For Quick Alerts
ALLOW NOTIFICATIONS  
For Daily Alerts

ಹಲ್ಲು ನೋವಿಗೆ ಆಯುರ್ವೇದ ಚಿಕಿತ್ಸೆ-ಒಂದೆರಡು ಗಂಟೆಯಲ್ಲಿಯೇ ನಿಯಂತ್ರಣಕ್ಕೆ!

|

ಹಲ್ಲು ನೋವು ಎನ್ನುವುದು ಪ್ರತಿಯೊಬ್ಬರನ್ನೂ ಒಂದಲ್ಲಾ ಒಂದು ದಿನ ಕಾಡಿಯೇ ಇರುವುದು. ಇದು ತೀವ್ರ ರೀತಿಯ ನೋವು ಉಂಟು ಮಾಡಿ, ಅದರಿಂದ ತಲೆನೋವು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬಾಯಿಯ ಆರೋಗ್ಯ ಮತ್ತು ಹಲ್ಲಿನ ಕೊಳೆತದಿಂದಾಗಿ ಹಲ್ಲು ನೋವು ಬರಬಹುದು. ತುಂಬಾ ಬಿಸಿಯಾಗಿರುವ ಅಥವಾ ತಂಪಾಗಿರುವ ಆಹಾರ ಸೇವನೆ ಮಾಡಿದಾಗ ಅಥವಾ ಬಳಿಕ ನೋವು ಬರಬಹುದು.

home remedies for tooth ache

ಆಯುರ್ವೇದದಲ್ಲಿ ಹಲ್ಲುನೋವನ್ನು ದಂತಶೂಲವೆಂದು ಕರೆಯಲಾಗುವುದು. ದೀರ್ಘಕಾಲದ ಹಾಗೂ ಪದೇ ಪದೇ ಕಾಡುವಂತಹ ಹಲ್ಲುನೋವಿಗೆ ಆಯುರ್ವೇದವು ಹಲವಾರು ರೀತಿಯ ಔಷಧಿಗಳನ್ನು ಸಿದ್ಧಪಡಿಸಿದೆ. ಆಯುರ್ವೇದವು ಸಂಪೂರ್ಣವಾಗಿ ನೋವಿಗೆ ಏನು ಕಾರಣವೋ ಅದರ ಮೂಲದ ತನಕ ತಲುಪಿ, ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೆ ಪರಿಹಾರ ನೀಡುವುದು. ನೋವು ಮರಳಿ ಬರದಂತೆ ಕೂಡ ಇದು ತಡೆಯುವುದು. ತೀವ್ರ ಹಲ್ಲು ನೋವಿಗೆ ಕೆಲವೊಂದು ಆಯುರ್ವೇದದ ಚಿಕಿತ್ಸೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಬೆಳ್ಳುಳ್ಳಿ ಮತ್ತು ಲವಂಗದ ಎಣ್ಣೆ

ಬೆಳ್ಳುಳ್ಳಿ ಮತ್ತು ಲವಂಗದ ಎಣ್ಣೆ

ಬೆಳ್ಳುಳ್ಳಿ ಮತ್ತು ಲವಂಗದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಮತ್ತು ಶಮನಕಾರಿ ಗುಣಗಳು ಇವೆ ಎಂದು ಆಯುರ್ವೇದವು ಹಿಂದಿನಿಂದಲೇ ಕಂಡುಕೊಂಡಿದೆ. ಲವಂಗದ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಹಲ್ಲಿನ ನೋವಿರುವ ಭಾಗಕ್ಕೆ ಹಚ್ಚಿಕೊಳ್ಳಬೇಕು. ಇದು ನೋವು ನಿವಾರಣೆ ಮಾಡ, ಹಲ್ಲಿನ ಆರೋಗ್ಯ ಕಾಪಾಡುವುದು ಇದು ಹಲ್ಲುಗಳನ್ನು ಬಲಗೊಳಿಸಿ ನೋವಿನಿಂದ ಮುಕ್ತಿ ನೀಡುವುದು.

ಲಿಂಬೆ ಮತ್ತು ಇಂಗು

ಲಿಂಬೆ ಮತ್ತು ಇಂಗು

ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿಯು ಸೋಂಕು ನಿವಾರಕವಾಗಿ ಕೆಲಸ ಮಾಡುವುದು. ದಂತುಕುಳಿಗೆ ಒಳಗಾಗಿ ಸೂಕ್ಷ್ಮ ಅನುಭವ ನೀಡುವ ಹಲ್ಲನ್ನು ಶಮನಗೊಳಿಸುವುದು. ಲಿಂಬೆಯು ತೀವ್ರವಾದ ನೋವು ನಿವಾರಣೆ ಮಾಡಿ, ರಕ್ತಸ್ರಾವವಾಗುವ ಒಸಡು ಮತ್ತು ಅಲುಗಾಡುತ್ತಿರುವ ಹಲ್ಲಿಗೆ ಪರಿಹಾರ ನೀಡುವುದು. ಇಂಗು ಮತ್ತು ಸ್ವಲ್ಪ ಲಿಂಬೆರಸವನ್ನು ಹದವಾಗಿ ಬಿಸಿ ಮಾಡಿಕೊಂಡು ಅದನ್ನು ನೋವಿರುವಂತಹ ಹಲ್ಲಿನ ಭಾಗಕ್ಕೆ ಹಚ್ಚಿಕೊಳ್ಳಬೇಕು.

Most Read: ನಿಮ್ಮ ಜೀವನದ ಎಲ್ಲಾ ಸೀಕ್ರೆಟ್ಸ್ ಬಿಚ್ಚಿಡುವ ಅಂಗೈಯಲ್ಲಿರುವ ಅದೃಷ್ಟದ ಚಿಹ್ನೆಗಳು!

ಬೇವು ಮತ್ತು ಅಕೇಶಿಯಾ

ಬೇವು ಮತ್ತು ಅಕೇಶಿಯಾ

ಬೇವು ಮತ್ತು ಅಕೇಶಿಯಾದ ಸಾರವು ಹಲ್ಲು ನೋವು ಮತ್ತು ಬಾಯಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಈ ಆಯುರ್ವೇದ ಗಿಡಮೂಲಿಕೆಗಳು ನಂಜುನಿರೋಧಕ ಹಾಗೂ ಸೋಂಕುನಿವಾರಕ ಗುಣ ಹೊಂದಿದೆ. ಇದು ಹಲ್ಲಿನ ಕೊಳೆತ ನಿವಾರಣೆ ಮಾಡುವುದು ಮತ್ತು ನೋವಿನಿಂದ ಪರಿಹಾರ ನೀಡುವುದು. ಇದು ನೋವು ಶಮನ ಮಾಡಿ, ಹಲ್ಲು ಮತ್ತು ಒಸಡನ್ನು ಬಲಗೊಳಿಸುವುದು.

ಕರಿಮೆಣಸು ಮತ್ತು ಕಲ್ಲುಪ್ಪು

ಕರಿಮೆಣಸು ಮತ್ತು ಕಲ್ಲುಪ್ಪು

ಆಯುರ್ವೇದದಲ್ಲಿ ಕರಿಮೆಣಸನ್ನು ಮರಿಚ ಎಂದು ಕರೆಯಲಾಗುತ್ತದೆ. ಇದು ಸೂಕ್ಷ್ಮ ಹಲ್ಲುಗಳ ಚಿಕಿತ್ಸೆಗೆ ತುಂಬಾ ಪರಿಣಾಮಕಾರಿಯಾಗಿರಲಿದೆ. ಕರಿಮೆಣಸಿನ ಹುಡಿಯನ್ನು ಕಲ್ಲುಪ್ಪಿನ ಜತೆಗೆ ಮಿಶ್ರಣ ಮಾಡಿಕೊಂಡು ನೋವು ಉಂಟುಮಾಡುವಂತಹ ಹಲ್ಲಿಗೆ ಹಚ್ಚಿಕೊಳ್ಳಿ. ಇದು ನೋವು ನಿವಾರಿಸಿ, ಸೆಳೆತ ಕಡಿಮೆ ಮಾಡುವುದು. ಇದು ಸಂಪೂರ್ಣ ಬಾಯಿಯ ಆರೋಗ್ಯ ಕಾಪಾಡುವುದು. ಇದನ್ನು ಲವಂಗದ ಎಣ್ಣೆಯೊಂದಿಗೂ ಬಳಸಿಕೊಳ್ಳಬಹುದು.

ಬೇಬೆರ್ರಿ ತೊಗಟೆ

ಬೇಬೆರ್ರಿ ತೊಗಟೆ

ಆಯುರ್ವೇದದಲ್ಲಿ ಬೇಬೆರ್ರಿ ತೊಗಟೆಯನ್ನು ಹಲ್ಲುನೋವಿಗೆ ಔಷಧಿಯಾಗಿ ಬಳಸಿಕೊಳ್ಳಲಾಗುತ್ತಿದೆ. ತೊಗಟೆಯಿಂದ ಮಾಡಿರುವಂತಹ ಪೇಸ್ಟ್ ಮತ್ತು ವಿನೇಗರ್ ಹಾಕಿಕೊಂಡು ಅದನ್ನು ನೋವಿರುವ ಹಲ್ಲಿಗೆ ಹಚ್ಚಿಕೊಂಡರೆ ಅದರಿಂದ ನೋವು ಶಮನವಾಗುವುದು.

Most Read: ಸೆಪ್ಟೆಂಬರ್ 19 ರಿಂದ 25ರ ವರೆಗಿನ ವಾರ ಭವಿಷ್ಯ

ಲವಂಗ

ಲವಂಗ

ಎರಡು ಲವಂಗಗಳನ್ನು ನುಣ್ಣಗೆ ಅರೆದು ಕೊಂಚ ಆಲಿವ್ ಎಣ್ಣೆ ಅಥವಾ ಬೇರಾವುದಾದರೂ ಅಡುಗೆ ಎಣ್ಣೆ ಬೆರೆಸಿ ಸೋಂಕು ತಗುಲಿದ ಭಾಗಕ್ಕೆ ಹಚ್ಚಿ, ಪರ್ಯಾಯವಾಗಿ ಹತ್ತಿಯುಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ನೋವಿರುವ ಭಾಗದಲ್ಲಿರಿಸಿ ಕಚ್ಚಿಕೊಳ್ಳಿ. ಇನ್ನೊಂದು ವಿಧಾನದಲ್ಲಿ ಕೊಂಚ ಬಿಸಿನೀರಿಗೆ ಕೆಲವು ಹನಿ ಲವಂಗದ ಎಣ್ಣೆ ಬೆರೆಸಿ ಮುಕ್ಕಳಿಸಿ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ವಿಪರೀತವಾದ ಹಲ್ಲು ನೋವಿಗೆ ಇದು ಸಹ ಒಂದು ಪ್ರಯೋಜನಕಾರಿ ಮನೆ ಪರಿಹಾರವಾಗಿದೆ. ಇದಕ್ಕೆ ನಿಮಗೆ ಅಗತ್ಯವಾಗಿರುವುದು ಕೇವಲ ತೆಂಗಿನೆಣ್ಣೆ. ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. 30 ನಿಮಿಷಗಳ ಕಾಲ ಬಾಯಿಯಲ್ಲಿ ಇದನ್ನು ಹಾಕಿಕೊಂಡು ಆಗಾಗ ಮುಕ್ಕುಳಿಸುತ್ತ ಇರಿ. ನಂತರ ಇದನ್ನು ಉಗಿದು ಬಾಯಿಯನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಖಂಡಿತ ನಿಮ್ಮ ಸಮಸ್ಯೆಯಿಂದ ಸ್ವಲ್ಪ ನಿರಾಳತೆಯನ್ನು ಅನುಭವಿಸುವಿರಿ.

ಉಪ್ಪು

ಉಪ್ಪು

ಹಲ್ಲು ನೋವಿಗೆ ಉಪ್ಪು ತತ್‍ಕ್ಷಣದ ನೋವು ನಿವಾರಕವಾಗಿ ಕೆಲಸಕ್ಕೆ ಬರುವ ಅಂಶವಾಗಿದೆ. ಇದಕ್ಕೆಲ್ಲ ಬೇಕಾಗಿರುವುದು ಕೇವಲ ಎರಡು ವಸ್ತುಗಳು ಒಂದು ಬೆಚ್ಚನೆಯ ನೀರು ಮತ್ತು ಎರಡು ಸ್ವಲ್ಪ ಉಪ್ಪು.ಇವೆರಡನ್ನು ಬೆರೆಸಿ ಅದರಿಂದ ಬಾಯಿಯನ್ನು ಮುಕ್ಕುಳಿಸಿ. ಮೊದಲೆರಡು ಬಾರಿ ಬಾಯಿಯನ್ನು ಮುಕ್ಕುಳಿಸುವಾಗ ನಿಮಗೆ ನೋವಿನ ಅನುಭವವಾಗಬಹುದು. ಆದರೆ ನಂತರ ನಿಮಗೆ ನೋವಿನಿಂದ ಉಪಶಮನ ದೊರೆಯುವುದು ಸುಳ್ಳಲ್ಲ. ಇದನ್ನು ಕೆಲವು ಬಾರಿ ಪುನರಾವರ್ತಿಸಿ ಮತ್ತು ಶೇ.90ರಷ್ಟು ನೋವನ್ನು ಕಡಿಮೆ ಮಾಡಿಕೊಳ್ಳಿ.

ಈರುಳ್ಳಿ

ಈರುಳ್ಳಿ

ಇದರ ಕೀಟಾಣುವಿರೋಧಿ ಮತ್ತು ನಂಜುನಿರೋಧಕ ಗುಣಗಳು ಹಲ್ಲುನೋವು ಕಡಿಮೆಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಈ ವಿಧಾನ ಉತ್ತಮವಾಗಿದೆ. ಹಸಿ ಈರುಳ್ಳಿಯನ್ನು ನೋವಿರುವ ಹಲ್ಲುಗಳ ಭಾಗದಲ್ಲಿ ಅಗಿಯಿರಿ. ಇಲ್ಲದಿದ್ದರೆ ಕೆಲವು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವೊಂದನ್ನು ಒಸಡಿಗೆ ತಗಲುವಂತೆ ಇರಿಸಿ.

ಹಾವಿನ ಶಾಪ ಅಂತಲೇ ಹೇಳಲಾಗುವ ಸರ್ಪ ಸುತ್ತಿನ ಲಕ್ಷಣಗಳು ಹಾಗೂ ಚಿಕಿತ್ಸೆ

ಉಪ್ಪು ಮತ್ತು ಕಾಳುಮೆಣಸು

ಉಪ್ಪು ಮತ್ತು ಕಾಳುಮೆಣಸು

ಇವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಉರಿಯೂತ ನಿವಾರಕ ಗುಣಗಳು ಒಸಡುಗಳಲ್ಲಿ ಆಗಿರುವ ಸೋಂಕು ನಿವಾರಿಸಿ ನೋವು ಕಡಿಮೆಯಾಗಲು ನೆರವಾಗುತ್ತವೆ.

*ಒಂದು ಬೋಗುಣಿಯಲ್ಲಿ ಸಮಪ್ರಮಾಣದಲ್ಲಿ ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕೆಲವು ಹನಿ ನೀರು ಸೇರಿಸಿ ದಪ್ಪನೆಯ ಲೇಪನ ತಯಾರಿಸಿ

*ಈ ಲೇಪನವನ್ನು ನೋವು ಕೊಡುತ್ತಿರುವ ಭಾಗದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಬಾಯಿಯನ್ನು ಮುಕ್ಕಳಿಸಿ ಉಗಿಯಿರಿ.

*ಈ ವಿಧಾನವನ್ನು ದಿನಕ್ಕೆ ಎರಡು ಬಾರಿಯಂತೆ ನೋವು ಕಡಿಮೆಯಾಗುವವರೆಗೆ ಮುಂದುವರೆಸಿ.

ಉಗುರುಬೆಚ್ಚನೆಯ ಉಪ್ಪುನೀರು

ಉಗುರುಬೆಚ್ಚನೆಯ ಉಪ್ಪುನೀರು

ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಚಮಚ ಉಪ್ಪು ನೀರು ಸೇರಿಸಿ, ಇನ್ನು ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸುತ್ತಾ ಇರಿ. ಇದರಿಮ್ದ ಸೋಂಕು ಉಂಟಾಗಿದ್ದ ಒಸಡಿನಲ್ಲಿರುವ ಬ್ಯಾಕ್ಟೀರಿಯಾಗಳು ತೊಲಗಿ ಸೋಂಕು ಹಾಗೂ ನೋವು ಕಡಿಮೆಯಾಗುತ್ತದೆ.

ಟೀ ಟ್ರೀ ಎಣ್ಣೆ ಬಳಸಿ

ಟೀ ಟ್ರೀ ಎಣ್ಣೆ ಬಳಸಿ

ಟೀ ಟ್ರೀ ಆಯಿಲ್ ಎಂದು ಔಷಧಿ ಅಂಗಡಿಯಲ್ಲಿ ಸಿಗುವ ತೈಲವನ್ನು ಬಳಸಿದಾಗಲೂ ಹಲ್ಲುನೋವು ಶಮನವಾಗುತ್ತದೆ. ಈ ಎಣ್ಣೆ ಹಲ್ಲುನೋವಿಗೆ ಮಾತ್ರವಲ್ಲದೇ ಮೊಡವೆ, ಕಲೆ ನಿವಾರಣೆ ಮೊದಲಾದವುಗಳಿಗೂ ಬಳಕೆಯಾಗುತ್ತದೆ. ಹಲ್ಲುನೋವಿದ್ದಾಗ ಉಗುರುಬೆಚ್ಚನೆಯ ಒಂದು ಲೋಟ ನೀರಿಗೆ ಕೆಲವು ಹನಿಗಳನ್ನು ಹಾಕಿ ಮಿಶ್ರಣ ಮಾಡಿ ಬಾಯಿ ತುಂಬುವಷ್ಟು ತುಂಬಿ ನುಂಗದೇ ಹಾಗೇ ನಿಮಗೆ ಸಾಧ್ಯವಿದ್ದಷ್ಟು ಹೊತ್ತು ಹಾಗೇ ಇರಿ. ಲೋಟದ ನೀರು ಖಾಲಿಯಾಗುವಷ್ಟರಲ್ಲಿ ನೋವು ಕಡಿಮೆಯಾಗುತ್ತದೆ. ದಿನಕ್ಕೆ ಮೂರು ಬಾರಿ ಈ ಪ್ರಕ್ರಿಯೆ ನಡೆಸಿ.

English summary

Tooth Ache-Ayurvedic Remedies That Can Help You!

Tooth Ache-Ayurvedic Remedies That Can Help You!
X
Desktop Bottom Promotion