For Quick Alerts
ALLOW NOTIFICATIONS  
For Daily Alerts

ಕರುಳನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು 12 ಮನೆಮದ್ದುಗಳು

|

ದೇಹದ ಕೆಲವು ಪ್ರಮುಖ ಅಂಗಗಳಲ್ಲಿ ಕರುಳು ಕೂಡ ಒಂದು ಇದು ದೇಹದಲ್ಲಿರುವ ಅತೀ ದೊಡ್ಡ ಅಂಗವೆನ್ನಲಾಗುತ್ತದೆ. ಯಕೃತ್, ಕಿಡ್ನಿ ಮತ್ತು ಹೃದಯದಂತೆ ಇದು ಕೂಡ ದೇಹದ ಪ್ರಮುಖ ಅಂಗವೆಂದು ಪರಿಗಣಿಸಲಾಗಿದೆ. ನಾವು ತಿನ್ನುವಂತಹ ಆಹಾರವು ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಕರುಳಿನ ಆರೋಗ್ಯವು ಅತೀ ಅಗತ್ಯವಾಗಿದೆ. ಜೀರ್ಣಕ್ರಿಯೆಯು ಸುಗಮವಾಗಿ ಸಾಗಲು ಕರುಳನ್ನು ಶುದ್ಧೀಕರಿಸುತ್ತಿರಬೇಕು. ಕರುಳಿನಲ್ಲಿ ನಾಲ್ಕು ವಿಭಾಗಗಳಿವೆ. ಕರುಳು ನಾವು ತಿನ್ನುವಂತಹ ಆಹಾರದಲ್ಲಿರುವಂತಹ ಪೋಷಕಾಂಶಗಳನ್ನು ಮತ್ತು ಕ್ಯಾಲರಿ ಹೀರಿಕೊಂಡು ದೇಹಕ್ಕೆ ಒದಗಿಸುವ ಕಾರಣದಿಂದಾಗಿ ಇದು ಅತೀ ಪ್ರಾಮುಖ್ಯ ಅಂಗವಾಗಿದೆ. ಇದರಿಂದಾಗಿ ಕರುಳು ಆಹಾರವನ್ನು ಜೀರ್ಣಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸುವುದು. ಕರುಳು ದೇಹದಲ್ಲಿನ ಪಿಎಚ್ ಮಟ್ಟ ಮತ್ತು ವಿದ್ಯುದ್ವಿಚ್ಛೇದಗಳನ್ನು ಸಮತೋಲನದಲ್ಲಿಡುವುದು.

how to cleanse colon naturally

ಇದರಿಂದಾಗಿ ಕರುಳನ್ನು ಶುದ್ಧವಾಗಿಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ. ಕರುಳು ಆರೋಗ್ಯವಾಗಿದ್ದರೆ ಮಲಬದ್ಧತೆ, ಅಸಾಮಾನ್ಯ ಕರುಳಿನ ಚಲನೆ ಮತ್ತು ಕರುಳಿನ ಕ್ಯಾನ್ಸರ್ ನ ಅಪಾಯವನ್ನು ತಪ್ಪಿಸುವುದು. ನೈಸರ್ಗಿಕ ಕರುಳನ್ನು ಶುದ್ಧೀಕರಿಸಿದರೆ ಅದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಕೂಡ ಹೊರಹೋಗುವುದು. ಕರುಳನ್ನು ನೈಸರ್ಗಿಕವಾಗಿ ಆರೋಗ್ಯವಾಗಿಡಲು ಏನು ಮಾಡಬೇಕು ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ.

 1.ಉಪ್ಪು ನೀರು ಅಥವಾ ನೀರು

1.ಉಪ್ಪು ನೀರು ಅಥವಾ ನೀರು

ಸಾಕಷ್ಟು ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ತುಂಬಾ ನೆರವಾಗುವುದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಕರುಳು ತುಂಬಾ ಪರಿಣಾಮಕಾರಿಯಾಗಿ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ನೆರವಾಗುವುದು. ನೀವು ನೀರು ಕುಡಿಯುವುದಾದರೆ ಆಗ 6-8 ಲೋಟ ಉಗುರುಬೆಚ್ಚಗಿನ ನೀರು ಕುಡಿಯಿರಿ. ಮಲಬದ್ಧತೆ ಮತ್ತು ಕರುಳಿನ ಕ್ರಿಯೆಯು ಸರಾಗವಾಗಿರದವರಿಗೆ ಉಪ್ಪು ನೀರು ತುಂಬಾ ಪರಿಣಾಮಕಾರಿ. ಬೆಳಗ್ಗೆ ಉಪಾಹಾರಕ್ಕೆ ಮೊದಲು ಎರಡು ಚಮಚ ಕಲ್ಲುಪ್ಪು ಅಥವಾ ಹಿಮಾಲಯ ಉಪ್ಪನ್ನು ಉಗುರುಬೆಚ್ಚಗಿನ ನೀರಿಗೆ ಹಾಕಿಕೊಂಡು, ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

2.ಆ್ಯಪಲ್ ಸೀಡರ್ ವಿನೇಗರ್

2.ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಆ್ಯಂಟಿಬಯೋಟಿಕ್ ಗುಣಗಳು ಇವೆ. ಕರುಳಿನಲ್ಲಿ ಆರೋಗ್ಯಕಾರಿ ಬ್ಯಾಕ್ಟೀರಿಯಾಗಳು ಬೆಳೆಯಲು ಇದು ನೆರವಾಗುವುದು ಮತ್ತು ಕರುಳನ್ನು ಶುದ್ಧೀಕರಿಸುವುದು. ಅಸೆಟೋಬ್ಯಾಕ್ಟರ್ ಇದ್ದು, ಜೀರ್ಣಕ್ರಿಯೆಗೆ ಇದು ತುಂಬಾ ಸಹಕಾರಿ ಮತ್ತು ಹೊಟ್ಟೆಯು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು.

 3.ನಾರಿನಾಂಶ ಅಧಿಕವಿರುವ ಆಹಾರ

3.ನಾರಿನಾಂಶ ಅಧಿಕವಿರುವ ಆಹಾರ

ನಾರಿನಾಂಶವು ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀಜಗಳು ಮತ್ತು ಸಸಿಗಳಲ್ಲಿ ಇದೆ. ಸಸ್ಯಜನ್ಯ ಆಹಾರದಲ್ಲಿರುವಂತಹ ಸೆಲ್ಲುಲೊಸ್ ಮತ್ತು ನಾರಿನಾಂಶವು ಮಲಬದ್ಧತೆಯನ್ನು ನಿಯಂತ್ರಿಸುವುದು ಮತ್ತು ಕರುಳು ಅತಿಯಾಗಿ ಕಾರ್ಯನಿರ್ವಹಿಸದಂತೆ ಮಾಡುವುದು. ನಾರಿನಾಂಶವು ಅಧಿಕವಾಗಿರುವಂತಹ ಆಹಾರವು ಪ್ರೆಬಿಯೋಟಿಕ್ ಎನ್ನುವ ಅಂಶವನ್ನು ಹೊಂದಿದೆ. ಇದು ಕರುಳಿನಲ್ಲಿ ಆರೋಗ್ಯಕಾರಿ ಬ್ಯಾಕ್ಟೀರಿಯಾ ನಿರ್ಮಾಣಕ್ಕೆ ನೆರವಾಗುವುದು. ನಿಮ್ಮ ದೈನಂದಿನ ಆರೋಗ್ಯ ಕ್ರಮದಲ್ಲಿ ನಾರಿನಾಂಶವು ಅಧಿಕವಾಗಿರುವ ಆಹಾರಗಳು ಇರಲಿ.

4.ಲಿಂಬೆಯ ನಿರ್ವಿಷ ಜ್ಯೂಸ್

4.ಲಿಂಬೆಯ ನಿರ್ವಿಷ ಜ್ಯೂಸ್

ವಿಟಮಿನ್ ಸಿಯಿಂದ ಸಮೃದ್ಧವಾಗಿರುವಂತಹ ಲಿಂಬೆಯು ನಿಮ್ಮ ಚಯಾಪಚಯ ಕ್ರಿಯೆಗೆ ವೇಗ ನೀಡುವುದು ಮತ್ತು ನಿರ್ವಿಷಗೊಳಿಸಲು ನೆರವಾಗುವುದು. ಇದರಲ್ಲಿ ಇರುವಂತಹ ಸಿಟ್ರಿಕ್ ಆಮ್ಲವು ಜೀರ್ಣಕ್ರಿಯೆ ರಸವನ್ನು ಉತ್ಪತ್ತಿ ಮಾಡಲು ನೆರವಾಗಿ, ಸರಿಯಾಗಿ ಜೀರ್ಣಕ್ರಿಯೆಯು ಆಗುವಂತೆ ನೋಡಿಕೊಳ್ಳುವುದು. ಲಿಂಬೆರಸವು ಕರುಳನ್ನು ಶುದ್ಧೀಕರಿಸಲು ತುಂಬಾ ಪರಿಣಾಮಕಾರಿ. ಯಾಕೆಂದರೆ ಇದು ದೇಹದಲ್ಲಿರುವ ವಿಷವನ್ನು ಪರಿಣಾಮಕಾರಿಯಾಗಿ ಹೊರಹಾಕುವುದು.

Most Read: ಈ 5 ರಾಶಿಯವರು ಆಹಾರವನ್ನು ತುಂಬಾನೇ ಪ್ರೀತಿಸುತ್ತಾರೆ-ಹೊಟ್ಟೆ ತುಂಬಾ ತಿನ್ನುತ್ತಾರೆ!

5.ನಿರೋಧಕ ಪಿಷ್ಠ

5.ನಿರೋಧಕ ಪಿಷ್ಠ

ನಿರೋಧಕ ಪಿಷ್ಠ ಎನ್ನುವ ಅಂಶವು ಹೆಚ್ಚಾಗಿ ಸಸ್ಯಜನ್ಯ ಆಹಾರದಲ್ಲಿ ಕಂಡುಬರುವುದು. ಅಕ್ಕಿ, ಬಟಾಟೆ, ಮೊಳೆಕೆಕಾಳುಗಳು, ಹಸಿರು ಬಾಳೆಹಣ್ಣು ಮತ್ತು ಧಾನ್ಯಗಳಲ್ಲಿ ಇದು ಇದೆ. ಇದು ಆರೋಗ್ಯಕಾರಿ ಕರುಳಿಗೆ ನೆರವಾಗುವುದು. ಕ್ಯಾನ್ಸರ್ ಪ್ರಿವೆಂಟೇಷನ್ ರಿಸರ್ಚ್ ಪ್ರಕಾರ, ನಿರೋಧಕ ಪಿಷ್ಠವು ಕರುಳಿನ ಕ್ಯಾನ್ಸರ್ ನ ಅಪಾಯವನ್ನು ತಗ್ಗಿಸಿ, ಕರುಳಿನ ಆರೋಗ್ಯ ಕಾಪಾಡುವುದು.

6.ಹಸಿ ತರಕಾರಿ ಜ್ಯೂಸ್ ಮತ್ತು ಸ್ಮೂಥಿ

6.ಹಸಿ ತರಕಾರಿ ಜ್ಯೂಸ್ ಮತ್ತು ಸ್ಮೂಥಿ

ಹಸಿ ತರಕಾರಿ ಜ್ಯೂಸ್ ಕರುಳನ್ನು ಶುದ್ಧೀಕರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುವುದು. ತರಕಾರಿ ಜ್ಯೂಸ್ ಅಥವಾ ಸ್ಮೂಥಿಯಲ್ಲಿ ನಾರಿನಾಂಶ ಮತ್ತು ಪೋಷಕಾಂಶಗಳು ಇವೆ. ಜೀರ್ಣಕ್ರಿಯೆ ಕಾರ್ಯಕ್ಕೆ ಇದು ನೆರವಾಗುವುದು. ಜ್ಯೂಸ್ ನ ಹೆಚ್ಚಿನ ಲಾಭ ಪಡೆಯಲು ಕುಡಿಯುವಾಗ ಅದರ ಸಿಪ್ಪೆ ಮತ್ತು ತಿರುಳು ಹಾಗೆ ಇರಲಿ. ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ, ಟೊಮೆಟೊ ಅಥವಾ ಬಸಲೆಯನ್ನು ಕರುಳನ್ನು ಶುದ್ಧೀಕರಿಸಲು ಬಯಸಬಹುದು.

7.ಅಲೋವೆರಾ ಜ್ಯೂಸ್

7.ಅಲೋವೆರಾ ಜ್ಯೂಸ್

ಅಲೋವೆರಾ ಜ್ಯೂಸ್ ನ ವಿನ್ಯಾಸವು ತುಂಬಾ ದಪ್ಪವಾಗಿದ್ದು, ಇದು ಕರುಳಿನ ಚಟುವಟಿಕೆಯನ್ನು ಸುಲಭವಾಗಿಸಿಕೊಂಡು, ತ್ಯಾಜ್ಯವು ದೇಹದ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುವುದು. ಇದರಿಂದಾಗಿ ಕರುಳನ್ನು ನೈಸರ್ಗಿಕವಾಗಿ ಶುದ್ಧೀಕರಿಸಬಹುದು.

Most Read:ಅಕಾಲಿಕ ಕೂದಲು ಬಿಳಿಯಾಗುವುದಕ್ಕೆ ಕರ್ಪೂರದ ಚಿಕಿತ್ಸೆ

8.ಪ್ರೊಬಿಯೊಟಿಕ್ಸ್

8.ಪ್ರೊಬಿಯೊಟಿಕ್ಸ್

ಕರುಳನ್ನು ಶುದ್ಧೀಕರಿಸುವ ಮತ್ತೊಂದು ವಿಧಾನವೆಂದರೆ ಪ್ರೊಬಿಯೊಟಿಕ್ಸ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು. ಪ್ರೊಬಿಯೊಟಿಕ್ಸ್ ಗಳು ಇರುವಂತಹ ಆಹಾರಗಳಾಗಿರುವ ಮೊಸರು, ಉಪ್ಪಿನಕಾಯಿ ಮತ್ತು ಇತರ ಕೆಲವೊಂದು ಆಹಾರಗಳು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ನಿರ್ಮಾಣ ಮಾಡುವುದು ಮತ್ತು ಕರುಳನ್ನು ಆರೋಗ್ಯ ಹಾಗೂ ಶುದ್ಧವಾಗಿಡುವುದು. ಇದು ಕ್ರಿಯೆ ಸರಾಗವಾಗಲು ಮತ್ತು ಉರಿಯೂತ ಕಡಿಮೆಯಾಗಲು ನೆರವಾಗುವುದು.

9.ಫ್ಲ್ಯಾಕ್ಸ್ ಬೀಜಗಳು

9.ಫ್ಲ್ಯಾಕ್ಸ್ ಬೀಜಗಳು

ಹೊಟ್ಟೆಯ ಭಾಗದಲ್ಲಿ ಉರಿಯೂತ ಕಡಿಮೆ ಮಾಡಿಕೊಳ್ಳಲು ಫ್ಲ್ಯಾಕ್ಸ್ ಸೀಡ್ ಬಳಸಿಕೊಳ್ಳಬೇಕು. ಇದರಲ್ಲಿ ಇರುವಂತಹ ಲ್ಯಾಕ್ಸಟಿವ್ ಪರಿಣಾಮವು ಕರುಳನ್ನು ನೈಸರ್ಗಿಕವಾಗಿ ಶುದ್ಧೀಕರಿಸುವುದು. ಇದರಲ್ಲಿ ಇರುವಂತಹ ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಕರುಳಿನ ಕ್ರಿಯೆ ಹೆಚ್ಚಿಸಿ, ದೇಹದಲ್ಲಿರುವ ತ್ಯಾಜ್ಯವನ್ನು ಹೊರಹಾಕಲು ನೆರವಾಗುವುದು.

10.ಗಿಡಮೂಲಿಕೆ ಚಹಾ

10.ಗಿಡಮೂಲಿಕೆ ಚಹಾ

ಗಿಡಮೂಲಿಕೆಗಳಾಗಿರುವಂತಹ ಶುಂಠಿ, ಕರಿಮೆಣಸು ಮತ್ತು ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಫೈಥೊಕೆಮಿಕಲ್ ಇದೆ. ಕರುಳಿನಲ್ಲಿ ಇರುವಂತಹ ಅನಾರೋಗ್ಯಕರ ಬ್ಯಾಕ್ಟೀರಿಯಾವನ್ನು ಇದು ತೆಗೆದುಹಾಕುವುದು. ಶುಂಠಿ, ಬೆಳ್ಳುಳ್ಳಿ ಮತ್ತು ಕರಿಮೆಣಸಿನ ಚಹಾವನ್ನು ದಿನಕ್ಕೆ ಒಂದು ಸಲ ಕುಡಿದರೆ ಅದರಿಂದ ಕರುಳು ಶುದ್ಧವಾಗುವುದು. ನೀವು ಕರುಳಿನ ಶುದ್ಧೀಕರಣ ಮಾಡಲು ಹೋಗುತ್ತಿರುವಿರಾದರೆ ಇದನ್ನು ಅತಿಯಾಗಿ ಮಾಡಲು ಹೋಗಬೇಡಿ. ಇದರಿಂದ ಸೆಳೆತ ಮತ್ತು ದೇಹದಲ್ಲಿ ವಿದ್ಯುದ್ವಿಚ್ಛೇದಗಳ ಅಸಮತೋಲನ ಉಂಟಾಗಬಹುದು. ರಕ್ತದೊತ್ತಡ ಅತಿಯಾಗಿರುವಂತಹ ವ್ಯಕ್ತಿಗಳು ಉಪ್ಪುನೀರಿನ ಚಿಕಿತ್ಸೆ ಕೈಬಿಡಿ.

11.ಇಡಿಯ ಧಾನ್ಯದ ಖಾದ್ಯಗಳನ್ನು ಸೇವಿಸಿ

11.ಇಡಿಯ ಧಾನ್ಯದ ಖಾದ್ಯಗಳನ್ನು ಸೇವಿಸಿ

ನಿಮ್ಮ ನಿತ್ಯದ ಮೂರು ಹೊತ್ತಿನ ಊಟಗಳಲ್ಲಿ ಕೇವಲ ಇಡಿಯ ಧಾನ್ಯದ (whole meal) ಆಹಾರಗಳಿರುವಂತೆ ನೋಡಿಕೊಳ್ಳಿ. ಅಪ್ಪಿ ತಪ್ಪಿಯೂ ಮೈದಾ ಅಥವಾ ಮೈದಾ ಆಧಾರಿತ ಯಾವುದೇ ಆಹಾರವನ್ನು ಸೇವಿಸಬೇಡಿ. ಇಸಬ್ಗೋಲ್ (isabgol) ಪುಡಿಯನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಬೆರೆಸಿ ದಿನಕ್ಕೆ ಕನಿಷ್ಟ ಮೂರು ಲೋಟ ಕುಡಿಯುವುತು ಅತ್ಯುತ್ತಮ. ಇಡಿಯ ಗೋಧಿಯಿಂದ ಮಾಡಿದ ಹಿಟ್ಟಿನ ರೊಟ್ಟಿ, ಜೋಳ, ನವಣೆ, ರಾಗಿ ಮೊದಲಾದವು ಉತ್ತಮ ಆಯ್ಕೆಯಾಗಿವೆ. ಇದರಿಂದ ದೇಹಕ್ಕೆ ಅಗತ್ಯವಾದ ಕ್ಯಾಲೋರಿಗಳು ಲಭ್ಯವಾಗುವ ಜೊತೆಗೇ ಕರಗದ ನಾರು ಹೊರಬರುವಾಗ ತನ್ನ ಜೊತೆಯಲ್ಲಿ ಹೊಟ್ಟೆ, ಕರುಳುಗಳಲ್ಲಿದ್ದ ವಿಷಕಾರಿ ವಸ್ತುಗಳನ್ನೂ ಹೊರಹಾಕುತ್ತದೆ.

Most Read: ಗಂಟಲು ಕೆರೆತ ಮತ್ತು ಗಂಟಲು ಕಿರಿಕಿರಿ ಸಮಸ್ಯೆಗೆ, 10 ನೈಸರ್ಗಿಕ ಮನೆಮದ್ದುಗಳು
12.ಖಾಲಿಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

12.ಖಾಲಿಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

ಒಂದು ವೇಳೆ ಕರುಳುಗಳಲ್ಲಿ ಗುಡುಗುಡು ಶಬ್ಧ ಅನವರತವಾಗಿದ್ದು ತೊಂದರೆ ನೀಡುತ್ತಿದ್ದರೆ ಇದಕ್ಕೆ ಪಪ್ಪಾಯಿ ಹಣ್ಣು ಅತ್ಯುತ್ತಮವಾದ ಪರಿಹಾರವಾಗಿದೆ.ಇದಕ್ಕಾಗಿ ಸುಮಾರು ಎರಡು ಅಥವಾ ಮೂರು ಪೊಪ್ಪಾಯಿ ಅಗತ್ಯ. ರಾತ್ರಿ ಕೇವಲ ದ್ರವಾಹಾರ ಸೇವಿಸಿ ಮಲಗಿ ಬೆಳಿಗ್ಗೆದ್ದ ಬಳಿಕ ಹೊಟ್ಟೆ ಖಾಲಿ ಮಾಡಿ ಸುಮಾರು ಅರ್ಧ ಗಂಟೆ ನಡೆಯಿರಿ. ಈಗ ಚುರುಗುಟ್ಟುತ್ತಿರುವ ಹೊಟ್ಟೆಗೆ ಕೇವಲ ಚೆನ್ನಾಗಿ ಹಣ್ಣಾದ ಪಪ್ಪಾಯಿಯನ್ನು ಮಾತ್ರ ಸೇವಿಸಿ. ನೀರನ್ನು ಕನಿಷ್ಠ ಪ್ರಮಾಣದಲ್ಲಿ ಕುಡಿಯಿರಿ.

ಇನ್ನು ಸಂತಸದ ವಿಷಯ ಏನೆಂದರೆ, ದಿನನಿತ್ಯ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವಿಸುವುದರ ಮೂಲಕವೂ ಕೂಡ ಕರುಳನ್ನು ಸ್ವಚ್ಛಗೊಳಿಸಬಹುದು... ಉದಾಹರಣೆಗೆ ಕೆಲವೊಂದು ನೈಸರ್ಗಿಕ ತರಕಾರಿಗಳಾದ ಬ್ರೊಕೋಲಿ ಸ್ಪರೌಟ್ಸ್, ಬೆಳ್ಳುಳ್ಳಿ, ಬೀಟ್‌ರೂಟ್, ಕ್ಯಾಬೇಜ್ ಇತ್ಯಾದಿ. ಕೆಲವು ಹಣ್ಣುಗಳಾದ ಸೇಬು, ಅವೊಕಾಡೊ, ರಸ್‌ಬೆರ್ರಿ, ಲಿಂಬೆ ಹಣ್ಣು ತನ್ನ ಕರುಳು ಸ್ವಚ್ಛಗೊಳಿಸುವ ಗುಣಗಳಿಂದ ಹೆಸರುವಾಸಿಯಾಗಿದೆ.
ಅವಕಾಡೋ

ಅವಕಾಡೋ

ಕಿವಿ ಹಣ್ಣು ರುಚಿ ಮಾತ್ರವಲ್ಲ ಅನೇಕ ಆರೋಗ್ಯಕರ ಗುಣವನ್ನು ಹೊಂದಿದೆ. ಈ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ, ಫುಡ್ ಬಜಾರ್ ಗಳಲ್ಲಿ ದೊರೆಯುವುದು. ಈ ಹಣ್ಣು ಅಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದು ರೂಟ್ಗರ್ಸ್ ವಿಶ್ವವಿಧ್ಯಾನಿಲಯದಲ್ಲಿ ಡಾ. ಪೌಲ್ ಲಾಚಾನ್ಸ್ ನಡೆಸಿದ ಅಧ್ಯಯನದಿಂದ ಧೃಢ ಪಟ್ಟಿದೆ. ಈ ಅಧ್ಯಯನದಲ್ಲಿ ಸಾಮಾನ್ಯವಾಗಿ ದಿನ ನಿತ್ಯ ತಿನ್ನುವ ಸುಮಾರು 27 ಹಣ್ಣುಗಳನ್ನು ತೆಗೆದುಕೊಂಡು ಪರೀಕ್ಷಿಸಿದಾಗ ಅದರಲ್ಲಿ ಕಿವಿ ಹಣ್ಣು ಇತರ ಎಲ್ಲಾ ಹಣ್ಣುಗಳಿಗಿಂತ ಅತ್ಯಾಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದು ತಿಳಿದು ಬಂದಿದೆ. ಇನ್ನು ಅವಕಾಡೋ ಒಮೆಗಾ-3 ಆಯಿಲ್ ಅನ್ನು ತನ್ನಲ್ಲಿ ಹೊಂದಿದ್ದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಕರುಳಿನ ಗೋಡೆಗಳನ್ನು ಸರಿಪಡಿಸುವ ಕೀಲೆಣ್ಣೆಯಾಗಿದೆ.

ಸೇಬುಹಣ್ಣುಗಳು

ಸೇಬುಹಣ್ಣುಗಳು

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು" ಈ ವಾಕ್ಯವನ್ನು ಚಿಕ್ಕಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ. ಬೇರೆಲ್ಲಾ ಹಣ್ಣುಗಳಿಗಿಂತ ಸೇಬಿನಲ್ಲಿರುವ ಪೋಷಕಾಂಶಗಳ ಆಗರವೇ ಇದಕ್ಕೆ ಕಾರಣ. ಪ್ರತಿದಿನ ಸೇಬು ಹಣ್ಣೊಂದನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಪ್ರಮಾಣದ ಪ್ರೋಟೀನುಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಮುಖ್ಯವಾಗಿ ವಿಟಮಿನ್ ಸಿ ಲಭ್ಯವಿರುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡು ಬರುವ ಕಾರಣ ಸೇಬಿಗೆ ವೈದ್ಯರನ್ನು ದೂರ ಅಟ್ಟಿದ ಅತಿಶಯೋಕ್ತಿ ಲಭ್ಯವಾಗಿದೆ. ಕರುಳನ್ನು ಸ್ವಚ್ಛಗೊಳಿಸುವ ಹಣ್ಣು ಸೇಬಾಗಿದ್ದು ಇದು ತೊಂದರೆಕಾರಿ ಕೀಟಾಣುಗಳನ್ನು ನಾಶಪಡಿಸುತ್ತದೆ.

ರಸ್‌ಬೆರ್ರಿಗಳು

ರಸ್‌ಬೆರ್ರಿಗಳು

ಫೈಬರ್ ಅಧಿಕವಾಗಿರುವ ಹಣ್ಣು ರಸ್‌ಬೆರ್ರಿಯಾಗಿದ್ದು, ಇದು ಕರುಳನ್ನು ಸ್ವಚ್ಛಗೊಳಿಸುವುದರೊಂದಿಗೆ ಜಠರವನ್ನು ಕಾಪಾಡುತ್ತದೆ. ಇದು ಸುಂದರ ಮತ್ತು ಹೊಳೆಯುವ ತ್ವಚೆಗಾಗಿ ಉತ್ತಮವಾಗಿದೆ.

ಸ್ಟ್ರಾಬೆರ್ರಿ

ಸ್ಟ್ರಾಬೆರ್ರಿ

ಇದು ಕರುಳನ್ನು ಸ್ವಚ್ಛಮಾಡುವ ಹಣ್ಣುಗಳಲ್ಲಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಫೈಬರ್ ಮತ್ತು ಇತರ ಆರೋಗ್ಯಕರ ವಿಟಮಿನ್ ಸ್ಟ್ರಾಬೆರ್ರಿಯಲ್ಲಿ ಅಧಿಕವಾಗಿದ್ದು, ನಿಯಮಿತವಾಗಿ ಇದರ ಸೇವನೆ ಆರೋಗ್ಯಕ್ಕೆ ಉತ್ತಮ.

ಬ್ಲೂಬೆರ್ರಿಗಳು

ಬ್ಲೂಬೆರ್ರಿಗಳು

ಕಡಿಮೆ ಆಸ್ಪಿರಿನ್ ಕಾರಣದಿಂದ ಅಂಗಾಂಶ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುವ ನೈಸರ್ಗಿಕ ಆಸ್ಪಿರಿನ್ ಅನ್ನು ಬ್ಲೂಬೆರ್ರಿಗಳು ಒಳಗೊಂಡಿವೆ.

ಗ್ರೇಪ್‌ಫ್ರುಟ್

ಗ್ರೇಪ್‌ಫ್ರುಟ್

ಕೆಂಪು ಜ್ಯೂಸಿ ಫ್ರುಟ್ ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕುವಲ್ಲಿ ಸಹಕಾರಿ. ದೇಹದಿಂದ ಹಾನಿಕಾರಿ ವೈರಸ್‌ಗಳನ್ನು ಹೊರದಬ್ಬಿ ರಕ್ತವನ್ನು ಕರುಳನ್ನು ಸ್ವಚ್ಛಮಾಡುವಲ್ಲಿ ಸಹಕಾರಿಯಾಗಿದೆ.

ಲಿಂಬೆಹಣ್ಣು

ಲಿಂಬೆಹಣ್ಣು

ಲಿಂಬೆಯಲ್ಲಿರುವ ಸಿಟ್ರಸ್ ಅಂಶ ದೇಹವನ್ನು ನೈಸರ್ಗಿಕವಾಗಿ ಸ್ವಚ್ಛಮಾಡುತ್ತದೆ. ಇದು ವಿಟಮಿನ್ ಸಿ ಭರಿತವಾಗಿದ್ದು ಹಾನಿಕಾರಕ ರಾಸಾಯನಿಕಗಳನ್ನು ನಾಶಮಾಡುತ್ತದೆ.

English summary

top 12 Remedies To Cleanse Your Colon Naturally

Colon constitutes of four parts which includes descending colon, ascending colon, transverse colon, and sigmoid colon. Colon or the large intestine is considered an important organ because it helps the body absorb nutrients and calories as the food moves through the small intestine, thereby helping in digesting food. The large intestine balances the body's pH and electrolytes as well. This is one of the reasons why cleansing your colon is essential as it helps treat health issues like constipation or irregular bowel movements and also can reduce the risk of colon cancer.
X
Desktop Bottom Promotion