For Quick Alerts
ALLOW NOTIFICATIONS  
For Daily Alerts

ತೂಕ ಕಳೆದುಕೊಳ್ಳಲು ಸೇವಿಸಬೇಕಾದ ಉಪಹಾರಗಳು

By Hemanth
|

ಭೂಮಿ ಮೇಲೆ ಒಬ್ಬ ವ್ಯಕ್ತಿ ಇರುವಂತೆ ಮತ್ತೊಬ್ಬ ಇರಲ್ಲ, ಪ್ರತಿಯೊಬ್ಬರ ದೇಹವು ಭಿನ್ನವಾಗಿರುವುದು. ಕೆಲವರು ಹುಟ್ಟಿನಿಂದಲೇ ತುಂಬಾ ಬೊಜ್ಜಿನ ದೇಹ ಹೊಂದಿದ್ದರೆ, ಉಳಿದವರು ತಿನ್ನುವಂತಹ ಆಹಾರ, ಜೀವನಶೈಲಿಯಿಂದಾಗಿ ದೇಹದ ಬೊಜ್ಜು ಹೆಚ್ಚಿಸಿಕೊಳ್ಳುವರು. ಇಂತವರಿಗೆ ದೇಹದ ಬೊಜ್ಜಿನಿಂದಾಗಿ ಕಾಯಿಲೆಗಳು ಬರಲು ಆರಂಭಿಸಿದಾಗ ತಾವು ಮಾಡಿರುವ ತಪ್ಪು ತಿಳಿಯುತ್ತದೆ.

ಬೆಳಗಿನ ಉಪಹಾರ ತಪ್ಪಿಸಿದರೆ - ಕಾದಿದೆ ಗಂಡಾಂತರ

ಈ ವೇಳೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವರು. ಇದಕ್ಕಾಗಿ ಕೆಲವರು ಆಹಾರವನ್ನೇ ತ್ಯಜಿಸುವರು. ಆದರೆ ಇದು ಸರಿಯಲ್ಲ. ತೂಕ ಇಳಿಸಲು ಒಮ್ಮೆಲೇ ಆಹಾರ ತ್ಯಜಿಸಿದರೆ ಅದರಿಂದ ಬೇರೆ ರೀತಿಯ ಅಡ್ಡಪರಿಣಾಮಗಳು ಬೀರುವುದು. ಇದಕ್ಕಾಗಿ ಬೆಳಗ್ಗಿನ ಉಪಾಹಾರ ಸಹಿತ ಪ್ರತಿಯೊಂದನ್ನು ಸೇವಿಸಬೇಕು. ಆದರೆ ಇದು ಆರೋಗ್ಯಕಾರಿಯಾಗಿರಬೇಕು ಎನ್ನುವುದು ಮುಖ್ಯ. ತೂಕ ಕಳೆದುಕೊಳ್ಳುವವರು ಯಾವ ರೀತಿಯ ಉಪಾಹಾರ ಸೇವಿಸಬಹುದು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.

ಉಪಾಹಾರದಲ್ಲಿ ಕ್ಯಾಲರಿ

ಉಪಾಹಾರದಲ್ಲಿ ಕ್ಯಾಲರಿ

ತೂಕ ಕಳೆದುಕೊಳ್ಳಬೇಕೆಂದು ಬಯಸುವಂತಹವರು ಬೆಳಗ್ಗಿನ ಉಪಾಹಾರದಲ್ಲಿ ಕ್ಯಾಲರಿ ಸೇವನೆ ಪರಿಗಣಿಸಬೇಕು. ಪ್ರತಿನಿತ್ಯ ತೂಕ ಕಳೆದುಕೊಳ್ಳಲು 1200 ಕ್ಯಾಲರಿಯಿಂದ 1800 ಕ್ಯಾಲರಿ ಮಧ್ಯೆ ಇರಬೇಕು. ನಿಮಗೆ ಕ್ಯಾಲರಿ ತಿಳಿದ ಬಳಿಕ ಇದನ್ನು ಮೂರು ಹೊತ್ತಿನ ಆಹಾರ ಸೇವನೆಯೊಂದಿಗೆ ವಿಂಗಡಿಸಿ, ಸಂಜೆಯ ತಿಂಡಿಗೆ 100ರಿಂದ 200 ಕ್ಯಾಲರಿಯನ್ನಿಡಿ.

ತೂಕ ಕಳೆದುಕೊಳ್ಳಲು ಬೆಳಗ್ಗಿನ ಉಪಾಹಾರಕ್ಕೆ 350-550 ಕ್ಯಾಲರಿ ಬೇಕಾಗುತ್ತದೆ. ತೂಕ ಕಳೆದುಕೊಳ್ಳಲು ಪ್ರತಿನಿತ್ಯ ಸೇವಿಸುವ ಕ್ಯಾಲರಿ ಬಗ್ಗೆ ನಿಮ್ಮ ವೈದ್ಯರಿಂದ ಸಲಹೆ ಪಡೆಯಿರಿ.

ಪ್ರೋಟೀನ್ ಅಧಿಕವಿರುವ ಆಹಾರಗಳು

ಪ್ರೋಟೀನ್ ಅಧಿಕವಿರುವ ಆಹಾರಗಳು

ತೂಕ ಕಳೆದುಕೊಳ್ಳಲು ನಿರ್ಧರಿಸುವಂತಹ ವೇಳೆ ನೀವು ಉಪಾಹಾರಕ್ಕೆ ಒಂದು ಪ್ರೋಟೀನ್ ಅಧಿಕವಾಗಿರುವ ಆಹಾರ ಆಯ್ಕೆ ಮಾಡಿ. ಯಾಕೆಂದರೆ ಕಾರ್ಬ್ರೋಹೈಡ್ರೇಟ್ಸ್ ಗಿಂತ ಹೆಚ್ಚಾಗಿ ಪ್ರೋಟೀನ್ ಹೊಟ್ಟೆಗೆ ತೃಪ್ತಿ ನೀಡುವುದು ಮತ್ತು ಇದು ದೇಹಕ್ಕೆ ಬೇಡದಿರುವ ಕೊಬ್ಬನ್ನು ಕರಗಿಸುವುದು.

ಆರೋಗ್ಯಕಾರಿಯಾಗಿ ಪ್ರೋಟೀನ್ ಅಧಿಕವಿರುವಂತಹ ಮೊಟ್ಟೆಯ ಬಿಳಿಭಾಗ(ಇದರಲ್ಲಿ 17 ಕ್ಯಾಲರಿ ಇದೆ), ಸಾದಾ ಮೊಸರು(ಇದರಲ್ಲಿ 100 ಕ್ಯಾಲರಿ), ಕಡಿಮೆ ಕೊಬ್ಬು ಇರುವ ಕಾಟೆಜ್ ಚೀಸ್(82 ಕ್ಯಾಲರಿ) ಮತ್ತು ತೊಫು(40 ಕ್ಯಾಲರಿ) ಸೇವಿಸಿ.

ನಾರಿನಾಂಶ ಅಧಿಕವಿರುವ ಆಹಾರ

ನಾರಿನಾಂಶ ಅಧಿಕವಿರುವ ಆಹಾರ

ನಾರಿನಾಂಶ ಅಧಿಕವಾಗಿರುವ ಆಹಾರವು ಹೊಟ್ಟೆಗೆ ತೃಪ್ತಿ ನೀಡಿ, ಹೊಟ್ಟೆ ತುಂಬಿದಂತೆ ಮಾಡುವುದು. ನಾರಿನಾಂಶ ಅಧಿಕವಾಗಿರುವ ಆಹಾರಗಳೆಂದರೆ ಓಟ್ ಮೀಲ್ಸ್, ಇಡೀ ಧಾನ್ಯದ ಸಿರೆಲ್, ಇಡೀ ಧಾನ್ಯದ ಟೋಸ್ಟ್, ಸ್ಟ್ರಾಬೆರ್ರಿ, ಸೇಬು, ಟೊಮೆಟೋ ಮತ್ತು ಬಾದಾಮಿ. ಅವಕಾಡೋ, ಬೀಜದ ಬೆಣ್ಣೆ ಮತ್ತು ಅಗಸೆ ಬೀಜವು ಆರೋಗ್ಯಕಾರಿ ಕೊಬ್ಬು ಮತ್ತು ಅಧಿಕ ನಾರಿನಾಂಶ ಹೊಂದಿರುವ ಆಹಾರಗಳು.

ಆರೋಗ್ಯಕಾರಿ ಉಪಾಹಾರದ ಸಂಯೋಜನೆ

ಆರೋಗ್ಯಕಾರಿ ಉಪಾಹಾರದ ಸಂಯೋಜನೆ

ತೂಕ ಕಳೆದುಕೊಳ್ಳುವ ನಿಮ್ಮ ಪ್ರಯತ್ನ ಸಫಲವಾಗಲು ನೀವು ಪ್ರೋಟೀನ್ ಅಧಿಕವಾಗಿರುವ ಮತ್ತು ನಾರಿನಾಂಶ ಹೆಚ್ಚಿರುವಂತಹ ಆಹಾರಗಳನ್ನು ಉಪಾಹಾರಕ್ಕೆ ಸೇವನೆ ಮಾಡಬೇಕು. ಉದಾಹರಣೆಗೆ ನೀವು ಕಡಿಮೆ ಕೊಬ್ಬು ಇರುವ ಹಾಲಿಗೆ ಇಡೀ ಧಾನ್ಯದ ಸಿರೇಲ್ ಹಾಕಿದ್ದರೆ, ಅದಕ್ಕೆ ಕೆಲವು ತುಂಡು ಸ್ಟ್ರಾಬೆರ್ರಿ ಅಥವಾ ಬಾದಾಮಿ ಹಾಕಿ.

ಸಾದಾ ಮೊಸರಿಗೆ ಓಟ್ ಮೀಲ್ ಮತ್ತು ಸೇಬಿನ ತುಂಡುಗಳನ್ನು ಹಾಕಿಕೊಳ್ಳಿ. ಇಡೀ ಧಾನ್ಯದ ಎರಡು ರೊಟ್ಟಿಗಳೊಂದಿಗೆ ತರಕಾರಿ ಪಲ್ಯ ಅಥವಾ ಒಂದು ಲೋಟ ಕಡಿಮೆ ಕೊಬ್ಬಿನ ಹಾಲು ಸೇವಿಸಬಹುದು.

ಲ್ಯಾಕ್ಟೋಸ್ ಅಸಹಿಷ್ಣುತೆ ಇದ್ದರೆ ನೀವು ಸ್ಟ್ರಾಬೆರ್ರಿ, ಸಾದಾ ಮೊಸರು, ಪಾಲಕ, ಬಾದಾಮಿ ಇತ್ಯಾದಿ ಹಾಕಿಕೊಂಡು ಸ್ಮೂಥಿ ಮಾಡಿದರೆ, ಇದು ಪ್ರೋಟೀನ್ ಅಧಿಕವಾಗಿರುವ ಉಪಾಹಾರವಾಗುವುದು.

ಇತರ ಉಪಾಹಾರ ಆಯ್ಕೆಗಳು

ಇತರ ಉಪಾಹಾರ ಆಯ್ಕೆಗಳು

ನಿಮಗೆ ಹೆಚ್ಚಿನ ಸಮಯವಿದ್ದರೆ ತುಂಬಾ ಆರೋಗ್ಯಕಾರಿಯಾಗಿರುವ ಉಪಾಹಾರ ತಯಾರಿಸಬಹುದು. ಉದಾಹರಣೆಗೆ ಬಾಳೆಹಣ್ಣಿನ ಪ್ಯಾನ್ ಕೇಕ್ ಅಥವಾ ಓಟ್ ಮೀಲ್ ಪ್ಯಾನ್ ಕೇಕ್ ನೊಂದಿಗೆ ಜೇನುತುಪ್ಪ ಮತ್ತು ದಾಲ್ಚಿನಿ ಜತೆಗೆ ಸೇವಿಸಿದರೆ ಇದು ತೂಕ ಕಳೆದುಕೊಳ್ಳಲು ತುಂಬಾ ಪರಿಣಾಮಕಾರಿ ಉಪಾಹಾರ. ಇಡ್ಲಿ, ದೋಸೆ, ಉಪ್ಪಿಟ್ಟು ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.

English summary

What To Eat For Breakfast When Trying To Lose Weight

Breakfast is the first meal of the day, and more so, we often tend to miss out on our breakfast, when in a hurry. Eating a healthy breakfast is essential to charge your body up for the day. And it is more important for those people who are trying to lose weight. The Indian cuisine is filled with a myriad of foods, including herbs, spices, beans and vegetables. Choosing the right type of food will determine your weight loss goal and you need to reduce your daily calorie intake as well.
Story first published: Friday, March 16, 2018, 17:04 [IST]
X
Desktop Bottom Promotion