For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಹಸ್ತಮೈಥುನದಿಂದ ಸಿಗುವ ಅಚ್ಚರಿಯ ಪ್ರಯೋಜನಗಳು!

|

ಒಂದು ಸಂಶೋಧನೆಯ ಪ್ರಕಾರ ಹದಿನೆಂಟು ತುಂಬಿದ ಬಳಿಕ ಪ್ರತಿ ಮಹಿಳೆಯೂ ಕನಿಷ್ಟ ಒಂದು ಬಾರಿಯಾದರೂ ಸ್ವರತಿ ಅಥವಾ ಹಸ್ತಮೈಥುನವನ್ನು ಅನುಭವಿಸಿರುತ್ತಾಳೆ. ಇಪ್ಪತ್ತೈದು ಮತ್ತು ಇಪ್ಪತ್ತೊಂಭತ್ತರ ಹರೆಯದ ನಡುವಣ ಮಹಿಳೆಯರಲ್ಲಿ 7.9 ಶೇಖಡಾದಷ್ಟು ಮಹಿಳೆಯರು ವಾರದಲ್ಲಿ ಎರಡರಿಂದ ಮೂರು ಬಾರಿ ಸ್ವರತಿಯನ್ನು ಪಡೆಯುತ್ತಾರೆ ಹಾಗೂ ಈ ಪ್ರಮಾಣ ಪುರುಷರಿಗಿಂತ ಕಡಿಮೆಯೇ ಇದೆ ಎಂದು ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ನಡೆಸಿದ ರಾಷ್ಟ್ರೀಯ ಮಟ್ಟದ ಲೈಂಗಿಕ ಆರೋಗ್ಯ ಮತ್ತು ನಡವಳಿಕೆಯ ಸಮೀಕ್ಷೆಯಲ್ಲಿ ಈ ವಿವರಗಳನ್ನು ನೀಡಲಾಗಿದೆ.

ಇತ್ತೀಚೆಗೆ ಚಲನಚಿತ್ರದ ಒಂದು ದೃಶ್ಯದಲ್ಲಿ ಬಾಲಿವುಡ್ ನಟಿ ಹಸ್ತಮೈಥುನವನ್ನು ಪಡೆಯುತ್ತಿರುವುದನ್ನು ತೋರಿಸಲಾಗಿದ್ದು ಭಾರತದಲ್ಲಿ ಸಂಚಲನೆಯುಂಟು ಮಾಡಿತ್ತು. ಬಳಿಕ ಈ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು ಹಾಗೂ ಭಾರತೀಯ ಮಹಿಳೆಯರು ತಮ್ಮ ಲೈಂಗಿಕ ಬಯಕೆಯನ್ನು ಪ್ರಕಟಿಸುವ ಬಗ್ಗೆ ಪರ ಮತ್ತು ವಿರೋಧವಾಗಿ ವಾದ-ವಿವಾದಗಳು ನಡೆದಿದ್ದವು.

ಇವರ ದೇಹದ ಕೆಲವು ಭಾಗಗಳಲ್ಲಿ ನರಾಗ್ರಗಳು ಅತಿ ಹೆಚ್ಚು

ಇವರ ದೇಹದ ಕೆಲವು ಭಾಗಗಳಲ್ಲಿ ನರಾಗ್ರಗಳು ಅತಿ ಹೆಚ್ಚು

ಆದರೆ ಮಹಿಳೆಯರು ತಮ್ಮ ದೇಹಸೌಷ್ಟವದ ಬಗ್ಗೆಯಾಗಲೀ ತಮ್ಮ ಲೈಂಗಿಕ ಬಯಕೆಯ ಬಗ್ಗೆಯಾಗಲೀ ಎಂದಿಗೂ ಸಂತುಷ್ಟರಾಗದೇ ಇರುವುದು ಇಂದಿಗೂ ಬಗೆಹರಿಸದ ಚಿದಂಬರ ರಹಸ್ಯವಾಗಿದೆ. ಮಹಿಳೆಯರ ದೇಹರಚನೆ ಭಿನ್ನವಾಗಿದ್ದು ದೇಹದ ಕೆಲವು ಭಾಗಗಳಲ್ಲಿ ನರಾಗ್ರಗಳು ಅತಿ ಹೆಚ್ಚು ಸಂವೇದಿಯಾಗಿರುತ್ತವೆ. ಇವುಗಳಲ್ಲಿ ಅತಿ ಹೆಚ್ಚು ಸಂವೇದನೆ ಹೊಂದಿರುವ ಭಾಗವೆಂದರೆ ಚಂದ್ರನಾಡಿ. ಇದೊಂದು ಚಿಕ್ಕ, ಕಿರುಬೆರಳಿನ ತುದಿಯ ಕಾಲುಭಾಗದಷ್ಟಿರುವ ಅಂಗವಾಗಿದ್ದು ಯೋನಿಯ ಸೀಳಿನ ಮೇಲ್ತುದಿಯಲ್ಲಿರುತ್ತದೆ ಹಾಗೂ ಅತಿ ಹೆಚ್ಚು ನರಾಗ್ರಗಳ ತುದಿಗಳು ಇಲ್ಲಿ ಕೇಂದ್ರೀಕೃತವಾಗಿರುತ್ತವೆ. ಸ್ವರತಿಯಲ್ಲಿ ಈ ಭಾಗವನ್ನು ತೀಡುವ ಮೂಲಕ ಅತಿ ಹೆಚ್ಚಿನ ಸಂವೇದನೆ ದೊರಕುತ್ತದೆ ಹಾಗೂ ಲೈಂಗಿಕ ತೃಪ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಬನ್ನಿ, ಮಹಿಳೆಯರ ಸ್ವರತಿ ಅಥವಾ ಹಸ್ತಮೈಥುನದಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ಅರಿಯೋಣ....

ಮಾಸಿಕ ದಿನಗಳ ಸೆಡೆತ ಮತ್ತು ಮೈ ನೋವನ್ನು ಕಡಿಮೆಗೊಳಿಸುತ್ತದೆ

ಮಾಸಿಕ ದಿನಗಳ ಸೆಡೆತ ಮತ್ತು ಮೈ ನೋವನ್ನು ಕಡಿಮೆಗೊಳಿಸುತ್ತದೆ

ಮಾಸಿಕ ದಿನಗಳಲ್ಲಿ ಮಹಿಳೆಯರ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಂಡು ಅಫಲಿತ ಅಂಡಾಣುವನ್ನು ದೇಹದಿಂದ ಹೊರಹಾಕುವ ಕಾರಣ ಕೆಳಹೊಟ್ಟೆಯಲ್ಲಿ ಸೆಡೆತ ಮತ್ತು ನೋವು ಎದುರಾಗುತ್ತದೆ. ಈ ಸಮಯದಲ್ಲಿ ಪಡೆಯುವ ಸ್ವರತಿಯಿಂದ ಕೆಳಸೊಂಟದ ಭಾಗದಲ್ಲಿ ಹೆಚ್ಚಿನ ರಕ್ತಪರಿಚಲನೆ ದೊರಕುತ್ತದೆ ಹಾಗೂ ಈ ಮೂಲಕ ಸಂಕುಚಿತಗೊಂಡ ಗರ್ಭಾಶಯ ಶೀಘ್ರವೇ ಮರುಚೈತನ್ಯ ಪಡೆಯಲು ನೆರವಾಗುತ್ತದೆ ಹಾಗೂ ತನ್ಮೂಲಕ ಸೆಡೆತ ಮತ್ತು ಮೈನೋವನ್ನೂ ಕಡಿಮೆಗೊಳಿಸುತ್ತದೆ.

ಮಹಿಳೆಯರಲ್ಲಿ ಎದುರಾಗುವ ಗರ್ಭಕಂಠದ ಸೋಂಕಿನಿಂದ ರಕ್ಷಿಸುತ್ತದೆ

ಮಹಿಳೆಯರಲ್ಲಿ ಎದುರಾಗುವ ಗರ್ಭಕಂಠದ ಸೋಂಕಿನಿಂದ ರಕ್ಷಿಸುತ್ತದೆ

ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಮಹಿಳೆಯರ ಸ್ವರತಿಯಿಂದ ಗರ್ಭಕಂಠ ಮತ್ತು ಮೂತ್ರಕೋಶ-ಮೂತ್ರನಾಳದಲ್ಲಿ ಎದುರಾಗುವ ಸೋಂಕುಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಸ್ವರತಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಮುಚ್ಚಿರುವ ಗರ್ಭಕಂಠ ತೆರೆದುಕೊಳ್ಳುತ್ತದೆ ಹಾಗೂ ಈ ಭಾಗದಲ್ಲಿ ಸಂಗ್ರಹಗೊಂಡಿದ್ದ ಸೋಂಕುಕಾರಕ ಕ್ರಿಮಿಗಳು ದೇಹದಿಂದ ಹೊರಹೋಗುತ್ತವೆ. ಈ ಕ್ರಿಯೆಗೆ ವೈದ್ಯರು tenting ಅಥವಾ the opening of the cervix ಎಂದು ಕರೆಯುತ್ತಾರೆ. ಈ ಮೂಲಕ ಗರ್ಭಾಶಯದಲ್ಲಿ ಇನ್ನೂ ಹೆಚ್ಚಿನ ದ್ರವ ಸ್ರವಿಸಲು ಸಾಧ್ಯವಾಗುತ್ತದೆ ಹಾಗೂ ಸೋಂಕಿಗೊಳಗಾಗಿದ್ದ ದ್ರವ ಪೂರ್ಣವಾಗಿ ದೇಹದಿಂದ ಹೊರಹೋಗಲು ಸಾಧ್ಯವಾಗುತ್ತದೆ.

ಒತ್ತಡವನ್ನು ನಿವಾರಿಸುತ್ತದೆ

ಒತ್ತಡವನ್ನು ನಿವಾರಿಸುತ್ತದೆ

ಮಹಿಳಾ ಹಸ್ತಮೈಥುನದ ಇನ್ನೊಂದು ಪ್ರಯೋಜನವೆಂದರೆ ಇದು ಮಾನಸಿಕ ಒತ್ತಡ ಮತ್ತು ಖಿನ್ನತೆಗಳನ್ನು ನಿವಾರಿಸುವುದಾಗಿದೆ. ಪರಿಣಾಮವಾಗಿ ಮಹಿಳೆ ಮಾನಸಿಕ ನಿರಾಳತೆಯನ್ನು ಅನುಭವಿಸುತ್ತಾಳೆ. ಸಾಮಾನ್ಯವಾಗಿ ಕಾಮಪರಾಕಾಷ್ಠೆಯ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಎಂಡಾರ್ಫಿನ್, ಡೋಪಮೈನ್, ಸೆರೋಟೋನಿನ್ ಮತ್ತು ಆಕ್ಸಿಟೋಸಿನ್ ನಂತಹ ಕೆಲವು ಮುದನೀಡುವ ರಸದೂತಗಳು ಬಿಡುಗಡೆಯಾಗುತ್ತವೆ. ಪರಿಣಾಮವಾಗಿ ಸುಖವನ್ನು ಗ್ರಹಿಸುವ ಮೆದುಳಿನ ಭಾಗದಲ್ಲಿ ಈ ರಸದೂತಗಳು ತಲುಪಿ ಮಾನಸಿಕ ತೃಪ್ತಿ, ಸುಖದ ಉತ್ತುಂಗವನ್ನು ಪಡೆಯುವ ಮೂಲಕ ಎಲ್ಲಾ ರೀತಿಯ ಮಾನಸಿಕ ದುಗುಡಗಳನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಸ್ವರತಿಯಿಂದಲೂ ಕಾಮಪರಾಕಾಷ್ಠೆಯನ್ನು ಮಹಿಳೆ ತನ್ನ ಇಷ್ಟದಂತೆ ಪಡೆದು ಸ್ವಾತಂತ್ಯವನ್ನು ಅನುಭವಿಸಬಹುದಾಗಿದೆ.

ಲೈಂಗಿಕ ಜೀವನವನ್ನು ಉತ್ತಮಗೊಳಿಸುತ್ತದೆ

ಲೈಂಗಿಕ ಜೀವನವನ್ನು ಉತ್ತಮಗೊಳಿಸುತ್ತದೆ

ತನ್ನ ದೇಹದ ಯಾವ ಭಾಗದಲ್ಲಿ ಅತಿ ಹೆಚ್ಚಿನ ಸಂವೇದನೆ ತನಗೆ ದೊರಕುತ್ತದೆ ಎಂದು ಮಹಿಳೆ ಸ್ವತಃ ಪರಿಶೀಲಿಸಿಕೊಳ್ಳುವ ಮೂಲಕ ಹೆಚ್ಚಿನ ಆತ್ಮವಿಶ್ವಾಸ ಮತ್ತು ನಿರಾಳತೆಯನ್ನು ಪಡೆಯಬಹುದು. ಈ ಮೂಲಕ ಸಂಗಾತಿಯೊಂದಿಗಿನ ಸಮಾಗಮದ ಸಮಯದಲ್ಲಿ ತನಗೇನು ಇಷ್ಟ ಮತ್ತು ಎಲ್ಲಿ ಹೇಗೆ ಮುಂದುವರೆಯಬೇಕು ಎಂಬುದನ್ನು ಸಂಗಾತಿಗೆ ತಿಳಿಸಿಹೇಳುವ ಮೂಲಕ ಪರಸ್ಪರ ಸಂಪೂರ್ಣ ಲೈಂಗಿಕ ಸಂತೃಪ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. (ತನಗೆ ಯಾವ ಬಗೆ ಇಷ್ಟವಾಗುತ್ತದೆ ಎಂದು ಮಹಿಳೆಯರು ಸ್ಪಷ್ಟವಾಗಿ ಕೇಳುವುದನ್ನು ಪುರುಷರು ಹೆಚ್ಚೇ ಇಷ್ಟಪಡುತ್ತಾರೆ)

ರಜೋನಿವೃತ್ತಿಯ ಬಳಿಕ ಎದುರಾಗುವ ಲೈಂಗಿಕ ತೊಂದರೆಗಳನ್ನು ಎದುರಿಸಲು ನೆರವಾಗುತ್ತದೆ

ರಜೋನಿವೃತ್ತಿಯ ಬಳಿಕ ಎದುರಾಗುವ ಲೈಂಗಿಕ ತೊಂದರೆಗಳನ್ನು ಎದುರಿಸಲು ನೆರವಾಗುತ್ತದೆ

ರಜೋನಿವೃತ್ತಿಯ ಸಮಯದಲ್ಲಿ ಮಹಿಳೆಯರು ಅಪಾರವಾದ ದೈಹಿಕ ಬದಲಾವಣೆಗಳಿಗೆ ಒಳಗಾಗುತ್ತಾಅರೆ ಹಾಗೂ ಇದಲ್ಲಿ ಲೈಂಗಿಕ ತೊಂದರೆಗಳೂ ಇರುತ್ತವೆ. ರಜೋನಿವೃತ್ತಿ ಎದುರಾದ ಬಳಿಕ ಯೋನಿಯ ಸ್ನಾಯುಗಳು ಸಂಕುಚಿತಗೊಂಡು ಸಂಭೋಗ ಕಷ್ಟಕರವಾಗುತ್ತದೆ. ಈ ಸಮಯದಲ್ಲಿ ಸ್ವರತಿ ಹೆಚ್ಚಿನ ನೆರವಿಗೆ ಬರುತ್ತದೆ. ಸ್ವರತಿಯಿಂದ ನೋವಿಲ್ಲದೇ ಯೋನಿಯ ಒಳಭಾಗದಲ್ಲಿ ಸಾಕಷ್ಟು ದ್ರವ್ಯತೆ ಪಡೆಯಲು ಸಾಧ್ಯವಾಗುತ್ತದೆ ಹಾಗೂ ಯೋನಿಯ ಸ್ನಾಯುಗಳು ಸುಲಭವಾಗಿ ಹಿಗ್ಗಲು ಸಾಧ್ಯವಾಗುತ್ತದೆ. ಈ ಭಾಗದಲ್ಲಿ ರಕ್ತಸಂಚಾರವೂ ಹೆಚ್ಚುತ್ತದೆ ಹಾಗೂ ಲೈಂಗಿಕ ಬಯಕೆಯೂ ಹೆಚ್ಚುತ್ತದೆ.

ಗಾಢ ನಿದ್ದೆ ಪಡೆಯಲು ನೆರವಾಗುತ್ತದೆ

ಗಾಢ ನಿದ್ದೆ ಪಡೆಯಲು ನೆರವಾಗುತ್ತದೆ

ಮಹಿಳಾ ಸ್ವರತಿಯ ಇನ್ನೊಂದು ಪ್ರಯೋಜನವೆಂದರೆ ಇದರಿಂದ ಗಾಢ ನಿದ್ದೆ ಪಡೆಯಲು ನೆರವಾಗುತ್ತದೆ ಹಾಗೂ ನಿದ್ರಾರಾಹಿತ್ಯದ ತೊಂದರೆಯನ್ನು ನಿವಾರಿಸುತ್ತದೆ. ಸ್ವರತಿಯ ಸಮಯದಲ್ಲಿ ಕಾಮಪರಾಕಾಷ್ಠೆಯನ್ನು ಸ್ವತಃ ಪಡೆಯುವ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ನಿರಾಳತೆ ಪಡೆಯಲು ಹಾಗೂ ದೈಹಿಕವಾಗಿ ಆರಾಮ ಪಡೆಯಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ತಕ್ಷಣವೇ ಗಾಢನಿದ್ದೆಗೆ ಸರಿಯಲು ಸಾಧ್ಯವಾಗುತ್ತದೆ ಹಾಗೂ ಸುಖನಿದ್ದೆಯ ಬಳಿಕ ತೃಪ್ತಿ ಮತ್ತು ನಿರಾಳತೆಯಿಂದ ಮುಂದಿನ ಸಮಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಅಸ್ಥಿಕುಹರದ ಬುಡವನ್ನು ದೃಢಗೊಳಿಸುತ್ತದೆ

ಅಸ್ಥಿಕುಹರದ ಬುಡವನ್ನು ದೃಢಗೊಳಿಸುತ್ತದೆ

ಹಸ್ತಮೈಥುನ ಮಹಿಳೆಯರಿಗೂ ಆರೋಗ್ಯಕರವೇ ಎಂಬುದು ನಿಜ, ಆದರೆ ಯಾವುದನ್ನೂ ಅತಿಯಾಗಿ ಅನುಸರಿಸಿದರೆ ಆರೋಗ್ಯಕ್ಕೆ ಮಾರಕ. ಸ್ವರತಿಯೂ ಮಹಿಳೆಯ ಆರೋಗ್ಯ ಮತ್ತು ಸಾಮರ್ಥ್ಯಕ್ಕೂ ಮೀರಿದರೆ ಖಂಡಿತಾ ಅಪಾಯಕರ. ಪರಿಣಾಮವಾಗಿ ವಿಪರೀತ ಸುಸ್ತು, ಅವಧಿಗೂ ಮುನ್ನ ಸಂಭವಿಸುವ ಸ್ಖಲನ ಹಾಗೂ ಸಂಗಾತಿಯೊಂದಿಗಿನ ಮಿಲನದ ಮೇಲೂ ಪ್ರಭಾವ ಬೀರಬಹುದು. ಒಂದು ವೇಳೆ ಘರ್ಷಣೆ ಅತಿಯಾದರೆ ಯೋನಿಯೊಳಗಿನ ಸೂಕ್ಷ್ಮಭಾಗಗಳಲ್ಲಿ ಉರಿ ಹಾಗೂ ಸವೆತವೂ ಎದುರಾಗಬಹುದು. ಕೆಲವು ಸಂದರ್ಭಗಳಲ್ಲಿ ಸ್ವರತಿಯ ಸುಖವೇ ಹೆಚ್ಚು ತೃಪ್ತಿಕರವಾಗಿ ಕಂಡುಬಂದು ಇದು ಸಂಗಾತಿಯೊಂದಿಗಿನ ಮಿಲನದ ಮೇಲೂ ಪ್ರಭಾವ ಬೀರಿ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಹಾಗಾಗಿ ಮಿತಪ್ರಮಾಣದಲ್ಲಿ ಹಸ್ತಮೈಥುನ ಪಡೆಯಬೇಕು.ಈ ಮಾಹಿತಿಯನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.

English summary

Surprising Benefits Of Female Masturbation

Research shows that most women over the age of 18 have masturbated at least once. About 7.9 per cent of women between the ages of 25 and 29 masturbate two to three times a week and the percentage is lower than men, according to the Indiana University's National Survey Of Sexual Health And Behaviour.
Story first published: Tuesday, September 18, 2018, 18:17 [IST]
X
Desktop Bottom Promotion