For Quick Alerts
ALLOW NOTIFICATIONS  
For Daily Alerts

ಗಂಟಲು ಕೆರೆತ ಮತ್ತು ಗಂಟಲು ಕಿರಿಕಿರಿ ಸಮಸ್ಯೆಗೆ, 10 ನೈಸರ್ಗಿಕ ಮನೆಮದ್ದುಗಳು

By Hemanth
|

ದೇಹದ ಪ್ರತಿಯೊಂದು ಅಂಗದಂತೆ ಗಂಟಲು ಕೂಡ ಒಂದು. ಇದು ನಮ್ಮ ನಾವು ತಿನ್ನುವಂತಹ ಆಹಾರ, ನೀರನ್ನು ಅನ್ನನಾಳದ ಮೂಲಕವಾಗಿ ಜಠರಕ್ಕೆ ಸಾಗಿಸಲು ನೆರವಾಗುವುದು. ಆದರೆ ಕೆಲವೊಂದು ಸಲ ಗಂಟಲು ಕೂಡ ಊದಿಕೊಂಡು, ನೋವಿಗೊಳಗಾಗುವುದು ಇದೆ. ಗಂಟಲಿನ ಕಿರಿಕಿರಿ, ಗಂಟಲು ಗಂಟಲು ಕೆರೆತ, ನೋವು ಅಥವಾ ತುರಿಕೆ ಉಂಟಾಗುವುದು ಗಂಟಲಿನ ಊತ ಉಂಟಾಗಿರುವುದರ ಪ್ರಮುಖ ಲಕ್ಷಣವಾಗಿದೆ.

Natural Remedies for Sore Throat

ಗಂಟಲಿನಲ್ಲಿ ಊತ ಕಾಣಿಸಿಕೊಂಡರೆ ಬಳಿಕ ನಮಗೆ ಯಾವುದೇ ರೀತಿಯ ಆಹಾರ ಸೇವನೆ ಮಾಡಲು ತುಂಬಾ ಕಷ್ಟವಾಗುವುದು. ಆದರೆ ಗಂಟಲು ನೋವಿದ್ದರೆ, ಅಲ್ಲದೆ ಗಂಟಲ ಕಿರಿಕಿರಿಗೆ ನೇರವಾಗಿ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕೆಂದಿಲ್ಲ. ಯಾಕೆಂದರೆ ಕೆಲವು ಮನೆಮದ್ದುಗಳನ್ನು ಬಳಸಿಕೊಂಡು ಗಂಟಲಿನ ನೋವುನಿವಾರಣೆ ಮಾಡಬಹುದು.

1.ಜೇನುತುಪ್ಪ

1.ಜೇನುತುಪ್ಪ

ಚಹಾಗೆ ಬೆರೆಸಿಕೊಂಡು ಅಥವಾ ಹಾಗೆ ಜೇನುತುಪ್ಪ ಸೇವಿಸಿದರೆ ಅದರಿಂದ ಗಂಟಲು ನೋವು ಕಡಿಮೆಯಾಗುವುದು. ಸಾಮಾನ್ಯ ಕೆಮ್ಮಿಗಿಂತ ರಾತ್ರಿ ವೇಳೆ ಬರುವಂತಹ ಕೆಮ್ಮಿಗೆ ಜೇನುತುಪ್ಪ ತುಂಬಾ ಪರಿಣಾಮಕಾರಿ ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಜೇನುತುಪ್ಪವು ತುಂಬಾ ಪರಿಣಾಮಕಾರಿಯಾಗಿ ಗಾಯ ನಿವಾರಿಸುವುದು. ಇದು ಗಂಟಲಿನ ಊತವನ್ನು ಕೂಡ ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಒಂದು ಕಪ್ ಬಿಸಿ ನೀರಿಗೆ ಒಂದರಿಂದ ಎರಡು ಚಮಚ ಜೇನುತುಪ್ಪನ್ನು ಹಾಕಿ ದಿನದಲ್ಲಿ ಎರಡರಿಂದ ಮೂರು ಸಲ ಕುಡಿಯಿರಿ ಅಥವಾ ಮಲಗುವ ಮೊದಲು ಒಂದು ಚಮಚ ಜೇನುತುಪ್ಪನ್ನು ನೇರವಾಗಿ ಸೇವಿಸಬಹುದು.

2.ಉಪ್ಪು ನೀರು

2.ಉಪ್ಪು ನೀರು

ಬಿಸಿನೀರಿಗೆ ಉಪ್ಪು ಹಾಕಿಕೊಂಡು, ಅದರಿಂದ ಬಾಯಿ ಮುಕ್ಕಲಿಸಿಕೊಂಡರೆ ಆಗ ಇದು ತುಂಬಾ ಪರಿಣಾಮಕಾರಿಯಾಗಿ ಗಂಟಲು ನೋವು ನಿವಾರಿಸುವುದು. ಗಂಟಲಿನ ಬ್ಯಾಕ್ಟೀರಿಯಾವನ್ನಇದು ಕೊಂದು ಹಾಕುವುದು. ಅರ್ಧ ಚಮಚ ಉಪ್ಪನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿಕೊಂಡು ಬಾಯಿ ಮುಕ್ಕಲಿಸಿಕೊಂಡರೆ ಆಗ ಗಂಟಲಿನ ಊತ ಮತ್ತು ನೋವು ಕಡಿಮೆಯಾಗುವುದು. ಪ್ರತೀ ಮೂರು ಗಂಟೆಗೊಮ್ಮೆ ಹೀಗೆ ಮಾಡಿಕೊಳ್ಳಿ.

3.ಚಾಮೊಮೈಲ್ ಚಹಾ

3.ಚಾಮೊಮೈಲ್ ಚಹಾ

ಚಾಮೊಮೈಲ್ ಚಹಾವು ನೈಸರ್ಗಿಕವಾಗಿ ಶಮನ ನೀಡುವುದು. ಗಂಟಲಿನ ಊತಕ್ಕೆ ಪರಿಹಾರ ನೀಡಲು ಇದರಲ್ಲಿರುವಂತಹ ಔಷಧೀಯ ಗುಣಗಳು ತುಂಬಾ ಪರಿಣಾಮಕಾರಿ. ಉರಿಯೂತ ಶಮನಕಾರಿ, ಆ್ಯಂಟಿಆಕ್ಸಿಡೆಂಟ್ ಮತ್ತು ಸಂಕೋಚನ ಗುಣವನ್ನು ಇದು ಹೊಂದಿದೆ.

ಕೆಲವೊಂದು ಅಧ್ಯಯನಗಳ ಪ್ರಕಾರ ಚಾಮೊಮೈಲ್ ಸ್ಟೀಮ್ ನ್ನು ಉಚ್ಛಾಸ ಮಾಡಿಕೊಂಡರೆ ಆಗ ಶೀತ ಮತ್ತು ಗಂಟಲಿನ ನೋವು ಕಡಿಮೆಯಾಗುವುದು. ಚಾಮೊಮೈಲ್ ಚಹಾ ಕುಡಿದರೆ ಇದೇ ರೀತೀಯ ಪರಿಣಾಮ ಸಿಗುವುದು. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಉತ್ತೇಜಿಸಿ, ಗಂಟಲು ನೋವನ್ನು ಉಂಟು ಮಾಡುವ ಸೋಂಕು ನಿವಾರಣೆ ಮಾಡಲು ನೆರವಾಗುವುದು.

4.ಒಂದು ಲಿಂಬೆಯ ರಸ

4.ಒಂದು ಲಿಂಬೆಯ ರಸ

ಒಂದು ಲೋಟ ಬಿಸಿ ನೀರಿಗೆ ಒಂದು ಲಿಂಬೆಯ ರಸವನ್ನು ಹಿಂಡಿಕೊಳ್ಳಿ. ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ದಿನದಲ್ಲಿ ಎರಡು ಸಲ ಈ ನೀರನ್ನು ಕುಡಿಯಿರಿ. ಇದು ನಿಮಗೆ ನೆರವಾಗುವುದು.

5.ಬಿಸಿಬಿಸಿ ಅರಿಶಿನ ಹಾಲು

5.ಬಿಸಿಬಿಸಿ ಅರಿಶಿನ ಹಾಲು

ಗಂಟಲು ಕೆರೆತ ಕಾಣಿಸಿಕೊಂಡಾಗ ಮನೆಮದ್ದನ್ನು ಬಳಸಿದರೆ ಅದರಿಂದ ಮುಕ್ತಿ ಪಡೆಯಬಹುದು. ಅರಿಶಿನ ಹಾಕಿದ ಹಾಲನ್ನು ದಿನದಲ್ಲಿ 2-3 ಸಲ ಕುಡಿಯುವುದರಿಂದ ಗಂಟಲು ಕೆರೆತ ನಿವಾರಿಸಬಹುದು. ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿಯೂತ ಶಮನಕಾರಿ ಗುಣಗಳಿವೆ. ಇದು ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆದು ಉರಿಯೂತವನ್ನು ಶಮನಗೊಳಿಸುತ್ತದೆ. ಇದರಿಂದ ಗಂಟಲಿನಲ್ಲಿನ ಕೆರೆತ ಕಡಿಮೆಯಾಗುತ್ತದೆ.

*ಒಂದು ಕುಟ್ಟಾಣಿಯನ್ನು ತೆಗೆದುಕೊಂಡು ಅದಕ್ಕೆ ಸುಮಾರು 6-7 ಕರಿಮೆಣಸನ್ನು ಹಾಕಿ ಹುಡಿ ಮಾಡಿಕೊಳ್ಳಿ.

ಈಗ ಒಂದು ಲೋಟ ಹಾಲನ್ನು ತೆಗೆದುಕೊಂಡು 5-10 ನಿಮಿಷ ಕುದಿಸಿ.

*ಹಾಲು ಕುದಿಯುತ್ತಿರುವಂತೆ ಅರ್ಧ ಟೀ ಚಮಚ ಅರಿಶಿನ ಮತ್ತು ಸ್ವಲ್ಪ ಹುಡಿ ಮಾಡಿದ ಕರಿಮೆಣಸಿನ ಹುಡಿಯನ್ನು ಹಾಕಿ.

*ಹಾಲಿಗೆ ಒಂದು ಚಮಚ ಸಕ್ಕರೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಬಳಿಕ ಗ್ಯಾಸ್‌ ಒಲೆ ಆಫ್ ಮಾಡಿ

ಬಿಸಿಯಾಗಿರುವಾಗಲೇ ಈ ಮಿಶ್ರಣವನ್ನು ಕುಡಿಯಿರಿ.

*ಬೆಳಿಗ್ಗೆ ಉಪಹಾರ ಸೇವಿಸಿದ ಬಳಿಕ ಮತ್ತು ರಾತ್ರಿ ನಿದ್ರಿಸುವ ಮೊದಲು ಇದನ್ನು ಸೇವಿಸಿ. ಇದು ಗಂಟಲು ಕೆರೆತವನ್ನು ನಿವಾರಿಸುತ್ತದೆ.

6.ಪುದೀನಾ

6.ಪುದೀನಾ

ಪುದೀನಾವು ತಾಜಾ ಉಸಿರು ನೀಡುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಪುದೀನಾ ಎಣ್ಣೆಯ ಮಿಶ್ರಣವು ಗಂಟಲು ನೋವಿಗೆ ಶಮನಕಾರಿ. ಪುದೀನಾದಲ್ಲಿ ಮೆಂಥಾಲ್ ಇದ್ದು, ಕಫ ತೆಳುವಾಗಲು ಮತ್ತು ಗಂಟಲು ಹಾಗೂ ಕೆಮ್ಮು ಶಮನವಾಗಲು ನೆರವಾಗುವುದು. ಪುದೀನಾದಲ್ಲಿ ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳು ಇವೆ. ಶಮನ ನೀಡಲು ಇದು ನೆರವಾಗುವುದು.

ಯಾವುದಾದರೂ ಸಾರಭೂತ ತೈಲವನ್ನು ನೇರವಾಗಿ ಬಳಸಬೇಡಿ. ಇದನ್ನು ಯಾವುದಾದರೂ ಬೇರೆ ತೈಲಗಳಾಗಿರುವ ಆಲಿವ ತೈಲ, ಸಿಹಿ ಬಾದಾಮಿ ಎಣ್ಣೆ ಅಥವಾ ಮೃಧುವಾದ ತೆಂಗಿನೆಣ್ಣೆ ಬಳಸಿ. ಪುದೀನಾ ಎಣ್ಣೆಗೆ ಐದು ಹನಿ ನಿಮ್ಮಿಷ್ಟದ ಎಣ್ಣೆಹಾಕಿಕೊಂಡು ಬಳಸಿ.

7.ಅಡುಗೆ ಸೋಡಾ

7.ಅಡುಗೆ ಸೋಡಾ

ಉಪ್ಪು ನೀರನ್ನು ಬಾಯಿ ಮುಕ್ಕಳಿಸಿಕೊಳ್ಳಲು ಹೆಚ್ಚಾಗಿ ಬಳಸುವರು. ಆದರೆ ಉಪ್ಪುನೀರಿನೊಂದಿಗೆ ಅಡುಗೆಸೋಡಾ ಬೆರೆಸಿಕೊಂಡು ಕುಡಿದರೆ ಆಗ ಗಂಟಲು ನೋವು ಶಮನವಾಗುವುದು. ಈ ಮಿಶ್ರಣದಿಂದ ಬಾಯಿ ಮುಕ್ಕಳಿಸಿಕೊಂಡರೆ ಆಗ ಅದು ಬ್ಯಾಕ್ಟೀರಿಯಾ ಕೊಲ್ಲುವುದು ಮತ್ತು ಯೀಸ್ಟ್ ಹಾಗೂ ಶಿಲೀಂಧ್ರ ಬೆಳವಣಿಗೆಯಾದಂತೆ ತಡೆಯುವುದು. ದ ನ್ಯಾಷನಲ್ ಕ್ಯಾನ್ಸರ್ ಇನ್ಸಿಟ್ಯೂಟ್ ಹೇಳುವಂತೆ ಒಂದ ಕಪ್ ಬಿಸಿ ನೀರಿಗೆ ¼ ಕಪ್ ಅಡುಗೆ ಸೋಡಾ ಮತ್ತು 1/8 ಚಮಚ ಉಪ್ಪು ಹಾಕಿಕೊಂಡು ಮಿಶ್ರಣ ಮಾಡಬೇಕು. ಪ್ರತೀ ಮೂರು ಗಂಟೆಗೊಮ್ಮೆ ಈ ಮಿಶ್ರಣದಿಂದ ಬಾಯಿ ಮುಕ್ಕಳಿಸಿಕೊಳ್ಳಬೇಕು.

8.ಮೆಂತೆ ಕಾಳು

8.ಮೆಂತೆ ಕಾಳು

ಮೆಂತೆಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಹಲವಾರು ವಿಧದಿಂದ ಮೆಂತ್ಯೆ ಕಾಳನ್ನು ನೀವು ಬಳಸಿಕೊಳ್ಳಬಹುದು. ಇದರ ಕಾಳನ್ನು ತಿನ್ನಬಹುದು, ಎಣ್ಣೆ ಹಚ್ಚಿಕೊಳ್ಳಬಹದು ಅಥವಾ ಮೆಂತ್ಯೆ ಚಹಾ ಕುಡಿಯಬಹುದು. ಮೆಂತ್ಯೆ ಚಹಾ ಗಂಟಲು ನೋವಿಗೆ ತುಂಬಾ ಪರಿಣಾಮಕಾರಿ ನೈಸರ್ಗಿಕ ಔಷಧಿ.

ಮೆಂತೆ ಕಾಳಿನಲ್ಲಿ ಇರುವಂತಹ ಶಮನಕಾರಿ ಗುಣಗಳನ್ನು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಇದು ನೋವಿನಿಂದ ಶಮನ ನೀಡುವುದು, ಕಿರಿಕಿರಿ ಮತ್ತು ಉರಿಯೂತ ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ಮೆಂತೆ ಕಾಳು ಶಿಲೀಂಧ್ರ ವಿರೋಧಿಯಾಗಿ ಕೆಲಸ ಮಾಡುವುದು. ಗರ್ಭಿಣೆ ಮಹಿಳೆಯರು ಇದನ್ನು ಕಡೆಗಣಿಸಬೇಕು ಎಂದು ಹೇಳಲಾಗುತ್ತದೆ. ಎರಡರಿಂದ ಮೂರು ಚಮಚ ಮೆಂತೆಯನ್ನು ನೀರಿಗೆ ಹಾಕಿಕೊಂಡು ಅದನ್ನು ಸರಿಯಾಗಿ ಕುದಿಸಿ. ಅದನ್ನು ಗಾಳಿಸಿಕೊಂಡು ಬಳಿಕ ತಣ್ಣಗಾಗಲು ಬಿಡಿ. ಈ ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ.

9.ಬೆಳ್ಳುಳ್ಳಿ

9.ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಬೆಳ್ಳುಳ್ಳಿಯಲ್ಲಿರುವಂತಹ ಅಲಿಸಿನ್ ಎನ್ನುವ ಅಂಶವು ಸೋಂಕಿನ ವಿರುದ್ಧ ಹೋರಾಡುವುದು. ಬೆಳ್ಳುಳ್ಳಿ ಸಪ್ಲಿಮೆಂಟ್ ನ್ನು ನಿಯಮಿತವಾಗಿ ತಿಂದರೆ ಅದರಿಂದ ಶೀತದ ವೈರಸ್ ನ್ನು ಕೊಲ್ಲಬಹುದು. ತಾಜಾ ಬೆಳ್ಳುಳ್ಳಿಯನ್ನು ನಿಮ್ಮ ಆಹಾರಕ್ಕೆ ಸೇರಿಸಿದರೆ ಅದರಿಂದ ಬ್ಯಾಕ್ಟೀರಿಯಾ ನಿವಾರಿಸಬಹುದು. ಗಂಟಲಿನ ಊತ ಕಡಿಮೆ ಮಾಡಲು ಬೆಳ್ಳುಳ್ಳಿ ಎಸಲನ್ನು ನೆಕ್ಕಿರಿ.

ಯಾಕೆಂದರೆ ಬೆಳ್ಳುಳ್ಳಿಯಲ್ಲಿ ಹಲವಾರು ಆರೋಗ್ಯ ಗುಣಗಳು ಇವೆ. ಇದನ್ನು ನೀವು ಪ್ರಯತ್ನಿಸಿ ನೋಡಬಹುದು. ಆದರೆ ನೀವು ಬೆಳ್ಳುಳ್ಳಿ ವಾಸನೆ ಬರದೇ ಇರಲು ಬ್ರಷ್ ಮಾಡಿಕೊಳ್ಳಬೇಕಾಗಿ ಬರಬಹುದು.

10.ತರಕಾರಿ ಸೂಪ್‌ಗಳನ್ನು ಸೇವಿಸಿ

10.ತರಕಾರಿ ಸೂಪ್‌ಗಳನ್ನು ಸೇವಿಸಿ

ಸೂಪ್‌ಗಳನ್ನು ನಿಯಮಿತವಾಗಿ ಸೇವಿಸಿ ಸುಗರು ಎಲಿಕ್ಸಿರ್‌ನಂತೆ ಸೂಪ್ ಸಹ ನಿಮ್ಮ ಬಾಯಿಯಲ್ಲಿ ತೇವಾಂಶವನ್ನು ತಂದು ಕೊಡುವ ಪಾನೀಯವಾಗಿರುತ್ತದೆ.ಜೊತೆಗೆ ಇದು ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನದಲ್ಲಿಡುತ್ತದೆ. ಒಣ ಗಂಟಲು ತೇವಾಂಶ ಹೀನತೆಯ ಸಂಕೇತ. ಇದು ದೇಹಕ್ಕೆ ನೀರಿನಂಶದ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತದೆ. ತರಕಾರಿ ಸೂಪ್‌ಗಳಲ್ಲಿ ವಿಟಮಿನ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ ಮತ್ತು ಖನಿಜಾಂಶಗಳು ಸಹ ಇದರಿಂದ ದೇಹಕ್ಕೆ ಸಿಗುತ್ತವೆ.

English summary

Simple Natural Remedies for Sore Throat

A sore throat refers to pain, itchiness, or irritation of the throat. Throat pain is the primary symptom of a sore throat. It may get worse when you try to swallow, and you may have difficulty swallowing food and liquids. Even if a sore throat isn’t serious enough for a trip to the doctor, it’s still painful and may prevent you from getting a good night’s sleep. Fortunately, you can use at-home remedies to soothe the pain and irritation.
X
Desktop Bottom Promotion