ಪುರುಷರು ಸೆಕ್ಸ್ ಬಳಿಕ ಈ ರೀತಿಯೆಲ್ಲಾ ಮಾಡಲೇಬಾರದು!

Posted By: Hemanth
Subscribe to Boldsky

ಇಂಟರ್ನೆಟ್‌ನಲ್ಲಿ ಹುಡುಕಾಡಿದರೆ ಸೆಕ್ಸ್ ಬಗ್ಗೆ ಸಾವಿರಾರು ಮಾಹಿತಿಗಳು ಲಭ್ಯವಿರುವುದು. ಇದರಲ್ಲಿ ಸತ್ಯ ಯಾವುದು ಮತ್ತು ಸುಳ್ಳು ಯಾವುದು ಎನ್ನುವ ಗೊಂದಲವು ಓದುಗರಲ್ಲಿ ಇದ್ದೇ ಇರುತ್ತದೆ. ಸಿಕ್ಕಿದ ಅರ್ಧಂಬರ್ಧ ಮಾಹಿತಿಯನ್ನು ಪಡೆದುಕೊಂಡು ಕೆಲವರು ಇದನ್ನು ಪಾಲಿಸಲು ಪ್ರಯತ್ನಿಸುವರು. ಆದರೆ ಇದು ತುಂಬಾ ಅಪಾಯಕಾರಿ.

ಆದರೆ ನಾವು ಈ ಲೇಖನದಲ್ಲಿ ತುಂಬಾ ಹುಡುಕಾಡಿ, ಹಲವಾರು ಲೈಂಗಿಕ ತಜ್ಞರು ಹಾಗೂ ವೈದ್ಯರೊಂದಿಗೆ ಮಾತನಾಡಿ ಲೈಂಗಿಕ ಕ್ರಿಯೆ ಬಳಿಕ ಪುರುಷರು ಏನೆಲ್ಲಾ ಮಾಡಬಾರದು ಎನ್ನುವ ಬಗ್ಗೆ ವಿವರ ನೀಡುತ್ತಲಿದ್ದೇವೆ. ಲೈಂಗಿಕ ಕ್ರಿಯೆ ಬಳಿಕ ಹೆಚ್ಚಿನ ಪುರುಷರು ನಿದ್ರೆಗೆ ಜಾರುವರು. ಇದು ಸರಿಯೋ ತಪ್ಪೋ ಎನ್ನುವ ಬಗ್ಗೆ ಮತ್ತು ನಗ್ನ ಮಹಿಳೆಯ ಮುಂದೆ ಪುರುಷರು ಮಾಡಲೇಬಾರದ ಕೆಲವು ವಿಚಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಓದಲು ತಯಾರಾಗಿರಿ....

 ನಿದ್ರೆಗೆ ಜಾರುವುದು

ನಿದ್ರೆಗೆ ಜಾರುವುದು

ಹೆಚ್ಚಿನ ಪುರುಷರು ಸಂಭೋಗದ ಪರಾಕಾಷ್ಠೆ ಬಳಿಕ ನಿದ್ರೆಗೆ ಜಾರಲು ಅವಸರ ಮಾಡುವರು. `ಮೆನ್, ಲವ್ ಆ್ಯಂಡ್ ಸೆಕ್ಸ್: ದ ಕಂಪ್ಲೀಟ್ ಯೂಸರ್ ಗೈಡ್ ಫಾರ್ ವುಮೆನ್' ನ ಲೇಖಕಿ ಡೇವ್ ಝಿನ್ಸೆನ್ಕೊ, ಹಫ್ಫಿಂಗ್ಟನ್ ಪೋಸ್ಟ್ ನ ಸಹಸ್ಥಾಪಕಿ ಅರಿಯನ್ನಾ ಹಫ್ಫಿಂಗ್ಟನ್ ಅವರೊಂದಿಗೆ ಮಾತನಾಡುತ್ತಾ, ಮಹಿಳೆಯರು ಫಿಜ್ಜಾವಾಗಿರದ ಕಾರಣ ಪುರುಷರು ನಿದ್ರೆಗೆ ಜಾರುವರು ಎನ್ನುತ್ತಾರೆ. ಲೈಂಗಿಕ ಕ್ರಿಯೆ ಬಳಿಕ ಹೆಚ್ಚಿನ ಪುರುಷರು ನಿದ್ರೆಗೆ ಜಾರಲು ಗಂಭೀರವಾಗಿರುವಂತಹ

ಕೆಲವು ಕಾರಣಗಳು ಇವೆ. ನಿದ್ರಿಸುವ ಸಮಯದಲ್ಲಿ ಇದು ನಡೆಯುತ್ತದೆ ಮತ್ತು ಅದಾಗಲೇ ಹಾಸಿಗೆಯಲ್ಲಿರುತ್ತೇವೆ. ದೈಹಿಕವಾಗಿಯೂ ನಾವು ಬಸವಳಿದಿರುತ್ತೇವೆ ಹೀಗೆ ಹಲವಾರು ಕಾರಣಗಳಿವೆ. ಸಂಭೋಗದ ಪರಾಕಾಷ್ಠೆಯು ಹಲವಾರು ರಾಸಾಯನಿಕಗಳನ್ನು ಬಿಡುಗಡೆ ಮಾಡುವುದು. ಇದು ನೈಕ್ವಿಲ್ ನಂತೆ ಕೆಲಸ ಮಾಡುವುದು. ನಿಮ್ಮ ಬಯಕೆಯನ್ನು ಹಿಡಿದಿಟ್ಟುಕೊಂಡರೆ ಕೆಲವು ವಸ್ತುಗಳನ್ನು ನೀವು ಪರಿಗಣಿಸಬಹುದು. ರಾಸಾಯನಿಕದ ಬಗ್ಗೆ ವಿವರಣೆ ಬೇಕಿದ್ದರೆ ಆಗ ನೀವು "ವೈ ಮೆನ್ ಫಾಲ್ ಸ್ಲೀಪ್ ಆಫ್ಟರ್ ಸೆಕ್ಸ್(ಆ್ಯಂಟ್ ವುಮೆನ್ ಡೋಂಟ್)ನ್ನು ಓದಬೇಕು.

ಟಿವಿ ವೀಕ್ಷಿಸುವುದು

ಟಿವಿ ವೀಕ್ಷಿಸುವುದು

ಲೈಂಗಿಕ ಕ್ರಿಯೆ ವೇಳೆ ನೀವು ದೈಹಿಕ ಹಾಗೂ ಮಾನಸಿಕವಾಗಿ ಉಪಸ್ಥಿತರಿರುವುದು ಅತೀ ಅಗತ್ಯವೆಂದು ನಾವು ಹಿಂದಿನ ಲೇಖನದಲ್ಲಿ ತಿಳಿಸಿದ್ದೆವು. ಆದರೆ ಲೈಂಗಿಕ ಕ್ರಿಯೆ ಬಳಿಕ ಕೂಡ ನಿಮ್ಮ ಉಪಸ್ಥಿತಿಯು ಅತೀ ಅಗತ್ಯವಾಗಿರವುದು. ಟಿವಿ ನೋಡುವುದು ಅಥವಾ ಮೊಬೈಲ್ ತೆಗೆದುಕೊಂಡು ನೋಡುವುದರಿಂದ ಆಕೆಯನ್ನು ಏಕಾಂಗಿಯಾಗಿ ಮಾಡುವುದು ಮತ್ತು ನಿಮಗೆ ಆಕೆ ಮುಖ್ಯವಲ್ಲವೆನ್ನುವ ಭಾವನೆ ಮೂಡುವುದು. ನಿಮ್ಮೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮಹಿಳೆಯು ದುರ್ಬಲಳಾಗುವಳು. ನೀವು ಆಕೆಯೊಂದಿಗೆ ಮಾತನಾಡದೆ ಇದ್ದರೆ ಆಗ ಆಕೆ ತುಂಬಾ ಅಸುರಕ್ಷಿತ ಮತ್ತು ಅಭದ್ರತೆಯ ಭಾವನೆಗೊಳಗಾಗುವಳು. ಮಲಗುವ ಮೊದಲು ನಿಮಗೆ ಫೇಸ್ ಬುಕ್ ನ್ನು ನೋಡಲೇಬೇಕೇ? ಅದನ್ನು ಬಿಟ್ಟುಬಿಡಿ.

ಸ್ವಚ್ಛಮಾಡದೆ ಸೆಕ್ಸ್ ಆಟಿಕೆ ದೂರವಿಡುವುದು

ಸ್ವಚ್ಛಮಾಡದೆ ಸೆಕ್ಸ್ ಆಟಿಕೆ ದೂರವಿಡುವುದು

ಸೆಕ್ಸ್ ಆಟಿಕೆಗಳನ್ನು ಸ್ವಚ್ಛ ಮಾಡದೆ ನೀವು ಬದಿಗಿಟ್ಟರೆ ಅದರಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಹಾಗೂ ವೈರಸ್ ಗಳು ಬರುವುದು. ಒಂದು ಅಧ್ಯಯನ ಪ್ರಕಾರ ಹ್ಯುಮನ್ ಪಾಪಿಲ್ಲೊಮಾ ವೈರಸ್(ಎಚ್ ಪಿವಿ) ಕೂಡ ಹರಡುವುದು. ಮಲಗುವ ಮೊದಲು ನೀವು ಬಳಸಿರುವ ಸೆಕ್ಸ್ ಆಟಿಕೆಗಳನ್ನು ಸ್ವಚ್ಛ ಮಾಡಿಕೊಳ್ಳಿ. ಇದರಿಂದ ಅವುಗಳಲ್ಲಿ ಬ್ಯಾಕ್ಟೀರಿಯಾಗಳು ನೆಲೆನಿಂತು ನಿಮಗೆ ಹಾಗೂ ನಿಮ್ಮ ಸಂಗಾತಿಗೆ ಸೋಂಕು ಹರಡಬಹುದು. ಇದರಿಂದ ನೀವು ವ್ಯರ್ಥ ಹಣ ಖರ್ಚು ಮಾಡಬೇಕಾಗುತ್ತದೆ. ಗುಣಮಟ್ಟದ ಲೈಂಗಿಕ ಆಟಿಕೆಗಳಲ್ಲಿ ವಿವರಗಳು ಇರುವುದು ಮತ್ತು ಇದರ ಸೂಚನೆಗಳನ್ನು ಪಾಲಿಸಿ. ಸುರಕ್ಷಿತವಾಗಿ ಆಡಿದರೆ ಆಗ ನೀವು ಹೆಚ್ಚು ಕಾಲ ಆಡಬಹುದು.

ಒದ್ದೆ ಜಾಗ ಮರೆತುಬಿಡಿ

ಒದ್ದೆ ಜಾಗ ಮರೆತುಬಿಡಿ

ಲೈಂಗಿಕ ಕ್ರಿಯೆ ಎನ್ನುವುದು ತುಂಬಾ ಒದ್ದೆ ಮತ್ತು ವಿಚಿತ್ರ ಅನುಭವ. ಲೈಂಗಿಕ ಕ್ರಿಯೆಯ ಸಾಮಾನ್ಯ ಪರಿಣಾಮವೆಂದರೆ ಅದು ಪಾನೀಯದ ಕೊಚ್ಚೆ ಯಾಗಿರುವುದು. ಲೈಂಗಿಕ ಕ್ರಿಯೆ ಬಳಿಕ ನಿಮ್ಮ ಸಂಗಾತಿಯನ್ನು ಪರಿಗಣಿಸದೆ ಇರುವುದು ದೊಡ್ಡ ಮಟ್ಟದ ತಪ್ಪಾಗುವುದು. ಇದು ತುಂಬಾ ಹೊಂದಾಣಿಕೆಯಿಲ್ಲ ಮತ್ತು ಒರಟು ವರ್ತನೆಯಾಗಿರುವುದು ಎಂದು ಸೆಕ್ಸ್ ಥೆರಪಿಸ್ಟ್ ಮತ್ತು ಪ್ರಮಾಣಿಕ ಸೆಕ್ಸ್ಯುಲಿಟಿ ಎಡ್ಜುಕೇಟರ್ ಕ್ರಿಸ್ಟೆನ್ ಲಿಲ್ಲಾ ತಿಳಿಸಿದ್ದಾರೆ.

ತಕ್ಷಣ ಸ್ನಾನ ಮಾಡುವುದು

ತಕ್ಷಣ ಸ್ನಾನ ಮಾಡುವುದು

ಲೈಂಗಿಕ ಕ್ರಿಯೆ ಎನ್ನುವುದು ಬೆವರು ತರಿಸಬಹುದು ಮತ್ತು ಕೆಲವೊಂದು ಸಲ ಸುವಾಸನೆಯು ಇರಬಹುದು(ಹೆಚ್ಚಿನ ಜನರು ಇದನ್ನು ಇಷ್ಟಪಡುವರು). ಆದರೆ ಕೆಲವರು ಇದನ್ನು ಆನಂದಿಸುವುದಿಲ್ಲ. ಇದಕ್ಕಾಗಿ ಅವರು ನೇರವಾಗಿ ಸ್ನಾನಗೃಹಕ್ಕೆ ಹೋಗಿ ಸ್ನಾನ ಮಾಡುವರು. ಲೈಂಗಿಕ ಕ್ರಿಯೆ ಬಳಿಕ ಸ್ನಾನ ಮಾಡಲು ಕೆಲವೊಂದು ಕಾರಣಗಳು ಇರಬಹುದು. ಆದರೆ ಇದಕ್ಕಾಗಿ ನೀವು ಅವಸರ ಮಾಡಬಾರದು. ಆಕೆಯನ್ನು ನೀವು ತೊಳೆಯುತ್ತಿದ್ದೀರಿ ಎನ್ನುವ ಭಾವನೆಯು ಆಕೆಗೆ ಬರಬಾರದು ಎಂದು ಫ್ಲೋರಿಡಾ ಮೂಲದ ಸೆಕ್ಸ್ ಥೆರಾಪಿಸ್ಟ್ ಕಾನ್ಸ್ಟನ್ಸ್ ಡೆಲ್ಗಿಡಿಸ್ ತಿಳಿಸಿದ್ದಾರೆ. ಸ್ವಲ್ಪ ಸಮಯ ಆಕೆಯೊಂದಿಗೆ ಇರಿ. ನೀವು ಆಕೆಯನ್ನು ತುಂಬಾ ಇಷ್ಟಪಡುತ್ತೀರಿ ಮತ್ತು ನಿಮಗೆ ಸ್ನಾನ ಮಾಡಲು ಅವಸರವಿಲ್ಲವೆಂದು ತೋರಿಸಿ.

ಟೀಕಿಸುವುದು

ಟೀಕಿಸುವುದು

ಲೈಂಗಿಕ ಕ್ರಿಯೆಯೆಂದರೆ ಅದು ನಗ್ನವಾಗಿರುವುದು, ಇದರರ್ಥ ಬಟ್ಟೆಗಳು ಇಲ್ಲದೆ ಇರುವುದು ಮತ್ತು ಸಂಪೂರ್ಣವಾಗಿ ನಗ್ನವಾಗಿರುವದು. ಈ ವೇಳೆ ನೀವು ಯಾವುದೇ ಟೀಕೆ ಮಾಡುವುದು ಸರಿಯಾದ ಕ್ರಮವಲ್ಲ. ಎಂಡ್ರೋಪಿನ್ ಬಂದು ಆಕ್ಸಿಟೋಸಿನ್ ಬಿಡುಗಡೆಯಾದಾಗ ಜನರು ದುರ್ಬಲರಾಗುವರು ಎಂದು ಲಿಲ್ಲಾ ಹೇಳುತ್ತಾರೆ. ನಗ್ನವಾಗಿರುವಾಗ ನೀವು ಅವರನ್ನು ಟೀಕಿಸಲು ಹೋದರೆ ಆಗ ಅವರಿಗೆ ಮನಸ್ಸಿಗೆ ನೋವಾಗುವುದು ಮಾತ್ರವಲ್ಲದೆ, ಹೊಸ ಲೈಂಗಿಕ ಅನುಭವ ಪಡೆಯಲು ಅವರು ಮುಂದೆ ಬರಲ್ಲ. ನಿಮಗೆ ನಿಜವಾಗಿಯೂ ಪ್ರತಿಕ್ರಿಯೆ ಬೇಕಿದ್ದರೆ ಆಗ ನೀವು ಮರುದಿನಕ್ಕಾಗಿ ಕಾಯುತ್ತಲಿರಿ. ಯಾಕೆಂದರೆ ಈ ವೇಳೆ ರಾಸಾಯನಿಕವು ಸಂಪೂರ್ಣವಾಗಿ ಸಮಸ್ಥಿತಿಗೆ ಬಂದಿರುವುದು ಮತ್ತು ನೀವಿಬ್ಬರು ಬಟ್ಟೆಗಳನ್ನು ಧರಿಸಿರುವಿರಿ.

ಯಾವುದೇ ಲೈಂಗಿಕ ಕಾಯಿಲೆಯಿದ್ದರೆ ಮಾಹಿತಿ ನೀಡಿ

ಯಾವುದೇ ಲೈಂಗಿಕ ಕಾಯಿಲೆಯಿದ್ದರೆ ಮಾಹಿತಿ ನೀಡಿ

ನಿಮಗೆ ಎಸ್ ಐಟಿ ಇರುವ ಸಂಶಯವಿದ್ದರೆ ಆಥವಾ ಬೇರೆ ಸಂಗಾತಿ ಜತೆಗೆ ಲೈಂಗಿಕ ಕ್ರಿಯೆ ನಡೆಸಿದ್ದರೆ ಆಗ ನೀವು ಇದನ್ನು ಸಂಪೂರ್ಣ ಲೈಂಗಿಕ ಕ್ರಿಯೆ ಮುಗಿದ ಬಳಿಕ ಹೇಳುವುದು ಸರಿಯಲ್ಲ. ನೀವು ಬೇಗನೆ ಇದನ್ನು ತಿಳಿಸಬೇಕು. ವಾಸ್ತವಾಂಶ ತಿಳಿದ ಬಳಿಕ ಬಾಂಬ್ ಎಸೆಯುವುದು ವಿಚಿತ್ರವಾಗಿರುವುದು ಎಂದು ಲಿಲ್ಲಾ ಹೇಳುತ್ತಾರೆ. ಲೈಂಗಿಕ ಕ್ರಿಯೆ ಬಳಿಕ ನೀವು ಎಲ್ಲವನ್ನು ಹೇಳಿದರೆ ಆಗ ನಿಮ್ಮ ಸಂಗಾತಿಯು ತುಂಬಾ ಕೋಪಗೊಳ್ಳುವಳು ಮತ್ತು ಆಕೆಗೆ ಮೋಸ ಹೋದಂತೆ ಭಾವವಾಗುವುದು. ಆಕೆಗೆ ಗೌರವ ನೀಡಿ ನೀವು ಈ ಮಾಹಿತಿ ಆಕೆಗೆ ತಿಳಿಸಿ. ಇದರ ಬಳಿಕ ಆಕೆ ನಿಮ್ಮೊಂದಿಗೆ ಲೈಂಗಿಕ ಕ್ರಿಯೆ ಮಾಡಬೇಕೇ ಅಥವಾ ಬೇಡವೇ ಎನ್ನುವ ನಿರ್ಧಾರ ಮಾಡುವಳು.

ಆಕೆಯನ್ನು ಹೊರಹೋಗಲು ಹೇಳುವುದು

ಆಕೆಯನ್ನು ಹೊರಹೋಗಲು ಹೇಳುವುದು

ಹಾಸಿಗೆಯಲ್ಲಿ ನೀವು ಇದುವರೆಗೆ ನಿದ್ರೆ ಮಾಡದೆ ಇರಬಹುದು. ನಿಮಗೆ ನಿದ್ರಿಸುವಾಗ ಹಾಸಿಗೆ ಹಂಚಿಕೊಂಡು ಅಭ್ಯಾಸ ಇಲ್ಲದೆ ಇರಬಹುದು. ಇದರಿಂದ ನಿಮ್ಮ ರಾತ್ರಿಯ ನಿದ್ರೆಗೆ ಅಡ್ಡಿ ಉಂಟು ಮಾಡಬಹುದು. ಆದರೆ ಇದೆಲ್ಲವನ್ನು ನೀವು ಬಿಟ್ಟುಬಿಡಬೇಕು. ಲೈಂಗಿಕ ಕ್ರಿಯೆ ಬಳಿಕ ನೀನು ನನ್ನ ಜತೆಗೆ ನಿದ್ರಿಸಬಾರದು ಎನ್ನುವುದು ನೀವು ಮಾಡುವಂತಹ ದೊಡ್ಡ ತಪ್ಪು. ಕುಡಿತದ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ಬಳಿಕ ರಾತ್ರಿ ಜತೆಯಾಗಿ ನಿದ್ರಿಸಲು ಸಾಧ್ಯವಿಲ್ಲವೆಂದು ಹೇಳಿದರೆ ನಾನು ಅದನ್ನು ಸ್ವೀಕರಿಸುತ್ತೇನೆ ಎಂದು ಮಹಿಳೆಯೊಬ್ಬಳು ಹೇಳಿದ್ದಾಳೆ. ಆದರೆ ಆತ ಮಾತ್ರ ಹಾಗೆ ಹೇಳಲೇ ಇಲ್ಲ. 90 ನಿಮಿಷ ನಿದ್ರೆ ಮಾಡಿದ ಬಳಿಕ ನನ್ನನ್ನು ಎಬ್ಬಿಸಿದ ಮತ್ತು ಆತನ ಕೋಣೆಯಲ್ಲಿರುವ ಇತರರು ಏಳುವ ಮೊದಲು ಅಲ್ಲಿಂದ ಹೋಗಬೇಕೆಂದು ತಿಳಿಸಿದ ಎಂದು ಆಕೆ ಹೇಳಿದಳು. ರಾತ್ರಿ ಕುಡಿದ ನಶೆಯಲ್ಲಿದ್ದ ನಾನು ಅಲ್ಲಿಂದ ನೇರವಾಗಿ ಸಬ್ ವೇಗೆ ಬಂದು ಪಾರ್ಟಿಯ ಡ್ರೆಸ್ ನಲ್ಲೇ ತೆರಳಿದೆ. ಇದನ್ನು ನಾನು ನಿರೀಕ್ಷಿಸಿ ಇರಲಿಲ್ಲ. ನೀವು ಸಂಪೂರ್ಣ ರಾತ್ರಿ ಆಕೆಯೊಂದಿಗೆ ಕಳೆಯಲು ಬಯಸದೆ ಇದ್ದರೆ ನಿರೀಕ್ಷೆಗಳನ್ನು ನಿಭಾಯಿಸಿ ಮತ್ತು ಏನು ನಡೆಯುತ್ತಿದೆ ಎನ್ನುವುದನ್ನು ಹೇಳಿ.

ದೈಹಿಕವಾಗಿ ದೂರವಾಗುವುದು

ದೈಹಿಕವಾಗಿ ದೂರವಾಗುವುದು

ಲೈಂಗಿಕ ಕ್ರಿಯೆ ಬಳಿಕ ನಮ್ಮ ದೇಹ ಹಾಗೂ ಮೆದುಳಿನಲ್ಲಿ ಸಂಪೂರ್ಣವಾಗಿ ಒಳ್ಳೆಯ ಹಾರ್ಮೋನುಗಳು ಇಬ್ಬರ ನಡುವಿನ ಭಾಂದವ್ಯ ಬೆಸೆಯುವುದು. ಸಂಗಾತಿಯಿಂದ ನೀವು ದೂರವಾಗಲು ಪ್ರಯತ್ನಿಸಿದರೆ ಅದು ಗಮನಕ್ಕೆ ಬರದೇ ಇರುವುದಿಲ್ಲ. ನೀವು ಸಂಗಾತಿ ಜತೆಗೆ ಇರುವುದು ಅತೀ ಅಗತ್ಯ ಎಂದು ಡೆಬೊರ್ಹ ಫಾಕ್ಸ್ ತಿಳಿಸಿದ್ದಾರೆ. ನೀವು ಆಕೆಯನ್ನು ಮುಟ್ಟದಿದ್ದರೆ, ಮುದ್ದಿಸದಿದ್ದರೆ ಪರವಾಗಿಲ್ಲ, ಆದರೆ ಕೆಲವೊಂದು ಒಳ್ಳೆಯ ಮಾತುಗಳನ್ನು ಆಡಿ. ಲೈಂಗಿಕ ಕ್ರಿಯೆಯೆನ್ನುವುದು ಕೇವಲ ಪರಾಕಾಷ್ಠೆಯಲ್ಲಿ ಮುಗಿಯುವ ವಸ್ತುವಲ್ಲ. ನಿಮಗೂ ಕೂಡ ಹಾಗೆ.

ಧೂಮಪಾನ

ಧೂಮಪಾನ

ಯಾವುದೇ ಸಮಯದಲ್ಲಿ ಧೂಮಪಾನ ಮಾಡುವುದು ತುಂಬಾ ಕೆಟ್ಟ ಅಭ್ಯಾಸ. ಅದರಲ್ಲೂ ಲೈಂಗಿಕ ಕ್ರಿಯೆ ಬಳಿಕ ಧೂಮಪಾನ ಮಾಡಲೇಬಾರದು. ತುಂಬಾ ಪ್ರೀತಿಯ ಲೈಂಗಿಕ ಕ್ರಿಯೆ ಬಳಿಕ ನೀವು ಬಾಯಿಗೆ ನಾಯಿಯ ವಾಸನೆ ಕೊಡಲು ಬಯಸುತ್ತೀರಾ? ಸಿನಿಮಾಗಳಲ್ಲಿ ತೋರಿಸಿರುವುದನ್ನು ಕೆಲವರು ಈಗಲೂ ಪಾಲಿಸುತ್ತಿದ್ದಾರೆ. ಧೂಮಪಾನಿಗಳಲ್ಲಿ ನಿಮಿರುವಿಕೆ ದೌರ್ಬಲ್ಯ ಕಾಣಿಸಿಕೊಳ್ಳುವುದು.

ಪರಾಕಾಷ್ಠೆ ವೇಳೆ ಆಕೆಯ ಮುಖದ ಭಾವ ವಿವರಿಸಿ

ಪರಾಕಾಷ್ಠೆ ವೇಳೆ ಆಕೆಯ ಮುಖದ ಭಾವ ವಿವರಿಸಿ

ಪ್ರಾಮಾಣಿಕವಾಗಿ ಹೇಳುವುದಾದರೆ ನಾವು ಇದನ್ನು ಪರಿಗಣಿಸಿಲ್ಲ. ಆದರೆ ಡೆಲ್ಗಿಡಿಸ್ ಪ್ರಕಾರ, ಕೆಲವು ಪುರುಷರು ತಮ್ಮ ಪರಾಕಾಷ್ಠೆ ವೇಳೆ ನಡೆಯುವಂತಹ ಕೆಲವೊಂದು ವಿದ್ಯಮಾನಗಳನ್ನು ತುಂಬಾ ಕಚ್ಚಾ ಮತ್ತು ದುರ್ಬಲ ಅನುಭವಕ್ಕೆ ಸಾಕ್ಷಿಯಾಗುವರು. ಇದು ಒಳ್ಳೆಯ ವಿಚಾರವಲ್ಲ. ಯಾಕೆಂದರೆ ಮಹಿಳೆಯು ಲೈಂಗಿಕ ಕ್ರಿಯೆ ವೇಳೆ ದುರ್ಬಲಳಾಗುವಳು ಎಂದು ಡೆಲ್ಗಿಡಿಸ್ ಹೇಳುತ್ತಾರೆ. ತುಂಬಾ ಅನ್ಯೋನ್ಯತೆಯ ಕ್ಷಣಗಳ ಬಗ್ಗೆ ಇಂಚುಇಂಚಿನ ಮಾಹಿತಿ ನೀಡಬೇಕೆಂದು ಅವರು ಬಯಸುವರು. ಇದು ಸರಿಯಲ್ಲ. ಕೆಲವು ಮಹಿಳೆಯರ ಪ್ರಕಾರ ನನಗೆ ವಿಜ್ಞಾನದ ಪ್ರಾಜೆಕ್ಟ್ ನೀಡಿದಂತೆ ಆಗಿದೆ ಮತ್ತು ಇದನ್ನು ನಾನು ದ್ವೇಷಿಸುತ್ತೇನೆ ಎನ್ನುತ್ತಾಳೆ.

For Quick Alerts
ALLOW NOTIFICATIONS
For Daily Alerts

    English summary

    These things men Should Never Do After Sex

    There’s oodles of information about what we can do to increase the chances of sex happening, and countless more advice columns and help articles about how best to comport ourselves during the act itself. Interestingly, though, there’s not much serviceable information about what guys ought to do after sex. That’s why we did some digging, spoke to a number of sex educators and therapists, and got a handle on exactly what we should be doing in sex’s sticky aftermath—and what we shouldn’t.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more