For Quick Alerts
ALLOW NOTIFICATIONS  
For Daily Alerts

ಒಂದೇ ಒಂದು ರಸಗುಲ್ಲಾ ತಿಂದರೂ ಸಾಕು-ಆರೋಗ್ಯಕ್ಕೆ ಬಹಳ ಒಳ್ಳೆಯದು

|

ಸಿಹಿಪದಾರ್ಥಗಳು ಮಿತಪ್ರಮಾಣದಲ್ಲಿ ಒಳ್ಳೆಯದೇ ಹೌದಾದರೂ ಇದರಲ್ಲಿರುವ ಸಕ್ಕರೆಯಿಂದಾಗಿ ಹೆಚ್ಚಿನ ಪ್ರಮಾಣದ ಸೇವನೆ ಆರೋಗ್ಯವನ್ನು ಬಾಧಿಸಬಹುದು. ಸಂಸ್ಕರಿತ ಮೊಸರಿನ ಗಿಣ್ಣನ್ನು ವೃತ್ತಾಕಾರದ ಉಂಡೆಗಳಾಗಿಸಿ ಸಕ್ಕರೆ ಪಾಕದಲ್ಲಿ ಇಳಿಬಿಟ್ಟರೆ ರಸಗುಲ್ಲಾ ತಯಾರಾಗುತ್ತದೆ. ನಮ್ಮ ಭಾರತದ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರಾರಂಭಗೊಂಡ ಈ ಸಿಹಿತಿನಿಸು ಶೀಘ್ರವೇ ಭಾರತದೆಲ್ಲೆಡೆ ಜನಪ್ರಿಯಗೊಂಡಿದೆ.

ಇತರ ಸಿಹಿಪದಾರ್ಥಗಳಂತಲ್ಲದೇ ರಸಗುಲ್ಲಾ ಆರೋಗ್ಯವನ್ನು ಬಾಧಿಸುವುದಿಲ್ಲ ಹಾಗೂ ಸಕ್ಕರೆಯನ್ನೂ ಹೆಚ್ಚಿಸುವುದಿಲ್ಲ. ಭಾರತದಲ್ಲಿ ನಡೆಯುವ ಬಹುತೇಕ ಎಲ್ಲಾ ಶುಭಸಂದರ್ಭಗಳಲ್ಲಿ, ಹಬ್ಬಗಳಲ್ಲಿ ರಸಗುಲ್ಲಾವನ್ನು ತಪ್ಪದೇ ವಿತರಿಸಲಾಗುತ್ತದೆ. ಒಂದೇ ಒಂದು ಎಂದು ಒಂದೇ ರಸಗುಲ್ಲಾವನ್ನು ಬಾಯಿಗಿಳಿಸಿದವರಿಗೆ ಇನ್ನೊಂದು ರಸಗುಲ್ಲಾವನ್ನು ತಿನ್ನದಿರದೇ ಸಾಧ್ಯವೇ ಇಲ್ಲ...

ರಸಗುಲ್ಲಾದ ಪೋಷಕಾಂಶಗಳ ವಿವರ

ರಸಗುಲ್ಲಾದ ಪೋಷಕಾಂಶಗಳ ವಿವರ

ಸುಮಾರು ನೂರು ಗ್ರಾಂ ರಸಗುಲ್ಲಾದಲ್ಲಿ 186 ಗ್ರಾಂ ಕ್ಯಾಲೋರಿಗಳಿವೆ ಹಾಗೂ ಇದರಲ್ಲಿ 153 ಕ್ಯಾಲೋರಿಗಳು ಕಾರ್ಬೋಹೈಡ್ರೇಟುಗಳಿಂದಲೇ ದೊರಕುತ್ತವೆ. ಕೊಬ್ಬಿನಿಂದ 17 ಕ್ಯಾಲೋರಿಗಳು ದೊರೆತರೆ 16 ಕ್ಯಾಲೋರಿಗಳು ಪ್ರೋಟೀನುಗಳ ಮೂಲಕ ದೊರಕುತ್ತವೆ.

ರಸಗುಲ್ಲಾ ಆರೋಗ್ಯಕ್ಕೆ ಉತ್ತಮ ಹೇಗೆ?

ರಸಗುಲ್ಲಾ ಆರೋಗ್ಯಕ್ಕೆ ಉತ್ತಮ ಹೇಗೆ?

ರಸಗುಲ್ಲಾ ತಯಾರಿಸಲು ಪ್ರಮುಖವಾಗಿ ಅಗತ್ಯವಿರುವ ಗಿಣ್ಣು ಮೊಸರಿನಿಂದ ಅಥವಾ ಛೇನಾ ಎಂಬ ವಸ್ತುವಿನಿಂದ ದೊರಕುತ್ತದೆ (cheese curds (chhena)) ಉಳಿದಂತೆ ಚಿರೋಟಿ ರವೆಯನ್ನು ಇದಕ್ಕೆ ಬೆರೆಸಲಾಗುತ್ತದೆ. ರಸಗುಲ್ಲಾದ ಪ್ರಯೋಜನಗಳೆಲ್ಲಾ ಇವೆರಡು ಸಾಮಾಗ್ರಿಗಳಿಂದಲೇ ದೊರಕುತ್ತವೆ. ಬನ್ನಿ, ಈ ಗಿಣ್ಣು ಹೇಗೆ ಆರೋಗ್ಯಕರ ಎಂಬುದನ್ನು ನೋಡೋಣ...

Most Read:ಬಾಳೆ ಎಲೆಯಲ್ಲಿ ಆಹಾರವನ್ನಿಟ್ಟು ಕಾಗೆಗೆ ಉಣಬಡಿಸುವ 'ಪಿತೃ ಪಕ್ಷದ' ಮಹತ್ವ

ಸ್ನಾಯುಗಳ ಬೆಳವಣಿಗೆ ಹಾಗೂ ದೈಹಿಕ ಬೆಳವಣಿಗೆಗೆ ನೆರವಾಗುತ್ತದೆ

ಸ್ನಾಯುಗಳ ಬೆಳವಣಿಗೆ ಹಾಗೂ ದೈಹಿಕ ಬೆಳವಣಿಗೆಗೆ ನೆರವಾಗುತ್ತದೆ

ಈ ಛೇನಾ ಹಾಲನ್ನು ಮೊಸರಾಗಿಸಿ ನೀರನ್ನು ಬತ್ತಿಸಿ ತಯಾರಿಸಿದ ವಸ್ತುವಾಗಿದೆ. ಹಾಲು ಪ್ರೋಟೀನ್ ನ ಉತ್ತಮ ಮೂಲವಾಗಿದೆ. ಈ ಪ್ರೋಟೀನ್ ನಲ್ಲಿ ಎಂಭತ್ತು ಭಾಗ ಕೇಸೀನ್ ಎಂಬ ಪೋಷಕಾಂಶವಿದ್ದರೆ ಉಳಿದ ಇಪ್ಪತ್ತು ಭಾಗ ಹಾಲೊಡಕು (whey) ನಿಂದ ಕೂಡಿದೆ. ಇವೆರಡೂ ಅತ್ಯುತ್ತಮ ಗುಣಮಟ್ಟದ ಪ್ರೋಟೀನ್ ಆಗಿದ್ದು ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಎಲ್ಲಾ ಅಮೈನೋ ಆಮ್ಲಗಳನ್ನು ಒಳಗೊಂಡಿವೆ.

Most Read:ನೆಲ್ಲಿಕಾಯಿ ಅತಿಯಾಗಿ ಸೇವಿಸಿದರೆ ಇಂತಹ 8 ಸಮಸ್ಯೆಗಳು ಕಾಡಬಹುದು!!

ಮೂಳೆಗಳು ಮತ್ತು ಹಲ್ಲುಗಳನ್ನು ದೃಢಗೊಳಿಸುತ್ತದೆ

ಮೂಳೆಗಳು ಮತ್ತು ಹಲ್ಲುಗಳನ್ನು ದೃಢಗೊಳಿಸುತ್ತದೆ

ಮೊಸರಾಗಿಸಿದ ಹಾಲಿನಿಂದ ತಯಾರಿಸಿದ ಛೇನಾ ಕ್ಯಾಲ್ಸಿಯಂನ ಉತ್ತಮ ಮೂಲವೂ ಆಗಿದೆ. ಮೂಳೆ ಮತ್ತು ಹಲ್ಲುಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ತುಂಬಾ ಅಗತ್ಯವಾದ ಪೋಷಕಾಂಶವಾಗಿದೆ. ಅಲ್ಲದೇ ಹಾಲಿನಲ್ಲಿರುವ ವಿಟಮಿನ್ ಡಿ ಸಹಾ ಮೂಳೆಗಳನ್ನು ದೃಢವಾಗಿರಿಸಲು ನೆರವಾಗುತ್ತವೆ. ಇದರ ಹೊರತಾಗಿ ಈ ಛೇನಾ ಹೃದಯದ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತವೆ.

ತೂಕ ಇಳಿಸುವವರಿಗೆ ಸೂಕ್ತ ಆಹಾರವಾಗಿದೆ

ತೂಕ ಇಳಿಸುವವರಿಗೆ ಸೂಕ್ತ ಆಹಾರವಾಗಿದೆ

ರಸಗುಲ್ಲಾ ತಯಾರಿಸುವಾಗ ಯಾವುದೇ ಬಗೆಯ ಹುರಿಯುವಿಕೆಯನ್ನು ಒಳಗೊಂಡಿರದ ಮತ್ತು ಸಕ್ಕರೆ ಪಾಕದಲ್ಲಿಯೂ ಅತಿ ಕಡಿಮೆ ಸಕ್ಕರೆ ಇರುವ ಕಾರಣ ಇದರಲ್ಲಿ ಇತರ ಭಾರತೀಯ ಶಿಹಿವಸ್ತುಗಳಿಗೆ ಹೋಲಿಸಿದರೆ ಕನಿಷ್ಟ ಪ್ರಮಾಣದ ಸಕ್ಕರೆ ಇದೆ. ಇದೇ ಕಾರಣಕ್ಕೆ ಇದು ಅತ್ಯುತ್ತಮವಾದ ಸಿಹಿಪದಾರ್ಥವಾಗಿದ್ದು ತೂಕ ಇಳಿಸುವ ಪ್ರಯತ್ನದಲ್ಲಿರುವವರಿಗೂ ಸೂಕ್ತವಾದ ಸಿಹಿತಿನಿಸಾಗಿದೆ.ರಸಗುಲ್ಲಾ ತಯಾರಿಕೆಗೆ ಅಗತ್ಯವಾದ ಚಿರೋಟಿ ರವೆಯೂ ಪ್ರೋಟೀನ್ ನಿಂದ ಭರಿತವಾಗಿದ್ದು ಅತಿ ಕಡಿಮೆ ಕೊಬ್ಬು ಹೊಂದಿದೆ. ಈ ರವೆಯೂ ತೂಕ ಇಳಿಸಲು ಯತ್ನಿಸುತ್ತಿರುವ ವ್ಯಕ್ತಿಗಳಿಗೆ ಸೂಕ್ತವಾದ ಆಹಾರವಾಗಿದೆ. ಅಲ್ಲದೇ ಈ ರವೆ ಕಡಿಮೆ ಗ್ಲೈಸೆಮಿಕ್ ಗುಣಾಂಕವನ್ನು ಹೊಂದಿದ್ದು ನಿಧಾನವಾಗಿ ರಕ್ತದಲ್ಲಿ ಸಕ್ಕರೆಯನ್ನು ಸೇರಿಸುವ ಕಾರಣ ಮಧುಮೇಹಿಗಳೂ ರಸಗುಲ್ಲಾವನ್ನು ಸುರಕ್ಷಿತವಾಗಿ ಸೇವಿಸಬಹುದು (ಅಲ್ಪ ಪ್ರಮಾಣದಲ್ಲಿ) ಅಲ್ಲದೇ ಇದರಲ್ಲಿ ವಿಟಮಿನ್ ಬಿ, ಫೋಲೇಟ್ ಮತ್ತು ಥಿಯಾಮಿನ್ ನಂತಹ ಪೋಷಕಾಂಶಗಳೂ ಇದ್ದು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತವೆ. ರಸಗುಲ್ಲಾ ಬಗ್ಗೆ ಇರುವ ಇನ್ನೊಂದು ಅಚ್ಚರಿಯ ಮಾಹಿತಿ ಎಂದರೆ ಇದು ಗುಲಾಬ್ ಜಾಮೂನಿಗಿಂತಲೂ ಆರೋಗ್ಯಕರ ಸಿಹಿತಿನಿಸಾಗಿದೆ. ಗುಲಾಬ್ ಜಾಮೂನ್ ಅನ್ನು ಹುರಿದು ಗಾಢವಾದ ಸಕ್ಕರೆ ಪಾಕದಲ್ಲಿ ಮುಳುಗಿಸಿರಲಾಗಿರುತ್ತದೆ. ಹಾಗಾಗಿ ಗುಲಾಬ್ ಜಾಮೂನ್ ರುಚಿಯಾಗಿದ್ದರೂ ಅಷ್ಟೊಂದು ಆರೋಗ್ಯಕರವಲ್ಲ.

ರಸಗುಲ್ಲಾ ತಯಾರಿಸುವುದು ಹೇಗೆ?

ರಸಗುಲ್ಲಾ ತಯಾರಿಸುವುದು ಹೇಗೆ?

ಸಮಪ್ರಮಾಣದಲ್ಲಿ ಛೇನಾ ಮತ್ತು ಚಿರೋಟಿ ರವೆಯನ್ನು ಮಿಶ್ರಣ ಮಾಡಿಕೊಂಡು ಹಾಗೂ ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಬೇಕು. ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನಾಗಿಸಿ ಸಕ್ಕರೆಯ ಪಾಕದಲ್ಲಿ ಬೇಯಿಸಿ ತಣಿಸಿದರೆ ರಸಗುಲ್ಲಾ ಸಿದ್ಧವಾಗುತ್ತದೆ.

English summary

Why Is Rasgulla Good For Health?

Rasgulla is a famous dessert that is made from ball-shaped dumplings of cheese curds (chhena) which is cooked in a light syrup made of sugar. This sweet is so famous that it led to a fight over its origin between the two states - West Bengal and Orissa. Among most of the other Indian sweets, rasgullas are relatively light on the body and they are a must on special occasions and festivals. Since they are lighter, one can gulp down more than one rasgulla at a time.
X
Desktop Bottom Promotion