For Quick Alerts
ALLOW NOTIFICATIONS  
For Daily Alerts

ಸೈಲೆಂಟ್ ಕಿಲ್ಲರ್ 'ಶ್ವಾಸಕೋಶದ ಕ್ಯಾನ್ಸರ್‌'ನ ಲಕ್ಷಣಗಳು

By Hemanth
|

ಕ್ಯಾನ್ಸರ್ ಎನ್ನುವ ಮಾರಕ ಕಾಯಿಲೆ ಮಾರಣಾಂತಿಕ ಎನ್ನುವುದು ಎಷ್ಟು ನಿಜವೋ, ಅದೇ ರೀತಿ ಕೆಲವೊಂದು ಕ್ಯಾನ್ಸರ್ ಗಳು ತಮ್ಮ ಲಕ್ಷಣಗಳನ್ನು ಕೂಡ ತೋರಿಸುವುದಿಲ್ಲವೆನ್ನುವುದು ಕೂಡ ಅಷ್ಟೇ ವಾಸ್ತವ. ಅದರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗುವ 1/4 ಭಾಗದಷ್ಟು ಜನರಿಗೆ ಅದು ಪತ್ತೆಯಾಗುವ ತನಕ ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸಲ್ಲ. ಬೇರೆ ಯಾವುದೋ ಕಾರಣಕ್ಕಾಗಿ ಎದೆಯ ಎಕ್ಸ್ ರೇ ತೆಗೆದಾಗ ಇದು ಪತ್ತೆಯಾಗುವುದು. ಗಡ್ಡೆಯು ನೇರವಾಗಿ ಪರಿಣಾಮ ಬೀರುವುದು, ಮೆಟಾಸ್ಟ್ಯಾಟಿಕ್ ಗೆಡ್ಡೆಗಳು ದೇಹದ ಬೇರೆ ಭಾಗದಲ್ಲಿ ಪರಿಣಾಮ ಬೀರುವುದು, ಹಾರ್ಮೋನು ವೈಪರಿತ್ಯ ಹೀಗೆ ಇನ್ನಿತರ ಕೆಲವು ಲಕ್ಷಣಗಳನ್ನು ತೋರಿಸಬಹುದು.

ಶ್ವಾಸಕೋಶದ ಕ್ಯಾನ್ಸರ್ ನ ಕೆಲವು ಆರಂಭಿಕ ಲಕ್ಷಣಗಳೆಂದರೆ ಕಫ, ಕೆಮ್ಮಿನೊಂದಿಗೆ ರಕ್ತ ಬರುವುದು, ಎದೆನೋವು ಮತ್ತು ಉಸಿರಾಟದ ತೊಂದರೆ. ಶ್ವಾಸಕೋಶದ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳು

common symptoms of lung cancer

ಕೆಮ್ಮು ನಿಲ್ಲುವುದೇ ಇಲ್ಲ!

ವರ್ಷದ ಯಾವುದೇ ಸಮಯದಲ್ಲಿ ಪ್ರತಿಯೊಬ್ಬರಿಗೂ ಕೆಮ್ಮು ಕಾಡುತ್ತದೆ. ಆದರೆ ಕೆಲವೇ ದಿನಗಳಲ್ಲಿ ಇದು ಗುಣವಾಗುತ್ತದೆ. ಆದ್ಯಾಗೂ ಇದು ಒಂದು ವಾರದಿಂದ ಹೆಚ್ಚು ಸಮಯ ಇದ್ದರೆ ಮತ್ತು ಅತಿಯಾದ ಚಳಿಯಿರುವ ಚಳಿಗಾಲದಂತೆ ನಿಮಗೆ ಶೀತವಾದರೆ ಇದು ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣವಾಗಿರಬಹುದು.

ಉಸಿರಾಟದ ಸಮಸ್ಯೆ

ದೇಹದ ಕೆಲವೊಂದು ಭಾಗಗಳು ನೋಯುವುದು ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣವಾಗಿರಬಹುದು. ಎದೆ, ಭುಜಗಳು, ಬೆನ್ನು ಮತ್ತು ಕೈಗಳಲ್ಲಿ ನೋವು ಇದರಲ್ಲಿ ಪ್ರಮುಖವಾಗಿದೆ. ದೇಹದಲ್ಲಿ ಉಸಿರಾಟದ ಸಮಸ್ಯೆ ಉಂಟಾಗುವ ಕಾರಣ ಈ ರೀತಿಯಾಗುತ್ತದೆ. ಇದರಿಂದಾಗಿ ದೇಹದಲ್ಲಿನ ನರಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

ಉಬ್ಬಸದ ಅಸಸ್ಯೆ ಕಾಡಬಹುದು

ನಿದ್ದೆಯ ವೇಳೆ ವಿಸಿಲ್ ಹಾಕುವುದೆಂದು ಕರೆಯಲ್ಪಡುವ ಇದು ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಇದನ್ನು ನಿದ್ರೆಯ ಸಮಸ್ಯೆಯೆಂದು ಸುಲಭವಾಗಿ ತಪ್ಪುತಿಳಿದುಕೊಂಡಿಬಹುದು. ಆದಾಗ್ಯೂ ಈ ಪರಿಸ್ಥಿತಿಗೆ ಚಿಕಿತ್ಸೆ ಸಾಧ್ಯವಾಗದಿದ್ದರೆ ಮತ್ತು ಚಿಕಿತ್ಸೆ ನೀಡಿದ ಬಳಿಕವೂ ಮತ್ತೆ ಕಾಡಿದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಸೂಕ್ತ.

* ಧೂಮಪಾನಿಗಳಲ್ಲಿ ಅಥವಾ ಹಿಂದೆ ಧೂಮಪಾನ ಮಾಡುತ್ತಿದ್ದವರಲ್ಲಿ ಹೊಸ ಕಫವು ಕಾಣಿಸಿಕೊಳ್ಳುವುದು ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿರಲೂ ಬಹುದು.
* ಕಫದ ಸಮಸ್ಯೆಯು ನಿವಾರಣೆಯಾಗದೆ ವಿಪರೀತವಾದರೆ ಆಗ ವೈದ್ಯರಿಗೆ ತೋರಿಸಿ.
* ಕೆಮ್ಮುವಾಗ ರಕ್ತ ಬರುವುದು ಶ್ವಾಸಕೋಶದ ಕ್ಯಾನ್ಸರ್ ಇರುವವರಲ್ಲಿ ಹೆಚ್ಚಾಗಿ ಕಂಡುಬರುವುದು. ಕೆಮ್ಮುವಾಗ ಸ್ವಲ್ಪ ರಕ್ತ ಬಂದರೂ ಇದನ್ನು ಪರೀಕ್ಷಿಸಿಕೊಳ್ಳಿ.
* ಶ್ವಾಸಕೋಶದ ಕ್ಯಾನ್ಸರ್ ಇರುವಂತಹ 1/4 ಭಾಗದಷ್ಟು ಜನರಿಗೆ ಎದೆನೋವಿನ ಸಮಸ್ಯೆಯು ಇರುವುದು. ನೋವು ತುಂಬಾ ಲಘುವಾಗಿ ನಿರಂತರವಾಗಿರಬಹುದು.
* ಶ್ವಾಸಕೋಶದ ಭಾಗಗಳಿಗೆ ಸರಿಯಾಗಿ ಗಾಳಿಯ ಸರಬರಾಜು ಆಗದೆ ಇರುವಾಗ ಉಸಿರಾಟದ ಸಮಸ್ಯೆಯು ಕಾಡುವುದು. ಶ್ವಾಸಕೋಶದ ತುಂಬಾ ದ್ರವ ತುಂಬಿರುವುದು ಅಥವಾ ಗಡ್ಡೆ ಹರಡಿರುವುದು ಇದಕ್ಕೆ ಕಾರಣವಾಗಿರಬಹುದು.
* ಶೀನು ಬರುವುದು, ಮೂಗು ಕಟ್ಟಿದಂತೆ ಆಗುವುದು ಶ್ವಾಸಕೋಶದಲ್ಲಿ ಉರಿಯೂತ ಅಥವಾ ತಡೆಯ ಸೂಚನೆಗಳಾಗಿರಬಹುದು.
* ಪದೇ ಪದೇ ಉಸಿರಾಟದ ಸೋಂಕುಗಳಾದ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾ ಕಾಡುವುದು ಕೂಡ ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.

ಶ್ವಾಸಕೋಶದ ಆರೋಗ್ಯ-ಎಲ್ಲವೂ ನಮ್ಮ ಕೈಯಲ್ಲಿಯೇ ಇದೆ!

ಮೆಟಾಸ್ಟ್ಯಾಟಿಕ್ ಶ್ವಾಸಕೋಶದ ಗೆಡ್ಡೆಗಳು ಆ ಪ್ರದೇಶ ಮತ್ತು ಗಾತ್ರದ ಮೇಲೆ ಲಕ್ಷಣಗಳನ್ನು ತೋರಿಸುವುದು. 30-40 ಶೇ. ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ನ ಕೆಲವು ಲಕ್ಷಣಗಳು ಅಥವಾ ಮೆಟಾಸ್ಟ್ಯಾಟಿಕ್ ಕಾಯಿಲೆ ಲಕ್ಷಣಗಳು ಕಾಣಿಸುವುದು.

* ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿ ಲಿವರ್(ಯಕೃತ್), ಮೂತ್ರಜನಕಾಂಗದ ಗ್ರಂಥಿ, ಮೂಳೆಗಳು ಮತ್ತು ಮೆದುಳಿಗೆ ಹಬ್ಬುವುದು.
* ಮೆಟಾಸ್ಟ್ಯಾಟಿಕ್ ಶ್ವಾಸಕೋಶದ ಕ್ಯಾನ್ಸರ್ ಯಕೃತ್ ಗೆ ಭಾದಿಸಿದರೆ ಆಗ ಹಸಿವು ಕಡಿಮೆಯಾಗುವುದು, ಊಟ ಮಾಡಲು ಆರಂಭಿಸಿದ ಕೂಡಲೇ ಹೊಟ್ಟೆ ತುಂಬುವುದು ಮತ್ತು ಅನಿರೀಕ್ಷಿತ ತೂಕ ಕಳೆದುಕೊಳ್ಳಬಹುದು.
* ಮೆಟಾಸ್ಟ್ಯಾಟಿಕ್ ಶ್ವಾಸಕೋಶದ ಕ್ಯಾನ್ಸರ್ ಮೂತ್ರಜನಕಾಂಗದ ಗ್ರಂಥಿಯಲ್ಲಿ ಕಾಣಿಸಿಕೊಂಡರೂ ಯಾವುದೇ ಲಕ್ಷಣಗಳನ್ನು ತೋರಿಸಲ್ಲ.
*ಮೆಟಾಸ್ಟ್ಯಾಟಿಕ್ ವು ಮೂಳೆಗೆ ಬಂದಾಗ ಸಣ್ಣ ಕೋಶದ ಕ್ಯಾನ್ಸರ್ ಸಾಮಾನ್ಯ. ಆದರೆ ಇತರ ಶ್ವಾಸಕೋಶದ ಕ್ಯಾನ್ಸರ್ ನೊಂದಿಗೆ ಇದು ಕಂಡುಬರುವುದು. ಮೂಳೆಯಲ್ಲಿ ಇದು ಕಾಣಿಸಿಕೊಂಡಾಗ ಬೆನ್ನುಮೂಳೆಯಲ್ಲಿ ನೋವು, ತೊಡೆಸಂಧಿನ ದೊಡ್ಡ ಮೂಳೆ, ಶ್ರೋಣಿಯ ಮೂಳೆಗಳು ಮತ್ತು ಕಿಬ್ಬೊಟ್ಟೆಯ ಮೂಳೆಗಳಲ್ಲಿ ನೋವು ಕಂಡುಬರುವುದು.

ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹೇಗೆ?

ಶ್ವಾಸಕೋಶದ ಕ್ಯಾನ್ಸರ್ ನ ಕೆಲವು ಲಕ್ಷಣಗಳನ್ನು ತಿಳಿದುಕೊಂಡ ಬಳಿಕ ವೈದ್ಯರು ಇದನ್ನು ವಿಂಗಡಿಸಿಕೊಂಡು ಚಿಕಿತ್ಸೆ ನೀಡುವರು. ವೈದ್ಯರು ಇದರ ಲಕ್ಷಣಗಳುಗಳು, ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರೆ ಅದರ ವಿವರ ಕೇಳುವರು. ಧೂಮಪಾನ, ಕೆಲಸದ ಇತಿಹಾಸ ಮತ್ತು ಜೀವನಶೈಲಿ, ಇತರ ಔಷಧಿಗಳಿದ್ದರೆ ಅದರ ಮಾಹಿತಿ ಪಡೆಯುವರು.
ಕೆಮ್ಮಿನಲ್ಲಿ ರಕ್ತ ತೀವ್ರವಾಗಿ ಕಾಣಿಸದೆ ಇದ್ದರೆ ಆಗ ಉಸಿರಾಟದ ಲಕ್ಷಣಗಳನ್ನು ತಿಳಿಯಲು ಎದೆಯ ಎಕ್ಸ್ ರೇ ಮಾಡಲಾಗುತ್ತದೆ.

ಎಕ್ಸ್ ರೇಯು ಅಸಹಜತೆ ತೋರಿಸಬಹುದು ಅಥವಾ ತೋರಿಸದೆ ಇರಬಹುದು.
ಶ್ವಾಸಕೋಶದ ಕ್ಯಾನ್ಸರ್ ನಿಂದ ಕಂಡುಬರುವಂತಹ ಕೆಲವು ಅಸಾಮಾನ್ಯತೆಗಳೆಂದರೆ ಸಣ್ಣ ಗಂಟು ಅಥವಾ ಗಂಟು ಅಥವಾ ದೊಡ್ಡ ದ್ರವರಾಶಿ ಇರುವುದು.
ಎದೆಯ ಎಕ್ಸ್ ರೇಯಿಂದ ಕಂಡುಬರುವ ಎಲ್ಲಾ ರೀತಿಯ ಅಸಹಜತೆಗಳನ್ನು ಕ್ಯಾನ್ಸರ್ ಎಂದು ಪರಿಗಣಿಸಲು ಸಾಧ್ಯವಾಗದು. ಉದಾಹರಣೆಗೆ ಕೆಲವು ಜನರಲ್ಲಿ ಗುರುತು ಮತ್ತು ಶ್ವಾಸಕೋಶದಲ್ಲಿ ಕ್ಯಾಲ್ಸಿಯಂ ಜಮೆಯಾಗಬಹುದು. ಇದು ಎಕ್ಸ್ ರೇಯಲ್ಲಿ ಗಡೆಯಂತೆ ಕಾಣಿಸಬಹುದು.

ಎದೆಯ ಸಿಟಿ ಅಥವಾ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಅತೀ ಅಗತ್ಯ

* ಲಕ್ಷಣಗಳು ತೀವ್ರವಾಗಿದ್ದರೆ ಆಗ ಎಕ್ಸ್ ರೇ ಬದಲಿಗೆ ಸಿಟಿ ಸ್ಕ್ಯಾನ್ ಅಥವಾ ಎಂಆರ್ ಐ ಮಾಡಿಸಿಕೊಳ್ಳಬೇಕು.
* ಸಿಟಿ ಅಥವಾ ಎಂಆರ್ ಐ ಸ್ಕ್ಯಾನಿಂಗ್ ನಲ್ಲಿ ಎಕ್ಸ್ ರೇಗಿಂತ ಹೆಚ್ಚಿನ ಮಾಹಿತಿಯು ಸಿಗುವುದು ಮತ್ತು ಶ್ವಾಸಕೋಶವನ್ನು ಮೂರು ಕೋನದಿಂದ ನೋಡಬಹುದು.
* ಈ ಪರೀಕ್ಷೆಯಿಂದ ಕ್ಯಾನ್ಸರ್ ನ ಹಂತ ಮತ್ತು ಗಡ್ಡೆಯ ಗಾತ್ರ ಪತ್ತೆ ಮಾಡಲು ಸಾಧ್ಯವಾಗುವುದು.
* ಸಿಟಿ ಅಥವಾ ಎಂಆರ್ ಐಯಿಂದ ದೇಹದ ಬೇರೆ ಭಾಗಗಳಿಗೆ ಕ್ಯಾನ್ಸರ್ ಗಡ್ಡೆಗಳು ಹಬ್ಬಿದೆಯಾ ಎಂದು ತಿಳಿಯಬಹುದು.

ಎಕ್ಸ್ ರೇ ಅಥವಾ ಸ್ಕ್ಯಾನಿಂಗ್ ನಲ್ಲಿ ಗಡ್ಡೆ ಇರುವುದು ಪತ್ತೆಯಾದರೆ ಆಗ ಅವರು ರೋಗನಿರ್ಣಯ ವಿಧಾನಕ್ಕೆ ಒಳಪಡಬೇಕು. ರೋಗನಿರ್ಣಯ ವೇಳೆ ಕೋಶಗಳ ವಿಶ್ಲೇಷಣೆ ಮಾಡಲಾಗುತ್ತದೆ. ಇದರಿಂದ ಕ್ಯಾನ್ಸರ್ ನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗುವುದು.
* ಕಫ ಸಂಗ್ರಹಿಸಿ ಪರೀಕ್ಷೆ, ಗಡ್ಡೆಯ ಸಣ್ಣ ತುಂಡು ತೆಗೆದು (ಬಯಾಪ್ಸಿ) ಮತ್ತು ಶ್ವಾಸಕೋಶದ ಸುತ್ತಲಿನ ದ್ರವದ ಪ್ರಮಾಣವನ್ನು ಪರೀಕ್ಷೆ ಮಾಡಲಾಗುವುದು.
* ಸಂಗ್ರಹಿಸಿಕೊಂಡ ಕೋಶಗಳನ್ನು ಸೂಕ್ಷ್ಮದರ್ಶಕದಡಿಯಲ್ಲಿ ಪರಿಶೀಲಿಸಲಾಗುವುದು. ಜೀವಕೋಶ ಮತ್ತು ಅಂಗಾಂಶ ಪ್ರಕಾರಗಳನ್ನು ಪರಿಣಿತ ವೈದ್ಯರು ನೋಡುವ ಮೂಲಕ ಕಾಯಿಲೆ ಪತ್ತೆಹಚ್ಚುವರು.
* ಈ ಕೋಶಗಳನ್ನು ಪಡೆಯಲು ಬೇರೆ ರೀತಿಯ ವಿಧಾನಗಳು ಇವೆ.

English summary

Symptoms of Lung Cancer That Will Surprise You!

Up to one-fourth of all people with lung cancer may have no symptoms when the cancer is diagnosed. These cancers usually are identified incidentally when a chest X-ray is performed for another reason. The majority of people, however, develop symptoms. The symptoms are due to direct effects of the primary tumor, to effects of metastatic tumors in other parts of the body, or to disturbances of hormones, blood, or other systems caused by the cancer. Symptoms of primary lung cancers include cough, coughing up blood, chest pain, and shortness of breath.
X
Desktop Bottom Promotion