For Quick Alerts
ALLOW NOTIFICATIONS  
For Daily Alerts

  ಹಸ್ತಮೈಥುನದ ಅಡ್ಡ ಪರಿಣಾಮಗಳು (ಪುರುಷರಿಗೂ, ಮಹಿಳೆಯರಿಗೂ)

  |

  ಹಸ್ತಮೈಥುನ ಪ್ರತಿ ವ್ಯಕ್ತಿಯ ಅತ್ಯಂತ ಖಾಸಗಿ ಕ್ರಿಯೆಯಾಗಿದ್ದು ಈ ಮೂಲಕ ನಿಸರ್ಗ ಸಹಜ ಅಗತ್ಯತೆಯನ್ನು ಪೂರೈಸಿಕೊಳ್ಳುವ ಬಗೆಯಾಗಿದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ 92%ದಷ್ಟು ಪುರುಷರೂ 92%ದಷ್ಟು ಮಹಿಳೆಯರೂ ಈ ಕ್ರಿಯೆಯನ್ನು ನಿಯಮಿತವಾಗಿ ಅನುಸರಿಸುತ್ತಾರೆ. ಪ್ರತಿ ವ್ಯಕ್ತಿಯೂ ತನ್ನ ಜೀವನದಲ್ಲಿ ಎಂದಾದರೂ ನಿಸರ್ಗವೇ ಹೇಳಿಕೊಡುವ ಪಾಠವನ್ನು ಕಲಿತು ಅಥವಾ ಗೆಳೆಯರಿಂದ, ಮಾಧ್ಯಮಗಳಿಂದ ಈ ಬಗ್ಗೆ ಅರಿತು ಈ ಕ್ರಿಯೆಯನ್ನು ಮೊದಲ ಬಾರಿ ಪ್ರಾರಂಭಿಸಿರಬಹುದು. ಆದರೆ ಈ ಕ್ರಿಯೆ ನಿಸರ್ಗದ ಅಗತ್ಯತೆಯನ್ನು ಪೂರೈಸುವಷ್ಟೇ ಇರಬೇಕೇ ಹೊರತು ವ್ಯಸನವಾಗಬಾರದು. ಹೀಗಾದರೆ ಹಲವಾರು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬನ್ನಿ, ಈ ಬಗ್ಗೆ ಕೆಲವು ಮಹತ್ವದ ಸಂಗತಿಗಳನ್ನು ಅರಿಯೋಣ.

  ಹಸ್ತಮೈಥುನದ ವ್ಯಸನ

  ಈ ಬಗ್ಗೆ ಜಗತ್ತಿನ ಎಲ್ಲಾ ವೈದ್ಯರು ಮತ್ತು ಆರೋಗ್ಯ ತಜ್ಞರ ಸಮಾನ ಅಭಿಪ್ರಾಯವೆಂದರೆ ಈ ಕ್ರಿಯೆ ಆರೋಗ್ಯಕರ ಆದರೆ ಅಗತ್ಯತೆಯ ಮಿತಿಯಲ್ಲಿಯೇ ನಡೆಸಿಕೊಂಡು ಬಂದರೆ ಮಾತ್ರ! ಆದರೆ ಈ ಮಿತಿ ಮೀರಿದರೆ ಮಾತ್ರ ಇದೊಂದು ವ್ಯಸನವಾಗಿ ಮಾರ್ಪಡುತ್ತದೆ ಹಾಗೂ ಇದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಎರಡೂ ಆರೋಗ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅತಿಯಾದರೆ ಅಮೃತವೂ ವಿಷವಂತೆ, ಈ ವಿಷಯದಲ್ಲಿಯೂ ಈ ಗಾದೆಮಾತು ಸಮರ್ಪಕವಾಗಿ ಅನ್ವಯಿಸುತ್ತದೆ. ಬನ್ನಿ, ಈ ವ್ಯಸನದ ಕೆಲವು ಗಂಭೀರವಾದ ಅಡ್ಡಪರಿಣಾಮಗಳ ಬಗ್ಗೆ ಚರ್ಚಿಸೋಣ...

  1. ನಿತ್ಯದ ಕಾರ್ಯಕ್ರಮಗಳಿಗೆ ಬಾಧೆ

  1. ನಿತ್ಯದ ಕಾರ್ಯಕ್ರಮಗಳಿಗೆ ಬಾಧೆ

  ಈ ವ್ಯಸನದಿಂದ ದೇಹ ಮತ್ತು ಮನಸ್ಸು ಎರಡೂ ಅತೀವವಾಗಿ ಬಳಲುತ್ತವೆ. ಮನಸ್ಸಿನಲ್ಲಿ ಈ ಕ್ರಿಯೆಗೆ ಸಂಬಂಧಿಸಿದ ಕಾಮನೆಗಳನ್ನೇ ತುಂಬಿಕೊಂಡಿರುತ್ತದೆ ಹಾಗೂ ಇದು ಜೀವನದ ಇತರ ಮಹತ್ವದ ಸಂಗತಿಗಳನ್ನು ಪರಿಗಣಿಸದೇ ಹೋಗಲು ಕಾರಣವಾಗುತ್ತದೆ. ಪರಿಣಾಮವಾಗಿ ನಿತ್ಯದ ಹತ್ತು ಹಲವು ಕಾರ್ಯಕ್ರಮಗಳು ತಪ್ಪಿ ಹೋಗುತ್ತವೆ. ಎಲ್ಲೆಲ್ಲಿ ಗಮನ ನೀಡಬೇಕೋ, ಅಲ್ಲೆಲ್ಲಾ ಗಮನ ನೀಡಲು ಸಾಧ್ಯವಾಗದೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಂದರೆ ಮತ್ತು ನಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ವ್ಯಸನಕ್ಕೀಡಾದ ವ್ಯಕ್ತಿ ತನ್ನ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ ಹಾಗೂ ಸದಾ ಒಂದು ಬಗೆಯ ತಪ್ಪಿತಸ್ಥ ಭಾವನೆಯಲ್ಲಿಯೇ ಇರುತ್ತಾರೆ.

  2. ಹಸ್ತಮೈಥುನದ ಅಡ್ಡಪರಿಣಾಮ-ಬೆನ್ನು ನೋವು

  2. ಹಸ್ತಮೈಥುನದ ಅಡ್ಡಪರಿಣಾಮ-ಬೆನ್ನು ನೋವು

  ಹಲವು ವ್ಯಸನಿಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಈ ವ್ಯಕ್ತಿಗಳು ಬೆನ್ನು ನೋವಿನಿಂದ ನರಳುತ್ತಿರುವುದನ್ನು ಕಂಡುಕೊಳ್ಳಲಾಗಿದೆ. ಅಲ್ಲದೇ, ವಿಶೇಷವಾಗಿ ಅಸ್ಥಿಕುಹರ ಅಥವಾ ಸೊಂಟದ ಮೂಳೆಯ ಅತ್ಯಂತ ಕಡೆಯ ಭಾಗದಲ್ಲಿ ನೋವು ಅನುಭವಿಸುತ್ತಾರೆ. ತೊಡೆ ಸಂದು ಹಾಗೂ ವೃಷಣಗಳಲ್ಲಿಯೂ ಇವರಿಗೆ ತೀಕ್ಷ್ಣವಾದ ನೋವು ಆವರಿಸಿರುತ್ತದೆ. ಅಲ್ಲದೇ ವ್ಯಸನದ ಅಡ್ಡಪರಿಣಾಮವಾಗಿ ಕೂದಲು ಉದುರುವುದು ಮತ್ತು ಕೂದಲು ತೆಳ್ಳಗಾಗುವುದನ್ನೂ ಗಮನಿಸಲಾಗಿದೆ. ಆದರೆ ಈ ಪರಿಣಾಮಗಳಿಗೆ ಈ ವ್ಯಸನವೇ ಏಕಮಾತ್ರ ಕಾರಣ ಎಂದು ಖಚಿತವಾಗಿ ಯಾವುದೇ ಸಂಶೋಧನೆ ದೃಢಪಡಿಸಿಲ್ಲ.

  3. ಹಸ್ತಮೈಥುನದ ಅಡ್ಡಪರಿಣಾಮ-ದಾಂಪತ್ಯ ಜೀವನದಲ್ಲಿ ಹುಳಿ

  3. ಹಸ್ತಮೈಥುನದ ಅಡ್ಡಪರಿಣಾಮ-ದಾಂಪತ್ಯ ಜೀವನದಲ್ಲಿ ಹುಳಿ

  ಸಾಮಾನ್ಯವಾಗಿ ಈ ಕ್ರಿಯೆಗೆ ಸಂಗಾತಿಯ ಕೊರತೆ ಪ್ರಮುಖ ಕಾರಣವಾಗಿದು ವಿವಾಹದ ಬಳಿಕ ಇದು ಇಲ್ಲವಾಗುತ್ತದೆ ಅಥವಾ ಅತಿ ಕಡಿಮೆಯಾಗುತ್ತದೆ. ಆದರೆ ಅಧ್ಯಯನಗಳಲ್ಲಿ ಕಂಡುಕೊಂಡಿರುವಂತೆ ವಿವಾಹದ ಬಳಿಕವೂ ಈ ಕ್ರಿಯೆಯನ್ನು ವ್ಯಸನದ ರೂಪದಲ್ಲಿ ಮುಂದುವರೆಸಿಕೊಂಡು ಹೋಗುವವರು ತಮ್ಮ ಸಂಗಾತಿಯೊಂದಿಗಿನ ಲೈಂಗಿಕ ಕ್ರಿಯೆಯಲ್ಲಿ ವೈಫಲ್ಯ ಅನುಭವಿಸುತ್ತಾರೆ. ಎಷ್ಟೋ ಸಂದರ್ಭದಲ್ಲಿ ಹಸ್ತಮೈಥುನದ ನೆರವಿಲ್ಲದೇ ನಿಮಿರುವಿಕೆ ಅಥವಾ ಭಾವಾವೇಶ ಪಡೆಯಲೂ ಇವರು ಅಸಮರ್ಥರಾಗುತ್ತಾರೆ. ಇದೊಂದು ಅತಿ ಘೋರವಾದ ಅಡ್ಡ ಪರಿಣಾಮವಾಗಿದೆ. ಅಲ್ಲದೇ ಶೀಘ್ರಸ್ಖಲನ ಮತ್ತು ನಿಮಿರುವುದಕ್ಕೂ ಮುನ್ನವೇ ಸ್ಖಲನಗೊಳ್ಳುವ ತೊಂದರೆಗಳೂ ಈ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ.

  4. ಗುಪ್ತಾಂಗಗಳಲ್ಲಿ ತೊಂದರೆ

  4. ಗುಪ್ತಾಂಗಗಳಲ್ಲಿ ತೊಂದರೆ

  ಯಾವುದೇ ಅಂಗವನ್ನು ಅದರ ಕ್ಷಮತೆಗೂ ಮೀರಿ ಬಳಸಿದರೆ ಏನಾಗುತ್ತದೆ? ಇದು ತನ್ನ ಕ್ಷಮತೆಯನ್ನೇ ಕಳೆದುಕೊಳ್ಳುತ್ತದೆ. ನಮ್ಮ ದೇಹದ ಅತಿ ಸೂಕ್ಷ್ಮ ಅಂಗಗಳಾದ ಗುಪ್ತಾಂಗಗಳೂ ಅಷ್ಟೇ. ಇದರ ಕ್ಷಮತೆ ಮೀರಿ ಈ ಕ್ರಿಯೆ ನಡೆಸುವ ಮೂಲಕ ನಿಮಿರು ದೌರ್ಬಲ್ಯ, ಪೂರ್ಣ ನಿಮಿರುತನ ಪಡೆಯಲು ಅಸಮರ್ಥತೆ ಅಥವಾ ಸಂಗಾತಿಯೊಂದಿಗೆ ಮಿಲನಗೊಳ್ಳುವ ಸಮಯದಲ್ಲಿ ಎದುರಾಗುವ ವೈಫಲ್ಯ ಮೊದಲಾದ ತೊಂದರೆಗಳು ಎದುರಾಗುತ್ತವೆ. ವ್ಯಸನದ ಪರಿಣಾಮವಾಗಿ ತೊಡೆಸಂಧುಗಳ ಸ್ನಾಯುಗಳು ಶಿಥಿಲಗೊಳ್ಳುತ್ತವೆ ಹಾಗೂ ಲೈಂಗಿಕ ಕ್ರಿಯೆಗೆ ಅಗತ್ಯವಾದ ಶಕ್ತಿಯನ್ನು ಹೊಂದಲು ಸಾಧ್ಯವಾಗದೇ ಲೈಂಗಿಕ ಚಟುವಟಿಕೆಯೇ ಸಾಧ್ಯವಾಗದೇ ಹೋಗಬಹುದು. ಕೆಲವು ಸಂದರ್ಭಗಳಲ್ಲಿ ಈ ವ್ಯಕ್ತಿಗಳು ಸಂಗಾತಿಯೊಂದಿಗಿನ ಮಿಲನಕ್ಕಿಂತಲೂ ಹಸ್ತಮೈಥುನದಲ್ಲಿಯೇ ತಮ್ಮ ಮನಸ್ಸಿಗೆ ಹೆಚ್ಚಿನ ತೃಪ್ತಿಯನ್ನು ಕಂಡುಕೊಂಡಿದ್ದು ಇದು ದಾಂಪತ್ಯ ಜೀವನವೇ ಬಾಧೆಗೊಳಗಾಗಬಹುದು.

  5. ಹಸ್ತಮೈಥುನದ ಅಡ್ಡಪರಿಣಾಮ-ವೀರ್ಯಾಣುಗಳ ನಷ್ಟ

  5. ಹಸ್ತಮೈಥುನದ ಅಡ್ಡಪರಿಣಾಮ-ವೀರ್ಯಾಣುಗಳ ನಷ್ಟ

  ಈ ವ್ಯಸನಕ್ಕೆ ಒಳಗಾದ ವ್ಯಕ್ತಿಗಳಿಗೆ ಹಸ್ತಮೈಥುನದಿಂದ ಮಾತ್ರವೇ ಲೈಂಗಿಕ ತೃಪ್ತಿ ದೊರಕುತ್ತಿರುತ್ತದೆ. ಇವರು ಸದಾ ಈ ಕ್ರಿಯೆಯನ್ನು ನಡೆಸಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಹಾಗೂ ಸಿಕ್ಕ ಸಂದರ್ಭಗಳನ್ನು ಉಪಯೋಗಿಸಿಕೊಳ್ಳಲು ಹವಣಿಸುತ್ತಿರುತ್ತಾರೆ. ಕೆಲವೊಮ್ಮೆ ಕೆಲಸದ ಸ್ಥಳಗಳಲ್ಲಿ, ಕಾರ್ಯಕ್ರಮಗಳ ನಡುವೆ ಈ ಕ್ರಿಯೆಯನ್ನು ನಡೆಸುವ ಹವಣಿಕೆಯಲಿರುತ್ತಾರೆ. ಹಲವು ಸಂದರ್ಭಗಳಲ್ಲಿ ನಾಲ್ಕು ಜನರ ನಡುವೆ ಇದ್ದಾಗಲೂ ಇವರ ಮನಸ್ಸಿನಲ್ಲಿ ಉದ್ಭವಿಸುವ ಬಯಕೆಗಳಿಂದಾಗಿ ಸ್ಖಲನಕ್ಕೆ ಸೂಕ್ತ ಸ್ಥಳವನ್ನು ಹುಡುಕಿಕೊಂಡು ಹೋಗುತ್ತಾರೆ.

  7. ಹಸ್ತಮೈಥುನದ ಅಡ್ಡಪರಿಣಾಮ-ಮೂತ್ರನಾಳದ ಸೋಂಕು6.

  7. ಹಸ್ತಮೈಥುನದ ಅಡ್ಡಪರಿಣಾಮ-ಮೂತ್ರನಾಳದ ಸೋಂಕು6.

  ಈ ವ್ಯಸನಕ್ಕೆ ತುತ್ತಾದ ವ್ಯಕ್ತಿಗಳು ತಮ್ಮ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥವನ್ನು ಕಳೆದುಕೊಂಡಿರುವುದನ್ನು ಕೆಲವು ಸಂದರ್ಭಗಳಲ್ಲಿ ಗಮನಿಸಲಾಗಿದೆ. ತನ್ಮೂಲಕ ನಾಲ್ಕು ಜನರ ನಡುವೆ ಇದ್ದ ಸಮಯದಲ್ಲಿ ಮೂತ್ರ ಪ್ರಕಟಗೊಂಡು ಮುಜುಗರ ಅನುಭವಿಸಬೇಕಾಗುತ್ತದೆ. ಇತ ಅಡ್ಡಪರಿಣಾಮಗಳಲ್ಲಿ ಅತೀವವಾದ ದೈಹಿಕ ಸುಸ್ತು, ನಪುಂಸಕತೆ, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ, ಅನಿಯಂತ್ರಿತ ವೀರ್ಯಸ್ಖಲನ , ಮಹಿಳೆಯರಲ್ಲಿ ಅನಿಯಂತ್ರಿತ ಯೋನಿಸ್ರಾವ, ಆರ್ದ್ರತೆಯ ಕೊರತೆಯಿಂದಾಗಿ ಒಣಗುವಿಕೆ, ಮೂತ್ರನಾಳದಲ್ಲಿ ಸೋಂಕು ಮೊದಲಾದವು ಎದುರಾಗುತ್ತವೆ.

  8. ವ್ಯಸನ ಅಪಾಯಕಾರಿಯಾಗಬಹುದು

  8. ವ್ಯಸನ ಅಪಾಯಕಾರಿಯಾಗಬಹುದು

  ಮೇಲೆ ತಿಳಿಸಿದ ಎಲ್ಲಾ ಪರಿಣಾಮಗಳು ಒಬ್ಬರೇ ವ್ಯಕ್ತಿಯ ಮೇಲೆ ಎದುರಾಗದೇ ಇರಬಹುದು. ಆದರೆ ಈ ನೈಸರ್ಗಿಕ ಕ್ರಿಯೆಯನ್ನು ಮಿತಿಯ ಒಳಗೇ ಅನುಸರಿಸುವುದು ಅಗತ್ಯ ಹಾಗೂ ದಾಂಪತ್ಯವನ್ನು ಉಳಿಸಿಕೊಳ್ಳಲೂ ನೆರವಾಗುತ್ತದೆ.

  9. 'ಸದಾಶಿವನಿಗೆ ಸದಾ ಅದೇ ಧ್ಯಾನ' ಆಗಬಾರದು

  9. 'ಸದಾಶಿವನಿಗೆ ಸದಾ ಅದೇ ಧ್ಯಾನ' ಆಗಬಾರದು

  ಒಂದು ವೇಳೆ ಇದು ವ್ಯಸನವಾಗಿ ಮಾರ್ಪಟ್ಟರೆ ಹಲವು ವಿಧದಲ್ಲಿ ದೇಹ ಮತ್ತು ಮನಸ್ಸುಗಳನ್ನು ಬಾಧಿಸುವುದರಿಂದ ಇದು ದೈಹಿಕವಾಗಿಯೂ ಮಾನಸಿಕವಾಗಿಯೂ ಅಪಾಯಕಾರಿಯಾಗಬಹುದು. ಕಡೆಗೊಮ್ಮೆ 'ಸದಾಶಿವನಿಗೆ ಸದಾ ಅದೇ ಧ್ಯಾನ' ಎಂಬ ಹಣೆಪಟ್ಟಿಯೂ ಒದಗಿ ನಿತ್ಯದ ಕೆಲಸಗಳಲ್ಲಿ ಯಾವುದೂ ಸಾಧ್ಯವಾಗದೇ ಹೋಗಬಹುದು.

  English summary

  Side Effects of Masturbating for men and women

  Masturbation is a predominant activity practised by people in their personal sex life. While statistics reveal that over 95 percent of males and above 92 percent of females masturbate, different individuals get into this habit at different stages of their lives either by themselves or being initiated into it by their friends. The underlying point is that too much of anything can be bad. Therefore it is worth discussing some side effects of masturbation. Some very prominent side effects of masturbation can be discussed as follows.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more