For Quick Alerts
ALLOW NOTIFICATIONS  
For Daily Alerts

ಯೋನಿಯ ಬಗ್ಗೆ ಇರುವ ಇಂತಹ ಕಟ್ಟುಕಥೆಗಳನ್ನು ನಂಬಬೇಡಿ!

By Hemanth
|

ನೀವು ಮಹಿಳೆಯಾಗಿದ್ದರೆ ಖಂಡಿತವಾಗಿಯೂ ನಿಮ್ಮ ಯೋನಿ ಬಗ್ಗೆ ಹಲವಾರು ಆಸಕ್ತಿದಾಯಕ ವಿಚಾರಗಳು ಮತ್ತು ಅದರ ಆರೋಗ್ಯ ಹಾಗೂ ಅದನ್ನು ಹೇಗಿಡಬೇಕೆನ್ನುವ ವಿಚಾರದ ಬಗ್ಗೆ ಕೆಲವೊಂದು ತಪ್ಪು ಮಾಹಿತಿಗಳು ನಿಮಗೆ ಸಿಕ್ಕಿರಬಹುದು. ಇಂಟರ್ನೆಟ್ ನಲ್ಲಿ ಹುಡುಕಾಡಿದರೆ ನಿಮಗೆ ನೂರಾರು ಇಂತಹ ಹಾದಿ ತಪ್ಪಿಸುವಂತಹ ಮಾಹಿತಿಗಳು ಲಭ್ಯವಾಗುವುದು. ಪ್ರತಿನಿತ್ಯವು ಹೊಸತೊಂದು ಬಗೆಯ ವಿಚಾರವು ಇಂಟರ್ನೆಟ್ ನಲ್ಲಿ ಬರುವುದು.

ಲಿಂಗಭೇದ ಮತ್ತು ಮಹಿಳೆಯರ ಲೈಂಗಿಕತೆ ಬಗ್ಗೆ ಇರುವಂತಹ ಭೀತಿಯಿಂದಾಗಿಯೇ ಈ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ. ಇದು ಲೈಂಗಿಕ ಕ್ರಿಯೆಗಾಗಿ ಬಳಸಿಕೊಳ್ಳುವಂತಹ ಒಂದು ಸಾಧನವೆಂದು ಕಲಿಸಿಕೊಡಲಾಗುತ್ತದೆ. ಈ ಕಟ್ಟುಕಥೆಗಳನ್ನು ಇವತ್ತು ಬಹಿರಂಗ ಮಾಡಲಾಗುವುದು ಮತ್ತು ಪ್ರತಿಯೊಬ್ಬ ಮಹಿಳೆಯು ಕೆಲವು ಸತ್ಯಗಳನ್ನು ತಿಳಿದುಕೊಳ್ಳಬೇಕು.

ಮೊದಲ ಸುಳ್ಳು: ಡಿಸ್ಚಾರ್ಚ್ ಅಸಹ್ಯ

ಮೊದಲ ಸುಳ್ಳು: ಡಿಸ್ಚಾರ್ಚ್ ಅಸಹ್ಯ

ಸಾಮಾಜಿಕ ಜಾಲತಾಣದಲ್ಲಿ #ಪ್ಯಾಂಟಿಚಾಲೆಂಜ್ ಎನ್ನುವ ಅಭಿಯಾನದಲ್ಲಿ ಹೆಚ್ಚಿನವರು ತಮ್ಮ ಡಿಸ್ಚಾರ್ಚ್ ಮುಕ್ತ ಪ್ಯಾಂಟಿಯ ಫೋಟೊಗಳನ್ನು ಶೇರ್ ಮಾಡುವ ತನಕ ನನಗೆ ಇದೇನೆಂದು ತಿಳಿದೇ ಇರಲಿಲ್ಲ. ದೇಹದ ನೈಸರ್ಗಿಕವಾದ ಪ್ರಕ್ರಿಯೆಯಲ್ಲಿ ಮಹಿಳೆಯನ್ನು ಅವಮಾನಿಸುವಂತಹ ಕಾರ್ಯವು ಇಂಟರ್ನೆಟ್ ನಲ್ಲಿ ಆಗಿದೆ. ಸಾಮಾನ್ಯ ಡಿಸ್ಚಾರ್ಚ್ ತುಂಬಾ ಮುಜುಗರ ಉಂಟು ಮಾಡುತ್ತದೆ ಎಂದು ಹೆಚ್ಚಿನವರು ಭಾವಿಸಿರುವುದು ತುಂಬಾ ಅಪಾಯಕಾರಿ. ಡಿಸ್ಚಾರ್ಚ್ ಎನ್ನುವುದು ನಿಮ್ಮ ಗೆಳೆತಿಯಿದ್ದಂತೆ. ಪಿಎಚ್ ಮಟ್ಟವು ಸರಿಯಾಗಿದೆ ಮತ್ತು ಯಾವುದೇ ಕಿರಿಕಿರಿ ಉಂಟು ಮಾಡುವಂತಹ ಕಲ್ಮಶಗಳಿದ್ದರೂ ಅದನ್ನು ಹೊರಹಾಕುವುದು. ಕಣ್ಣಿಗೆ ಕಸ ಬಿದ್ದರೆ ಕಣ್ಣೀರು ಅದನ್ನು ಹೊರಹಾಕುವಂತೆ. ದುರ್ವಾಸನೆ ಮತ್ತು ಬಣ್ಣವಿಲ್ಲದೆ ಇರುವುದು ನಿಮ್ಮ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎನ್ನುವುದನ್ನು ತೋರಿಸುವುದು.

ಎರಡನೇ ಸುಳ್ಳು: ಸ್ವಚ್ಛತೆ ಒಳ್ಳೆಯ ಕಲ್ಪನೆ

ಎರಡನೇ ಸುಳ್ಳು: ಸ್ವಚ್ಛತೆ ಒಳ್ಳೆಯ ಕಲ್ಪನೆ

ಯೋನಿಯು ತನ್ನನ್ನು ತಾನೇ ಸ್ವಚ್ಛಮಾಡಿಕೊಳ್ಳುತ್ತದೆ. ಇದರಿಂದಾಗಿ ಅದು ಆ ಜಾಗದಲ್ಲಿದೆ. ಯೋನಿಯು ಯಾವಾಗಲೂ ವಾಸನೆ ಬರುತ್ತಿರುತ್ತದೆ ಎಂದು ಹಲವಾರು ವರ್ಷಗಳಿಂದ ಹೇಳಿಕೊಡುತ್ತಿರುವ ಕಾರಣದಿಂದಾಗಿ ಇದರ ಸ್ವಚ್ಛತೆಗಾಗಿ ವಿನೇಗರ್ ಅಥವಾ ಬೇರೆ ಸುವಾಸನೆಯ ದ್ರವ್ಯಗಳನ್ನು ಬಳಸುವುದು ವೈಯಕ್ತಿಕ ಸ್ವಚ್ಛತೆ ದೃಷ್ಟಿಯಿಂದ ಒಳ್ಳೆಯದು ಎಂದು ಭೀತಿ ಮೂಡಿಸಲಾಗಿದೆ. ಸ್ವಚ್ಛತೆಯಿಂದಾಗಿ ಯೋನಿಯ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾದ ಸಮತೋಲನ ಕಳೆದುಕೊಳ್ಳುವುದು. ಇದರಿಂದ ಕೆಲವೊಂದು ಲೈಂಗಿಕ ರೋಗಗಳು ಮತ್ತು ಬ್ಯಾಕ್ಟೀರಿಯಾದ ಸಮಸ್ಯೆ ಬರಬಹುದು.

ಮೂರನೇ ಸುಳ್ಳು: ಸುವಾಸನೆಯುಕ್ತ ಸೋಪ್ ಬಳಸಿದರೆ ಸುವಾಸನೆ ಬೀರುವುದು

ಮೂರನೇ ಸುಳ್ಳು: ಸುವಾಸನೆಯುಕ್ತ ಸೋಪ್ ಬಳಸಿದರೆ ಸುವಾಸನೆ ಬೀರುವುದು

ಇದು ಯೋನಿಗೆ ಸಂಬಂಧಿಸಿದಂತೆ ಹರಡಿರುವ ತೀರ ಕೆಟ್ಟ ಸುದ್ದಿ. ಯಾಕೆಂದರೆ ಇದಕ್ಕೆ ಯಾವುದೇ ಅರ್ಥವಿಲ್ಲ. ನೀವು ದೇಹವನ್ನು ಸೋಪ್ ನಿಂದ ತೊಳೆಯುತ್ತೀರಿ. ಅದೇ ರೀತಿಯಲ್ಲಿ ಯಾಕೆ ನೀವು ಸೋಪ್ ನ್ನು ಈ ಭಾಗಕ್ಕೆ ಕೂಡ ಬಳಸಬಾರದು? ಸ್ವಚ್ಛತೆ, ಸೋಪ್, ಬ್ಯಾಕ್ಟೀರಿಯಾ ಇತ್ಯಾದಿಗಳು ಪಿಎಚ್ ಮಟ್ಟ ಹಾಳುಗೆಡಹುವುದು. ಸಾಮಾನ್ಯ ವಿಧಾನ ಮೂಲಕ ಯೋನಿ ತೊಳೆಯಬೇಕಾದರೆ ಹೊರಗಡೆ ಸಾಬೂನು ಬಳಸಿ ಮತ್ತು ಒಳಗಡೆ ಬಿಸಿ ನೀರು ಬಳಸಿ.

ನಾಲ್ಕನೇ ಸುಳ್ಳು: ಲೈಂಗಿಕವಾಗಿ ಹೆಚ್ಚು ತೊಡಗಿಕೊಂಡರೆ ಯೋಗಿ ಆಕಾರ ಬದಲಾಗುವುದು

ನಾಲ್ಕನೇ ಸುಳ್ಳು: ಲೈಂಗಿಕವಾಗಿ ಹೆಚ್ಚು ತೊಡಗಿಕೊಂಡರೆ ಯೋಗಿ ಆಕಾರ ಬದಲಾಗುವುದು

ಇದು ತುಂಬಾ ಕಿರಿಕಿರಿಯಾಗುವಂತಹ ವಿಚಾರವಾಗಿದೆ. ಯಾಕೆಂದರೆ ಹೆರಿಗೆಯಾಗುವಾಗ ಯೋನಿಯು ಸಂಪೂರ್ಣ ಮಗುವನ್ನು ಹೊರಹಾಕುವುದು. ಆದರೂ ಅದು ಹಾಗೆ ಇರುವುದು. ಕೇವಲ ಶಿಶ್ನ ಮಾತ್ರ ಕೆಲವೊಂದು ಬದಲಾವಣೆಗಳನ್ನು ಮಾಡಬಹುದು. ವಿಜ್ಞಾನದ ಪ್ರಕಾರ ಸಾಮಾನ್ಯವಾಗಿ ಶಿಶ್ನವು 9.16 ಸೆ.ಮೀ.(3.61 ಇಂಚು) ಉದ್ದವಿರುವುದು. ಸಾಮಾನ್ಯವಾಗಿ ನಿಮಿರುವಿಕೆ ಉಂಟಾದರೆ ಆಗ 13.12 ಸೆ.ಮೀ.(5.16 ಇಂಚು) ಉದ್ದವಾಗುವುದು. ಅನುಗುಣವಾದ ಸುತ್ತಳತೆ ಪ್ರಮಾಣಗಳ ಪ್ರಕಾರ ಸಾಮಾನ್ಯ ಶಿಶ್ನವು 9.31 ಸೆ.ಮಿ.(3.66 ಮತ್ತು ನಿಮಿರಿದಾಗ 11.66 ಸೆ.ಮೀ.(4.59 ಇಂಚು) ಉದ್ದವಾಗುವುದು.

ಐದನೇ ಸುಳ್ಳು : ಕೆಜೆಲ್ ವ್ಯಾಯಾಮವು ಅನಗತ್ಯ

ಐದನೇ ಸುಳ್ಳು : ಕೆಜೆಲ್ ವ್ಯಾಯಾಮವು ಅನಗತ್ಯ

ಕೆಜೆಲ್ ವ್ಯಾಯಾಮವು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಇದು ನಿಮ್ಮ ಶ್ರೋಣಿಯ ಮಹಡಿ ಬಲಗೊಳಿಸುವುದು, ಮೂತ್ರಕೋಶ, ಭ್ರೂಣ ಮತ್ತು ಸರಿಯಾದ ಜಾಗದಲ್ಲಿ ಹಿಡಿದಿಟ್ಟುಕೊಳ್ಳುವುದು. ಇದರಿಂದ ವ್ಯಾಯಾಮ ಮುಖ್ಯ. ತೂಕ ಹೆಚ್ಚಳ, ವಯಸ್ಸಾಗುವಿಕೆ ಮತ್ತು ಗರ್ಭಧಾರಣೆಯು ಶ್ರೋಣಿಯ ಮಹಡಿಯನ್ನು ದುರ್ಬಲಗೊಳಿಸುವುದು. ಇದರಿಂದಾಗಿ ನಿಮಗೆ ಮೂತ್ರದ ಅಸಂಯಮ ಕಂಡುಬರಬಹುದು.

ಆರನೇ ಸುಳ್ಳು: ಯೋನಿ ಹತ್ತಿರ ಕೂದಲು ಇರಬಾರದು

ಆರನೇ ಸುಳ್ಳು: ಯೋನಿ ಹತ್ತಿರ ಕೂದಲು ಇರಬಾರದು

2012ರಲ್ಲಿ ಇಂಟರ್ನೆಟ್ ನಲ್ಲಿ `ದ ಅಬ್ಸರ್ಡ್ ಮಿಥ್ ಪೋರ್ನ್ ಟೀಚಸ್ ಅಸ್ ಎಬೌಟ್ ಸೆಕ್ಸ್' ಎನ್ನುವ ಶೀರ್ಷಿಕೆಯಿದ್ದ ಲೇಖನ ಒದುತ್ತಲಿದ್ದೆ. ಇದರ ಮೊದಲ ಪ್ಯಾರದಲ್ಲೇ ಹದಿಹರೆಯ ಯುವತಿಯೊಬ್ಬಳು ತನ್ನ ಮಾಜಿ ಪ್ರೇಮಿಯು ತನ್ನ ಯೋನಿಯ ಮೇಲ್ಭಾಗದ ಕೂದಲನ್ನು ನೋಡಿ ತುಂಬಾ ಆಘಾತಗೊಂಡಿರುವ ಬಗ್ಗೆ ಹೇಳಲಾಗಿತ್ತು. ಯಾಕೆಂದರೆ ಆತ ನಿಜಜೀವನದಲ್ಲಿ ಯಾವತ್ತೂ ನಗ್ನ ಮಹಿಳೆಯನ್ನು ನೋಡಿಲ್ಲ ಮತ್ತು ಕೂದಲು ಅಲ್ಲಿ ಬೆಳೆಯಬಾರದು ಎಂದು ಭಾವಿಸಿದ್ದ. ಇಷ್ಟು ವರ್ಷಗಳಾದರೂ ಇದು ಈಗಲೂ ಕಾಡುತ್ತಿದೆ. ಈ ಕೂದಲು ಪ್ರಮುಖ ಪಾತ್ರ ವಹಿಸುವುದು. ಇದು ಚರ್ಮವನ್ನು ತಿಕ್ಕಾಟದಿಂದ ರಕ್ಷಿಸುವುದು ಮತ್ತು ಬ್ಯಾಕ್ಟೀರಿಯಾದಿಂದ ಯೋನಿಗೆ ರಕ್ಷಣೆ ನಿಡುವುದು. ಇದು ಅವರವರ ದೇಹದ ವಿಚಾರಕ್ಕೆ ಸಂಬಂಧಪಟ್ಟಿರುವ ಕಾರಣದಿಂದಾಗಿ ಕೂದಲು ತೆಗೆಯುವುದು ಮತ್ತು ಬಿಡುವುದು ಅವರಿಗೆ ಬಿಟ್ಟಿರುವ ವಿಚಾರ. ಆದರೆ ಕೂದಲು ತೆಗೆಯದೆ ಮಹಿಳೆ ತುಂಬಾ ಅಸ್ವಚ್ಛವಾಗಿದ್ದಾಳೆ ಎನ್ನುವುದು ತುಂಬಾ ಹಾಸ್ಯಾಸ್ಪದ ಮತ್ತು ಹಾನಿಕಾರಕ.

ಏಳನೇ ಸುಳ್ಳು: ಪ್ಯಾಡ್ ಮಕ್ಕಳಿಗಾಗಿ

ಏಳನೇ ಸುಳ್ಳು: ಪ್ಯಾಡ್ ಮಕ್ಕಳಿಗಾಗಿ

ಯೂ ಡೋಂಟ್ ಹ್ಯಾವ್ ಟು ಲುಕ್ ಲೈಕ್ ಮಿ: ಗ್ರೋಯಿಂಗ್ ಅಪ್, ಸ್ಪೀಕಿಂಗ್ ಔಟ್, ಫೈಂಡಿಂಗ್ ಫೆಮಿನಿಸಂ ಕುರಿತಾದ ಪ್ರಬಂಧವನ್ನು ಲೇಖಕಿ ಅಲಿಡಾ ನ್ಯುಗೆಂಟ್ ಬರೆದಿದ್ದರು. ಇದರಲ್ಲಿ ಆಕೆ ಕೆಲವು ಮಹಿಳೆಯರ ಸ್ನೇಹ ಬೆಳೆಸಿ ಪ್ಯಾಡ್ ಧರಿಸುವ ವಿಚಾರದ ಬಗ್ಗೆ ತಿಳಿಸುತ್ತಿದ್ದರು. ಈ ಪುಸ್ತಕವು ಆಶ್ಚರ್ಯಕರ ಕ್ಷಣಗಳಲ್ಲಿ ಒಂದಾಗಿದ್ದು, ನೀವು ಆಧ್ಯಾತ್ಮಿಕ ಮಟ್ಟದಲ್ಲಿ ಪಠ್ಯವನ್ನು ನೇರವಾಗಿ ಸಂಪರ್ಕಿಸಬಹುದು.

English summary

The biggest lies about vagina you need stop believe

Chances are, if you have a vagina you have been told quite a few interesting and often incorrect things concerning its health and general upkeep. There are tons of vagina-related misinformation floating around — especially on the Internet, where breathless essays about the supposed merits of regular douching are shared in 140-character intervals on a regular basis. Over the years, I have come to the conclusion that a great deal of this misinformation is the result of sexism, and more specifically, fear of female sexuality.
Story first published: Friday, June 29, 2018, 9:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more