For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಆರಂಭಿಸುವುದಕ್ಕೂ ಮುನ್ನ ಇದನ್ನೆಲ್ಲಾ ನೆನಪಿಟ್ಟುಕೊಳ್ಳಲೇ ಬೇಕು!

By Sushma Charhra
|

ನೀವು ನಿಮ್ಮ ಸಂಗಾತಿಯೊಡನೆ ಎಷ್ಟೇ ಬಾರಿ ಬೇಕಿದ್ದರೂ ಲೈಂಗಿಕ ಸಂಪರ್ಕ ಮಾಡಿರಬಹುದು ಆದರೆ ಮತ್ತೆ ಮಾಡುವಾಗ ಜಾಗೃತಿ ತೆಗೆದುಕೊಳ್ಳಲೇಬೇಕು. ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬಾರದು. ಸರಿಯಾದ ವ್ಯಕ್ತಿಯೊಡನೆ ಲೈಂಗಿಕ ಸಂಪರ್ಕ ಹೊಂದುವುದು ಒಂದು ನಿಕಟವಾದ ಮತ್ತು ಮೋಜಿನ ಸಂಬಂಧವೂ ಆಗಿರುತ್ತದೆ.

ಈಗಾಗಲೇ ಹಲವು ಬಾರಿ ನಿಮ್ಮ ಸಂಗಾತಿಯೊಡನೆ ನೀವು ಬೆರೆತಿರಬಹುದು ಆದರೂ ಕೆಲವು ವಿಚಾರಗಳನ್ನು ಯಾವಾಗಲೂ ಲಘುವಾಗಿ ಸ್ವೀಕರಿಸಲೇಬಾರದು ಎಂಬುದು ನಿಮಗೆ ಚೆನ್ನಾಗಿ ನೆನಪಿರಬೇಕಾಗಿರುತ್ತದೆ. ವಯಕ್ತಿಕವಾಗಿ ಸ್ವಚ್ಛವಾಗಿರುವುದು ಅದರಲ್ಲಿ ಪ್ರಮುಖವಾದದ್ದು. ಅಷ್ಟೇ ಅಲ್ಲ ಇಲ್ಲಿದೆ ನೋಡಿ ನೀವು ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಯಾವೆಲ್ಲ ವಿಚಾರಗಳನ್ನು ಮನದಲ್ಲಿ ಇಟ್ಟುಕೊಳ್ಳಬೇಕು ಮತ್ತು ಅದನ್ನು ಪರಿಗಣಿಸಿ ನಡೆದುಕೊಳ್ಳಬೇಕು ಎಂಬುದು... ಮುಂದೆ ಓದಿ...

ಸುರಕ್ಷತೆಯನ್ನು ನಿಮ್ಮ ಕೈಯಲ್ಲೇ ಇಟ್ಟುಕೊಂಡಿರುವುದು ಸೂಕ್ತ

ಸುರಕ್ಷತೆಯನ್ನು ನಿಮ್ಮ ಕೈಯಲ್ಲೇ ಇಟ್ಟುಕೊಂಡಿರುವುದು ಸೂಕ್ತ

ನೀವು ಗರ್ಭ ಧರಿಸಲು ಪ್ರಯತ್ನಿಸುತ್ತಿಲ್ಲವಾದರೆ, ಯಾವಾಗಲೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು, ಕಾಂಡೋಮ್ ಗಳನ್ನು ಸೆಕ್ಸ್ ಆರಂಭಿ ಸುವುದಕ್ಕೂ ಮುನ್ನವೇ ನಿಮ್ಮ ಕಣ್ಣೆದುರಿಗೆ ಇಟ್ಟುಕೊಳ್ಳಿ, ಕ್ರಿಯೆಯ ಮಧ್ಯದಲ್ಲಿ ಹುಡುಕಾಡುವಂತೆ ಮಾಡಿಕೊಳ್ಳಬೇಡಿ. ನಂಬಿಕೆ ಇಡಿ, ಒಂದು ವೇಳೆ ನೀವು ಇದನ್ನು ಸರಿಯಾಗಿ ಮಾಡಿಕೊಳ್ಳದೇ ಭಯದಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಅದು ಫರ್ಫೆಕ್ಟ್ ಲೈಂಗಿಕ ಆಗಿಲ್ಲದೇ ಇರಬಹುದು. ಹಾಗಾಗಿ ಯಾವಾಗಲೂ ಕಾಂಟ್ರಾಸೆಪ್ಟೀವ್ ಗಳನ್ನು ನೀವು ಎಲ್ಲಿ ಇಟ್ಟುಕೊಂಡಿದ್ದೀರಿ ಎಂಬುದು ನಿಮಗೆ ಸೆಕ್ಸ್ ಗೂ ಮುನ್ನವೇ ತಿಳಿದಿದ್ದರೆ ಬಹಳ ಒಳ್ಳೆಯದು.

2. ನಿಮ್ಮ ಉಸಿರಾಟವನ್ನು ಪರೀಕ್ಷಿಸಿಕೊಳ್ಳಿ

2. ನಿಮ್ಮ ಉಸಿರಾಟವನ್ನು ಪರೀಕ್ಷಿಸಿಕೊಳ್ಳಿ

ಎಷ್ಟು ಸಮಯದಿಂದ ಅಥವಾ ನೀವು ಮತ್ತು ನಿಮ್ಮ ಸಂಗಾತಿ ಒನ್ ಮ್ಯಾನ್ ಎಂಡ್ ವುಮೆನ್ ಥಿಯರಿಯಲ್ಲೇ ಬದುಕುತ್ತಿರಬಹುದು ಅಥವಾ ನೀವಿಬ್ಬರೂ ಒಬ್ಬರನ್ನೊಬ್ಬರು ಬಹಳ ಆರಾಮದಾಯಕವೆಂದು ಪರಿಗಣಿಸಿರಬಹುದು, ಆದರೆ, ನಿಮ್ಮ ಸಂಗಾತಿ ನಿಮ್ಮ ಬಾಯಿಯಿಂದ ಬರುವ ವಾಸನೆಯನ್ನು ಸಹಿಸಿಕೊಳ್ಳಲು ಖಂಡಿತ ಇಚ್ಛಿಸುವುದಿಲ್ಲ. ನಿಜಕ್ಕೂ, ಲೈಂಗಿಕ ಸಂಪರ್ಕಕ್ಕೆ ತೊಡಗುವ ಮುನ್ನ ಬ್ರಷ್ ಮಾಡುವುದನ್ನು ಮರೆಯಬೇಡಿ. ಬಾಯಿಯನ್ನು ಒಮ್ಮೆ ಮುಕ್ಕಳಿಸಿ

ಸ್ವಚ್ಛಗೊಳಿಸಿಕೊಳ್ಳಿ. ಒಟ್ಟಾರೆ ನಿಮ್ಮ ಉಸಿರಾಟ ಪ್ರಕ್ರಿಯೆಯನ್ನು ಪರೀಕ್ಷಿಸಿಕೊಳ್ಳಿ. ಯಾವುದೇ ಕೆಟ್ಟ ವಾಸನೆ ನಿಮ್ಮ ಬಾಯಿಯಿಂದ ಬರುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಒಂದು ವೇಳೆ ಹೀಗಾದಲ್ಲಿ ನೀವು ಶುದ್ಧವಾಗಬೇಕಾಗಿರುವುದು ಬಹಳ ಮುಖ್ಯವಾಗಿದೆ ಎಂಬುದು ನೆನಪಿರಲಿ..

3. ಸುಲಭದಲ್ಲೇ ತೆಗೆಯಲು ಬರುವ ಬಟ್ಟೆಗಳನ್ನು ಧರಿಸಿ

3. ಸುಲಭದಲ್ಲೇ ತೆಗೆಯಲು ಬರುವ ಬಟ್ಟೆಗಳನ್ನು ಧರಿಸಿ

ನೀವು ಧರಿಸಿದ್ದ ಟೈಟ್ ಜೀನ್ಸ್ ನ್ನು ತೆಗೆಯಲು ಲೈಂಗಿಕ ಕ್ರಿಯೆಯ ಮಧ್ಯದಲ್ಲಿ ಶ್ರಮಿಸುತ್ತಿದ್ದೀರಾ? ಓ ಶಟ್.. ಇದರಿಂದಾಗಿ ನೀವು ಮತ್ತು ನಿಮ್ಮ ಸಂಗಾತಿ ಬೆಳೆಸಿಕೊಂಡಿದ್ದ ಲೈಂಗಿಕ ಆಸಕ್ತಿ ಹಾಳಾಯಿತಾ?.. ಎಸ್...ಇಂತಹ ಸನ್ನಿವೇಶವನ್ನು ತಂದುಕೊಳ್ಳಬೇಡಿ.. ನಿಜ, ಲೈಂಗಿಕ ಕ್ರಿಯೆ ಎನ್ನುವುದು ಒಂದು ಸ್ವಾಭಾವಿಕ ಪ್ರತಿಕ್ರಿಯೆಗಳಾಗಿರುತ್ತದೆ.ಆದರೆ ನೆನಪಿರಲಿ ಇಬ್ಬರೂ ನೀವು ಮತ್ತು ನಿಮ್ಮ ಸಂಗಾತಿ ಸುಲಭದಲ್ಲೇ ತೆಗೆಯಲು ಬರುವ ಬಟ್ಟೆಗಳನ್ನು ಧರಿಸಿರಿ. ಇದು ಸಂಪೂರ್ಣ ಪ್ರಕ್ರಿಯೆಯನ್ನೇ ಸುಲಭಗೊಳಿಸುತ್ತೆ.

4. ನಿಮ್ಮ ವೈಯಕ್ತಿಕ ಭಾಗಗಳನ್ನು ಸ್ವಚ್ಛಗೊಳಿಸಿಕೊಂಡಿರಿ

4. ನಿಮ್ಮ ವೈಯಕ್ತಿಕ ಭಾಗಗಳನ್ನು ಸ್ವಚ್ಛಗೊಳಿಸಿಕೊಂಡಿರಿ

ನಿಜಕ್ಕೂ ಇದರ ಬಗ್ಗೆ ಜನರು ಹೆಚ್ಚಾಗಿ ಯೋಚಿಸಬೇಕಿದೆ. ಎಸ್, ಈ ವಿಚಾರದ ಬಗ್ಗೆ ಯೋಚಿಸಲೂ ಕೂಡ ಸಮಯವಿಲ್ಲದವರಂತೆ ವರ್ತಿಸಬೇಡಿ.ಒಮ್ಮೆ ಊಹಿಸಿಕೊಳ್ಳಿ, ಸ್ವಚ್ಛವಿಲ್ಲದ ವಯಕ್ತಿಕ ಭಾಗಗಳಲ್ಲಿ ಹೇಗೆ ತಾನೆ ಆನಂದಗೊಳ್ಳಲು ಸಾಧ್ಯವಲ್ಲವೇ? ಕೇಳಿದರೇನೆ ಅಸಹ್ಯವೆನಿಸುತ್ತದೆ. ಆದರೆ ನೆನಪಿರಲಿ ಹಾಸಿಗೆಗೆ ತೆರಳುವ ಮುನ್ನ ಒಮ್ಮೆ ಸ್ನಾನ ಮಾಡಿರಿ ಮತ್ತು ನಿಮ್ಮೆಲ್ಲ ಗುಪ್ತಾಂಗಗಳನ್ನು ಸ್ವಚ್ಛ ಮಾಡಿಕೊಳ್ಳಿ. ಆ ಮೂಲಕ ಉತ್ತಮ ಲೈಂಗಿಕ ಕ್ರಿಯೆ ನಡೆಸಿ.

5. ಮೂತ್ರಕೋಶವನ್ನು ಖಾಲಿ ಮಾಡಿರಿ

5. ಮೂತ್ರಕೋಶವನ್ನು ಖಾಲಿ ಮಾಡಿರಿ

ಲೈಂಗಿಕತೆಯ ನಡುವಲ್ಲಿ ಮೂತ್ರಕ್ಕೆ ತೆರಳಬೇಕು ಎಂಬಂತ ಭಾವನೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದಿದೆಯಲ್ಲ ಅದರಷ್ಟು ಅನಾನುಕೂಲದ ಪರಿಸ್ಥಿತಿ ಮತ್ತೊಂದಿಲ್ಲವೆಂದು ಅನ್ನಿಸುತ್ತದೆ.. ಲೈಂಗಿಕ ಕ್ರಿಯೆಯ ನಂತರ ಹೇಗೆ ಬಾತ್ ರೂಮ್ ಗೆ ತೆರಳಬೇಕು ಅನ್ನಿಸುತ್ತದೆಯೋ ಅದೇ ರೀತಿ ಲೈಂಗಿಕ ಕ್ರಿಯೆ ಆರಂಭಕ್ಕೂ ಮುನ್ನವೂ ಒಮ್ಮೆ ಬಾತ್ ರೂಮ್ ಗೆ ತೆರಳಿ ಬರಬೇಕು. ಮೂತ್ರಕೋಶವನ್ನು ಖಾಲಿ ಮಾಡಿ ಬಂದರೆ ಮಾತ್ರ ನೀವು ಆರಾಮದಾಯಕ ಸೆಕ್ಸ್ ಮಾಡಲು ಸಾಧ್ಯ. ಇಲ್ಲದೇ ಇದ್ದರೆ ಲೈಂಗಿಕ ಕ್ರಿಯೆಯ ನಡುವಲ್ಲೆಲ್ಲ ಅದನ್ನೇ ಯೋಚಿಸುವಂತಾಗುತ್ತದೆ.

6. ಆರಾಮಾಗಿರಿ

6. ಆರಾಮಾಗಿರಿ

ನೀವು ಒತ್ತಡದಲ್ಲಿ ಇದ್ದರೆ ಲೈಂಗಿಕ ಕ್ರಿಯೆ ಖುಷಿ ನೀಡುವುದಿಲ್ಲ. ನೀವು ಒತ್ತಡದಲ್ಲಿದ್ದರೆ ನಿಮ್ಮ ವಜೀನಾ ಕೂಡ ಒತ್ತಡಕ್ಕೆ ಸಿಲುಕುತ್ತದೆ ಮತ್ತು ನೋವಿನ ಲೈಂಗಿಕ ಕ್ರಿಯೆಗೆ ಇದು ಕಾರಣವಾಗಬಹುದು. ಮತ್ತು ಅನಾನುಕೂಲದ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡುತ್ತದೆ.ಹಾಗಾಗಿ ಆದಷ್ಟು ಒತ್ತಡ ಮುಕ್ತರಾಗಿದ್ದು ಲೈಂಗಿಕ ಕ್ರಿಯೆ ಆರಂಭಿಸಿ. ಸಾಧ್ಯವಾದರೆ ರಿಲ್ಯಾಕ್ಸ್ ಆಗುವಂತೆ ಒಂದು ಸ್ನಾನ ಮಾಡಿ, ನಿಮ್ಮ ಎಲ್ಲಾ ಮನೆಕೆಲಸವನ್ನು ಮುಗಿಸಿಕೊಳ್ಳಿ ಇಲ್ಲೇ ಇದ್ದರೆ ಸುಮ್ಮನೆ ಆ ಕೆಲಸವನ್ನೇ ಚಿಂತಿಸುವಂತಾಗಿರುತ್ತದೆ. ಇಷ್ಟು ಮಾಡಿದರೆ ಮಾತ್ರ ನೀವು ಲೈಂಗಿಕ ಕ್ರಿಯೆಯನ್ನು ಖುಷಿಯಾಗಿ ಮಾಡಲು ತಯಾರಾಗಿದ್ದೀರಿ ಎಂದರ್ಥ.

7. ನಿಮಗೆ ಆರಾಮ ಅನ್ನಿಸುವುದನ್ನು ಧರಿಸಿರಿ

7. ನಿಮಗೆ ಆರಾಮ ಅನ್ನಿಸುವುದನ್ನು ಧರಿಸಿರಿ

ಪುನಃ ಹೇಳುವುದಾದರೆ, ಇದೇನು ಮಾಡಲೇಬೇಕಾಗಿರುವುದಲ್ಲ, ಆದರೆ ನೀವು ಆರಾಮಾಮದಾಯಕವಾಗಿರುವುದನ್ನು ಧರಿಸಿದರೆ, ನಿಮ್ಮ ಲೈಂಗಿಕ ಕ್ರಿಯೆಯ ಮಾದರಿಯನ್ನೇ ಇದು ಬದಲಿಸುತ್ತದೆ.ದುಬಾರಿಯಾಗಿರುವ ಲೇಸಿನ ಬ್ರಾ ಗಳನ್ನು ಧರಿಸುವುದರಿಂದಾಗಿ ನಿಮ್ಮ ಬಗ್ಗೆ ನಿಮಗೆ ಹೆಚ್ಚು ಆರಾಮ ಅನ್ನಿಸುತ್ತದೆ ಅಷ್ಟೇ ಅಲ್ಲ, ನಿಮ್ಮ ಸಂಗಾತಿಗೂ ಕೂಡ ನಿಮ್ಮ ಮೇಲೆ ಸಹಜ ಅಟ್ರಾಕ್ಷನ್ ಹುಟ್ಟುತ್ತದೆ, ನಿಮ್ಮಲ್ಲಿ ಮತ್ತು ನಿಮ್ಮ ಸಂಗಾತಿಯಲ್ಲಿ ಹೆಚ್ಚು ವಿಶ್ವಾಸ ಬೆಳೆದರೆ ಲೈಂಗಿಕ ಕ್ರಿಯೆ ಆರಾಮ ಮತ್ತು ಸಂತೋಷದಾಯಕವಾಗಿರುತ್ತದೆ.

8. ಹೈಡ್ರೇಟ್ ಆಗಿರಿ

8. ಹೈಡ್ರೇಟ್ ಆಗಿರಿ

ಈಗಾಗಲೇ ನಾವು ತಿಳಿಸಿರುವಂತೆ, ಸೆಕ್ಸ್ ಅನ್ನುವುದು ಒಂದು ವ್ಯಾಯಾಮ, ನೀವು ಇದರಲ್ಲಿ ಸಾಕಷ್ಟು ಶಕ್ತಿಯನ್ನು ವ್ಯಯಿಸುತ್ತೀರಿ. ಹಾಗಾಗಿ ನೀವು ಆದಷ್ಟು ಹೈಡ್ರೇಟ್ ಆಗಿರುವುದು ಬಹಳ ಮುಖ್ಯವಾದ ಅಂಶವಾಗಿರುತ್ತದೆ. ಇದರಿಂದಾಗಿ ನೀವು ಆರಾಮದಾಯಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಹಾಯಕವಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಯಾವಾಗ ನೀವು ಲೈಂಗಿಕ ಕ್ರಿಯೆಯಲ್ಲಿ ಬೆವರುತ್ತೀರೋ ಆಗ ನೀವು ನೀರಿನ ಕೊರತೆಯನ್ನು ಎದುರಿಸಿ ಪ್ರಯಾಸಕ್ಕೆ ಕಾರಣವಾಗ ಬಹುದು. ಹಾಗಾಗಿ ನಿಮ್ಮ ಸ್ವಲ್ಪ ನೀರು ಕುಡಿದಿರಿ ಮತ್ತು ಅಗತ್ಯಕ್ಕಾಗಿ ನಿಮ್ಮ ಪಕ್ಕದಲ್ಲೇ ನೀರನ್ನು ಇಟ್ಟುಕೊಂಡಿರುವುದು ಉತ್ತಮ ಸೆಕ್ಸ್ ಗೆ ನೆರವು ನೀಡುತ್ತದೆ.

9. ಲ್ಯೂಬ್‌ನ್ನು ರೆಡಿ ಇಟ್ಟುಕೊಂಡಿರಿ

9. ಲ್ಯೂಬ್‌ನ್ನು ರೆಡಿ ಇಟ್ಟುಕೊಂಡಿರಿ

ಲ್ಯೂಬ್ ಬಹಳ ಮುಖ್ಯ. ಒಕೆ ಅನ್ನಿಸುವ ಲೈಂಗಿಕ ಕ್ರಿಯೆಗೂ ವಾವ್ ಸೂಪರ್ ಅನ್ನಿಸುವ ಲೈಂಗಿಕ ಕ್ರಿಯೆಗೂ ವ್ಯತ್ಯಾಸವಿದೆ. ಇದು ನಿಮಗೆ ಕೆಲವು ವಿಚಾರಗಳನ್ನು ಸುಲಭಗೊಳಿಸುತ್ತೆ ಮತ್ತು ನೀವು ಆದಷ್ಟು ಆರಾಮದಾಯಕವಾಗಿ ಇರಲು ಸಹಾಯಕವಾಗಿರುತ್ತದೆ. ನೀವು ಯಾವಾಗಲೂ ಲ್ಯೂಬ್ ನ್ನು ರೆಡಿಯಾಗಿ ಇಟ್ಟುಕೊಂಡಿರುವುದು ಒಳಿತು.

10. ಸ್ವಚ್ಛತೆ

10. ಸ್ವಚ್ಛತೆ

ಇದು ಐಚ್ಛಿಕ ವಿಷಯ ಆದರೆ, ತುಂಬಾ ಒಳ್ಳೆಯ ಉಪಾಯ. ಲೈಂಗಿಕ ಕ್ರಿಯೆ ಆರಂಭಕ್ಕೂ ಮುನ್ನ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಸ್ವಚ್ಛತೆ ಕಾಪಾಡಿಕೊಳ್ಳಿ. ನೀವು ಬೆವರಿದ್ದರೆ ಅಥವಾ ಕೊಳಕಾಗಿದ್ದರೆ, ನಿಮ್ಮೊಳಗೆ ಬ್ಯಾಕ್ಟೀರಿಯಾಗಳ ಪ್ರವೇಶವಾಗುವ ಸಾಧ್ಯತೆ ಅಧಿಕವಾಗಿರುತ್ತದೆ ಮತ್ತು ಇದು ಸೋಂಕನ್ನು ಹರಡಬಹುದು ಎಂಬ ಬಗ್ಗೆ ನಿಮಗೆ ತಿಳುವಳಿಕೆ ಇದ್ದರೆ ಬಹಳ ಒಳ್ಳೆಯದು.

11. ಬಚ್ಚಲು ಮನೆಯನ್ನು ಬಳಕೆ ಮಾಡಿ

11. ಬಚ್ಚಲು ಮನೆಯನ್ನು ಬಳಕೆ ಮಾಡಿ

ಇದು ಕೆಲವರಿಗೆ ಆಶ್ಚರ್ಯ ಅನ್ನಿಸಬಹುದು ಮತ್ತು ಮುಜುಗರಕ್ಕೂ ಕಾರಣವಾಗಬಹುದು. ಆದರೆ ಹೀಗೆ ಮಾಡುವುದು ಬಹಳ ಮುಖ್ಯ. ಲೈಂಗಿಕ ಕ್ರಿಯೆಯು ನಿಮ್ಮ ಮೂತ್ರಕೋಶದ ಮೇಲೆ ಒತ್ತಡವನ್ನು ಹೇರುತ್ತದೆ ಮತ್ತು ಬಚ್ಚಲು ಮನೆಯನ್ನು ಬಳಸಲೇಬೇಕಾದ ಅನಿವಾರ್ಯತೆಯನ್ನು ನೀಡುತ್ತದೆ. ಆದರೆ ನಿಮ್ಮ ಲೈಂಗಿಕ ಕ್ರಿಯೆ ಮುಗಿದ ನಂತರ ಬಚ್ಚಲು ಮನೆಯನ್ನು ಬಳಕೆ ಮಾಡುವುದನ್ನು ಮರೆಯಬೇಡಿ. ಅದರೆ, ನೀವು ನಿಮ್ಮೊಳಗೆ ಸೇರಬಹುದಾದ ಬ್ಯಾಕ್ಟೀರಿಯಾವನ್ನು ಆದಷ್ಟು ಹೊರಹಾಕುವುದನ್ನು ಮಾಡಲೇಬೇಕು.

12. ತಯಾರಾಗಿರಿ

12. ತಯಾರಾಗಿರಿ

ಕಾಂಡೋಮ್ ನ್ನು ಖರೀದಿಸಿರಲೇಬೇಕು, ಅದನ್ನು ತಂದಿಟ್ಟುಕೊಂಡಿರಲೇಬೇಕು ಎಂಬುದು ಕೇವಲ ನಿಮ್ಮ ಸಂಗಾತಿಗಷ್ಟೇ ಮುಖ್ಯವಾದುದ್ದಲ್ಲ. ನೀವು ಕೂಡ ಲೈಂಗಿಕ ಕ್ರಿಯೆ ವಿಚಾರಕ್ಕೆ ಬಂದರೆ ಅದಕ್ಕೆ ಸಂಪೂರ್ಣ ಸಿದ್ಧರಾಗಿರಬೇಕಾಗುತ್ತದೆ. ನಿಮ್ಮ ಬಳಿ ಯಾವಾಗಲೂ ಕಾಂಡೋಮ್ ನ್ನು ಇಟ್ಟುಕೊಂಡಿರಿ. ಇದರಿಂದಾಗಿ ನೀವು ಹೆಚ್ಚು ಜವಾಬ್ದಾರಿಯುತರಾಗಿರುತ್ತೀರಿ ಮತ್ತು ನಿಮ್ಮ ಸಂಗಾತಿ ಕೂಡ ಈ ನಿಟ್ಟಿನಲ್ಲಿ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಕಾಂಡೋಮ್ ಗಳು ಅವಧಿ ಮುಗಿದವುಗಳಲ್ಲ ಎಂಬ ಬಗ್ಗೆ ಖಾತ್ರಿ ಇರಲಿ .

13. ಹಿಗ್ಗಿಸುವಿಕೆ

13. ಹಿಗ್ಗಿಸುವಿಕೆ

ಇದು ನಿಜಕ್ಕೂ ಮುಖ್ಯವಾದುದು ಆದರೆ ಹೆಚ್ಚಾಗಿ ಕಡೆಗಣಿಸುವುದಿಲ್ಲ, ಲೈಂಗಿಕ ಕ್ರಿಯೆ ಅನ್ನುವುದೊಂದು ವ್ಯಾಯಾಮ, ಮತ್ತು ನೀವು ಮುಂಚಿತವಾಗಿ ವಿಸ್ತರಿಸದಿದ್ದರೆ, ನಿಮ್ಮ ಸ್ನಾಯುವನ್ನು ಎಳೆಯಬಹುದು. ಹಾಗಾಗಿ ಯೋಗದ ಕೆಲವು ಭಂಗಿಗಳನ್ನು ಪ್ರಯತ್ನಿಸಿ. ಆ ಮೂಲಕ ನೀವು ಆದಷ್ಟು ಫ್ಲೆಕ್ಸಿಬಲ್ ಆಗಿರಿ ಮತ್ತು ಲೈಂಗಿಕ ಕ್ರಿಯೆಯ ನಡುವೆ ನಿಮಗೆ ಯಾವುದೇ ಗಾಯಗಳು ಅಥವಾ ನೋವುಗಳು ಆಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

English summary

Things You Absolutely Need To Do Before Having Sex

No matter how many times you might have had sex with your partner, there are some things one just shouldnt take for granted. Having sex with the right person can be both intimate and fun. No matter how many times you might have had sex with your partner though, there are some things one just shouldn't take for granted. Personal hygiene is one of them. Here are a few things that you should always do before sex.
X
Desktop Bottom Promotion