For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಬಳಿಕ, ಪುರುಷರು ಈ ಕೆಲಸಗಳನ್ನು ಮಾತ್ರ ಕಡ್ಡಾಯವಾಗಿ ಮಾಡಲೇಬೇಕು!

|

ಸಾಮಾನ್ಯವಾಗಿ ಮಿಲನದ ಬಗ್ಗೆ ಆಗುವ ಚರ್ಚೆಗಳು, ಮಾಹಿತಿಗಳು, ಅಷ್ಟೇ ಏಕೆ, ಚಲನಚಿತ್ರದ ರಸಮಯ ಕ್ಷಣಗಳು, ಎಲ್ಲವೂ ಮಿಲನಕ್ಕೆ ತೊಡಗುವವರೆಗೆ ಮಾತ್ರವೇ ಇರುತ್ತದೆ. ಮಿಲನದ ಸಮಯ ಹೇಗೆ ಕಳೆಯಿತು ಎಂದು ಇದರಲ್ಲಿ ಭಾಗಿಯಾಗಿದ್ದವರಿಗೆ ಗೊತ್ತಿರುತ್ತದೆ. ಪರಸ್ಪರರಿಗೆ ಇಷ್ಟವಾಗುವ, ಇಷ್ಟವಾಗದ ಕ್ರಿಯೆಗಳು, ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಮೊದಲಾದವು ಎಲ್ಲವೂ ಮಿಲನದ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳಾಗಿವೆ.

ವಾಸ್ತವವಾಗಿ, ಮಹಿಳೆಯರು ಹಾಗೂ ಕಾಮವಿಷಯದಲ್ಲಿ ತಜ್ಞರೊಂದಿಗೆ ಈ ಬಗ್ಗೆ ಸಮಾಲೋಚಿಸಿದಾಗ ತಿಳಿದುಬಂದ ವಿಷಯವೆಂದರೆ, ಪುರುಷರು ಪ್ರಾಯೋಗಿಕತೆಯನ್ನು ಉಪೇಕ್ಷಿಸುವುದು, ಸಂಪರ್ಕ ಹೊಂದಲು ಅವಕಾಶಗಳಿಗೆ ಕಾಯುವುದು ಹಾಗೂ ಮನದಲ್ಲಿ ಕ್ಷುಪ್ತವಾಗಿದ್ದ ಕಾಮನೆಗಳನ್ನು ತಣಿಸಲು ಯತ್ನಿಸುವುದು ಮೊದಲಾದವುಗಳನ್ನು ಯಾವೊಂದು ಪದವನ್ನೂ ಹೇಳದೇ ಪ್ರಕಟಿಸುತ್ತಾರೆ. ಆದರೆ ಮಿಲನದ ಕ್ರಿಯೆಯ ಬಳಿಕ ಏನು? ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯಾರೂ ಹಂಚಿಕೊಳ್ಳುವುದಿಲ್ಲ.

ಆದರೆ ಆರೋಗ್ಯದ ನಿಟ್ಟಿನಲ್ಲಿ ಕಾಮವಿಷಯದ ತಜ್ಞರು ಕೆಲವು ಸಲಹೆಗಳನ್ನು ನೀಡುತ್ತಾರೆ ಹಾಗೂ ಇವುಗಳನ್ನು ಕಡ್ಡಾಯವಾಗಿ ಪ್ರತಿ ಪುರುಷರೂ ಮಿಲನಕ್ರಿಯೆಯ ಬಳಿಕ ತಪ್ಪದೇ ಪಾಲಿಸಲೇಬೇಕು. ಸಾಮಾನ್ಯವಾಗಿ ಸ್ಖಲನದ ಬಳಿಕ ಪುರುಷರು ಥಟ್ಟನೇ ತಮ್ಮೆಲ್ಲಾ ಆಸಕ್ತಿಯನ್ನು ತಣಿಸಿಬಿಡುತ್ತಾರೆ. ಆದರೆ ಇದು ತಪ್ಪು ಹಾಗೂ ಸ್ಖಲನದ ಬಳಿಕವೂ ಮುದ್ದಾಟವನ್ನು ಮುಂದುವರೆಸಬೇಕು ಹಾಗೂ ಮುಖ್ಯವಾಗಿ ಈ ಕ್ರಿಯೆ ನಿಮ್ಮ ಸಂಗಾತಿಗೆ ತುಂಬಾ ಇಷ್ಟವಾಗುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ...

ಮೂತ್ರ ವಿಸರ್ಜಿಸಿ

ಮೂತ್ರ ವಿಸರ್ಜಿಸಿ

ಮಿಲನ ಕ್ರಿಯೆಯ ಬಳಿಕ ಮಹಿಳೆಯರು ತಪ್ಪದೇ ಶೌಚಾಲಯಕ್ಕೆ ಧಾವಿಸುವುದನ್ನು ಗಮನಿಸಬಹುದು. ಏಕೆಂದರೆ ಮಹಿಳೆಯರಿಗೆ ಮೂತ್ರನಾಳದ ಸೋಂಕು ಹರಡುವ ಸಾಧ್ಯತೆ ಮಿಲನದ ಬಳಿಕ ಅತಿ ತೀವ್ರವಾಗಿರುವ ಕಾರಣ ಮೂತ್ರವಿಸರ್ಜಿಸುವುದು ಅನಿವಾರ್ಯ ಹಾಗೂ ಅಗತ್ಯ ಕ್ರಮವೂ ಆಗಿದೆ. ಆದರೆ ಪುರುಷರಿಗೆ ಮೂತ್ರನಾಳದ ಸೋಂಕು ತಗಲುವ ಸಾಧ್ಯತೆ ಕಡಿಮೆ ಇರುತ್ತದೆ, ಏಕೆಂದರೆ ಪುರುಷರ ಮೂತ್ರನಾಳ ಮಹಿಳೆಯರಿಗಿಂತ ನೀಳವೂ ಮಲದ್ವಾರಕ್ಕಿಂತ ಬಹಳ ದೂರವೂ ಇರುತ್ತದೆ.

ಒಂದು ವೇಳೆ ಸ್ಖಲನಕ್ಕೂ ಮುನ್ನವೇ ಮಿಲನಕ್ರಿಯೆಯಿಂದ ಹೊರಬರುವುದಾದರೆ,ಮುಂದಿನಮಿಲನಕ್ಕೂ ಮುನ್ನ ಮೂತ್ರ ವಿಸರ್ಜಿಸುವುದು ಅಗತ್ಯ. ಹೀಗೆ ಮಾಡದೇ ಇದ್ದರೆ ಜನನಾಂಗದ ತುದಿಯಲ್ಲಿ ಕೊಂಚವೇ ಸ್ರವಿಸಿದ್ದ ವೀರ್ಯಾಣುಗಳು ಮಿಲನಕ್ರಿಯೆಯಲ್ಲಿ ಮುಂದುವರೆದು ಅಂಡಾಣುವನ್ನು ಸೇರಿಬಿಡುವ ಸಾಧ್ಯತೆ ಇದೆ. ಹಾಗಾಗಿ ಅನೈಚ್ಚಿಕ ಗರ್ಭಧಾರಣೆಯಿಂದ ತಡೆಯಬೇಕಾದರೆ ಪುರುಷರೂ ಮೂತ್ರ ವಿಸರ್ಜಿಸುವುದೇ ಒಳ್ಳೆಯದು.

ಜೊತೆಯಾಗಿ ಸ್ನಾನ ಮಾಡಿ

ಜೊತೆಯಾಗಿ ಸ್ನಾನ ಮಾಡಿ

ಮಿಲನದ ಬಳಿಕ ಸ್ನಾನ ಮಾಡುವುದರಿಂದ ಲೈಂಗಿಕ ರೋಗಗಳು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂಬ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಆದರೆ, ಇಬ್ಬರಿಗೂ ಪರಸ್ಪರ ಅನ್ಯೋನ್ಯತೆ ಹೆಚ್ಚಿಸಲು ಇದೊಂದು ಸ್ಮರಣಾರ್ಥ ಕ್ಷಣವಾಗಿ ಪರಿಣಮಿಸಬಹುದು ಹಾಗೂ ಸ್ನಾನದ ಸಮಯದ ಸ್ಪರ್ಶ ಹಾಗೂ ಹಿತಕರ ಭಾವನೆ ಪರಸ್ಪರರ ಪ್ರತಿ ಗೌರವ, ಪ್ರೀತಿಗಳನ್ನು ಹೆಚ್ಚಿಸಿ ಮುಂದಿನ ದಿನದ ಅವಧಿಯನ್ನು ತೇಜೋಮಯವಾಗಿಸಲು ಖಂಡಿತವಾಗಿಯೂ ನೆರವಾಗುತ್ತದೆ.

ಸ್ವಚ್ಛಗೊಳಿಸುವುದು

ಸ್ವಚ್ಛಗೊಳಿಸುವುದು

ಸಾಮಾನ್ಯವಾಗಿ ಮಿಲನಕ್ರಿಯೆಯಲ್ಲಿ ಗಲೀಜಾಗುವುದು ಅನಿವಾರ್ಯ. ಆದರೆ ಮಿಲನದ ಬಳಿಕ ಇಬ್ಬರಿಂದಲೂ ಆದ ಮಲಿನವನ್ನು ಸ್ವಚ್ಛಗೊಳಿಸುವುದು ಹಾಗೂ ಮಲಗಿದ ಸ್ಥಳ ಹಾಗೂ ಆಸುಪಾಸಿನ ಸ್ಥಳಗಳನ್ನು ಮೊದಲಿನಂತೆಯೇ ಸ್ವಚ್ಛಗೊಳಿಸುಸುವು ಮುಖ್ಯವಾಗಿದೆ. ಸಾಮಾನ್ಯವಾಗಿ ಸಂಗಾತಿಯ ಮನ ಗೆಲ್ಲಲು ಮಿಲನಕ್ರಿಯೆಗೂ ಮುನ್ನ ನೀಡುವ ದ್ರವಾಹಾರ ಮೊದಲಾದವುಗಳು ಚೆಲ್ಲಿದ ಬಳಿಕ ಸ್ವಚ್ಛಗೊಳಿಸುವಷ್ಟೇ ಕಾಳಜಿಯನ್ನು ಮಿಲನಕ್ರಿಯೆಯ ಬಳಿಕ ಎದುರಾಗುವ ಪರಿಸ್ಥಿತಿಯನ್ನು ಸ್ವಚ್ಛಗೊಳಿಸಲೂ ಬಳಸಬೇಕು. ಹಾಗಾಗಿ, ಈ ಪರಿಸ್ಥಿತಿಯನ್ನು ಮುಂಗಂಡು ಇದನ್ನು ಸ್ವಚ್ಛಗೊಳಿಸುವ ಪರಿಕರಗಳು ಕೈಗೆಟುಕುವಂತಿರಿಸುವುದು ಜಾಣತನದ ಕ್ರಮವಾಗಿದೆ. ಇದಕ್ಕಾಗಿ ಟಿಶ್ಯೂ ಕಾಗದ, ವಿಸರ್ಜಿಸಬಹುದಾದ ಬಟ್ಟೆಗಳು, ಸ್ವಚ್ಛಗೊಳಿಸುವ ಮಾರ್ಜಕ ಮೊದಲಾದ ಇತರ ವಸ್ತುಗಳು ಕೈಗೆಟುವಂತಿದ್ದು ಮಿಲನ ಕ್ರಿಯೆಯ ಬಳಿಕ ಸ್ವಚ್ಛಗೊಳಿಸುವತ್ತ ಹೆಚ್ಚಿನ ಕಾಳಜಿ ವಹಿಸಿದರೆ ಈ ಕ್ರಿಯೆಯನ್ನು ನಿಮ್ಮ ಸಂಗಾತಿಯೂ ಮೆಚ್ಚಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ತಳೆಯಲು

ಸಾಧ್ಯವಾಗುತ್ತದೆ.

ಸ್ವಚ್ಛಗೊಳಿಸಿಕೊಳ್ಳಿ ಹಾಗೂ ಕಾಮ ಆಟಿಕೆಗಳನ್ನು ಅಡಗಿಸಿಡಿ

ಸ್ವಚ್ಛಗೊಳಿಸಿಕೊಳ್ಳಿ ಹಾಗೂ ಕಾಮ ಆಟಿಕೆಗಳನ್ನು ಅಡಗಿಸಿಡಿ

ಸಂಗಾತಿಯ ಕಾಮೇಚ್ಛೆಯನ್ನು ತಣಿಸಲು ಕಾಮ ಆಟಿಕೆಗಳು ಉತ್ತಮವಾದ ಆಯ್ಕೆಯಾಗಿದೆ ಹಾಗೂ ಇನ್ನೂ ಉತ್ತಮ ಅನುಭವದ ಪರಾಕಾಷ್ಠೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಈ ಆಟಿಕೆಗಳನ್ನು ಉಪಯೋಗಿಸುವ ಕುರಿತು ಕೆಲವು ಮಾಹಿತಿಗಳನ್ನು ಒದಗಿಸಲಾಗಿದ್ದು ಇದನ್ನು ಸರಿಯಾಗಿ ಅನುಸರಿಸದೇ ಹೋದರೆ ಪರಿಣಾಮ ವ್ಯತಿರಿಕ್ತವಾಗಬಹುದು. ಒಂದು ಅಧ್ಯಯನದ ಮೂಲಕ ಈ ಆಟಿಕೆಗಳ ಮೂಲಕ ಕೆಲವು ಮಾರಕ ಕ್ರಿಮಿಗಳೂ ದೇಹಪ್ರವೇಶಿಸಬಹುದು ಹಾಗೂ ರೋಗ ಹರಡಲು ಕಾರಣವಾಗಬಹುದು. ಹಾಗಾಗಿ ಇವುಗಳ ಬಳಕೆಯ ಮುನ್ನ ಹಾಗೂ ಬಳಕೆಯ ನಂತರವೂ ಇವುಗಳನ್ನು ಸೂಕ್ತ ಕ್ರಮದಲ್ಲಿ ಸ್ವಚ್ಛಗೊಳಿಸುವುದು ಅಗತ್ಯ. ಪುರುಷರಿಗೆ ಸೂಕ್ತವಾಗಿರುವ ಫ್ಲೆಶ್ ಲೈಟ್ ಎಂಬ ಉಪಕರಣವನ್ನು ಉತ್ತಮ ಗುಣಮಟ್ಟದ ರಬ್ಬರ್ ನಿಂದ ತಯಾರಿಸಲಾಗಿದ್ದು ಇದನ್ನು ತಣ್ಣೀರಿನಲ್ಲಿ ತೊಳೆದುಕೊಂಡರೆ ಸಾಕಾಗುತ್ತದೆ. ಆದರೆ ಮಹಿಳೆಯರಿಗೆ ಉಪಯೋಗಿಸುವ ಬಟ್ ಪ್ಲಗ್ ಎಂಬ ಉಪಕರಣವನ್ನು ಪ್ರತಿಬಾರಿ ಕುದಿನೀರಿನಲ್ಲಿ ಕುದಿಸಿಯೇ ಸ್ವಚ್ಛಗೊಳಿಸಬೇಕು. ಕೆಲವನ್ನು ಸ್ವಚ್ಛಗೊಳಿಸಲು ಸಾಮಾನ್ಯ ಸೋಪಿನ ನೀರು ಸಾಕಾದರೆ ಕೆಲವು ಉಪಕರಣಗಳಿಗೆ ವಿಶೇಷ ದ್ರಾವಣಗಳ ಅಗತ್ಯವಿರುತ್ತದೆ.

ಉಪಯೋಗಿಸಿದ ಕಾಂಡೋಮ್ ಮತ್ತು ಇದರ ಪೊಟ್ಟಣಗಳನ್ನು ಸಂಗ್ರಹಿಸಿ ವಿಸರ್ಜಿಸಿ

ಉಪಯೋಗಿಸಿದ ಕಾಂಡೋಮ್ ಮತ್ತು ಇದರ ಪೊಟ್ಟಣಗಳನ್ನು ಸಂಗ್ರಹಿಸಿ ವಿಸರ್ಜಿಸಿ

ಒಂದು ವೇಳೆ ನೀವು ಕಾಂಡೋಮ್ ಗಳನ್ನು ಉಪಯೋಗಿಸುತ್ತಿರುವಿರಾದರೆ ಮಿಲನದ ಬಳಿಕ ಉಪಯೋಗಿಸಲ್ಪಟ್ಟ ಕಾಂಡಂ ಹಾಗೂ ಇದನ್ನು ಒಳಗೊಂಡಿದ್ದ ಪೊಟ್ಟಣವನ್ನು ಮರೆಯದೇ ಸಂಗ್ರಹಿಸಿ ಸೂಕ್ತರೀತಿಯಲ್ಲಿ ವಿಸರ್ಜಿಸಿ. ಯಾವುದೇ ಕಾರಣಕ್ಕೂ, ಇದನ್ನು ಶೌಚಾಲಯದಲ್ಲಿ ಹಾಕಿ ಫ್ಲಶ್ ಮಾಡಕೂಡದು! ಕಾಮವಿಷಯದಲ್ಲಿ ಪರಿಣಿತ ತಜ್ಞರಾದ ಡೆಬೋರಾ ಫಾಕ್ಸ್ ರವರು ತಿಳಿಸುವ ಪ್ರಕಾರ "ಇಬ್ಬರೂ ಕೂಡಿ ನಡೆಸುವ ಕ್ರಿಯೆಯ ಎಲ್ಲಾ ವಿಭಾಗಗಳಲ್ಲಿ ನೀವೂ ಸಮಭಾಗಿಯಾಗಿದ್ದೀರಿ ಎಂದು ಈ ಮೂಲಕ ತಿಳಿಸಿಕೊಡಲು ಸಾಧ್ಯವಾಗುತ್ತದೆ. ಅಲ್ಲದೇ ಕೇವಲ ಮಹಿಳೆಯೇ ಎಲ್ಲಾ ಮನೆಗೆಲಸವನ್ನು ಮಾಡಿ ನೀವು ಮಾತ್ರ ಆರಾಮವಾಗಿ ಕುಳಿತುಕೊಳ್ಳುವುದು ತರವಲ್ಲ, ಈ ಮೂಲಕ ಪರಸ್ಪರರಲ್ಲಿ ಗೌರವಭಾವನೆಯೂ ಹೆಚ್ಚುತ್ತದೆ"

ಆಹಾರ ಸೇವಿಸಿ

ಆಹಾರ ಸೇವಿಸಿ

ಮಿಲನ ಕ್ರಿಯೆಯ ಬಳಿಕ ಎಂದಾದರೂ ನೀವು ಊಟ ಮಾಡಿದ್ದೀರೋ? ಈ ಬಾರಿ ಪ್ರಯತ್ನಿಸಿ, ಊಟ ಎಂದಿಗಿಂತಲೂ ಹೆಚ್ಚು ರುಚಿಕರವಾಗಿ ಕಂಡುಬರುತ್ತದೆ. ಹಾಗಾಗಿ ಊಟ ಮಾಡಿದ ಬಳಿಕ ಮಿಲನ ಕ್ರಿಯೆ ನಡೆಸುವುದಕ್ಕಿಂತಲೂ ಮಿಲನ ಕ್ರಿಯೆಯ ಬಳಿಕ ಸ್ನಾನ ಮುಗಿಸಿ ಊಟ ಮಾಡುವುದೇ ಒಳ್ಳೆಯದು. ಕೆಲವೊಮ್ಮೆ ಊಟದ ಬಳಿಕ ಹಲವರಿಗೆ ಹೊಟ್ಟೆಯುಬ್ಬರಿಕೆ, ಹೊಟ್ಟೆಯಲ್ಲಿ ಉರಿ, ನಿದ್ದೆ ಬರುವುದು ಮೊದಲಾದವು ಎದುರಾಗುತ್ತವೆ ಹಾಗೂ ಇವೆಲ್ಲವೂ ಮಿಲನಕ್ರಿಯೆಯ ಆಸಕ್ತಿಯಿಂದ ವಿಮುಖರನ್ನಾಗಿಸುತ್ತವೆ. ವಾಸ್ತವದಲ್ಲಿ ಮಿಲನದ ಬಳಿಕ ಊಟ ಮಾಡಿದಾಗ ಪಡೆಯುವ ಹೆಚ್ಚಿನ ಶಕ್ತಿ ಇನ್ನೊಂದು ಬಾರಿಗೂ ಪ್ರೇರಣೆ ನೀಡಬಹುದು!

 ಆಕೆ ಸಾಕು ಎನ್ನುವವರೆಗೂ ನಿಲ್ಲಿಸದಿರಿ!

ಆಕೆ ಸಾಕು ಎನ್ನುವವರೆಗೂ ನಿಲ್ಲಿಸದಿರಿ!

ಕಳೆದ ಮಿಲನಕ್ರಿಯೆಯಲ್ಲಿ ನಿಮ್ಮ ಸಂಗಾತಿ ಕಾಮಪರಾಕಾಷ್ಠೆಯನ್ನು ತಲುಪಿದ್ದರೇ? ಆಕೆಗೆ ಇನ್ನೊಮ್ಮೆ ಬೇಕೆನಿಸಿದೆಯೇ? ಒಂದು ವೇಳೆ ನೀವು ಈ ವಿಷಯದಲ್ಲಿ ನಿಮ್ಮ ಮನದನ್ನೆಯ ಮನ ಗೆಲ್ಲಬೇಕೆಂದಿದ್ದರೆ ಆಕೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿಯೇ ಕೇಳಿ ತಿಳಿದುಕೊಳ್ಳಿ. ಏಕೆಂದರೆ ನಿಮ್ಮ ಪಾಲಿಗೆ ಮಿಲನದ ಪರಾಕಾಷ್ಠೆ ಮುಗಿದು ಹೋಗಿದ್ದರೂ ಆಕೆಗಿನ್ನೂ ಸಾಕಾಗದೇ ಇರಬಹುದು. ಹಾಗಾಗಿ ಈ ಬಗ್ಗೆ ಸ್ಪಷ್ಟವಾಗಿ ಕೇಳಿ ಆಕೆಯೇ ಸ್ವತಃ ಸಾಕು ಎಂದ ಬಳಿಕವೇ ಮುಕ್ತಾಯಗೊಳಿಸಿ.

ಅಪ್ಪುಗೆಯಲ್ಲಿ ಲೀನರಾಗಿ

ಅಪ್ಪುಗೆಯಲ್ಲಿ ಲೀನರಾಗಿ

ಹೆಚ್ಚಿನ ಮಹಿಳೆಯರ ಸಾಮಾನ್ಯ ದೂರು ಎಂದರೆ ಮಿಲನಕ್ರಿಯೆಯ ಬಳಿಕ ಪುರುಷರು ತಮ್ಮ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡು ಅತ್ತಮಗ್ಗುಲಲ್ಲಿ ಮಲಗಿಬಿಡುತ್ತಾರೆ ಎಂಬುದಾಗಿದೆ. ಏಕೆಂದರೆ ಮಿಲನದ ಬಳಿಕ ಪುರುಷರಿಗೆ ಸಾಕು ಎನ್ನಿಸಿರಬಹುದು, ಆದರೆ ತಾನಿನ್ನೂ ಲಭ್ಯನಿದ್ದೇನೆ ಎಂದು ತಿಳಿಸಿಕೊಡಲಾದರೂ ಪುರುಷರು ಹೀಗೆ ಮಾಡಬಾರದು, ಬದಲಿಗೆ ಸಂಗಾತಿಯನ್ನು ಅಪ್ಪಿಕೊಳ್ಳುವ ಮೂಲಕ ಹಿತಕರ ಭಾವನೆಯನ್ನು ಪಡೆಯಬಹುದು. ಕಾಮಪರಾಕಾಷ್ಠೆಯಲ್ಲಿ ಧಾವಿಸುವ ಎಂಡಾರ್ಫಿನ್ ನ ಪರಿಣಾಮವಾಗಿ ಮೆದುಳಿನಲ್ಲಿ ಆಕ್ಸಿಟೋಸಿನ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ ಹಾಗೂ ಇದೇ ಸುಖದ ಅನುಭವ ನೀಡುತ್ತದೆ. ಮಿಲನದ ಬಳಿಕ ಅಪ್ಪುಗೆಯ ಸಮಯದಲ್ಲಿಯೂ ಇನ್ನಷ್ಟು ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಇನ್ನೊಬ್ಬ ಲೈಂಗಿಕ ತಜ್ಞ ಲಿಲ್ಲಾರವರು ತಿಳಿಸುತ್ತಾರೆ.

ಭಾವನಾತ್ಮಕವಾಗಿ ಬಂಧಿತರಾಗಿ

ಭಾವನಾತ್ಮಕವಾಗಿ ಬಂಧಿತರಾಗಿ

ಮಿಲನದ ಬಳಿಕದ ಅಪ್ಪುಗೆ ಇಬ್ಬರಿಗೂ ಹಿತವಾಗಿದ್ದರೂ ಇದರೊಂದಿಗೆ ಇನ್ನೂ ಕೆಲವು ಕ್ರಿಯೆಗಳು ಮಿಲನಕ್ರಿಯೆಯನ್ನು ಇನ್ನಷ್ಟು ರಸಮಯವಾಗಿಸಬಲ್ಲುದು. ಪರಸ್ಪರ ಕಣ್ಣುಗಳನ್ನು ದಿಟ್ಟಿಸುವುದು, ಇಬ್ಬರೂ ಜೊತೆಯಾಗಿ ಉಸಿರಾಡುವುದು, ಚುಂಬನದಲ್ಲಿ ಒಳಗೊಳ್ಳುವುದು ಇತ್ಯಾದಿಗಳು ಸಂಗಾತಿಗಳನ್ನು ಭಾವನಾತ್ಮಕವಾಗಿ ಇನ್ನಷ್ಟು ಹತ್ತಿರಾಗಿಸಲು ನೆರವಾಗುತ್ತದೆ. ಮಿಲನದ ಮೂಲಕ ಮಹಿಳೆಯರು ತಮ್ಮ ಸಂಗಾತಿಗೆ ತಮ್ಮನ್ನು ತಾವೇ ಹೆಚ್ಚು ಹೆಚ್ಚಾಗಿ ಅರ್ಪಿಸಿಕೊಳ್ಳುತ್ತಾರೆ ಹಾಗೂ ಭಾವನಾತ್ಮಕವಾದ ಸಂಬಂಧದಿಂದ ಆಕೆ ಹೆಚ್ಚು ಸುರಕ್ಷಿತ ಹಾಗೂ ನಿರ್ಭೀತಳಾಗಿರಲು ಸಾಧ್ಯವಾಗುತ್ತದೆ.

ಈಗತಾನೇ ನಡೆದ ಮಿಲನದ ಬಗ್ಗೆ ಆಕೆಯ ಅಭಿಪ್ರಾಯವನ್ನು ಕೇಳಿ

ಈಗತಾನೇ ನಡೆದ ಮಿಲನದ ಬಗ್ಗೆ ಆಕೆಯ ಅಭಿಪ್ರಾಯವನ್ನು ಕೇಳಿ

ಮಿಲನದ ಬಳಿಕ ಕೇಳುವ ಪ್ರಶ್ನೆಗಳು ಮಾರುಕಟ್ಟೆಯ ಒಂದು ತಂತ್ರದಂತೆ ಭಾಸವಾಗಬಾರದು, ಬದಲಿಗೆ ಆತ್ಮೀಯವಾಗಿ ಕೇಳುವ ಪ್ರಶ್ನೆಗಳಿಗೆ ಆಕೆ ನೀಡುವ ಉತ್ತರ ನಿಮಗೆ ಹೆಚ್ಚಿನ ನೆರವನ್ನು ನೀಡಬಹುದು. ಪ್ರಾಮಾಣಿಕವಾಗಿ ಅಕೆ ನಿಮ್ಮಿಂದ ಏನನ್ನು ನೀರೀಕ್ಷಿಸುತ್ತಾಳೆ ಹಾಗೂ ಇದಕ್ಕಾಗಿ ನೀವೇನು ಮಾಡಬೇಕು ಹಾಗೂ ಮುಂದಿನ ಮಿಲನಕ್ರಿಯೆಯನ್ನು ಉತ್ತಮಗೊಳಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದೆಲ್ಲಾ ವಿಚಾರಿಸಿ. ಆಕೆ ನೀಡುವ ಉತ್ತರಗಳು ನಿಮ್ಮ ಅರಿವಿಗೆ ಬಾರದೇ ಹೋದ, ಆದರೆ ಅಗತ್ಯವಾಗಿ ಆಗಬೇಕಾದ ವಿಷಯಗಳೂ ಆಗಿರಬಹುದು. ಈ ಬಗ್ಗೆ ಗಮನ ಹರಿಸಿ ನಿಮ್ಮನ್ನು ನೀವೇ ಸರಿಪಡಿಸಿಕೊಳ್ಳಿ. ಒಂದು ವೇಳೆ ಆಕೆ ಹೇಳಿದ ಯಾವೊಂದು ಮಾತು ಚುಚ್ಚಿದಂತಿದ್ದರೂ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಈ ಕೊರತೆಯನ್ನು ನೀಗಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಿ. ನೆನಪಿಡಿ, ಆಕೆ ನಿಮ್ಮ ಬಗ್ಗೆ ಎಷ್ಟು ಸತ್ಯ ಹೇಳುತ್ತಾಳೋ, ಅಷ್ಟೇ ಪ್ರಾಮಾಣಿಕವಾಗಿ ಆಕೆಗಾಗಿ ನೀವು ನಡೆಸುವ ಪ್ರಯತ್ನಗಳು ಆಕೆಯ ಮನವನ್ನು ಇನ್ನಿಲ್ಲದಷ್ಟು ಗೆಲ್ಲಲು ಸಾಧ್ಯವಾಗುತ್ತದೆ.

ನಿಮಗೇನು ಇಷ್ಟ ಮತ್ತು ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿ

ನಿಮಗೇನು ಇಷ್ಟ ಮತ್ತು ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿ

ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಆಕಾಂಕ್ಷೆಗಳಿರುತ್ತವೆ ಹಾಗೂ ಕೆಲವು ಇಷ್ಟವಿಲ್ಲದ ವಿಷಯಗಳೂ ಇರುತ್ತವೆ. ಕೆಲವು ಮಿಲನಕ್ರಿಯೆಗೆ ನೇರವಾಗಿ ಸಂಬಂಧಿಸಿಲ್ಲದೇ ಇರಬಹುದು. ಉದಾಹರಣೆಗೆ ನಿಮಗೆ ಮಾಯೋನ್ನೀಸ್ ಎಂದರೆ ಇಷ್ಟ, ಕಾಫಿ ಎಂದರೆ ಇಷ್ಟವಿಲ್ಲ, ಈ ವಿಷಯವನ್ನೇ ಆಕೆಗೆ ಸ್ಪಷ್ಟಪಡಿಸಬೇಕು. ಮುಂದಿನ ಬಾರಿಯ ಊಟದಲ್ಲಿ ನಿಮ್ಮ ಇಷ್ಟದ ಮಾಯೋನ್ನೀಸ್ ಬೆರೆತ ಊಟ ನಿಮಗೆ ಸಿಗಬಹುದು ಹಾಗೂ ಆಕೆ ಎಂದಿಗೂ ನಿಮಗೆ ಕಾಫಿ ನೀಡಲಾರಳು!

ಸಂಗಾತಿಯ ಬಗ್ಗೆ ಮೆಚ್ಚುಗೆಯ ಮಾತನಾಡಿ

ಸಂಗಾತಿಯ ಬಗ್ಗೆ ಮೆಚ್ಚುಗೆಯ ಮಾತನಾಡಿ

ಸಂಗಾತಿಯೊಡನ ಮಿಲನ ಕ್ರಿಯೆಯನ್ನು ಉತ್ತಮಗೊಳಿಸಲು ಆಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಈ ಮೂಲಕ ಮಹಿಳೆಯರು ತಮ್ಮ ಸಂಗಾತಿಯಿಂದ ಮೆಚ್ಚುಗೆಯನ್ನು ಪಡೆದ ಬಳಿಕ ಹೆಚ್ಚು ಆತ್ಮವಿಶ್ವಾಸ ತೋರುತ್ತಾರೆ ಹಾಗೂ ಮಿಲನಕ್ರಿಯೆಯನ್ನು ಇನ್ನಷ್ಟು ಆನಂದಿಸುತ್ತಾರೆ. ಆಕೆ ಮಿಲನವನ್ನು ಎಷ್ಟು ಆನಂದಿಸುತ್ತಾರೋ, ಹಾಗೇ ಪ್ರತಿಕ್ಷಣವನ್ನು ನೀವು ಸಹಾ ಆನಂದಿಸಲು ಸಾಧ್ಯ!

English summary

Things That Men Should Always Do After Sex

We know what to do before sex. And we know what to do during sex. But what about after sex? Yes, just like the secrets to being pre-coitally charming—and knowing exactly what moves and when to pull in the middle of things—the moments after sex are just as important. In fact, according to women and sex experts that we spoke with, most men overlook practicalities, opportunities for connection, and unmet…needs
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more