For Quick Alerts
ALLOW NOTIFICATIONS  
For Daily Alerts

ಬೆರಳಿನಲ್ಲಿ ನೆರಿಗೆ ಮೂಡಿದೆಯೇ? ಇದು ಯಾವ ಕಾಯಿಲೆಗಳ ಲಕ್ಷಣ?

By Arshad Hussian
|

ಪಾತ್ರೆ ತೊಳೆಯುವ ಅಥವಾ ನೀರಿನಲ್ಲಿ ಹೆಚ್ಚು ಹೊತ್ತು ಬೆರಳುಗಳು ಮುಳುಗಿಯೇ ಇರುವ ಕೆಲಸದ ಬಳಿಕ ಬೆರಳುಗಳ ತುದಿಗಳನ್ನು ಗಮನಿಸಿ. ಈ ಭಾಗದಲ್ಲಿ ಚರ್ಮ ನೆರಿಗೆಗಟ್ಟಿರುತ್ತದೆ. ಬೆರಳುಗಳು ಒಣಗುತ್ತಾ ಬಂದಂತೆ ಈ ನೆರಿಗೆಗಳೂ ಮಾಯವಾಗುತ್ತವೆ. ನಮ್ಮ ಅಂಗೈ ಮತ್ತು ಪಾದಗಳ ಚರ್ಮ ಹೆಚ್ಚು ದಪ್ಪನಾಗಿದ್ದು ನೀರನ್ನು ಹೀರಿಕೊಂಡು ಹಿಗ್ಗುತ್ತವೆ ಹಾಗೂ ಈ ನೆರಿಗೆಗಳು ಮೂಡುತ್ತವೆ. ಒಂದು ವೇಳೆ ಈ ಸ್ಥಿತಿ ಬೆರಳುಗಳು ಒಣಗಿದ ಬಳಿಕವೂ ಮಾಯವಾಗದೇ ಸದಾ ಹಾಗೇ ಇದ್ದರೆ ಇದಕ್ಕೆ Pruney Fingers ಅಥವಾ Wrinkle Fingers ಎಂದು ಕರೆಯುತ್ತಾರೆ. ಪ್ಲಂ ಅಥವಾ ಪ್ರೂನ್ ಹಣ್ಣುಗಳು ಒಣಗಿದ ಬಳಿಕ ಇದರ ಸಿಪ್ಪೆ ನೆರಿಗೆ ನೆರಿಗೆಯಾಗಿರುತ್ತದೆ (ಒಣದ್ರಾಕ್ಷಿಯ ಹಾಗೆ) ಇದೇ ವಿಶೇಷಣವನ್ನು ಬೆರಳುಗಳ ಈ ಸ್ಥಿತಿಗೂ ನೀಡಲಾಗಿದೆ. ಈ ನೆರಿಗೆಗಳು ಕಂಡುಬಂದ ತಕ್ಷಣವೇ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಅಗತ್ಯವಾಗಿದೆ.

ಈ ಸ್ಥಿತಿಗೆ ಏನು ಕಾರಣ?
ನೆರಿಗೆಗೊಂಡ ಬೆರಳು ಒಂದು ನರಸಂಬಂಧಿ ತೊಂದರೆಯಾಗಿದೆ. ಬೆರಳುಗಳ ತುದಿಯಲಿರುವ ನರಾಗ್ರಗಳು ಸಪೂರವಾಗುವಂತೆ ಮೆದುಳಿನಿಂದ ಪಡೆದ ತಪ್ಪು ಸಂಕೇತದ ಪರಿಣಾಮದಿಂದ ಬೆರಳುಗಳ ತುದಿಗಳ ಭಾಗದಲ್ಲಿ ಜಾಗ ತೆರವಾಗುತ್ತದೆ ಹಾಗೂ ಈ ತೆರೆವಾದ ಜಾಗ ಚರ್ಮವನ್ನು ಒಳಗೆಳೆದುಕೊಳ್ಳುತ್ತದೆ ಹಾಗೂ ಇದು ನೆರಿಗೆ ಮೂಡಿಸುತ್ತದೆ. ಸಾಮಾನ್ಯವಾಗಿ ಇಡಿಯ ದಿನ ನೀರಿನಲ್ಲಿ ಕೈಮುಳುಗಿಸಿಕೊಂಡೇ ಇರುವ ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ಈ ತೊಂದರೆ ಆವರಿಸುವುದು ಸಾಮಾನ್ಯವಾಗಿದೆ. ವೈದ್ಯಕೀಯ ಕಾರಣಗಳು:
ನೆರಿಗೆಗೊಂಡ ಬೆರಳುಗಳಿಗೆ ಈ ಕೆಳಕಂಡ ಸ್ಥಿತಿಗಳೂ ಕಾರಣವಾಗಬಹುದು:

ನಿರ್ಜಲೀಕರಣ

ನಿರ್ಜಲೀಕರಣ

ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯದೇ ಇದ್ದರೆ ದೇಹದ ತುದಿಭಾಗಗಳಲ್ಲಿ ಅತಿ ಹೆಚ್ಚು ನೀರಿನ ಕೊರತೆ ಎದುರಾಗುತ್ತದೆ. ಇತರ ಭಾಗಕ್ಕಿಂತ ಈ ಭಾಗ ಹೆಚ್ಚು ಒಣಗುತ್ತದೆ ಹಾಗೂ ಈ ತ್ವಚೆ ತನ್ನ ಸೆಳೆತದ ಗುಣಗಳನ್ನು ಕಳೆದುಕೊಂಡು ಮುದುಡುತ್ತದೆ. ಅಲ್ಲದೇ ನಿರ್ಜಲೀಕರಣದ ಪರಿಣಾಮವಾಗಿ ತ್ವಚೆಯೂ ಒಣಗುತ್ತದೆ ಹಾಗೂ ಒಣಗಿದ ಬಾಯಿ, ತಲೆನೋವು, ಬಿರಿದ ತುಟಿಗಳು, ತಲೆ ತಿರುಗುವುದು, ದ್ವಂದಕ್ಕೊಳಗಾಗುವುದು, ಚರ್ಮದಲ್ಲಿ ತುರಿಕೆ, ಅತಿಗಾಢಹಳದಿ ಬಣ್ಣದ ಮೂತ್ರ ಮೊದಲಾದವು ಸಹಾ ಕಂಡುಬರುತ್ತದೆ.

ಮಧುಮೇಹ

ಮಧುಮೇಹ

ಮಧುಮೇಹದ ಪರಿಣಾಮದಿಂದಾಗಿ ದೇಹಕ್ಕೆ ಆಗಮಿಸುವ ಸಕ್ಕರೆಯನ್ನು ಬಳಸಿಕೊಳ್ಳದೇ ಹೋಗುತ್ತದೆ. ಹಾಗಾಗಿ ಒಂದು ವೇಳೆ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಕಂಡುಬಂದರೆ ಇದರ ಪರಿಣಾಮವಾಗಿಯೂ ನೆರಿಗೆಗೊಂಡ ಬೆರಳಿನ ಸ್ಥಿತಿ ಎದುರಾಗಬಹುದು. ಅಲ್ಲದೇ ಈ ಭಾಗದಲ್ಲಿ ಬೆವರುಗ್ರಂಥಿಗಳು ಘಾಸಿಗೊಳ್ಳುವ ಮೂಲಕ ಬೆವರೂ ಇಲ್ಲವಾಗುತ್ತದೆ ಹಾಗೂ ಈ ಭಾಗದ ಚರ್ಮ ತೀವ್ರವಾಗಿ ಒಣಗುತ್ತದೆ. ಅಲ್ಲದೇ ಮಧುಮೇಹಿಗಳಿಗೆ ತ್ವಚೆಗೆ ಸಂಬಂಧಿಸಿದ ತೊಂದರೆಗಳಾದ ಬ್ಯಾಕ್ಟೀರಿಯಾದ ಸೋಂಕು, ಶಿಲೀಂಧ್ರದ ಸೋಂಕು ಸಹಾ ಸುಲಭವಾಗಿ ಆವರಿಸಿಕೊಳ್ಳುವ ಸಾಧ್ಯತೆ ಹೆಚ್ಚೇ ಇರುತ್ತದೆ.

ಎಕ್ಸಿಮಾ (Eczema)

ಎಕ್ಸಿಮಾ (Eczema)

ಇದೊಂದು ಬಗೆಯ ಚರ್ಮವ್ಯಾಧಿಯಾಗಿದ್ದು ಇದರಿಂದ ಚರ್ಮದ ಉರಿಯೂತ, ತುರಿಕೆ, ಚರ್ಮ ಕೆಂಪಗಾಗುವುದು ಮತ್ತು ಚಿಕ್ಕ ಚಿಕ್ಕ ಗುಳ್ಳೆಗಳೇಳುವುದು ಮೊದಲಾದವು ಎದುರಾಗುತ್ತವೆ. ಈ ವ್ಯಾಧಿ ಚರ್ಮವನ್ನು ವಿಪರೀತವಾಗಿ ಒಣಗಿಸುತ್ತದೆ ಹಾಗೂ ಬೆರಳುಗಳ ತುದಿಯಲ್ಲಿ ನೆರಿಗೆಗಳು ಮೂಡಲು ಕಾರಣವಾಗುತ್ತದೆ. ಈ ವ್ಯಾಧಿಯ ದೀರ್ಘಾವಧಿಯ ಪರಿಣಾಮವಾಗಿ ಎದುರಾಗುವ Atopic dermatitis ಎಂಬ ಉಲ್ಬಣಸ್ಥಿತಿ ಚರ್ಮವನ್ನು ಕೆಂಪಗಾಗಿಸಿ ವಿಪರೀತ ಒಣಗಿಸುತ್ತದೆ ಹಾಗೂ ಊದಿಕೊಂಡು ತುರಿಕೆಯಿಂದಲೂ ಕೂಡಿರುತ್ತದೆ.

ರೇನಾವ್ಡ್ಸ್ ಕಾಯಿಲೆ (Raynaud's disease)

ರೇನಾವ್ಡ್ಸ್ ಕಾಯಿಲೆ (Raynaud's disease)

ಈ ಕಾಯಿಲೆ ದೇಹದ ಅತಿಸೂಕ್ಷ್ಮ ಅಂಗಗಳಿಗೆ ರಕ್ತ ಪೂರೈಸುವ ನಮ್ಮ ನರವ್ಯವಸ್ಥೆಯ ಅತಿ ಕಿರಿಯ ಕವಲುಗಳ ಮೇಲೆ ಪ್ರಭಾವ ಬೀರುತ್ತದೆ. ಈ ಸೂಕ್ಷ್ಮ ಭಾಗಗಳಲ್ಲಿ ಕೈಬೆರಳುಗಳು ಮತ್ತು ಕಾಲುಬೆರಳುಗಳೂ ಸೇರಿವೆ. ಅತಿಯಾದ ಶೀತದಲ್ಲಿ ಹೆಚ್ಚು ಕಾಲ ಕಳೆಯುವ ವ್ಯಕ್ತಿಗಳಿಗೆ ಈ ಸ್ಥಿತಿ ಎದುರಾಗುತ್ತದೆ ಹಾಗೂ ರಕ್ತಪರಿಚಲನೆ ಕುಂಠಿತಗೊಂಡು ಬೆರಳುಗಳು ತಣ್ಣಗಾದಾಗ ಬಿಳಿ ಅಥವಾ ನೀಲಿಬಣ್ಣಕ್ಕೆ ತಿರುಗುತ್ತವೆ ಹಾಗೂ ಬೆರಳುಗಳಲ್ಲಿ ಸೂಜಿ ಚುಚ್ಚಿದಂತಹ ಅನುಭವ ಮತ್ತು ಸಂವೇದನೆ ಇಲ್ಲವಾಗುತ್ತದೆ.

ಥೈರಾಯ್ಡ್ ಗ್ರಂಥಿಯ ಏರುಪೇರು (Thyroid disorder)

ಥೈರಾಯ್ಡ್ ಗ್ರಂಥಿಯ ಏರುಪೇರು (Thyroid disorder)

ಈ ತೊಂದರೆ ಇರುವ ವ್ಯಕ್ತಿಗಳಿಗೆ ಬೆರಳ ತುದಿಗಳಲ್ಲಿ ನೆರಿಗೆ ಹಾಗೂ ಚರ್ಮ ಕೆಂಪಗಾಗಿ ಉರಿ ಆವರಿಸುವುದು ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿ ಹೆಚ್ಚು ಇರುವ (hypothyroidism) ವ್ಯಕ್ತಿಗಳ ದೇಹದ ಜೀವರಾಸಾಯನಿಕ ಕ್ರಿಯೆಯೂ ನಿಧಾನಗೊಳ್ಳುವ ಪರಿಣಾಮವಾಗಿ ದೇಹದ ತಾಪಮಾನವೂ ಕಡಿಮೆಯಾಗುತ್ತದೆ ಹಾಗೂ ಬೆರಳುಗಳೂ ನೆರಿಗೆಗಟ್ಟುತ್ತವೆ. ದೇಹದ ತಾಪಮಾನ ಕಡಿಮೆಯಾದಾಗ ಬೆರಳುಗಳಲ್ಲಿರುವ ರಕ್ತನಾಳಗಳು ಸಂಕುಚಿತಗೊಂಡು ದೇಹದ ತಾಪಮಾನವನ್ನು ಉಳಿಸಿಕೊಳ್ಳಲು ದೇಹ ಯತ್ನಿಸುತ್ತದೆ. ಈ ಸಂಕುಚನೆಯ ಪರಿಣಾಮದಿಂದಲೂ ಬೆರಳುಗಳಲ್ಲಿ ನೆರಿಗೆಗಳು ಮೂಡುತ್ತವೆ.

ಲಿಂಫೆಡೀಮಾ (Lymphedema)

ಲಿಂಫೆಡೀಮಾ (Lymphedema)

ನಮ್ಮ ದೇಹದ ದುಗ್ಧಗ್ರಂಥಿಗಳ ಪರಿಚಲನೆಯಲ್ಲಿ ಯಾವುದೇ ತಡೆಯುಂಟಾದರೆ ಕೈ ಮತ್ತು ಕಾಲುಗಳು ಊದಿಕೊಳ್ಳುತ್ತವೆ. ದುಗ್ಧಗ್ರಂಥಿಗಳಿಗೆ ಆದ ಘಾಸಿ ಅಥವಾ ಕ್ಯಾನ್ಸರ್ ಗೆ ನೀಡುವ ಚಿಕಿತ್ಸೆಯಿಂದ ಈ ಸ್ಥಿತಿ ಸಾಮಾನ್ಯವಾಗಿ ಕಂಡುಬರುತ್ತದೆ. ಪರಿಣಾಮವಾಗಿ ದುಗ್ಧರಸ ದೇಹದ ಇತರ ಭಾಗಗಳಿಗೆ ಪಸರಿಸಲು ಸಾಧ್ಯವಾಗದೇ ನಾಳಗಳಲ್ಲಿ ತುಂಬಿಕೊಳ್ಳುತ್ತದೆ ಹಾಗೂ ಕೈಕಾಲುಗಳು ಊದಿಕೊಳ್ಳುತ್ತವೆ. ಆದರೆ ಇದರ ಪರಿಣಾಮದಿಂದಾಗಿ ಕೈಕಾಲುಗಳ ತುದಿಭಾಗಗಳಾದ ಬೆರಳುಗಳಲ್ಲಿ ನೆರಿಗೆ ಮೂಡುತ್ತದೆ.

ವೈದ್ಯರನ್ನು ಯಾವಾಗ ಕಾಣಬೇಕು?

ವೈದ್ಯರನ್ನು ಯಾವಾಗ ಕಾಣಬೇಕು?

ಒಂದು ವೇಳೆ ನೀರಿಗೆ ಹೆಚ್ಚು ಹೊತ್ತು ಕೈಯೊಡ್ದಿದ್ದ ಕಾರಣದಿಂದ ಈ ಸ್ಥಿತಿ ಎದುರಾಗಿದ್ದರೆ ಇದಕ್ಕೆ ಆತಂಕಗೊಳ್ಳುವ ಕಾರಣವಿಲ್ಲ. ಕೈ ಒಣಗುತ್ತಿದ್ದಂತೆಯೇ ನೆರಿಗೆಗಳೂ ಮಾಯವಾಗುತ್ತವೆ. ಒಂದು ವೇಳೆ ನೀರಿಗೆ ಕೈಯೊಡ್ಡದೇ ಇದ್ದರೂ ಈ ನೆರಿಗೆ ಕಂಡುಬಂದರೆ ಇದಕ್ಕೆ ಯಾವುದೋ ಅನಾರೋಗ್ಯ ಕಾರಣವಾಗಿರಬಹುದು ಹಾಗೂ ಇದನ್ನು ಗಮನಿಸಿದ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು. ವೈದ್ಯರು ಈ ತೊಂದರೆಗೆ ಇತರ ಕಾರಣವನ್ನೂ ಕಂಡುಕೊಳ್ಳಲು ವಿಚಾರಿಸಬಹುದು. ಹಾಗಾಗಿ ಈ ಬಗ್ಗೆ ನಿಮಗೆ ಎದುರಾದ ಎಲ್ಲಾ ಸೂಚನೆಗಳನ್ನು ಮೊದಲೇ ಬರೆದಿಟ್ಟುಕೊಳ್ಳುವುದು ಒಳ್ಳೆಯದು.

ಈ ಸ್ಥಿತಿ ಬರದೇ ಇರಲು ಏನು ಮುನ್ನೆಚ್ಚರಿಕೆ ಕೈಗೊಳ್ಳಬೇಕು?

ಈ ಸ್ಥಿತಿ ಬರದೇ ಇರಲು ಏನು ಮುನ್ನೆಚ್ಚರಿಕೆ ಕೈಗೊಳ್ಳಬೇಕು?

ಮೊದಲೇ ತಿಳಿಸಿದಂತೆ ನೀರಿನಲ್ಲಿ ಕೈಯದ್ದಿಕೊಳ್ಳುವುದರಿಂದ ಎದುರಾಗುವ ನೆರಿಗೆಗಳಿಂದ ಏನೂ ತೊಂದರೆಯಿಲ್ಲ. ಆದರೆ, ಇದಕ್ಕೂ ಹೊರತಾದ ಕಾರಣಗಳಿಂದ ಈ ಸ್ಥಿತಿ ಎದುರಾಗದೇ ಇರಲು ಈ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ:

*ಪಾತ್ರೆ, ಬಟ್ಟೆ ಮೊದಲಾದವುಗಳನ್ನು ತೊಳೆಯುವಾಗ ರಬ್ಬರ್ ಕೈಗವಸು ತೊಟ್ಟುಕೊಳ್ಳಿ. ವಿಶೇಷವಾಗಿ ನೆಲ ಒರೆಸುವ ಮೊದಲಾದ ಸಂದರ್ಭಗಳಲ್ಲಿ ಪ್ರಬಲ ರಾಸಾಯನಿಕಗಳನ್ನು ಬಳಸುವಾಗ ನೀಳವಾದ ರಬ್ಬರ್ ಕೈವಸು ತೊಟ್ಟುಕೊಳ್ಳಿ.

*ನಿರ್ಜಲೀಕರಣಕ್ಕೆ ಒಳಗಾಗದೇ ಇರಲು ಸಾಕಷ್ಟು ನೀರು ಕುಡಿಯಿರಿ ಹಾಗೂ ನೀರಿನಂಶ ಹೆಚ್ಚಿರುವ ಸೂಪ್, ಕಲ್ಲಂಗಡಿ, ಸೌತೆ ಮೊದಲಾದವುಗಳನ್ನು ಸೇವಿಸಿ.

*ನೀರಿನ ಸಹಿತ ಹೆಚ್ಚಿನ ದ್ರವಾಹಾರಗಳನ್ನು ಸೇವಿಸಿ. ಗಿಡಮೂಲಿಕೆಗಳಿಂದ ತಯಾರಿಸಿದ ಟೀ, ಹಣ್ಣಿನ ರಸಗಳು ಮೊದಲಾದವುಗಳನ್ನು ಸೇವಿಸಿ. ರೇನಾವ್ಡ್ಸ್ ಕಾಯಿಲೆ ಇರುವ ವ್ಯಕ್ತಿಗಳು ಸಾಧ್ಯವಾದಷ್ಟೂ ತಮ್ಮ ದೇಹವನ್ನು ಬೆಚ್ಚಗಿರಿಸಬೇಕು ಹಾಗೂ ಸದಾ ಬೆಚ್ಚನೆಯ ಕೈಗವಸುಗಳನ್ನು, ಕಾಲುಚೀಲ-ಶೂ ಮತ್ತು ಬಟ್ಟೆಗಳನ್ನು ತೊಟ್ಟುಕೊಳ್ಳಬೇಕು ಹಾಗೂ ಹಸ್ತಗಳನ್ನು ಶೀತಲಗೊಳಿಸುವುದನ್ನು ತಡೆಯಬೇಕು.

ಒಂದು ವೇಳೆ ಕಾಯಿಲೆಯ ಲಕ್ಷಣಗಳು ಉಲ್ಬಣಗೊಂಡಿರುವು ಕಂಡುಬಂದರೆ ವೈದ್ಯರು ಹಸ್ತ ಮತ್ತು ಪಾದಗಳ ರಕ್ತನಾಳಗಳನ್ನು ತೆರೆದುಕೊಳ್ಳಲು ಔಷಧಿಗಳನ್ನು ನೀಡಬಹುದು. ಮಧುಮೇಹಿಗಳು ತಮ್ಮ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಆರೋಗ್ಯಕರ ಮಟ್ಟದಲ್ಲಿರಿಸಿಕೊಳ್ಳಬೇಕು ಹಾಗೂ ಸದಾ ತಮ್ಮ ತ್ವಚೆಯನ್ನು ಒಣದಾಗಿ ಇರಿಸಿ ಯಾವುದೇ ಬಗೆಯ ಸೋಂಕಿಗೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು.

English summary

Wrinkled on Fingers: What Causes Wrinkled Fingers?

You must have noticed that when your hands are continuously exposed to water while washing utensils, after having a bath or after washing clothes, your fingertips become wrinkled. This is known as pruney fingers. They could serve a role by helping people grip wet objects or objects in water. When the skin of the fingers and toes come in contact with water for a long time, the wrinkled skin resembles a dried prune (a dried plum). But, if you get wrinkled fingers without them being submerged in water, it could be a sign of a medical problem.
X
Desktop Bottom Promotion