For Quick Alerts
ALLOW NOTIFICATIONS  
For Daily Alerts

ಬೆಳಗ್ಗೆದ್ದು ಒಂದು ಲೋಟ ಅರಿಶಿನ ಬೆರೆಸಿದ ನೀರು ಕುಡಿದು ನೋಡಿ

By Hemanth
|

ದಿನದ ಆರಂಭ ಹೇಗೆ ಮಾಡುತ್ತೀರಿ ಎನ್ನುವ ಮೇಲೆ ನಿಮ್ಮ ಸಂಪೂರ್ಣ ದಿನವು ಅವಲಂಬಿತವಾಗಿರುವುದು. ಬೆಳಗ್ಗೆ ಎದ್ದ ಬಳಿಕ ಒಂದೊಂದು ರೀತಿಯ ಅಭ್ಯಾಸಗಳನ್ನು ಒಬ್ಬೊಬ್ಬರು ಬೆಳೆಸಿಕೊಂಡಿರುವರು. ಇಂತಹ ಸಮಯದಲ್ಲಿ ಯಾವುದು ಉತ್ತಮ ಮತ್ತು ಯಾವುದು ಕೆಟ್ಟದು ಎನ್ನುವುದು ಹೇಳಲು ಕೆಲವೊಂದು ಅಧ್ಯಯನಗಳು ಕೂಡ ನಡೆಯುತ್ತಲಿದೆ. ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿದರೆ ಅದರಿಂದ ದೇಹಕ್ಕೆ ಸಾಕಷ್ಟು ಲಾಭಗಳು ಸಿಗುವುದು ಎನ್ನಲಾಗುತ್ತದೆ. ಅದೇ ರೀತಿ ಅಧ್ಯಯನ ವರದಿಯೊಂದರ ಪ್ರಕಾರ ಬೆಳಗ್ಗೆ ಉಗುರು ಬೆಚ್ಚಗಿನ ಬಿಸಿ ನೀರಿಗೆ ಅರಿಶಿನ ಹಾಕಿಕೊಂಡು ಕುಡಿದರೆ ಅದರಿಂದ ಸಿಗುವಂತಹ ಲಾಭಗಳು ಮತ್ತಷ್ಟು ಹೆಚ್ಚಾಗುವುದು.

ಅರಿಶಿನದಲ್ಲಿ ಇರುವಂತಹ ಕುರ್ಕ್ಯುಮಿನ್ ಎನ್ನುವ ಅಂಶವು ಹಲವಾರು ರೀತಿಯ ಆರೋಗ್ಯ ಲಾಭವನ್ನು ಒದಗಿಸುವುದು. ಉರಿಯೂತ ಶಮನಕಾರಿ ಹಾಗೂ ಆ್ಯಂಟಿಆಕ್ಸಿಡೆಂಟ್ ಒಳಗೊಂಡಿರುವ ಅರಶಿನವು ಜೀರ್ಣಕ್ರಿಯೆ ಸುಧಾರಿಸುವುದು, ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುವುದು ಮತ್ತು ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿಯು ಇದಕ್ಕಿದೆ. ಕರ್ಕ್ಯುಮಿನ್ ನ್ನು ಯಾವುದೇ ವಿಧಾನದಲ್ಲಿ ಸೇವಿಸುವ ವಿರುದ್ಧ ವಾದ ಮಾಡುವುದು ತುಂಬಾ ಕಷ್ಟ. ಈಗಲೂ ನಿಮಗೆ ಸಂತೃಪ್ತಿಯಾಗದೆ ಇದ್ದರೆ ಈ ಲೇಖನದಲ್ಲಿ ಕೊಟ್ಟಿರುವ ಹತ್ತು ಕಾರಣಗಳನ್ನು ತಿಳಿಯಿರಿ.

turmeric water

ತಯಾರಿಸುವ ವಿಧಾನ

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕಚಮಚದಷ್ಟು ಅರಿಶಿನ ಪುಡಿಯನ್ನು ಬೆರೆಸಿ ಇದಕ್ಕೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿ ಸೇರಿಸಿ ಈ ನೀರನ್ನು ಬೆಳಿಗ್ಗೆದ್ದ ಬಳಿಕ ದಿನದ ಪ್ರಥಮ ಆಹಾರವಾಗಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಒಂದು ವರ್ಷದ ಬಳಿಕ ಏನೇನು ಬದಲಾವಣೆಗಳಾಗಿರುತ್ತದೆ ಎಂಬುದನ್ನು ಈಗ ನೋಡೋಣ....

1. ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಇದರಲ್ಲಿ ಎಂಡೋಟಾಕ್ಸಿನಗಳು ಸಮೃದ್ಧವಾಗಿದ್ದು, ಇದು ಪ್ರತಿರೋಧಕ ವ್ಯವಸ್ಥೆಯನ್ನು ಬಲಗೊಳಿಸಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಿ ಶೀತ ಮತ್ತು ಜ್ವರದ ಅಪಾಯ ಕಡಿಮೆಗೊಳಿಸುವುದು. ಚಳಿಗಾಲದಲ್ಲಿ ಇದರ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ತಂಪಾಗಿರುವ ತಿಂಗಳುಗಳಲ್ಲಿ ಇದರ ಸೇವನೆಯಿಂದ ವೈರಸ್ ದೇಹಕ್ಕೆ ದಾಳಿ ಮಾಡದಂತೆ ತಡೆಯಬಹುದು.

2. ಜೀರ್ಣಕ್ರಿಯೆ ಸುಧಾರಣೆ

ಅರಶಿನವು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಇದು ಪಿತ್ತಕೋಶವು ಪಿತ್ತರಸ ಉತ್ಪತ್ತಿ ಮಾಡಲು ಮತ್ತು ಜೀರ್ಣಕ್ರಿಯೆಯು ಸರಿಯಾಗಿ ಆಗಲು ಇದು ನೆರವಾಗುವುದು. ಇದರಿಂದ ಇದನ್ನು ನೀವು ಉಪಹಾರದೊಂದಿಗೆ ಸೇವನೆ ಮಾಡಬೇಕು. ಸಂಸ್ಕರಿತ ಕೊಬ್ಬನ್ನು ತಿನ್ನುವಂತಹ ಜನರು ಇದನ್ನು ತಿಂದರೆ ಒಳ್ಳೆಯದು.

3. ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಎಷ್ಟು ಅಪಾಯಕಾರಿ ಎಂದು ನಮಗೆ ತಿಳಿದಿದೆ ಮತ್ತು ಅರಶಿನವು ಇದನ್ನು ನಿಯಂತ್ರಣದಲ್ಲಿ ಇಡುವುದು. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದರಿಂದ ಅಪಧಮನಿ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಕಡಿಮೆಯಾಗುವುದು.

4. ಶಮನಕಾರಿ

ಪ್ರಕೃತಿದತ್ತವಾಗಿರುವಂತಹ ಅರಶಿನವು ನಂಜುನಿರೋಧಕ ಗುಣ ಹೊಂದಿದೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ನಿಮಗೆ ಗಾಯ ಅಥವಾ ತರಚಿದ್ದರೆ ಆಗ ನೀವು ಅರಶಿನ ನೀರನ್ನು ಕುಡಿಯಿರಿ. ಇದು ಹೊರಗಿನಿಂದ ಗಾಯವು ಬೇಗನೆ ಒಣಗಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ಮನಸ್ಸಿಗೆ ಬೇಕಾಗಿರುವಂತಹ ಶಾಂತಿ ನೀಡುವುದು. ಔಷಧಿಯ ಈ ವಿಧಾನವು ಆಯುರ್ವೇದದ ಮೂಲಭೂತತೆಯನ್ನು ಪ್ರತಿಬಿಂಬಿಸುತ್ತದೆ.

5. ಉರಿಯೂತ ಕಡಿಮೆಗೊಳಿಸುವುದು

ಉರಿಯೂತ ಶಮನಕಾರಿ ಗುಣ ಹೊಂದಿರುವಂತಹ ಅರಿಶಿನವು ಗಂಟು ನೊವು ನಿವಾರಿಸುವುದು. ಇದರಿಂದ ಸಂಧಿವಾತ ಹೊಂದಿರುವ ಜನರು ಒಂದು ಲೋಟ ಬಿಸಿನೀರಿಗೆ ಅರಶಿನ ಹಾಕಿ ಕುಡಿದು ದಿನದ ಆರಂಭ ಮಾಡಿ.

6. ದೇಹವು ಸಕ್ಕರೆ ಪ್ರಕ್ರಿಯೆಗೆ ನೆರವಾಗುವುದು

ಬೆಳಗ್ಗೆ ನಿಮ್ಮ ದೇಹಕ್ಕೆ ಬೇಕಾಗಿರುವುದು ರಕ್ತದಲ್ಲಿ ಅಧಿಕ ಸಕ್ಕರೆ. ಸಕ್ಕರೆ ಮಟ್ಟವು ಅಧಿಕವಾಗದಂತೆ ಅರಶಿನವು ತಡೆಯಲು ನೆರವಾಗುವುದು. ಇದರಿಂದ ನರ ವ್ಯವಸ್ಥೆ ಶಾಂತವಾಗುವುದು. ಇದು ದಿನದ ಆರಂಭಕ್ಕೆ ತುಂಬಾ ಒಳ್ಳೆಯದು. ಮಧುಮೇಹ ಹೊಂದಿರುವ ಜನರಿಗೆ ಇದು ತುಂಬಾ ಒಳ್ಳೆಯದು.

7. ಯಕೃತ್ ಶುದ್ಧೀಕರಿಸುವುದು

ಯಕೃತ್ ವಿಷಕಾರಿ ಅಂಶಗಳನ್ನು ಹೊರಹಾಕಲು ಅರಶಿನವು ನೆರವಾಗುತ್ತದೆ ಎಂದು ಆಯುರ್ವೇದವು ಹೇಳಿದೆ. ರಾತ್ರಿ ನಿಮಗೆ ಸರಿಯಾಗಿ ಮದ್ಯಪಾನ ಮಾಡಿದ್ದರೆ ಅರಶಿನದ ನೀರು ನಿಮಗೆ ಒಳ್ಳೆಯದು. ಇದು ಹ್ಯಾಂಗ್ ಓವರ್ ನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ದೇಹವು ವಿಷವನ್ನು ವಿಘಟಿಸಲು ನೆರವಾಗುವುದು. ಅಷ್ಟೇ ಅಲ್ಲದೇ ಅರಿಶಿನದ ಸೇವನೆಯ ಮೂಲಕ ಪಿತ್ತಕೋಶದ ಕ್ಷಮತೆ ಹೆಚ್ಚುತ್ತದೆ ಹಾಗೂ ತನ್ಮೂಲಕ ಯಕೃತ್ ನ ಮೇಲೆ ವಿಷಕಾರಿ ವಸ್ತುಗಳ ಪ್ರಭಾವದಿಂದ ರಕ್ಷಿಸುತ್ತದೆ. ಅಲ್ಲದೇ ಇದುವರೆಗೆ ನಾಶವಾಗಿದ್ದ ಯಕೃತ್‌ನ ಜೀವಕೋಶಗಳು ಮತ್ತೆ ಬೆಳೆಯುವಂತೆ ಮಾಡಿ ಯಕೃತ್‌ನ ಕ್ಷಮತೆಯನ್ನೂ ಹೆಚ್ಚಿಸುತ್ತದೆ. ಈ ಗುಣವೂ ಅರಿಶಿನದ ನೀರನ್ನು ಕುಡಿಯುವ ಮೂಲಕ ಪಡೆಯಬಹುದಾದ ಅತ್ಯುತ್ತಮ ಗುಣಗಳಲ್ಲೊಂದಾಗಿದೆ.

8. ಮೈಬಣ್ಣ ಸುಧಾರಿಸುವುದು

ಸೌಂದರ್ಯ ವರ್ಧಕ ಗುಣಗಳನ್ನು ಹೊಂದಿರುವ ಅರಶಿನವನ್ನು ಜೀವನದ ಬಂಗಾರದ ಗಿಡಮೂಲಿಕೆ' ಎಂದು ಕರೆಯಲಾಗುತ್ತದೆ. ಸಾವಿರಾರು ವರ್ಷಗಳಿಂದಲೂ ಭಾರತೀಯ ಮಹಿಳೆಯರು ತಮ್ಮ ಸೌಂದರ್ಯವರ್ಧಕದಲ್ಲಿ ಈ ಹಳದಿ ಬಣ್ಣದ ಗಿಡಮೂಲಿಕೆಯನ್ನು ಬಳಸಿಕೊಂಡು ಬರುತ್ತಿದ್ದಾರೆ. ಇದರಲ್ಲಿರುವ ಉರಿಯೂತ ಶಮನಕಾರಿ ಗುಣವು ಮೊಡವೆಗಳ ಊತ ಕಡಿಮೆ ಮಾಡುವುದು ಮತ್ತು ಮೈಯ ಬಣ್ಣ ಸುಧಾರಿಸಿ, ಕಾಂತಿ ನೀಡುವುದು.

9. ಆರಾಮ

ಹಳದಿ ಬಣ್ಣ ಹೊಂದಿರುವ ಅರಶಿನದ ಬೇರು ನಿಮ್ಮ ದಿನದ ಒತ್ತಡವನ್ನೆಲ್ಲಾ ಕಡಿಮೆ ಮಾಡಿ, ಆರಾಮವಾಗಿರುವಂತೆ ಮಾಡುವುದು.

10. ಮೆದುಳಿನ ಕಾರ್ಯಗಳ ಸುಧಾರಣೆ

ಅಲ್ಝೈಮೆರ್ ಕಾಯಿಲೆಯು ಬರುವಂತಹ ಸಾಧ್ಯತೆಯನ್ನು ಅರಶಿನವು ಕಡಿಮೆ ಮಾಡುವುದು. ಅರಶಿನದಲ್ಲಿ ಕಂಡುಬರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಅಲ್ಜೈಮೆರ್ ಕಾಯಿಲೆ ತಡೆಯಲು ಸಹಕಾರಿಯಾಗಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಕರ್ಕ್ಯುಮಿನ್ ಕೋಶ ಮತ್ತು ಪದರ ನಾಶಕ್ಕೆ ಕಾರಣವಾಗು ಬೆಟಾ ಅಮ್ಲಯ್ಡ್ ನ ಉತ್ಪತ್ತಿ ತಡೆದು ಮೆರೆವಿನ ಕಾಯಿಲೆ ಬರದಂತೆ ತಡೆಯುವುದು. ಈ ಕಾಯಿಲೆಗೆ ಹೊಂದಿಕೊಂಡಿರುವ ತಟಸ್ಥ ನರಗಳ ಉರಿಯೂತವನ್ನು ಇದು ಕಡಿಮೆ ಮಾಡುವುದು.

11. ಟೈಪ್-2 ಮಧುಮೇಹದಿಂದ ರಕ್ಷಿಸುತ್ತದೆ

ಒಂದು ಸಂಶೋಧನೆಯಿಂದ ಕಂಡುಕೊಂಡ ಪ್ರಕಾರ ಈ ವಿಧಾನದಿಂದ ಅರಿಶಿನದ ಗುಣಗಳು ಟೈಪ್-2 ವಿಧದ ಮಧುಮೇಹ ಆವರಿಸುವ ಸಾಧ್ಯತೆಯನ್ನು ಗಣನೀಯ ಮಟ್ಟಿಗೆ ಕಡಿಮೆಯಾಗಿದೆ.

12. ಮೆದುಳನ್ನು ರಕ್ಷಿಸುತ್ತದೆ

ಕೆಲವು ಬೆಳವಣಿಗೆಗೆ ಅಗತ್ಯವಾದ ಹಾರ್ಮೋನುಗಳ ಕೊರತೆಯಿಂದ ಆಲ್ಜೀಮರ್ಸ್ ಕಾಯಿಲೆ ಆವರಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಅರಿಶಿನದಲ್ಲಿರುವ ಸರ್ಕ್ಯುಮಿನ್ ಈ ಹಾರ್ಮೋನುಗಳ ಮಟ್ಟವನ್ನು ಸರಿಪಡಿಸಲು ನೆರವಾಗುತ್ತದೆ. ತನ್ಮೂಲಕ ವೃದ್ಧಾಪ್ಯದಲ್ಲಿ ಮೆದುಳಿನ ಜೀವಕೋಶಗಳು ಅಗತ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನಾಶವಾಗುವುದನ್ನು ತಪ್ಪಿಸಿ ಮೆದುಳನ್ನು ರಕ್ಷಿಸುತ್ತದೆ.

13. ಉರಿಯೂತದ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ

ಅರಿಶಿನದಲ್ಲಿರುವ ಸರ್ಕ್ಯುಮಿನ್‌ನಲ್ಲಿ ಉರಿಯೂತ ನಿವಾರಕ ಗುಣವೂ ಇದ್ದು ಇದು ದೇಹದಲ್ಲಿ ಆವರಿಸುವ ಹಲವು ರೀತಿಯ ಉರಿಯೂತಗಳಿಂದ ರಕ್ಷಿಸುತ್ತದೆ ಹಾಗೂ ದೇಹವನ್ನು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಗುಣ ಅರಿಶಿನದ ಅತ್ಯುತ್ತಮ ಗುಣಗಳಲ್ಲೊಂದಾಗಿದೆ.

14.ಸಂಧಿವಾತ ಕಡಿಮೆಯಾಗಿರುತ್ತದೆ

ಒಂದು ಸಂಶೋಧನೆಯಲ್ಲಿ ಕಂಡುಕೊಂಡಿರುವ ಪ್ರಕಾರ ಅರಿಶಿನದಲ್ಲಿರುವ ಸರ್ಕ್ಯುಮಿನ್ ಒಂದು ಉತ್ತಮವಾದ ಉರಿಯೂತ ನಿವಾರಕವಾಗಿದ್ದು ಸಂಧಿವಾತ ಕಾರಣದಿಂದ ಊದಿಕೊಂಡಿದ್ದ ಮೂಳೆಸಂಧುಗಳು ಮತ್ತು ಸಂಧಿವಾತದ ನೋವನ್ನು ಶೀಘ್ರವಾಗಿ ಗುಣಪಡಿಸುತ್ತದೆ.

15. ಆಯಸ್ಸು ಹೆಚ್ಚಿಸುತ್ತದೆ

ಅರಿಶಿನದಲ್ಲಿರುವ ಸರ್ಕ್ಯುಮಿನ್ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಾಶಪಡಿಸುವ ಮೂಲಕ ಉರಿಯೂತ ಇಲ್ಲವಾಗುತ್ತದೆ ಹಾಗೂ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ಈ ಮೂಲಕ ವೃದ್ಧಾಪ್ಯವೂ ದೂರವಾಗಿ ಆಯಸ್ಸನ್ನು ಹೆಚ್ಚಿಸುತ್ತದೆ.

English summary

Reasons Why You Should Drink Warm Turmeric Water in the Morning

Turmeric water also has the capacity to relieve arthritis symptoms as well. Drinking one glass of water every day for 12 months will make a huge difference to your health. This is how you can prepare this miracle drink. Add one spoon of ground turmeric to a glass of warm water. Also add a pinch of black pepper to it. Drink this warm glass of liquid every morning. Read further to find out about the health benefits of turmeric water.
X
Desktop Bottom Promotion