For Quick Alerts
ALLOW NOTIFICATIONS  
For Daily Alerts

ಹಲ್ಲುಗಳ ಆರೋಗ್ಯಕ್ಕೆ ದಂತವೈದ್ಯರು ಹೇಳುವ ಏಳು ಸಲಹೆಗಳು

|

ಗಂಟು ನೋವು, ತಲೆನೋವು ಹೀಗೆ ದೇಹದಲ್ಲಿ ಏನೇ ನೋವು ಕಾಣಿಸಿಕೊಂಡರೂ ಒಂದೆರಡು ದಿನದಲ್ಲಿ ಇದು ಕಡಿಮೆಯಾಗದೆ ಇದ್ದರೆ ಆಗ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವಿರಿ. ಜೀವನಶೈಲಿಯಲ್ಲೂ ಕೆಲವು ಬದಲಾವಣೆ ಮಾಡಬೇಕೆಂದು ನಿಮಗೆ ಅನಿಸಿದರೆ ಆಗ ಅದನ್ನು ಕೂಡ ಮಾಡುವಿರಿ. ಯಾವುದೇ ಅಂಗವಾದರೂ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ನಮಗೆಲ್ಲರಿಗೂ ಅಭ್ಯಾಸವಾಗಿದೆ. ಆದರೆ ಬಾಯಿಯ ವಿಚಾರಕ್ಕೆ ಬಂದಾಗ ಮಾತ್ರ ಹೆಚ್ಚಿನವರು ಇದರ ಬಗ್ಗೆ ಕಾಳಜಿ ವಹಿಸುವುದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಬಾಯಿಯಲ್ಲಿರುವಂತಹ ಹಲ್ಲುಗಳು ನಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಆದರೆ ಹೆಚ್ಚಿನವರ ಪ್ರಕಾರ ಆಹಾರ ಜಗಿಯಲು ಮತ್ತು ಮುಖದ ಸೌಂದರ್ಯಕ್ಕಾಗಿ ಮಾತ್ರ ಹಲ್ಲುಗಳು ಅಗತ್ಯವೆಂದು ಭಾವಿಸಿರುವರು. ಹಲ್ಲುಗಳು ಹಾಗೂ ಬಾಯಿಯ ಆರೋಗ್ಯವು ನಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬಿರುವುದು. ಇದರಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ದಂತವೈದ್ಯರು ಹೇಳಿರುವಂತಹ ಕೆಲವೊಂದು ಸಲಹೆಗಳನ್ನು ಈ ಲೇಖನದಲ್ಲಿ ಬೋಲ್ಡ್ ಸ್ಕೈ ನಿಮಗೋಸ್ಕರ ಸಾದರಪಡಿಸುತ್ತಿದೆ. ಇದನ್ನು ಓದಿಕೊಂಡು ನಿಮ್ಮ ದಂತ ಆರೋಗ್ಯವನ್ನು ಸುಧಾರಿಸಿಕೊಳ್ಳಿ.

1. ಕೇವಲ ಹಲ್ಲುಗಳಿಗೆ ಮಾತ್ರ ಬ್ರಶ್ ಮಾಡಬೇಡಿ

1. ಕೇವಲ ಹಲ್ಲುಗಳಿಗೆ ಮಾತ್ರ ಬ್ರಶ್ ಮಾಡಬೇಡಿ

ದಂತ ಹಾಗೂ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನದಲ್ಲಿ 2-3 ಸಲ ಹಲ್ಲುಜ್ಜುವುದು ಅತೀ ಅಗತ್ಯ. ಅದರಲ್ಲೂ ರಾತ್ರಿ ಮಲಗುವ ಮೊದಲು ಒಂದು ಸಲ ಹಲ್ಲುಜ್ಜಲೇ ಬೇಕು. ಆದರೆ ಹೆಚ್ಚಿನವರು ಕೇವಲ ಹಲ್ಲುಗಳಿಗೆ ಮಾತ್ರ ಬ್ರಶ್ ಮಾಡಿ, ಬಾಯಿಯ ಉಳಿದ ಭಾಗಗಳನ್ನು ಕಡೆಗಣಿಸುವರು. ಬಾಯಿಲ್ಲಿ ಪ್ರಮುಖವಾಗಿ ನಾಲಗೆ ಕೂಡ ಒಂದಾಗಿದೆ. ನಾಲಗೆಯಲ್ಲಿ ಮೆತ್ತಿಕೊಂಡಿರುವ ಪದರ ತೆಗೆಯಲು ಅದಕ್ಕೆ ಬ್ರಶ್ ಮಾಡಬೇಕು ಅಥವಾ ಟಂಗ್ ಕ್ಲೀನರ್ ಬಳಸಬೇಕು. ಬಿಳಿ ಪದರವು ಅನಾರೋಗ್ಯ ಉಂಟು ಮಾಡಬಹುದು ಎಂದು ದಂತವೈದ್ಯರು ಹೇಳುತ್ತಾರೆ. ಒಸಡುಗಳನ್ನು ಕೂಡ ಶುಚಿಗೊಳಿಸಬೇಕು.

2. ಬಾಯಿಯ ಆರೋಗ್ಯವು ಹಲವು ಕಾಯಿಲೆಗಳಿಗೆ ಸಂಬಂಧಪಟ್ಟಿದೆ

2. ಬಾಯಿಯ ಆರೋಗ್ಯವು ಹಲವು ಕಾಯಿಲೆಗಳಿಗೆ ಸಂಬಂಧಪಟ್ಟಿದೆ

ಬಾಯಿಯ ಆರೋಗ್ಯವು ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳದೆ ಇದ್ದರೆ ಅದು ಕೇವಲ ದಂತಕುಳಿಗೆ ಮಾತ್ರ ಕಾರಣವಾಗುವುದಲ್ಲದೆ, ಹಲವಾರು ಕಾಯಿಲೆಗಳನ್ನು ಉಂಟು ಮಾಡಬಹುದು. ದಂತುಕುಳಿ ಹಾಗೂ ಒಸಡಿನ ಕಾಯಿಲೆಯು ಹೃದಯದ ಸಮಸ್ಯೆ ಮತ್ತು ಅಲ್ಝೈಮರ್ ಕಾಯಿಲೆಗೆ ಕಾರಣವಾಗಬಹುದು. ಯಾಕೆಂದರೆ ಬಾಯಿಯಲ್ಲಿನ ನರಗಳು ನೇರವಾಗಿ ಹೃದಯ ಮತ್ತು ಮೆದುಳಿಗೆ ಸಂಪರ್ಕ ಪಡೆದಿದೆ. ಸೋಂಕನ್ನು ಹೊಂದಿರುವ ರಕ್ತವು ಈ ಎರಡು ಅಂಗಗಳಿಗೆ ತಲುಪಬಹುದು.

3. ಹಲ್ಲುಗಳನ್ನು ಆಗಾಗ ಶುಚಿಗೊಳಿಸುತ್ತಿರಿ

3. ಹಲ್ಲುಗಳನ್ನು ಆಗಾಗ ಶುಚಿಗೊಳಿಸುತ್ತಿರಿ

ಹಲ್ಲುಗಳನ್ನು ಶುಚಿಗೊಳಿಸಲು ನೀವು ಕೊನೆಯ ಸಲ ದಂತವೈದ್ಯರ ಬಳಿಗೆ ಹೋಗಿರುವುದು ಯಾವಾಗ? ಹಲವಾರು ತಿಂಗಳುಗಳು ಆಗಿದೆ ಎಂದು ನಿಮ್ಮ ಉತ್ತರವಾಗಿದ್ದರೆ, ಆಗಾದರೆ ಖಂಡಿತವಾಗಿಯೂ ನಿಮ್ಮ ಹಲ್ಲಿನ ಆರೋಗ್ಯವು ಅಪಾಯದಲ್ಲಿದೆ ಎಂದು ಹೇಳಬಹುದು. ಮನೆಯಲ್ಲಿ ನಾವು ಬ್ರಶ್ ಮಾಡಿಕೊಂಡು ಹಲ್ಲುಗಳನ್ನು ಶುಚಿಯಾಗಿಡಬಹುದು. ಆದರೆ ನಿಯಮಿತವಾಗಿ ವೃತ್ತಿಪರ ದಂತವೈದ್ಯರಿಂದ ಹಲ್ಲುಗಳನ್ನು ಸ್ವಚ್ಛ ಮಾಡಿಸಿಕೊಳ್ಳುತ್ತಾ ಇರಬೇಕು. ಅವರಲ್ಲಿ ಹಲ್ಲುಗಳನ್ನು ಸ್ವಚ್ಛ ಮಾಡುವಂತಹ ಸಾಧನಗಳು ಇವೆ ಮತ್ತು ಬ್ರಶ್ ಗಳು ತಲುಪದೇ ಇರುವಂತಹ ಜಾಗಗಳಲ್ಲಿ ಅಡಗಿರುವಂತಹ ಬ್ಯಾಕ್ಟೀರಿಯಾವನ್ನು ತೆಗೆಯುವರು. ಇದರಿಂದ ಹಲ್ಲಿನ ಸಮಸ್ಯೆಯು ಬರುವುದಿಲ್ಲ.

4. ಬ್ರಶ್ ಮಾಡಿದ ಬಳಿಕ ತೊಳೆಯದೆ ಬೇಡಿ

4. ಬ್ರಶ್ ಮಾಡಿದ ಬಳಿಕ ತೊಳೆಯದೆ ಬೇಡಿ

ಹೆಚ್ಚಾಗಿ ನಾವೆಲ್ಲರು ಬ್ರಶ್ ಮಾಡಿದ ತಕ್ಷಣ ಬಾಯಿಗೆ ನೀರು ಹಾಕಿಕೊಂಡು ತೊಳೆಯುತ್ತೇವೆ ಅಲ್ಲವೇ? ಸ್ವಲ್ಪ ಪ್ರಮಾಣದಲ್ಲಿ ಟೂಥ್ ಪೇಸ್ಟ್ ಹಾಕಿಕೊಂಡು ಬ್ರಶ್ ಮಾಡಿ, ಬಳಿಕ ತೊಳೆಯದೆ ಹಾಗೆ ಬಿಟ್ಟರೆ ಆಗ ಬಾಯಿಯಲ್ಲಿರುವ ಹೆಚ್ಚಿನ ಕೀಟಾಣುಗಳು ಹಾಗೂ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಾಧ್ಯವಾಗುವುದು. ಮೌಥ್ ವಾಶ್ ಹಾಕಿಕೊಂಡ ಬಳಿಕ ಬಾಯಿಗೆ ನೀರು ಹಾಕಿ ತೊಳೆಯಬೇಕಿಲ್ಲ.

5. ಸಕ್ಕರೆ ಮುಕ್ತ ಪಾನೀಯಗಳು ಹಲ್ಲುಗಳಿಗೆ ಹಾನಿ ಉಂಟುಮಾಡಬಹುದು

5. ಸಕ್ಕರೆ ಮುಕ್ತ ಪಾನೀಯಗಳು ಹಲ್ಲುಗಳಿಗೆ ಹಾನಿ ಉಂಟುಮಾಡಬಹುದು

ಸಕ್ಕರೆಯುಕ್ತ ಆಹಾರ ಮತ್ತು ಪಾನೀಯಗಳು ಹಲ್ಲುಗಳಿಗೆ ಹಾನಿಯ ಸಹಿತ ನಮಗೆ ಹಲವಾರು ರೀತಿಯ ಅನಾರೋಗ್ಯಗಳನ್ನು ಉಂಟು ಮಾಡುತ್ತದೆ ಎಂದು ನಮಗೆ ತಿಳಿದಿರುವ ವಿಚಾರವಾಗಿದೆ. ಕೆಲವೊಂದು ಸಕ್ಕರೆ ಮುಕ್ತವಾಗಿರುವ ಪಾನೀಯಗಳು, ಅದರಲ್ಲೂ ಸೋಡಾಗಳು ದಂತಕುಳಿ ಉಂಟು ಮಾಡಬಹುದು. ಇಂತಹ ಹೆಚ್ಚಿನ ಪಾನೀಯಗಳಲ್ಲಿ ಕಾರ್ಬೋನಿಕ್ ಆಮ್ಲವಿದ್ದು, ನಿಯಮಿತವಾಗಿ ಇದರ ಸೇವನೆ ಮಾಡಿದರೆ ಆಗ ದಂತಕವಚಕ್ಕೆ ಇದು ಹಾನಿಯುಂಟು ಮಾಡಬಹುದು.

6. ಆಲ್ಕೋಹಾಲ್ ಕಡೆಗಣಿಸಿ

6. ಆಲ್ಕೋಹಾಲ್ ಕಡೆಗಣಿಸಿ

ನಿಯಮಿತವಾಗಿ ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡಿದರೆ ಅದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಆಲ್ಕೋಹಾಲ್ ನಿಂದ ಆಗುವ ಹಾನಿಗೆ ಮತ್ತೊಂದು ಸೇರ್ಪಡೆಯು ಇಲ್ಲಿದೆ. ಅಧ್ಯಯನಗಳ ಪ್ರಕಾರ ಆಲ್ಕೋಹಾಲ್ ಸೇವನೆ ಮಾಡಿದರೆ, ಅದರಲ್ಲೂ ರಾತ್ರಿ ವೇಳೆ ಸೇವಿಸಿದರೆ ಆಗ ದಂತಕುಳಿ ಮತ್ತು ಒಸಡಿನ ಸಮಸ್ಯೆ ಬರುವುದು. ಆಲ್ಕೋಹಾಲ್ ಹುದುಗಿಸಿದ ಪಾನೀಯವಾಗಿರುವ ಕಾರಣದಿಂದ ಇದು ಬ್ಯಾಕ್ಟೀರಿಯಾ ನಿರ್ಮಾಣ ಮಾಡುವುದು ಮತ್ತು ದಂತಕುಳಿ ಉಂಟು ಮಾಡಬಹುದು.

7. ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ

7. ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ

ಹಲ್ಲುಗಳನ್ನು ಶುಚಿಗೊಳಿಸಲು ನಾವು ದಂತವೈದ್ಯರಲ್ಲಿಗೆ ಹೋಗುವುದೇ ಇಲ್ಲ. ಹಲ್ಲಿನಲ್ಲಿ ನೋವು ಅಥವಾ ಬೇರೆ ಏನಾದರೂ ಸಮಸ್ಯೆ ಕಂಡುಬಂದರೆ ಮಾತ್ರ ನಾವು ದಂತವೈದ್ಯರ ಬಳಿಗೆ ಹೋಗುವುದು. ಹಲ್ಲು ನೋವಿಲ್ಲದೆ ಇದ್ದರೆ ನಿಯಮಿತವಾಗಿ ದಂತಪರೀಕ್ಷೆ ಮಾಡಿಕೊಳ್ಳುತ್ತಿದ್ದರೆ ಆಗ ದಂತಕುಳಿ, ಒಸಡಿನ ಸಮಸ್ಯೆ ಮತ್ತು ಬಾಯಿಯ ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದು ಎನ್ನುವುದು ದಂತ ವೈದ್ಯರ ಸಲಹೆಯಾಗಿದೆ. ಅಲ್ಲದೆಕ್ಯಾಲ್ಸಿಯಂ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ತಿನ್ನಿ. ಕರಿದ ತಿಂಡಿಗಳಿಂದ ದೂರವಿರಿ. ಅನಾರೋಗ್ಯಕರ ಆಹಾರದ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಕೆಲವರು ತರಕಾರಿ ಸಲಾಡ್ ತಿಂದ ಬಳಿಕ ತಂಪು ಪಾನೀಯವನ್ನು ಕುಡಿಯುತ್ತಾರೆ. ಇದು ಸರಿಯಲ್ಲ, ಸಿಹಿಯಿಂದ ಆದಷ್ಟು ದೂರವಿರಿ. ಊಟವಾದ ಬಳಿಕ ತಂಪು ಪಾನೀಯ ಬದಲು ನೀರು ಕುಡಿಯಿರಿ.

English summary

Surprising Tips From Dentists For Better Dental Health!

when it comes to our oral health, or dental health, many of us neglect it, as we do not link our dental health to our overall health. Many of us are still under the impression that our teeth are only there to help us break down food and give structure to our face. However, the health of the teeth and oral health in general have an impact on your overall health as well! If your teeth are not healthy, you could start to experience a number of problems such as gum diseases, cavities, etc., which could create a hassle. So, it is very important to make an effort to maintain good oral health. Here are a few tips, as told by dentists, to help improve and maintain good dental health:
X
Desktop Bottom Promotion