For Quick Alerts
ALLOW NOTIFICATIONS  
For Daily Alerts

ಪ್ರತಿನಿತ್ಯ ಓಟ್ಸ್ ಸೇವಿಸಿ, ಆರೋಗ್ಯಕ್ಕೆ ಬಹಳ ಒಳ್ಳೆಯದು

By Hemanth
|

ತೂಕ ಕಳೆದುಕೊಳ್ಳಲು ಬಯಸುವಂತಹ ಹೆಚ್ಚಿನ ಜನರು ತಮ್ಮ ಬೆಳಗ್ಗಿನ ಉಪಹಾರದಲ್ಲಿ ಸೇವಿಸುವ ಆಹಾರವೇ ಓಟ್ ಮೀಲ್. ಹೆಚ್ಚಿನ ಪೋಷಕಾಂಶ ತಜ್ಞರು ಹಾಗೂ ವೈದ್ಯರು ಕೂಡ ಪ್ರತಿನಿತ್ಯ ಓಟ್ ಮೀಲ್ ಸೇವನೆ ಮಾಡಿದರೆ ಅದರಿಂದ ತೂಕ ಕಳೆದುಕೊಳ್ಳಲು ನೆರವಾಗುವುದು ಎಂದು ಹೇಳುವರು. ಈ ಲೇಖನದಲ್ಲಿ ಪ್ರತಿನಿತ್ಯ ಓಟ್ ಮೀಲ್ ಸೇವನೆ ಮಾಡಿದರೆ ಏನಾಗಬಹುದು ಎಂದು ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಅರ್ಧ ಕಪ್ ಓಟ್ ಮೀಲ್ ನಲ್ಲಿ ನಿತ್ಯ ದೇಹಕ್ಕೆ ಬೇಕಾಗುವ ಶೇ. 13ರಷ್ಟು ಪ್ರೋಟೀನ್ ಇದೆ.

ದೇಹಕ್ಕೆ ನಿತ್ಯಕ್ಕೆ ಬೇಕಾಗುವ ಶೇ. ನೂರರಷ್ಟು ಮ್ಯಾಂಗನೀಸ್ ಓಟ್ ಮೀಲ್ ನಲ್ಲಿದೆ. ಓಟ್ ಮೀಲ್ ನಲ್ಲಿ ಕೆಲವೊಂದು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳು, ವಿಟಮಿನ್ ಇ, ಸೆಲೆನಿಯಂ, ಫೆನೊಲಿಕ್ ಆಮ್ಲ ಮತ್ತು ಪೈಟಿಕ್ ಆಮ್ಲವಿದೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ವಿಟಮಿನ್ ಬಿ1, ಬಯೋಟಿನ್, ಮೆಗ್ನಿಶಿಯಂ, ತಾಮ್ರ, ಮೊಲಿಬ್ಡಿನಮ್, ಪೋಸ್ಪರಸ್ ಇತ್ಯಾದಿ ಅಂಶಗಳು ಇವೆ. ಇದರಲ್ಲಿರುವಂತಹ ಕರಗಬಲ್ಲ ನಾರಿನಾಂಶದಿಂದಾಗಿ ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಮಾಡಲು ನೆರವಾಗುವುದು. ಕರಬಲ್ಲ ನಾರಿನಾಂಶವು ಗ್ಲೂಕೋಸ್ ಹೀರಿಕೊಳ್ಳುವಿಕೆ ಕಡಿಮೆ ಮಾಡುವುದು. ಓಟ್ ಮೀಲ್ ನಲ್ಲಿ ಬೆಟಾ ಗ್ಲೂಕೆನ್ ಅಂಶವಿದೆ. ಓಟ್ಸ್ ನಲ್ಲಿ ಸಂಪೂರ್ಣವಾಗಿ ಪ್ರೋಟೀನ್, ನಾರಿನಾಂಶವಿದ್ದು, ಕೊಬ್ಬಿನಾಂಶ ಕಡಿಮೆಯಿದೆ. ಇದರಿಂದ ಶಕ್ತಿಯ ಮಟ್ಟವು ಹೆಚ್ಚಾಗುವುದು ಮತ್ತು ಆರೋಗ್ಯಕರ ಜೀವನಶೈಲಿ ನಡೆಸಲು ನೆರವಾಗುವುದು. ಪ್ರತಿನಿತ್ಯ ಓಟ್ಸ್ ಸೇವಿಸಿದರೆ ಏನಾಗುವುದು ಎಂದು ತಿಳಿಯಿರಿ.

ಸ್ನಾಯುಗಳಿಗೆ ಹೆಚ್ಚಿನ ಪ್ರೋಟೀನ್ ಸಿಗುವುದು

ಸ್ನಾಯುಗಳಿಗೆ ಹೆಚ್ಚಿನ ಪ್ರೋಟೀನ್ ಸಿಗುವುದು

ಎಂಟು ಚಮಚದಷ್ಟು ಓಟ್ಸ್ ಸೇವನೆ ಮಾಡಿದರೆ ಅದರಿಂದ ದಿನದ ಅಗತ್ಯಕ್ಕೆ ಬೇಕಾಗುವ ಶೇ. 15ರಷ್ಟು ಪ್ರೋಟೀನ್ ಸಿಗುವುದು. ಓಟ್ಸ್ ಲ್ಲಿ ವಿಟಮಿನ್ ಇ, ಆ್ಯಂಟಿಆಕ್ಸಿಡೆಂಟ್, ಗ್ಲುಟಮಿನ್ ಇದ್ದು, ಸ್ನಾಯುಗಳು ಬೇಗನೆ ಪುನರುಜ್ಜೀವನಗೊಳಿಸುವುದು. ಒಂದು ಕಪ್ ಒಣ ಓಟ್ಸ್ ನಲ್ಲಿ 3.4 ಮಿ.ಗ್ರಾಂನಷ್ಟು ಖನಿಜಾಂಶ ಮತ್ತು 0.9ಮಿ.ಗ್ರಾಂನಷ್ಟು ಬಿ3ಯಿದೆ. ಖನಿಜಾಂಶವು ರಕ್ತನಾಳಗಳಿಗೆ ಮತ್ತು ಸ್ನಾಯುಗಳಿಗೆ ಆಮ್ಲಜನಕ ಪೂರೈಕೆ ಮಾಡಲು ನೆರವಾಗುವುದು. ವಿಟಮಿನ್ ಬಿ ಕಾರ್ಬ್ರೋಹೈಡ್ರೇಟ್ಸ್ ನ್ನು ಶಕ್ತಿಯಾಗಿ ಪರಿವರ್ತಿಸುವುದು.

ಆ್ಯಂಟಿಆಕ್ಸಿಡೆಂಟ್ ಮಟ್ಟ ಅಧಿಕ

ಆ್ಯಂಟಿಆಕ್ಸಿಡೆಂಟ್ ಮಟ್ಟ ಅಧಿಕ

ಓಟ್ಸ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಮಟ್ಟವು ಸಮೃದ್ಧವಾಗಿದೆ. ಇದು ತುರಿಕೆ, ಉರಿಯೂತ ಮತ್ತು ರಕ್ತದೊತ್ತಡ ಕಡಿಮೆ ಮಾಡುವುದು. ಇದರಲ್ಲಿ ಇರುವಂತಹ ಬೆಟಾ ಗ್ಲುಕೆನ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟ ತಗ್ಗಿಸುವುದು. ವಿಟಮಿನ್ ಸಿ ಜತೆ ಇದರ ಸೇವನೆ ಮಾಡಿದರೆ ಅದು ಮತ್ತಷ್ಟು ಪರಿಣಾಮಕಾರಿ. ಇದರಿಂದ ಹೆಚ್ಚಿನವರು ಓಟ್ಸ್ ಜತೆಗೆ ಕಿತ್ತಳೆ ಜ್ಯೂಸ್ ಸೇವನೆ ಮಾಡುವರು.

ಶಕ್ತಿವರ್ಧಕ

ಶಕ್ತಿವರ್ಧಕ

ಓಟ್ ಮೀಲ್ಸ್ ನಲ್ಲಿ ಅಧಿಕ ಮಟ್ಟದ ಕಾರ್ಬ್ರೋಹೈಡ್ರೇಟ್ಸ್ ಮತ್ತು ಪ್ರೋಟೀನ್ ಇರುವ ಕಾರಣ ಇದು ದೇಹಕ್ಕೆ ಶಕ್ತಿ ನೀಡುವುದು. ವ್ಯಾಯಾಮ ಅಥವಾ ಓಟಕ್ಕೆ ಮೂರು ಗಂಟೆಗೆ ಮೊದಲು ಕಡಿಮೆ ಗ್ಲೈಸೆಮಿಕ್ ಇರುವಂತಹ ಆಹಾರವಾದ ಓಟ್ಸ್ ಸೇವನೆ ಮಾಡಿದರೆ ಅದು ನಿಮಗೆ ಹೆಚ್ಚಿನ ಸಹಿಷ್ಣುತೆ ನೀಡುವುದು. ಗ್ಲೈಸೆಮಿಕ್ ಮಟ್ಟವು ಕಡಿಮೆಯಾಗುವಂತೆ ಓಟ್ ಮೀಲ್ಸ್ ಮಾಡುವುದು. ಕಾರ್ಬ್ರೋಹೈಡ್ರೇಟ್ಸ್ ಸಂಕೀರ್ಣವು ಜೀರ್ಣಕ್ರಿಯೆ ನಿಧಾನಗೊಳಿಸಿ ಸ್ನಾಯುಗಳಿಗೆ ಬೇಕಾಗುವ ಶಕ್ತಿ ಒದಗಿಸುವುದು.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ಪ್ರತಿನಿತ್ಯ ಓಟ್ ಮೀಲ್ಸ್ ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುವುದು ಮತ್ತು ಇದರಿಂದ ತೂಕ ಕಳೆದುಕೊಳ್ಳಲು ನೆರವಾಗುವುದು. ಒಂದು ಪಿಂಗಾಣಿಯಷ್ಟು ಓಟ್ ಮೀಲ್ ನ್ನು ಸೇವನೆ ಮಾಡಿದರೆ ಮಧ್ಯಾಹ್ನ ಊಟಕ್ಕೆ ನೀವು ಅತಿಯಾಗಿ ಕ್ಯಾಲರಿ ಸೇವನೆ ಮಾಡುವುದು ತಪ್ಪುವುದು. ಕಾರ್ಬ್ರೋಹೈಡ್ರೇಟ್ಸ್ ಸಂಕೀರ್ಣವು ಹಸಿವು, ಆತಂಕ ನಿಯಂತ್ರಣದಲ್ಲಿಟ್ಟುಕೊಳ್ಳಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ಕೊಬ್ಬು ಮತ್ತು ವಿಷಕಾರಿ ಅಂಶವು ದೇಹದಲ್ಲಿ ಜಮೆಯಾಗುವುದು ತಪ್ಪುವುದು.

ಕೊಲೆಸ್ಟ್ರಾಲ್ ತಗ್ಗಿಸುವುದು

ಕೊಲೆಸ್ಟ್ರಾಲ್ ತಗ್ಗಿಸುವುದು

ಓಟ್ಸ್ ನಲ್ಲಿ ಬೆಟಾ ಗ್ಲುಕೆನ್ ಎನ್ನುವಂತಹ ಅಂಶವಿದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ನೆರವಾಗುವುದು. ಇದರಲ್ಲಿ ಇರುವಂತಹ ಲಿನೊಲಿಕ್ ಆಮ್ಲ ಮತ್ತು ಕರಗಬಲ್ಲ ನಾರಿನಾಂಶದ ನೆರವಿನಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರಿಗ್ಲೈಸೆರೈಡ್ಸ್ ನ ಮಟ್ಟ ಕಡಿಮೆ ಮಾಡುವುದು. ಇದು ಅಪಧಮನಿಗಳ ಗೋಡೆಗಳ ಕೊಬ್ಬನ್ನು ಶುದ್ಧೀಕರಿಸಿ, ಅಪಧಮನಿಗಳಲ್ಲಿ ಯಾವುದೇ ರೀತಿಯ ಬ್ಲಾಕ್ ಆಗದಂತೆ ನೋಡಿಕೊಳ್ಳೂವುದು. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು, ಅಪಧಮನಿ ಕಾಠಿಣ್ಯದಂತಹ ಗಂಭೀರ ಸಮಸ್ಯೆಯು ಬರುವುದಿಲ್ಲ.

ಹೃದಯಾಘಾತ ತಗ್ಗಿಸುವುದು

ಹೃದಯಾಘಾತ ತಗ್ಗಿಸುವುದು

ಓಟ್ಸ್ ನಲ್ಲಿ ಆರೋಗ್ಯಕರ ಕೊಬ್ಬಿನಾಂಶವು ಉತ್ತಮ ಪ್ರಮಾಣದಲ್ಲಿದೆ. ಇದರಿಂದಾಗಿ ಹೃದಯದ ಕೋಶ ಮತ್ತು ಹೃದಯವು ಸರಿಯಾಗಿ ಕಾರ್ಯನಿರ್ವಹಣೆ ಮಾಡಲು ಇದು ನೆರವಾಗುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ನಿಂದಾಗಿ ಫ್ರೀ ರ್ಯಾಡಿಕಲ್ ನಿಂದ ರಕ್ತನಾಳಗಳ ಗೋಡೆಗಳಿಗೆ ಉಂಟಾಗುವ ಹಾನಿ ತಡೆಯುವುದು. ಕರಗಬಲ್ಲ ನಾರಿನಾಂಶ ಹೊಂದಿರುವ ಓಟ್ ಮೀಲ್ಸ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕ್ಯಾಲ್ಸಿಯಂ ಮತ್ತು ಪೊಟಾಶಿಯಂ ರಕ್ತದೊತ್ತಡ ಕಡಿಮೆ ಮಾಡುವುದು.

ಜೀರ್ಣಕ್ರಿಯೆ ಸಮಸ್ಯೆ ಪರಿಹಾರ

ಜೀರ್ಣಕ್ರಿಯೆ ಸಮಸ್ಯೆ ಪರಿಹಾರ

ದಿನದಲ್ಲಿ ಸುಮಾರು 25ರಿಂದ 35 ಗ್ರಾಂನಷ್ಟು ನಾರಿನಾಂಶ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗಲು ನೆರವಾಗುವುದು ಎನ್ನುವುದು ತಜ್ಞರು ಅಭಿಪ್ರಾಯ. ಸಣ್ಣ ಪ್ರಮಾಣದ ಓಟ್ಸ್ ನಲ್ಲಿ ದಿನನಿತ್ಯಕ್ಕೆ ಬೇಕಾಗುವ 1/5ರಷ್ಟು ನಾರಿನಾಂಶವಿದೆ ಮತ್ತು ಇದರಿಂದಾಗಿ ಓಟ್ ಮೀಲ್ಸ್ ದೇಹಕ್ಕೆ ತುಂಬಾ ಒಳ್ಳೆಯದು. ನಾರಿನಾಂಶವು ಕರುಳಿನ ಕ್ರಿಯೆ ಸರಾಗವಾಗಿಸುವುದು ಮತ್ತು ಜೀರ್ಣಕ್ರಿಯೆ ಸಮಸ್ಯೆ ನಿವಾರಿಸುವುದು.

ಸುಂದರ ತ್ವಚೆಗೆ

ಸುಂದರ ತ್ವಚೆಗೆ

ಉರಿಯೂತದಿಂದ ಬರುಂತಹ ಇಸುಬು ನಿವಾರಣೆಗೆ ಓಟ್ಸ್ ತುಂಬಾ ಒಳ್ಳೆಯದು. ಇದು ಆರೋಗ್ಯಕಾರಿ ಚರ್ಮಕ್ಕೆ ನೆರವಾಗುವುದು. ಓಟ್ಸ್ ನಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇದೆ. ಇದರಲ್ಲಿರುವಂತಹ ಸತು ಚರ್ಮವನ್ನು ಶುದ್ಧೀಕರಿಸಿ, ಚರ್ಮದಲ್ಲಿನ ವಿಷಕಾರಿ ಹಾಗೂ ಹಾನಿಕಾರಕ ಅಂಶವನ್ನು ತೆಗೆಯುವುದು. ಖನಿಜಾಂಶದಿಂದ ಚರ್ಮಕ್ಕೆ ಒಳ್ಳೆಯ ಪೋಷಕಾಂಶ ಸಿಗುವುದು. ಮ್ಯಾಂಗನೀಶ್ ಊತ ಮತ್ತು ಉರಿಯೂತ ಕಡಿಮೆ ಮಾಡುವುದು. ಯಾವುದೇ ರೀತಿಯ ಗಾಯ, ತರುಚುವಿಕೆ ಮತ್ತು ಸುಟ್ಟ ಗಾಯವನ್ನು ನಿವಾರಿಸುವುದು. ಮೆಗ್ನಿಶಿಯಂ ರಕ್ತ ಸಂಚಾರವನ್ನು ಸುಗಮವಾಗಿಸಿ ಚರ್ಮದ ಕೋಶಗಳು ಪುನರ್ ನಿರ್ಮಾಣವಾಗಲು ನೆರವಾಗುವುದು.

ಕರುಳಿನ ಕ್ಯಾನ್ಸರ್ ತಡೆಯುವುದು

ಕರುಳಿನ ಕ್ಯಾನ್ಸರ್ ತಡೆಯುವುದು

ಕರುಳಿನ ಕ್ಯಾನ್ಸರ್ ನ್ನು ತಡೆಯಬೇಕಾದರೆ ನಾರಿನಾಂಶದ ಸೇವನೆ ಅತೀ ಅಗತ್ಯವಾಗಿದೆ. ಕರಗಬಲ್ಲ ನಾರಿನಾಂಶವಿರುವಂತಹ ಓಟ್ ಮೀಲ್ ಆಹಾರ ಜೀರ್ಣ ಮತ್ತು ಕಲ್ಮಷ ಹೊರಹಾಕುವ ಪ್ರಕ್ರಿಯೆಗೆ ವೇಗ ನೀಡುವುದು. ಕರಗಬಲ್ಲ ನಾರಿನಾಂಶವು ನೀರಿನಲ್ಲಿ ಮಿಶ್ರಣಗೊಂಡು ಹೊಟ್ಟೆ ಖಾಲಿಯಾಗದಂತೆ ನೋಡಿಕೊಳ್ಳುವುದು. ಇದರಿಂದ ದೀರ್ಘಕಾಲ ತನಕ ಹೊಟ್ಟೆ ತುಂಬಿದಂತೆ ಇರುವುದು. ಕರಗಬಲ್ಲ ನಾರಿನಾಂಶವು ಮಲಬದ್ಧತೆ ನಿವಾರಿಸಿ, ಕರುಳಿನ ಕ್ಯಾನ್ಸರ್ ಬರದಂತೆ ತಡೆಯುವುದು.

 ಮಧುಮೇಹ ನಿವಾರಣೆ

ಮಧುಮೇಹ ನಿವಾರಣೆ

ಓಟ್ಸ್ ನಲ್ಲಿ ಗ್ಲೈಸೆಮಿಕ್ ತುಂಬಾ ಕಡಿಮೆಯಿದೆ. ಇದರಿಂದ ಮಧುಮೇಹ ಬರುವಂತಹ ಸಾಧ್ಯತೆ ತಗ್ಗುವುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಿ, ಇನ್ಸುಲಿನ್ ಸೂಕ್ಷ್ಮತೆ ಮೇಲೆ ಧನಾತ್ಮಕ ಪರಿಣಾಮ ಬೀರುವುದು. ಗ್ಲೈಸೆಮಿಕ್ ಕಡಿಮೆ ಇರುವಂತಹ ಆಹಾರವು ಕಡಿಮೆ ಇನ್ಸುಲಿನ್ ಪ್ರತಿರೋಧಕಕ್ಕೆ ಸಂಬಂಧಿಸಿದೆ ಎಂದು ಅಧ್ಯಯನಗಳು ಹೇಳಿವೆ.

English summary

This Is What Happens If You Eat Oats Every Day

Oats are high in soluble fibre which help in lowering cholesterol levels. These soluble fibres help reduce glucose absorption. Oatmeal also contains beta-glucan, which is a lipid-lowering agent. Oats are packed with protein, full of fibre and low on fat, they are designed to boost your energy levels and help you lead a healthy lifestyle. Read on to know what happens if you eat oats every day.
X
Desktop Bottom Promotion