Just In
Don't Miss
- News
ಸಿದ್ದು, ದಿನೇಶ್ ಗುಂಡೂರಾವ್ ರಾಜೀನಾಮೆ: ಹಾಗೆ ಸುಮ್ಮನೆ!
- Movies
ಮಹತ್ವದ ಪ್ರಾಜೆಕ್ಟ್ ಗೆ ಕೈ ಹಾಕಿದ ಕ್ರಿಕೆಟಿಗ ಎಂ ಎಸ್ ಧೋನಿ
- Automobiles
ಕಾರು ಮಾರಾಟದಲ್ಲಿ ಮತ್ತೆ ಹಿನ್ನಡೆ ಅನುಭವಿಸಿದ ಟೊಯೊಟಾ
- Finance
ಡಿಸೆಂಬರ್ 9ರ ಚಿನ್ನ- ಬೆಳ್ಳಿ ದರ ಹೀಗಿದೆ
- Technology
ನಿಮ್ಮ ಪಿಸಿಗೆ ವೈರಸ್ ಅಟ್ಯಾಕ್ ಆಗಿದೆಯಾ ಎಂಬುದನ್ನು ಪರೀಕ್ಷಿಸುವುದು ಹೇಗೆ?
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
- Education
KPSC Admit Card 2019: ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ ಮತ್ತು ಗಂಟಲ ಕ್ಯಾನ್ಸರ್' ಆವರಿಸುವ ಸಾಧ್ಯತೆ ಹೆಚ್ಚು!
ಅಧ್ಯಾಯನದ ವರದಿಯ ಪ್ರಕಾರ ಏಕಸಂಗಾತಿಯಿಂದ ವಿಮುಖರಾಗಿ ಐವರು ಅಥವಾ ಐವರಿಗೂ ಹೆಚ್ಚು ಮಹಿಳೆಯರೊಂದಿಗೆ ಮುಖಮೈಥುನ ನಡೆಸುವ ಪುರುಷರಲ್ಲಿ ಬಾಯಿ ಮತ್ತು ಗಂಟಲ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚು, ಅದರಲ್ಲೂ ಇವರು ಧೂಮಪಾನಿಗಳಾಗಿದ್ದರೆ ಈ ಕ್ಯಾನ್ಸರ್ ಇಡಿಯ ತಲೆ ಮತ್ತು ಕುತ್ತಿಗೆಗೂ ವ್ಯಾಪಿಸುವ ಸಾಧ್ಯತೆ ಇದೆ.
ಅಮೇರಿಕಾದಲ್ಲಿ ಈ ಸಮೀಕ್ಷೆಯನ್ನು ಐವರಿಗೂ ಹೆಚ್ಚು ಸಂಗಾತಿಗಳಿರುವ ಹಾಗೂ ಮುಖಮೈಥುನ ನಡೆಸುವ ಸುಮಾರು 20 ರಿಂದ 59 ವಯಸ್ಸಿನ ನಡುವಣ 9,425 ಪುರುಷರನ್ನು ಇವರ ದೇಹದಲ್ಲಿರುವ ಒ.ಹೆಚ್ ಪಿ. ವಿ (oral human papilloma virus (HPV)ಎಂಬ ವೈರಸ್ ನ ಇರುವಿಕೆಯ ಬಗ್ಗೆ ತಪಾಸಣೆ ಮಾಡಿದ ಬಳಿಕ ಸೂಕ್ತ ಸಾಕ್ಷ್ಯಾಧಾರಗಳ ಮೂಲಕ ಈ ವರದಿಯನ್ನು ಪ್ರಕಟಿಸಲಾಗಿದೆ.

ಹೆಚ್ ಪಿ ವಿ ವೈರಸ್
ಹೆಚ್ ಪಿ ವಿ ವೈರಸ್ ತೇವಭಾಗದಲ್ಲಿ ಮಾತ್ರವೇ ಸೋಂಕು ಉಂಟು ಮಾಡಬಹುದಾದ ವೈರಸ್ ಆಗಿದ್ದು ವಿಶೇಷವಾಗಿ ಮಹಿಳೆಯರ ಜನನಾಂಗದಲ್ಲಿ ಬಿಡಾರ ಹೂಡಿ ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಅಪರೂಪದಲ್ಲಿ ಇದು ಮಹಿಳೆಯರ ಬಾಯಿ, ಗಂಟಲ ಮೇಲ್ಭಾಗದ ತೇವಭಾಗದಲ್ಲಿಯೂ ಕಾಣಿಸಿಕೊಂಡು ಬಾಯಿ ಮತ್ತು ಗಂಟಲ ಕ್ಯಾನ್ಸರ್ ಗೂ ಕಾರಣವಾಗುತ್ತದೆ. ಅಲ್ಲದೇ ಜನನಾಂಗದ ಭಾಗದಲ್ಲಿ ಕಂಡುಬರುವ ಕೀವುಗುಳ್ಳೆಗಳ ಒಳಗೂ ಈ ವೈರಸ್ ಆಶ್ರಯ ಪಡೆದಿರುತ್ತದೆ.

ಸಂಶೋಧಕರ ಪ್ರಕಾರ
ಸಂಶೋಧಕರ ಪ್ರಕಾರ 6% ಪುರುಷರಲ್ಲಿಯೂ, 1% ಮಹಿಳೆಯರಲ್ಲಿಯೂ ಕ್ಯಾನ್ಸರ್ ಉಂಟುಮಾಡಬಹುದಾದ ಹೆಚ್ ಪಿ. ವಿ ವೈರಸ್ ಬಾಯಿಯ ತೇವಭಾಗದಲ್ಲಿ ಪತ್ತೆಯಾಗಿದೆ. ಅಲ್ಲದೇ ಧೂಮಪಾನಿಗಳಲ್ಲಿಯೇ ಅತಿ ಹೆಚ್ಚಾಗಿ ಇದು ಕಂಡುಬಂದಿದೆ. ಬಹುಸಂಗಾತಿಯ ಒಡನಾಟವಿರುವ ಪುರುಷರು ಮತ್ತು ಅದರಲ್ಲೂ ಮುಖಮೈಥುನ ನಡೆಸುವ ಪುರುಷರಲ್ಲಿಯೇ ಈ ವೈರಸ್ ಗರಿಷ್ಟ ಪ್ರಮಾಣದಲ್ಲಿ ಕಂಡುಬಂದಿದೆ. ಆದರೆ ಈ ಅಧ್ಯಯನದಲ್ಲಿ ವೈರಸ್ ನ ಸೋಂಕು ಅಥವಾ ಕ್ಯಾನ್ಸರ್ ಗೆ ಒಳಗಾಗಲು ಎಷ್ಟು ಮಹಿಳೆಯ ರೊಂದಿಗೆ ಮುಖಮೈಥುನ ನಡೆಸಬೇಕಾಗುತ್ತದೆ ಎಂಬ ಮಾನದಂಡವನ್ನು ಸ್ಪಷ್ಟಪಡಿಸಲಾಗಿಲ್ಲ.

ಸಂಶೋಧಕರ ಪ್ರಕಾರ
ಸಂಶೋಧಕರ ಪ್ರಕಾರ 6% ಪುರುಷರಲ್ಲಿಯೂ, 1% ಮಹಿಳೆಯರಲ್ಲಿಯೂ ಕ್ಯಾನ್ಸರ್ ಉಂಟುಮಾಡಬಹುದಾದ ಹೆಚ್ ಪಿ. ವಿ ವೈರಸ್ ಬಾಯಿಯ ತೇವಭಾಗದಲ್ಲಿ ಪತ್ತೆಯಾಗಿದೆ. ಅಲ್ಲದೇ ಧೂಮಪಾನಿಗಳಲ್ಲಿಯೇ ಅತಿ ಹೆಚ್ಚಾಗಿ ಇದು ಕಂಡುಬಂದಿದೆ. ಬಹುಸಂಗಾತಿಯ ಒಡನಾಟವಿರುವ ಪುರುಷರು ಮತ್ತು ಅದರಲ್ಲೂ ಮುಖಮೈಥುನ ನಡೆಸುವ ಪುರುಷರಲ್ಲಿಯೇ ಈ ವೈರಸ್ ಗರಿಷ್ಟ ಪ್ರಮಾಣದಲ್ಲಿ ಕಂಡುಬಂದಿದೆ. ಆದರೆ ಈ ಅಧ್ಯಯನದಲ್ಲಿ ವೈರಸ್ ನ ಸೋಂಕು ಅಥವಾ ಕ್ಯಾನ್ಸರ್ ಗೆ ಒಳಗಾಗಲು ಎಷ್ಟು ಮಹಿಳೆಯರೊಂದಿಗೆ ಮುಖಮೈಥುನ ನಡೆಸಬೇಕಾಗುತ್ತದೆ ಎಂಬ ಮಾನದಂಡವನ್ನು ಸ್ಪಷ್ಟಪಡಿಸಲಾಗಿಲ್ಲ.

ಕ್ಯಾನ್ಸರ್ ಎದುರಾಗಿಯೇ ಆಗುತ್ತದೆ ಎಂದು ಖಚಿತವಾಗಿಯೂ ಹೇಳಲು ಸಾಧ್ಯವಿಲ್ಲ
ವೈರಸ್ ಇದ್ದ ಮಾತ್ರಕ್ಕೇ ಕ್ಯಾನ್ಸರ್ ಎದುರಾಗಿಯೇ ಆಗುತ್ತದೆ ಎಂದು ಖಚಿತವಾಗಿಯೂ ಹೇಳಲು ಸಾಧ್ಯವಿಲ್ಲ, ಅಂತೆಯೇ ಇಷ್ಟು ಕಡಿಮೆ ಪ್ರಮಾಣದ ಜನರಿಗೆ ಆವರಿಸಿರುವ ಕಾರಣ ಉಳಿದವರಿಗೂ ಆವರಿಸುವುದೇ ಇಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಈ ವೈರಸ್ಸುಗಳು ವರ್ಷಗಳವರೆಗೆ ಹೆಬ್ಬಾವಿನಂತೆ ಯಾವುದೇ ಚಲನೆಯಿಲ್ಲದೇ ವರ್ಷಗಟ್ಟಲೇ ಬಿದ್ದುಕೊಂಡಿದ್ದು ಮುಂದೆಂದೋ ಒಮ್ಮೆಲೇ ಧಾಳಿಯಿಟ್ಟು ಕ್ಯಾನ್ಸರ್ ಉಂಟು ಮಾಡಬಹುದು. ಆದರೆ ಮುಖಮೈಥುನದಿಂದ ಈ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚುತ್ತದೆ ಎಂದಷ್ಟೇ ಈ ವರದಿ ತಿಳಿಸುತ್ತದೆ. ಹಾಗಾಗಿ ಮುಖಮೈಥುನ ಅನಿವಾರ್ಯವೆನ್ನುವ ಪುರುಷರು ಇದೇ ಕಾರ್ಯಕ್ಕಾಗಿ ಲಭ್ಯವಿರುವ ಡೆಂಟಲ್ ಡ್ಯಾಂ (dental dam) ಎಂಬ ಲ್ಯಾಟೆಕ್ಸ್ ಮೂಲಕ ಉಪಕರಣವನ್ನು ಉಪಯೋಗಿಸಿ ಮಹಿಳೆಯರ ಜನನಾಂಗಗಳ ಭಾಗದಲ್ಲಿ ರಕ್ಷಣಾಕವಚದಂತೆ ಉಪಯೋಗಿಸಿ ಈ ಮೂಲಕ ಹರಡಬಹುದಾದ ಸೋಂಕುಗಳಿಂದ ರಕ್ಷಣೆ ಪಡೆಯಬಹುದು.

ಈ ಸುದ್ದಿ ಬಂದಿದ್ದೆಲ್ಲಿಂದ?
ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಮಾಹಿತಿ ನಿರ್ವಹಣಾ ಕೇಂದ್ರಗಳು ಜಂಟಿಯಾಗಿ ಈ ಸಮೀಕ್ಷೆಯನ್ನು ನಡೆಸಿವೆ. National Institute of Dental and Craniofacial Research ಎಂಬ ಸಂಶೋಧನಾ ಸಂಸ್ಥೆ ಇದಕ್ಕೆ ಹಣಕಾಸಿನ ನೆರವನ್ನು ಒದಗಿಸಿದೆ. ಈ ವರದಿಯನ್ನು journal Annals of Oncology ಎಂಬ ಮಾಧ್ಯಮ ಕೂಲಂಕಶವಾಗಿ ಪರಿಶೀಲಿಸಿ ಮಾಹಿತಿಗಳು ಸತ್ಯ ಎಂದು ಖಚಿತಪಡಿಸಿದ ಬಳಿಕವೇ ಅಂತರ್ಜಾಲದಲ್ಲಿ ಮುಕ್ತವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಿದೆ.

ಈ ಸುದ್ದಿ ಬಂದಿದ್ದೆಲ್ಲಿಂದ?
ಆದರೆ ಈ ವರದಿಯನ್ನು ಇಂಗ್ಲೆಂಡಿನ ಮಾಧ್ಯಮಗಳು ಕೊಂಚ ತಿರುಚಿದ ಹಣೆಪಟ್ಟೆಯೊಂದಿಗೆ ಪ್ರಕಟಿಸಿವೆ. ವಾಸ್ತವವಾಗಿ ಈ ಮೂಲಕ ವೈರಸ್ ನ ಸೋಂಕಿನಿಂದ ರಕ್ಷಿಸಿಕೊಳ್ಳುವ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದರೆ ಇಂಗ್ಲೆಂಡಿನ ವರದಿಗಳು ಮುಖಮೈಥುನದ ಪದಕ್ಕೇ ಹೆಚ್ಚಿನ ಪ್ರಾಶಸ್ತ್ರ ನೀಡಿವೆ. ಹಾಗಾಗಿ ಹೆಚ್ಚಿನ ಓದುಗರು ನಿರ್ದಿಷ್ಟ ಸಂಖ್ಯೆಯ ಮಹಿಳೆಯರೊಂದಿಗೆ ಮುಖಮೈಥುನ ಮಾಡಿದರೆ ಮಾತ್ರವೇ ಕ್ಯಾನ್ಸರ್ ಬರುತ್ತದೆ ಎಂಬ ತಪ್ಪು ಅಭಿಪ್ರಾಯಕ್ಕೆ ಬಂದಿದ್ದಾರೆ.

ಈ ಸುದ್ದಿ ಬಂದಿದ್ದೆಲ್ಲಿಂದ?
ಆದರೆ ಮೂಲ ಲೇಖನದಲ್ಲಿ ಮುಖಮೈಥುನದಲ್ಲಿ ಭಾಗಿಯಾದ ಸಂಗಾತಿಗಳಲ್ಲಿ ಕ್ಯಾನ್ಸರ್ ಉಂಟು ಮಾಡುವ ಸಾಧ್ಯತೆ ಇರುವ ವೈರಸ್ ನ ಇರುವಿಕೆಯ ಪ್ರಭಾವ ಪುರುಷರಲ್ಲಿ ಕ್ಯಾನ್ಸರ್ ಉಂಟು ಮಾಡಬಹುದಾದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದೇ ವಿವರಿಸಲಾಗಿದ್ದರೂ ಹಲವು ಮಾಧ್ಯಮಗಳು ಈ ಪ್ರಮುಖವಾದ
ಅಂಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ತಮಗೆ ಅರ್ಥವಾದ ರೀತಿಯಲ್ಲಿ ಪ್ರಕಟಿಸಿದ ಕಾರಣ ಹಲವು ಜನರನ್ನು ಗೊಂದಲಕ್ಕೆ ದೂಡಿವೆ. ಅಲ್ಲದೇ ವರದಿಯಲ್ಲಿ ಈ ಅಭ್ಯಾಸವಿರುವ ಪುರುಷರು ಧೂಮಪಾನಿಗಳಾಗಿದ್ದರೆ ಹೆಚ್ ಪಿ ವಿ ವೈರಸ್ ನ ಮೂಲಕ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಹೆಚ್ಚುತ್ತದೆ ಎಂಬ ಮುಖ್ಯ ಅಂಶವನ್ನು ವರದಿಯಲ್ಲಿ ಮೊದಲಿಗೇ ಪ್ರಕಟಿಸಬೇಕಾಗಿತ್ತು ಎಂದು ಹಲವರು ವಾದಿಸುತ್ತಿದ್ದಾರೆ. ಅಲ್ಲದೇ ಹಲವು ಮಾಧ್ಯಮಗಳು ಈ ಕ್ಯಾನ್ಸರ್ ಅನ್ನು 'ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್' ಎಂದೇ ವಿವರಿಸಿವೆ. ಆದರೆ ಸಂಶೋಧನೆಯಲ್ಲಿ ಬಾಯಿ ಮತ್ತು ಗಂಟಲ ಕ್ಯಾನ್ಸರ್ ಎಂದೇ ಉಲ್ಲೇಖಿಸಲಾಗಿದೆ.

ಇದು ಯಾವ ಬಗೆಯ ಸಂಶೋಧನೆ?
ಅಮೇರಿಕಾದಲ್ಲಿ ಪ್ರತಿ ವ್ಯಕ್ತಿಯ ಆರೋಗ್ಯದ ವಿವರಗಳು ಕೇಂದ್ರ ಮಾಹಿತಿ ಕೋಶದಲ್ಲಿ ಸಂಗ್ರಹವಾಗುತ್ತದೆ ಹಾಗೂ ಒಂದು ನಿರ್ದಿಷ್ಟ ಸಮಯದಲ್ಲಿ ಒಂದು ಬಗೆಯ ಅನಾರೋಗ್ಯ ಅಥವಾ ನಡವಳಿಕೆಯಲ್ಲಿ ಬದಲಾವಣೆ, ಕ್ಯಾನ್ಸರ್ ನ ಇರುವಿಕೆ ಮೊದಲಾದ ಅಂಶಗಳನ್ನು ಆಧರಿಸಿ ಈ ಅಂಶಗಳನ್ನು ಹೋಲುವ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಇದು ಯಾವ ಬಗೆಯ ಸಂಶೋಧನೆ?
ಈ ಪಟ್ಟಿಯಲ್ಲಿ ಸೇರ್ಪಡೆಯಾದ ಪುರುಷರಲ್ಲಿ ಎಚ್ ಪಿ ವಿ ವೈರಸ್ ನ ಸೋಂಕು ಎಷ್ಟು ಸಾಮಾನ್ಯವಾಗಿದೆ, ಅತಿ ಸಾಮಾನ್ಯವಾಗಿ ಯಾವ ವಯಸ್ಸಿನವರಿಗೆ ಆವರಿಸಿದೆ, ಯಾರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ, ಇವರಲ್ಲಿ ಬಾಯಿ ಮತ್ತು ಗಂಟಲ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಯಾರಿಗೆ ಇದೆ ಎಂಬ ಅಂಶಗಳನ್ನು ವಿಶ್ಲೇಷಿಸಲಾಗಿತ್ತು. ಅಲ್ಲದೇ ಈ ವ್ಯಕ್ತಿಗಳನ್ನು ಕರೆಸಿ ಇವರಲ್ಲಿ ಹೆಚ್ ಪಿ ವಿ ವೈರಸ್ ನ ಇರುವಿಕೆಯನ್ನು ಪತ್ತೆಹಚ್ಚುವ ಮೂಲಕ ಕ್ಯಾನ್ಸರ್ ಅನ್ನು ಮೂಲ ಹಂತದಲ್ಲಿಯೇ ಪತ್ತೆಹಚ್ಚಿ ಉಲ್ಬಣವಾಗುವ ಮುನ್ನವೇ ಚಿಕಿತ್ಸೆ ನೀಡಬಹುದಾದ ಸಾಧ್ಯತೆಯನ್ನೂ ಪರಿಗಣಿಸಲಾಗಿತ್ತು. ಈ ತರಹದ ಸಮೀಕ್ಷೆಗೆ
ಅಡ್ಡ-ಛೇದನ ಅಧ್ಯಯನ (cross-sectional study) ಎಂದು ಕರೆಯಲಾಗುತ್ತದೆ.

ಅಂತಿಮ ತೀರ್ಮಾನ:
ಈ ಅಧ್ಯಯನದಲ್ಲಿ ರಾಷ್ಟ್ರೀಯ ದತ್ತಕ ಕೋಶದಿಂದ ದೊಡ್ಡ ಪ್ರಮಾಣದಲ್ಲಿ ವ್ಯಕ್ತಿಗಳ ಆರೋಗ್ಯ ಮಾಹಿತಿಯನ್ನು ಪಡೆದು ವಿಶ್ಲೇಷಿಸಿದ ಬಳಿಕ ಇವರಲ್ಲಿ ಎಷ್ಟು ಜನರಿಗೆ ಕ್ಯಾನ್ಸರ್ ಉಂಟು ಮಾಡಬಹುದಾದ ಹೆಚ್ ಪಿ ವಿ ವೈರಸ್ ಸೋಂಕು ತಗಲು ಸಾಧ್ಯತೆ ಇದೆ ಎಂದು ಪರಿಗಣಿಸಲಾಗುತ್ತದೆ.
ಹೆಚ್ ಪಿ ವಿ ವೈರಸ್ ಸೋಂಕು ಇದ್ದ ಮಾತ್ರಕ್ಕೇ ಕ್ಯಾನ್ಸರ್ ಎದುರಾಗುತ್ತದೆ ಎಂದು ಹೇಳಲು ಖಚಿತವಾಗಿ ಸಾಧ್ಯವಿಲ್ಲದ ಕಾರಣ ನಿಜವಾಗಿ ಕ್ಯಾನ್ಸರ್ ಗೆ ತುತ್ತಾಗುವವರ ಸಂಖ್ಯೆ ಅತ್ಯಲ್ಪವೇ ಆಗಿರುತ್ತದೆ. ಹಾಗಾಗಿ ಈ ಸಂಶೋಧನೆಗೆ ಮಿತಿಯೂ ಇರುತ್ತದೆ, ಇವುಗಳಲ್ಲಿ ಪ್ರಮುಖವಾದವು ಎಂದರೆ ಈ ವ್ಯಕ್ತಿಗಳಲ್ಲಿ ಯಾವುದೋ ಒಂದು ಸಮಯದಲ್ಲಿ ಹೆಚ್ ಪಿ ವಿ ವೈರಸ್ ಸೋಂಕು ಇತ್ತೇ ಎಂದು ಪರಿಗಣಿಸುವುದು ಇದೆ ಎಂದಾದರೆ ಯಾವಾಗ ಆವರಿಸಿತು, ಈಗ ಯಾವ ಪ್ರಮಾಣದಲ್ಲಿದೆ ಎಂಬ ಮಾಹಿತಿ
ಈ ವ್ಯಕ್ತಿಗಳು ಧೂಮಪಾನಿಗಳೂ, ಬಹುಸಂಗಾತಿ ಸಖ್ಯವುಳ್ಳವರೂ ಮುಖಮೈಥುನ ನಡೆಸುವವರೂ ಆಗಿರುವುದು ಹಾಗಾಗಿ ಸಂಶೋಧಕರಿಗೆ ಈ ಎಲ್ಲಾ ಸಾಧ್ಯತೆಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಹೆಚ್ಚು ಎಂದು ಮಾತ್ರವೇ ಹೇಳಲು ಸಾಧ್ಯವಾಗಿದೆಯೇ ಹೊರತು ಇಷ್ಟೇ ವ್ಯಕ್ತಿಗಳಿಗೆ ಎಂದು ಖಚಿತ ಪ್ರಮಾಣದಲ್ಲಿ ಹೇಳಲು ಸಾಧ್ಯವಾಗಿಲ್ಲ.
ಈ ವರದಿ ಅಮೇರಿಕಾದ ಜನತೆಯನ್ನು ಆಧರಿಸಿದ್ದು ಇದೇ ಅಂಕಿ ಅಂಶಗಳನ್ನು ಇಂಗ್ಲೆಂಡ್ ಅಥವಾ ಬೇರೆ ದೇಶಗಳ ಜನತೆಗ ಅನ್ವಯಿಸಲು ಸಾಧ್ಯವಿಲ್ಲ. ಹಾಗಾಗಿ, ಲೈಂಗಿಕ ಸಂಪರ್ಕದ ವಿಷಯಕ್ಕೆ ಬಂದಾಗ ಮುನ್ನೆಚ್ಚರಿಕೆಯನ್ನು ವಹಿಸುವುದೇ ಲೈಂಗಿಕವಾಗಿ ಹರಡಬಹುದಾದ ರೋಗಗಳಿಂದ ರಕ್ಷಣೆ ಪಡೆಯಲು
ಅಗತ್ಯಕ್ರಮವಾಗಿದೆ. ಹೆಚ್ ಪಿ ವಿ ಆಗಲೀ ಇತರ ಯಾವುದೇ ಲೈಂಗಿಕ ಕಾಯಿಲೆಯಾಗಲಿ, ಪಡೆಯದೇ ಇರಲು ಕಾಂಡಂ ಅಥವಾ ಡೆಂಟಲ್ ಡ್ಯಾಂ ಉಪಯೋಗಿಸುವುದು ಅಗತ್ಯವಾಗಿದೆ.