For Quick Alerts
ALLOW NOTIFICATIONS  
For Daily Alerts

ಸರಿಯಾಗಿ ಊಟ-ತಿಂಡಿ ಮಾಡದೇ ಇದ್ದರೆ, ಇದೆಲ್ಲಾ ಸಮಸ್ಯೆ ಕಾಡಬಹುದು!

|

ಬೊಜ್ಜು ಕರಗಿಸಲು ಕೆಲವು ಆಹಾರ ಪಥ್ಯ ಮಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಅದರಲ್ಲೂ ಕೆಲವರು ಫಿಟ್ ಆಗಿರಲೆಂದು ಆಹಾರ ಪಥ್ಯ ಮಾಡುವರು. ಇನ್ನು ಕೆಲವರು ದೇಹವನ್ನು ಸದೃಢವಾಗಲು ಅತಿಯಾಗಿ ತಿನ್ನುವರು. ಆದರೆ ಇವೆರಡು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಯಾಕೆಂದರೆ ದಿನನಿತ್ಯಕ್ಕೆ ನಮ್ಮ ದೇಹಕ್ಕೆ ಒಂದು ಪ್ರಮಾಣದ ಕ್ಯಾಲೋರಿ ಬೇಕಾಗುತ್ತದೆ. ಇದರಿಂದ ನಮ್ಮ ದೇಹವು ಸರಿಯಾಗಿ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ.

ಆದರೆ ಕೆಲವು ಸಂದರ್ಭಗಳಲ್ಲಿ ಅತಿಯಾಗಿ ಆಹಾರ ಪಥ್ಯ ಮಾಡುವ ಕಾರಣದಿಂದ ಅಥವಾ ಸರಿಯಾಗಿ ಊಟ-ತಿಂಡಿ ಮಾಡದೇ ಇರುವುದರಿಂದ ದೇಹಕ್ಕೆ ಬೇಕಾಗಿರುವಂತಹ ಪ್ರಮುಖ ಪೋಷಕಾಂಶಗಳು ಸಿಗುವುದಿಲ್ಲ. ಒಂದು ವೇಳೆ ನಿಮ್ಮ ದೇಹದಲ್ಲಿ ಈ ಕೆಳಗಿನ ಬದಲಾವಣೆಗಳು ಆಗುತ್ತಲಿದ್ದರೆ ಆಗ ನೀವು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ., ಮುಂದೆ ಓದಿ

ಎಲ್ಲಾ ಸಮಯದಲ್ಲಿ ನಿಶ್ಯಕ್ತಿ/ಆಯಾಸ

ಎಲ್ಲಾ ಸಮಯದಲ್ಲಿ ನಿಶ್ಯಕ್ತಿ/ಆಯಾಸ

ಕ್ಯಾಲೋರಿ ಕಡಿಮೆ ಸೇವನೆ ಮಾಡುವುದರಿಂದ ದೇಹವು ಯಾವಾಗಲೂ ನಿಶ್ಯಕ್ತಿ ಮತ್ತು ಆಯಾಸದಿಂದ ಬಳಲುವುದು. ತೂಕ ಇಳಿಸುವ ಹೆಚ್ಚಿನ ಕ್ರಮಗಳಲ್ಲಿ ಕಡಿಮೆ ಕ್ಯಾಲೋರಿ ಸೇವನೆ ಮಾಡಿ ಎಂದು ಹೇಳಲಾಗುತ್ತದೆ. ಇದರಿಂದ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಿರುವ ಕ್ಯಾಲೋರಿಯು ಸಿಗದು. ಇದರಿಂದ ಚಯಾಪಚಯ ಕ್ರಿಯೆಯು ನಿಧಾನವಾಗುವುದು ಮತ್ತು ಯಾವಾಗಲೂ ಬಳಲಿಕೆ ಕಂಡುಬರುವುದು. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕ್ಯಾಲೋರಿ ಕಡಿಮೆ ಸೇವನೆಯಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು. ಆದರೆ ಪೋಷಕಾಂಶಗಳ ಕೊರತೆ ನಿಶ್ಯಕ್ತಿಗೆ ಕಾರಣವಾಗಬಹುದು. ಸಂಸ್ಕರಿಸಿದ ಸಕ್ಕರೆ ಹಾಗೂ ಕಾಬ್ರೋಹೈಡ್ರೆಟ್ಸ್ ಗಳಿಂದ ಕೂಡ ಹೀಗೆ ಆಗಬಹುದು. ಇದಕ್ಕಾಗಿ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಸೇವನೆ ಮಾಡಿ. ಇದರಿಂದ ತಳಮಟ್ಟದ ಪ್ರೋಟೀನ್ ಮತ್ತು ಜಟಿಲ ಕಾಬ್ರೋಹೈಡ್ರೆಟ್ಸ್ ಗಳು ದಿನವಿಡಿ ನಿಮ್ಮನ್ನು ಉಲ್ಲಾಸಿತರಾಗಿರುವಂತೆ ಮಾಡುತ್ತದೆ. ದಿನಕ್ಕೆ ಮೂರು ಊಟ ಮತ್ತು ಪೋಷಕಾಂಶವುಳ್ಳ ತಿಂಡಿ ತಿನ್ನಿ.

ಎಲ್ಲಾ ಸಮಯ ಹಸಿವಾಗುವುದು

ಎಲ್ಲಾ ಸಮಯ ಹಸಿವಾಗುವುದು

ತುಂಬಾ ಕಡಿಮೆ ಸಮಯದಲ್ಲಿ ನಮಗೆ ಹಸಿವಾದರೆ ಆಗ ನಾವು ಸೇವಿಸುವಂತಹ ಆಹಾರವು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದೆ ಎಂದು ಭಾವಿಸಬೇಕು. ಹಲವಾರು ಸಿದ್ಧಾಂತಗಳು ಇದನ್ನು ಭಿನ್ನವಾಗಿಯೇ ಹೇಳಿರುವುದು ಮತ್ತು ಚಯಾಪಚಯ ವೇಗವಾಗಿ ಆದರೂ ಹಸಿವಾಗುವುದು. ಅದಾಗ್ಯೂ, ನಮಗೆ ಯಾವಾಗ ಎಲ್ಲಾ ಸಮಯದಲ್ಲಿ ಹಸಿವು ಮತ್ತು ಆಯಾಸವಾಗುವುದು ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ನಮ್ಮ ದೇಹಕ್ಕೆ ನಾವು ಒದಗಿಸುವ ಕ್ಯಾಲರಿಗಿಂತ ಹೆಚ್ಚಿನ ಕ್ಯಾಲರಿ ಬೇಕಾಗಿದೆ. ಕೆಲವರಿಗೆ ಊಟದೊಂದಿಗೆ ಲಘು ಪಾನೀಯಗಳನ್ನು ಸೇವಿಸುವ ಅಭ್ಯಾಸವಿರುತ್ತದೆ. ಇದು ಕೇವಲ ಪ್ರತಿಷ್ಠೆಯ ವಿಷಯವಾಗಿದ್ದು ಆರೋಗ್ಯಕ್ಕೆ ಯಾವುದೇ ನಿಟ್ಟಿನಲ್ಲಿ ಪ್ರಯೋಜನವಿಲ್ಲ. ಏಕೆಂದರೆ ಬುರುಗು ಬರಲು ಬಳಸುವ ಇಂಗಾಲದ ಡೈ ಆಕ್ಸೈಡ್ ನಮಗೆ ಬೇಡವೆಂದೇ ನಾವು ಉಸಿರಿನಿಂದ ಹೊರಗೆ ಹಾಕುತ್ತಿದ್ದು ಬಲವಂತವಾಗಿ ಈಗ ನೀರಿನಲ್ಲಿ ಕರಗಿಸಿ ಕುಡಿಯುತ್ತಿದ್ದೇವೆ. ಇದು ಹೊಟ್ಟೆಯಲ್ಲಿ ಜೀರ್ಣಕ್ರಿಯೆಯನ್ನು ಬಾಧಿಸುತ್ತದೆ. ಊಟದ ಕೊಂಚ ಹೊತ್ತಿನ ಬಳಿಕ ಎಲ್ಲಾ ಗಾಳಿ ಹೊರಗೆ ಹೋದ ಮೇಲೆ ಅಲ್ಲಿದ್ದ ಖಾಲಿಜಾಗವನ್ನು ಆಕ್ರಮಿಸಿಕೊಳ್ಳಲು ಹೊಟ್ಟೆ ಹೆಚ್ಚಿನ ಆಹಾರ ಕಳಿಸಿ ಎಂದು ಸೂಚನೆ ನೀಡುತ್ತದೆ.

ಕೂದಲು ಉದುರುವಿಕೆ

ಕೂದಲು ಉದುರುವಿಕೆ

ಕಡಿಮೆ ಆಹಾರ ಸೇವನೆ ಮಾಡುವುದರಿಂದ ಕೂದಲು ಉದುರುವಿಕೆ ಸಮಸ್ಯೆಯು ಕಾಡುವುದು. ನಮ್ಮ ಕೂದಲಿನ ಬೆಳವಣಿಗೆಗೆ ಸರಿಯಾದ ಪೋಷಕಾಂಶಗಳು ಮತ್ತು ನೈಸರ್ಗಿಕ ಪೋಷಣೆ ಬೇಕಾಗಿದೆ. ನಾವು ಆಹಾರ ಪಥ್ಯ ಕೈಗೊಂಡಾಗ ಆಹಾರ ಪ್ರಮಾಣ ಕಡಿಮೆ ಮಾಡುತ್ತೇವೆ ಮತ್ತು ಇದರಿಂದ ಕೂದಲು ಉದುರುವುದು. ಇದರಿಂದಾಗಿ ಕೂದಲಿನ ನೈಸರ್ಗಿಕ ಕಾಂತಿಯು ಕಳೆದುಹೋಗುವುದು.

ನಿದ್ರೆಯ ಸಮಸ್ಯೆಯು ಕಾಡುವುದು

ನಿದ್ರೆಯ ಸಮಸ್ಯೆಯು ಕಾಡುವುದು

ನಾವು ಕಡಿಮೆ ಆಹಾರ ತಿಂದರೆ ಆಗ ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುವುದು. ಕಠಿಣ ಆಹಾರ ಪಥ್ಯದಿಂದಾಗಿ ನಮ್ಮ ನಿದ್ರೆಗೆ ತೊಂದರೆ ಮತ್ತು ಪರಿಪೂರ್ಣ ನಿದ್ರೆಗೆ ಸಮಸ್ಯೆಯಾಗುವುದು. ಕಡಿಮೆ ಆಹಾರ ಸೇವನೆ ಮಾಡಿದರೆ ಅದರಿಂದ ಬೆಳಗ್ಗೆ ತುಂಬಾ ತಾಜಾವಾಗಿ ಎದ್ದೇಳಲು ಆಗದು. ಬೆಳಗ್ಗೆ ಏಳುವಾಗ ಆಯಾಸ ಅಥವಾ ಉದಾಸೀನತೆಯು ಕಾಣಿಸುವುದು. ಈ ರೀತಿಯಾಗುತ್ತಲಿದ್ದರೆ ನೀವು ಹೆಚ್ಚಿನ ಆರೋಗ್ಯಕಾರಿ ಆಹಾರ ಸೇವಿಸಿ.

ಎಲ್ಲಾ ಸಮಯದಲ್ಲೂ ನಿಮಗೆ ಚಳಿಯಾಗುವುದು

ಎಲ್ಲಾ ಸಮಯದಲ್ಲೂ ನಿಮಗೆ ಚಳಿಯಾಗುವುದು

ಎಲ್ಲಾ ಸಮಯದಲ್ಲೂ ಚಳಿಯಾಗುವುದು ಕೆಲವರಿಗೆ ದೊಡ್ಡ ರಹಸ್ಯವಾಗಿರುವುದು. ದೇಹಕ್ಕೆ ಸರಿಯಾಗಿ ಕ್ಯಾಲರಿ ಸಿಗದೆ ಇರುವಾಗ ದೇಹದ ತಾಪಮಾನವು ಕಡಿಮೆಯಾಗುವುದು. ಇದರಿಂದ ನಿಮಗೆ ಮುಂದಿನ ಸಲ ಎಲ್ಲಾ ಸಮಯದಲ್ಲೂ ಚಳಿಯಾಗುತ್ತಲಿದ್ದರೆ ಆಗ ನೀವು ತಿನ್ನುವ ಆಹಾರದ ಬಗ್ಗೆ ಗಮನಕೊಡಿ. ಅಲ್ಲದೆ ಚಳಿಗಾಲದಲ್ಲಿ ಲಿಂಬೆ ಜಾತಿಯ ಹಣ್ಣುಗಳು ಅಂದರೆ ಕಿತ್ತಳೆ, ಮೂಸಂಬಿ, ಚಕ್ಕೋತ, ಗಜಲಿಂಬೆ ಮೊದಲಾದವುಗಳಲ್ಲಿ ಪ್ರಮುಖವಾಗಿ ವಿಟಮಿನ್ ಸಿ. ಮತ್ತು ರೋಗಗಳಿಗೆ ಕಾರಣವಾಗುವ ವೈರಸ್ಸುಗಳಿಗೆ ಎದುರಾಗಿ ಹೋರಾಡಲು ನೆರವಾಗುವ ಫ್ಲೇವನಾಯ್ಡ್ ಎಂದ ಪೋಷಕಾಂಶಗಳಿವೆ. ಅಲ್ಲದೇ, ರಕ್ತದಲ್ಲಿನ ಕೆಟ್ಟ ಕೊಲೆಸ್ಟರಾಲ್ ಅನ್ನು ಹೊರಹಾಕಿ ದೇಹದಲ್ಲಿ ಉತ್ತಮ ಕೊಲೆಸ್ಟರಾಲ್ ಶೇಖರವಾಗುವಲ್ಲಿ ನೆರವಾಗುತ್ತವೆ. ಚಳಿಗಾಲದಲ್ಲಿ ಈ ಹಣ್ಣುಗಳ ಸೇವನೆ ದೇಹಕ್ಕೆ ಅತ್ಯುತ್ತಮವಾಗಿವೆ. ಆದರೆ ಇವುಗಳನ್ನು ತಾಜಾ ರೂಪದಲ್ಲಿ ಅಥವಾ ತಾಜಾ ಹಣ್ಣಿನಿಂದ ತೆಗೆದ ರಸವನ್ನು ಸೇವಿಸಿದರೆ ಉತ್ತಮ. ಬಾಟಲಿರೂಪದಲ್ಲಿರುವ ಅಥವಾ ಸಂಸ್ಕರಿಸಿದ ಜ್ಯೂಸ್ ಗಳು ಅಷ್ಟು ಪ್ರಯೋಜನಕಾರಿಯಲ್ಲ.

ಮಲಬದ್ಧತೆ ಅಥವಾ ಜೀರ್ಣಕ್ರಿಯೆ ಸಮಸ್ಯೆ

ಮಲಬದ್ಧತೆ ಅಥವಾ ಜೀರ್ಣಕ್ರಿಯೆ ಸಮಸ್ಯೆ

ತೂಕ ಕಳೆದುಕೊಳ್ಳುವವರಿಗೆ ದೊಡ್ಡ ಸಮಸ್ಯೆಯೆಂದರೆ ಅದು ಮಲಬದ್ಧತೆ. ನಮ್ಮ ದೇಹವು ಮಲ ಉತ್ಪಾದಿಸಲು ಹೆಚ್ಚಿನ ಆಹಾರ ಬೇಕಾಗಿರುವುದು. ಕಡಿಮೆ ಆಹಾರ ಸೇವನೆ ಮಾಡಿದರೆ ಆಗ ಜೀರ್ಣಕ್ರಿಯೆ ಸಮಸ್ಯೆಯು ಬರುವುದು. ಇದರಿಂದ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯಕಾರಿಯಾಗಿರಿಸಲು ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಬೇಕು.

ಎಲ್ಲಾ ಸಮಯದಲ್ಲೂ ಮನಸ್ಥಿತಿ ಬದಲಾಗುವುದು

ಎಲ್ಲಾ ಸಮಯದಲ್ಲೂ ಮನಸ್ಥಿತಿ ಬದಲಾಗುವುದು

ಅತಿಯಾಗಿ ಆಹಾರ ಪಥ್ಯ ಮಾಡುವಂತವರಲ್ಲಿ ಅತಿಯಾದ ಖಿನ್ನತೆ, ಆತಂಕ ಮತ್ತು ಬೇಸರವು ಕಂಡುಬರುವುದು. ತಮಗೆ ಬೇಕಾಗಿರುವಂತಹ ದೇಹವನ್ನು ಅವರು ಪಡೆಯಬಹುದು. ಆದರೆ ಸಂತೋಷವಾಗಿರುವುದರಿಂದ ಅವರು ವಂಚಿತವಾಗುವರು. ಕಡಿಮೆ ಕ್ಯಾಲರಿ ಹೊಂದಿರುವಂತಹ ಆಹಾರವನ್ನು ಸೇವನೆ ಮಾಡುವುದರಿಂದ ಮನಸ್ಥಿತಿಯಲ್ಲಿ ತೀವ್ರ ಬದಲಾವಣೆಯಾಗುವುದು.

Read more about: health wellness
English summary

what happens to body when you don’t eat enough

While there are many short comings of excess eating, consuming less food is also an issue. On a daily basis, our body requires certain number of calories to function well. When we go on an extremely monitored diet, depriving our body of essential nutrients, it can turn against us. Following are the signs you need to watch out for if you have been noticing a change in your body pattern:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more