For Quick Alerts
ALLOW NOTIFICATIONS  
For Daily Alerts

ರಂಜಾನ್ ಆಹಾರ ಪಥ್ಯ: ನೀವು ಪಾಲಿಸಬೇಕಾದ 9 ಆರೋಗ್ಯಕಾರಿ ಸಲಹೆಗಳು

By Sushma Charhra
|

ಇದೀಗ ರಂಜಾನ್ ತಿಂಗಳು, ಮುಸ್ಲೀಂ ಬಾಂಧವರು ರಂಜಾನ್ ಆಚರಿಸುತ್ತಿದ್ದು, ಇದು ಅವರ ಉಪವಾಸದ ದಿನಗಳು. ಇದು ಅವರ ತುಂಬಾ ಮಹತ್ವದ ದಿನಗಳೂ ಕೂಡ ಹೌದು. ಸೂರ್ಯ ಹುಟ್ಟಿ, ಸೂರ್ಯ ಮುಳುಗುವವರೆಗೆ ಅವರು ಏನನ್ನೂ ಸೇವಿಸುವುದಿಲ್ಲ. ಸೂರ್ಯ ಹುಟ್ಟುವ ಮುನ್ನ ಸೇವಿಸುವ ಆಹಾರವನ್ನು "ಸೇಹರ್" ಎಂತಲೂ, ಸೂರ್ಯ ಮುಳುಗಿದ ನಂತರ ಸೇವಿಸುವ ಆಹಾರವನ್ನು " ಇಫ್ತಾರ್" ಎಂದು ಕರೆಯಲಾಗುತ್ತೆ. ಹಾಗಾಗಿ ನಾವಿಲ್ಲಿ ರಂಜಾನ್ ನಲ್ಲಿ ಏನನ್ನು ಸೇವಿಸಬೇಕು ಮತ್ತು ಯಾವ ಆಹಾರವನ್ನು ಸೇವಿಸದೇ ಇರುವುದು ಒಳಿತು ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ... ಮುಂದೆ ಓದಿ..

ಮುಸ್ಲೀಂ ಬಾಂಧವರು ರಂಜಾನ್ ನಲ್ಲಿ ಉಪವಾಸ ಮಾಡಲು ಕಾರಣವೇನು?

ರಂಜಾನ್ ಸಮಯ ಒಂದು ಆಧ್ಮಾತ್ಮಿಕ ಪ್ರತಿಬಿಂಬ,ಅಭಿವೃದ್ಧಿ ಮತ್ತು ಭಕ್ತಿಯ ಸಂಕೇತದ ದಿನಗಳು. ಮುಸ್ಲೀಂಮರು ಈ ದಿನಗಳಲ್ಲಿ ಇಸ್ಲಾಂ ನ್ನು ಪಠಿಸುತ್ತಾರೆ ಮತ್ತು ಉಪವಾಸವಿದ್ದು ಭಕ್ತಿಯನ್ನು ಸಮರ್ಪಿಸುತ್ತಾರೆ.ಉಪವಾಸದ ಮೂಲಕ ತಮ್ಮನ್ನ ತಾವು ಋಣಾತ್ಮಕತೆಯಿಂದ ನಿಗ್ರಹಿಸಿಕೊಳ್ಳುವ ಒಂದು ಪ್ರಕ್ರಿಯೆ. ಸೇಹರ್ ಅಂರೆ ಸೂರ್ಯ ಹುಟ್ಟುವ ಮುನ್ನ ಫರ್ಜ್ ಪ್ರಾರ್ಥನೆ ಮಾಡಿದ ನಂತರ ಸೇವಿಸುವ ಆಹಾರ, ಇದನ್ನು ಆಶಿರ್ವಾದದಂತೆ ಸ್ವೀಕರಿಸಲಾಗುತ್ತೆ.ಸೂರ್ಯ ಹುಟ್ಟುವ ಮುನ್ನವೇ ತಿಂಡಿಯನ್ನು ಸೇವಿಸಬೇಕಾಗುತ್ತದೆ ಮತ್ತು ಇದು ತುಂಬಾ ಮಹತ್ವದ ಆಹಾರವಾಗಿರುವುದರಿಂದ ಯಾರೂ ಕೂಡ ಇದನ್ನು ತಪ್ಪಿಸಲೇಬಾರದು.

health tips in kannada

ಉಪವಾಸದ ದಿನಗಳಲ್ಲಿ ದೇಹದಲ್ಲಿ ಏನಾಗುತ್ತೆ?

ನಿಮ್ಮ ದೇಹ ಉಪವಾಸದ ಸ್ಥಿತಿಗೆ ತಲುಪುತ್ತದೆ ಅಂದರೆ ನೀವು ಸೇವಿಸಿದ ಕೊನೆಯ ಆಹಾರದಿಂದ ಕರುಳು ಪೋಷಕಾಂಶಗಳನ್ನು ಹೀರಿಕೊಳ್ಳಲು ಪಾರಂಭಿಸುತ್ತೆ. ಉಪವಾಸದಲ್ಲಿ, ನಿಮ್ಮ ದೇಹದಲ್ಲಿ ಶೇಖರಣೆಯಾಗಿರುವ ಗ್ಲೂಕೋಸ್ ಅಂಶವು ಶಕ್ತಿಯನ್ನು ಕರುಣಿಸುತ್ತೆ ಮತ್ತು ಹಾಗಾಗಿ ನೀವು ನ್ಯೂಟ್ರಿಯಂಟ್ಸ್ ಅಧಿಕವಾಗಿರುವ ಆಹಾರಗಳನ್ನು ಉಪವಾಸದ ಸಂದರ್ಭದಲ್ಲಿ ಸೇವಿಸಬೇಕು ಮತ್ತು ಆ ಮೂಲಕ ಶಕ್ತಿಯನ್ನು ಪಡೆಯಬೇಕು. ಹಲವು ಗಂಟೆಗಳ ಕಾಲದ ಉಪವಾಸದಿಂದಾಗಿ ಆರೋಗ್ಯಕರವಾದ ಆಹಾರ ಸೇವನೆ ಒಂದು ಕನಸು. ಆದರೆ ಅದು ನಿಜಕ್ಕೂ ನಿಮ್ಮ ದೇಹಕ್ಕೆ ಅಗತ್ಯವಿರುತ್ತೆ. ಯಾವಾಗಲೂ ತಾಜಾ ಪದಾರ್ಥಗಳಿಂದ ತಯಾರಿಸಿದ ಆಹಾರಗಳನ್ನು ಸೇವಿಸಿ ಮತ್ತು ಆ ಮೂಲಕ ನಿಮ್ಮ ದೇಹಕ್ಕೆ ಅಗತ್ಯ ವಿಟಮಿನ್ ಮತ್ತು ಮಿನರಲ್ ಗಳು ಲಭ್ಯವಾಗುವಂತೆ ಮಾಡಿಕೊಳ್ಳುವುದು ಬಹಳ ಮುಖ್ಯ, ರಂಜಾನ್ ನಲ್ಲಿ ಏನು ತಿನ್ನಬೇಕು? ರಂಜಾನ್ ಆಚರಣೆಯಲ್ಲಿ ಪಾಲಿಸಬೇಕಾದ 9 ಆರೋಗ್ಯಕಾರಿ ಸಲಹೆಗಳು ನೀವು ಯಾವೆಲ್ಲ ಆಹಾರಗಳನ್ನು ಸೇವಿಸಬೇಕು ಎಂಬ ಬಗೆಗಿನ ಮಾಹಿತಿ ಈ ಕೆಳಕಂಡಂತೆ ಇದೆ :

1. ನಿಮ್ಮ ಉಪವಾಸವನ್ನು ಖರ್ಜೂರ ತಿನ್ನುವ ಮೂಲಕ ಬ್ರೇಕ್ ಮಾಡಿ, ಯಾಕೆಂದರೆ ಇದು ಸುಲಭದಲ್ಲಿ ಜೀರ್ಣವಾಗುತ್ತೆ ಮತ್ತು ನಿಮ್ಮ ಮೆಟಾಬಲಿಸಮ್ ಚಟುವಟಿಕೆಗೆ ಬಹಳ ಸಹಕಾರಿಯಾಗಿದ್ದು ಇಡೀ ದಿನ ನಿಮ್ಮನ್ನು ಕಾಪಾಡುತ್ತೆ. ಖರ್ಜೂರದಲ್ಲಿ ಸಕ್ಕರೆ ಅಂಶ ಅಧಿಕವಾಗಿರುತ್ತೆ ಮತ್ತು ಫೈಬರ್, ಮಿನರಲ್ ಗಳು ಹೆಚ್ಚಿರುವುದರಿಂದಾಗಿ ಶಕ್ತಿವರ್ಧಕವಾಗಿ ಇದು ಕೆಲಸ ಮಾಡುತ್ತೆ. ಇದಕ್ಕೆ ಇನ್ನಷ್ಟು ಮಾಹಿತಿ ಸೇರಿಸಿ ಹೇಳುವುದಾದರೆ ಇದು ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತೆ. ಯಾಕೆಂದರೆ ಈ ದಿನಗಳಲ್ಲಿ ನಿಮ್ಮ ಊಟದ ಸಮಯದಲ್ಲಿ ವ್ಯತ್ಯಯವಾಗುವುದರಿಂದಾಗಿ ಮತ್ತು ಉಪವಾಸದಿಂದಾಗಿ ದೇಹಕ್ಕೆ ಫೈಬಲ್ ಅಂಶ ಕಡಿಮೆಯಾಗುವುದರಿಂದಾಗಿ ಈ ಸಮಸ್ಯೆ ಎದುರಾಗುತ್ತೆ. ಆದರೆ ನೆನಪಿರಲಿ. ಎರಡಕ್ಕಿಂತ ಹೆಚ್ಚು ಖರ್ಜೂರ ತಿನ್ನುವುದು ಒಳ್ಳೆಯದಲ್ಲ. ಯಾಕೆಂದರೆ ಇದರಲ್ಲಿ ಕ್ಯಾಲೋರಿ ಅಂಶ ಮತ್ತು ಸಕ್ಕರೆ ಅಧಿಕವಾಗಿರುತ್ತೆ. ಇದು ನಿಮ್ಮ ಹಸಿವನ್ನು ತಡೆದು ಬಿಡಬಹುದು.

2. ಸ್ವಲ್ಪ ಪ್ರಮಾಣದ ಸೂಪ್ ಸೇವಿಸಿ- ಮುಖ್ಯವಾಗಿ ತರಕಾರಿಗಳಿಂದ ತಯಾರಿಸಿದ ಸೂಪ್ ಸೇವಿಸಿ. ಕ್ರೀಮ್ ಗಳನ್ನು ಸೂಪ್ ನಲ್ಲಿ ಬಳಸದೇ ಇರುವುದು ಸೂಕ್ತ. ನಿಧಾನವಾಗಿ ಸೂಪ್ ಸೇವಿಸಿ.,ಇದು ನಿಮ್ಮ ಜೀರ್ಣಕ್ರಿಯೆಗೆ ಸಹಕಾರಿಯಾಗಿರುತ್ತೆ ಮತ್ತು ಅತಿಯಾದ ಆಹಾರ ಸೇವನೆಯನ್ನು ಇದು ಕಡಿಮೆ ಮಾಡುತ್ತೆ. ಬ್ರೋಕೋಲಿ, ಸ್ಪ್ಯಾಲಿಷ್, ಹಸಿರು ಬೀನ್ಸ್ ಗಳು, ಕ್ಯಾರೆಟ್, ಬಟಾಣಿಗಳು ನಿಮ್ಮ ಸೂಪ್ ನಲ್ಲಿರಲಿ.

3. ನಿಮ್ಮ ಡಯಟ್ ನಲ್ಲಿ ಎಲ್ಲಾ ತರಕಾರಿ ಮಿಶ್ರಿತ ಸಲಾಡ್ ಸೇವಿಸುವುದನ್ನು ಮರೆಯಬೇಡಿ. ಹಸಿರು ಮಾವು, ಫೆನ್ನೆಲ್ ಬೀಜ, ಕೊತ್ತುಂಬರಿ ಬೀಜ, ಶುಂಠಿ, ಚಕ್ಕೆ ಇಂತವುಗಳನ್ನು ಬಳಕೆಯಿಂದ ನಿಮ್ಮ ಮೆಟಬಾಲಿಸಂ ಕ್ರಿಯೆಯನ್ನು ಸಹಜವಾಗಿಡಬಹುದು.

4.ಪ್ರೋಟೀನ್ ಅಧಿಕವಾಗಿರುವ ಆಹಾರಗಳನ್ನು ಉಪವಾಸದ ದಿನಗಳಲ್ಲಿ ಸೇವಿಸುವುದು ಬಹಳ ಮುಖ್ಯ.ಆ ಮೂಲಕ ನೀವು ಹಸಿವನ್ನು ತಡೆಯಬಹುದು. ನೀವು ರೀಫೈನ್ಡ್ ಕಾರ್ಬೋಹೈಡ್ರೇಟ್ ಗಳನ್ನು ಸೇವಿಸಿದರೆ ಅವು ನಿಮಗೆ ಮೂರು ನಾಲ್ಕು ಗಂಟೆಗಳಲ್ಲೇ ಮತ್ತೆ ಹಸಿವಾಗುವಂತೆ ಮಾಡುತ್ತೆ ಯಾಕೆಂದರೆ ಅದರಲ್ಲಿ ನ್ಯೂಟ್ರಿಯಂಟ್ ವ್ಯಾಲ್ಯೂ ಕಡಿಮೆ ಇರುತ್ತೆ

5.ಕಬಾಬ್ ಮತ್ತು ಸಬ್ಜಿಗಳಲ್ಲಿ ನಿಮ್ಮ ದೇಹವನ್ನು ಡೀಟಾಕ್ಸ್ ಮಾಡುವ ಆಹಾರ ಪದಾರ್ಥಗಳು ಮತ್ತು ನಿಮ್ಮನ್ನು ಶಾಂತಚಿತ್ತರನ್ನಾಗಿಸುವ ಆಹಾರಗಳನ್ನು ಅಳವಡಿಸಿಕೊಳ್ಳಿ.

6.ಇಫ್ತಾರ್ ಮತ್ತು ಸೇಹರ್ ನಡುವಿನ ಸಮಯದಲ್ಲಿ ನೀರನ್ನು ಅತಿಯಾಗಿ ಸೇವಿಸಿ ಮತ್ತು ಹಣ್ಣಿನ ಜ್ಯೂಸ್ ಸೇವನೆ ಮಾಡಿ ಇದರಿಂದಾಗಿ ಡಿಹೈಡ್ರೇಷನ್ ಆಗುವುದನ್ನು ತಪ್ಪಿಸಿಕೊಳ್ಳಬಹುದು.ಅತಿಯಾದ ತಾಪಮಾನವು ನಿಮ್ಮನ್ನು ಹೆಚ್ಚು ಬೆವರುವಂತೆ ಮಾಡಬಹುದು. ಹಾಗಾಗಿ ದ್ರವ ಪದಾರ್ಥಗಳ ಸೇವನೆ ಬಹಳ ಮುಖ್ಯ. ಕಡಿಮೆಯೆಂದರೂ ಮೂರು ಲೀಟರ್ ದ್ರವ ಅಂಶಗಳನ್ನು ಸೇವಿಸಿ ಹಗಲಿನಲ್ಲಿ ನೀವು ಕಳೆದುಕೊಳ್ಳುವ ನೀರಿನಂಶವನ್ನು ಮತ್ತೆ ಪಡೆಯಿರಿ. ಹೈಡ್ರೇಟೆಡ್ ಫುಡ್ ಗಳನ್ನು ಸೇವಿಸುವ ಮುಖಾಂತರ ನೀವು ನೀರಿನಂಶ ಅಧಿಕವಾಗಿ ದೇಹಕ್ಕೆ ಸೇರುವಂತೆ ಮಾಡಿಕೊಳ್ಳಬಹುದು.

7.ಅತಿಯಾಗಿ ಆಹಾರ ಸೇವಿಸುವುದು ಅಜೀರ್ಣವನ್ನುಂಟು ಮಾಡಬಹುದು. ಮತ್ತು ದೇಹತೂಕವನ್ನು ಹೆಚ್ಚಿಸಬಹುದು.ನಿಧಾನವಾಗಿ , ಜಗಿದು, ಪ್ರತಿ ತುತ್ತನ್ನು ಆಸ್ವಾದಿಸಿ ಆಹಾರ ಸೇವಿಸಿ,

8. ಕರಿದ ಆಹಾರ, ಅತಿಯಾದ ಉಪ್ಪಿನಂಶವಿರುವ ಆಹಾರ, ಅತಿಯಾದ ಸಕ್ಕರೆ ಅಂಶವಿರುವ ಆಹಾರ ಮತ್ತು ಅತಿಯಾದ ಕೊಬ್ಬಿನಂಶವಿರುವ ಆಹಾರಗಳನ್ನು ಸೇವಿಸಬೇಡಿ.ಯಾಕೆಂದರೆ ಇದು ಹೆಚ್ಚು ಬಾಯಾರಿಕೆಯನ್ನು ಸೃಷ್ಟಿ ಮಾಡುತ್ತೆ. ಗ್ರಿಲ್ ಮಾಡಿರುವ, ಬೇಕ್ ಮಾಡಿರುವ, ಮತ್ತು ಸ್ಟೀಮ್ ಮಾಡಿರುವ ಆಹಾರಗಳು ಹೆಚ್ಚು ಸಮಯ ನಿಮ್ಮನ್ನು ಹಸಿವೆಯಿಂದ ತಡೆಯುತ್ತೆ.

9.ಕೇಫೀನ್ ಅಂಶವಿರುವ ಆಹಾರವನ್ನು ಸೇವಿಸಬೇಡಿ,, ಕಾಫಿ, ಟೀ, ಸೋಡಾ ಇತ್ಯಾದಿಗಳು ನಿಮ್ಮ ದೇಹದಲ್ಲಿ ಫ್ಲೂಯಿಡ್ ಅಂಶವನ್ನು ಕಡಿಮೆ ಮಾಡುತ್ತೆ ಮತ್ತು ಮೂತ್ರವರ್ಧಕಗಳಂತೆ ವರ್ತಿಸುತ್ತೆ. ಈ ಎಲ್ಲಾ ಸರಳವಾದ ಡಯಟ್ ಸಲಹೆಗಳನ್ನು ರಂಜಾನ್ ನಲ್ಲಿ ಪಾಲಿಸಿದರೆ, ನಿಮ್ಮ ರಕ್ತದೊತ್ತಡವನ್ನು ಸ್ಥಿರವಾಗಿಡಲು ನೆರವಾಗುತ್ತೆ ಮತ್ತು ನಿಮ್ಮ ಕೊಲೆಸ್ಟ್ರಾಲ್ ಲೆವೆಲ್ ಕೂಡ ಕಂಟ್ರೋಲ್ ನಲ್ಲಿರಲು ಸಹಾಯ ಮಾಡುತ್ತೆ.

English summary

What To Eat During Ramadan: 9 Healthy Eating Tips To Follow During Ramadan

Ramadan is observed by Muslims all around the world as a period of fasting to commemorate the best times. Muslims fast from dawn to sunset; the pre-dawn meal is known as 'Sehar' and sunset meal is known as 'Iftar'. So, here we will be sharing what to eat during Ramadan and what to avoid. Let's get started!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more