For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಸಮಯದಲ್ಲಿ ಈ 5 ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿ ಹೋಗಿ!

By Sushma Charhra
|

ಮಹಿಳೆಯರು ಒಂದು ಹಂತಕ್ಕೆ ತಮ್ಮ ಮುಟ್ಟಿನ ದಿನಗಳನ್ನು ಅತ್ಯಂತ ಕೆಟ್ಟ ದಿನಗಳು ಎಂದು ಭಾವಿಸುತ್ತಾರೆ. ಅದಕ್ಕೆ ಕಾರಣ ಅವರಿಗೆ ಬರುವ ನೋವು ಮತ್ತು ಮನಸ್ಸಿನಲ್ಲಾಗುವ ಬದಲಾವಣೆಗಳು. ಮುಟ್ಟಿನ ದಿನಗಳು ಅಹಿತಕರ ಮತ್ತು ಅನಾನುಕೂಲಕರವಾಗಿದ್ದರೂ ಕೂಡ, ಅದು ನಿಮ್ಮ ದೇಹದ ಸಂತಾನೋತ್ಪತ್ತಿ ಪ್ರಕ್ರಿಯೆಯು ಸರಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ನಿಮಗೆ ಸೂಚಿಸುತ್ತದೆ. ಅಷ್ಟೇ ಅಲ್ಲ ಸರಿಯಾಗಿ ತಿಂಗಳಿಗೆ ಮುಟ್ಟು ಬಂದರೆ ನಿಮ್ಮ ಆರೋಗ್ಯ ಸರಿಯಾಗಿದೆ ಎಂಬುದನ್ನು ನೀವು ಅರಿಯಲು ನೆರವಾಗುತ್ತೆ. ಈ ಲೇಖನದಲ್ಲಿ ನಾವು ಮುಟ್ಟಿನ ದಿನಗಳ ಸಮಸ್ಯೆ ಮತ್ತು ಅದನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಚರ್ಚಿಸಲಿದ್ದೇವೆ., ಇದು ನಿಮಗೆ ಖಂಡಿತ ಒಂದಲ್ಲ ಒಂದು ಸಮಯಕ್ಕೆ ನೆರವಿಗೆ ಬರಲಿದೆ.

ಮುಟ್ಟಿನ ಕ್ರಮಬದ್ಧವಾದ ಚಕ್ರ ಅಂದರೆ ಏನು?

ಒಬ್ಬ ಆರೋಗ್ಯವಂತ ಮಹಿಳೆಯರ ಕ್ರಮಬದ್ಧವಾದ ಮುಟ್ಟಿನ ಸೈಕಲ್ ಅಥವಾ ಚಕ್ರ 28 ದಿನಗಳಿಗಾಗಿರುತ್ತದೆ ಮತ್ತು ನಾರ್ಮಲ್ ಮುಟ್ಟು 3 ರಿಂದ 5 ದಿನಗಳ ವರೆಗೆ ಇರಬೇಕು. ಆದರೆ ಇದು ಮಹಿಳೆಯಿಂದ ಮಹಿಳೆಯರಲ್ಲಿ ಬೇರೆಬೇರೆಯಾಗಿರುತ್ತದೆ. ಆರೋಗ್ಯ ತಜ್ಞರು ಅಭಿಪ್ರಾಯ ಪಡುವಂತೆ 3 ದಿನಗಳ ಮುಟ್ಟು ಕೆಲವು ಮಹಿಳೆಯರಿಗೆ ನಾರ್ಮಲ್ ಆಗಿರುತ್ತದೆ. ಒಂದು ವೇಳೆ ಅತಿಯಾದ ಮುಟ್ಟು ಇದ್ದರೆ ಅದು 7 ದಿನಗಳ ವರೆಗೂ ಮುಂದುವರಿದಿರಬಹುದು. ನೀವು ನಿಮ್ಮ ಪಿರೇಡಿನ ದಿನಗಳು ಎಷ್ಟು ಉದ್ದವಾಗಿದೆ ಎಂದು ಯೋಚಿಸುವ ಬದಲು ಏನಾದರೂ ಬದಲಾವಣೆಗಳಾಗಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.

health tips in kannada

ಪ್ರತಿಯೊಬ್ಬ ಮಹಿಳೆಯೂ ತನ್ನ ಮುಟ್ಟಿನ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು. ಯಾಕೆಂದರೆ ಇದು ಸಾಕಷ್ಟು ಸುಳಿವುಗಳನ್ನು ನೀಡಿ, ನಿಮ್ಮ ದೇಹದ ಕೆಲವು ವಿಚಾರಗಳು ಸರಿಯಾಗಿದೆಯಾ ಅಥವಾ ಇಲ್ಲವಾ ಎಂಬುದನ್ನು ತಿಳಿಸುತ್ತೆ.

ಅನಿಯಮಿತ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ?

ಮುಟ್ಟಿನ ದಿನಗಳ ಸಮಸ್ಯೆಯ ಚಿಹ್ನೆಗಳು

1.ನಿಮ್ಮ ಮುಟ್ಟಿನ ದಿನಗಳು ನಿಧಾನಗತಿಗೆ ಬರುವುದು

ನಿಮ್ಮ ಮುಟ್ಟು ಪ್ರತಿ ತಿಂಗಳು ಕಾಣಿಸಿಕೊಳ್ಳದೇ ತಪ್ಪಿ ಹೋಗುವ ಪ್ರಕ್ರಿಯೆಯನ್ನು ಎಮೆನೋರಹಿಯಾ ಎಂದು ಹೇಳುತ್ತಾರೆ. ಇದು ವಯಸ್ಸಿನಿಂದ ವಯಸ್ಸಿನವರಲ್ಲಿ ಬೇರೆಬೇರೆಯಾಗಿರುತ್ತದೆ.20 ರಿಂದ 30 ವರ್ಷದ ಮಹಿಳೆಯರು ಯಾರು ಲೈಂಗಕತೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಾರೋ ಅವರು ತಾಯಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತೆ. ಇನ್ನೊಂದೆಡೆ, 40 ರಿಂದ 50 ವರ್ಷದ ಮಹಿಳೆಯರಲ್ಲಿ ಪೆರಿಮೆನೋಪಾಸ್( ಅಂದರೆ ರಜೋನಿವೃತ್ತಿ ಸುತ್ತಲಿನ ಮುಟ್ಟು) ಇರಬಹುದು. ಇದು ಅಂಡಾಶಯಗಳು ಕಡಿಮೆ ಈಸ್ಟ್ರೋಜನ್ ನ್ನು ಬಿಡುಗಡೆ ಮಾಡಿದಾಗ ಕಾಣಿಸಿಕೊಳ್ಳುವ ಒಂದು ಪ್ರಕ್ರಿಯೆ ಆಗ ಮುಟ್ಟು ಕಡಿಮೆ ಪ್ರೀಕ್ವೆಂಟ್ ಆಗಿ ಕಾಣಿಸಿಕೊಳ್ಳುತ್ತೆ. ಅಂದರೆ ಪ್ರತಿ ತಿಂಗಳು ಬರದೇ ಇರಬಹುದು.

ಒಂದು ವೇಳೆ 12 ತಿಂಗಳು ಮುಟ್ಟು ಕಾಣಿಸಿಕೊಳ್ಳದೇ ಇದ್ದರೆ, ನೀವು ಋತುಬಂಧಧ ಸಮಯದಲ್ಲಿದ್ದೀರಿ ಎಂದರ್ಥ. ಈ ರಜೋನಿವೃತ್ತಿ ಅಥವಾ ಮುಟ್ಟು ನಿಲ್ಲುವ ಕಾಲ ಹೆಚ್ಚಿನ ಮಹಿಳೆಯರಲ್ಲಿ ಸರಾಸರಿಯಾಗಿ 51 ನೇ ವರ್ಷವಿರುತ್ತೆ.

ಅತಿಯಾದ ವ್ಯಾಯಾಮವೂ ಕೂಡ ನಿಮ್ಮ ಮುಟ್ಟು ಸರಿಯಾದ ಕಾಲಕ್ಕೆ ಆಗದೇ ಇರುವಂತೆ ಮಾಡಬಹುದು. ಉದಾಹರಣೆಗೆ ಮಹಿಳಾ ಅಥ್ಲೀಟ್ ಗಳು ಅವರು ಅತಿಯಾಗಿ ವರ್ಕ್ ಔಟ್ ಮಾಡುತ್ತಾರೆ ಹಾಗಾಗಿ ಅವರ ಪೀರೇಡ್ಸ್ ನಲ್ಲಿ ವ್ಯತ್ಯಯವಿರುತ್ತೆ. ಓಟಗಾರರು, ಡ್ಯಾನ್ಸರ್ ಗಳಲ್ಲಿಯೂ ಕೂಡ ಇದು ಸಾಮಾನ್ಯವಾಗಿರುತ್ತೆ. ಮುಟ್ಟಿನ ಪ್ರಕ್ರಿಯೆಗೆ ಕೆಲಸ ಮಾಡುವ ಹಾರ್ಮೋನುಗಳಲ್ಲಿ ವ್ಯತ್ಯಯವಾಗುವ ಪರಿಣಾಮದಿಂದಾಗಿ ವರ್ಕ್ ಔಟ್ ಮಾಡುವ ಮಹಿಳೆಯರಲ್ಲಿ ಈ ಸಮಸ್ಯೆ ಇರುತ್ತೆ.

ಮುಟ್ಟು ತಪ್ಪಿಹೋಗಲು ಇರುವ ಇತರೆ ಹಲವು ಕಾರಣಗಳ ಪಟ್ಟಿ ಇಲ್ಲಿದೆ ನೋಡಿ.

• ಥೈರಾಯ್ಡ್ ಸಮಸ್ಯೆಗಳು

• ಆಹಾರದ ಸಮಸ್ಯೆಗಳು

• ಎದೆಹಾಲು ಉಣಿಸುವ ಪ್ರಕ್ರಿಯೆ

• ಕೆಲವು ಗರ್ಭನಿರೋಧಕ ಮಾತ್ರೆಗಳು

• ಒಬೆಸಿಟಿ

• ಮಸ್ತಿಷ್ಕ ನಿಮ್ನಾಂಗದ ಸಮಸ್ಯೆಗಳು

• ಪಾಲಿಸಿಸ್ಟಿಕ್ ಅಂಡಾಶಯದ ಸಿಂಡ್ರೋಮ್

• ಒತ್ತಡ

• ಗರ್ಭಕೋಶ ಸಂಬಂಧಿ ಕಾಯಿಲೆಗಳು

2. ನಾರ್ಮಲ್ ಗಿಂತ ಹೆಚ್ಚು ಮುಟ್ಟು ಹೊರಹೋಗುವುದು

ಹೆಚ್ಚಿನ ಮಹಿಳೆಯರಿಗೆ ಎರಡರಿಂದ ಮೂರು ಟೇಬಲ್ ಸ್ಪೂನ್ ನಷ್ಟು ರಕ್ತ ಪ್ರತಿ ತಿಂಗಳು ಹೊರಹೋಗುತ್ತೆ. ಆದರೆ ಕೆಲವು ಮಹಿಳೆಯರಲ್ಲಿ ಕಡಿಮೆ ಅಥಾ ಹೆಚ್ಚು ಅಂದರೆ 5 ಟೇಬಲ್ ಸ್ಪೂನ್ ರಕ್ತ ಹೊರಹೋಗಬಹುದು. ಅತಿಯಾಗಿ ರಕ್ತ ಹೊರಹೋಗುವಿಕೆಯಿಂದಾಗಿ ದೇಹದ ಕಬ್ಬಿಣಾಂಶ ಕಡಿಮೆಯಾಗುತ್ತೆ. ಹಾಗಾಗಿ ದೇಹವು ಕಬ್ಬಿಣಾಂಶವನ್ನು ಉತ್ತತ್ಪಿ ಮಾಡುವ ಹಿಮೋಗ್ಲೋಬಿನ್ ಅಂಶವನ್ನು ಬಯಸುತ್ತೆ. ಇದು ನಿಮ್ಮ ಕೆಂಪು ರಕ್ತಕಣಗಳು ಆಮ್ಲಜನಕವನ್ನು ದೇಹದ ಇತರೆಡೆಗೆ ಪ್ರಯಾಣಿಸಲು ನೆರವು ನೀಡುತ್ತೆ.

ಕೆಂಪು ರಕ್ತಕಣಗಳು ಹೇರಳವಾಗಿ ಕಡಿಮೆಯಾಗುವಿಕೆಯು ಅನೀಮಿಯಾ ಸಮಸ್ಯೆಗೆ ಕಾರಣವಾಗುತ್ತೆ. ಕಳೆಗುಂದಿದ ಚರ್ಮ, ಆಯಾಸ, ಮತ್ತು ಉಸಿರಾಟವು ಸ್ವಲ್ಪತೆ ಕಾಣಿಸಿಕೊಳ್ಳುವುದು ಅನಿಮಿಯಾದ ಲಕ್ಷಣಗಳಾಗಿರುತ್ತದೆ.

ಇದನ್ನು ಹೊರತು ಪಡಿಸಿ ಅತಿಯಾಗಿ ರಕ್ತ ಹೊರಹೋಗುವಿಕೆಗೆ ಬೇರೆ ಕಾರಣಗಳು ಇರಬಹುದು. ಅವುಗಳ ಪಟ್ಟಿಯನ್ನು ಇಲ್ಲಿ ಕೆಳಗೆ ನೀಡಲಾಗಿದೆ.

o ಯೂರಿನ್ ಫೈಬ್ರಾಯ್ಡ್ಸ್

• ಗರ್ಭಪಾತ

• ಸ್ಟಿರಾಯ್ಡ್ ಗಳು ಮತ್ತು ರಕ್ತ ತೆಳುವಿಕೆಗಾಗಿ ಔಷಧಿಗಳ ಬಳಕೆ

• ಗರ್ಭಕೋಶದ ಕ್ಯಾನ್ಸರ್

• ಗರ್ಭ ನಿರೋಧಕ ಮಾತ್ರೆಗಳಿಂದ ಆಗುವ ಬದಲಾವಣೆಗಳು

ಅಷ್ಟೇ ಅಲ್ಲ, ಪ್ರತಿ ಗಂಟೆಗೂ ನಿಮ್ಮ ಸ್ಯಾನಿಟರಿ ನ್ಯಾಪಿಕ್ಸ್ ಗಳನ್ನು ಬದಲಾಯಿಸಬೇಕಾಗಿ ಬಂದರೆ ಅದೂ ಕೂಡ ನಿಮಗೆ ಸಹಜ ಸ್ಥಿತಿಯಲ್ಲಿ ರಕ್ತ ಹೋಗುತ್ತಿಲ್ಲ ಎಂಬುದರ ಸೂಚನೆಯಾಗಿರುತ್ತದೆ. ಇಂತಹ ಸಂದರ್ಬದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.

3. ಮುಟ್ಟಿನ ದಿನಗಳ ಮಧ್ಯಂತರದಲ್ಲಿ ರಕ್ತ ಹೊರಹೋಗುವಿಕೆ

ಮುಟ್ಟಿನ ದಿನಗಳನ್ನು ಹೊರತು ಪಡಿಸಿ ತಿಂಗಳ ಮಧ್ಯದಲ್ಲಿ ಎಂದೋ ಒಂದು ದಿನ ರಕ್ತ ಹೋಗುತ್ತಿದ್ದರೆ ಅದನ್ನು ಯಾವ ಮಹಿಳೆ ನಿಷ್ಕಾಳಜಿ ಮಾಡಬಾರದು. ಅಥವಾ ನಿಮ್ಮ ವೃಂತ ಕೋಶದಲ್ಲಿ ಕೆರಳಿಕೆ,

ಹುಟ್ಟು ನಿಯಂತ್ರಿಸುವ ಮಾತ್ರೆಗಳು, ಯೂಟ್ರಸ್ ಕ್ಯಾನ್ಸರ್ ಇತ್ಯಾವುದೇ ಕಾರಣದಿಂದ ಕೂಡ ಹೀಗೆ ಆಗಿರಬಹುದು. ಸೋ ಕೇರ್ ಫುಲ್ ಆಗಿರಿ.

4. ಮುಟ್ಟಿನ ದಿನಗಳಲ್ಲಿ ಸಹಿಸಲಾಗದ ಅಸಾಧ್ಯ ನೋವು ಕಾಣಿಸುತ್ತಿದೆಯಾ?

ಮುಟ್ಟಿನ ದಿನಗಳಲ್ಲಿ ಒಂದು ಹಂತಕ್ಕೆ ನೋವು ಕಾಣಿಸಿಕೊಳ್ಳುವುದು ಸಹಜವೇ ಆಗಿರುತ್ತದೆ. ಆದರೆ ಹೆಚ್ಚಿನ ಮಹಿಳೆಯರಿಗೆ ಸಹಿಸಲಾಗದ ಅಸಾಧ್ಯ ಸೆಳೆತವಿರುತ್ತೆ. ಅವರು ಹಾಸಿಗೆಯಿಂದ ಮೇಲೆ ಏಳಲೂ ಸಾಧ್ಯವಿರುವುದಿಲ್ಲ.

.ನೋವಿರುವ ಮುಟ್ಟನ್ನು ಡೈಸೋಮೆನೋರಿಯಾ ಎಂದು ಕರೆಯಾಗುತ್ತೆ. ಇದು ಇತರೆ ಕೆಲವು ಕಾಯಿಲೆ ಗಳ ಲಕ್ಷಣವೂ ಆಗಿರುತ್ತೆ. ಅತಿಸಾರ, ತಲೆನೋವು,ವಾಕರಿಕೆ,ವಾಂತಿ, ಬೆನ್ನಿನ ಕೆಳಭಾಗದಲ್ಲಿ ಅಥವಾ ಸೊಂಟದ ಹಿಂಭಾಗದಲ್ಲಿ ನೋವುಗಳಿಗೂ ಕಾರಣವಾಗುತ್ತ.

ಎಂಡೋಮೆಟ್ರೋಸಿಸ್ ಮತ್ತು ಫೈಬ್ರಾಯ್ಡ್ಸ್ ಗಳೂ ಕೂಡ ನೋವಿನ ಮುಟ್ಟಿಗೆ ಕಾರಣವಾಗಿರಬಹುದು.

5. ದೊಡ್ಡ ದೊಡ್ಡ ರಕ್ತದ ಹೆಪ್ಪುಗಟ್ಟಿದಂತ ಭಾಗ ಹೊರಹೋಗುವಿಕೆ

ಕೆಲವು ಮಹಿಳೆಯರಿಗೆ ರಕ್ತವು ಹೆಪ್ಪುಗಟ್ಟಿರುವಂತೆ ಹೊರಹೋಗುತ್ತೆ. ಇಂತಹ ಸಂದರ್ಬದಲ್ಲಿ ಅವರು ಹೈಪರ್ ಥೈರಾಯ್ಡಿಸಮ್, ಸಿಪ್ನೋಮ್ಯಾಟಿಕ್ ಅನಿಮಿಯಾ, ಅಥವಾ ಯೂರಿನ್ ಫೈಬ್ರಾಯ್ಡ್ಸ್ ಸಮಸ್ಯೆಯಿಂದ ಇರಬಹುದು.ಒಂದು ವೇಳೆ ನಿಮಗೆ ಇಂತಹ ದೊಡ್ಡ ಬ್ಲಡ್ ಕ್ಲಾಟ್ ಗಳಿದ್ದಲ್ಲಿ ಕೂಡಲೇ ಗೈನೋಕಾಲಜಿಸ್ಟ್ ನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ ಮತ್ತು ಸರಿಯಾದ ಚಿಕಿತ್ಸೆ ಪಡೆಯಿರಿ.

• ಯಾವಾಗ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು ?

ಯಾವುದೇ ಮುಟ್ಟು ಯಾವಾಗಲಿನಂತೆ ಇಲ್ಲದೇ ಸಮಸ್ಯೆಯಲ್ಲಿದ್ದರೆ, ಅದರಲ್ಲೂ ಪ್ರಮುಖವಾಗಿ ನಿಮಗೆ ತೀರಾ ಅಹಿತಕರವಾಗಿದೆ ಎಂದು ಅನ್ನಿಸುತ್ತಿದ್ದರೆ, ನಿಮ್ಮನ್ನು ನಿಮ್ಮ ಸಾಮಾನ್ಯ ಚಟುವಟಿಕೆಗಳನ್ನು ನಡೆಸದಂತೆ ಅದು ತಡೆದಿದ್ದರೆ, ಕೂಡಲೇ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಒಂದು ವೇಳೆ ಈ ಕೆಳಕಂಡ ಕಾರಣಗಳಿದ್ದಲ್ಲಿ ಕೂಡಲೇ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬಹುದು.

• ಅನಿರೀಕ್ಷಿತವಾಗಿ ನಿಮ್ಮ ಮುಟ್ಟು ಅನಿಯಮಿತವಾದರೆ

• 21 ದಿನಗಳಿಗೂ ಮುಂಚೆಯೇ ಪದೇ ಪದೇ ಮುಟ್ಟು ಕಾಣಿಸಿಕೊಂಡರೆ

• ನಿಮ್ಮ ರಕ್ತ ಹೊರಹೋಗುವಿಕೆ 7 ದಿನಗಳಿಗಿಂತಲೂ ಅಧಿಕವಾಗಿದ್ದರೆ

• ಪ್ರತಿ ಗಂಟೆಯೂ ನಿಮ್ಮ ಸ್ಯಾನಿಟರಿ ಪ್ಯಾಡ್ ಸಂಪೂರ್ಣ ಒದ್ದೆಯಾಗಿ ನೀವು ಬದಲಿಸಲೇ ಬೇಕಾದ ಸಂದರ್ಬ ಬರುತ್ತಿದ್ದರೆ

• ಮುಟ್ಟು ತುಂಬಾ ನೋವಿನಿಂದ ಕೂಡಿದ್ದರೆ

• ನಿಮ್ಮ ಪಿರೇಡ್ ದಿನಗಳನ್ನು ಹೊರತು ಪಡಿಸಿ, ತಿಂಗಳ ಮಧ್ಯದಲ್ಲಿ ಯಾವತ್ತೋ ಒಂದು ದಿನ ರಕ್ತ ಹೊರಹೋಗುವಿಕೆಯಾದರೆ

ಈ ಯಾವುದೇ ಸಂಜ್ಞೆಗಳು ನಿಮ್ಮಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸಿ. ಇದರಲ್ಲಿ ಯಾವುದೇ ಮುಜುಗರ ಬೇಡ.

ಈ ಲೇಖನ ನಿಮಗೂ ಇಷ್ಟವಾದರೆ ನಿಮ್ಮವರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಅಭಿಪ್ರಾಯ ನಮಗೆ ಕಮೆಂಟ್ ಮೂಲಕ ತಿಳಿಸಿ

English summary

Signs Of Period Troubles That Tell You Should Visit A Doctor

Women at some point in their lives have declared that their periods is the worst thing, with all the pain and mood swings. Though it may be uncomfortable and inconvenient at times during menstruation, your period is your body's way of telling you that your reproductive system is working properly. In this article, we will be discussing period troubles and how to solve them.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more