For Quick Alerts
ALLOW NOTIFICATIONS  
For Daily Alerts

ಏಡ್ಸ್-ಕ್ಯಾನ್ಸರ್‌ನಂತಹ ರೋಗವನ್ನು ನಿಯಂತ್ರಿಸುವ ಶಕ್ತಿ-ಗೋಮೂತ್ರದಲ್ಲಿದೆ

|

ಭಾರತೀಯರು ಸಾವಿರಾರು ವರ್ಷಗಳಿಂದಲೂ ಗೋವನ್ನು ತುಂಬಾ ಪೂಜ್ಯನೀಯವೆಂದು ಆರಾಧಿಸಿಕೊಂಡು ಬಂದಿದ್ದಾರೆ. ಇದರಿಂದ ಸಿಗುವಂತಹ ಪ್ರತಿಯೊಂದು ವಸ್ತು ಕೂಡ ಮನುಷ್ಯನ ಉಪಯೋಗಕ್ಕೆ ಆಗುವಂತದ್ದಾಗಿದೆ. ಅದರಲ್ಲೂ ಹಾಲು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇನ್ನು ಗೋಮೂತ್ರವೆಂದು ಕರೆಯಲ್ಪಡುವಂತಹ ಗೋವುಗಳ ಮೂತ್ರವು ಹಲವಾರು ರೋಗಗಳಿಗೆ ಪರಿಣಾಮಕಾರಿ ಔಷಧಿ ಎಂದು ಆಯುರ್ವೇದವು ಕಂಡುಕೊಂಡಿದೆ. ಗೋಮೂತ್ರವನ್ನು ಹಾಲು, ಮೊಸರು ಮತ್ತು ಮಜ್ಜಿಗೆ ಜತೆಗೆ ಸೇವನೆ ಮಾಡುವಂತೆ ಆಯುರ್ವೇದದಲ್ಲಿ ಸೂಚಿಸಲಾಗುತ್ತದೆ. ಗೋಮೂತ್ರವನ್ನು ಏಡ್ಸ್ ಮತ್ತು ಕ್ಯಾನ್ಸರ್ ನಂತಹ ರೋಗಗಳಿಗೂ ಪರಿಣಾಮಕಾರಿ ಎನ್ನಲಾಗುತ್ತದೆ.

cow urine

ರೋಗಿಗಳು ಚೇತರಿಸಿಕೊಳ್ಳಲು ಗೋಮೂತ್ರವು ತುಂಬಾ ಪ್ರಭಾವಿ ಎಂದು ಅಧ್ಯಯನ ವರದಿಗಳು ಕೂಡ ಹೇಳಿವೆ. ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆಗಳಲ್ಲಿ ಗೋಮೂತ್ರವು ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ಗೋಮೂತ್ರದಿಂದ ತಯಾರಿಸಲ್ಪಡುವ ಸಾಬೂನು, ಶಾಂಪೂ, ಹಲ್ಲಿನ ಪೇಸ್ಟ್ ಮತ್ತು ಪಾನೀಯಗಳು ಲಭ್ಯವಿದೆ.

ಗೋಮೂತ್ರವು ಇಷ್ಟು ಅದ್ಭುತವಾಗಲು ಕಾರಣವೇನು?
ಸಾಮಾನ್ಯವಾಗಿ ಗೋವಿನ ಮೂತ್ರದಲ್ಲಿ ವಿಷವಿರುವುದು ಎಂದು ಭಾವಿಸಲಾಗುತ್ತದೆ. ಇದರಲ್ಲಿ ಶೇ.95ರಷ್ಟು ನೀರನ್ನು ಹೊರತುಪಡಿಸಿ ಯೂರಿಯಾ, ಖನಿಜಾಂಶಗಳು, ಉಪ್ಪು, ಹಾರ್ಮೋನು, ಕಿಣ್ವಗಳು ಇತ್ಯಾದಿಗಳಿರುವುದು. ಇದರ ಹೊರತಾಗಿಯೂ ಗೋಮೂತ್ರದ ಬಳಕೆಯಿಂದ ಹಲವಾರು ರೋಗಗಳು ಶಮನಗೊಂಡಿವುದು ಪತ್ತೆ ಮಾಡಲಾಗಿದೆ. ಆದರೆ ಈಗಲೂ ಇದರ ಬಳಕೆ ಬಗ್ಗೆ ವಾದಗಳು ನಡೆಯುತ್ತಿದೆ.

ವೈಜ್ಞಾನಿಕವಾಗಿ ಗೋಮೂತ್ರವನ್ನು ಔಷಧಿಯಾಗಿ ಬಳಕೆ ಮಾಡುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ ಇದ್ದರೂ ಶತಮಾನಗಳಿಂದಲೂ ಇದನ್ನು ಔಷಧಿ ರೂಪದಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ತುಂಬಾ ಅಚ್ಚರಿ ಮೂಡಿಸುವ ವಿಚಾರವೆಂದರೆ ಇತ್ತೀಚೆಗೆ ಅಧ್ಯಯನಕ್ಕಾಗಿ ಗುಜರಾತ್ ನ ಗಿರಿ ಜಾತಿಯ ಗೋವುಗಳ ಮೂತ್ರದ 400 ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಅದರಲ್ಲಿ ಚಿನ್ನದ ಅಂಶವು ಪತ್ತೆಯಾಗಿದೆ.

ಗಿರ್ ಗೋವುಗಳ ಮೂತ್ರದಲ್ಲಿ ಕಂಡುಬಂದಿರುವ ಸುಮಾರು 5100 ಅಂಶಗಳಲ್ಲಿ 388ರಲ್ಲಿ ಔಷಧೀಯ ಗುಣಗಳು ಇವೆ ಮತ್ತು ಇದು ಹಲವಾರು ರೋಗಗಳಿಗೆ ಪರಿಣಾಮಕಾರಿ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆರೋಗ್ಯದ ವಿವಿಧ ಘಟ್ಟಗಳಲ್ಲಿ ಗೋಮೂತ್ರವು ಎಷ್ಟು ಲಾಭಕಾರಿ ಎಂದು ಚರ್ಚಿಸುವ.
*ಇದರಲ್ಲಿ ಹಲವಾರು ರೀತಿಯ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದು ರೋಗ ಉಂಟು ಮಾಡುವ ಕೀಟಾಣುಗಳನ್ನು ಕೊಲ್ಲುವುದು.
*ದೇಹದಲ್ಲಿ ಆಗುವಂತಹ ಅಸಮತೋಲವನ್ನು ಗೋಮೂತ್ರವು ಕಡಿಮೆ ಮಾಡುವುದು. ಆಯುರ್ವೇದಲ್ಲಿ ಇದನ್ನು ವಾತ, ಪಿತ್ತ ಮತ್ತು ಕಫ ಎನ್ನಲಾಗುತ್ತದೆ.


*ಇದು ದೇಹದಲ್ಲಿ ಕೊರತೆ ನೀಗಿಸಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು.
*ಇದು ದೇಹದಲ್ಲಿ ವಿಷಕಾರಿ ಅಂಶವನ್ನು ನಿವಾರಿಸಲು ಬಳಸಲಾಗುವುದು.
*ಗೋಮೂತ್ರವು ಕೆಲವೊಂದು ಕಾಯಿಲೆಗಳಾದ ಕ್ಯಾನ್ಸರ್, ಕುಷ್ಠರೋಗ, ಅಪಸ್ಮಾರ, ಮಧುಮೇಹ, ಮೆದುಳು ಮತ್ತು ಹೃದಯದ ಕಾಯಿಲೆ, ಚರ್ಮದ ಸಮಸ್ಯೆ ಮತ್ತು ಗರ್ಭಕೋಶದ ಸಮಸ್ಯೆ ನಿವಾರಣೆಗೆ ಇದು ಪರಿಣಾಮಕಾರಿ. ಜ್ವರ, ರಕ್ತಹೀನತೆ, ಯಕೃತ್ ಮತ್ತು
ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಇದು ಉಪಯೋಗಕಾರಿ.
*ಇದನ್ನು ಜೈವಿಕವರ್ಧಕವಾಗಿಯೂ ಬಳಸಲಾಗುತ್ತದೆ. ಶತಮಾನಗಳಿಂದಲೂ ಭಾರತೀಯ ಔಷಧೀಯ ಕ್ರಮದಲ್ಲಿ ಬಳಸಲಾಗುತ್ತಿರುವ ಗೋಮೂತ್ರವು ತುಂಬಾ ಪರಿಣಾಮಕಾರಿ. ಇದು ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡುವುದು.
ಆದರೆ ಇದರ ಬಗ್ಗೆ ಈಗಲೂ ಹಲವಾರು ಸಂಶಯಗಳು ಇರುವ ಕಾರಣದಿಂದಮುಂದಿನ ದಿನಗಳಲ್ಲಿ ಇದರ ಸರಿಯಾದ ಅಧ್ಯಯನಗಳು ನಡೆದು ಔಷಧೀಯ ಗುಣಗಳು ಸಾಬೀತಾಗಬಹುದು. ಇದು ಚಿಕಿತ್ಸೆಯಲ್ಲಿ ತುಂಬಾ ಆರ್ಥಿಕ ಹಾಗೂ ಪರಿಸರ ಸ್ನೇಹಿ ಎಂದು ಸಾಬೀತಾಗಿದೆ. ಗೋಮೂತ್ರದ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇರುವ ಕಾರಣದಿಂದ ಇದರ ಔಷಧೀಯ ಗುಣಗಳು ನಮಗೆ ತಿಳಿದುಬರಲಿ.
English summary

The health benefits of drinking cow urine

Health benefits of drinking cow urineCow urine, popularly known as 'Gomutra', is widely used in Indian medicine as a healer and health restorer. The usage of cow urine has been immensely propounded in the treatment of diseases in Ayurveda. It has been a traditional healing medicine for a host of diseases, where many happen to be serious ones. Cow urine is sometimes mixed with milk, clarified butter, yoghurt, etc., to cure diseases. A lot of patients are given Cow Urine Therapy for grave diseases like AIDS and cancer, apart from the common ailments.
X
Desktop Bottom Promotion