For Quick Alerts
ALLOW NOTIFICATIONS  
For Daily Alerts

    ಶಿಶ್ನದ ಸಮಸ್ಯೆಗಳ ಬಗ್ಗೆ ಕೇಳಲು ನಾಚಿಕೆಪಡುವ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರಗಳು

    |

    ಪುರುಷರು ಹಾಗೂ ಮಹಿಳೆಯರೇ ಆಗಿರಲಿ ತಮ್ಮ ಜನನಾಂಗ ಅಥವಾ ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದ್ದನ್ನು ಚರ್ಚೆ ಮಾಡುವುದು ತುಂಬಾ ಕಡಿಮೆ. ಯಾಕೆಂದರೆ ನಾಚಿಕೆ ಹಾಗೂ ಮುಜುಗರದಿಂದಾಗಿ ಹೀಗೆ ಮಾಡುತ್ತಾರೆ. ಆದರೆ ಹೆಚ್ಚಿನ ಜನರು ಕೆಲವೊಂದು ಲೈಂಗಿಕ ಸಮಸ್ಯೆಗಳನ್ನು ಕೂಡ ಮುಚ್ಚುಮರೆ ಮಾಡುವರು. ಆದರೆ ಪುರುಷರು ತಮ್ಮ ಶಿಶ್ನದ ಬಗ್ಗೆ ಕೇಳುವಂತಹ ಪ್ರಶ್ನೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇದರ ಬಗ್ಗೆ ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.

    ಕೆಲವೊಮ್ಮೆ ಪುರುಷರು ಮೂತ್ರ ಮಾಡುವ ವೇಳೆ ಸಾಮಾನ್ಯವಾಗಿ ಎರಡು ಹನಿ ಸ್ವಲ್ಪ ಹೊತ್ತಿನ ಬಳಿಕ ಬರುವುದು. ಅದೇ ರೀತಿಯಾಗಿ ನೀವು ಪರಾಕಾಷ್ಠೆ ತಲುಪಿದ ಕೆಲವು ನಿಮಿಷ ಬಳಿಕ ಒಂದೆರಡು ಹನಿ ವೀರ್ಯವು ಹೊರಗೆ ಬರುವುದು ಎಂದು ಮೂತ್ರಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ವೀರ್ಯವು ಸ್ವಲ್ಪ ಹೆಚ್ಚಿನ ಸ್ನಿಗ್ದತೆ ಹೊಂದಿರುವುದು. ಇದರಿಂದಾಗಿ ಗುರುತ್ವವು ಮೂತ್ರನಾಳದಲ್ಲಿ ಕೆಲಸ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು. ಶಿಶ್ನವು ಒದ್ದೆಯಾದ ವೇಳೆ ಅದು ಕುಗ್ಗುತ್ತದೆಯಾ? ಮುಂದೆ ಓದಿ 

    ಶಿಶ್ನ ಕುಗ್ಗಲು ಕಾರಣ

    ಶಿಶ್ನ ಕುಗ್ಗಲು ಕಾರಣ

    ಜಾರ್ಜ್ ಕಾಸ್ಟಾಂಜಾ(ಸಿನ್ಫೆಲ್ಡ್ ಹುಡುಗ) ಹೇಳುವ ಹೊರ ತಾಗಿಯೂ, ಆರ್ದ್ರತೆಯು ಎಲ್ಲವನ್ನು ಮಾಡುವುದಿಲ್ಲ. ಶಿಶ್ನವನ್ನು ತಂಪಾದ ಗಾಳಿ ಅಥವಾ ನೀರಿಗೆ ಒಡ್ಡುವುದರಿಂದ ಅದು ಕುಗ್ಗುವುದು ಎಂದು ತಜ್ಞರು ಹೇಳುತ್ತಾರೆ. ವೃಷಣವು ದೇಹದ ಹೊರಭಾಗದಲ್ಲಿ ಇರುವುದು. ಯಾಕೆಂದರೆ ಅದಕ್ಕೆ ತನ್ನದೇ ಆಗಿರುವಂತಹ ತಾಪಮಾನ ಬೇಕಾಗಿರುವುದು. ಇದರಿಂದಾಗಿ ಅದು ವೀರ್ಯವನ್ನು ಉತ್ಪಾದಿಸುವುದು. ವೃಷಣದಲ್ಲಿ ಇರುವಂತಹ ಸ್ನಾಯುಗಳು ಮತ್ತು ಸ್ಪೆರ್ಮಾಟಿಕ್ ಕಾರ್ಡ್ ಶಿಶ್ನದ ಮೂಲಕವಾಗಿ ವೃಷಣದ ಭಾಗಕ್ಕೆ ತಲುಪುವುದು. ಇದರಿಂದ ನಿಮಗೆ ಚಳಿಯಾದ ವೇಳೆ ದೇಹವು ವೃಷಣವನ್ನು ಮೇಲಕ್ಕೆ ಎತ್ತಲ್ಪಡುವುದು. ಇದರೊಂದಿಗೆ ಶಿಶ್ನದ ಸ್ನಾಯುಗಳು ಮತ್ತು ಅಂಗಾಂಶಗಳು ಕೂಡ ಬಿಗಿಯಾಗಿ ಅದು ಕುಗ್ಗುವಂತೆ ಮಾಡುವುದು ಎಂದು ತಜ್ಞರು ಹೇಳುತ್ತಾರೆ .(ಬಿಸಿಗೆ ಮೈಯೊಡ್ಡಿದಾಗ ಇದು ವಿರುದ್ಧವಾಗಿರುವುದು. ಈ ವೇಳೆ ವೃಷಣ ಮತ್ತು ಶಿಶ್ನವು ದೇಹದಿಂದ ಸ್ವಲ್ಪ ದೂರದಲ್ಲಿ ನೇತಾಡುತ್ತಾ ಇರುವುದು ಎಂದು ಅವರು ತಿಳಿಸುತ್ತಾರೆ.)

    ಪ್ರತೀ ದಿನ ಬೆಳಗ್ಗೆ ಟೆಂಟ್ ಹಾಕುವುದು ಯಾಕೆ?

    ಪ್ರತೀ ದಿನ ಬೆಳಗ್ಗೆ ಟೆಂಟ್ ಹಾಕುವುದು ಯಾಕೆ?

    ಬೆಳಗ್ಗಿನ ಅವಧಿಯಲ್ಲಿ ಪುರುಷರ ಟೆಸ್ಟೋಸ್ಟೆರಾನ್ ಮಟ್ಟವು ಏರುಗತಿಯಲ್ಲಿ ಇರುವುದು. ಇದು ನೀವು ಉತ್ಸಾಹವುಳ್ಳ ವ್ಯಕ್ತಿಯೆಂದು ತೋರಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ನೀವು ಉದ್ರೇಕಗೊಳ್ಳದೆ ಇದ್ದರೂ ಶಿಶ್ನವು ನಿಮಿರುವುದು. ಇದು ಸರಿಯಾದ ಲೈಂಗಿಕ ಕ್ರಿಯೆಯನ್ನು ಕಾಪಾಡಲು ಇದು ನೆರವಾಗುವುದು. ನೀವು ಇದನ್ನು ಬಳಸದೆ ಇದ್ದರೆ ಆಗ ಅದನ್ನು ನೀವು ಕಳಕೊಳ್ಳುತ್ತೀರಿ ಎನ್ನುವ ಮಾತಿನಂತೆ ಇದು ಇರುವುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.

    ಕೆಲವು ಪುರುಷರಿಗೆ ಸ್ವಪ್ನ ಸ್ಖಲನವು ಆಗುವುದು ಯಾಕೆ?

    ಕೆಲವು ಪುರುಷರಿಗೆ ಸ್ವಪ್ನ ಸ್ಖಲನವು ಆಗುವುದು ಯಾಕೆ?

    ಇದು ಟೆಸ್ಟೋಸ್ಟೆರಾನ್ ಹಾರ್ಮೋನು ಮಟ್ಟ ಏರಿಕೆಯಾಗುವ ಪರಿಣಾಮದಿಂದ ಹೀಗೆ ಆಗುವುದು. ನಿದ್ರೆಯಲ್ಲೂ ಹಾರ್ಮೋನು ಹೆಚ್ಚಾಗುವುದು ಎಂದು ತಜ್ಞರು ತಿಳಿಸಿದ್ದಾರೆ. ವಯಸ್ಸಾದ ಪುರುಷರಿಗಿಂತ ಹದಿಹರೆಯದವರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಹೆಚ್ಚಿಗೆ ಇರುವ ಕಾರಣದಿಂದಾಗಿ ಇವರಿಗೆ ಸ್ವಪ್ನ ಸ್ಖಲನವು ಹೆಚ್ಚಾಗುವುದು. ಇದಕ್ಕೆ ಕೆಲವೊಂದು ಉಪಾಖ್ಯಾನ ಸಾಕ್ಷ್ಯವಿದೆ. ಆದರೆ ಇದು ದೃಢಪಟ್ಟಿಲ್ಲ. ಪರಾಕಾಷ್ಠೆಯ ಮಧ್ಯೆ ಇಂತಹ ಸ್ವಪ್ನ ಸ್ಖಲನವು ಬೀಳುವುದು ಹೆಚ್ಚು ಮತ್ತು ಇದರಿಂದ ನಿಮ್ಮ ದೇಹವು ಹೊಸ ವೀರ್ಯದ ಉತ್ಪತ್ತಿ ಮಾಡುವುದು ಎನ್ನುತ್ತಾರೆ ವೈದ್ಯರು.

    ಕೆಲವೊಂದು ಸಲ ಮೂತ್ರವು ಯಾಕೆ ತುಂಬಾ ವಿಚಿತ್ರ ಕೋನದಲ್ಲಿ ಹೊರಬರುವುದು?

    ಕೆಲವೊಂದು ಸಲ ಮೂತ್ರವು ಯಾಕೆ ತುಂಬಾ ವಿಚಿತ್ರ ಕೋನದಲ್ಲಿ ಹೊರಬರುವುದು?

    ಕೆಲವೊಂದು ಸಲ ಮೂತ್ರವು ತುಂಬಾ ವಿಚಿತ್ರ ಕೋನದಲ್ಲಿ ವಿಸರ್ಜನೆಯಾಗುವುದು. ಸೆಕ್ಸ್ ಬಳಿಕ, ಹಸ್ತಮೈಥುನ ಅಥವಾ ಹಾಸಿಗೆಯಲ್ಲಿ ಸ್ಖಲನವಾದ ಕೆಲವು ಸಮಯದ ಬಳಿಕ ನೀವು ಮೂತ್ರ ವಿಸರ್ಜನೆ ಮಾಡಿದರೆ ಹೀಗೆ ಆಗುವುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದು ಯಾಕೆ ಎಂದು ನೀವು ಕೇಳಬಹುದು. ಯಾಕೆಂದರೆ ಪರಾಕಾಷ್ಠೆ ಬಳಿಕ ಸ್ವಲ್ಪ ವೀರ್ಯವು ಇನ್ನು ನಿಮ್ಮ ಮೂತ್ರನಾಳದಲ್ಲಿ ಇರುವುದು. ಇದರಿಂದ ಮೂತ್ರಕ್ಕೆ ಹೊರಬರಲು ಅಡ್ಡಿಯಾಗುವುದು. ಇದರಿಂದಾಗಿ ಸಾಮಾನ್ಯವಾಗಿ ಮೂತ್ರ ವಿಸರ್ಜನೆ ಮಾಡುವುದಕ್ಕಿಂತ ಇದು ಭಿನ್ನವಾಗಿರುವುದು. ಇದು ಅಂಗಾಂಶಗಳಲ್ಲಿ ಗಾಯ ಅಥವಾ ಎಸ್ ಟಿಡಿಯ ಲಕ್ಷಣವೂ ಆಗಿರಬಹುದು ಎಂದು ತಜ್ಞರು ಹೇಳುತ್ತಾರೆ.

    Most Read:ಪುರುಷರ ಆರೋಗ್ಯ: ಶಿಶ್ನವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸರಳ ಟಿಪ್ಸ್

    ನಿಜವಾದ ಉದ್ದ

    ನಿಜವಾದ ಉದ್ದ

    ಸಾಮಾನ್ಯವಾಗಿ ಕಣ್ಣಿಗೆ ಕಾಣುವ ಭಾಗವನ್ನೇ ಪುರುಷರು ನಿಜವಾದ ಉದ್ದವೆಂದು ಪರಿಗಣಿಸುತ್ತಾರೆ. ವಾಸ್ತವವಾಗಿ ಸುಮಾರು ಅರ್ಧದಷ್ಟು ಭಾಗ ದೇಹದ ಒಳಗೇ ಇದ್ದು ಉಳಿದ ಭಾಗಕ್ಕೆ ಅಗತ್ಯವಾದ ಆಧಾರವನ್ನು ಒದಗಿಸುತ್ತದೆ.

    ಪದೇ ಪದೇ ಮೂರರಿಂದ ಐದು ಬಾರಿ ಉದ್ರೇಕವಾಗುವುದು ಯಾಕೆ?

    ಪದೇ ಪದೇ ಮೂರರಿಂದ ಐದು ಬಾರಿ ಉದ್ರೇಕವಾಗುವುದು ಯಾಕೆ?

    ರಾತ್ರಿಯ ಗಾಢ ನಿದ್ದೆಯ ಸಮಯದಲ್ಲಿ ಅಥವಾ ಕಣ್ಣುಗುಡ್ಡೆಗಳು ತೀವ್ರ ಚಲನೆಯನ್ನು ತೋರುವ (andom eye movement (REM) ಸಮಯದಲ್ಲಿ ಶಿಶ್ನವೂ ಉದ್ರೇಕಗೊಳ್ಳುತ್ತದೆ. ಇದಕ್ಕೆ nocturnal penile tumescence ಎಂದು ಕರೆಯುತ್ತಾರೆ. ಈ ಸಮಯದಲ್ಲೇಕೆ ಹೀಗೆ ಆಗುತ್ತದೆ ಎಂಬುದಕ್ಕೆ ಸ್ಪಷ್ಟವಾದ ವಿವರಣೆ ಇಲ್ಲ. ಆದರೆ ಈ ಸಮಯದಲ್ಲಿ ಮೂತ್ರ ವಿಸರ್ಜನೆಯಾಗುವುದನ್ನು ತಡೆಯಲು ನಿಸರ್ಗವೇ ಈ ವ್ಯವಸ್ಥೆ ಮಾಡಿದೆ ಎಂದು ಭಾವಿಸಲಾಗಿದೆ. ರಾತ್ರಿಯ ಸಮಯದಲ್ಲಿ ಮೂತ್ರಕೋಶ ಬೇಗಬೇಗನೇ ತುಂಬುತ್ತದೆ ಹಾಗೂ ಶಿಶ್ನದ ಬಳಿಕ ನರಗಳನ್ನು ಪ್ರಚೋದಿಸಿ ಉದ್ರೇಕಕ್ಕೆ ಕಾರಣವಾಗಬಹುದು. ಆದರೆ ಈ ತರ್ಕ ಸರಿಯೆಂದಾದರೆ ಮಹಿಳೆಯರಿಗೆ ಈ ವ್ಯವಸ್ಥೆ ಇರಬಾರದಿತ್ತು. ವಾಸ್ತವದಲ್ಲಿ ಮಹಿಳೆಯರಿಗೂ ಹೆಚ್ಚೂ ಕಡಿಮೆ ಇದೆ ಬಗೆಯ ಆದರೆ ಚಂದ್ರನಾಡಿ ಉದ್ರೇಕಗೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಇದಕ್ಕೆ nocturnal clitoral tumescenceಎಂದು ಕರೆಯುತ್ತಾರೆ. ಹಾಗಾಗಿ ಮೂತ್ರ ವಿಸರ್ಜನೆಯನ್ನು ತಡೆಯಲೆಂದೇ ಈ ಉದ್ರೇಕಗಳು ಸಂಭವಿಸುತ್ತವೆ ಎಂಬುದು ಸರಿಯಾದ ಉತ್ತರವಾಗಲಾರದು.

    ಶಿಶ್ನದಲ್ಲಿ ಮೂಳೆಯಿಲ್ಲ, ಆದರೂ ಇದು ಮುರಿಯಬಹುದೇ?

    ಶಿಶ್ನದಲ್ಲಿ ಮೂಳೆಯಿಲ್ಲ, ಆದರೂ ಇದು ಮುರಿಯಬಹುದೇ?

    ಸಸ್ತನಿಗಳಲ್ಲಿ ಹೆಚ್ಚಿನ ಪ್ರಾಣಿಗಳ ಶಿಶ್ನದಲ್ಲಿ ಮೂಳೆ ಇಲ್ಲ. ಅಚ್ಚರಿ ಎಂದರೆ ನಾಯಿ ಮತ್ತು ಇಲಿ ಮೊದಲಾದ ಕೆಲವು ಸಸ್ತನಿಗಳ ಶಿಶ್ನದಲ್ಲಿ ಮೂಳೆ ಇದೆ. ಇದಕ್ಕೆ baculum ಎಂದು ಕರೆಯುತ್ತಾರೆ. ಮೂಳೆ ಇಲ್ಲ ಎಂದ ಮಾತ್ರಕ್ಕೇ ಇದು ಮುರಿಯಬಾರದೆಂದೇನೂ ಇಲ್ಲ. ತೀವ್ರಗತಿಯ ಹಾಗೂ ಮುರಿಯಲು ಸಂಭವವಿರುವ ಯಾಗುದೇ ರತಿಭಂಗಿಯಲ್ಲಿ ಶಿಶ್ನ ಮುರಿಯವ ಸಾಧ್ಯತೆ ಇದೆ. ಉದ್ರೇಕಿತ ಸ್ಥಿತಿಯಲ್ಲಿದ್ದಾಗ ಮಂಚದ ಮೇಲಿನಿಂದ ಕೆಳಕ್ಕೆ ಬಿದ್ದಾಗಲೂ ಅಪಘಾತವಾಗುವ ಸಂಭವವಿದೆ. ಈ ಘಾಸಿಗೆ Penile fracture ಎಂದು ಕರೆಯುತ್ತಾರೆ. ವಾಸ್ತವಾಗಿ ಈ ಘಾಸಿಯಲ್ಲಿ corpora cavernosa ಎಂಬ ಭಾಗವನ್ನು ಸುತ್ತುವರೆದಿರುವ ಅಂಗಾಂಶ ಹರಿಯುತ್ತದೆ.

    Most Read:ಪುರುಷರಿಗೆ ಶಿಶ್ನದಲ್ಲಿ ಯೀಸ್ಟ್ ಇನ್‌ಫೆಕ್ಷನ್ ಆದರೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

    ಶಿಶ್ನದ ಗಾತ್ರ ಎಷ್ಟಿರುವುದು?

    ಶಿಶ್ನದ ಗಾತ್ರ ಎಷ್ಟಿರುವುದು?

    ಭೂಮಿ ಮೇಲಿರುವ ಪ್ರತಿಯೊಬ್ಬ ಪುರುಷನಿಗೂ ತನ್ನ ಶಿಶ್ನದ ಗಾತ್ರದ ಬಗ್ಗೆ ಅಸಮಾಧಾನವೆನ್ನುವುದು ಇದ್ದೇ ಇರುತ್ತದೆ. ಆದರೆ ಸರಾಸರಿ ಶಿಶ್ನವು ನಿಮಿರಿದಾಗ 4.7 ನಿಂದ 6.3 ಇಂಚುಗಳಷ್ಟು ಇರುವುದು. ಇದು ನೀವು ಭಾವಿಸಿರುವುದಕ್ಕಿಂತಲೂ ಸಣ್ಣದು. ಸಣ್ಣ ಶಿಶ್ನವು 2.8 ಇಂಚುಗಳಿಗಿಂತ ಸಣ್ಣದು ಮತ್ತು ನಿಮಿರಿದಾಗ 4.7 ಇಂಚು ಆಗುವುದು. ಆದರೆ ಲೈಂಗಿಕ ಕ್ರಿಯೆ ವೇಳೆ ಇದರಲ್ಲಿ ಯಾವುದೇ ಕೊರತೆ ಬರದು. ಸರಾಸರಿ ಶಿಶ್ನದ ಗಾತ್ರಕ್ಕಿಂತಲೂ ಕೆಲವೊಮ್ಮೆ ಸಣ್ಣ ಗಾತ್ರದ ಶಿಶ್ನವಿದ್ದರೂ ಇದು ಸರಿಯಾಗಿಯೇ ಕಾರ್ಯ ನಿರ್ವಹಿಸುವುದು. ಅವು ನಿಮಿರುವುದು, ಸ್ಖಲನ ವಾಗುವುದು ಮತ್ತು ಹಸ್ತಮೈಥುನ ಮಾಡಬಹುದು. ಎಲ್ಲವೂ ಸಾಮಾನ್ಯ ವಾಗಿರುವುದು. ಸಮ್ಯೆಯೆಂದರೆ ನಿಮ್ಮ ಆಲೋಚನೆ. ಇದನ್ನು ಬಿಡಿ.

    ಶಿಶ್ನದ ಗಾತ್ರವನ್ನು ದೊಡ್ಡದು ಮಾಡಬಹುದೇ?

    ಶಿಶ್ನದ ಗಾತ್ರವನ್ನು ದೊಡ್ಡದು ಮಾಡಬಹುದೇ?

    ಕೆಲವೊಂದು ಶಸ್ತ್ರಚಿಕಿತ್ಸೆ ಮೂಲಕ ಶಿಶ್ನದ ಗಾತ್ರವನ್ನು ದೊಡ್ಡದು ಮಾಡಬಹುದು ಎಂದು ಭರವಸೆ ನೀಡಲಾಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ಅಡ್ಡಪರಿಣಾಮಗಳು ಕಾಣಿಸಿ ಕೊಂಡಿಲ್ಲವೆಂದು ಯಾರೂ ಇದುವರೆಗೆ ಹೇಳಿಲ್ಲ. ಶಸ್ತ್ರಚಿಕಿತ್ಸೆಯು ತುಂಬಾ ದುಬಾರಿ, ಅಪಾಯಕಾರಿ, ನೋವಿನಿಂದ ಕೂಡಿರುವುದು ಮತ್ತು ಇದು ನಿಮ್ಮ ಲೈಂಗಿಕ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ಅದಾಗ್ಯೂ, ಯಾರಾದರೂ ಇದನ್ನು ಆಯ್ಕೆ ಮಾಡಿದರೆ ಕೇವಲ 2 ಸೆ.ಮೀ.ನಷ್ಟು ಮಾತ್ರ ಗಾತ್ರ ಹಿಗ್ಗಿಸಲು ಸಾಧ್ಯ. ಇಷ್ಟಕ್ಕೆ ದುಬಾರಿ ವೆಚ್ಚ ಮಾಡುವುದೇ?

    Most Read:ಪುರುಷರು ತಮ್ಮ ಶಿಶ್ನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳಲು ನೈಸರ್ಗಿಕ ಪರಿಹಾರ ಸೂತ್ರಗಳು

    ಪೇಯ್ರೋನಿ ಕಾಯಿಲೆ ಎಂದರೇನು?

    ಪೇಯ್ರೋನಿ ಕಾಯಿಲೆ ಎಂದರೇನು?

    ಶಿಶ್ನದ ಒಳಭಾಗದಲ್ಲಿ ನಾರಿನಂತಹ ಅಂಗಾಂಶದ ಬೆಳವಣಿಗೆಯ ಮೂಲಕ ಶಿಶ್ನ ನಿಮಿರಿದಾಗ ಒಂದು ಕಡೆ ಬಾಗಿದ ಹಾಗೂ ಪ್ರವೇಶ ಪಡೆಯುವಾಗ ನೋವಿನ ಅನುಭವ ನೀಡುತ್ತದೆ. ಪರಿಣಾಮವಾಗಿ ಸಂಗಾತಿಯೊಂದಿಗೆ ಮಿಲನ ಸಾಧ್ಯವಾಗದೇ ಹೋಗುತ್ತದೆ ಮತ್ತು ನಿಮಿರುತನವನ್ನು ಉಳಿಸಿಕೊಳ್ಳಲೂ ಸಾಧ್ಯವಾಗದೇ ವೈಮನಸ್ಯ ಅಥವಾ ದಾಂಪತ್ಯದಲ್ಲಿ ಅಸಂತೃಪ್ತಿ ಮೊದಲಾದ ಪರೋಕ್ಷ ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ತೊಂದರೆ ತಾನಾಗಿಯೇ ಕಡಿಮೆಯಾಗುತ್ತದೆ ಅಥವಾ ಕಾಲಕ್ರಮೇಣ ಉಲ್ಬಣ ಗೊಳ್ಳಲೂಬಹುದು.

    ಶಿಶ್ನದ ಕ್ಯಾನ್ಸರ್ ಅಥವಾ ಶಿಶ್ನದ ಕಾರ್ಸಿನೋಮಾ

    ಶಿಶ್ನದ ಕ್ಯಾನ್ಸರ್ ಅಥವಾ ಶಿಶ್ನದ ಕಾರ್ಸಿನೋಮಾ

    ಶಿಶ್ನದ ಒಳಭಾಗದ ಯಾವುದೇ ಅಂಗಾಂಶದ ಜೀವಕೋಶಗಳು ನಿಯಂತ್ರಣ ಮೀರಿ ಬೆಳವಣಿಗೆ ಪಡೆಯುವುದುದೇ ಶಿಶ್ನದ ಕ್ಯಾನ್ಸರ್ ಆಗಿದೆ. ಸಾಮಾನ್ಯವಾಗಿ ಶಿಶ್ನದ ತುದಿಯ ಭಾಗದಲ್ಲಿ ಚಿಕ್ಕ, ನೋವಿಲ್ಲದ ಹಾಗೂ ಸಾಮಾನ್ಯ ಆಕಾರವನ್ನು ಬದಲಿಸುವ ಚಿಕ್ಕ ಗಂಟಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ನಿಧಾನವಾಗಿ ಬೆಳೆಯುತ್ತಾ ಶಿಶ್ನದ ಇತರ ಭಾಗಕ್ಕೂ ವ್ಯಾಪಿಸತೊಡಗುತ್ತದೆ. ಕೆಲವೊಮ್ಮೆ ಈ ಗಂಟಿನಿಂದ ರಕ್ತ ಅಥವಾ ದುರ್ವಾಸನೆಯ ದ್ರವವೂ ಸೂಸಬಹುದು.

    ಹರ್ಪಿಸ್ (Herpes)ಎಂದರೇನು?

    ಹರ್ಪಿಸ್ (Herpes)ಎಂದರೇನು?

    ಇದೊಂದು Herpes Simplex ಎಂಬ ವೈರಸ್ಸುಗಳ ಮೂಲಕ ಹರಡುವ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಇದು ಜನನಾಂಗಗಳು ಮತ್ತು ಬಾಯಿ (ತೇವಾಂಶ ಅತಿ ಹೆಚ್ಚು ಇರುವ ಮತ್ತು ಗಾಳಿಗೆ ತೆರೆದಿರುವ ಭಾಗಗಳು) ಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಹಿಳೆಯರಲ್ಲಿ ಯೋನಿಯ ಹೊರಭಾಗದಲ್ಲಿ ಹಾಗೂ ಪುರುಷರಲ್ಲಿ ಶಿಶ್ನದ ತುದಿಯಲ್ಲಿ ಮತ್ತು ಮುಂದೊಗಲಿನ ಒಳಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಈ ಗುಳ್ಳೆಗಳು ಎದ್ದಾಗ ಮೂತ್ರವಿಸರ್ಜನೆಯ ಸಮಯದಲ್ಲಿ ಅಪಾರವಾದ ಉರಿ ಕಾಣಿಸಿಕೊಳ್ಳುತ್ತದೆ ಹಾಗೂ ಸಂಭೋಗವೂ ತೀರಾ ನೋವಿನಿಂದ ಕೂಡಿರುತ್ತದೆ. ಸದಾ ಒಳಗಿನಿಂದ ಸೂಜಿ ಚುಚ್ಚಿದಂತಹ ಅನುಭವ ಮತ್ತು ಬೆಂಕಿ ಬಿದ್ದಂತೆ ಉರಿಯಲು ಪ್ರಾರಂಭವಾಗುತ್ತದೆ.

    English summary

    Answers To Penis Questions You are Shy to ask!

    Men tend to have a high degree of sensitivity in two areas The size of their penis and heir financial status. These two topics drive many conversations, perceptions and insecurities in how they feel about women, other men, and society’s perception of who they are as men.
    Story first published: Friday, January 25, 2019, 13:50 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more