For Quick Alerts
ALLOW NOTIFICATIONS  
For Daily Alerts

ಸ್ತನದ ಗಾತ್ರ ಹೆಚ್ಚಿಸಲು ಚಿಕಿತ್ಸೆ ಬೇಡ, ನೈಸರ್ಗಿಕ ಟ್ರಿಕ್ಸ್ ಅನುಸರಿಸಿ...

By Deepu
|

ವಿಶ್ವ ಆರೊಗ್ಯ ಸಂಘಟನೆ (WHO)ಯ ಪ್ರಕಾರ, ಅಮೆರಿಕಾದ ಮಹಿಳೆಯರ ಸರಾಸರಿ ಬ್ರಾ ಗಾತ್ರವು 34B ಆಗಿದೆಯಂತೆ. ಹಾಗೆಂದು ಇದೇನು ತೀರಾ ಸಣ್ಣವಲ್ಲ ಮತ್ತು ಅದೇ ಸಮಯಕ್ಕೆ ತೀರಾ ದೊಡ್ಡದು ಅಲ್ಲ. ಬಹುತೇಕ ಮಹಿಳೆಯರು ಸರಾಸರಿ ಬ್ರಾ ಗಾತ್ರವನ್ನು ಹೊಂದಿರುವವರು ತಮ್ಮ ಬ್ರಾ ಗಾತ್ರ ಸ್ವಲ್ಪ ದೊಡ್ಡದಾದರೆ ತಾವು ಮತ್ತಷ್ಟು ಆತ್ಮ ವಿಶ್ವಾಸವನ್ನು ಹೊಂದಬಹುದು ಎಂದು ನಂಬುತ್ತಾರೆ. ಯಾವ ಮಹಿಳೆಯರು ತಮ್ಮ ಸ್ತನಗಳ ಗಾತ್ರ ಚಿಕ್ಕದು ಎಂದು ಭಾವಿಸುತ್ತಾರೋ, ಅವರು ಮೊದಲು ಯೋಚಿಸುವುದು ಇಂಪ್ಲಾಂಟ್ ಅಂದರೆ ಸ್ತನದ ಕಸಿ ಚಿಕಿತ್ಸೆ ಬಗ್ಗೆ.

ಆದರೆ ಕಾಸ್ಮೆಟಿಕ್ ಸರ್ಜರಿ ತೀರಾ ದುಬಾರಿಯಾಗಿರುವ ಈ ಕಾಲದಲ್ಲಿ ಎಲ್ಲರಿಗು ಇದು ಕೈಗೆಟುಕುವುದಿಲ್ಲ. ಜೊತೆಗೆ ಆರೋಗ್ಯವನ್ನು ಸಹ ಇವು ಅಪಾಯಕ್ಕೆ ದೂಡುತ್ತವೆ. ಹಾಗಾಗಿ ಬಹುತೇಕರಿಗೆ ಇದು ಹಗಲು ಕನಸಾಗಿ ಕಾಡಿ ಮಾಯವಾಗುತ್ತದೆ. ಜೊತೆಗೆ ನೀವು ಪ್ಲಾಸ್ಟಿಕ್ ಸರ್ಜನ್ ಕೇಳಿದಷ್ಟು ಹಣ ಮತ್ತು ಸಮಯವನ್ನು ನೀಡಬೇಕಾಗುತ್ತದೆ ಎಂಬುದನ್ನು ಮರೆಯಬಾರದು.

ಹೀಗಾಗಿ ಬಹುತೇಕ ಹೆಂಗಸರು ತಮ್ಮ ಸ್ತನಗಳ ಕುರಿತು ಸಮಾಧಾನವಿಲ್ಲದೆ ಇದ್ದರೆ, ಅವರು ಗಿಡ ಮೂಲಿಕೆಗಳಂತಹ ಸುಲಭವಾದ ವಿಧಾನಗಳಿಂದ ಸರಿಪಡಿಸಿಕೊಳ್ಳಲು ಆಲೋಚಿಸುತ್ತಾರೆ. ಸ್ತನಗಳನ್ನು ಹಿಗ್ಗಿಸಿಕೊಳ್ಳಲು ಕೇವಲ ಕಾಸ್ಮೆಟಿಕ್ ಸರ್ಜರಿ ಮಾತ್ರ ನಿಮ್ಮ ನೆರವಿಗೆ ಬರುವುದಿಲ್ಲ. ಗಿಡ ಮೂಲಿಕೆಗಳು ಮತ್ತು ದೈನಂದಿನ ಜೀವನದಲ್ಲಿ ಬಳಕೆಯಾಗುವ ಸ್ವಾಭಾವಿಕ ಉತ್ಪನ್ನಗಳು ಸಹ ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ. ಬನ್ನಿ ಅಂತಹ ಉತ್ಪನ್ನಗಳು ಯಾವುವು ಎಂಬುದನ್ನು ನೋಡೋಣ. ಅವುಗಳ ಕುರಿತು ತಿಳಿದುಕೊಳ್ಳೋಣ....

ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ...

ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ...

ಹಸಿರು ತರಕಾರಿಗಳು ಮತ್ತು ಹೆಚ್ಚು ಪ್ರೊಟೀನ್ ಮತ್ತು ವಿಟಮಿನ್ ಇರುವ ಆಹಾರಗಳ ಸೇವನೆಯಿಂದ ಸ್ತನದ ಜೀವಕೋಶಗಳನ್ನು ಹೆಚ್ಚಿಸಿಕೊಳ್ಳಬಹುದು. ಆಸ್ಪರಾಗಸ್, ಸೌತೆಕಾಯಿ, ಬೀಟ್ ರೂಟ್, ಎಲೆಕೋಸು, ಹೂಕೋಸು, ದವಸಧಾನ್ಯಗಳು, ಈರುಳ್ಳಿ, ಸೌತೆಕಾಯಿ, ಕುಂಬಳಕಾಯಿ ಇವುಗಳಿಂದಲೂ ನೈಸರ್ಗಿಕವಾಗಿ ಸ್ತನದ ಗಾತ್ರ ಹೆಚ್ಚಿಸಿಕೊಳ್ಳಬಹುದು.

ಸೇಬು, ಬಾದಾಮಿ ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಿ

ಸೇಬು, ಬಾದಾಮಿ ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಿ

ಬ್ರೊಮೈನ್ ಮತ್ತು ಮ್ಯಾಂಗನೀಸ್ ಅಂಶ ಹಾರ್ಮೋನುಗಳನ್ನು ವೃದ್ಧಿಸುತ್ತದೆ. ಸೇಬು, ಬಾದಾಮಿ, ಜೋಳ, ಶುಂಠಿ, ಬೆಳ್ಳುಳ್ಳಿ, ಸೀಗಡಿ, ಕೆಂಪಕ್ಕಿ ಇವುಗಳಲ್ಲಿ ಬ್ರೊಮೈನ್ ಮತ್ತು ಮ್ಯಾಂಗನೀಸ್ ಹೆಚ್ಚಿರುವುದರಿಂದ ಇದು ಸ್ತನದ ಆಕಾರವನ್ನು ಹಿಗ್ಗಿಸಲು ಸಹಕರಿಸುತ್ತದೆ.

ಅಲಸಂಡೆ ಕಾಳು, ಕಡಲೆ ಬೇಳೆ, ಅವರೆಕಾಳು, ಬೇಳೆ

ಅಲಸಂಡೆ ಕಾಳು, ಕಡಲೆ ಬೇಳೆ, ಅವರೆಕಾಳು, ಬೇಳೆ

ಕಡಲೆ ಕಾಳು, ಕಿಡ್ನಿ ಬೀನ್, ಕೆಂಪು ಬೀನ್, ಅಲಸಂಡೆ ಕಾಳು, ಕಡಲೆ ಬೇಳೆ, ಅವರೆಕಾಳು, ಬೇಳೆ, ಬಟಾಣಿ, ಕೊತ್ತಂಬರಿ ಇವುಗಳ ಸೇವನೆಯಿಂದ ಈಸ್ಟ್ರೊಜೆನ್ ಅಂಶ ಹೆಚ್ಚಿಸಬಹುದು.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಹಾಲು, ಹಾಲಿನ ಉತ್ಪನ್ನಗಳು, ಮೊಸರಿನಲ್ಲಿ ಕೂಡ ಈಸ್ಟ್ರೋಜೆನ್ ಅಂಶ ಹೆಚ್ಚಿರುತ್ತದೆ. ಆದ್ದರಿಂದ ಸ್ತನದ ಗಾತ್ರ ಹೆಚ್ಚಬೇಕೆಂದರೆ ಈ ಉತ್ಪನ್ನಗಳ ಸೇವನೆ ತುಂಬಾ ಮುಖ್ಯ.

ಜೀರಿಗೆ

ಜೀರಿಗೆ

ಎಲ್ಲರ ಅಡುಗೆ ಮನೆಯಲ್ಲಿ ದೊರೆಯುವ ಈ ಕಾಳುಗಳು ನಿಮ್ಮ ಸ್ತನಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತವೆ ಮತ್ತು ಬಾಣಂತಿಯರಲ್ಲಿ ಎದೆಹಾಲನ್ನು ಸಹ ಹೆಚ್ಚಿಸುತ್ತವೆ.ಸ್ತನಗಳನ್ನು ಹಿಗ್ಗಿಸುವ ಇತರ ಪದಾರ್ಥಗಳಂತೆ, ಜೀರಿಗೆಯು ಸಹ ಫೈಟೊಈಸ್ಟ್ರೋಜೆನ್‌ಗಳನ್ನು ಪೂರೈಸುತ್ತದೆ. ಇದು ನಮ್ಮ ದೇಹದಲ್ಲಿರುವ ಈಸ್ಟ್ರೋಜೆನ್‍ನ ನಕಲಾಗಿ ಕಾರ್ಯ ನಿರ್ವಹಿಸುತ್ತದೆ. ಟೀ ರೂಪದಲ್ಲಿ, ಆಹಾರ ರೂಪದಲ್ಲಿ ಅಥವಾ ಜೀರಿಗೆಯನ್ನು ಸೇವಿಸಿ. ಇಲ್ಲವೆ ಜೀರಿಗೆ ಎಣ್ಣೆಯನ್ನು ಸ್ತನಗಳ ಮೇಲೆ ಲೇಪಿಸಿಕೊಳ್ಳಿ. ಜೀರಿಗೆಯು ಹೆಚ್ಚುವರಿಯಾದ ಔಷಧೀಯ ಗುಣಗಳನ್ನು ಹೊಂದಿರುತ್ತದೆ ಆದ್ದರಿಂದ ಇದನ್ನು ರಕ್ತದೊತ್ತಡ, ಅಂಜಿನ, ಅಮಿನೋರ್ರಿಯಾ, ಅಸ್ತಮಾ ಮತ್ತು ಹೆಂಗಸರಲ್ಲಿ ಕಾಮಾಸಕ್ತಿಯನ್ನು ಉದ್ದೀಪನಗೊಳಿಸಲು ಬಳಸಿಕೊಳ್ಳಬಹುದು. ಜೀರಿಗೆಯಲ್ಲಿ ಅಧಿಕ ಪ್ರಮಾಣದ ಫೈಟೊನ್ಯೂಟ್ರಿಯೆಂಟ್‍ಗಳು ಇರುವುದರಿಂದ ಅದು ಸ್ತನಗಳ ಗಾತ್ರವನ್ನು ಹಿಗ್ಗಿಸಲು ನೆರವು ನೀಡುತ್ತದೆ.

ಮೆಂತೆ

ಮೆಂತೆ

ಮೆಂತೆಯು ಪ್ರಾಚೀನ ಕಾಲದಿಂದ ಆರ್ಯುರ್ವೇದ ಚಿಕಿತ್ಸೆಯ ಒಂದು ಭಾಗವಾಗಿ ಪರಿಗಣಿಸಲ್ಪಟ್ಟಿದೆ. ಇದನ್ನು ಸಾಮಾನ್ಯವಾಗಿ ಸಾಂಬಾರ್ ಪುಡಿ ಮಾಡುವಾಗ ಮತ್ತು ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ಇದು ಸಹ ತನ್ನಲ್ಲಿರುವ ಫೈಟೊಈಸ್ಟ್ರೊಜೆನ್ ಅಂಶಗಳಿಗೆ ಖ್ಯಾತಿಯನ್ನು ಪಡೆದಿದೆ. ದೇಹದಲ್ಲಿ ಈಸ್ಟ್ರೋಜೆನ್ ಕಡಿಮೆಯಿದ್ದರೆ, ಸ್ತನಗಳು ಹಿಗ್ಗುವುದಿಲ್ಲ. ಆದ್ದರಿಂದ ನಿಮ್ಮ ಸ್ತನಗಳನ್ನು ಹಿಗ್ಗಿಸಿಕೊಳ್ಳಬೇಕೆಂದರೆ ಮೆಂತ್ಯೆಯನ್ನು ಸೇವಿಸುವುದರಿಂದ ನಿಮ್ಮ ಉದ್ದೇಶ ಈಡೇರುತ್ತದೆ. ಜೊತೆಗೆ ಮೆಂತ್ಯೆಯಲ್ಲಿ ಪ್ರೊಲಾಕ್ಟಿನ್ ಸಹ ಅಧಿಕವಾಗಿರುತ್ತದೆ. ಇದರ ಜೊತೆಗೆ ಇದು ಬಾಣಂತಿಯರಲ್ಲಿ ಹಾಲಿನ ಉತ್ಪಾದನೆಯನ್ನು ಸಹ ಅಧಿಕಗೊಳಿಸುತ್ತದೆ. ಪ್ರೊಲಾಕ್ಟಿನ್ ಸಹ ಸ್ತನಗಳ ಗಾತ್ರವನ್ನು ಹೆಚ್ಚಿಸುತ್ತದೆ.

ನೆನಪಿಡಿ

ಮೆಂತೆಯನ್ನು ಆಹಾರ ಪದಾರ್ಥದ ಹೊರತಾಗಿ ಸೇವಿಸಿದರೆ ( ನೇರವಾಗಿ) ಅದು ಹೊಟ್ಟೆ ತೊಳೆಸುವಿಕೆ, ಗ್ಯಾಸ್, ಹೊಟ್ಟೆ ತುಂಬಿದ ಅನುಭವ, ಡಯೆರ್ರಿಯಾ, ಕೆಮ್ಮು, ಮೂಗು ಕಟ್ಟುವಿಕೆ, ಉಬ್ಬಸ ಮತ್ತು ಮುಖದಲ್ಲಿ ಗುಳ್ಳೆಗಳನ್ನುಂಟು ಮಾಡಬಹುದು.

ಸಾ ತಾಳೆಮರ

ಸಾ ತಾಳೆಮರ

ಸಾ ತಾಳೆಮರ ಅಥವಾ ಸಾ ಪಾಲ್ಮೆಟೊದ ಬೀಜಗಳನ್ನು ಸಾಮಾನ್ಯವಾಗಿ ಬೆನಿನ್ ಪ್ರೊಸ್ಟ್ಯಾಟಿಕ್ ಹೈಪರ್‌ಲೇಶಿಯಾ ಎಂಬ ಉರಿಬಾವಿನ ಪರಿಸ್ಥಿತಿಯಲ್ಲಿ ಬಳಸುತ್ತಾರೆ. ಇದನ್ನು ಎನ್‍ಲಾರ್ಜ್‌ಡ್ ಪ್ರೋಸ್ಟೇಟ್ ಎಂದು ಸಹ ಕರೆಯುತ್ತಾರೆ. ಆದರೂ ಸಾ ತಾಳೆಮರವು ತಮ್ಮ ಸ್ತನದ ಗಾತ್ರಗಳನ್ನು ದಪ್ಪ ಮಾಡಿಕೊಳ್ಳಲು ಬಯಸುವ ಮಹಿಳೆಯರಿಗೆ ಸಹಾಯವನ್ನು ಮಾಡುತ್ತದೆ. ಈ ಗಿಡಮೂಲಿಕೆಯು ಟೆಸ್ಟೋಸ್ಟಿರೋನ್ ಅನ್ನು ಮಿತಿಗೊಳಿಸುತ್ತದೆ. ಇದು ಹೆಚ್ಚಾದಾಗ ಅದು ಸ್ತನಗಳ ಗಾತ್ರದ ಬೆಳವಣಿಗೆಯನ್ನು ನಿಲ್ಲಿಸುತ್ತದೆ.

ನೆನಪಿಡಿ:

ಇದನ್ನು ಸೇವಿಸಿದಾಗ ನಾಸಿಯಾ, ತಲೆಸುತ್ತು, ತಲೆನೋವು, ವಾಂತಿ, ಮಲಬದ್ಧತೆ ಮತ್ತು ಅತಿಸಾರ ಬೇದಿ ಕಂಡು ಬರುತ್ತದೆ. ಗಿಡಮೂಲಿಕೆಗಳು ಸೇವಿಸಲು ಸುಲಭವಾಗಿ ಮತ್ತು ನಿರಪಯಕಾರಿಯಾಗಿ ಕಂಡು ಬಂದರು ಸಹ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ, ದೇಹಕ್ಕೆ ಒಳ್ಳೆಯದಲ್ಲ. ಹಲವಾರು ವರ್ಷಗಳಿಂದ ನಡೆದ ಅಧ್ಯಯನಗಳ ಪ್ರಕಾರ ನಿರ್ದಿಷ್ಟಪಡಿಸಿದ ಮಿತಿಗಿಂತ ಅಧಿಕ ಗಿಡ ಮೂಲಿಕೆಗಳ ಸೇವನೆಯು ಅಪಾಯವನ್ನು ತಂದೊಡ್ಡುತ್ತದೆ. ಆಗ ಇದು ದೇಹದ ಸ್ವಾಭಾವಿಕ ಸಮತೋಲನದಲ್ಲಿ ಏರುಪೇರನ್ನು

ಉಂಟು ಮಾಡುತ್ತದೆ. ಹಾಗಾಗಿ ಇವುಗಳನ್ನು ಸೇವಿಸುವಾಗ ಎಚ್ಚರಿಕೆಯಿಂದ ಸೇವಿಸಿ.

ವ್ಯಾಯಾಮ

ವ್ಯಾಯಾಮ

ನೈಸರ್ಗಿಕವಾಗಿ ಸ್ತನ ಗಾತ್ರವನ್ನು ಹೆಚ್ಚಿಸುವ ಒಂದು ವಿಧಾನ ವ್ಯಾಯಾಮ ಮಾಡುವುದಾಗಿದೆ. ಎದೆಯ ಸ್ನಾಯು ಸಮೂಹವನ್ನು, ನಿಮ್ಮ ಎದೆಯನ್ನು ರಚಿಸುವ ಮುಖ್ಯ ಸ್ನಾಯುವನ್ನು ಹೆಚ್ಚಿಸಲು ವ್ಯಾಯಾಮ ಸಹಾಯ ಮಾಡುತ್ತದೆ. ಪುಶಪ್‌ಗಳು ಸೇರಿದಂತೆ ಕೆಲವು ವ್ಯಾಯಾಮಗಳು ನಿಮ್ಮ ನೆರವಿಗೆ ಬರುತ್ತವೆ.

ಆಹಾರ ಪದ್ಧತಿ

ಆಹಾರ ಪದ್ಧತಿ

ಉತ್ತಮ ಆಹಾರ ಪದ್ಧತಿ ನೈಸರ್ಗಿಕವಾಗಿ ನಿಮ್ಮ ಸ್ತನದ ಗಾತ್ರವನ್ನು ಹೆಚ್ಚಿಸುತ್ತದೆ. ಸ್ತನದ ಸ್ವಾಭಾವಿಕ ಬೆಳವಣಿಗೆಗೆ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರೋನ್ ಎಂಬ ಎರಡು ಹಾರ್ಮೋನುಗಳು ಕಾರಣವಾಗಿವೆ. ಈಸ್ಟ್ರೋಜನ್‌ನ ಸಾರವಾದ ಸ್ವಾಭಾವಿಕ ಹಾರ್ಮೋನ್ ಮಟ್ಟವನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಫೈಟೋಸ್ಟ್ರೋಜನ್ಸ್ ಕೆಲವು ಸಸ್ಯ ಮೂಲಿಕೆಗಳಲ್ಲಿ, ಹಣ್ಣುಗಳಲ್ಲಿ, ತರಕಾರಿಗಳಲ್ಲಿ ಇರುತ್ತವೆ.

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳು

ಟೋಫು, ಸೋಯಾ ಮೊಸರು ಮತ್ತು ಸೋಯಾ ಹಾಲು ಸ್ತನ ಗಾತ್ರವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ನೆರವನ್ನುಂಟು ಮಾಡುತ್ತದೆ.

ಕೆಂಪು ಕ್ಲೋವರ್

ಕೆಂಪು ಕ್ಲೋವರ್

ಈ ಗಿಡಮೂಲಿಕೆಯು ಬಹುತೇಕ ಪ್ರತಿಯೊಂದು ಕಾಯಿಲೆಗಳಿಗು ಸಹ ಚಿಕಿತ್ಸೆಯಾಗಿ ಬಳಕೆಯಾಗುತ್ತದೆ. ಆದರೆ ಕೆಲವರಿಗೆ ಮಾತ್ರ ಇದು ಸ್ತನಗಳ ಗಾತ್ರವನ್ನು ಹಿಗ್ಗಿಸಿಕೊಳ್ಳುವ ಔಷಧಿಯಾಗಿ ಬಳಸುತ್ತಾರೆ ಎಂದು ತಿಳಿದಿದೆ. ಕೆಂಪು ಕ್ಲೋವರ್‌ನಲ್ಲಿ ಜೆನಿಸ್ಟೇನ್ ಎನ್ನುವ ವಿವಿಧ ಬಗೆಯ ಫೈಟೊಈಸ್ಟ್ರೊಜೆನ್‍ಗಳು ಸಮೃದ್ಧವಾಗಿ ಕಂಡು ಬರುತ್ತವೆ. ಇವು ಸ್ತನಗಳನ್ನು ಹಿಗ್ಗಿಸಲು ನೆರವು ನೀಡುತ್ತದೆ. ಏಕೆಂದರೆ ಇದು ನೇರವಾಗಿ ಸ್ತನಗಳನ್ನು ಹಿಗ್ಗಿಸುವ ಈಸ್ಟ್ರೋಜೆನ್ ಗ್ರಾಹಕಗಳಿಗೆ ಅಂಟಿಕೊಳ್ಳುವ ಮೂಲಕ ಈ ಕಾರ್ಯವನ್ನು ಸುಗಮಗೊಳಿಸುತ್ತದೆ.

ನೆನಪಿಡಿ

ಕೆಂಪು ಕ್ಲೋವರ್ ಕೆಲ ಮಹಿಳೆಯರಲ್ಲಿ ನಾಸಿಯಾ, ತಲೆನೋವು, ಸ್ನಾಯು ನೋವು ಮತ್ತು ಯೋನಿಸ್ರಾವ( ಕಲೆಗಳು) ವನ್ನು ಉಂಟು ಮಾಡಬಹುದು. ಒಂದು ವೇಳೆ ನಿಮ್ಮಲ್ಲಿ ರಕ್ತ ಸ್ರಾವದ ಡಿಸಾರ್ಡರ್ ಕಂಡು ಬಂದರೆ, ಕೆಂಪು ಕ್ಲೋವರ್ ರಕ್ತ ಸ್ರಾವದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಿ. ಹೆಚ್ಚಿಗೆ ಬಳಸಿದಲ್ಲಿ ಇದರಿಂದ ಅಡ್ಡ ಪರಿಣಾಮಗಳಿಗೆ ಗುರಿಯಾಗುವಿರಿ.

English summary

Ways to Naturally Increase Breast Size

In women sex hormone production starts at puberty and is ceased at menopause. Many surgical implantation methods are commonly seen in practice now a days but what mostly women are unaware of is that there are plenty of ways to increase breast size naturally.
X
Desktop Bottom Promotion