skin-to-skin genital contact, and keeping it on until you’re done having sex. If you only use condoms sometimes, or put them on halfway through sex, they won’t work as well. Having a supply of condoms and making sure they’re close by before you get busy can help you remember to use them.
Story first published: Wednesday, May 15, 2019, 20:01 [IST]
X