For Quick Alerts
ALLOW NOTIFICATIONS  
For Daily Alerts

ಪಿರಿಯೆಡ್ಸ್ ಸಂದರ್ಭ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಸರಿಯೋ ತಪ್ಪೋ?

|

ಮುಟ್ಟಾದ ಸಂದರ್ಭ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ವಿಷ್ಯದ ಬಗ್ಗೆ ಯಾರೂ ಮಾತಾಡಲು ಬಯಸೋದಿಲ್ಲ. ಆ ಬಗ್ಗೆ ಮಾತಾಡಿದರೂ ತಪ್ಪು ಎಂದು ತಿಳಿಯಲಾಗಿದೆ. ಮುಟ್ಟಿನ ಸಂದರ್ಭದಲ್ಲಿ ನೀವು ಅಸುರಕ್ಷಿತ ಲೈಂಗಿಕತೆಯನ್ನು ಹೊಂದಿದ್ದರೆ ಲೈಂಗಿಕ ರೋಗಗಳು ಉಂಟಾಗುವ ಸಾಧ್ಯತೆಗಳಿವೆ.

ಪಿರಿಯೆಡ್ಸ್ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸೋದರಿಂದ ನಿಮಗೆ ಕಂಫರ್ಟೇಬಲ್ ಅನಿಸದೇ ಇರಬಹುದು. ಜೊತೆಗೆ ನಿಮ್ಮ ಬೆಡ್‌ಶೀಟ್‌ನಲ್ಲಿ ರಕ್ತದ ಕಲೆಗಳಾಗುತ್ತವೆ. ಪಿರಿಯೆಡ್ಸ್ ಸಂದರ್ಭ ಲೈಂಗಿಕ ಕ್ರಿಯೆ ನಡೆಸಬಹುದೋ ಇಲ್ಲವೋ, ಗರ್ಭ ಧರಿಸ್ತಾರೋ ಇಲ್ಲವೋ ಎನ್ನುವ ಬಗ್ಗೆ ಬಹಳಷ್ಟು ಜನರಲ್ಲಿ ಪ್ರಶ್ನೆಗಳಿವೆ, ಈ ಲೇಖನದಲ್ಲಿ ನಾವು ಸಾಮಾನ್ಯ ಜನರಿಗೆ ಪಿರಿಯೆಡ್ಸ್ ಹಾಗೂ ಸೆಕ್ಸ್ ಬಗೆಗಿರುವ ಕೆಲವು ಸಂದೇಹಗಳನ್ನು ನಿವಾರಿಸಲು ಪ್ರಯತ್ನಿಸಿದ್ದೇವೆ.

ಲೈಂಗಿಕ ಕ್ರಿಯೆ

ಸಂಭೋಗೋದ್ರೇಕದ ಪರಾಕಷ್ಠೆಯು ಮುಟ್ಟಿನ ವೇಳೆಯ ಸೆಳೆತವನ್ನು ನಿವಾರಿಸುತ್ತದೆ.

ಸಂಭೋಗೋದ್ರೇಕದ ಪರಾಕಷ್ಠೆಯ ಸಂದರ್ಭ ಎಂಡಾರ್ಫಿನ್‌ಗಳು ಬಿಡುಗಡೆಯಾಗುತ್ತದೆ. ಇದು ಪಿಎಮ್‌ಎಸ್‌ನ ರೋಗಲಕ್ಷಣಗಳನ್ನು ಹಾಗೂ ನಿಯಮಿತ ಮುಟ್ಟಿನ ವೇಳೆ ಉಂಟಾಗುವ ಸೆಳೆತವನ್ನು ನಿವಾರಿಸುತ್ತದೆ. ಇವು ಪರಾಕಷ್ಠೆಯ ಶಕ್ತಿ ಹಾಗೂ ತೀವೃತೆಯನ್ನು ಅವಲಂಭಿಸಿರುತ್ತದೆ. ಸಂಭೋಗದ ವೇಳೆಯ ನೋವನ್ನು ನಿವಾರಿಸಲು ಇವು ಸಹಾಯ ಮಾಡುತ್ತದೆ.

ಮುಟ್ಟಿನ ರಕ್ತವು ಪುರುಷರ ಶಿಶ್ನಕ್ಕೆ ಹಾನಿಕಾರವಲ್ಲ

ಬಹಳಷ್ಟು ಮಂದಿಗೆ ಮುಟ್ಟಿನ ರಕ್ತದ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಅದು ಕೆಟ್ಟ ರಕ್ತ. ಅದರಿಂದ ಸೋಂಕು ಹರಡುತ್ತದೆ ಎನ್ನುವ ಭಾವನೆ ಅವರಲ್ಲಿದೆ. ಮುಟ್ಟಿನ ರಕ್ತವು ದೇಹಕ್ಕೆ ಅಗತ್ಯವಿಲ್ಲದ ಆರೋಗ್ಯಕರ ರಕ್ತ ಹಾಗೂ ಅಂಗಾಂಶಗಳ ಸಂಯೋಜನೆಯಾಗಿದೆ. ಇದರಿಂದ ಯಾವುದೇ ರೀತಿಯ ಹಾನಿಯಿಲ್ಲ.

ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು

ಸಂಭೋಗೋದ್ರೇಕದಿಂದ ಮುಟ್ಟಿನ ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು. ಎಂಡೊಮೆಟ್ರಿಯಲ್ ಭಾಗದಲ್ಲಿನ ತ್ಯಾಜ್ಯವನ್ನು ದೇಹದಿಂದ ಹೊರಹಾಕುವ ದರವನ್ನು ಹೆಚ್ಚಿಸಬಹುದು. ಇದರಿಂದ ನಿಮ್ಮ ಪಿರಿಯೆಡ್ಸ್ ಅವಧಿಯ ಕಡಿಮೆಯಾಗುವ ಸಾಧ್ಯತೆ ಇದೆ.

ನೈಸರ್ಗಿಕ ಲ್ಯುಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ

ನೀವು ಪಿರಿಯೆಡ್ಸ್ ಸಂದರ್ಭ ಸೆಕ್ಸ್ ಮಾಡುವುದಾದರೆ ನಿಮಗೆ ಯಾವುದೇ ರೀತಿಯ ಲ್ಯುಬ್ರಿಕೆಂಟ್‌ನ ಅಗತ್ಯವಿಲ್ಲ. ಯಾಕೆಂದರೆ ಮಹಿಳೆಯರ ಮುಟ್ಟಿನ ರಕ್ತವೇ ನೈಸರ್ಗಿಕ ಲ್ಯುಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ,

ಲೈಂಗಿಕ ರೋಗಗಳು ಹರಡುವ ಸಾಧ್ಯತೆ

ಪಿರಿಯೆಡ್ಸ್ ಸಂದರ್ಭದಲ್ಲಿ ಸೆಕ್ಸ್ ಮಾಡೋದರಿಂದ ಲೈಂಗಿಕವಾಗಿ ಹರಡುವ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಈ ಸಂದರ್ಭದಲ್ಲಿ ಗರ್ಭ ಕೋಶ ಹೆಚ್ಚು ತೆರೆದಿರುವುದರಿಂದ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚು ಇರುತ್ತದೆ.

ಗರ್ಭಧರಿಸುವ ಸಾಧ್ಯತೆ ಇದೆ

ಮುಟ್ಟಿನ ಸಂದರ್ಭದಲ್ಲಿ ಸೆಕ್ಸ್ ಮಾಡಿದ್ರೆ ಗರ್ಭಿಣಿ ಆಗುತ್ತಾರಾ ಎನ್ನುವ ಪ್ರಶ್ನೆ ಹಲವರಲ್ಲಿದೆ. ಹೌದು. ಈ ಸಂದರ್ಭ ಸೆಕ್ಸ್ ಮಾಡಿದ್ರೆ ಗರ್ಭಧರಿಸೋ ಸಾಧ್ಯತೆ ಇದೆ. ಯಾಕೆಂದರೆ ಈ ಸಂದರ್ಭದಲ್ಲೂ ಅಂಡೋತ್ಪತ್ತಿಯಾಗುತ್ತದೆ. ಹಾಗೂ ವೀರ್ಯಾಣು ಸುಮಾರು 7 ದಿನಗಳವರೆಗೆ ಜೀವಂತವಾಗಿರುತ್ತದೆ.

ಕೆಲವರಿಗೆ ನೋವುಂಟಾಗುತ್ತದೆ

ಈ ಸಂದರ್ಭದಲ್ಲಿ ಸೆಕ್ಸ್ ಮಾಡೋದರಿಂದ ಕೆಲವರಿಗೆ ನೋವು ಉಂಟಾಗುತ್ತದೆ. ಯಾಕೆಂದರೆ ಇದು ಗರ್ಭಕೋಶಕ್ಕೆ ಒತ್ತಡವನ್ನು ಉಂಟುಮಾಡುತ್ತದೆ. ಜೊತೆಗೆ ಕಂಫರ್ಟೇಬಲ್ ಅನಿಸೋದಿಲ್ಲ.

ಪಿರಿಯೆಡ್ಸ್ ಸಂದರ್ಭ ಸೆಕ್ಸ್ ಮಾಡ್ತಾರೆ

ನಿಮಗೆ ಪಿರಿಯೆಡ್ಸ್ ವೇಳೆ ಸೆಕ್ಸ್ ಮಾಡಬೇಕೆಂದಿದ್ದರೆ ನೀವೇನೂ ಯಾರೂ ಮಾಡದ್ದನ್ನು ಮಾಡುತ್ತಿಲ್ಲ. ಯಾಕೆಂದರೆ ಸುಮಾರು 30% ಜನರು ಪಿರಿಯೆಡ್ಸ್ ಸಂದರ್ಭ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾತ್ತಾರೆ.

Read more about: periods menstruation blood
English summary

Things You Need To Know If You're Having An Intercourse While On Your Periods

Eng summery: Sex during periods is a subject of taboo that not many want to delve into.Endorphins are released during orgasms and this can relieve PMS symptoms as well as the regular menstrual cramps. This also depends on the strength and intensity of the climax. Vaginal orgasms help more in alleviating the pain.
X
Desktop Bottom Promotion