For Quick Alerts
ALLOW NOTIFICATIONS  
For Daily Alerts

ಸ್ನಾಯು ನೋವು ನಿವಾರಣೆಗೆ ನೈಸರ್ಗಿಕ ಮನೆಮದ್ದುಗಳು

|

ಸ್ನಾಯು ನೋವುಗಳು ಅಥವಾ ಸ್ನಾಯುಶೂಲೆ ಜೀವಮಾನದಲ್ಲಿ ಪ್ರತಿಯೊಬ್ಬರು ಎದುರಿಸುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ಸ್ನಾಯು ನೋವಿಗೆ ಕೆಲವು ಕಾರಣಗಳೆಂದರೆ ಸ್ನಾಯುಗಳಲ್ಲಿನ ಒತ್ತಡ, ಅತಿಯಾದ ದೈಹಿಕ ಚಟುವಟಿಕೆ, ಸೋಂಕು ಇತ್ಯಾದಿಗಳು. ಇದು ತುಂಬಾ ಕಿರಿಕಿರಿ ಉಂಟು ಮಾಡುವುದು ಮತ್ತು ಇದರಿಂದ ದೈಹಿಕ ಚಟುವಟಿಕೆ ಮೇಲೆ ಪರಿಣಾಮ ಬೀರುವುದು. ಒತ್ತಡ, ಅತಿಯಾದ ದೈಹಿಕ ಚಟುವಟಿಕೆಗಳು ಸ್ನಾಯುಗಳ ನೋವಿಗೆ ಕೆಲವು ಕಾರಣಗಳಾಗಿವೆ. ಇದು ದೀರ್ಘಕಾಲ ತನಕ ಹಾಗೆ ಉಳಿದರೆ ಯಾವುದಾದರೂ ಆರೋಗ್ಯ ಸಮಸ್ಯೆಯ ಕಾರಣವಾಗಿರಲೂಬಹುದು.

ಸ್ನಾಯು ನೋವನ್ನು ನಿವಾರಣೆ ಮಾಡಲು ಕೆಲವೊಂದು ಪರಿಣಾಮಕಾರಿ ಮನೆಮದ್ದುಗಳು ಇವೆ. ಇದು ಹಿಂದಿನಿಂದಲೂ ವಿಶ್ವದೆಲ್ಲೆಡೆಯಿಂದ ಬಳಸಿಕೊಂಡು ಬರಲಾಗುತ್ತಿರುವಂತಹ ಮನೆಮದ್ದುಗಳು ಇದು ತುಂಬಾ ಪರಿಣಾಮಕಾರಿ ಎಂದು ಸಾಬೀತು ಆಗಿದೆ. ಇದನ್ನು ಬಳಸುವುದು ತುಂಬಾ ಸುರಕ್ಷಿತ ಮತ್ತು ಆರೋಗ್ಯದ ಮೇಲೆ ಯಾವುದೇ ರೀತಿಯಿಂದಲೂ ಇದು ಹಾನಿ ಉಂಟು ಮಾಡುವುದಿಲ್ಲ. ನೋವು ನಿವಾರಕ ಔಷಧಿಗಿಂತ ಇದು ತುಂಬಾ ಒಳ್ಳೆಯದು.
ಸ್ನಾಯು ನೋವಿನಿಂದ ಪರಿಹಾರ ನೀಡುವಂತಹ ಕೆಲವೊಂದು ನೈಸರ್ಗಿಕ ವಿಧಾನಗಳ ಬಗ್ಗೆ ನೀವು ತಿಳಿಯಿರಿ.

Muscle Pain

ಸಮುದ್ರ ಉಪ್ಪು

ನೈಸರ್ಗಿಕವಾಗಿ ಸಿಗುವಂತಹ ಸಮುದ್ರ ಉಪ್ಪು ಸ್ನಾಯುಗಳ ಅಂಗಾಂಶಗಳಲ್ಲಿ ಇರುವಂತಹ ಉರಿಯೂತ ಕಡಿಮೆ ಮಾಡುವುದು ಮತ್ತು ನೋವಿನಿಂದ ಪರಿಹಾರ ನೀಡುವುದು. ಫೈಬ್ರೊಮ್ಯಾಲ್ಗಿಯದಂತಹ ದೀರ್ಘಕಾಲಿಕ ಸ್ನಾಯು ನೋವಿನ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು. ಒಂದು ಸಾಮಾನ್ಯ ಗಾತ್ರದ ಬಿಸಿ ನೀರಿನ ಬಾತ್ ಟಬ್ ಗೆ 1-2 ಕಪ್ ಸಮುದ್ರ ಉಪ್ಪು ಹಾಕಿಕೊಳ್ಳಿ. ಇದರಲ್ಲಿ 15-30 ನಿಮಿಷ ಕಾಲ ಆರಾಮ ಮಾಡಿ. ಇದರಲ್ಲಿ ಸ್ನಾನ ಮಾಡುವ ಪರಿಣಾಮವಾಗಿ ಸ್ನಾಯು ನೋವು ಕಡಿಮೆ ಆಗುವುದು ಮತ್ತು ಸೆಳೆತ ಕಡಿಮೆ ಆಗಿ ದೇಹಕ್ಕೆ ಒತ್ತಡದಿಂದ ಪರಿಹಾರ ಸಿಗುವುದು ಹಾಗೂ ಆರಾಮ ಸಿಗುವುದು.

Most Read: ಸ್ನಾಯು ದೌರ್ಬಲ್ಯದ ನಿವಾರಣೆಗೆ ಮನೆ ಔಷಧಿಗಳು

ಆ್ಯಪಲ್ ಸೀಡರ್ ವಿನೇಗರ್

ಸ್ನಾಯು ನೋವಿನಿಂದ ಪರಿಹಾರ ಪಡೆಯಲು ಇದು ತುಂಬಾ ಪರಿಣಾಮಕಾರಿ ವಿಧಾನವಾಗಿದೆ. ಇದನ್ನು ನೀವು ಒಂದು ಲೋಟ ಬಿಸಿ ನೀರಿಗೆ ಹಾಕಿ ಮತ್ತು ಕುಡಿಯಿರಿ ಅಥವಾ ನೋವಿನ ಭಾಗಕ್ಕೆ ಇದಕ್ಕೆ ಉಜ್ಜಿಕೊಳ್ಳಿ. ಉರಿಯೂತ ಶಮನಕಾರಿ ಮತ್ತು ನೋವು ನಿವಾರಕ ಗುಣ ಹೊಂದಿರುವಂತಹ ಈ ನೈಸರ್ಗಿಕ ಸಾಮಗ್ರಿಯು ಸ್ನಾಯು ನೋವಿನಿಂದ ಪರಿಹಾರ ನೀಡುವುದು ಮಾತ್ರವಲ್ಲದೆ ಮರಳಿ ಬರದಂತೆ ತಡೆಯುವುದು.

ತಂಪು ಶಾಖ

ಸ್ನಾಯು ನೋವು ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ ವಿಧಾನವಾಗಿದೆ. ತಂಪು ಶಾಖ ಚಿಕಿತ್ಸೆ ನೀಡಲು ಐಸ್ ಬಳಸಿಕೊಂಡು ಭಾದಿತ ಜಾಗಕ್ಕೆ ಇಟ್ಟುಬಿಟ್ಟರೆ ಪರಿಹಾರ ಸಿಗುವುದು. ಇದು ಕ್ರೀಡಾಳುಗಳಿಗೆ ಆಗುವಂತಹ ಸ್ನಾಯು ನೋವನ್ನು ಇದು ಕಡಿಮೆ ಮಾಡುವುದು. ಐಸ್ ಪ್ಯಾಕ್ ಅಥವಾ ತಂಪನ್ನು ಗಾಯಗೊಂಡ ಭಾಗಕ್ಕೆ ನಿಧಾನವಾಗಿ ನೀಡಿದರೆ ಆಗ ರಕ್ತ ಸಂಚಾರವು ಕಡಿಮೆ ಆಗಿ ಈ ಭಾಗದಲ್ಲಿನ ನೋವು ಮತ್ತು ಉರಿಯೂತವು ಕಡಿಮೆ ಆಗುವುದು. ಸ್ನಾಯುಗಳ ಸೆಳೆತ ಮತ್ತು ಒಳಗಿನ ರಕ್ತಸ್ರಾವವನ್ನು ಕೂಡ ಇದು ಕಡಿಮೆ ಮಾಡುವುದು. ಐಸ್ ಪ್ಯಾಕ್, ಐಸ್ ಮಸಾಜ್, ಜೆಲ್ ಪ್ಯಾಕ್, ಕೆಮಿಕಲ್ ಕೋಲ್ಡ್ ಪ್ಯಾಕ್, ವಾಪೊ ಕೂಲಂಟ್ ಸ್ಪ್ರೇ ಗಳು ಸ್ನಾಯು ನೋವಿನಿಂದ ಆರಾಮ ನೀಡುವಂತಹ ಕೆಲವೊಂದು ವಿಧಾನಗಳಾಗಿವೆ.

ಬಿಸಿ ಚಿಕಿತ್ಸೆ

ಬೆನ್ನು, ಸ್ನಾಯು ಸೆಳೆತ ಮತ್ತು ಸ್ನಾಯು ಬಿಗಿತಕ್ಕೆ ಚಿಕಿತ್ಸೆ ನೀಡಲು ಬಿಸಿ ಚಿಕಿತ್ಸೆ ಬಳಸಿಕೊಳ್ಳಬೇಕು. ಇದು ಭಾದಿತ ಜಾಗಕ್ಕೆ ಬಿಸಿ ನೀಡುವ ಮೂಲಕ ಪರಿಹಾರ ಕಂಡುಕೊಳ್ಳುವ ಚಿಕಿತ್ಸೆಯಾಗಿದೆ. ತೀವ್ರ ಗಾಯವಾಗಿದ್ದರೆ ಆಗ ನೀವು ಬಿಸಿ ಚಿಕಿತ್ಸೆ ನೀಡಬಾರದು. ಇದರಿಂದ ಊತ ಹೆಚ್ಚಾಗಬಹುದು ಮತ್ತು ಕಿರಿಕಿರಿ ಉಂಟಾಗಬಹುದು. ಇನ್ನು ಕೆಲವು ಸಂದರ್ಭದಲ್ಲಿ ಇದು ಸ್ನಾಯು ನೋವು ನಿವಾರಣೆ ಮಾಡುವುದು, ಸ್ನಾಯು ಸೆಳೆತ ಕಡಿಮೆ ಮಾಡುವುದು ಮತ್ತು ಸ್ನಾಯುಗಳಿಗೆ ಇದು ಆರಾಮ ನೀಡುವುದು.

Most Read: ನಿದ್ದೆ ಕೆಡಿಸುವ ಕಾಲುಗಳ ಸ್ನಾಯು ಸೆಳೆತಕ್ಕೆ ಸೂಕ್ತ ಮನೆಮದ್ದು

ಕರಿಮೆಣಸು

ಕ್ಯಾಪ್ಸೈಸಿನ್ ಎನ್ನುವಂತಹ ಅಂಶವು ಮೆಣಸಿನಲ್ಲಿ ಇರುವ ಕಾರಣದಿಂದಾಗಿ ಇದು ಸಂಧಿವಾತ, ಗಂಟು ಮತ್ತು ಸ್ನಾಯು ನೋವು ಮತ್ತು ಸ್ನಾಯುಗಳ ಸಾಮಾನ್ಯ ಊತ ನಿವಾರಣೆ ಮಾಡುವುದು. ¼ ರಿಂದ ½ ಚಮಚ ಕರಿಮೆಣಸಿನ ಪೇಸ್ಟ್ ಮಾಡಿಕೊಂಡು ಒಂದು ಕಪ್ ಬಿಸಿ ಆಲಿವ್ ತೈಲ ಅಥವಾ ತೆಂಗಿನ ಎಣ್ಣೆಯ ಜತೆಗೆ ಇದನ್ನು ಹಾಕಿ. ಬಳಿಕ ಭಾದಿತ ಜಾಗಕ್ಕೆ ಉಜ್ಜಿಕೊಳ್ಳಿ ಮತ್ತು ಹಚ್ಚಿಕೊಂಡ ಬಳಿಕ ಕೈ ಸರಿಯಾಗಿ ತೊಳೆಯಿರಿ. ಕಣ್ಣು, ಕಿವಿ ಮತ್ತು ಬಾಯಿಗೆ ಇದನ್ನು ಹಚ್ಚಬೇಡಿ. ಇದು ಉರಿ ಉಂಟು ಮಾಡುವುದು.

ಚೆರ್ರಿ ಜ್ಯೂಸ್

ತುಂಬಾ ದೂರ ಓಡುವುದರಿಂದ ಅಥವಾ ಅತಿಯಾದ ವ್ಯಾಯಾಮ ಮಾಡಿದ ಬಳಿಕ ಇದು ಸ್ನಾಯುಗಳಿಗೆ ಆರಾಮ ನೀಡುವುದು. ಚೆರ್ರಿಯಲ್ಲಿ ಕಂಡುಬರುವಂತಹ ಆಂಥೋಸಿಯಾನ್ಸಿಸ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಉರಿಯೂತ ಕಡಿಮೆ ಮಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ಚೆರ್ರಿ ಜ್ಯೂಸ್ ನ್ನು ನೀವು ವ್ಯಾಯಾಮ ಬಳಿಕ ಕುಡಿದರೆ ಅದರಿಂದ ಸ್ನಾಯುಗಳ ನೋವು ಮತ್ತು ಉರಿಯೂತ ಕಡಿಮೆ ಆಗುವುದು.

ಸಾರಭೂತ ತೈಲ

ಉರಿಯೂತ ಶಮನಕಾರಿ ಮತ್ತು ನೋವು ನಿವಾರಕ ಗುಣ ಹೊಂದಿರುವಂತಹ ಸಾರಭೂತ ತೈಲದಿಂದ ಭಾದಿತ ಜಾಗಕ್ಕೆ ಮಸಾಜ್ ಮಾಡಿಕೊಂಡರೆ ಆಗ ಸ್ನಾಯುಗಳ ನೋವಿನಿಂದ ಪರಿಹಾರ ಸಿಗುವುದು. ಮಸಾಜ್ ನಿಂದಾಗಿ ರಕ್ತ ಸಂಚಾರವು ಉತ್ತಮವಾಗುವುದು ಮತ್ತು ಇದರಿಂದ ಸ್ನಾಯುಗಳು ಬಿಸಿಯಾಗುವುದು. ಸ್ನಾಯುಗಳಲ್ಲಿ ಜಮೆಗೊಂಡಿರುವಂತಹ ಲ್ಯಾಕ್ಟಿಕ್ ಆಮ್ಲವನ್ನು ಇದು ಚದುರಿಸುವುದು. ಸಾರಭೂತ ತೈಲದ ಸುಗಂಧವು ನೈಸರ್ಗಿಕವಾಗಿ ದೇಹವು ಶಮನ ಪಡೆಯಲು ನೆರವಾಗುವುದು. ಲ್ಯಾವೆಂಡರ್, ಶುಂಢಿ ಮತ್ತು ಪುದೀನಾದಂತಹ ಸಾರಭೂತ ತೈಲಗಳು ನೋವು ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ ಆಗಿದೆ.

ಮೆಗ್ನಿಶಿಯಂ

ದೇಹದಲ್ಲಿ ಮೆಗ್ನಿಶಿಯಂ ಅಂಶವು ಕಡಿಮೆ ಇದ್ದರೆ ಆಗ ಸ್ನಾಯು ಸೆಳೆ ಮತ್ತು ಸ್ನಾಯುಗಳು ಬಿಗಿಯಾಗುವುದು. ಇದರಿಂದ ಮೆಗ್ನಿಶಿಯಂ ಸಪ್ಲಿಮೆಂಟ್ ಸೇವಿಸಿ. ಮೆಗ್ನಿಶಿಯಂ ಅಧಿಕವಾಗಿ ಇರುವಂತಹ ಆಹಾರ ಸೇವಿಸಿ. ಮೆಗ್ನಿಶಿಯಂ ಅಧಿಕವಾಗಿ ಇರುವಂತಹ ಕೆಲವೊಂದು ಆಹಾರಗಳೆಂದರೆ ಕಾಕಂಬಿ, ಕುಂಬಳಕಾಯಿ ಬೀಜಗಳು, ಬಸಳೆ, ಕೋಕಾ ಹುಡಿ, ಕಪ್ಪು ಅವರೆ, ಅಗಸೆ ಬೀಜಗಳು, ಎಳ್ಳು ಬೀಜಗಳು, ಸೂರ್ಯಕಾಂತಿ ಬೀಜಗಳು, ಬಾದಾಮಿ ಮತ್ತು ಗೋಡಂಬಿ.

Most Read: ಊತ-ಸ್ನಾಯು ಸೆಳೆತಕ್ಕೆ, ಹಿಡಿಯಷ್ಟು 'ನುಗ್ಗೆ ಸೊಪ್ಪು' ಸಾಕು!

ಗಿಡಮೂಲಿಕೆ ಚಿಕಿತ್ಸೆ

ಕೆಲವೊಂದು ಗಿಡಮೂಲಿಕೆಗಳಲ್ಲಿ ಉರಿಯೂತ ಶಮನಕಾರಿ ಮತ್ತು ಚಿಕಿತ್ಸಕ ಗುಣಗಳು ಇವೆ. ಗಿಡಮೂಲಿಕೆಯನ್ನು ಅರ್ಧ ಘನ ರೂಪದಲ್ಲಿ ಹಚ್ಚಿಕೊಂಡರೆ ಆಗ ಅದು ಚರ್ಮದ ಒಳನುಗ್ಗುವುದು ಮತ್ತು ಅಂಗಾಂಶಗಳು ಗುಣಮುಖವಾಗಲು ನೆರವಾಗುವುದು. ಗಿಡಮೂಲಿಕೆ ಗಳಾಗಿರುವಂತಹ ಅರ್ನಿಕಾವನ್ನು ಸ್ನಾಯುಗಳ ಊತ ಮತ್ತು ಸೆಳೆತಕ್ಕೆ ಬಳಸಿಕೊಳ್ಳಲಾಗುತ್ತದೆ. ಅದೇ ರೀತಿಯಾಗಿ ಸೇಂಟ್ ಜಾನ್ಸ್ ವಾರ್ಡ್ ಸ್ನಾಯು ಸೆಳೆತದಿಂದ ಆರಾಮ ನೀಡಲು ಬಳಸಲಾಗುತ್ತದೆ. ಡೆವಿಲ್ಸ್ ಕ್ಲಾವ್ ಎನ್ನುವ ಗಿಡಮೂಲಿಕೆಯನ್ನು ನೈಸರ್ಗಿಕ ನೋವು ನಿವಾರಕವಾಗಿ ಬಳಸಿಕೊಳ್ಳಲಾಗುತ್ತದೆ ಮತ್ತು ಇದು ಸ್ನಾಯುಗಳ ಊತ ಮತ್ತು ನೋವು ಕಡಿಮೆ ಮಾಡುವುದು. ಅದರಲ್ಲೂ ಸೊಂಟ ಮತ್ತು ಕುತ್ತಿಗೆಯ ಭಾಗದಲ್ಲಿನ ನೋವನ್ನು ಕಡಿಮೆ ಮಾಡುವುದು. ಲ್ಯಾವೆಂಡರ್ ಮತ್ತು ರೋಶ್ ಮೆರಿ ಚಿಕಿತ್ಸಕ ಗುಣದಿಂದ ತುಂಬಾ ಜನಪ್ರಿಯವಾಗಿದೆ. ಇದು ಚರ್ಮಕ್ಕೆ ಹಚ್ಚಿಕೊಂಡ ವೇಳೆ ಶಮನ ನೀಡುವುದು ಮಾತ್ರವಲ್ಲದೆ ಸೆಳೆತದಿಂದ ಪರಿಹಾರ ನೀಡುವುದು.

English summary

9 Home Remedies To Treat Muscle Pain

Muscle aches or myalgia is an extremely common problem that almost everybody has experienced in a lifetime. Most common causes of muscle pain are tension in the muscles, rigorous physical activity, infection, etc. and these can be extremely irritating and cause restrictions in your daily activities . Stress, tension and excessive physical activity are a few common reasons for pain in the muscles. And in case, it persists for a long period of time, then it could be a warning sign of an underlying health issue.
Story first published: Wednesday, June 12, 2019, 17:20 [IST]
X
Desktop Bottom Promotion