For Quick Alerts
ALLOW NOTIFICATIONS  
For Daily Alerts

ಎಂಡೋಸ್ಕೋಪಿ : ವಿಧಗಳು, ಸಿದ್ಧತೆ, ಅಪಾಯದ ಸಾಧ್ಯತೆ ಮತ್ತು ಅಡ್ಡಪರಿಣಾಮಗಳು

|

ನಮ್ಮ ಶರೀರದ ಒಳಗಣ ಭಾಗಗಳನ್ನು ಚಿಕ್ಕ ಕ್ಯಾಮೆರಾದ ಮೂಲಕ ನೋಡಬಹುದಾದ ವಿಧಾನಕ್ಕೆ ಎಂಡೋಸ್ಕೋಪ್ ಅಥವಾ ಒಳಗಣ ನೋಟ ಎಂದು ಕರೆಯಬಹುದು. ಒಂದು ಉದ್ದದ ನಳಿಕೆಯ ತುದಿಯಲ್ಲಿ ಚಿಕ್ಕ ಕ್ಯಾಮೆರಾ ಅಳವಡಿಸಿ ಬಾಯಿಯ ಮೂಲಕ ಅನ್ನನಾಳ, ಜಠರ, ಸಣ್ಣಕರುಳು, ದೊಡ್ಡಕರುಳುಗಳಿಗೆ ಹಾಯಿಸಿ ಒಳಭಾಗದಲ್ಲಿ ಉಂಟಾಗಿರುವ ತೊಂದರೆಗಳ ಸ್ಪಷ್ಟ ವಿವರಗಳನ್ನು ವೈದ್ಯರು ಈ ಮೂಲಕ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಈ ಮೂಲಕ ಕಾಯಿಲೆಯ ಮೂಲ ಮತ್ತು ಜಟಿಲತೆಯನ್ನು ಅರ್ಥೈಸಿಕೊಳ್ಳಲು ನೆರವಾಗುತ್ತದೆ ಮತ್ತು ಸೂಕ್ತ ಚಿಕಿತ್ಸೆ ಹೇಗೆ ಮುಂದುವರೆಯಬೇಕೆಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಈ ವಿಧಾನ ನಿರಪಾಯಾಕಾರಿಯಾಗಿದ್ದು ದೇಹದ ಯಾವುದೇ ಅಂಗವನ್ನು ಕತ್ತರಿಸುವುದಾಗಲೀ ಕೊಯ್ಯುವುದಾಗಲೀ ಮಾಡುವ ಅವಶ್ಯಕತೆ ಸಾಮಾನ್ಯವಾಗಿ ಇರುವುದಿಲ್ಲ. ಆದರೆ ಕೆಲವು ಅಂಗಗಳನ್ನು ಪ್ರತ್ಯೇಕವಾಗಿ ಗಮನಿಸಬೇಕಾದಾಗ ಮಾತ್ರ ಆ ಅಂಗದ ಮೇಲಿರುವ ಭಾಗದ ಚರ್ಮದಲ್ಲಿ ಚಿಕ್ಕ ಕೊಯ್ತ ಮಾಡಿ ಅಲ್ಲಿಂದ ನಳಿಕೆಯನ್ನು ತೂರಿಸಿ ನೋಡಲಾಗುತ್ತದೆ. ಸಾಮಾನ್ಯವಾಗಿ ಈ ಕೊಯ್ತಗಳೂ ಚಿಕ್ಕ ಗಾಯಗಳೇ ಆಗಿದ್ದು ಕೆಲವೇ ದಿನಗಳಲ್ಲಿ ಕಲೆಯಿಲ್ಲದೇ ವಾಸಿಯಾಗುತ್ತವೆ.

ಬಾಯಿಯ ಮೂಲಕ ತೂರಿಸುವ ನಳಿಕೆ

ಬಾಯಿಯ ಮೂಲಕ ತೂರಿಸುವ ನಳಿಕೆ

ಕೆಲವು ಎಂಡೋಸ್ಕೋಪಿಗಳನ್ನು ಬಾಯಿಯ ಮೂಲಕ ತೂರಿಸುವ ನಳಿಕೆಯ ಮೂಲಕ ನಿರ್ವಹಿಸಿದರೆ ಕೆಲವನ್ನು ಚಿಕ್ಕ ಕೊಯ್ತ ಮಾಡಿದ ಭಾಗದಿಂದ ಆರಂಭಿಸಲಾಗುತ್ತದೆ. ಎಲ್ಲಿ ಕೊಯ್ತ ಮಾಡಬೇಕು, ಹೇಗೆ ಮುಂದುವರೆಯಬೇಕು ಎಂಬುದನ್ನು ಶಸ್ತ್ರಚಿಕಿತ್ಸಕ ವೈದ್ಯರು ಅಥವಾ ಸರ್ಜನ್ ರವರೇ ನಿರ್ಧರಿಸುತ್ತಾರೆ. ಯಾವುದಾದರೊಂದು ಕಾಯಿಲೆಯ ಮೂಲ ಅರಿಯಲು, ರೋಗಪೀಡಿದ ಅಂಗವೊಂದರ ಚಿಕ್ಕ ಭಾಗವನ್ನು ಪರೀಕ್ಷೆಗೆ ಬಳಸಲು ಅಥವಾ ಕಾಯಿಲಿಗೀಡಾದ ಭಾಗವನ್ನು ದೇಹದ ಒಳಗಣ ಭಾಗದಿಂದ ನಿವಾರಿಸಲೂ ಎಂಡೋಸ್ಕೋಪಿ ವಿಧಾನವನ್ನು ಅನುಸರಿಸಲಾಗುತ್ತದೆ. ಅಲ್ಲದೇ ಪ್ರಮುಖ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ದೇಹದ ಇತರ ಅಂಗಗಳ ಒಳಭಾಗವನ್ನು ಜೊತೆಜೊತೆಯಾಗಿ ಟೀವಿ ಪರದೆಯ ಮೇಲೆ ನೋಡುತ್ತಾ ನಿರ್ವಹಿಸುವ ಮೂಲಕ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ಫಲಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ಕ್ಯಾಪ್ಸೂಲ್ ಎಂಡೋಸ್ಕೋಪಿ

ಕ್ಯಾಪ್ಸೂಲ್ ಎಂಡೋಸ್ಕೋಪಿ

ಇಂದು ಎಂಡೋಸ್ಕೋಪಿ ವಿಧಾನ ಬಹಳ ಮುಂದುವರೆದಿದ್ದು ಗಾತ್ರದಲ್ಲಿಯೂ ಚಿಕ್ಕದಾಗುತ್ತಾ ಹೋಗಿರುವ ಕಾರಣ ಅತಿ ಕಡಿಮೆ ರಕ್ತಸ್ರಾವದ ಮೂಲಕ ಚಿಕಿತ್ಸೆಯನ್ನು ಒದಗಿಸಬಹುದಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಕ್ಯಾಪ್ಸೂಲ್ ಎಂಡೋಸ್ಕೋಪಿ, ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್, ಕ್ರೋಮೋ ಎಂಡೋಸ್ಕೋಪಿ ಮತ್ತು ನ್ಯಾರೋ ಬ್ಯಾಂಡ್ ಇಮೇಜಿಂಗ್ ಮೊದಲಾದವು ಅತ್ಯಾಧುನಿಕ ವಿಧಾನಗಳಾಗಿವೆ. ಕೇವಲ ರೋಗಿ ಒದಗಿಸಿದ ವಿವರಗಳಿಂದ ಸ್ಪಷ್ಟವಾಗಿ ಊಹಿಸಲಾಗದ ತೊಂದರೆಗಳ ಮೂಲವನ್ನು ಸ್ಪಷ್ಟಪಡಿಸಲು ಈ ವಿಧಾನ ಅತ್ಯುತ್ತಮವಾಗಿದೆ. ಉದಾಹರಣೆಗೆ ರೋಗಿ ತನಗೆ ಹೊಟ್ಟೆಯ ಭಾಗದಲ್ಲಿ ಉರಿ ಎಂದು ಹೇಳಿದರೆ ಇದಕ್ಕೆ ಹೊಟ್ಟೆಯ ಹುಣ್ಣು, ಆಮ್ಲೀಯತೆ, ಕರುಳಿನ ಹುಣ್ಣು, ವಪೆಯ ಭಾಗದಲ್ಲಿ ಸೋಂಕು ಮೊದಲಾದ ಹಲವಾರು ಕಾರಣಗಳಿರಬಹುದು. ಹಾಗಾಗಿ ಹೊಟ್ಟೆಯ ಎಂಡೋಸ್ಕೋಪಿ ಯಿಂದ ಇದಕ್ಕೆ ನಿಖರವಾದ ಕಾರಣವನ್ನು ವೈದ್ಯರಿಗೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದೇ ರೀತಿಯಾಗಿ ಪಿತ್ತಗಲ್ಲು ಅಥವಾ ಪಿತ್ತಕೋಶದ ಕಲ್ಲು, ಜೀರ್ಣಾಂಗಗಳಲ್ಲಿ ಉಂಟಾದ ಗಡ್ಡೆಗಳು, ತೀವ್ರವಾದ ಮಲಬದ್ದತೆ, ಅನ್ನನಾಳದಲ್ಲಿ ಎದುರಾಗಿರುವ ತಡೆ, ವಪೆ ಹರಿದು ಹೊಟ್ಟೆಯ ಭಾಗ ಎದೆಯ ಭಾಗಕ್ಕೆ ಆವರಿಸಿರುವುದು (hiatal hernia),ಮೂತ್ರದಲ್ಲಿ ರಕ್ತ, ಮಹಿಳೆಯರ ಜನನಾಂಗದಿಂದ ಒಸರುವ ರಕ್ತಸ್ರಾವ, ಜೀರ್ಣಾಂಗ ಗಳಲ್ಲಿ ಒಸರುವ ರಕ್ತಸ್ರಾವ, ಮೇದೋಜೀರಕ ಗ್ರಂಥಿಯ ತೊಂದರೆ (pancreatitis), ಜೀರ್ಣಾಂಗಗಳಿಗೆ ಸಂಬಂಧಿಸಿದ ಇತರ ತೊಂದರೆಗಳು ಮೊದಲಾದವುಗಳನ್ನು ಅರಿಯಲುಎಂಡೋಸ್ಕೋಪಿ ವಿಧಾನ ಅತ್ಯುತ್ತಮವಾಗಿದೆ.

ವೈದ್ಯರ ಸಲಹೆ ಮಾಡಿ

ವೈದ್ಯರ ಸಲಹೆ ಮಾಡಿ

ಈ ವಿಧಾನವನ್ನು ಅನುಸರಿಸುವ ಮುನ್ನ, ನಿಮ್ಮ ವೈದ್ಯರು ನೀವು ಕೈಗೊಳ್ಳಬೇಕಾದ ಕೆಲವು ಅಗತ್ಯ ಕ್ರಮಗಳ ಬಗ್ಗೆ ವಿವರಗಳನ್ನು ಒದಗಿಸುತ್ತಾರೆ ಹಾಗೂ ಇವನ್ನು ಚಾಚೂ ತಪ್ಪದೇ ಅನುಸರಿಸಬೇಕಾಗುತ್ತದೆ. ಆಗ ಮಾತ್ರವೇ ಈ ವಿಧಾನವನ್ನು ಯಾವುದೇ ತೊಂದರೆ ಅಥವಾ ಜಟಿಲತೆಗೆ ಒಳಗಾಗದಂತೆ ನಿರ್ವಹಿಸಲು ಸಾಧ್ಯ. ಹಾಗಾಗಿ ಈ ಬಗ್ಗೆ ಸಾಕಷ್ಟು ಮಾಹಿತಿಯನ್ನು ಮೊದಲೇ ಪಡೆದಿರುವುದು ಅಗತ್ಯವಾಗಿದೆ.

ಎಂಡೋಸ್ಕೋಪಿಯ ವಿಧಾನಗಳು

ಎಂಡೋಸ್ಕೋಪಿಯ ವಿಧಾನಗಳು

ದೇಹದ ಯಾವ ಭಾಗದ ಅಥವಾ ಅಂಗದ ತಪಾಸಣೆಗಾಗಿ ಎಂಡೋಸ್ಕೋಪಿ ನಡೆಸಲಾಗುತ್ತದೋ, ಅದನ್ನು ಅನುಸರಿಸಿ ಇದರ ವಿಧಾನಗಳೂ ಬೇರೆ ಬೇರೆಯಾಗಿರುತ್ತವೆ. ಕೊಲನೋಸ್ಕೋಪಿ - ಈ ವಿಧಾನವನ್ನು ಕರುಳಿನ ತೊಂದರೆಯನ್ನು ಕಂಡುಕೊಳ್ಳಲು ನಿರ್ವಹಿಸಲಾಗುತ್ತದೆ. ಇದಕ್ಕಾಗಿ ಗುದದ್ವಾರದ ಮೂಲಕ ನಳಿಕೆಯನ್ನು ಹಾಯಿಸಲಾಗುತ್ತದೆ. ಈ ವಿಧಾನ ತುಂಬಾ ಸೂಕ್ಷ್ಮವಾಗಿರುವ ಕಾರಣ ಕೇವಲ ತರಬೇತಿ ಪಡೆದ ಕರುಳುತಜ್ಞ (gastroenterologist) ಮತ್ತು ಗುದನಾಳದ ತಜ್ಞವೈದ್ಯ (proctologist) ರವರು ಮಾತ್ರವೇ ಈ ಚಿಕಿತ್ಸೆಯನ್ನು ನಡೆಸಲು ಅರ್ಹರಾಗಿರುತ್ತಾರೆ. ಆಂಥ್ರೋಸ್ಕೋಪಿ - ಮೂಳೆಗಳ ಸಂಧುಗಳಲ್ಲಿ ಇರುವ ತೊಂದರೆಯನ್ನು ಕಂಡುಕೊಳ್ಳಲು ಮೂಳೆತಜ್ಞ ವೈದ್ಯರು (orthopedic) ಮಾತ್ರವೇ ಈ ವಿಧಾನವನ್ನು ನಿರ್ವಹಿಸಲು ಅರ್ಹರಾಗಿದ್ದು ನೋವಿರುವ ಮೂಳೆಯ ಸಂಧಿನ ಭಾಗದಲ್ಲಿ ಅತಿ ಸೂಕ್ಷ್ಮ ನಳಿಕೆಯನ್ನು ತೂರಿಸಿ ಪರೀಕ್ಷೆ ಮಾಡಲಾಗುತ್ತದೆ. ಎಂಟಿರೋಸ್ಕೋಪಿ - ವಿಶೇಷವಾಗಿ ಸಣ್ಣಕರುಳಿನಲ್ಲಿರುವ ತೊಂದರೆಯನ್ನು ಅರಿಯಲು ಈ ವಿಧಾನವನ್ನು ಅನುಸರಿಸ ಲಾಗುತ್ತದೆ. ಇದು ಸಹಾ ಸೂಕ್ಷ್ಮ ವಿಧಾನವಾಗಿರುವ ಕಾರಣ ತರಬೇತಿ ಪಡೆದ ಕರುಳುತಜ್ಞ (gastroenterologist) ರು ಮಾತ್ರವೇ ಇದನ್ನು ಅನುಸರಿಸುತ್ತಾರೆ. ತೊಂದರೆ ಇರುವ ಸಣ್ಣ ಕರುಳಿಗೆ ಯಾವುದು ಹತ್ತಿರಾಗುತ್ತದೆ ಎಂಬ ಮಾಹಿತಿಯನ್ನು ಅನುಸರಿಸಿ ಬಾಯಿ ಅಥವಾ ಗುದದ್ವಾರದ ಮೂಲಕ ನಳಿಕೆಯನ್ನು ತೂರಿಸಲಾಗುತ್ತದೆ. ಬ್ರಾಂಖೋಸ್ಕೋಪಿ: ಶ್ವಾಸಕೋಶದ ತೊಂದರೆಗಳನ್ನು ವಿಶ್ಲೇಷಿಸಲು ಶ್ವಾಸಕೋಶಶಾಸ್ತ್ರಜ್ಞ (pulmonologist) ಅಥವಾ ಎದೆಗೂಡಿನ ಶಸ್ತ್ರಚಿಕಿತ್ಸಜ್ಞ (thoracic surgeon)ರು ಮಾತ್ರವೇ ಈ ವಿಧಾನವನ್ನು ನಿರ್ವಹಿಸಲು ಅರ್ಹರಾಗಿರುತ್ತಾರೆ. ಇದಕ್ಕಾಗಿ ಇವರು ಮೂಗು ಅಥವಾ ಬಾಯಿಯ ಮೂಲಕ ನಳಿಕೆಯನ್ನು ತೂರಿಸಿ ವೀಕ್ಷಿಸುತ್ತಾರೆ.

ಸಿಸ್ಟೋಸ್ಕೋಪಿ

ಸಿಸ್ಟೋಸ್ಕೋಪಿ

ಮೂತ್ರನಾಳ, ಮೂತ್ರಕೋಶ ಮೊದಲಾದ ಸೂಕ್ಷ್ಮ ಭಾಗಗಳಲ್ಲಿ ಉಂಟಾದ ತೊಂದರೆಗಳನ್ನು ಪರೀಕ್ಷಿಸಲು ಅತಿ ಸೂಕ್ಷ್ಮ ನಳಿಕೆಯನ್ನು ಮೂತ್ರನಾಳದ ಮೂಲಕ ತೂರಿಸಲಾಗುತ್ತದೆ. ಈ ಪರೀಕ್ಷೆಯನ್ನು ಕೇವಲ ಮೂತ್ರಶಾಸ್ತ್ರಜ್ಞ ಅಥವಾ (urologist) ಮಾತ್ರವೇ ನಿರ್ವಹಿಸಬಲ್ಲರು. ಹಿಸ್ಟೆರೋಸ್ಕೋಪಿ: ಸ್ತ್ರೀರೋಗ ತಜ್ಞರು ಅಥವಾ ಸ್ತ್ರೀರೋಗ ಶಸ್ತ್ರಚಿಕಿತ್ಸಕರು ಮಾತ್ರವೇ ಈ ವಿಧಾನವನ್ನು ಅನುಸರಿಸಬಹುದಾಗಿದ್ದು ಮಹಿಳೆಯ ಗರ್ಭಕೋಶದ ಒಳಭಾಗವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಯೋನಿಯ ಮೂಲಕ ನಳಿಕೆಯನ್ನು ತೂರಿಸಲಾಗುತ್ತದೆ.ಲ್ಯಾರಿಂಗೋಸ್ಕೋಪಿ - ಗಂಟಲಗೂಡು, ಧ್ವನಿಪೆಟ್ಟಿಗೆ ಮೊದಲಾದ ಭಾಗಗಳಲ್ಲಿರುವ ತೊಂದರೆಗಳನ್ನು ಅರಿಯಲು ಕಿವಿ-ಗಂಟಲು-ಮೂಗು ಶಸ್ತ್ರವೈದ್ಯಜ್ಞ (otolaryngologist) ರು ಮಾತ್ರವೇ ಈ ವಿಧಾನವನ್ನು ಅನುಸರಿಸಲು ಅರ್ಹರಾಗಿದ್ದು ಇದಕ್ಕಾಗಿ ಮೂಗು ಅಥವಾ ಬಾಯಿಯಿಂದ ಸೂಕ್ಷ್ಮನಳಿಕೆಯನ್ನು ತೂರಿಸುತ್ತಾರೆ.

ಎಂಡೋಸ್ಕೋಪಿ ನಿರ್ವಹಿಸುವ ವಿಧಾನ ಯಾವುದು

ಎಂಡೋಸ್ಕೋಪಿ ನಿರ್ವಹಿಸುವ ವಿಧಾನ ಯಾವುದು

ಒಂದು ವೇಳೆ ನಿಮಗೆ ಈ ವಿಧಾನವನ್ನು ನಿರ್ವಹಿಸಲು ಸಲಹೆ ಮಾಡಲಾಗಿದ್ದರೆ ಈ ವಿಧಾನವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ಮೊದಲೇ ತಿಳಿದುಕೊಂಡಿದ್ದರೆ ಈ ಬಗ್ಗೆ ಗಾಬರಿಯಾಗದೇ ಇರಲು ಮತ್ತು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ. ವೈದ್ಯರಿಗೆ ನಿಮ್ಮ ಆರೋಗ್ಯ ವಿವರಗಳನ್ನು ಸಲ್ಲಿಸಿ: ಈ ವಿಧಾನಕ್ಕೆ ಒಳಗಾಗುವ ಮುನ್ನ ವೈದ್ಯರಿಗೆ ನಿಮ್ಮ ಆರೋಗ್ಯ ಸಂಬಂಧಿತ ಎಲ್ಲಾ ವಿವರಗಳನ್ನು ನೀಡುವುದು ಅವಶ್ಯವಾಗಿದೆ. ಒಂದು ವೇಳೆ ನೀವು ಗರ್ಭವತಿ ಮಹಿಳೆಯಾಗಿದ್ದರೆ ಅಥವಾ ಕ್ಯಾನ್ಸರ್ ಮೊದಲಾದ ಗಂಭೀರ ಕಾಯಿಲೆಗಳಿದ್ದರೆ ಅಥವಾ ಹೃದಯ ಸಂಬಂಧಿ ತೊಂದರೆಗಳಿದ್ದರೆ ಈ ಬಗ್ಗೆ ವಿವರಗಳನ್ನು ಮೊದಲೇ ತಿಳಿಸಬೇಕು. ಜೊತೆಗೇ ಯಾವುದಾದರೂ ಔಷಧಿ ಅಥವಾ ಆಹಾರಕ್ಕೆ ನಿಮಗೆ ಅಲರ್ಜಿ ಇದ್ದರೆ ಅಥವಾ ಯಾವುದಾದರೂ ಔಷಧಿಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಇದನ್ನೂ ತಿಳಿಸಬೇಕು. ಈ ಮೂಲಕ ವೈದ್ಯರಿಗೆ ಸೂಕ್ತ ವಿಧಾನವನ್ನು ಆಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಎಂಡೋಸ್ಕೋಪಿ ನಿರ್ವಹಿಸುವ ವಿಧಾನ ಯಾವುದು

ಎಂಡೋಸ್ಕೋಪಿ ನಿರ್ವಹಿಸುವ ವಿಧಾನ ಯಾವುದು

ನೀವು ವೈದ್ಯರಿಗೆ ಈ ಎಲ್ಲಾ ವಿವರಗಳನ್ನು ಸಲ್ಲಿಸಿದ ಬಳಿಕ ವೈದ್ಯರು ನಿಮ್ಮ ಆರೋಗ್ಯಕ್ಕೆ ಸೂಕ್ತವಾಗುವ ವಿಧಾನವನ್ನು ಆಯ್ದುಕೊಳ್ಳುತ್ತಾರೆ. ಈ ಮೂಲಕ ಚಿಕಿತ್ಸೆಯ ಅವಧಿಯಲ್ಲಿ ಅಥವಾ ಬಳಿಯ ಯಾವುದೇ ತೊಂದರೆ ಉದ್ಭವವಾಗುವ ಸಾಧ್ಯತೆಯನ್ನು ಇಲ್ಲವಾಗಿಸುತ್ತಾರೆ. ಹಾಗಾಗಿ ನೀವು ಸೇವಿಸುತ್ತಿರುವ ಯಾವುದೇ ಔಷಧಿಯ ಬಗ್ಗೆ ಮಾಹಿತಿ ಸಲ್ಲಿಸುವುದು ಅಗತ್ಯವಾಗಿದ್ದು ಒಂದು ವೇಳೆ ನಿಮ್ಮ ಅಜಾಗರೂಕತೆಯಿಂದ ಯಾವುದಾದ ರೊಂದು ಮಹತ್ವದ ಮಾಹಿತಿ ಬಿಟ್ಟುಹೋಗಿದ್ದರೆ ಇದು ಚಿಕಿತ್ಸೆಯ ಸಮಯದಲ್ಲಿ ಗಂಡಾತರಕ್ಕೂ ಕಾರಣವಾಗ ಬಹುದು.ಒಂದು ವೇಳೆ ನೀವು ಉರಿಯೂತ ನಿವಾರಕ ಔಷಧಿಗಳು, ವಾರ್ಪಾರಿನ್, ಹೆಪಾರಿನ್ ಆಸ್ಪಿರಿನ್ ಅಥವಾ ಇತರ ರಕ್ತವನ್ನು ತೆಳುವಾಗಿಸುವ ಔಷಧಿಗಳನ್ನು ಸೇವಿಸುತ್ತಿದ್ದರೆ ಇವು ಎಂಡೋಸ್ಕೋಪಿಯ ಸಮಯದಲ್ಲಿ ನೀಡುವ ಅರವಳಿಕಾ ಔಷಧಿಗಳೊಂದಿಗೆ ಮಿಳಿತಗೊಂಡು ಮೂಲ ಉದ್ದೇಶವನ್ನೇ ಹಾಳುಗೆಡವ ಬಹುದು. ಅಲ್ಲದೇ ಒಂದು ವೇಳೆ ನೀವು ಮಧುಮೇಹಿಗಳಾಗಿದ್ದು ಕೆಲವು ಔಷಧಿಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ನಿಮ್ಮ ವೈದ್ಯರಿಗೆ ಈ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ನಿಮ್ಮ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಏರುಪೇರಾಗದಂತೆ ಮುಂದಿನ ಕಾರ್ಯಗಳನ್ನು ನಿರ್ವಹಿಸಬೇಕಾಗಿದ್ದು ವೈದ್ಯರೇ ಈ ಬಗ್ಗೆ ಮುಂದಿನ ಕ್ರಮಗಳನ್ನು ನಿರ್ಧರಿಸುತ್ತಾರೆ. ಹಾಗಾಗಿ ನೀವಾಗಿಯೇ ಯಾವುದೇ ಔಷಧಿಯ ಪ್ರಮಾಣವನ್ನು ಬದಲಿಸುವ, ಪ್ರಾರಂಭಿಸುವ ಅಥವಾ ನಿಲ್ಲಿಸುವ ಮುನ್ನ ನಿಮ್ಮ ವೈದ್ಯರ ಅನುಮತಿಯನ್ನು ಪಡೆಯುವುದು ಅಗತ್ಯವಾಗಿದೆ. ಈ ವಿಧಾನವನ್ನು ಅನುಸರಿಸುವ ಮುನ್ನ ಅಗತ್ಯವಾಗಿರುವ

ಅಪಾಯಗಳ ಸಾಧ್ಯತೆಗಳ ಬಗ್ಗೆ ಅರಿವಿರಲಿ

ಅಪಾಯಗಳ ಸಾಧ್ಯತೆಗಳ ಬಗ್ಗೆ ಅರಿವಿರಲಿ

ಈ ವೈದ್ಯಕೀಯ ಚಿಕಿತ್ಸಾ ಕ್ರಮವನ್ನು ಕೈಗೊಳ್ಳುವಾಗ ಎದುರಾಗಬಹುದಾದ ಅಪಾಯ ಅಥವಾ ತೊಂದರೆಗಳ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಅರಿವಿರುವುದು ಅತ್ಯಂತ ಅಗತ್ಯ. ಆದರೆ ಎಲ್ಲಾ ಬಗೆಗಳಲ್ಲಿ ಅಪಾಯಗಳಿವೆ ಎಂದು ಅರ್ಥವಲ್ಲ, ಸರಿ ಸುಮಾರಾಗಿ ಈ ವಿಧಾನಗಳನ್ನು ನುರಿತ ತಜ್ಞರು ಮಾತ್ರವೇ ನಿರ್ವಹಿಸುವ ಕಾರಣ ಅಪಾಯಗಳ ಸಾಧ್ಯತೆ ಅತಿ ಕಡಿಮೆ ಇದ್ದರೂ ಇಲ್ಲವೇ ಇಲ್ಲ ಎಂದು ಅಲ್ಲಗಳೆಯಲು ಸಾಧ್ಯವಿಲ್ಲ. ಅಪರೂಪ ದಲ್ಲಿ ಕೆಲವು ತೊಂದರೆಗಳು ಎದುರಾಗಬಹುದು, ಇದಕ್ಕೆ ಸಿದ್ಧರಿರುವುದು ಅವಶ್ಯ. ಒಂದು ವೇಳೆ ಚಿಕಿತ್ಸೆಗೂ ಮುನ್ನ ನೀವು ನೀರು ಕುಡಿದಿದ್ದರೆ ಅಥವಾ ಆಹಾರ ಸೇವಿಸಿದ್ದರೆ ನಳಿಕೆ ತೂರಿಸಿದ ಬಳಿಕ ಉಸಿರಾಡಲು ಕಷ್ಟಪಡಬೇಕಾಗಿ ಬರಬಹುದು (aspiration),ಏಕೆಂದರೆ ನಿಮ್ಮ ಜೀರ್ಣಾಂಗಗಳಲ್ಲಿದ್ದ ಆಹಾರ ಶ್ವಾಸಕೋಶಕ್ಕೆ ತಲುಪಬಹುದು ಹಾಗೂ ಕೆಲವಾರು ಕ್ಲಿಷ್ಟತೆ ಎದುರಾಗ ಬಹುದು.ಒಂದು ವೇಳೆ ನಿಮಗೆ ಯಾವುದಾದರೂ ಅಲರ್ಜಿ ಇದ್ದರೆ ಈ ಚಿಕಿತ್ಸೆಗೂ ಮುನ್ನ ನೀಡಲಾಗುವ ಅರವಳಿಕೆಗಳು ಈ ಅಲರ್ಜಿಯನ್ನು ಪ್ರಚೋದಿಸಿ ಅರವಳಿಕೆಯ ಪ್ರಭಾವವನ್ನು ಬೇರೆಯೇ ರೀತಿಯಲ್ಲಿ ಪ್ರದರ್ಶಿಸಬಹುದು. ಒಂದು ವೇಳೆ ಬಯಾಪ್ಸಿ ನಡೆಸುವುದಾದರೆ (ಅಂದರೆ ದೇಹದ ಒಳಗಿನ ಅಂಗಾಂಶವೊಂದರ ಚಿಕ್ಕ ಭಾಗವನ್ನು ಪ್ರತ್ಯೇಕಿಸಿ ಪರೀಕ್ಷೆ ಗೊಳಪಡಿಸುವುದು) ಕತ್ತರಿಸಿದ ಭಾಗದಿಂದ ರಕ್ತಸ್ರಾವ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಆದರೆ ಇತರೇ ಗಾಯಗಳಂತೆ ಇದು ಶೀಘ್ರವೇ ಒಣಗುತ್ತದೆ. ಅತ್ಯಪರೂಪದ ಸಂದರ್ಭಗಳಲ್ಲಿ ಎಂಡೋಸ್ಕೋಪಿ ನಡೆಸಿದ ಭಾಗದಲ್ಲಿ ಎಲ್ಲೋ ಒಂದೆಡೆ ಚಿಕ್ಕದಾಗಿ ಚರ್ಮ ಹರಿಯುವ ಸಾಧ್ಯತೆಯೂ ಇರುತ್ತದೆ.

 ಏನನ್ನೂ ತಿನ್ನದಿರಿ ಅಥವಾ ಕುಡಿಯದಿರಿ

ಏನನ್ನೂ ತಿನ್ನದಿರಿ ಅಥವಾ ಕುಡಿಯದಿರಿ

ಸಾಮಾನ್ಯವಾಗಿ ಹೆಚ್ಚಿನ ವೈದ್ಯಕೀಯ ಶಸ್ತ್ರಚಿಕಿತ್ಸೆಗಳು ಮತ್ತು ಇತರ ಕ್ರಿಯೆಗಳು ರೋಗಿ ಖಾಲಿಹೊಟ್ಟೆಯಲ್ಲಿದ್ದಾಗಲೇ ನಡೆಸಲಾಗುತ್ತದೆ. ಎಂಡೋಸ್ಕೋಪಿಗೂ ಇದು ಅನ್ವಯವಾಗುತ್ತದೆ. ಹಾಗಾಗಿ ನಡುರಾತ್ರಿಯ ಬಳಿಕ ಏನನ್ನೂ ತಿನ್ನುವುದಾಗಲೀ ಕುಡಿಯುವುದಾಗಲೀ ಮಾಡಬಾರದು. ಒಂದು ವೇಳೆ ಮರುದಿನ ಬೆಳಿಗ್ಗೆ ಎಂಡೋಸ್ಕೋಪಿ ನಡೆಸುವುದಾದರೆ ಹಿಂದಿನ ರಾತ್ರಿಗೂ ಮುನ್ನ ಆಹಾರ ಸೇವಿಸಬೇಕು, ಸಂಜೆಯ ಬಳಿಕ ಏನನ್ನೂ ಸೇವಿಸಬಾರದು. ಬಬ್ಬಲ್ ಗಮ್ ತಿನ್ನುವುದು, ಚಿಕ್ಕ ಮಿಂಟ್ ಗುಳಿಗೆ ಚೀಪುವುದು ಸಹಾ ಸಲ್ಲದು. ಸಾಧ್ಯವೇ ಇಲ್ಲವೆನ್ನುವಷ್ಟು ಬಾಯಾರಿಕೆಯಾದರೆ ಮಾತ್ರ ಚಿಕಿತ್ಸೆಗೂ ಆರು ಘಂಟೆಗಳ ಮುನ್ನಾ ಸಮಯದವರೆಗೆ ಕೊಂಚವೇ ನೀರು, ಕ್ರೀಂ ಇಲ್ಲದ ಕಾಫಿ, ಸೇಬಿನ ರಸ, ಸೋಡಾ ಅಥವಾ ಸರಳ ಗಂಜಿನೀರನ್ನು ಕುಡಿಯಬಹುದು. ಅಲ್ಲದೇ ಕಿತ್ತಳೆ ಅಥವಾ ಕೆಂಪು ಬಣ್ಣದ ದ್ರವಗಳಾದ ಕಿತ್ತಳೆ ರಸ ಮೊದಲಾದವುಗಳನ್ನು ಸರ್ವಥಾ ಸೇವಿಸಬಾರದು. ಏಕೆಂದರೆ ಈ ದ್ರವಗಳನ್ನು ವೈದ್ಯರು ರಕ್ತ ಎಂದು ತಪ್ಪಾಗಿ ಅರ್ಥೈಸಿ ಕೊಳ್ಳುವ ಸಾಧ್ಯತೆ ಇದೆ.

ಸಡಿಲವಾದ ಉಡುಗೆಯನ್ನು ತೊಟ್ಟುಕೊಳ್ಳಿ

ಸಡಿಲವಾದ ಉಡುಗೆಯನ್ನು ತೊಟ್ಟುಕೊಳ್ಳಿ

ಈ ವಿಧಾನ ನಡೆಯುತ್ತಿರುವಾಗ ರೋಗಿ ಆರಾಮದಾಯಕ ವಾಗಿರುವುದು ಅವಶ್ಯವಾಗಿದೆ. ಹಾಗಾಗಿ ನೀವು ತೊಟ್ಟಿರುವ ಉಡುಪು ಸಡಿಲವಾಗಿದ್ದು ಯಾವುದೇ ಭಾಗಕ್ಕೆ ಒತ್ತಡ ನೀಡುವಂತಿರಬಾರದು ಹಾಗೂ ನಿಮ್ಮ ಉಸಿರಾಟ ಮತ್ತು ಚಲನೆ ಸುಲಭ ಮತ್ತು ಸಹಜವಾಗಿರುವಂತಿರಬೇಕು. ಈ ಅವಧಿಯಲ್ಲಿ ದೇಹದ ಮೇಲೆ ಯಾವುದೇ ಬಗೆಯ ಆಭರಣ, ಕೈಗಡಿಯಾರ ಮೊದಲಾದವು ಏನೂ ಇರಬಾರದು. ಕನ್ನಡಕ ತೊಟ್ಟವರು ನಳಿಕೆಯನ್ನು ತೂರಿಸುವ ಮೊದಲು ತೆಗೆದು ಬದಿಗಿಟ್ಟರೆ ಸಾಕು. ಕೃತಕ ಹಲ್ಲು ಅಥವಾ ತೆಗೆದಿರಿಸಬಹುದಾದ ಹಲ್ಲುಗಳ ಕ್ಲಿಪ್ ಇದ್ದರೆ ವೈದ್ಯರು ಇವನ್ನೂ ಕಳಚಿಡಲು ಹೇಳಬಹುದು.

ಅಗತ್ಯ ಕಾಗದ ಪತ್ರಗಳಲ್ಲಿ ವಿವರಗಳನ್ನು ತುಂಬಿಸಿ

ಅಗತ್ಯ ಕಾಗದ ಪತ್ರಗಳಲ್ಲಿ ವಿವರಗಳನ್ನು ತುಂಬಿಸಿ

ಎಂಡೋಸ್ಕೋಪಿ ಚಿಕಿತ್ಸೆಯನ್ನು ಪ್ರಾರಂಭಿಸುವ ಮುನ್ನ ಈ ಚಿಕಿತ್ಸೆಗೆ ನಿಮ್ಮ ಒಪ್ಪಿಗೆ ಇದೆ ಎಂಬ ಕರಾರುಪತ್ರಕ್ಕೆ ನಿಮ್ಮ ಸಹಿ ಅಗತ್ಯವಾಗಿದ್ದು ಇದು ಕಾನೂನಿನ ಅಗತ್ಯ ಕ್ರಮವೂ ಆಗಿದೆ. ನಿಮಗೆ ಚಿಕಿತ್ಸೆ ನೀಡುವ ಆಸ್ಪತ್ರೆಯ ಸಿಬ್ಬಂದಿ ಈ ಕಾಗದಪತ್ರಗಳನ್ನು ಮೊದಲೇ ಒದಗಿಸುವುದು ಅವರ ಜವಾಬ್ದಾರಿ ಯಾಗಿದ್ದು ಚಿಕಿತ್ಸಾ ದಿನದಂದು ಇವುಗಳಲ್ಲಿ ವಿವರಗಳನ್ನು ತುಂಬಿ ಸಹಿ ಮಾಡಿ ಒಂದು ಕೈಚೀಲದಲ್ಲಿ ನಿಮ್ಮೊಂದಿಗೆ ತಪ್ಪದೇ ತರುವುದು ಅಗತ್ಯ. ಇಲ್ಲದಿದ್ದರೆ ಈ ಕಾಗದಪತ್ರವನ್ನು ಮತ್ತೊಮ್ಮೆ ತುಂಬಿ ಸಹಿಮಾಡಲು ನೀವು ಬಳಸುವ ಸಮಯ ನಿಮ್ಮ ವೈದ್ಯರ ಸಮಯವನ್ನೂ ಹಾಳು ಮಾಡುವುದಲ್ಲದೇ ಕಡೆ ಘಳಿಗೆಯಲ್ಲಿ ವಿವರಗಳನ್ನು ತುಂಬುವ ಉದ್ವೇಗವೂ ಆರೋಗ್ಯದ ಮೇಲೆ ಪರಿಣಾಮವುಂಟು ಮಾಡಬಹುದು.

 ಚಿಕಿತ್ಸಾ ಸ್ಥಳಕ್ಕೆ ಆಗಮಿಸಲು ಮತ್ತು ನಿರ್ಗಮಿಸಲು ವಾಹನ ಸೌಕರ್ಯವನ್ನು ಮೊದಲೇ ಮಾಡಿಕೊಳ್ಳಿ

ಚಿಕಿತ್ಸಾ ಸ್ಥಳಕ್ಕೆ ಆಗಮಿಸಲು ಮತ್ತು ನಿರ್ಗಮಿಸಲು ವಾಹನ ಸೌಕರ್ಯವನ್ನು ಮೊದಲೇ ಮಾಡಿಕೊಳ್ಳಿ

ಚಿಕಿತ್ಸಾ ಸ್ಥಳಕ್ಕೆ ನೀವು ಸ್ವತಃ ನಿಮ್ಮ ವಾಹನದಲ್ಲಿ ಆಗಮಿಸಿದರೂ ಚಿಕಿತ್ಸೆಯ ಬಳಿಕ ಮಾತ್ರ ಮನೆಗೆ ಹಿಂದಿರುಗಲು ನಿಮ್ಮಿಂದ ವಾಹನ ಚಲಾಯಿಸಲು ಸಾಧ್ಯವಿಲ್ಲ. ಏಕೆಂದರೆ ಚಿಕಿತ್ಸೆಯಲ್ಲಿ ಬಳಸುವ ಅರವಳಿಕೆಯ ಪ್ರಭಾವ ಇನ್ನೂ ಇದ್ದು ನಿಮರೆ ಅರೆನಿದ್ದೆ ಆವರಿಸಿರುತ್ತದೆ. ಹಾಗಾಗಿ ನೀವು ಸ್ವತಃ ವಾಹನ ಚಲಾಯಿಸು ವುದಾದಲೀ, ಸಾರ್ವಜನಿಕ ಸಾರಿಗೆಯನ್ನು ಬಳಸುವುದಾಗಲೀ ಮಾಡಕೂಡದು! ಬದಲಿಗೆ ನಿಮ್ಮ ಮನೆಗೆ ತಲುಪುವವರೆಗೆ ಮತ್ತು ನೀವು ಹಾಸಿಗೆಯಲ್ಲಿ ಪವಡಿಸುವವರೆಗೆ ನಿಮ್ಮ ಕುಟುಂಬದ ಸದಸ್ಯರ ಅಥವಾ ಆಪ್ತರ ನೆರವು ಪಡೆದುಕೊಳ್ಳಲು ಹಿಂಜರಿಯಬಾರದು.

ಎಂಡೋಸ್ಕೋಪಿ ನಡೆಸುತ್ತಿರುವಾರ ನೀವು ಏನನ್ನು ನಿರೀಕ್ಷಿಸಬಹುದು?

ಎಂಡೋಸ್ಕೋಪಿ ನಡೆಸುತ್ತಿರುವಾರ ನೀವು ಏನನ್ನು ನಿರೀಕ್ಷಿಸಬಹುದು?

ಸಾಮಾನ್ಯವಾಗಿ ಈ ವಿಧಾನ ಕೊಂಚ ಪ್ರಯಾಸಕರ ಹಾಗೂ ಒತ್ತಡವನ್ನು ನೀಡುವಂತಹದ್ದಾಗಿರುತ್ತದೆ. ಅಲ್ಲದೇ ಪರಕೀಯ ವಸ್ತುವೊಂದು ನಮ್ಮ ದೇಹದೊಳಗೆ ಹರಿದಾಡುತ್ತಿರುವ ಅನುಭವ ಯಾರಿಗೂ ಇಷ್ಟವಿಲ್ಲದ್ದಾಗಿದ್ದು ಅನಿವಾರ್ಯವಾಗಿ ಇದನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ. ಹಾಗಾಗಿ ಈ ಕ್ರಿಯೆ ನಡೆಯುವಷ್ಟೂ ಹೊತ್ತು ಹಲವು ಮಟ್ಟದ ಆತಂಕಗಳು ಖಂಡಿತಾ ಎದುರಾಗುತ್ತವೆ. ಹಾಗಾಗಿ ಹೀಗಾಗುವುದನ್ನು ಮೊದಲೇ ನಿರೀಕ್ಷಿಸಿ ಇದಕ್ಕೆ ಮಾನಸಿಕರಾಗಿ ಸಿದ್ದರಿರಬೇಕು. ಕೆಲವೊಮ್ಮೆ ವೈದ್ಯರು ರೋಗಿಗೆ ಈ ಚಿಕಿತ್ಸಾ ಕ್ರಮ ಕೊಂಚ ಅಭ್ಯಾಸವಾಗಲಿ ಎಂದು ಮೊದಲಿಗೇ ದೊಡ್ಡ ನಳಿಕೆಯನ್ನು ತೂರಿಸದೇ ತೆಳುವಾದ ನಳಿಕೆಯನ್ನು ತೂರಿಸಿ ಕೊಂಚ ಅಭ್ಯಾಸವಾದ ಬಳಿಕವೇ ನಿಜವಾಗಿ ಅಗತ್ಯವಿರುವ ಗಾತ್ರ ನಳಿಕೆಯನ್ನು ತೂರಿಸಬಹುದು. ನಳಿಕೆಯನ್ನು ತೂರಿಸಿದ ಬಳಿಕ ನಿಮಗೇನು ಅನುಭವವಾಗುತ್ತದೆ ಎಂದು ಈಗ ನೋಡೋಣ.

ಎಂಡೋಸ್ಕೋಪಿಯ ಅಡ್ಡಪರಿಣಾಮಗಳು

ಎಂಡೋಸ್ಕೋಪಿಯ ಅಡ್ಡಪರಿಣಾಮಗಳು

ಈ ವಿಧಾನದಲ್ಲಿ ಅಡ್ಡಪರಿಣಾಮಗಳು ವಿರಳವಾಗಿವೆ. ಆದರೂ ಒಂದು ವೇಳೆ ಸಾಮಾನ್ಯಕ್ಕೂ ವಿಪರೀತವಾದ ಅನುಭವವಾದರೆ ತಕ್ಷಣವೇ ನಿಮಗೆ ಚಿಕಿತ್ಸೆ

ನೀಡಿದ ಆಸ್ಪತ್ರೆಗೆ ಧಾವಿಸಬೇಕು (ನೀವೇ ಹೋಗಬಾರದು, ಬದಲಿಗೆ ಇನ್ನೊಬ್ಬರ ನೆರವು ಪಡೆದುಕೊಳ್ಳಬೇಕು) ಸಾಮಾನ್ಯವಾಗಿ ಎದುರಾಗುವ ತೊಂದರೆಗಳೆಂದರೆ:

* ಎದೆಯಲ್ಲಿ ನೋವು

* ಚಿಕಿತ್ಸೆ ಪಡೆದ ಭಾಗದಲ್ಲಿ ಚರ್ಮ ಕೆಂಪಗಾಗಿರುವುದು ಅಥವಾ ಊದಿಕೊಂಡಿರುವುದು

* ಯಾವುದಾದರೂ ಅಂಗ ಘಾಸಿಗೊಂಡಿರುವ ಅನುಭವ

* ಜ್ವರ

* ಎಂಡೋಸ್ಕೋಪಿ ನಡೆಸಿದ ಭಾಗದಲ್ಲಿ ಸತತ ನೋವು

* ಆಹಾರ ನುಂಗಲು ಕಷ್ಟವಾಗುವುದು

* ಉಸಿರಾಡಲು ಕಷ್ಟಕರವಾಗುವುದು

* ವಾಂತಿ

ಒಂದು ವೇಳೆ ಈ ಮಾಹಿತಿಗಳಿಗೂ ಹೊರತಾಗೆ ಬೇರಾವುದೇ ಅನುಮಾನಗಳಿದ್ದರೆ ನಿಮ್ಮ ವೈದ್ಯರನ್ನು ಕೇಳಲು ಹಿಂಜರಿಯಬಾರದು. ಚಿಕಿತ್ಸೆಯ ಪೂರ್ಣ

ವಿವರಗಳನ್ನು ಅರಿತುಕೊಂಡಿರುವುದು ಮತ್ತು ಇದನ್ನು ಒದಗಿಸುವುದು ವೈದ್ಯರ ಕರ್ತವ್ಯವೂ ಆಗಿದೆ.

English summary

Endoscopy: Types, Preparation, Risks & Side Effects

Endoscopy is a medical procedure in which specialised instruments will be inserted into your body through your mouth to examine your internal organs. It is of different categories, based on the part of the body where the procedure is required. Before undergoing an endoscopy, there are certain things you need to know about the procedure.
X
Desktop Bottom Promotion