For Quick Alerts
ALLOW NOTIFICATIONS  
For Daily Alerts

ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದೀರಾ? ಇದೇ ಕಾರಣವಿರಬಹುದು...

By Deepu
|

ಹೀಗೊಂದು ಸಂದರ್ಭವನ್ನು ಊಹಿಸಿಕೊಳ್ಳಿ. ತುಂಬಾ ಮುಖ್ಯವಾದ ಸಭೆಯೊಂದರಲ್ಲಿ ನೀವು ಭಾಗಿಯಾಗಬೇಕಾಗಿದ್ದು ಇದಕ್ಕೆ ನಿಸರ್ಗದ ಕರೆ ತೊಂದರೆ ಕೊಡಬಾರದೆಂದು ಮೊದಲೇ ಮೂತ್ರ ವಿಸರ್ಜಿಸಿ ಸಭೆಯಲ್ಲಿ ಭಾಗಿಯಾಗುತ್ತೀರಿ. ಆದರೆ ಸುಮಾರು ಇಪ್ಪತ್ತು ನಿಮಿಷಗಳಾದ ಬಳಿಕ ಮತ್ತೊಮ್ಮೆ ಮೂತ್ರವಿಸರ್ಜನೆಗೆ ಅವಸರವಾಗುತ್ತದೆ. ಈಗ ಸಭೆಯನ್ನು ನಡುವಲ್ಲಿ ಬಿಟ್ಟು ಬರುವಂತೆಯೂ ಇಲ್ಲ, ನಿಸರ್ಗದ ಕರೆಯನ್ನು ಅಲಕ್ಷ್ಯಗೊಳಿಸಲೂ ಸಾಧ್ಯವಿಲ್ಲ. ಈ ಸಂದರ್ಭ ತುಂಬಾ ಮುಜುಗರಕ್ಕೀಡು ಮಾಡುತ್ತದೆ ಅಲ್ಲವೇ? ಒಂದು ವೇಳೆ ನಿಮಗೂ ಹೀಗೆ ಸತತವಾಗಿ ಮೂತ್ರವಿಸರ್ಜನೆಗೆ ಅವಸರವಾಗುತ್ತಾ ಇದ್ದರೆ ಇದಕ್ಕೆ ಇದು ಕಾಳಜಿವಹಿಸಬೇಕಾದ ವಿಷಯವೇ ಆಗಿದೆ.

ದಿನಕ್ಕೆ ಎರಡು ಲೀಟರ್ ನೀರು ಕುಡಿಯಲೇಬೇಕಾಗಿರುವುದು ಆರೋಗ್ಯಕ್ಕೆ ಅಗತ್ಯ ಎಂದು ನಾವೆಲ್ಲಾ ಅರಿತೇ ಇದ್ದೇವೆ. ನಮ್ಮ ಮೂತ್ರಕೋಶದ ಸಾಮರ್ಥ್ಯ ಇಷ್ಟೊಂದಿರದ ಕಾರಣ ಇದಲ್ಲಿ ಸಂಗ್ರಹವಾದ ದ್ರವ ಒಂದು ಹಂತಕ್ಕೆ ಬಂದ ಬಳಿಕ ಇದನ್ನು ಖಾಲಿ ಮಾಡಲು ಮೆದುಳು ಸೂಚನೆ ನೀಡುತ್ತದೆ. ಹಾಗಾಗಿ ನಾವು ದಿನಕ್ಕೆ ಆರರಿಂದ ಎಂಟು ಬಾರಿ ಮೂತ್ರ ವಿಸರ್ಜನೆಗೆ ಹೋಗುವುದು ಸಮಾನ್ಯ. ಇದು ಒಂದು ವೇಳೆ ಎಂಟರಿಂದ ಹತ್ತು ಬಾರಿಯಾದರೂ ಚಿಂತೆಯಿಲ್ಲ, ಇದಕ್ಕೆ ಆ ದಿನ ಕುಡಿದ ದ್ರವಾಹಾರ ಅಥವಾ ನೀರು ಹೆಚ್ಚಾಗಿದ್ದುದೂ ಕಾರಣವಾಗಿರಬಹುದು.

ಪುರುಷರಿಗೆ ಕಾಡುವ ಮೂತ್ರದ ಸಮಸ್ಯೆ! ಇಲ್ಲಿದೆ ನೋಡಿ ಪರಿಹಾರ...

ಆದರೆ ಎರಡು ಬಾರಿಯ ವಿಸರ್ಜನೆಗಳ ನಡುವೆ ತುಂಬಾ ಕಡಿಮೆ ಸಮಯಾವಾಕಾಶವಿದ್ದರೆ ಇದು ಕೆಲವು ಕಾಯಿಲೆಯ ಸೂಚನೆಯಾಗಿರಬಹುದು. ಕೆಲವೊಮ್ಮೆ ನಾವು ಈ ಸಂಗತಿಗಳನ್ನು ಅಲಕ್ಷಿಸುತ್ತೇವೆ. ನೀರು ಹೆಚ್ಚು ಕುಡಿದದುಕ್ಕೇನೋ ಹೆಚ್ಚಾಗಿ ಅವಸರವಾಗುತ್ತಿದೆ ಎಂದು ನಮಗೆ ನಾವೇ ಸಮಾಧಾನ ಹೇಳಿಕೊಳ್ಳಬಹುದು. ಆದರೆ ಕಡಿಮೆ ಸಮಯದ ಅಂತರದಲ್ಲಿ ಮೂತ್ರಕ್ಕೆ ಅವಸರವಾಗುವುದು ಯಾವುದೋ ತೊಂದರೆಯ ಸ್ಪಷ್ಟ ಸೂಚನೆಯಾಗಿರಬಹುದು ಹಾಗೂ ವೈದ್ಯಕೀಯ ನೆರವು ಅಗತ್ಯ. ಬನ್ನಿ, ಈ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಕೆಲವು ಮಾಹಿತಿಗಳನ್ನು ನೋಡೋಣ....

ಅತಿ ಹೆಚ್ಚಿನ ದ್ರವಾಹಾರ

ಅತಿ ಹೆಚ್ಚಿನ ದ್ರವಾಹಾರ

ದಿನಕ್ಕೆ ಎರಡು ಲೀಟರ್ ನೀರು ಆರೋಗ್ಯಕ್ಕೆ ಅಗತ್ಯ, ಸರಿ. ಅತಿ ಹೆಚ್ಚಾದರೆ ಅಮೃತವೂ ವಿಷ ಎಂಬಂತೆ ನೀರನ್ನು ಸಹಾ ಅಗತ್ಯಕ್ಕೂ ಹೆಚ್ಚೇ ಕುಡಿದರೂ ಆರೋಗ್ಯಕ್ಕೆ ಕೆಟ್ಟದ್ದೇ ಆಗಿದೆ. ಎರಡು ಲೀಟರ್ ನೀರು ಎಂದರೆ ಇದರಲ್ಲಿ ನಾವು ನಿತ್ಯ ಕುಡಿಯುವ ಟೀ, ಕಾಫಿ, ಜ್ಯೂಸ್ ಮೊದಲಾದ ಎಲ್ಲವೂ ಸೇರಿಯೇ ಎರಡು ಲೀಟರ್ ಆಗಬೇಕು. ಹಾಗಾಗಿ ಇತರ ಪಾನೀಯಗಳ ಜೊತೆಗೇ ನೀರನ್ನೂ ಹೆಚ್ಚೇ ಕುಡಿದರೆ ಸ್ವಾಭಾವಿಕವಾಗಿ ಮೂತ್ರವೂ ಹೆಚ್ಚೇ ಆಗಿರುತ್ತದೆ. ಒಂದು ವೇಳೆ ಆಯಾ ದಿನ ಮಾತ್ರವೇ ಇದು ಕಂಡು ಬಂದರೆ ಇದಕ್ಕೆ ಆತಂಕಪಡುವ ಕಾರಣವಿಲ್ಲ. ಆದ್ದರಿಂದ ರೋಗಗಳಿಂದ ದೂರವಿರಲು ನೀವು ಅಗತ್ಯವಿದ್ದಷ್ಟು ನೀರನ್ನು ಮಾತ್ರ ಕಡ್ಡಾಯವಾಗಿ ಕುಡಿಯುತ್ತಿದ್ದೀರೋ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಮೂತ್ರಕೋಶದ ಗಾತ್ರ ಚಿಕ್ಕದಾಗಿರುವುದು

ಮೂತ್ರಕೋಶದ ಗಾತ್ರ ಚಿಕ್ಕದಾಗಿರುವುದು

ಮನುಷ್ಯರ ಎತ್ತರ, ದಪ್ಪ, ಮುಖಚಹರೆ ಬೇರೆ ಬೇರೆ ಇರುವಂತೆ ಅಂಗಾಂಗಗಳೂ ಗಾತ್ರ ಹಾಗೂ ಆಕಾರದಲ್ಲಿ ಕೊಂಚ ಭಿನ್ನವೇ ಇರುತ್ತವೆ. ಸಾಮಾನ್ಯ ವ್ಯಕ್ತಿಯ ಮೂತ್ರಕೋಶ ಸುಮಾರು ಎರಡು ಕಪ್ ನಷ್ಟು ಮಾತ್ರವೇ ದ್ರವವನ್ನು ಹಿಡಿದಿಡಬಲ್ಲ ಕ್ಷಮತೆ ಪಡೆದಿದೆ. ಇದು ತುಂಬಿದ ತಕ್ಷಣವೇ ಇದನ್ನು ಖಾಲಿ ಮಾಡಲು ಮೆದುಳಿನಿಂದ ಸೂಚನೆ ಬರುತ್ತದೆ. ಕೆಲವರಲ್ಲಿ ಇದು ಒಂದು ಕಪ್ ಅಥವಾ ಒಂದೂವರೆ ಕಪ್ ಮಾತ್ರವೇ ಹಿಡಿಸುವಷ್ಟಿರುತ್ತದೆ. ಅಂದರೆ ಇವರಲ್ಲಿ ಇತರರಿಗಿಂತಲೂ ಬೇಗನೇ ಇದು ತುಂಬಿಬಿಡುತ್ತದೆ ಹಾಗೂ ಬೇಗಬೇಗನೇ ಖಾಲಿ ಮಾಡಲು ಅವಸರವಾಗುತ್ತದೆ. ಚಿಕ್ಕವಯಸ್ಸಿನಿಂದಲೂ ಇದೇ ಕ್ರಿಯೆ ನಡೆಯುತ್ತಿದ್ದರೆ ಇದಕ್ಕೆ ಆತಂಕಪಡುವ ಕಾರಣವಿಲ್ಲ. ಮೂತ್ರಕೋಶದ ಗಾತ್ರವನ್ನು ಸ್ಕ್ಯಾನರ್ ಉಪಕರಣದಿಂದ ಅಳೆದು ಖಚಿತಪಡಿಸಿಕೊಳ್ಳಲೂಬಹುದು.

ನಿರ್ಜಲೀಕರಣ

ನಿರ್ಜಲೀಕರಣ

ನೀರಿಲ್ಲದೇ ಇದ್ದಾಗಲೂ ಮೂತ್ರಕ್ಕೇಕೆ ಅವಸರವಾಗುತ್ತದೆ ಎಂದು ಕೊಂಚ ಅಚ್ಚರಿಯಾಗಬಹುದು. ನೀರೇ ಕಡಿಮೆ ಇದ್ದಾಗ ಮೂತ್ರವೂ ಕಡಿಮೆಯಾಗಬೇಕಲ್ಲವೇ? ಇದೇ ಪ್ರಶ್ನೆಯನ್ನು ವೈದ್ಯರು ಹೀಗೆ ವಿವರಿಸುತ್ತಾರೆ. ನಮ್ಮ ದೇಹದ ಕಲ್ಮಶಗಳನ್ನು ಸತತವಾಗಿ ಶೋಧಿಸಿ ಮೂತ್ರದ ಮೂಲಕ ಹೊರಹಾಕಬೇಕು. ನೀರು ಇದಕ್ಕೆ ಅಗತ್ಯವಾಗಿದ್ದು ಕಲ್ಮಶಗಳನ್ನು ತನ್ನಲ್ಲಿ ಕರಗಿಸಿಕೊಂಡು ಮೂತ್ರದ ರೂಪದಲ್ಲಿ ಹೊರಹೋಗುತ್ತದೆ. ಒಂದು ವೇಳೆ ನೀರಿನ ಪ್ರಮಾಣ ಕಡಿಮೆಯಾದರೂ ಕಲ್ಮಶಗಳೇನೂ ಕಡಿಮೆಯಾಗುವುದಿಲ್ಲ. ಬದಲಿಗೆ ಕಡಿಮೆ ನೀರಿನಲ್ಲಿ ಕರಗಿ ಅತಿ ಹೆಚ್ಚು ಸಾಂದ್ರತೆ ಪಡೆಯುತ್ತದೆ. ಇದೇ ಕಾರಣಕ್ಕೆ ನಿರ್ಜಲೀಕರಣ ಸಮಯದಲ್ಲಿ ಮೂತ್ರದ ಬಣ್ಣ ಗಾಢ ಹಳದಿ ಬಣ್ಣ ಪಡೆಯುತ್ತದೆ. ಈ ಸಾಂದ್ರೀಕೃತ ಮೂತ್ರದ ಪ್ರಮಾಣ ಕಡಿಮೆ ಇದ್ದರೂ ಇದರ ಲವಣಗಳು ಪ್ರಬಲವಾಗಿದ್ದು ಮೂತ್ರಕೋಶಕ್ಕೆ ಒಳಗಿನಿಂದ ಉರಿ ತರಿಸುತ್ತದೆ. ಈ ಉರಿ ತಕ್ಷಣವೇ ಮೂತ್ರವನ್ನು ಖಾಲಿ ಮಾಡಿ ಎಂಬ ಸೂಚನೆಯನ್ನು ನೀಡುತ್ತದೆ. ಪರಿಣಾಮವಾಗಿ ಮೂತ್ರದ ಪ್ರಮಾಣ ಹೆಚ್ಚಿಲ್ಲದಿದ್ದರೂ ಸರಿ, ವಿಸರ್ಜನೆಗೆ ಅವಸರ ಮಾತ್ರ ಖಂಡಿತಾ ಆಗುತ್ತದೆ. ಆದ್ದರಿಂದ ಉಪವಾಸದ ಸಮಯದ ಹೊರತು ನೀರನ್ನು ಸತತವಾಗಿ ಕುಡಿಯುತ್ತಿರಬೇಕು.

ಮೂತ್ರಪಿಂಡಗಳಲ್ಲಿ ಕಲ್ಲು

ಮೂತ್ರಪಿಂಡಗಳಲ್ಲಿ ಕಲ್ಲು

ಒಂದು ವೇಳೆ ನೀವು ಸಮಪ್ರಮಾಣದ ನೀರನ್ನು ಕುಡಿಯುತ್ತಿದ್ದು ನಿಮಗೆ ಮಧುಮೇಹ ಮೊದಲಾದ ಯಾವುದೇ ಕಾಯಿಲೆ ಇಲ್ಲದಿದ್ದರೂ ಮೂತ್ರಕ್ಕೆ ಸತತ ಅವಸರವಾಗುತ್ತಿದ್ದರೆ ಇದು ಮೂತ್ರಪಿಂಡಗಳಲ್ಲಿ ಕಲ್ಲುಗಳಿರುವ ಸೂಚನೆಯಾಗಿರಬಹುದು. ಸಾಮಾನ್ಯವಾಗಿ ಕಲ್ಲುಗಳಿರುವುದನ್ನು ಇತರ ಸೂಚನೆಗಳೂ ಸೂಚಿಸುತ್ತವೆ. ಪ್ರಮುಖವಾಗಿ ಮೂತ್ರ ವಿಸರ್ಜನೆಯ ವೇಳೆ ಉರಿ, ಮೂತ್ರಪಿಂಡಗಳಲ್ಲಿ ಸೂಜಿ ಚುಚ್ಚಿದಂತಾಗುಗುವುದು, ಕೆಳಬೆನ್ನಿನಲ್ಲಿ ತೀವ್ರವಾದ ನೋವು, ಅಸ್ಥಿಕುಹರದಲ್ಲಿಯೂ ನೋವು ಕಾಣಿಸಿಕೊಳ್ಳುವುದು ಮೊದಲಾದವು ಕಂಡುಬರುತ್ತವೆ. ಇವುಗಳಲ್ಲಿ ಕನಿಷ್ಟ ಒಂದಾದರೂ ಸೂಚನೆ ಕಂಡುಬಂದರೆ ತಕ್ಷಣವೇ ವೈದ್ಯರ ನೆರವು ಪಡೆಯಬೇಕು.

ಅಸ್ಥಿಕುಹರದ ಸ್ನಾಯುಗಳ ಶಕ್ತಿಗುಂದಿರುವುದು

ಅಸ್ಥಿಕುಹರದ ಸ್ನಾಯುಗಳ ಶಕ್ತಿಗುಂದಿರುವುದು

ಅಸ್ಥಿಕುಹರ (Pelvis)ದ ಸ್ನಾಯುಗಳು ಅಥವಾ ಕೆಳಹೊಟ್ಟೆಯ ಭಾಗದಲ್ಲಿರುವ ಸ್ನಾಯುಗಳು ತಮ್ಮ ಕ್ಷಮತೆಯನ್ನು ಕಳೆದುಕೊಂಡಿದ್ದರೆ ಇವು ಮೂತ್ರಕೋಶವನ್ನು ಅಗತ್ಯವಿರುವ ಒತ್ತಡದಿಂದ ಒತ್ತಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಹಲವು ವ್ಯಕ್ತಿಗಳಿಗೆ ಮೂತ್ರ ವಿಸರ್ಜನೆ ತುಂಬಾ ನಿಧಾನವಾಗಿ ಆಗುತ್ತದೆ. ಮೂತ್ರವಿಸರ್ಜನೆಯ ವೇಳೆ ಈ ಸ್ನಾಯುಗಳು ಸಂಕುಚಿತಗೊಂಡಾಗಲೇ ಮೂತ್ರಕೋಶದಿಂದ ಮೂತ್ರ ಹೊರಬರಲು ಸಾಧ್ಯ. ಮೂತ್ರವಿಸರ್ಜನೆಯ ಬಳಿಕ ಈ ಸ್ನಾಯುಗಳು ಮತ್ತೆ ತಮ್ಮ ಮೊದಲಿನ ಸ್ಥಿತಿಗೆ ಹಿಂದಿರುಗಬೇಕು. ಒಂದು ವೇಳೆ ಇವುಗಳ ಶಕ್ತಿಗುಂದಿ ಮೊದಲಿನ ಸ್ಥಿತಿಗೆ ಪೂರ್ಣಪ್ರಮಾಣದಲ್ಲಿ ಹಿಂದಿರುಗಲು ಸಾಧ್ಯವಾಗದೇ ಇದ್ದರೆ ಮೂತ್ರಕೋಶವೂ ಅರ್ಧಕ್ಕೂ ಕಡಿಮೆಯೇ ತೆರೆದಿರುತ್ತದೆ. ಈಗ ಅರ್ಧಕ್ಕೂ ಕಡಿಮೆ ಪ್ರಮಾಣದಲ್ಲಿ ಮೂತ್ರಕೋಶಕ್ಕೆ ತಲಿಪಿದ ತಕ್ಷಣ ಮೂತ್ರಕೋಶ ಪೂರ್ಣತುಂಬಿಕೊಂಡಂತಾಗಿ ಮೂತ್ರವಿಸರ್ಜನೆಗೆ ಅವಸರವಾಗುತ್ತದೆ. ಇದಕ್ಕೆ ಈ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳು ಅಗತ್ಯವಾಗಿದೆ.

ಕೆಲವು ಔಷಧಿಗಳ ಅಡ್ಡಪರಿಣಾಮಗಳು:

ಕೆಲವು ಔಷಧಿಗಳ ಅಡ್ಡಪರಿಣಾಮಗಳು:

ಒಂದು ವೇಳೆ ಅಧಿಕ ರಕ್ತದೊತ್ತಡ, ಚರ್ಮದ ಅಲರ್ಜಿ, ಖಿನ್ನತೆ ಮೊದಲಾದ ತೊಂದರೆಗಳಿಗೆ ವೈದ್ಯರು ಸೂಚಿಸಿದ ಯಾವುದಾದರೂ ಔಷಧಿ ಸೇವಿಸುತ್ತಿದ್ದರೆ ಈ ತೊಂದರೆ ಸಾಮಾನ್ಯವಾಗಿ ಕಾಡಬಹುದು. ಏಕೆಂದರೆ ಈ ಔಷಧಿಗಳ ಅಡ್ಡಪರಿಣಾಮದಿಂದಾಗಿ ತಾತ್ಕಾಲಿಕವಾಗಿ ಮೂತ್ರಕೋಶದ ಕ್ಷಮತೆ ಕಡಿಮೆಯಾಗುತ್ತದೆ. ಹಾಗಾಗಿ ಸತತವಾಗಿ ಮೂತ್ರಕ್ಕೆ ಅವಸರವಾಗುತ್ತಿರುತ್ತದೆ. ಈ ಸ್ಥಿತಿ ಹೆಚ್ಚು ದಿನ ಇದ್ದರೆ ನಿಮಗೆ ಈ ಔಷಧಿಗಳನ್ನು ಸೂಚಿಸಿದ ವೈದ್ಯರನ್ನು ಭೇಟಿಯಾಗಿ ಈ ಸ್ಥಿತಿಯ ಬಗ್ಗೆ ವಿವರಿಸಿ. ವೈದ್ಯರೇ ಇದಕ್ಕೆ ಔಷಧಿಗಳ ಪ್ರಮಾಣವನ್ನು ಕಡಿಮೆ ಮಾಡಬಹುದೋ ಅಥವಾ ಪರ್ಯಾಯ ಔಷಧಿಗಳನ್ನು ಸೂಚಿಸಬಹುದೋ ಎಂಬ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ಕೆಳಹೊಟ್ಟೆಯಲ್ಲಿ ಕಾಣಿಸಿಕೊಂಡ ಹುಣ್ಣು

ಕೆಳಹೊಟ್ಟೆಯಲ್ಲಿ ಕಾಣಿಸಿಕೊಂಡ ಹುಣ್ಣು

ಕೆಲವೊಮ್ಮೆ, ಕೆಳಹೊಟ್ಟೆಯಲ್ಲಿ ಹುಣ್ಣು ಅಥವಾ ದ್ರಾಕ್ಷಿಗೊಂಚಲಿನಂತಹ ಬೆಳವಣಿಗೆ ಆಗಿದ್ದರೆ (cysts of fibroid) ಇದು ಸಹಾ ಸತತ ಮೂತ್ರವಿಸರ್ಜನೆಗೆ ಅವಸರವುಂಟುಮಾಡಬಹುದು. ಏಕೆಂದರೆ ಈ ಹುಣ್ಣುಗಳು ಸತತವಾಗಿ ಮೂತ್ರಕೋಶದ ಮೇಲೆ ಒತ್ತಡ ಹೇರಿ ಒಳಗಿನ ವಿಸ್ತಾರವನ್ನು ಕಡಿಮೆ ಮಾಡುತ್ತದೆ ಹಾಗೂ ಮೂತ್ರ ವಿಸರ್ಜಿಸಲು ಪ್ರಚೋದಿಸುತ್ತದೆ. ಒಂದು ವೇಳೆ ಈ ಸ್ಥಿತಿ ತುಂಬಾ ದಿನಗಳಿಂದ ಇದ್ದರೆ ಇದಕ್ಕೆ ಕಾರಣವನ್ನು ಕಂಡುಕೊಳ್ಳಲು ಆಂತರಿಕ ಅಂಗಾಂಗಳ ಸ್ಕ್ಯಾನ್ ಪರಿಶೀಲನೆಯನ್ನು ಮಾಡಿಸಿಕೊಳ್ಳಬೇಕು.

ಕಡಿಮೆ ರಕ್ತದೊತ್ತಡ

ಕಡಿಮೆ ರಕ್ತದೊತ್ತಡ

ಒಂದು ವೇಳೆ ಸಾಮಾನ್ಯ ಸ್ಥಿತಿಗಿಂತಲೂ ರಕ್ತದೊತ್ತಡ ಕಡಿಮೆಯೇ ಇದ್ದರೆ ಹಾಗೂ ತಲೆತಿರುಗುವಿಕೆ, ಸುಸ್ತಾಗುವುದು, ದೇಹದ ತುದಿಭಾಗಗಳಾದ ಪಾದ, ಹಸ್ತಗಳಲ್ಲಿ ಸಂವೇದನೆಯೇ ಇಲ್ಲವಾಗುವುದು ಮೊದಲಾದ ಸೂಚನೆಗಳಿದ್ದರೆ ಇದರೊಂದಿಗೆ ಸತತ ಮೂತ್ರವಿಸರ್ಜನೆಯೂ ಆಗುತ್ತಿದ್ದಿರಬಹುದು. ಈ ಸೂಚನೆಗಳು ಕಂಡುಬಂದರೆ ಇದು ಕಡಿಮೆ ರಕ್ತದೊತ್ತಡದಿಂದ ಎದುರಾಗುತ್ತಿದ್ದು ಇದಕ್ಕೆ ತಕ್ಷಣವೇ ವೈದ್ಯರಿಂದ ತಪಾಸಣೆಗೆ ಒಳಗಾಗಬೇಕು ಹಾಗೂ ಸೂಕ್ತ ಚಿಕಿತ್ಸೆಯನ್ನೂ ಪಡೆಯಲು ಪ್ರಾರಂಭಿಸಬೇಕು.

ರಜೋನಿವೃತ್ತಿ

ರಜೋನಿವೃತ್ತಿ

ಒಂದು ವೇಳೆ ನೀವು ನಲವತ್ತೈದು ದಾಟಿದ ಮಹಿಳೆಯಾಗಿದ್ದರೆ ಹಾಗೂ ಸತತ ಮೂತ್ರವಿಸರ್ಜನೆಗೆ ಅವಸರವಾಗುವುದು ಇತ್ತೀಚೆಗೆ ಪ್ರಾರಂಭವಾಗಿದ್ದರೆ ಇದು ರಜೋನಿವೃತ್ತಿಯ ಸಮಯ ಬಂದಿದೆ ಎಂದು ತಿಳಿಸುವ ಸೂಚನೆಯಾಗಿದೆ. ಮಹಿಳೆಯರ ದೇಹದಲ್ಲಿ ಈ ಸಮಯದಲ್ಲಿ ಎದುರಾಗುವ ರಸದೂತಗಳ ಪ್ರಭಾವದಿಂದ ಉಂಟಾಗುವ ಬದಲಾವಣೆ ಮೂತ್ರಕೋಶಕ್ಕೆ ಪ್ರಚೋದನೆ ನೀಡಬಹುದು ಹಾಗೂ ಇದು ಸತತವಾಗಿ ಮೂತ್ರವಿಸರ್ಜಿಸಲು ಕಾರಣವಾಗಿರಬಹುದು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Surprising Reasons For Frequent Urination

Imagine this, you are in an important meeting at work, which started right after you used the restroom, but 20 minutes into the meeting, you feel like you want to pee, again! Well, this can be quite frustrating and embarrassing as well, right? If you are someone who has been in similar situations, where you feel like passing urine, more frequently than normal, then it could definitely be the cause for concern!
X
Desktop Bottom Promotion