For Quick Alerts
ALLOW NOTIFICATIONS  
For Daily Alerts

ರಾತ್ರಿ ವೇಳೆ ಮಾವಿನ ಹಣ್ಣು ತಿಂದರೆ, ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ

|

ಪ್ರತಿಯೊಂದು ಋತುವಿನಲ್ಲೂ ಒಂದೊಂದು ರೀತಿಯ ಹಣ್ಣುಗಳು ನಮಗೆ ಲಭ್ಯವಾಗುವುದು. ಈ ಹಣ್ಣುಗಳಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಲಾಭವನ್ನು ಉಂಟು ಮಾಡಲಿದೆ. ಅದರಲ್ಲೂ ಕೆಲವರು ಸಿಹಿ ತಿಂಡಿಗಳನ್ನು ತಿನ್ನುವ ಬದಲಿಗೆ ಹಣ್ಣುಗಳ ಸೇವನೆ ಮಾಡಿದರೆ, ಅದರಿಂದ ಆರೋಗ್ಯಕ್ಕೂ ಒಳ್ಳೆಯದು. ಸಿಹಿ ತಿಂಡಿಗಳಲ್ಲಿ ಹೆಚ್ಚಾಗಿ ಕೃತಕ ಸಿಹಿ ಬಳಸಲಾಗುತ್ತದೆ. ಹೀಗಾಗಿ ಹಣ್ಣುಗಳು ಇದಕ್ಕೆ ಒಳ್ಳೆಯ ಪರ್ಯಾಯವಾಗಿದೆ. ರಾತ್ರಿ ವೇಳೆ ಊಟವಾದ ಬಳಿಕ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಆದರೆ ಎಲ್ಲಾ ಹಣ್ಣುಗಳು ನಿಮಗೆ ಲಾಭ ನೀಡುವುದಿಲ್ಲ. ಕೆಲವು ಹಣ್ಣುಗಳು ನಿದ್ರೆಗೆ ತೊಂದರೆ ಉಂಟು ಮಾಡಿದರೆ, ಇನ್ನು ಕೆಲವು ಹಣ್ಣುಗಳು ತೂಕ ಹೆಚ್ಚಳ ಮಾಡಬಹುದು. ಹೀಗಾಗಿ ಹಣ್ಣುಗಳನ್ನು ರಾತ್ರಿ ವೇಳೆ ತಿನ್ನುವಾಗ ಎಚ್ಚರಿಕೆ ವಹಿಸಬೇಕು.

ರಾತ್ರಿ ವೇಳೆ ತಿನ್ನಲು ಯಾವ ಹಣ್ಣು ಒಳ್ಳೆಯದು ಎಂದು ನಾವು ತಿಳಿಯಬೇಕು. ಕೆಲವೊಂದು ಅಧ್ಯಯನ ಬಳಿಕ ಮಾವಿನ ಹಣ್ಣು ರಾತ್ರಿ ವೇಳೆ ಸೇವನೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ... ಆಹಾರ ಕ್ರಮದಲ್ಲಿ ಹಣ್ಣುಗಳನ್ನು ಸೇರಿಸಿಕೊಳ್ಳಲು ಬಯಸುವಿರಾದರೆ, ಅದರಲ್ಲೂ ರಾತ್ರಿ ವೇಳೆ ಹಣ್ಣುಗಳನ್ನು ತಿನ್ನಬೇಕು ಎಂದಾದರೆ ಆಗ ನೀವು ಮಾವಿನ ಹಣ್ಣು ಸೇವಿಸಿ. ಇದರಲ್ಲಿನ ಸಿಹಿ ರುಚಿಯು ಹಸಿವನ್ನು ಕಡಿಮೆ ಮಾಡುವುದು ಮತ್ತು ದೇಹವನ್ನು ಆರೋಗ್ಯವಾಗಿಯೂ ಇಡುವುದು. ಮಾವಿನ ಹಣ್ಣಿನ ಸೇವನೆ ಮಾಡುವುದರಿಂದ ಹಲವಾರು ರೀತಿಯ ಲಾಭಗಳು ದೇಹಕ್ಕೆ ಸಿಗಲಿದೆ. ಈ ಲಾಭಗಳು ಯಾವುದು ಎಂದು ನೀವು ಲೇಖನವನ್ನು ಓದುತ್ತಾ ತಿಳಿಯಿರಿ.

ಮಾವಿನ ಹಣ್ಣು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು

ಮಾವಿನ ಹಣ್ಣು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು

ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯವಾಗಿ ಇರುವುದು ದೇಹದ ಆರೋಗ್ಯಕ್ಕೆ ಅತೀ ಅಗತ್ಯವಾಗಿ ಇರುವುದು. ರಾತ್ರಿ ವೇಳೆ ಮಾವಿನ ಹಣ್ಣು ಸೇವನೆ ಮಾಡಿದರೆ, ಆಗ ಜೀರ್ಣಕ್ರಿಯೆ ಪ್ರಕ್ರಿಯೆಯು ಉತ್ತೇಜನಗೊಳ್ಳುವುದು. ಇದರಿಂದಾಗಿ ನಿಮಗೆ ಬೆಳಗ್ಗೆ ಯಾವುದೇ ರೀತಿಯ ಜೀರ್ಣಕ್ರಿಯೆ ಸಮಸ್ಯೆಯು ಕಾಣಿಸದು. ಹೊಟ್ಟೆಯಲ್ಲಿ ಕೂಡ ನಿಮಗೆ ಯಾವುದೇ ತೊಂದರೆ ಆಗದು.

ತೂಕ ನಿಯಂತ್ರಣದಲ್ಲಿ ಇಡಲು ಸಹಕಾರಿ

ತೂಕ ನಿಯಂತ್ರಣದಲ್ಲಿ ಇಡಲು ಸಹಕಾರಿ

ಮಾವಿನ ಹಣ್ಣು ಸಹಿತ ಹೆಚ್ಚಿನ ಹಣ್ಣುಗಳಲ್ಲಿ ಕ್ಯಾಲರಿ ತುಂಬಾ ಕಡಿಮೆ ಇರುವುದು. ನೀವು ಒಂದು ತುಂಡು ಮಾವಿನ ಹಣ್ಣು ಸೇವಿಸಿದರೆ, ಆಗ ನಿಮ್ಮ ತೂಕದ ಮೇಲೆ ಇದು ಯಾವುದೇ ಪರಿಣಾಮ ಬೀರದು. ರಾತ್ರಿ ವೇಳೆ ಸೇವಿಸಿದರೂ ಅದರಿಂದ ಯಾವುದೇ ಅಡ್ಡ ಪರಿಣಾಮ ಆಗದು. ಅನಾರೋಗ್ಯಕಾರಿ ಸಕ್ಕರೆ ಮತ್ತು ಅಧಿಕ ಕ್ಯಾಲರಿ ಅಂಶ ಇರುವಂತಹ ಆಹಾರ ಸೇವನೆಗಿಂತ ಮಾವಿನ ಹಣ್ಣು ತುಂಬಾ ಒಳ್ಳೆಯದು.

Most Read: ಮಾವಿನ ಹಣ್ಣಿನಲ್ಲಿದೆ, ಸರ್ವ ರೋಗ ನಿಯಂತ್ರಿಸುವ ಶಕ್ತಿ

ಮಾವಿನ ಹಣ್ಣಿನಿಂದ ನಿದ್ರೆಯ ಗುಣಮಟ್ಟ ಉತ್ತಮವಾಗುವುದು

ಮಾವಿನ ಹಣ್ಣಿನಿಂದ ನಿದ್ರೆಯ ಗುಣಮಟ್ಟ ಉತ್ತಮವಾಗುವುದು

ರಾತ್ರಿ ವೇಳೆ ಕೆಲವು ತುಂಡು ಮಾವಿನ ಹಣ್ಣುಗಳನ್ನು ಸೇವನೆ ಮಾಡಿದರೆ, ಅದರಿಂದ ಹಸಿವು ಕಡಿಮೆ ಆಗುವುದು ಮತ್ತು ಅದೇ ರೀತಿಯಾಗಿ ಹೊಟ್ಟೆ ತುಂಬಾ ಭಾರವಾಗಿದೆ ಎಂದು ನಿಮಗೆ ಅನಿಸದು. ನಿಮಗೆ ಮಧ್ಯರಾತ್ರಿ ವೇಳೆ ಹಸಿವು ಕಾಡದು. ಮಾವಿನ ಹಣ್ಣು ದೇಹಕ್ಕೆ ತುಂಬಾ ಆರಾಮ ಕೂಡ ನೀಡುವುದು.

ಮಾವಿನ ಹಣ್ಣು ಶಕ್ತಿ ನೀಡಲಿದೆ

ಮಾವಿನ ಹಣ್ಣು ಶಕ್ತಿ ನೀಡಲಿದೆ

ಅಧಿಕ ಕ್ಯಾಲರಿ ಇರುವಂತಹ ಮಾಂಸವನ್ನು ತಿಂದರೆ ಮಾತ್ರ ಬಲಿಷ್ಠವಾಗಬಹುದು ಎಂದು ಕೆಲವು ಮಂದಿ ಆಲೋಚಿಸುವರು. ಅದಾಗ್ಯೂ, ಕೆಲವೊಂದು ಹಣ್ಣುಗಳಾಗಿರುವಂತಹ ಮಾವಿನ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಫ್ರಾಕ್ಟೋಸ್ ಇದೆ. ಮಾವಿನ ಹಣ್ಣನ್ನು ರಾತ್ರಿ ವೇಳೆ ಸೇವಿಸಿದರೆ ಅದರಿಂದ ದೇಹಕ್ಕೆ ಶಕ್ತಿ ಸಿಗುವುದು ಮಾತ್ರವಲ್ಲದೆ ಅನಾರೋಗ್ಯಕಾರಿ ಆಹಾರ ಸೇವನೆಯಿಂದ ಉಂಟಾಗುವ ತೂಕ ಹೆಚ್ಚಳ ಕೂಡ ಕಡಿಮೆ ಮಾಡಬಹುದು ಮತ್ತು ಬೆಳಗ್ಗೆ ಏಳುವಾಗ ಕೂಡ ನೀವು ತುಂಬಾ ಚುರುಕಾಗಿ ಇರಲಿದ್ದೀರಿ.

ತ್ವಚೆಯನ್ನು ಶುದ್ಧವಾಗಿಡುವುದು ಮಾವಿನ ಹಣ್ಣು

ತ್ವಚೆಯನ್ನು ಶುದ್ಧವಾಗಿಡುವುದು ಮಾವಿನ ಹಣ್ಣು

ನಮಗೆಲ್ಲರಿಗೂ ತಿಳಿದಿರುವಂತಹ ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಹೆಚ್ಚಾಗಿ ಇದೆ. ವಿಟಮಿನ್ ಸಿಯಿಂದಾಗಿ ಚರ್ಮವು ಆರೋಗ್ಯ ಹಾಗೂ ಶುದ್ಧವಾಗಿರುವುದು. ಇದರಿಂದಾಗಿ ರಾತ್ರಿ ವೇಳೆ ಮಾವಿನ ಹಣ್ಣಿನ ಸೇವನೆ ಮಾಡಿದರೆ ಅದರಿಂದ ಮರುದಿನ ಬೆಳಗ್ಗೆ ನಿಮ್ಮ ಚರ್ಮವು ಸುಧಾರಣೆ ಆಗುವುದು. ಬೆಳಗ್ಗೆ ಏಳುವಾಗ ಚರ್ಮವು ಯೌವನಯುತವಾಗಿ ಇರುವುದು.

ಮಾವಿನ ಹಣ್ಣು ರಕ್ತದ ಒತ್ತಡ ನಿಯಂತ್ರಿಸುವುದು

ಮಾವಿನ ಹಣ್ಣು ರಕ್ತದ ಒತ್ತಡ ನಿಯಂತ್ರಿಸುವುದು

ರಾತ್ರಿ ವೇಳೆ ಮಾವಿನ ಹಣ್ಣಿನ ಸೇವನೆ ಮಾಡುವ ದೊಡ್ಡ ಲಾಭ ಎಂದರೆ ಅದು ರಕ್ತದ ಒತ್ತಡ ನಿಯಂತ್ರಣ ಮಾಡುವುದು. ಮಾವಿನ ಹಣ್ಣಿನಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ. ಇದು ರಕ್ತದೊತ್ತಡ ನಿಯಂತ್ರಣ ಮಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ರಾತ್ರಿ ವೇಳೆ ಮಾವಿನ ಹಣ್ಣಿನ ಸೇವನೆ ಮಾಡಿದರೆ ಆಗ ನಿದ್ರಿಸುವ ವೇಳೆ ರಕ್ತದೊತ್ತಡವು ನಿಯಂತ್ರಣದಲ್ಲಿ ಇರುವುದು.

Most Read: ಮಾವಿನ ಎಲೆ: ಮಧುಮೇಹ, ಅಸ್ತಮಾ ರೋಗಕ್ಕೆ ರಾಮಬಾಣ

ಹೃದಯಕ್ಕೂ ಮಾವಿನ ಹಣ್ಣು ಒಳ್ಳೆಯದು

ಹೃದಯಕ್ಕೂ ಮಾವಿನ ಹಣ್ಣು ಒಳ್ಳೆಯದು

ಮಾವಿನ ಹಣ್ಣಿನಲ್ಲಿ ಪೊಟಾಶಿಯಂ ಅಂಶವು ಅಧಿಕವಾಗಿ ಇದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದಾಗಿ ನೀವು ಪ್ರತಿನಿತ್ಯ ರಾತ್ರಿ ವೇಳೆ ಮಾವಿನ ಹಣ್ಣು ಸೇವನೆ ಮಾಡಿ, ಪೊಟಾಶಿಯಂ ಅಂಶವನ್ನು ದೇಹಕ್ಕೆ ಸೇರಿಸಿಕೊಳ್ಳಬಹುದು.

ಕ್ಯಾನ್ಸರ್ ನ್ನು ತಡೆಯುವ ಮಾವಿನ ಹಣ್ಣು

ಕ್ಯಾನ್ಸರ್ ನ್ನು ತಡೆಯುವ ಮಾವಿನ ಹಣ್ಣು

ಮಾವಿನ ಹಣ್ಣಿನಲ್ಲಿ ಇರುವಂತಹ ಫೆನೊಲಿಕ್ ಅಂಶವು ಕ್ಯಾನ್ಸರ್ ಬರುವಂತಹ ಅಪಾಯವನ್ನು ತಡೆಯುವುದು ಎಂದು ಅಧ್ಯಯನಗಳು ಹೇಳಿವೆ. ಇದರಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಅಂಶವು ತುಂಬಾ ಪರಿಣಾಮಕಾರಿ ಆಗಿರಲಿದೆ. ಕ್ಯಾನ್ಸರ್ ನ ಬೆಳವಣಿಗೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ನ್ನು ಇದು ತೆಗೆದು ಹಾಕುವುದು.

ಗರ್ಭಿಣಿಯರಿಗೆ ತುಂಬಾ ಉಪಯೋಗಕಾರಿ

ಗರ್ಭಿಣಿಯರಿಗೆ ತುಂಬಾ ಉಪಯೋಗಕಾರಿ

ಖನಿಜಾಂಶಗಳಿಂದ ಸಮೃದ್ಧ ಆಗಿರುವಂತಹ ಮಾವಿನ ಹಣ್ಣು ಗರ್ಭಿಣಿಯರಿಗೆ ತುಂಬಾ ಪರಿಣಾಮಕಾರಿಯಾಗಿರಲಿದೆ. ಮಾವಿನ ಹಣ್ಣಿನಲ್ಲಿ ಇರುವಂತಹ ಕಬ್ಬಿನಾಂಶವು ಗರ್ಭಿಣಿಯರಿಗೆ ತುಂಬಾ ನೆರವು ನೀಡಲಿದೆ. ರಾತ್ರಿ ವೇಳೆ ಮಾವಿನ ಹಣ್ಣಿನ ಸೇವನೆ ಮಾಡಿದರೆ ಅದರಿಂದ ಗರ್ಭಧಾರಣೆ ವೇಳೆ ಕಾಡುವಂತಹ ರಕ್ತ ಹೀನತೆ ಸಮಸ್ಯೆ ನಿವಾರಣೆ ಮಾಡಬಹುದು.

ಮಹಿಳೆಯರು ಮತ್ತು ಪುರುಷರ ಸಂತಾನೋತ್ಪತ್ತಿಗೆ ಲಾಭಕಾರಿ

ಮಹಿಳೆಯರು ಮತ್ತು ಪುರುಷರ ಸಂತಾನೋತ್ಪತ್ತಿಗೆ ಲಾಭಕಾರಿ

ಮಾವಿನ ಹಣ್ಣಿನಲ್ಲಿ ವಿಟಮಿನ್ ಇ ಇದೆ. ಇದರು ಸಂತಾನೋತ್ಪತ್ತಿಯಲ್ಲಿ ಹಾರ್ಮೋನುಗಳ ಸ್ರವಿಸುವಿಕೆಗೆ ತುಂಬಾ ನೆರವಾಗುವುದು. ರಾತ್ರಿ ವೇಳೆ ಮಾವಿನ ಹಣ್ಣು ತಿಂದರೆ ಅದರಿಂದ ರಾತ್ರಿ ಬದುಕು ತುಂಬಾ ಚೆನ್ನಾಗಿ ಇರುವುದು ಎಂದು ಹೇಳಲಾಗುವುದು. ಈ ಲಾಭವು ಪುರುಷರಿಗೆ ತುಂಬಾ ಲಾಭಕಾರಿ ಆಗಿರಲಿದೆ. ಇದರಿಂದ ಮಾವಿನ ಹಣ್ಣು ಸಂಪೂರ್ಣ ಕುಟುಂಬಕ್ಕೆ ತುಂಬಾ ಒಳ್ಳೆಯದು.

Most Read: ನೆನಪಿಡಿ ಅತಿಯಾದ ಮಾವಿನ ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ!

ಅಸ್ತಮಾ ಲಕ್ಷಣಗಳ ನಿವಾರಣೆ ಮಾಡುವುದು

ಅಸ್ತಮಾ ಲಕ್ಷಣಗಳ ನಿವಾರಣೆ ಮಾಡುವುದು

ಅಸ್ತಮಾ ಲಕ್ಷಣವು ರಾತ್ರಿ ವೇಳೆ ತುಂಬಾ ಕೆಟ್ಟದಾಗುವುದು. ಮಾವಿನ ಹಣ್ಣಿನಲ್ಲಿ ಉರಿಯೂತ ಶಮನಕಾರಿ ಗುಣಗಳು ಇದೆ. ಇದು ವಾಯುನಾಳದಲ್ಲಿ ಇರುವಂತಹ ಉರಿಯೂತವನ್ನು ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು. ಇದರಿಂದ ಅಸ್ತಮಾದ ಲಕ್ಷಣಗಳನ್ನು ನಿವಾರಣೆ ಮಾಡಲು ರಾತ್ರಿ ವೇಳೆ ಮಾವಿನ ಹಣ್ಣಿನ ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

ಕಣ್ಣಿನ ದೃಷ್ಟಿಗೂ ಮಾವಿನ ಹಣ್ಣು ಒಳ್ಳೆಯದು

ಕಣ್ಣಿನ ದೃಷ್ಟಿಗೂ ಮಾವಿನ ಹಣ್ಣು ಒಳ್ಳೆಯದು

ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ತುಂಬಾ ಸಮೃದ್ಧವಾಗಿ ಇದೆ. ಇದರಿಂದಾಗಿ ಇದು ಕಣ್ಣಿನ ದೃಷ್ಟಿಗೂ ಒಳ್ಳೆಯದು. ರಾತ್ರಿ ನೀವು ಮಲಗುವ ಮೊದಲು ವಿಟಮಿನ್ ಎ ಸೇವನೆ ಮಾಡಿದರೆ, ಅದು ಕಣ್ಣಿನ ದೃಷ್ಟಿಯನ್ನು ಕಾಪಾಡುವುದು. ಇದರಿಂದಾಗಿ ರಾತ್ರಿ ಮಲಗುವ ಮೊದಲು ಕೆಲವು ತುಂಬಾ ಮಾವಿನ ಹಣ್ಣು ತಿಂದು ಕಣ್ಣಿನ ದೃಷ್ಟಿಯನ್ನು ಉತ್ತಮ ಪಡಿಸಿಕೊಳ್ಳಬಹುದು.

ಮಾವಿನ ಹಣ್ಣಿನಲ್ಲಿ ಇರುವ ಇತರ ಕೆಲವು ಗುಣಗಳು

ಮಾವಿನ ಹಣ್ಣಿನಲ್ಲಿ ಇರುವ ಇತರ ಕೆಲವು ಗುಣಗಳು

ಮಾವಿನ ಹಣ್ಣು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು, ಮೆದುಳಿನ ಪರಿಸ್ಥಿತಿ ಉತ್ತಮಪಡಿಸುವುದು, ಮೂಳೆ ಆರೋಗ್ಯ ಸುಧಾರಿಸುವುದು ಮತ್ತು ವಯಸ್ಸಾಗುವ ಲಕ್ಷಣಗಳನ್ನು ಇದು ತಡೆಯುವುದು. ಒಂದು ನೂರು ಗ್ರಾಂ ಮಾವಿನ ಹಣ್ಣಿನಲ್ಲಿ ಕೇವಲ 67 ಕೆಸಿಎಎಲ್ ಮಾತ್ರ ಇದೆ. ಕೆಲವು ಶತಮಾನಗಳ ಮೊದಲು ಮಹಿಳೆಯರು ತೂಕ ಇಳಿಸಿಕೊಳ್ಳಲು ಮಾವಿನ ಹಣ್ಣನ್ನು ಬಳಸಿಕೊಳ್ಳುತ್ತಾ ಇದ್ದರು. ರಾತ್ರಿ ವೇಳೆ ಒಂದು ಮಾವಿನ ಹಣ್ಣು ತಿಂದರೆ ಆಗ ವಾರದಲ್ಲಿ ಸುಮಾರು 1.5 ಕೆಜಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಈ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಆಗ ತಿಂಗಳಲ್ಲಿ ಸುಮಾರು 6-7 ಕೆಜಿ ತೂಕ ಇಳಿಸಿಕೊಳ್ಳಬಹುದು. ಹೀಗಾಗಿ ತೂಕ ಇಳಿಕೆಗೂ ಇದು ಸಹಕಾರಿ.

English summary

Benefits of eating mango at night

Eating fruits at night is an excellent alternative to pastry if you are hungry. But not all fruits are beneficial for your health. Some of them may make your sleep disquieting and even add several kilograms to your weight. So which fruits is it better to eat? To answer this question, we will tell you about the benefits of eating mango at night, so if you are interested why mango, go on reading!
Story first published: Wednesday, April 17, 2019, 10:21 [IST]
X
Desktop Bottom Promotion