ಕಾಮ ಪ್ರಚೋದಕ ತಾಂತ್ರಿಕ ಮಸಾಜ್‌ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಇದರ ಪ್ರಯೋಜನಗಳು

Subscribe to Boldsky

ಇಂದಿನ ಆಧುನಿಕ ಜೀವನ ಶೈಲಿ ಹಾಗೂ ಬಿಡುವಿಲ್ಲದ ಕೆಲಸದಿಂದ ಪುರುಷ ಹಾಗೂ ಮಹಿಳೆ ಇಬ್ಬರೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒತ್ತಡದ ಜೀವನ ಶೈಲಿಯಿಂದ ಹಲವಾರು ಮಾನಸಿಕ, ದೈಹಿಕ ಹಾಗೂ ಲೈಂಗಿಕ ಸಮಸ್ಯೆಗಳು ಎದುರಾಗುತ್ತಿವೆ. ಜೀವನವನ್ನು ಅದರ ಸಂಪೂರ್ಣತೆಯಲ್ಲಿ ಅನುಭವಿಸಬೇಕಾದರೆ ಮತ್ತು ದಿನನಿತ್ಯದ ಕೆಲಸದಲ್ಲಿ ಚೈತನ್ಯದಾಯಕವಾಗಿರಬೇಕಾದರೆ ದೇಹ ಹಾಗೂ ಮನಸ್ಸಿಗೆ ಉಪಶಮನ ನೀಡಬೇಕಾಗುತ್ತದೆ.

ಬಾಡಿ ಮಸಾಜ್ ಎಂಬುದು ಮನಸ್ಸು ಹಾಗೂ ದೇಹಗಳನ್ನು ತಣಿಸಿ ಉಲ್ಲಾಸ ಹಾಗೂ ನೆಮ್ಮದಿಗಳು ಮರುಕಳಿಸುವಂತೆ ಮಾಡುವ ಅದ್ಭುತ ಕ್ರಿಯೆಯಾಗಿದೆ. ಮಸಾಜ್ ನಿಮಗೆ ವಿಶ್ರಾಂತಿ ನೀಡಿ ಮತ್ತೆ ಸಾಮರ್ಥ್ಯ ವೃದ್ಧಿಸುವಂತೆ ಮಾಡುತ್ತದೆ. ಜೊತೆಗೆ ನಿಮ್ಮೊಂದಿಗೆ ನೀವು ಒಂದಿಷ್ಟು ಸಮಯ ಕಳೆಯಲು ಸಹಕಾರಿಯಾಗುತ್ತದೆ.

ಮಸಾಜ್‌ಗಳಲ್ಲಿ ಅನೇಕ ವಿಧಾನಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಮಸಾಜ್ ವಿಧಾನ ಬಹು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಲೈಂಗಿಕ ಆನಂದವನ್ನು ನೀಡುವುದು ಹಾಗೂ ಆ ಮೂಲಕ ಒಟ್ಟಾರೆ ಆರೋಗ್ಯ ಸುಧಾರಣೆಯು ತಾಂತ್ರಿಕ ಮಸಾಜ್‌ನ ಉದ್ದೇಶವಾಗಿದೆ. ಇದೊಂದು ಕಾಮ ಪ್ರಚೋದಕ ಮಸಾಜ್ ಆಗಿದ್ದು, ನಿರ್ದಿಷ್ಟ ಸೂಕ್ಷ್ಮ ಅಂಗಗಳನ್ನು ಉತ್ತೇಜಿಸಿ ಇದು ದೇಹವನ್ನು ತಣಿಸುವುದು ಹಾಗೂ ಹಿತವಾದ ಅನುಭವವನ್ನು ನೀಡುವುದು. ತಾಂತ್ರಿಕ ಮಸಾಜ್‌ನಿಂದ ಹಲವಾರು ಪ್ರಯೋಜನಗಳಿದ್ದು, ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ... ಮುಂದೆ ಓದಿ

 ಒತ್ತಡ ನಿವಾರಣೆ

ಒತ್ತಡ ನಿವಾರಣೆ

ವೇಗದ ಬದುಕಿನಲ್ಲಿ ಒತ್ತಡ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ನಿರ್ಧಾರ ಕೈಗೊಳ್ಳುವ ಒತ್ತಡ, ಕಚೇರಿಯಲ್ಲಿ ತಡರಾತ್ರಿವರೆಗೆ ಕೆಲಸ, ಕೆಲಸ ಹಾಗೂ ಮನೆಯ ಮಧ್ಯೆ ಸಮತೋಲ ಕಾಯ್ದುಕೊಳ್ಳುವುದು ಇವೆಲ್ಲ ಸಹಜವಾಗಿಯೇ ಒತ್ತಡವನ್ನು ತರುತ್ತವೆ. ಇಂಥ ಒತ್ತಡಗಳ ನಿವಾರಣೆಗೆ ತಾಂತ್ರಿಕ ಮಸಾಜ್ ಉತ್ತಮವಾಗಿದೆ. ತಾಂತ್ರಿಕ ಮಸಾಜ್‌ನಿಂದ ದೇಹ ಹಗುರಾಗುತ್ತದೆ, ಮನಸ್ಸು ನಿರಾಳವಾಗಿ ಎಲ್ಲ ಒತ್ತಡ ಮಾಯವಾಗುತ್ತದೆ. ಇದು ಸಹಜವಾಗಿಯೇ ನೆಮ್ಮದಿ ಮೂಡಿಸುತ್ತದೆ. ಆದ್ದರಿಂದ ತೀರಾ ಒತ್ತಡದ ಸನ್ನಿವೇಶಗಳು ಉಂಟಾದಾಗಲೆಲ್ಲ ತಾಂತ್ರಿಕ ಮಸಾಜ್ ಮಾಡಿಸಿಕೊಳ್ಳುವುದು ಸೂಕ್ತ.

Most Read:ಸೆಕ್ಸ್ ವೇಳೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ..

ಲೈಂಗಿಕ ಶಿಕ್ಷಣ

ಲೈಂಗಿಕ ಶಿಕ್ಷಣ

ಜಗತ್ತಿನ ಹಲವಾರು ಸಂಸ್ಕೃತಿಗಳ ಜನರಲ್ಲಿ ಇಂದಿಗೂ ಮಕ್ಕಳಿಗೆ ಯಾವುದೇ ರೀತಿಯ ಲೈಂಗಿಕ ಜೀವನದ ಬಗ್ಗೆ ತಿಳಿಸಿಕೊಡಲಾಗುವುದಿಲ್ಲ. ಹೀಗಾಗಿ ಮಹಿಳೆ ಹಾಗೂ ಪುರುಷರಿಬ್ಬರೂ ಲೈಂಗಿಕ ಸಂಬಂಧ ಬೆಳೆಸಲು ಅಸಮರ್ಥರಾಗಿರುತ್ತಾರೆ. ತಾಂತ್ರಿಕ ಮಸಾಜ್‌ನಿಂದ ದೇಹದ ಯಾವ ಅಂಗದಲ್ಲಿ ಸ್ಪರ್ಶ ಮಾಡಿದರೆ ಯಾವ ಸುಖಾನುಭೂತಿ ಸಿಗುತ್ತದೆ, ಸ್ಪರ್ಶ ಸುಖ ಹೇಗಿರುತ್ತದೆ ಎಂಬ ಅರಿವು ಮೂಡುತ್ತದೆ. ತಾಂತ್ರಿಕ ಮಸಾಜ್ ಎಂಬುದು ನಿಮ್ಮ ದೇಹದಲ್ಲಿನ ಯಾವ ಅಂಗಗಳ ಸ್ಪರ್ಶದಿಂದ ಹೆಚ್ಚು ಸುಖ ನಿಮಗೆ ಸಿಗುತ್ತದೆ ಎಂಬುದನ್ನು ತಿಳಿಸಿಕೊಡುತ್ತದೆ. ನೀವು ಸಂಗಾತಿಯೊಂದಿಗೆ ಸೆಕ್ಸ್ ಮಾಡುವ ಸಂದರ್ಭದಲ್ಲಿ ಈ ಸ್ಪರ್ಶದ ಅನುಭವ ಸುಖದ ಉತ್ತುಂಗಕ್ಕೇರಲು ಸಹಾಯವಾಗುತ್ತದೆ.

ಶೀಘ್ರ ಸ್ಖಲನ

ಶೀಘ್ರ ಸ್ಖಲನ

ಲೈಂಗಿಕ ಕ್ರಿಯೆಯನ್ನು ಮುಗಿಸುವ ಮನಸ್ಸಿನಲ್ಲಿನ ಒತ್ತಡದಿಂದ ಅವಧಿ ಪೂರ್ವ ಸ್ಖಲನ ಉಂಟಾಗುತ್ತದೆ. ಬಹುತೇಕ ಸಂಸ್ಕೃತಿಗಳಲ್ಲಿ ಪುರುಷರು 'ಮಾಡುವವರು' ಎಂದು ಗುರುತಿಸಲ್ಪಡುತ್ತಾರೆ. ಈ 'ಮಾಡುವವ' ಎಂಬ ಒತ್ತಡವೇ ಬೇಗ ಸ್ಖಲಿಸುವಂತೆ ಮಾಡಿಬಿಡುತ್ತದೆ. ಇಂಥ ಸಮಸ್ಯೆಯನ್ನು ನಿವಾರಿಸಲು ತಾಂತ್ರಿಕ ಮಸಾಜ್ ಬಹಳ ಉಪಯುಕ್ತವಾಗಿದೆ. ಲೈಂಗಿಕ ಕ್ರಿಯೆಯಲ್ಲಿ ಉಂಟಾಗಬಹುದಾದ ಒತ್ತಡವನ್ನು ಇದು ದೂರ ಮಾಡುತ್ತದೆ. ಸೆಕ್ಸ್ ಸಂದರ್ಭದಲ್ಲಿ ಯಾವುದೇ ಗುರಿ ಅಥವಾ ಒತ್ತಡವಿಲ್ಲದೆ ಕ್ರಿಯೆಯನ್ನು ಮಾಡುವುದು ಹೇಗೆ ಎಂಬುದನ್ನು ತಾಂತ್ರಿಕ ಮಸಾಜ್ ತಿಳಿಸಿಕೊಡುತ್ತದೆ. ಇದರಿಂದ ಬೇಗನೆ ಸ್ಖಲಿಸುವ ಸಮಸ್ಯೆ ದೂರವಾಗುತ್ತದೆ. ಸೆಕ್ಸ್‌ನ ಪ್ರತಿ ಕ್ಷಣವನ್ನೂ ಅನುಭವಿಸಲು ಹಾಗೂ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವಂತಾಗಲು ತಾಂತ್ರಿಕ ಮಸಾಜ್ ಉಪಯುಕ್ತವಾಗಿದೆ.

 ವಯಸ್ಸಾದವರಿಗೆ ಕಾಮೋದ್ರೇಕ

ವಯಸ್ಸಾದವರಿಗೆ ಕಾಮೋದ್ರೇಕ

ವ್ಯಕ್ತಿಗೆ ವಯಸ್ಸಾದಂತೆ ದೇಹದಲ್ಲಿ ಹಾರ್ಮೋನ್‌ಗಳ ಮಟ್ಟ ಕಡಿಮೆಯಾಗುತ್ತ ಹೋಗುತ್ತದೆ. ಇದರಿಂದ ಸೆಕ್ಸ್‌ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಮತ್ತು ಕಾಮೋದ್ರೇಕದ ಪ್ರಮಾಣ ಕುಸಿಯುತ್ತದೆ. ಹೀಗಾಗಿ ತಾಂತ್ರಿಕ ಮಸಾಜ್ ಇದು ವಯಸ್ಸಾದ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿದೆ. ವಿಶೇಷ ಅಂಗಗಳ ಮಸಾಜ್‌ನಿಂದ ಸೆಕ್ಸ್ ಹಾರ್ಮೋನ್‌ಗಳ ಬೆಳವಣಿಗೆಗೆ ಉತ್ತೇಜನ ದೊರಕುತ್ತದೆ. ಇದರಿಂದ ವಯಸ್ಸಾದ ವ್ಯಕ್ತಿಯಲ್ಲಿ ಸಹ ಬೇಗ ಕಾಮೋತ್ತೇಜನೆ ಉಂಟಾಗಿ ಮಿಲನ ಕ್ರಿಯೆಯ ಸುಖ ಅನುಭವಿಸಲು ಸಾಧ್ಯವಾಗುತ್ತದೆ.

ಮಹಿಳೆಯರಲ್ಲಿ ಲೈಂಗಿಕಾಸಕ್ತಿ

ಮಹಿಳೆಯರಲ್ಲಿ ಲೈಂಗಿಕಾಸಕ್ತಿ

ಮಹಿಳೆಯರಲ್ಲಿ ಸ್ಪರ್ಶ ಸುಖ ಉಂಟು ಮಾಡುವ ಅಂಗಗಳ ಬಗ್ಗೆ ಸಂಗಾತಿಗೆ ಅರಿವಿನ ಕೊರತೆ ಹಾಗೂ ಸ್ವತಃ ಮಹಿಳೆಯರಿಗೆ ಇದರ ಬಗ್ಗೆ ಸಾಕಷ್ಟು ಜ್ಞಾನ ಇರದೇ ಇರುವುದರಿಂದ ಮಿಲನ ಕ್ರಿಯೆಯ ಸಂಪೂರ್ಣ ಸುಖ ಪಡೆಯಲಾಗುವುದಿಲ್ಲ. ತಾಂತ್ರಿಕ ಮಸಾಜ್‌ನಿಂದ ಮಹಿಳೆಗೆ ಯಾವ ಅಂಗಗಳ ಸ್ಪರ್ಶದಿಂದ ಸುಖ ಪಡೆಯಬಹುದು ಹಾಗೂ ಸೆಕ್ಸ್‌ನ ಸಂಪೂರ್ಣ ಆನಂದ ಅನುಭವಿಸುವುದು ಹೇಗೆ ಎಂಬ ಬಗ್ಗೆ ಅರಿವು ಮೂಡುತ್ತದೆ.

Most Read:ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ನೈಸರ್ಗಿಕ ಆಹಾರಗಳು

ಕೊನೆ ಮಾತು

ಕೊನೆ ಮಾತು

ತಾಂತ್ರಿಕ ಮಸಾಜ್ ಎಂಬುದು ಕೇವಲ ಕಾಮೋತ್ತೇಜನೆಗೆ ಮಾತ್ರ ಸೀಮಿತವಾಗಿಲ್ಲ. ಇದರಿಂದ ಸಾಕಷ್ಟು ಇತರ ಆರೋಗ್ಯ ಸಂಬಂಧಿ ಪ್ರಯೋಜನಗಳೂ ಇವೆ. ಆದ್ದರಿಂದ ಅವಕಾಶ ಸಿಕ್ಕರೆ ತಾಂತ್ರಿಕ ಮಸಾಜ್‌ನ ಅನುಭವ ಪಡೆದು ನಿಮ್ಮ ಶಕ್ತಿ, ಸಾಮರ್ಥ್ಯಗಳನ್ನು ವೃದ್ಧಿಸಿಕೊಂಡು ಸುಖಕರ ಜೀವನ ನಡೆಸಿ.

For Quick Alerts
ALLOW NOTIFICATIONS
For Daily Alerts

    English summary

    Several Benefits of A Tantric Massage

    The aim of tantric massage is to provide you with sexual delight, which eventually leads to a better health. Although it is an erotic massage, however, the purpose of massaging particular sensual zones is to bring out the joy that consequently rejoices and pleases your whole body. A tantric massage carries several benefits. The lines below provide the major benefits one could achieve from a tantric sensual massage.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more