For Quick Alerts
ALLOW NOTIFICATIONS  
For Daily Alerts

ಪುರುಷರಿಗೆ ಸೆಕ್ಸ್ ನಿಂದ ಬರೋಬ್ಬರಿ 10 ಆರೋಗ್ಯ ಲಾಭಗಳಿವೆಯಂತೆ!

|

ಸದಾಶಿವನಿಗೆ ಸದಾ ಅದೇ ಧ್ಯಾನ ಎಂಬುದೊಂದು ಕನ್ನಡದ ಗಾದೆ. ಆದರೆ ಈ ಸಂಗತಿ ಬಹುತೇಕ ಪುರುಷರಿಗೆ ಅನ್ವಯಿಸುತ್ತದೆ ಎಂದು ಸಂಶೋಧನೆಯೊಂದು ಪ್ರಕಟಿಸಿದೆ. ಆ ಪ್ರಕಾರ ಪುರುಷರು ನಿತ್ಯವೂ ಸುಮಾರು ಹತ್ತೊಂತ್ತು ಬಾರಿ ಲೈಂಗಿಕತೆಯ ಬಗ್ಗೆ ಯೋಚಿಸುತ್ತಾರೆ! ವಾಸ್ತವವಾಗಿ ಈ ಭಾವನೆಗೆ ಕಾರಣವೂ ಇದೆ: ಏಕೆಂದರೆ ಪುರುಷರ ಆರೋಗ್ಯವೇ ಈ ಮಾಹಿತಿಯನ್ನೂ ಆಧರಿಸಿರಬಹುದು.

ಕಾಮಪರಾಕಾಷ್ಠೆ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಬೀರಬಹುದು. ವಿಶೇಷವಾಗಿ ಮಹಿಳೆಯರಲ್ಲಿ, ಮಾಸಿಕ ದಿನಗಳ ಸೆಡೆತ-ನೋವುಗಳನ್ನು ಕನಿಷ್ಟವಾಗಿಸಬಹುದು, ಮಧುಮೇಹದ ಸಾಧ್ಯತೆ ತಗ್ಗಿಸಬಹುದು. ಪುರುಷರಲ್ಲಿಯೂ ಅಷ್ಟೇ, ಇದು ಆರೋಗ್ಯವನ್ನು ಹಲವು ರೀತಿಯಲ್ಲಿ ವೃದ್ಧಿಸುತ್ತದೆ. ಈ ಕಾರಣಕ್ಕಾದರೂ ಪ್ರತಿ ಪುರುಷ ತನ್ನ ಜೀವನಸಂಗಾತಿಗೆ ಚಿರಋಣಿಯಾಗಿರಲೇಬೇಕು. ಬನ್ನಿ, ಪುರುಷರು ಯಾವ ಬಗೆಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ...

1. ಲೈಂಗಿಕ ಕ್ರಿಯೆಯಿಂದ ಪುರುಷರ ಹೃದಯದ ಕ್ಷಮತೆ ಹೆಚ್ಚುತ್ತದೆ

1. ಲೈಂಗಿಕ ಕ್ರಿಯೆಯಿಂದ ಪುರುಷರ ಹೃದಯದ ಕ್ಷಮತೆ ಹೆಚ್ಚುತ್ತದೆ

ಸಾಮಾನ್ಯವಾಗಿ ಬೆಡ್ ರೂಮ್ ನಲ್ಲಿ ಜೀವನಸಂಗಾತಿ ರೂಮ್ ಒಳಗೆ ಕಾಲಿಟ್ಟ ಕ್ಷಣದಿಂದಲೇ ಪುರುಷರ ಹೃದಯ ಜೋರಾಗಿ ಬಡಿದುಕೊಳ್ಳಲು ಪ್ರಾರಂಭಿಸುತ್ತದೆ. ಅಲ್ಲದೇ ಲೈಂಗಿಕ ಕ್ರಿಯೆಯ ಸಮಯದಲ್ಲಿಯೂ ಹೆಚ್ಚಿನ ಬಡಿತ ಮತ್ತು ಪರಿಚಲನೆಯನ್ನು ಒದಗಿಸುತ್ತದೆ. ತನ್ಮೂಲಕ ಪುರುಷರ ಹೃದಯದ ಕ್ಷಮತೆ ಹೆಚ್ಚುತ್ತದೆ ಎಂದು ಬೆಲ್ಫಾಸ್ಟ್ ನಗರದ ಕ್ವೀನ್ಸ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯೊಂದು ತಿಳಿಸಿದೆ. ಈ ವರದಿಯ ಪ್ರಕಾರ ವಾರದಲ್ಲಿ ಕನಿಷ್ಟ ಮೂರು ಅಥವಾ ಅದಕ್ಕೂ ಹೆಚ್ಚು ಬಾರಿ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳುವ ಪುರುಷರು ಇತರರಿಗಿಂತ ಹೃದಯಸ್ತಂಭನದ ಸಾಧ್ಯತೆಯನ್ನು ಅರ್ಧದಷ್ಟು ಕಡಿಮೆ ಹೊಂದಿರುತ್ತಾರೆ. ಆ ಪ್ರಕಾರ ವೈದ್ಯರನ್ನು ದೂರವಿಡಲು ದಿನಕ್ಕೊಂದು ಸೇಬಿನ ಬದಲು ವಾರಕ್ಕೆ ಮೂರು ಬಾರಿ ಮಿಲನವೇ ಮೇಲಲ್ಲವೇ?

2. ಲೈಂಗಿಕ ಕ್ರೀಡೆಯಿಂದ ಮನೋಭಾವ ಉತ್ತಮಗೊಳ್ಳುತ್ತದೆ

2. ಲೈಂಗಿಕ ಕ್ರೀಡೆಯಿಂದ ಮನೋಭಾವ ಉತ್ತಮಗೊಳ್ಳುತ್ತದೆ

ಲೈಂಗಿಕವಾಗಿ ಕ್ರಿಯಾತ್ಮಕರಾಗಿರುವ ಪುರುಷರು ಸದಾ ಉತ್ತಮ ಮನೋಭಾವದಲ್ಲಿರುತ್ತಾರೆ. ಏಕೆಂದರೆ ಈ ಮೂಲಕ ಕೆಲಸದ ಸಮಯದಲ್ಲಿ ಉಂಟಾದ ಮಾನಸಿಕ ಒತ್ತಡವನ್ನು ನಿವಾರಿಸುವುದು ಮಾತ್ರವಲ್ಲ, ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ವಾಸ್ತವವಾಗಿ ಲೈಂಗಿಕ ಕ್ರಿಯೆಯ ಅವಧಿಯಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ ಎಂಬ ರಸದೂತಗಳು ಮನಸ್ಸಿಗೆ ಮುದನೀಡುವ ಮೂಲಕ ಮನೋಭಾವವನ್ನು ಉತ್ತಮಗೊಳಿಸುತ್ತದೆ.

3. ರಾತ್ರಿಯ ಸಮಯದಲ್ಲಿ ಗಾಢ ನಿದ್ದೆ ಆವರಿಸಲು ನೆರವಾಗುತ್ತದೆ

3. ರಾತ್ರಿಯ ಸಮಯದಲ್ಲಿ ಗಾಢ ನಿದ್ದೆ ಆವರಿಸಲು ನೆರವಾಗುತ್ತದೆ

ನಮಗೆಲ್ಲಾ ಸುಮಾರು ಎಂಟು ಘಂಟೆಗಳ ನಿದ್ದೆ ಅಗತ್ಯ, ಆದರೆ ಇದರಲ್ಲಿ ಗಾಢನಿದ್ದೆ ಪಡೆಯುವ ಸಮಯ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಲೈಂಗಿಕ ಕ್ರಿಯೆಯ ಬಳಿಕ ಪುರುಷರು ಹೆಚ್ಚು ಸಮಯ ಗಾಢ ನಿದ್ದೆಗೆ ಒಳಗಾಗುತ್ತಾರೆ. ಏಕೆಂದರೆ ಕಾಮಪರಾಕಾಷ್ಠೆಯ ಸಮಯದಲ್ಲಿ ಬಿಡುಗಡೆಯಾದ ಆಕ್ಸಿಟೋಸಿನ್ ಎಂಬ ರಸದೂತ ಸವಿಯಾದ ಮತ್ತು ಗಾಢನಿದ್ದೆ ಪಡೆಯಲು ನೆರವಾಗುತ್ತದೆ ಹಾಗೂ ಮಾನಸಿಕ ನಿರಾಳತೆಯನ್ನು ಒದಗಿಸುತ್ತದೆ. ಇದೇ ಕಾರಣಕ್ಕೆ ಈ ರಸದೂತವನ್ನು "ಪ್ರೇಮ ರಸದೂತ" (love hormone) ಎಂದೂ ಕರೆಯಲಾಗುತ್ತದೆ. ಲೈಂಗಿಕ ಕ್ರಿಯೆಯ ಬಳಿಕ ನೇರವಾಗಿ ಪುರುಷರೇಕೆ ನಿದ್ದೆಗೆ ಶರಣಾಗುತ್ತಾರೆ ಎಂದು ಈಗ ಅರ್ಥವಾಯಿತಲ್ಲ!

4. ಪ್ರಾಸ್ಟೇಟ್ ಕ್ಯಾನ್ಸರ್ ನ ಸಾಧ್ಯತೆ ಕಡಿಮೆಗೊಳಿಸುತ್ತದೆ

4. ಪ್ರಾಸ್ಟೇಟ್ ಕ್ಯಾನ್ಸರ್ ನ ಸಾಧ್ಯತೆ ಕಡಿಮೆಗೊಳಿಸುತ್ತದೆ

ನಿಯಮಿತವಾಗಿ ಲೈಂಗಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಪುರುಷರಲ್ಲಿ ನಡುವಯಸ್ಸು ದಾಟಿದ ಬಳಿಕ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆ ಎಂದು ರಾಷ್ಟ್ರೀಯ ಕ್ಯಾನ್ಸರ್ ವಿಶ್ವ ವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆ ಪ್ರಕಟಿಸಿದೆ. ತಿಂಗಳಲ್ಲಿ ಸುಮಾರು ಇಪ್ಪತ್ತೊಂದು ಸ್ಖಲನಗಳನ್ನು ಪಡೆಯುವ ಪುರುಷರು ತಿಂಗಳಿತೆ ನಾಲ್ಕರಿಂದ ಏಳು ಸ್ಖಲನಗಳನ್ನು ಪಡೆಯುವ ಪುರುಷರಿಗಿಂತ ಪ್ರಾಸ್ಟೇಟ್ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆಯನ್ನು 33%ರಷ್ಟು ಕಡಿಮೆ ಸಾಧ್ಯತೆ ಹೊಂದಿರುತ್ತಾರೆ ಎಂದು ಈ ಸಂಶೋಧನೆ ವರದಿ ಮಾಡಿದೆ.

5. ಲೈಂಗಿಕತೆಯಿಂದ ನೋವು ಸಹಾ ಮಾಯ!

5. ಲೈಂಗಿಕತೆಯಿಂದ ನೋವು ಸಹಾ ಮಾಯ!

ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಆಕ್ಸಿಟೋಸಿನ್ ಭರಿತ ವಾಯುವನ್ನು ಸೇವಿಸಲು ನೀಡಿದ ನಲವತ್ತೆಂಟು ಪುರುಷರನ್ನು ಆ ಬಳಿಕ ಬೆರಳಿಗೆ ಚಿಕ್ಕದಾಗಿ ಚುಚ್ಚಿ ಪರೀಕ್ಷಿಸಲಾಗಿತ್ತು. ಇತರ ಸಮಯಕ್ಕಿಂತಲೂ ಈ ಸಮಯದಲ್ಲಿ ನೋವು ಅರ್ಧದಷ್ಟು ಕಡಿಮೆ ಅನುಭವವಾಯಿತು ಎಂದು ಎಲ್ಲರೂ ಒಪ್ಪಿಕೊಂಡರು. ಹಾಗಾಗಿ, ತಲೆನೋವು, ಬೆನ್ನುನೋವು, ಮೊದಲಾದ ಯಾವುದೇ ನೋವು ಇದ್ದರೂ ಇದಕ್ಕೆ ಲೈಂಗಿಕ ರಸದೂತವೇ ಸುಲಭ ಮದ್ದು!

6. ಲೈಂಗಿಕತೆಯಿಂದ ಸುದೃಢ ಶರೀರ

6. ಲೈಂಗಿಕತೆಯಿಂದ ಸುದೃಢ ಶರೀರ

ಸದೃಢ ಹಾಗೂ ಆರೋಗ್ಯಕ್ರಾ ಶರೀರ ಪಡೆಯಬೇಕೇ? ಹಾಗಾದರೆ ಇದಕ್ಕೆ ಶಯನಗೃಹಕ್ಕಿಂತ ಉತ್ತಮವಾದ ಇನ್ನೊಂದು ಸುಲಭಸ್ಥಳವಿಲ್ಲ. ಲೈಂಗಿಕ ಕ್ರಿಯೆಯ ಮೂಲಕ ಕೇವಲ ಹೊಟ್ಟೆ, ಬೆನ್ನು ಮತ್ತು ಸೊಂಟದ ಸ್ನಾಯುಗಳು ಮಾತ್ರವಲ್ಲ, ಇಡಿಯ ದೇಹದ ಸ್ನಾಯುಗಳೂ ಹುರಿಗಟ್ಟುತ್ತವೆ. ಸಾಮಾನ್ಯವಾದ ಸುಮಾರು ಮೂವತ್ತು ನಿಮಿಷದ ವ್ಯಾಯಾಮದ ಮೂಲಕ ಸುಮಾರು ಇನ್ನೂರು ಕ್ಯಾಲೋರಿಗಳನ್ನು ಕರಗಿಸಬಹುದು. ಒಂದು ವೇಳೆ ಇನ್ನೂ ಹೆಚ್ಚು ಕ್ಯಾಲೋರಿಗಳನ್ನು ಕರಗಿಸಬೇಕೆಂದರೆ ಸುಮಾರು ಒಂದು ಘಂಟೆಯ ಕಾಲ ಲೈಂಗಿಕ ಕ್ರಿಯೆ ನಡೆಸಿದರೆ ಸಾಕು. ಒಂದು ಅಧ್ಯಯನದಲ್ಲಿ ಎಂಭತ್ತಾರು ಕೇಜಿ ತೂಕದ ವ್ಯಕ್ತಿ ಈ ಮೂಲಕ 413 ಕ್ಯಾಲೋರಿಗಳನ್ನು ವ್ಯಯಿಸುತ್ತಾನೆ!

7. ಲೈಂಗಿಕ ಜೀವನದಿಂದ ಆರೋಗ್ಯವೃದ್ಧಿ

7. ಲೈಂಗಿಕ ಜೀವನದಿಂದ ಆರೋಗ್ಯವೃದ್ಧಿ

ಅಧ್ಯಯನದಲ್ಲಿ ಕಂಡುಕೊಂಡಂತೆ ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವ ಪುರುಷರು ಯೌವನವನ್ನು ಹೆಚ್ಚು ಸಮಯ ಕಾಪಾಡಿಕೊಳ್ಳುತ್ತಾರೆ, ಒಂದರ್ಥದಲ್ಲಿ ಇತರರಿಗಿಂತ ಸುಮಾರು ಹತ್ತು ವರ್ಷ ಹೆಚ್ಚು! ಲೈಂಗಿಕತೆ ವೃದ್ಯಾಪ್ಯ ಆವರಿಸುವ ಕ್ರಿಯೆಯನ್ನು ನಿಧಾನಗೊಳಿಸುವುದೇ ಇದಕ್ಕೆ ಕಾರಣ. ಬ್ರಿಟಿಶ್ ಮೆಡಿಕಲ್ ಜರ್ನಲ್ ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಹೆಚ್ಚು ಕಾಮಪರಾಕಾಷ್ಠೆಯನ್ನು ಪಡೆಯುವ ಪುರುಷರು ಅಪರೂಪವಾಗಿ ಸ್ಖಲನ ಪಡೆಯುವ ಪುರುಷರಿಗಿಂತ ಕಡಿಮೆ ಪ್ರಮಾಣದಲ್ಲಿ ಸಾವಿಗೆ ಒಳಗಾಗುವ ಸಾಧ್ಯತೆ ಪಡೆದಿದ್ದಾರೆ. ಹಾಗಾಗಿ ಮುಖದ ನೆರಿಗೆ ಮೂಡುವ ವಯಸ್ಸನ್ನು ಮುಂದೂಡಬೇಕಾದರೆ ಏನು ಮಾಡಬೇಕು ಎಂದು ಈಗ ನಿಮಗೆ ಗೊತ್ತು.

ಪುರುಷರ- ಮಹಿಳೆಯರ ಲೈಂಗಿಕ ಶಕ್ತಿ ಹೆಚ್ಚಿಸುವ ನೈಸರ್ಗಿಕ ಜ್ಯೂಸ್‌ಗಳು

8. ನೋವಿನಿಂದ ಮುಕ್ತಿ

8. ನೋವಿನಿಂದ ಮುಕ್ತಿ

ಲೈಂಗಿಕ ಕ್ರಿಯೆಯ ಮೂಲಕ ಪುರುಷರಲ್ಲಿ ಆವರಿಸುವ ಸೊಂಟನೋವು, ಬೆನ್ನುನೋವು, ಕಾಲುನೋವು,ಸಂಧಿವಾತ, ತಲೆನೋವು ಹಾಗೂ ಮಹಿಳೆಯರಲ್ಲಿ ಈ ನೋವುಗಳ ಹೊರತಾಗಿ ಮಾಸಿಕ ದಿನಗಳಲ್ಲಿ ಎದುರಾಗುವ ಹೊಟ್ಟೆನೋವು ಮತ್ತು ಸೆಡೆತವನ್ನೂ ಕಡಿಮೆ ಮಾಡಬಹುದು. ಒಂದು ಅಧ್ಯಯನದಲ್ಲಿ ಮೈಗ್ರೇನ್ ತಲೆನೋವನ್ನು ಹೊಂದಿರುವ ವ್ಯಕ್ತಿಗಳು ಲೈಂಗಿಕ ಕ್ರಿಯೆಯಲ್ಲಿ ಒಳಗೊಂಡ ಬಳಿಕ ತಲೆನೋವು ಅರ್ಧಕ್ಕಿಂತಲೂ ಹೆಚ್ಚು ಅಥವಾ ಸಂಪೂರ್ಣವಾಗಿ ಇಲ್ಲವಾಗಿರುವುದಾಗಿ ತಿಳಿಸಿರುವುದನ್ನು ದಾಖಲಿಸಲಾಗಿದೆ. ವಿಶೇಷವಾಗಿ ಮೈಗ್ರೇನ್ ಮತ್ತು ತಲೆಯೊಳಗಿನ ಒಂದು ಭಾಗದಲ್ಲಿ ತೀಕ್ಷ್ಣವಾಗಿ ಆಗುವ ನೋವಿಗೆ (cluster-headache) ಕಾಮಪರಾಕಾಷ್ಠೆ ಮದ್ದಿನಂತೆ ಕೆಲಸ ಮಾಡುತ್ತದೆ.

9. ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ

9. ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ

ಲೈಂಗಿಕ ಕ್ರಿಯೆಯಲ್ಲಿ ಒಳಗಾದಷ್ಟೂ ಇನ್ನೂ ಹೆಚ್ಚು ಹೆಚ್ಚಾಗಿ ಒಳಗೊಳ್ಳುವಂತೆ ಮನಸ್ಸು ಒಲವು ತೋರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಒಲವು ಅಥವಾ ಕಾಮಾಸಕ್ತಿ ತೀರಾ ಅಗತ್ಯವಾಗಿದ್ದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ನೆರವಾಗುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಕಾಮಾಸಕ್ತಿ ಹೆಚ್ಚು ಅಗತ್ಯವಿದ್ದು ಹೆಚ್ಚು ಹೆಚ್ಚಾಗಿ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳುವ ಮೂಲಕ ಜನನಾಂಗಗಳಲ್ಲಿ ಹೆಚ್ಚಿನ ರಕ್ತಸಂಚಾರ ಪಡೆಯಲು ಸಾಧ್ಯವಾಗುತ್ತದೆ ಹಾಗೂ ತನ್ಮೂಲಕ ಗುಪ್ತಾಂಗದ ಒಳಭಾಗದಲ್ಲಿ ಜಾರುವಿಕೆ ಹಾಗೂ ಸ್ನಾಯುಗಳು ಹೆಚ್ಚು ವಿಕಸನಗೊಳ್ಳಲು ನೆರವಾಗುತ್ತದೆ. ಈ ಮೂಲಕ ಲೈಂಗಿಕ ಕ್ರಿಯೆಯನ್ನು ಹೆಚ್ಚು ಹೆಚ್ಚಾಗಿ ಆಸ್ವಾದಿಸಲು ಸಾಧ್ಯವಾಗುತ್ತದೆ.

10. ಫಲವತ್ತತೆಯನ್ನು ಹೆಚ್ಚಿಸುತ್ತದೆ

10. ಫಲವತ್ತತೆಯನ್ನು ಹೆಚ್ಚಿಸುತ್ತದೆ

ಇನ್ನೊಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಹೆಚ್ಚು ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವ ಪುರುಷರ ವೀರ್ಯಾಣುಗಳ ಗುಣಮಟ್ಟ ಹಾಗೂ ಸಾಂದ್ರತೆ ಆರೋಗ್ಯಕರ ಮಟ್ಟಗಳಲ್ಲಿರುತ್ತದೆ. ಈ ಬಗ್ಗೆ ನಡೆಸಿದ ಪ್ರಯೋಗವೊಂದರಲ್ಲಿ ಸುಮಾರು ಹತ್ತು ದಿನಗಳವರೆಗೆ ಲೈಂಗಿಕ ಕ್ರಿಯೆ ನಡೆಸದೇ ಬಳಿಕ ಸಂಗ್ರಹಿಸಿದ ವೀರ್ಯಾಣುಗಳಿಗಿಂತಲೂ ಎರಡು ದಿನ ಹಿಂದೆಯಷ್ಟೇ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದ ಬಳಿಕ ಸಂಗ್ರಹಿಸಿದ ವೀರ್ಯಾಣುಗಳು ಹೆಚ್ಚು ಆರೋಗ್ಯವಂತ ಹಾಗೂ ಗುಣಮಟ್ಟವನ್ನು ಪಡೆದಿರುತ್ತವೆ. ಹಾಗಾಗಿ ಒಂದು ವೇಳೆ ಸಂತಾನವನ್ನು ಪಡೆಯಲು ಯತ್ನಿಸುತ್ತಿರುವ ದಂಪತಿಗಳು ವಾರದಲ್ಲಿ ಕನಿಷ್ಟ ಎರಡು ಬಾರಿಯಾದರೂ ಕೂಡುವುದು ಅಗತ್ಯವಾಗಿದೆ. ನಿಯಮಿತ ಸಂಸರ್ಗದಿಂದ ಕೇವಲ ಪುರುಷರಲ್ಲಿ ಮಾತ್ರವಲ್ಲ, ಮಹಿಳೆಯರಲ್ಲಿಯೂ ಲೈಂಗಿಕ ರಸದೂತಗಳು ಸೂಕ್ತ ಸಮಯದಲ್ಲಿ ಸ್ರವಿಸಲು ನೆರವಾಗುತ್ತದೆ, ಸರಿಯಾದ ಸಮಯಕ್ಕೆ ಮಾಸಿಕ ದಿನಗಳು ಪುನರಾವರ್ತಿಸಲು ಹಾಗೂ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ದಿನನಿತ್ಯ 'ಸೆಕ್ಸ್' ಮಾಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

English summary

Surprising 10 Health Benefits of Sex for Men

Feel like he's always thinking about sex? Well, according to research, he probably is about 19 times a day. But maybe there's a good reason for it: His life could depend on it. Orgasms can work wonders for your health, from easing your menstrual cramps to lowering your risk of diabetes, but what about your guy? We're counting down the ways having sex with him makes him healthier! Make sure he thanks you for keeping him in tip-top shape.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more