For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯ ಪದಾರ್ಥಗಳಿಂದ ಕಿಡ್ನಿಯ ಕಲ್ಲುಗಳನ್ನು ಹೇಗೆ ಕರಗಿಸಬಹುದು?

|

ಮಾನವನ ದೇಹ ಒಂದು ಸ್ವಯಂ ಚಾಲಿತ ಯಂತ್ರವಿದ್ದಂತೆ. ಮಾನವ ನಿರ್ಮಿತ ಯಂತ್ರಕ್ಕೆ ಹೇಗೆ ನಾನಾ ಭಾಗಗಳಿದ್ದು ಎಲ್ಲ ಭಾಗಗಳಿಗೂ ಅದರದೇ ಆದ ಕೆಲಸ ಕಾರ್ಯಗಳನ್ನು ಹೊಂದಿ ಆ ಯಂತ್ರ ಸಮಗ್ರವಾಗಿ ಮತ್ತು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತವೋ ಅದೇ ತರಹ ಈ ಮೂಳೆ ಮಾಂಸ ತುಂಬಿದ ಮನುಷ್ಯನ ದೇಹವೂ ಅಷ್ಟೇ. ಉಸಿರಾಡುವುದಕ್ಕೆ ಶ್ವಾಸಕೋಶ , ಕೆಲಸ ಮಾಡಲು ಕೈಗಳು , ನಡೆಯಲು ಕಾಲುಗಳು , ಬುದ್ದಿ ಗಾಗಿ ಮೆದುಳು ,ರಕ್ತ ಚಲನೆಗಾಗಿ ಹೃದಯ , ನೋಡಲು ಕಣ್ಣುಗಳು ಹೀಗೆ ಹತ್ತು ಹಲವಾರು ಅಂಗಗಳನ್ನು ತನ್ನಲ್ಲಿ ಸೇರಿಸಿಕೊಂಡಿದೆ ಮತ್ತು ಆ ಅಂಗಗಳು ಸರಿಯಿರುವವರೆಗೂ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ . ಇದರಲ್ಲಿ ಯಾವಾಗ ಯಾವೊಂದು ಅಂಗ ತನ್ನ ಕೆಲಸವನ್ನು ನಿರ್ವಹಿಸಲು ಅದರದೇ ಆದ ಕಾರಣದಿಂದ ಹಿಂದೇಟು ಹಾಕುತ್ತದೋ ಆಗ ಅದರ ಪರಿಣಾಮ ಇಡೀ ದೇಹದ ಮೇಲೆಯೇ ಆಗುತ್ತದೆ.

ನಾವು ಈ ದಿನ ಮಾತನಾಡಲು ಹೊರಟಿರುವುದು ಇಂತಹದೇ ಒಂದು ಅಂಗ ಮತ್ತು ಮಾನವನ ದೇಹದ ಕಲ್ಮಶಗಳನ್ನು ದ್ರವದ ರೂಪದಲ್ಲಿ ಹೊರಹಾಕಿ ಇಡೀ ದೇಹ ಆಂತರಿಕವಾಗಿ ಶುದ್ಧವಾಗಿರಲು ಸಹಾಯ ಮಾಡುವ ಮೂತ್ರ ಪಿಂಡಗಳ ಬಗ್ಗೆ ಅಂದರೆ ಕಿಡ್ನಿಗಳು ಎಂದೇನೂ ನಾವು ನೀವು ಕರೆಯುತ್ತೇವೋ ಅವುಗಳ ರಕ್ಷಣೆಯ ಬಗ್ಗೆ. ಮಾನವ ನಿರ್ಮಿತ ಯಂತ್ರಗಳಿಗೆ ಹೇಗೆ ನಾವು ಕಾಲ ಕಾಲಕ್ಕೆ ಸರಿಯಾಗಿ ಸರ್ವಿಸ್ ಮಾಡಿ ಅವುಗಳ ದಕ್ಷತೆಯನ್ನು ಕಾಯ್ದುಕೊಳ್ಳುವಂತೆ ಮಾಡುತ್ತೇವೆಯೋ ಹಾಗೆ ನಮ್ಮ ದೇಹದ ರಕ್ಷಣೆಗೆಂದೇ ನಿರ್ಮಿತಗೊಂಡಿರುವ ಅಂಗಗಳ ರಕ್ಷಣೆ ಕೂಡ ನಮ್ಮದೇ ಹೊಣೆ. ನಮ್ಮ ದೇಹದ ಮೇಲಿನ ಅಂಗಗಳನ್ನು ಹೇಗೆ ಶುಚಿಯಾಗಿ ಇಟ್ಟುಕೊಳ್ಳಬೇಕೆಂದು ನಮಗೆ ಚೆನ್ನಾಗಿ ಗೊತ್ತು. ಆದರೆ ನಮ್ಮ ದೇಹದ ಸಂಪೂರ್ಣ ಆರೋಗ್ಯಕ್ಕಾಗಿ ದಿನದ ಇಪ್ಪತ್ತ ನಾಲ್ಕು ಗಂಟೆಯೂ ದುಡಿಯುವ ನಮ್ಮ ದೇಹದ ಒಳಗಿರುವ ಅಂಗಗಳನ್ನು ಹೇಗೆ ಶುಚಿಯಾಗಿಡುವುದು ? ಇದು ಎಲ್ಲರನ್ನೂ ಬಿಟ್ಟೂ ಬಿಡದೆ ಕಾಡುವ ಪ್ರಶ್ನೆ. ಚಿಂತಿಸಬೇಡಿ .ಈ ಲೇಖನದಲ್ಲಿ ನಾವು ನಿಮಗೆ ತಿಳಿಸಬಯಸಲು ಹೊರಟಿರುವ ವಿಷಯವೇ ಅದು . ಇದಕ್ಕಾಗಿ ನಾವು ಯಾವಾಗಲೂ ಆಸ್ಪತ್ರೆಯ ಮೆಟ್ಟಿಲನ್ನು ಹತ್ತಲೇಬೇಕೆಂದೇನೂ ಇಲ್ಲ. ನಮ್ಮ ಮನೆಯಲ್ಲೇ ಅದರಲ್ಲೂ ನಮ್ಮ ಅಡುಗೆ ಮನೆಯಲ್ಲಿ ಸಿಗುವ ನಾವು ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳನ್ನೇ ಬಳಸಿ ನಮ್ಮ ದೇಹದ ಒಳಗಿರುವ ಅಂಗಗಳನ್ನು ಶುಚಿಯಾಗಿ ಇಟ್ಟುಕೊಳ್ಳಬಹುದು.

ಮೂತ್ರ ಪಿಂಡದ ಕಲ್ಲುಗಳ ಸಮಸ್ಯೆಯನ್ನು ಸರಳವಾದ ಮನೆ ಮದ್ದುಗಳಿಂದ ಹೇಗೆ ಸರಿ ಮಾಡಿಕೊಳ್ಳಬಹುದು?

ಮೂತ್ರ ಪಿಂಡದ ಕಲ್ಲುಗಳ ಸಮಸ್ಯೆಯನ್ನು ಸರಳವಾದ ಮನೆ ಮದ್ದುಗಳಿಂದ ಹೇಗೆ ಸರಿ ಮಾಡಿಕೊಳ್ಳಬಹುದು?

ಹಾಗಾದರೆ ಸದಾ ದಕ್ಷತೆಯಿಂದ ಕೆಲಸ ಮಾಡುವ ನಮ್ಮ ಮೂತ್ರ ಪಿಂಡಕ್ಕೆ ಎದುರಾಗುವ ಸಮಸ್ಯೆಗಳೇನು ? ಮೊದಲನೇ ಮತ್ತು ಬಹು ಮುಖ್ಯ ಸಮಸ್ಯೆ ಎಂದರೆ ಅದು ಕಲ್ಲುಗಳ ರಚನೆ. ಹೌದು ಮೂತ್ರ ಪಿಂಡಗಳಲ್ಲಿ ಕಲ್ಲುಗಳ ರೀತಿಯ ವಸ್ತುಗಳು ಉತ್ಪತ್ತಿ ಯಾಗುತ್ತವೆ ಮತ್ತು ಇವು ಬಹಳ ರೀತಿಯ ಸಮಸ್ಯೆಗಳಿಗೆ ಕಾರಣಗಳಾಗುತ್ತವೆ. ಈ ರೀತಿಯ ಸಮಸ್ಯೆಗಳು ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಜನರಲ್ಲೇ ಕಾಣಿಸುತ್ತವೆ. ರಾಷ್ಟ್ರೀಯ ಜೈವಿಕ ತಂತ್ರಜ್ಞಾನದ ಮಾಹಿತಿ ಕೇಂದ್ರ(ಏನ್ ಸಿ ಬಿ ಐ) ಹೇಳುವ ಪ್ರಕಾರ ಒಟ್ಟು ಭಾರತೀಯ ಜನಸಂಖ್ಯೆಯ ಶೇ. 12 % ರಷ್ಟು ಮಂದಿ ಈ ಸಮಸ್ಯೆಯನ್ನು ಹೊಂದಿರುತ್ತಾರೆ ಮತ್ತು ಅದರಲ್ಲೇ ಶೇ. 50 % ರಷ್ಟು ಜನರಿಗೆ ಈ ಸಮಸ್ಯೆ ತಮ್ಮಲ್ಲಿ ಇದೆ ಎಂಬ ಯಾವ ಸುಳಿವೂ ಕೂಡ ಇರುವುದಿಲ್ಲ. ಏಕೆಂದರೆ ಅಂತಹ ಯಾವ ಸಣ್ಣ ಸೂಚನೆಗಳೂ ಅವರಿಗೆ ಸಿಕ್ಕಿರುವುದಿಲ್ಲ. ಕಿಡ್ನಿಯ ಕಲ್ಲುಗಳು ಮುಂದೆ ಅವರಿಗೆ ದೊಡ್ಡ ಸಮಸ್ಯೆಗಳಾಗಬಹುದು ಮತ್ತು ಆರಂಭದಲ್ಲೇ ಇದಕ್ಕೆ ಸರಿಯಾದ ಚಿಕಿತ್ಸೆ ಮಾಡದೆ ಹೋದರೆ ಕಿಡ್ನಿಯ ವೈಫಲ್ಯ ಎದುರಾಗಬಹುದು.

ಮೂತ್ರ ಪಿಂಡದ (ಕಿಡ್ನಿ) ಕಲ್ಲುಗಳು ಎಂದರೆ ಏನು?

ಮೂತ್ರ ಪಿಂಡದ (ಕಿಡ್ನಿ) ಕಲ್ಲುಗಳು ಎಂದರೆ ಏನು?

ಕಿಡ್ನಿ ಕಲ್ಲುಗಳು ಮೂತ್ರಪಿಂಡಗಳಲ್ಲಿ ರೂಪುಗೊಂಡ ಒಂದು ಬಗೆಯ ಕಠಿಣ ವಸ್ತುಗಳಾಗಿರುತ್ತವೆ.ಇವುಗಳು ಎಲ್ಲೋ ಹೊರಗಿನಿಂದ ಬಂದು ಸೇರಿದ ವಸ್ತುಗಳಲ್ಲ. ನಾವು ಪ್ರತಿನಿತ್ಯಾ ಸೇವಿಸುವ ಲವಣಗಳು ಮತ್ತು ಖನಿಜಗಳಾದ "ಕ್ಯಾಲ್ಸಿಯಂ ಆಕ್ಸಲೇಟ್" ಎಂಬ ವಸ್ತುಗಳೇ ಈ ರೀತಿ ಘನ ರೂಪವಾಗಿ ಮಾರ್ಪಾಡುಗೊಂಡು, ಕಿಡ್ನಿಯಿಂದ ಕಲ್ಮಶಗಳು ಹೊರಹೋಗಬೇಕಾದ ಪೈಪ್ ಗಳ ಬಳಿಯಲ್ಲಿ ಕುಳಿತುಕೊಳ್ಳುತ್ತವೆ. ಇದರಿಂದ ನಮ್ಮ ದೇಹಕ್ಕೆ ಬಹಳ ತೊಂದರೆ ಉಂಟಾಗಿ ಖಾಯಿಲೆಗಳು ಬರಲು ಪ್ರಾರಂಭ ಆಗುತ್ತವೆ. ಇವುಗಳು ಮೂತ್ರನಾಳಗಳ ಮುಖಾಂತರ ಹೊರಹೋಗಬೇಕಾಗಿರುತ್ತವೆ ಮತ್ತು ಹಾಗೆ ಹೊರಹೋಗುವಾಗ ಬಹಳ ನೋವುಂಟು ಮಾಡುತ್ತವೆ. ಮೂತ್ರ ಪಿಂಡದಲ್ಲಿ ಕಾಣಸಿಗುವ ಈ ರೀತಿಯ ಕಲ್ಲುಗಳನ್ನು ವ್ಯದ್ಯಕೀಯ ಭಾಷೆಯಲ್ಲಿ "ಕ್ಯಾಲ್ಕಿ" ಅಥವಾ "ಯುರೊಲಿಥಿಯಾಸಿಸ್" ಎಂದು ಕರೆಯುತ್ತಾರೆ.

ಮೂತ್ರಪಿಂಡದಲ್ಲಿನ ಕಲ್ಲುಗಳ ಉತ್ಪತ್ತಿಗೆ ಪ್ರಮುಖ ಕಾರಣವೇನೆಂದು ಗೊತ್ತೇ ?

ಮೂತ್ರಪಿಂಡದಲ್ಲಿನ ಕಲ್ಲುಗಳ ಉತ್ಪತ್ತಿಗೆ ಪ್ರಮುಖ ಕಾರಣವೇನೆಂದು ಗೊತ್ತೇ ?

ನಮ್ಮ ದೇಹ ರಕ್ತ ಮತ್ತು ನೀರಿನಿಂದ ಕೂಡಿರುತ್ತದೆ. ಎರಡೂ ದ್ರವ ರೂಪವಾಗಿರುವುದರಿಂದ ನಾವು ಸೇವಿಸುವ ಆಹಾರದಲ್ಲಿನ ಉಪ್ಪು ಮತ್ತು ಖನಿಜಗಳ ಸಂಯುಕ್ತಗಳು ಅತಿ ಬೇಗನೆ ಜೀರ್ಣವಾಗಿ ಉಳಿದ ಕಲ್ಮಶಗಳು ಮೂತ್ರ ನಾಳಗಳ ಮೂಲಕ ಹೊರ ಹೋಗುತ್ತವೆ. ಇದೇ ಪ್ರಕ್ರಿಯೆ ಸಹಜವಾಗಿಯೇ ಎಲ್ಲರಲ್ಲೂ ಆಗುತ್ತದೆ. ಯಾವಾಗ ಮನುಷ್ಯ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾನೋ ಆಗ ಈ ಉಪ್ಪು ಮತ್ತು ಖನಿಜಗಳ ಸಂಯುಕ್ತಗಳು ಹತ್ತಿರಕ್ಕೆ ಬಂದು ಕೆಲವೊಮ್ಮೆ ಒಂದಕ್ಕೊಂದು ಅಂಟಿಕೊಂಡು ಮೂತ್ರ ಪಿಂಡದೊಳಗೆ (ಕಿಡ್ನಿಯೊಳಗೆ) ಘನ ರೂಪ ತಾಳುತ್ತವೆ. ಇವನ್ನೇ ಕಿಡ್ನಿಯ ಕಲ್ಲುಗಳು ಎಂದು ಕರೆಯುತ್ತಾರೆ. ಕೆಲವು ಸಂದರ್ಭ ಗಳಲ್ಲಿ, ಯಾವುದೇ ರೋಗಲಕ್ಷಣವನ್ನೂ ಸಹ ತೋರಿಸದೆ ಸಣ್ಣ ಕಲ್ಲುಗಳು ದೇಹದಿಂದ ಹೊರಬರುತ್ತವೆ, ಆದರೆ ಇನ್ನೂ ಕೆಲವೊಮ್ಮೆ ದೊಡ್ಡ ದೊಡ್ಡ ಕಲ್ಲುಗಳಾಗಿರುವವು ಕಿಡ್ನಿಯಿಂದ ಹೊರಬರಲಾರದೆ ಬಹಳ ನೋವನ್ನುಂಟು ಮಾಡುತ್ತವೆ.

ಹಾಗಾದರೆ ಕಿಡ್ನಿ ಕಲ್ಲುಗಳಿಗೆ ಯಾವ ರೀತಿಯ ಚಿಕಿತ್ಸೆ ಕೊಡಲಾಗುತ್ತದೆ?

ಹಾಗಾದರೆ ಕಿಡ್ನಿ ಕಲ್ಲುಗಳಿಗೆ ಯಾವ ರೀತಿಯ ಚಿಕಿತ್ಸೆ ಕೊಡಲಾಗುತ್ತದೆ?

ಕಿಡ್ನಿಯಲ್ಲಿ ಕಲ್ಲುಗಳಿವೆ ಎಂದು ಗೊತ್ತಾದ ತಕ್ಷಣ ಎಂತಹವರಿಗೂ ಎದೆ ಒಮ್ಮೆ ಝಲ್ ಎನ್ನುತ್ತದೆ. ಏಕೆಂದರೆ ಯಾವತ್ತೂ ಕೇಳಿರದ ಭಯಾನಕ ವಿಷಯ ಅದಾಗಿರುತ್ತದೆ. ಆದರೆ ಭಯ ಪಡುವ ಅವಶ್ಯಕತೆ ಇಲ್ಲ. ಮನುಷ್ಯ ಧೈರ್ಯವಾಗಿದ್ದಷ್ಟು ಆತನ ಎಂತಹ ಕಾಯಿಲೆಯಾದರೂ ಬಹು ಬೇಗನೆ ಗುಣವಾಗುತ್ತದೆ ಎಂದು ವೈದ್ಯ ಲೋಕವೇ ಹೇಳಿರುವಾಗ ಭಯ ನಮ್ಮ ಹತ್ತಿರ ಕೂಡ ಸುಳಿಯಬಾರದು. ಅದರಲ್ಲೂ ಈಗಿನ ಆಧುನಿಕ ಯುಗದಲ್ಲಿ ಮನುಷ್ಯನಿಗೆ ಚಿಕಿತ್ಸೆಗೆ ಕೊರತೆಯೇ ? ಕಿಡ್ನಿಯ ಕಲ್ಲುಗಳನ್ನು ಇರುವ ಜಾಗದಲ್ಲೇ ಸುಲಭವಾಗಿ ಕರಗಿಸುವಂತಹ ದ್ರವ ರೂಪದ ಔಷಧಗಳನ್ನು ಆಗಲೇ ಕಂಡು ಹಿಡಿದಿದ್ದಾಗಿದೆ. ವೈದ್ಯಕೀಯ ಪದ್ದತಿಗಳು ಹೋಮಿಯೋಪಥಿ ಚಿಕಿತ್ಸೆಗಳು ಕೂಡ ಈ ವಿಷಯದಲ್ಲಿ ಚೆನ್ನಾಗಿ ಕೆಲಸ ಮಾಡುತ್ತವೆ.ಒಳ್ಳೆಯ ಆಹಾರ ಪದ್ದತಿಗಳನ್ನು ರೂಡಿಸಿಕೊಂಡಿದ್ದೇ ಆದರೆ ಈ ಸಮಸ್ಯೆಯನ್ನು ಬರುವ ಮೊದಲೇ ತಡೆಯಬಹುದು.ಕೇವಲ ವೈದ್ಯರು ಶಿಫಾರಸು ಮಾಡಿದ ಔಷಧಿಗಳನ್ನಷ್ಟೇ ಅಲ್ಲದೆ ಮೂತ್ರಪಿಂಡದ ಕಲ್ಲುಗಳನ್ನು ಹೊರ ಹಾಕಲು ಸಹಾಯ ಮಾಡುವ ಈ ಆರು ಅತಿ ಸುಲಭವಾದ ಮನೆಯ ಪರಿಹಾರಗಳನ್ನು ನೀವು ಏಕೆ ಒಮ್ಮೆ ಪ್ರಯತ್ನಿಸಬಾರದು?

ನೀವು ಪ್ರತಿನಿತ್ಯ ಕುಡಿಯುವ ನೀರು ನಿಮ್ಮ ಮೂತ್ರ ಪಿಂಡಗಳ (ಕಿಡ್ನಿಗಳ) ಆರೋಗ್ಯವನ್ನು ಕಾಪಾಡುತ್ತದೆ . .

ನೀವು ಪ್ರತಿನಿತ್ಯ ಕುಡಿಯುವ ನೀರು ನಿಮ್ಮ ಮೂತ್ರ ಪಿಂಡಗಳ (ಕಿಡ್ನಿಗಳ) ಆರೋಗ್ಯವನ್ನು ಕಾಪಾಡುತ್ತದೆ . .

ಮನುಷ್ಯನ ಜೀವನಕ್ಕೆ ಅವಶ್ಯಕವಾದ ಪಂಚಭೂತಗಳಲ್ಲಿ ಮತ್ತು ಅತ್ಯಂತ ಸುಲಭವಾಗಿ ಎಲ್ಲರಿಗೂ ಸಿಗುವ ವಸ್ತು ಎಂದರೆ ಅದು ನೀರು .ಮನುಷ್ಯ ಹೆಚ್ಚು ಹೆಚ್ಚು ನೀರು ಸೇವಿಸಿದಷ್ಟೂ ಒಳ್ಳೆಯದೇ. ದೇಹದ ಒಳಗಿನ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ ಮತ್ತು ನಾವು ಆಹಾರದಲ್ಲಿ ಸೇವಿಸುವ ಜೀವಸತ್ವಗಳು, ಖನಿಜಗಳು ,ಪ್ರೋಟೀನ್ಗಳು ಮತ್ತು ಕಾರ್ಬೋಹೈಡ್ರೇಟ್ಗಳು ಸರಿಯಾದ ರೀತಿಯಲ್ಲಿ ನಮ್ಮ ದೇಹಕ್ಕೆ ಉಪಯೋಗವಾಗುತ್ತವೆ. ಪ್ರತಿನಿತ್ಯ 12 ಗ್ಲಾಸ್ ಗಳಷ್ಟು ನೀರು ಸೇವನೆ ಆರೋಗ್ಯಕ್ಕೆ ಉತ್ತಮ ಪರಿಹಾರ. ನೀರು ನಮ್ಮ ಮೂತ್ರನಾಳಗಳಲ್ಲಿ ಹೋಗುವಷ್ಟು ಸಣ್ಣ ಕಲ್ಲುಗಳೇನಾದರೂ ಇದ್ದರೆ ಅದನ್ನು ಸಹ ಯಶಸ್ವಿಯಾಗಿ ಹೊರಹಾಕುತ್ತದೆ.

ನಿಂಬೆ ರಸ ಅಥವಾ ಲೆಮನ್ ಜ್ಯೂಸು ನಿಮ್ಮ ಮೂತ್ರ ಪಿಂಡ ಗಳ ಆರೋಗ್ಯಕ್ಕೆ ರಕ್ಷಾ ಕವಚ

ನಿಂಬೆ ರಸ ಅಥವಾ ಲೆಮನ್ ಜ್ಯೂಸು ನಿಮ್ಮ ಮೂತ್ರ ಪಿಂಡ ಗಳ ಆರೋಗ್ಯಕ್ಕೆ ರಕ್ಷಾ ಕವಚ

ಹೌದು ನಿಂಬೆ ರಸ ಮೂತ್ರ ಪಿಂಡದ ಕಲ್ಲುಗಳ ಸಮಸ್ಯೆ ಯಿಂದ ಬಳಲುತ್ತಿರುವವರಿಗೆ ನಿಜಕ್ಕೂ ರಾಮ ಬಾಣ. ನಿಂಬೆಯಲ್ಲಿರುವ "ಸಿಟ್ರೇಟ್" ಅಂಶ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಖನಿಜ ಗಟ್ಟಿಗೊಳ್ಳುವುದನ್ನು ಸುಲಭವಾಗಿ ತಡೆಯುತ್ತದೆ. ಹಾಗಾಗಿ ಬೆಳಗಿನ ಉಪಹಾರಕ್ಕೆ ಮುಂಚೆ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಒಂದು ಗ್ಲಾಸ್ ನಿಂಬೆ ರಸವನ್ನು ಸೇವಿಸುವುದನ್ನು ಅಭ್ಯಾಸ ಮಾಡಿ ಕೊಂಡರೆ, ಕಿಡ್ನಿ ಕಲ್ಲುಗಳ ಸಮಸ್ಯೆ ಯಿಂದ ದೂರ ಉಳಿಯ ಬಹುದು.ಆದರೆ ಯಾವಾಗಲೂ ತಾಜಾ ನಿಂಬೆ ರಸವನ್ನು ಮಾತ್ರ ಕುಡಿಯುವುದನ್ನು ರೂಡಿ ಮಾಡಿಕೊಳ್ಳಿ ಮತ್ತು ಬಾಟಲಿ ಗಳಲ್ಲಿ ಮೊದಲೇ ಶೇಖರಿಸಿಟ್ಟಂತಹ ನಿಂಬೆ ರಸವನ್ನು ಮಾತ್ರ ಕುಡಿಯಬೇಡಿ . ಇದು ನಿಮ್ಮ ಆರೋಗ್ಯಕ್ಕೆ ಇನ್ನಷ್ಟು ಮಾರಕವಾಗ ಬಹುದು.

ತುಳಸಿ ದಳ ಅಥವಾ ತುಳಸಿ ಗಿಡದ ಎಲೆಗಳು ನಿಮ್ಮ ಕಿಡ್ನಿಗಳಿಗೆ ಒಳ್ಳೆಯ ಸ್ನೇಹಿತ

ತುಳಸಿ ದಳ ಅಥವಾ ತುಳಸಿ ಗಿಡದ ಎಲೆಗಳು ನಿಮ್ಮ ಕಿಡ್ನಿಗಳಿಗೆ ಒಳ್ಳೆಯ ಸ್ನೇಹಿತ

ತುಳಸಿ ಎಲೆಯಲ್ಲಿನ ಕೆಲ ಅಂಶಗಳು ನಮ್ಮ ದೇಹದ "ಯೂರಿಕ್ ಆಸಿಡ್" ನ ಮಟ್ಟವನ್ನು ಸ್ಥಿರಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವೈದ್ಯ ಲೋಕದ ಸಂಶೋಧನೆಯಿಂದ ತಿಳಿದು ಬಂದಿದೆ. ಯೂರಿಕ್ ಆಸಿಡ್ ನ ಮಟ್ಟ ಸ್ಥಿರವಾದರೆ ಮೂತ್ರ ಪಿಂಡ ದಲ್ಲಿ ಕಲ್ಲುಗಳು ರೂಪುಗೊಳ್ಳುವುದು ಕಡಿಮೆ ಆಗುತ್ತದೆ.ತುಳಸಿ ಎಲೆಯಲ್ಲಿನ ಕೆಲ ಅಂಶಗಳು ನಮ್ಮ ದೇಹದ "ಯೂರಿಕ್ ಆಸಿಡ್" ನ ಮಟ್ಟವನ್ನು ಸ್ಥಿರಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವೈದ್ಯ ಲೋಕದ ಸಂಶೋಧನೆಯಿಂದ ತಿಳಿದು ಬಂದಿದೆ. ಯೂರಿಕ್ ಆಸಿಡ್ ನ ಮಟ್ಟ ಸ್ಥಿರವಾದರೆ ಮೂತ್ರ ಪಿಂಡ ದಲ್ಲಿ ಕಲ್ಲುಗಳು ರೂಪು ಗೊಳ್ಳುವುದು ಕಡಿಮೆ ಆಗುತ್ತದೆ. ತುಳಸಿ ಗಿಡದ ಎಲೆಗಳಲ್ಲಿ "ಅಸಿಟಿಕ್ ಆಸಿಡ್" ಅಂಶ ಇರುವುದರಿಂದ ಕಿಡ್ನಿ ಕಲ್ಲುಗಳನ್ನು ಕರಗಿಸುವುದರಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ. ಪ್ರತಿನಿತ್ಯ ಒಂದು ಟೀ ಚಮಚದಷ್ಟು ತುಳಸಿ ರಸವನ್ನು ಸೇವಿಸುತ್ತಾ ಬಂದರೆ ನಿಮ್ಮ ಮೂತ್ರ ಪಿಂಡಗಳ ಆರೋಗ್ಯ ಬಹಳ ಚೆನ್ನಾಗಿರುತ್ತದೆ.

ಆಪಲ್ ಸೈಡರ್ ವಿನೆಗರ್ ನಿಮ್ಮ ಮನೆ ಮಂದಿಗೆಲ್ಲಾ ಡಾಕ್ಟರ್

ಆಪಲ್ ಸೈಡರ್ ವಿನೆಗರ್ ನಿಮ್ಮ ಮನೆ ಮಂದಿಗೆಲ್ಲಾ ಡಾಕ್ಟರ್

ತುಳಸಿ ಎಲೆಯಂತೆಯೇ ಆಪಲ್ ಸೈಡರ್ ವಿನೆಗರ್ ನಲ್ಲಿಯೂ "ಅಸಿಟಿಕ್ ಆಸಿಡ್" ಅಂಶ ಬಹಳ ಹೇರಳವಾಗಿರುತ್ತದೆ . ನೀವು ಊಟಕ್ಕೆ ಮುಂಚೆ ಪ್ರತಿದಿನ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ ಸೇವಿಸುತ್ತಾ ಬಂದರೆ ನಿಮ್ಮ ದೇಹದಲ್ಲಿ ಮೂತ್ರ ಪಿಂಡದ ಕಲ್ಲುಗಳಿದ್ದರೆ ಬಹಳ ಬೇಗನೆ ಕರಗುತ್ತವೆ.

ವೀಟ್ ಗ್ರಾಸ್ ಜ್ಯೂಸು ಅಥವಾ ಗೋಧಿ ಹುಲ್ಲಿನ ರಸ

ವೀಟ್ ಗ್ರಾಸ್ ಜ್ಯೂಸು ಅಥವಾ ಗೋಧಿ ಹುಲ್ಲಿನ ರಸ

ಗೋಧಿ ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಬಹಳ ಹಿಂದಿ ನಿಂದಲೂ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ.ಸಕ್ಕರೆ ಕಾಯಿಲೆಯವರಿಗೆ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿ ಹೇಗೆ ಉಪಯುಕ್ತವೋ ಹಾಗೆ ಮೂತ್ರ ಪಿಂಡದ ಕಲ್ಲುಗಳಿಗೆ ಗೋಧಿ ಹುಲ್ಲು ಸಹಕಾರಿ. ಇಂತಹ ಸಮಸ್ಯೆಗೆ ಮಾತ್ರೆ ಅಥವಾ ಪೌಡರ್ ಸೇವಿಸುವ ಬದಲು ಗೋಧಿ ಹುಲ್ಲಿನ ಜ್ಯೂಸು ಸೇವಿಸಿದರೆ ಮೂತ್ರದ ಉತ್ಪತ್ತಿ ಜಾಸ್ತಿಯಾಗಿ ಕಲ್ಲುಗಳು ಕರಗುತ್ತವೆ ಮತ್ತು ಬಹಳ ಬೇಗನೆ ದೇಹದ ಹೊರ ಹೋಗುತ್ತವೆ. ಗೋಧಿ ಹುಲ್ಲಿನಲ್ಲಿ "ಆಂಟಿಓಕ್ಸಿಡಾಂಟ್ಸ್" ಇರುವುದರಿಂದ ಮೂತ್ರ ನಾಳಗಳಲ್ಲಿ ಕಿಡ್ನಿ ಕಲ್ಲುಗಳು ಸೇರಿಕೊಳ್ಳುವುದನ್ನು ಸಂಪೂರ್ಣವಾಗಿ ತಡೆಯುತ್ತದೆ. ನೋಡಿದಿರಲ್ಲ !!! ನಮ್ಮ ಮನೆಯಲ್ಲೇ ನಮಗೆ ಬೇಕಾದ ತಕ್ಷಣ ಯಾವ ಯಾವ ವೈದ್ಯರುಗಳಿದ್ದಾರೆ ಎಂದು . ಇನ್ನೇಕೆ ತಡ ಮೇಲೆ ತಿಳಿಸಿದ ಎಲ್ಲಾ ಆಹಾರ ಪದ್ದತಿಗಳನ್ನು ರೂಡಿಸಿಕೊಳ್ಳಿ ಮತ್ತು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

English summary

how to treat kidney stones with common kitchen ingredients?

Kidney stones are the hard deposits formed in the kidneys. The stones have to travel through the urinary tract to exit the body. The process is called the passing of the kidney stones and can be very painful. Kidney stones occur when salts and minerals like calcium oxalate crystalize in the kidneys and create hard stones. Kidney stones are also called calculi or urolithiasis.
X
Desktop Bottom Promotion