For Quick Alerts
ALLOW NOTIFICATIONS  
For Daily Alerts

'ಗ್ರೀನ್ ಟೀ' ಜಾಸ್ತಿ ಕುಡಿಯಬೇಡಿ, ಆರೋಗ್ಯಕ್ಕೆ ಒಳ್ಳೆಯದಲ್ಲ!

By Arshad
|

ಹಸಿರು ಟೀ ಚೀನಾದಲ್ಲಿ ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದರೂ ಭಾರತ ಸಹಿತ ಇತರ ವರ್ಷಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಗೊಳ್ಳುತ್ತಿದೆ ಹಾಗೂ ವಿಶೇಷವಾಗಿ ತೂಕ ಇಳಿಸಿಕೊಳ್ಳುವವರು ತಮ್ಮ ಪೇಯವನ್ನು ಹಸಿರು ಟೀ ಗೆ ಬದಲಿಸಿಕೊಳ್ಳುತ್ತಿದ್ದಾರೆ. ಹಸಿರು ಟೀ ಎಲೆ, ದಂಟು ಹಾಗೂ ಕಾಂಡ ಎಲ್ಲವೂ ಔಷಧೀಯ ಗುಣಗಳಿಗೆ ಬಳಸಲ್ಪಡುತ್ತಿದ್ದು ಈ ಗುಣಗಳಿಂದಾಗಿಯೇ ವಿಶ್ವದ ಅತಿ ಹೆಚ್ಚಿನ ಆರೋಗ್ಯಕರ ಪೇಯ ಎಂದು ಪರಿಗಣಿಸಲ್ಪಟ್ಟಿದೆ.

ಆರೋಗ್ಯದ ಮೇಲೆ ಹಸಿರು ಟೀ ಬೀರುವ ಪರಿಣಾಮಗಳು ಅಪಾರವಾಗಿವೆ. ಕ್ಯಾನ್ಸರ್ ನಿಂದ ರಕ್ಷಣೆ, ಮೆದುಳಿನ ಕ್ಷಮತೆ ಹೆಚ್ಚಿಸುವುದು, ಖಿನ್ನತೆಯಿಂದ ರಕ್ಷಿಸುವುದು, ತಲೆನೋವು, ಅತಿಸಾರ, ಮೂಳೆಗಳು ಶಿಥಿಲಗೊಳ್ಳುವುದು, ಹೊಟ್ಟೆಯ ತೊಂದರೆಗಳು ಮೊದಲಾದವುಗಳ ವಿರುದ್ಧ ರಕ್ಷಣೆ ಒದಗಿಸುವುದು, ಹೃದಯ ಸಂಬಂಧಿ ತೊಂದರೆ, ಮಧುಮೇಹ, ಕಡಿಮೆ ರಕ್ತದೊತ್ತಡ, ಅತಿಯಾದ ದಂತ ಆಯಾಸ, ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವುದು ಮೊದಲಾದ ತೊಂದರೆಗಳು ಎದುರಾಗದಂತೆ ರಕ್ಷಣೆ ಒದಗಿಸುವುದು ಮೊದಲಾದ ಪ್ರಯೋಜನಗಳಿವೆ.

ಆದರೆ ಈ ಜಗತ್ತಿನ ಯಾವುದೇ ವಸ್ತುವಿನಲ್ಲಿರುವಂತೆ ಹಸಿರು ಟೀ ಸಹಾ ತನ್ನದೇ ಆದ ಕೆಲವು ಅಡ್ಡ ಅಥವಾ ದುಷ್ಟರಿಣಾಮದಿಂದ ಹೊರತಾಗಿಲ್ಲ. ಏಕೆಂದರೆ ಹಸಿರು ಟೀ ಯಲ್ಲಿಯೂ ಇತರ ಟೀಯಲ್ಲಿರುವಂತೆ ಕೆಫೀನ್ ಇದೆ. ಕೆಫೀನ್ ಪ್ರಮಾಣ ಹೆಚ್ಚಾದರೆ ಇದು ದೇಹದಲ್ಲಿ ನಡುಕ, ಉದ್ವೇಗ ಹಾಗೂ ನರೋದ್ರೇಕವನ್ನು ಹೆಚ್ಚಿಸುತ್ತದೆ.

ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!

ಪ್ರತಿ ಲೋಟ ಹಸಿರು ಟೀಯಲ್ಲಿ 2-4 ದಷ್ಟು ಕೆಫೀನ್ ಇದೆ. ಇದರ ಸೇವನೆಯಿಂದ ಏಕಾಗ್ರತೆ ಹಾಗೂ ಚಿಂತನಾಶಕ್ತಿಯ ಮೇಲೆ ಪ್ರಭಾವವುಂಟಾಗುತ್ತದೆ. ಬನ್ನಿ, ಹಸಿರು ಟೀ ಸೇವನೆ ಅಧಿಕವಾದರೆ ಇದರಿಂದ ಎದುರಾಗುವ ಅಡ್ಡಪರಿಣಾಮಗಳ ಬಗ್ಗೆ ಅರಿಯೋಣ..

ಜಠರದ ತೊಂದರೆಗಳು

ಜಠರದ ತೊಂದರೆಗಳು

ಹಸಿರು ಟೀಯಲ್ಲಿರುವ ಕೆಫೀನ್ ಪ್ರಮಾಣ ಚಿಕ್ಕದೇ ಆಗಿದ್ದರೂ, ಈ ಚಿಕ್ಕ ಪ್ರಮಾಣವೇ ಹೊಟ್ಟೆಯನ್ನು ಕೆಡಿಸಲು ಸಾಕಾಗುತ್ತದೆ. ಏಕೆಂದರೆ ಕೆಫೀನ್ ಹೊಟ್ಟೆಗೆ ತಲುಪಿದ ಬಳಿಕ ಜೀರ್ಣರಸದ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಹಾಗೂ ಇದು ಜಠರದ ತೊಂದರೆಗೆ ನಾಂದಿ ಹಾಡುತ್ತದೆ. ಇದರ ಅಡ್ಡಪರಿಣಾಮವಾಗಿ ನೋವು ಅಥವಾ ವಾಕರಿಕೆಯೂ ಎದುರಾಗಬಹುದು.

ತಲೆನೋವು

ತಲೆನೋವು

ಹಸಿರು ಟೀ ಸೇವನೆಯಿಂದ ಲಘುವಿನಿಂದ ಹಿಡಿದು ಭಾರೀ ಎನ್ನುವಷ್ಟು ತಲೆನೋವು ಆವರಿಸಬಹುದು. ಇದಕ್ಕೆಲ್ಲಾ ಇದರಲ್ಲಿರುವ ಕೆಫೀನ್ ಕಾರಣ. ಒಂದು ವೇಳೆ ಅತಿಯಾದ ತಲೆನೋವಿನಿಂದ ಬಳಲುತ್ತಿರುವ ವ್ಯಕ್ತಿಗಳು ಹಸಿರು ಟೀ ಸೇವಿಸಿದರೆ ತಲೆತಿರುಗುವಿಕೆ ಎದುರಾಗಬಹುದು. ಅದರಲ್ಲೂ ಮೈಗ್ರೇನ್ ತಲೆನೋವಿನ ರೋಗಿಗಳು ಹಸಿರು ಟೀ ಸೇವಿಸಿದರೆ ತಲೆನೋವು ಇನ್ನಷ್ಟು ಉಲ್ಬಣಗೊಳಿಸುವುದರಿಂದ ಈ ರೋಗಿಗಳಿಗೆ ಹಸಿರು ಟೀ ಸಲ್ಲದು. ಆದರೆ ಮೈಗ್ರೇನ್ ಲಘುವಾಗಿದ್ದರೆ ಹಾಗೂ ಹಸಿರು ಟೀ ಇಲ್ಲದೇ ಆಗುವುದಿಲ್ಲ ಎನ್ನುವಂತಿದ್ದರೆ ಮಾತ್ರ ಕೊಂಚ ಪ್ರಮಾಣದಲ್ಲಿ ಸೇವಿಸಬಹುದು.

ನಿದ್ದೆಯ ತೊಂದರೆಗಳು

ನಿದ್ದೆಯ ತೊಂದರೆಗಳು

ಹಸಿರು ಟೀ ಯನ್ನು ಸಂಜೆಯ ಬಳಿಕ ಸರ್ವಥಾ ಸೇವಿಸಬಾರದು. ಏಕೆಂದರೆ ಇದರ ಸೇವನೆಯಿಂದ ನರವ್ಯವಸ್ಥೆಯ ಮೇಲೆ ಪ್ರಚೋದನೆಯುಂಟಾಗಿ ನಿದ್ದೆ ಆವರಿಸಲು ತೊಂದರೆಯಾಗಬಹುದು ಹಾಗೂ ರಾತ್ರಿ ಬಲುಹೊತ್ತಿನವರೆಗೆ ನಿದ್ದೆ ಬಾರದೇ ಹೋಗಬಹುದು. ಇದರಲ್ಲಿರುವ ಕೆಫೇನ್ ನಿದ್ದೆ ಆವರಿಸಲು ಅಗತ್ಯವಾದ ರಾಸಾಯನಿಕಗಳು ಮೆದುಳನ್ನು ತಲುಪದಂತೆ ತಡೆಗಟ್ಟುತ್ತದೆ ಹಾಗೂ ಉದ್ವೇಗಕ್ಕೆ ಕಾರಣವಾಗುವ ಅಡ್ರಿನಲಿನ್ ಉತ್ಪತ್ತಿಗೆ ಪ್ರಚೋದನೆ ನೀಡುತ್ತದೆ.

ಕಬ್ಬಿಣದ ಕೊರತೆ

ಕಬ್ಬಿಣದ ಕೊರತೆ

ಒಂದು ನಂಬಲರ್ಹ ಅಧ್ಯಯನದ ಪ್ರಕಾರ ಹಸಿರು ಟೀ ಸೇವನೆ ಹೆಚ್ಚಾದರೆ ರಕ್ತಹೀನತೆಯೂ ಹೆಚ್ಚಾಗಬಹುದು. ಅಲ್ಲದೇ ಅಹಾರದ ಮೂಲಕ ಲಭಿಸುವ ಕಬ್ಬಿಣವನ್ನು ದೇಹ ಬಳಸಿಕೊಳ್ಳಲು ವಿಫಲವಾಗಿಸಬಹುದು. ಈ ಟೀಯಲ್ಲಿರುವ ಟ್ಯಾನಿನ್ ಹಾಗೂ ಪಾಲಿಫಿನಾಲ್ ಗಳು ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತವೆ. ಈ ಕಣಗಳು ಕಬ್ಬಿಣದ ಕಣಗಳೊಂದಿಗೆ ಮಿಳಿತಗೊಂಡು ದೇಹ ಹೀರಿಕೊಳ್ಳುವುದಕ್ಕಿಂತಲೂ ದೊಡ್ಡ ಕಣಗಳಾಗುವ ಮೂಲಕ ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಪಡಿಸುತ್ತದೆ.

ಬ್ಯೂಟಿ ಟಿಪ್ಸ್: ಮುಖದ ಗ್ರೀನ್ ಟೀ ಫೇಸ್ ಪ್ಯಾಕ್!

ಹೃದಯ ಬಡಿತದಲ್ಲಿ ಏರುಪೇರು

ಹೃದಯ ಬಡಿತದಲ್ಲಿ ಏರುಪೇರು

ಹಸಿರು ಟೀಯಲ್ಲಿರುವ ಕೆಫೀನ್ ಹೃದಯದ ಬಡಿತವನ್ನು ಏರಿಸುತ್ತದೆ ಹಾಗೂ ಗತಿಯಲ್ಲಿ ಏರುಪೇರಾಗಿಸುತ್ತದೆ. ಇದರ ಪರಿಣಾಮವಾಗಿ ಹೃದಯದ ಉಬ್ಬರವಿಳಿತ (palpitations) ಎದುರಾಗಬಹುದು. ತನ್ಮೂಲಕ ಎದೆನೋವು ಹಾಗೂ ಹೃದಯದ ಬಡಿತ ಆತಂಕಕ್ಕೆ ಕಾರಣವಾಗುವಷ್ಟು ಹೆಚ್ಚಬಹುದು ಹಾಗೂ ಇದು ಹೃದಯದ ಆರೋಗ್ಯವನ್ನು ಅಪಾಯಕ್ಕೆ ಒಡ್ಡಬಹುದು.

ಸ್ನಾಯುಗಳ ಸೆಡೆತ

ಸ್ನಾಯುಗಳ ಸೆಡೆತ

ಒಂದು ವೇಳೆ ಹಸಿರು ಟೀ ಸೇವನೆ ಹೆಚ್ಚಾದರೆ ಇದು ಸ್ನಾಯುಗಳ ಸೆಡೆತಕ್ಕೆ ಕಾರಣವಾಗಬಹುದು ಹಾಗೂ ಕೆಲವು ಅಂಗಗಳು ತಿರುಚಬಹುದು. ಏಕೆಂದು ಗೊತ್ತೇ? ಟೀ ಯಲ್ಲಿರುವ ಕೆಫೀನ್ restless leg syndrome ಅಥವಾ ಸ್ನಾಯುಗಳನ್ನು ಸತತವಾಗಿ ಬಳಸಿಕೊಳ್ಳುವ ಮೂಲಕ ಎದುರಾಗುವ ಸ್ನಾಯುಗಳ ಕುಸಿತಕ್ಕೆ ಕಾರಣವಾಗುತ್ತದೆ. ಈ ಮೂಲಕ ಕೆಲವು ಮೂಳೆಗಳು ಹಿಮ್ಮರಳದಂತೆ ಸ್ನಾಯುಗಳು ಸೆಡೆತಗೊಳುತ್ತವೆ. ವಿಶೇಷವಾಗಿ ಮೊಣಕಾಲಿನ ಮೀನಖಂಡ ಸೆಡೆತಕ್ಕೊಳಗಾಗಿ ಪಾದ ಮತ್ತು ಮೊಣಕಾಲು ಮಡಚಿ ನೇರವಾಗಿಸಲು ಆಗುವುದೇ ಇಲ್ಲ.

ಅತಿಸಾರ

ಅತಿಸಾರ

ಕೆಫೇನ್ ಒಂದು ವಿರೇಚಕ ಔಷಧಿಯಾಗಿದೆ. ಇದರ ಪ್ರಮಾಣ ಹೆಚ್ಚಾದರೆ ಅತಿಸಾರ ಎದುರಾಗುತ್ತದೆ ಹಾಗೂ ಸತವಾಗಿ ಶೌಚಾಲಯಕ್ಕೆ ಓಡಬೇಕಾಗುತ್ತದೆ ಹಾಗೂ ಮಲದ ಮೂಲಕ ಅತಿ ಹೆಚ್ಚೇ ಎನಿಸುವಷ್ಟು ನೀರು ವ್ಯರ್ಥವಾಗುತ್ತದೆ. ಆದ್ದರಿಂದ ಹಸಿರು ಟೀ ಕಡಿಮೆ ಪ್ರಮಾಣದಲ್ಲಿರಬೇಕು ಹಾಗೂ ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು.

ವಾಂತಿ

ವಾಂತಿ

ಒಂದು ಭಾರತೀಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಹಸಿರು ಟೀಯಲ್ಲಿರುವ ಪಾಲಿಫೆನಾಲ್ ಗಳು ಉತ್ಕರ್ಷಶೀಲ ಒತ್ತಡ ಎದುರಿಸುತ್ತವೆ. ಒಂದು ವೇಳೆ ಹಸಿರು ಟೀ ಸೇವನೆ ಹೆಚ್ಚಾದರೆ ಇದು ವಾಂತಿ, ವಾಕರಿಕೆಗೂ ಕಾರಣವಾಗಬಹುದು. ಪ್ರತಿದಿನ ಹಸಿರು ಟೀ ಮೂಲಕ ಸೇವಿಸಬಹುದಾದ ಕೆಫೀನ್ 300 ರಿಂದ 400 ಮಿಲಿಗ್ರಾಂ ಒಳಗೇ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಒಂದು ಕಪ್ ನಲ್ಲಿ ಸುಮಾರು ಐವತ್ತು ಮಿಲಿಗ್ರಾಂ ಕೆಫೀನ್ ಲಭಿಸುತ್ತದೆ. ಆ ಪ್ರಕಾರ ದಿನಕ್ಕೆ ಸೇವಿಸಬಹುದಾದ ಗರಿಷ್ಟ ಪ್ರಮಾಣವೆಂದರೆ ಎಂಟು ಕಪ್.

ಎದೆಯುರಿತ

ಎದೆಯುರಿತ

ಹಸಿರು ಟೀ ಆಮ್ಲೀಯವಾಗಿದ್ದು ಇದು ಅನ್ನಾನಾಳಕ್ಕೆ ಉರಿಯುಂಟುಮಾಡಬಹುದು. ಪರಿಣಾಮವಾಗಿ ಎದೆಯುರಿತ ಎದುರಾಗಬಹುದು. ಒಂದು ವೇಳೆ ಮಾರುಕಟ್ಟೆಯಲ್ಲಿ ಸಿಗುವ ಸಿದ್ದ ರೂಪದ ಹಸಿರು ಟೀ ಸೇವನೆಗೆ ನಿಮ್ಮ ಮನ ತುಡಿದರೆ ನಾವು ಮೊದಲೇ ಎಚ್ಚರಿಸುತ್ತಿದ್ದೇವೆ, ಈ ಪೇಯಕ್ಕೆ ಸಂರಕ್ಷಕರೂಪದಲ್ಲಿ ಸೇರಿಸಿರುವ ಅಸ್ಕಾರ್ಬಿಕ್ ಆಮ್ಲ ಅನ್ನನಾಳದಿಂದ ಆಹಾರ ಹಿಮ್ಮರಳು ಪ್ರಚೋದಿಸಬಹುದು ಹಾಗೂ ಹುಳಿತೇಗು, ಎದೆಯುರಿ ಮೊದಲಾದವು ಎದುರಾಗಬಹುದು.

ಮಧುಮೇಹ

ಮಧುಮೇಹ

ಮಧುಮೇಹಿಗಳು ಹಸಿರು ಟೀ ಸೇವನೆಯಿಂದ ದೂರವಿವುರುದೇ ಒಳ್ಳೆಯದು. ಏಕೆಂದರೆ ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಏರುಪೇರಾಗಬಹುದು. ಅದರಲ್ಲೂ ಟೈಪ್ ೨ ಮಧುಮೇಹ ಇರುವ ವ್ಯಕ್ತಿಗಳು ಹಸಿರು ಟೀ ಸರ್ವಥಾ ಸೇವಿಸಬಾರದು. ಏಕೆಂದರೆ ಇದು ದೇಹದ ಇನ್ಸುಲಿನ್ ಮಟ್ಟವನ್ನೇ ಏರುಪೇರುಗೊಳಿಸುತ್ತದೆ.

ಮೂಳೆಗಳು ಟೊಳ್ಳಾಗುವ Osteoporosis

ಮೂಳೆಗಳು ಟೊಳ್ಳಾಗುವ Osteoporosis

ಕೆಫೀನ್ ಸೇವನೆಯಿಂದ ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹಸಿರು ಟೀ ಸೇವನೆಯ ಪ್ರಮಾಣ ಹೆಚ್ಚಾದರೆ ಇದು ಕ್ಯಾಲ್ಸಿಯಂ ವಿಸರ್ಜನೆಯ ಗತಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಯಾವಾಗ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾಗುತ್ತದೆಯೋ ಆಗ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಂಡು ಟೊಳ್ಳಾಗಿ ಶಿಥಿಲಗೊಳ್ಳುವ ಸಾಧ್ಯತೆಯೂ ಹೆಚ್ಚುತ್ತದೆ.

ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

side-effects-of-green-tea-you-probably-didn-t-know

Green tea is the most famous weight loss beverage, which is drunk by most of the people all over the world. The leaf bud, leaf and stem of the green tea plant is used for many purposes and that is why it is known as one of the healthiest beverage on the planet. Green tea has profound benefits on health, which include preventing cancer, improving brain function, depression, headaches, diarrhoea, bone loss, stomach disorders, etc. It also lowers the risk of heart diseases, diabetes, low blood pressure, chronic dental fatigue, kidney stones, etc.
X
Desktop Bottom Promotion