For Quick Alerts
ALLOW NOTIFICATIONS  
For Daily Alerts

ನೋಡಿ ಇದೇ ಕಾರಣಕ್ಕೆ, ಮಹಿಳೆಯರು 'ಸೆಕ್ಸ್' ಬೇಡ ಎನ್ನುತ್ತಾರಂತೆ!

By Arshad Hussain
|

ನಿಸರ್ಗ ಈ ಜಗತ್ತಿನ ಜೀವಿಗಳಿಗೆ ನೀಡಿರುವ ವರದಾನವೆಂದರೆ ಸಂತಾನೋತ್ಪತ್ತಿ ಹಾಗೂ ಇದಕ್ಕಾಗಿ ಗಂಡು ಹೆಣ್ಣು ಜೀವಿಗಳ ನಡೆಯಬೇಕಾಗಿರುವ ಮಿಲನಕ್ರಿಯೆ. ಮನುಷ್ಯರಿಗೂ ಈ ಕ್ರಿಯೆ ನಿಸರ್ಗಸಹಜವಾಗಿ ಲಭಿಸಿದ್ದು ಸಂಗಾತಿಗಳು ಬೆರೆಯುವ ಮೂಲಕ ಸಂತಾನೋತ್ಪತ್ತಿ ನಡೆಸುವುದು ಹಾಗೂ ಈ ಮೂಲಕ ಪರಸ್ಪರರ ಲೈಂಗಿಕ ಕಾಮನೆಗಳನ್ನು ಪೂರೈಸಿಕೊಳ್ಳುವುದೂ ಅಗತ್ಯವಾಗಿದೆ ಹಾಗೂ ಕಾಲಕಾಲಕ್ಕೆ ಈ ಬಯಕೆಯನ್ನು ಪೂರೈಸುತ್ತಲೇ ಹೋಗಬೇಕಾಗುತ್ತದೆ. ನಿಸರ್ಗದ ಈ ನಿಯಮವನ್ನು ಪಾಲಿಸುವ ಮೂಲಕವೇ ಆರೋಗ್ಯ ಮತ್ತು ತೃಪ್ತಿ ದೊರಕುತ್ತದೆ ಅಲ್ಲವೇ?

ಉದಾಹರಣೆಗೆ ದೇಹಕ್ಕೆ ನೀರು ಬೇಕು ಎಂದಾಗ ನೀರಡಿಕೆಯಾಗುತ್ತದೆ ಹಾಗೂ ಆಹಾರ ಬೇಕಾದಾಗ ಹಸಿವು ಕೆರಳುತ್ತದೆ. ಒಂದು ವೇಳೆ ದೇಹ ಬೇಡುವ ಈ ಬೇಡಿಕೆಗಳನ್ನು ಆಯಾ ಸಮಯದಲ್ಲಿ ಪೂರೈಸದೇ ಹೋದರೆ ದೇಹಕ್ಕೆ ಹಲವಾರು ಬಗೆಯ ನಷ್ಟವುಂಟಾಗುತ್ತದೆ ಹಾಗೂ ಇದು ಅನಾರೋಗ್ಯಕ್ಕೆ ಕಾರಣವಾಗಬಹುದು. ನಿರ್ಜಲೀಕರಣ ಹಾಗೂ ಪೌಷ್ಟಿಕಾಂಶದ ಕೊರತೆ ಮೊದಲಾದವು ಎದುರಾಗುವ ಮೂಲಕ ಆರೋಗ್ಯ ಕೆಡಬಹುದು.

ಇದೇ ರೀತಿಯಲ್ಲಿ ಲೈಂಗಿಕ ಸಂಪರ್ಕವನ್ನು ಹೊಂದುವುದು ನಿಸರ್ಗವೇ ರೂಪಿಸಿದ ಒಂದು ನಿಯಮವಾಗಿದ್ದು ಇದರಿಂದ ವಿಮುಖರಾಗುವುದರಿಂದಲೂ ಆರೋಗ್ಯದ ಮೇಲೆ ಪರಿಣಾಮವುಂಟಾಗಬಹುದು. ಆದರೆ ಇತರ ಜೀವಿಗಳಿಗೂ ಮನುಷ್ಯರಿಗೂ ಇಲ್ಲಿ ಬರುವ ವ್ಯತ್ಯಾಸವೆಂದರೆ ಮನುಷ್ಯರು ಸಂತಾನೋತ್ಪತ್ತಿಯ ಉದ್ದೇಶದಿಂದಿಲ್ಲದೇ ಕೇವಲ ತೃಪ್ತಿಗಾಗಿಯೂ ಲೈಂಗಿಕ ಸಂಪರ್ಕ ಹೊಂದುತ್ತಾರೆ. ಒಂದು ವೇಳೆ ವ್ಯಕ್ತಿಯೊಬ್ಬರಿಗೆ ನಿಯಮಿತ ಅವಧಿಯಲ್ಲಿ ಹಸಿವೆಯೇ ಆಗದೇ ಇದ್ದರೆ? ಹಾಗೂ ಇದು ದೀರ್ಘಾವಧಿಯಿಂದ ಮುಂದುವರೆದುಕೊಂಡು ಬರುತ್ತಿದ್ದರೆ?

ದಿನನಿತ್ಯ 'ಸೆಕ್ಸ್' ಮಾಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

ತಕ್ಷಣವೇ ವೈದ್ಯರಲ್ಲಿ ಇದಕ್ಕೆ ಕಾರಣವನ್ನು ಕಂಡುಕೊಳ್ಳಲು ಯತ್ನಿಸುತ್ತೇವೆ ಅಲ್ಲವೇ? ಇದೇ ರೀತಿ, ವ್ಯಕ್ತಿಯೊಬ್ಬರು ತಮ್ಮ ನಿಸರ್ಗ ಸಹಜ ಲೈಂಗಿಕ ಬಯಕೆಯಿಂದ ವಿಮುಖರಾಗಿ ನಿರಾಸಕ್ತಿ ತೋರಿದರೆ? ಇದಕ್ಕೂ ಕೆಲವು ಪ್ರಬಲ ಕಾರಣಗಳಿರಬಹುದು. ಒಂದು ವೇಳೆ ನಿಮ್ಮ ಸಂಗಾತಿ ಈ ನಿರಾಸಕ್ತಿಯನ್ನು ಪ್ರಕಟಿಸುತ್ತಿದ್ದರೆ ಈ ಕೆಳಗಿನ ಎಂಟು ಕಾರಣಗಳಿರಬಹುದು. ಇವು ತೀರಾ ಆಪ್ತವಾಗಿರುವ ಕಾರಣ ಸ್ಪಷ್ಟಮಾತುಗಳಲ್ಲಿ ಹೇಳದೇ ಮೌನವಾಗಿಯೇ ದುಗುಡವನ್ನು ಅನುಭವಿಸುತ್ತಿದ್ದಿರಬಹುದು...

ಯೋನಿ ಒಣಗುವುದು

ಯೋನಿ ಒಣಗುವುದು

ಮಹಿಳೆಯರಿಗೆ ಲೈಂಗಿಕ ಕ್ರಿಯೆಯು ನೋವಿಲ್ಲದೆ, ಸುಲಭ ಹಾಗೂ ಆನಂದಿಸುವಂತೆ ಆಗಲು ಅವರ ಯೋನಿಯು ಸರಿಯಾಗಿ ಲ್ಯೂಬ್ರಿಕೇಟ್ ಆಗಿರಬೇಕು. ಇಲ್ಲವಾದಲ್ಲಿ ಮಹಿಳೆಯರಲ್ಲಿ ನೋವು ಅಥವಾ ಉರಿಯುವ ಅನುಭವವಾಗುವುದು. ಸೋಂಕು, ಹಾರ್ಮೋನು ವೈಪರೀತ್ಯ ಇತ್ಯಾದಿಗಳಿಂದ ಯೋನಿಯು ಒಣಗುತ್ತಲಿದ್ದರೆ ಆಗ ಲೈಂಗಿಕ ಕ್ರಿಯೆಯು ತುಂಬಾ ನೋವಿನಿಂದ ಕೂಡಿರುವುದು ಮತ್ತು ಇದನ್ನು ಕಡೆಗಣಿಸಬೇಕು.

ಟೆಸ್ಟಾಸ್ಟೇರೋನ್ ಮಟ್ಟದಲ್ಲಿ ಇಳಿಕೆ

ಟೆಸ್ಟಾಸ್ಟೇರೋನ್ ಮಟ್ಟದಲ್ಲಿ ಇಳಿಕೆ

ವಿಶೇಷವಾಗಿ ಪುರುಷರಲ್ಲಿ ಈ ರಸದೂತದ ಕೊರತೆ ಕಂಡುಬಂದರೆ ಇದು ಲೈಂಗಿಕ ಶಕ್ತಿಯಲ್ಲಿ ಕುಂಠಿತವಾಗಲು ಹಾಗೂ ನಿರಾಸಕ್ತಿಗೆ ಕಾರಣವಾಗಿರಬಹುದು. ಪುರುಷರಲ್ಲಿ ಲೈಂಗಿಕ ಬಯಕೆಯನ್ನು ಭುಗಿಲೆಬ್ಬಿಸಲು, ಉದ್ರೇಕತೆ ಪಡೆಯಲು ಹಾಗೂ ಸಂತಾನೋತ್ಪತ್ತಿ ನಡೆಸಲು ಈ ರಸದೂತ ತೀರಾ ಅಗತ್ಯವಾಗಿದೆ. ಹಾಗಾಗಿ ಒಂದು ವೇಳೆ ಪುರುಷರಲ್ಲಿ ಲೈಂಗಿಕ ನಿರಾಸಕ್ತಿ ಕಂಡುಬಂದರೆ ಟೆಸ್ಟಾಸ್ಟೇರೋನ್ ರಸದೂತದ ಮಟ್ಟದ ಪರೀಕ್ಷೆಯನ್ನು ಅಗತ್ಯವಾಗಿ ಮಾಡಿಸಿ ಕೊಂಡು ವೈದ್ಯರ ಸಲಹೆ ಪಡೆಯಬೇಕು.

ಲೈಂಗಿಕ ಮೌಲ್ಯದ ಬಗ್ಗೆ ತಪ್ಪು ತಿಳಿವಳಿಕೆ

ಲೈಂಗಿಕ ಮೌಲ್ಯದ ಬಗ್ಗೆ ತಪ್ಪು ತಿಳಿವಳಿಕೆ

ಇದೊಂದು ಅಪ್ಪಟ ಮನೋವೈಜ್ಞಾನಿಕ ವಿಷಯವಾಗಿದ್ದು ಲೈಂಗಿಕ ಬಯಕೆಯಿಂದ ವಿಮುಖರಾಗಲು ಕೆಲವು ನಂಬುಗೆಗಳೇ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ಲೈಂಗಿಕತೆ ಕೆಟ್ಟದ್ದು, ತಪ್ಪು, ಅವಮಾನಕರ ಎಂಬೆಲ್ಲಾ ಭಾವನೆಯನ್ನು ಚಿಕ್ಕಂದಿನಿಂದಲೇ ಮೂಡಿಸುತ್ತಾ ಬರುವ ಕುಟುಂಬಗಳಲ್ಲಿ ಬೆಳೆದುಬಂದ ವ್ಯಕ್ತಿಗಳು ಸ್ವಾಭಾವಿಕವಾಗಿ ಈ ಬಗ್ಗೆ ತಪ್ಪು ಭಾವನೆಯನ್ನು ತಮ್ಮ ಮನದಲ್ಲಿ ಬೆಳೆಸಿಕೊಂಡಿರುತ್ತಾರೆ. ಪರಿಣಾಮವಾಗಿ ಇವರಿಗೆ ಲೈಂಗಿಕ ನಿರಾಸಕ್ತಿ ಸಹಜವಾಗಿಯೇ ಮೂಡಿರುತ್ತದೆ. ಈ ನಿರಾಸಕ್ತಿಯನ್ನು ಹೋಗಲಾಡಿಸಲು ಮನೋವೈಜ್ಞಾನಿಕರ ಬಳಿ ಸೂಕ್ತ ಚಿಕಿತ್ಸೆ ಹಾಗೂ ಲೈಂಗಿಕ ವಿಷಯದ ಬಗ್ಗೆ ಸೂಕ್ತ ಮಾಹಿತಿಯ ಮನವರಿಕೆಯ ಪಾಠಗಳನ್ನು ತಿಳಿಸಿಕೊಟ್ಟ ಬಳಿಕ ಈ ವ್ಯಕ್ತಿಗಳು ಸಹಜ ಜೀವನ ನಡೆಸಲು ಮುಂದಾಗುತ್ತಾರೆ.

ಖಿನ್ನತೆ

ಖಿನ್ನತೆ

ಇನ್ನೊಂದು ಮನೋವೈಜ್ಞಾನಿಕ ತೊಂದರೆಯಾಗಿರುವ ಖಿನ್ನತೆ ಲೈಂಗಿಕ ನಿರಾಸಕ್ತಿಗೆ ನೇರವಾಗಿ ಕಾರಣವಾಗಿರಬಹುದು. ಖಿನ್ನತೆ ಒಂದು ಭಯಂಕರ ಮಾನಸಿಕ ವ್ಯಾಧಿಯಾಗಿದೆ, ಇದರಲ್ಲಿ ವ್ಯಕ್ತಿಯ ದೇಹದಲ್ಲಿ ಸೆರೋಟೋನಿನ್ ಮತ್ತು ಡೋಪಮೈನ್ ಎಂಬ ರಸದೂತಗಳು ಎರ್ರಾಬಿರ್ರಿ ಸ್ರವಿಸಿ ವ್ಯಕ್ತಿಯ ಚಿಂತನೆಯ ಲಹರಿಯನ್ನೇ ಬದಲಿಸಿ ಬಿಡುತ್ತವೆ ಹಾಗೂ ವ್ಯಕ್ತಿಯ ಧೋರಣೆ ಋಣಾತ್ಮಕವಾಗಿರಲು ಕಾರಣವಾಗುತ್ತವೆ. ಈ ರಸದೂತಗಳ ಏರಿಳಿತದಿಂದ ಲೈಂಗಿಕ ನಿರಾಸಕ್ತಿಯೂ ಎದುರಾಗುತ್ತದೆ. ಖಿನ್ನತೆಯಿಂದ ವ್ಯಕ್ತಿಯ ಯೋಚನೆ ಋಣಾತ್ಮಕವಾಗಿದ್ದು ಇವರು ಈ ಸಮಯದಲ್ಲಿ ಕೈಗೊಳ್ಳುವ ನಿರ್ಧಾರಗಳು ಭಯಾನಕವೂ ಆಗಿರಬಹುದು. ಆದ್ದರಿಂದ ಇವರಿಗೆ ಸೂಕ್ತ ಮಾನಸಿಕ ಚಿಕಿತ್ಸೆ, ಮನೋವೈಜ್ಞಾನಿಕ ನೆರವು, ಕುಟುಂಬದವರ ಸಹಾಯಹಸ್ತ ಮೊದಲಾದವುಗಳ ಅಗತ್ಯವಿದೆ. ಖಿನ್ನತೆಯ ಅವಧಿಯಿಂದ ಹೊರಬಂದ ತಕ್ಷಣ ಬೇರೆಲ್ಲಾ ತೊಂದರೆಗಳ ಜೊತೆಗೇ ಲೈಂಗಿಕ ನಿರಾಸಕ್ತಿಯೂ ಇಲ್ಲವಾಗುತ್ತದೆ.

ಥೈರಾಯ್ಡ್ ಕಾಯಿಲೆ

ಥೈರಾಯ್ಡ್ ಕಾಯಿಲೆ

ಒಂದು ವೇಳೆ ಥೈರಾಯ್ಡ್ ಗ್ರಂಥಿಯ ಸ್ರವಿಕೆಯಲ್ಲಿ ಏರುಪೇರು ಉಂಟಾದರೆ ಇದು ದೇಹದಲ್ಲಿ ಎರಡು ಬಗೆಯ ಪರಿಣಾಮಗಳನ್ನುಂಟುಮಾಡುತ್ತದೆ. ಮೊದಲನೆಯದಾಗಿ ಹೈಪೋಥೈರಾಯ್ಡಿಸಂ ಅಥವಾ ಥೈರಾಯ್ಡ್ ರಸದೂತದ ಕೊರತೆ ಹಾಗೂ ಹೈಪರ್ ಥೈರಾಯ್ಡಿಸಂ ಅಥವಾ ಥೈರಾಯ್ಡ್ ರಸದೂತ ಅಗತ್ಯಕ್ಕೂ ಹೆಚ್ಚು ಸ್ರವಿಸುವುದು. ಇವೆರಡೂ ಸ್ಥಿತಿಗಳಲ್ಲಿ ವ್ಯಕ್ತಿ ಲೈಂಗಿಕ ನಿರಾಸಕ್ತಿಯನ್ನು ಎದುರಿಸಬಹುದು. ರಕ್ತಪರೀಕ್ಷೆಯಲ್ಲಿ ಈ ಸ್ಥಿತಿಯನ್ನು ಸುಲಭವಾಗಿ ವೈದ್ಯರು ಗುರುತಿಸುತ್ತಾರೆ ಹಾಗೂ ಸೂಕ್ತ ಔಷಧಿಗಳನ್ನು ನೀಡುವ ಮೂಲಕ ಈ ಕೊರತೆಯನ್ನು ಸರಿಪಡಿಸಬಹುದು.

ಮುಟ್ಟಿನ ದಿನಗಳಲ್ಲಿ...

ಮುಟ್ಟಿನ ದಿನಗಳಲ್ಲಿ...

ಮಹಿಳೆಯರಿಗೆ 45-50ರ ಹರೆಯದಲ್ಲಿ ವಯೋಸಹಜವಾಗಿ ಎದುರಾಗುವ ರಜೋನಿವೃತ್ತಿಯ ಸಮಯದಲ್ಲಿ ಅಂಡಾಶಯದಲ್ಲಿ ಅಂಡಾಣುಗಳು ಬಿಡುಗಡೆಯಾಗುವುದು ನಿಂತುಹೋಗುತ್ತದೆ ಹಾಗೂ ಪರಿಣಾಮವಾಗಿ ಮಾಸಿಕ ದಿನಗಳ ಋತುಚಕ್ರವೂ ನಿಂತುಹೋಗುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಸ್ರವಿಸುವ ಕೆಲವಾರು ರಸದೂತಗಳ ಪರಿಣಾಮವಾಗಿ ಲೈಂಗಿಕ ನಿರಾಸಕ್ತಿ ಸಹಜವಾಗಿಯೇ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಈ ಸಮಯದಲ್ಲಿ ಗುಪ್ತಾಂಗದ ದ್ರವ್ಯತೆಯ ಕೊರತೆ ಎದುರಾಗುತ್ತದೆ ಹಾಗೂ ಮಿಲನಕ್ರಿಯೆಯಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳುತ್ತದೆ. ಈ ತೊಂದರೆ ಹೆಚ್ಚು ಕಾಲ ಮುಂದುವರೆದರೆ ಕೆಲವು ರಸದೂತ ಸಂಬಂಧಿತ ಚಿಕಿತ್ಸೆಗಳನ್ನು ನೀಡುವ ಮೂಲಕ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು.

ಪತ್ತೆಯಾಗದ ಲೈಂಗಿಕ ರೋಗಗಳು

ಪತ್ತೆಯಾಗದ ಲೈಂಗಿಕ ರೋಗಗಳು

ಒಂದು ವೇಳೆ ವ್ಯಕ್ತಿಯ ಅರಿವಿಗೆ ಬಾರದಂತೆ ಯಾವುದಾದರೂ ಲೈಂಗಿಕವಾಗಿ ಹರಡುವ ರೋಗ STD (Sexually Transmitted Disease) ಆವರಿಸಿದ್ದರೆ ಇದು ಸಹಾ ಲೈಂಗಿಕ ಶಕ್ತಿ ಕುಂಠಿತವಾಗಲು ಕಾರಣವಾಗಬಹುದು. ಹರ್ಪಿಸ್, ಗೋನೋರಿಯಾ ಮೊದಲಾದ ಲೈಂಗಿಕ ರೋಗಗಳು ವ್ಯಕ್ತಿಯ ದೇಹದ ರಸದೂತಗಳ ಮಟ್ಟಗಳನ್ನು ಏರಿಳಿತಗೊಳಿಸಿ ಮಿಲನಸಮಯದಲ್ಲಿ ಗುಪ್ತಾಂಗಗಳಲ್ಲಿ ನೋವುಂಟುಮಾಡಬಹುದು. ಆದ್ದರಿಂದ ತಕ್ಷಣವೇ ತಜ್ಞರ ಬಳಿ ತೆರಳಿ ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಂಡು ವೈದ್ಯರ ಸೂಚನೆ ಸಲಹೆ ಚಿಕಿತ್ಸೆಗಳನ್ನು ಪಡೆಯಬೇಕು. ಅದರಲ್ಲೂ ಸಂಗಾತಿಯ ಹೊರತಾಗಿ ಹೊರಗಿನ ಸಂಬಂಧ ಬೆಳೆಸುವವರು ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಲೈಂಗಿಕ ದೌರ್ಜನ್ಯ

ಲೈಂಗಿಕ ದೌರ್ಜನ್ಯ

ಇದೊಂದು ತೀರಾ ಗಹನವಾದ ಮನೋವೈಜ್ಞಾನಿಕ ವಿಷಯವಾಗಿದ್ದು ವ್ಯಕ್ತಿಯ ಮನದಾಳದಲ್ಲಿ ಹುದುಗಿದ್ದ ಭಯ ಲೈಂಗಿಕ ನಿರಾಸಕ್ತಿಗೆ ಪ್ರಮುಖ ಕಾರಣವಾಗಿರಬಹುದು. ಚಿಕ್ಕಂದಿನಿಂದ ತೊಡಗಿ ಯಾವುದೇ ವಯಸ್ಸಿನಲ್ಲಿ ಒಳಗಾದ ಲೈಂಗಿಕ ದೌರ್ಜನ್ಯ ಮಾನಸಿಕವಾದ ಭಯ, ಸೇಡಿನ ಭಾವನೆ, ಸಿಟ್ಟು ಮೊದಲಾದವು ವಯಸ್ಕರಾದ ಬಳಿಕ ಲೈಂಗಿಕ ಚಟುವಟಿಕೆಯಲ್ಲಿ ಒಳಗೊಳ್ಳುವುದಕ್ಕೆ ತಡೆಯುಂಟುಮಾಡಬಹುದು. ಈ ವ್ಯಕ್ತಿಗಳಿಗೆ ಮನೋವೈಜ್ಞಾನಿಕ ಚಿಕಿತ್ಸೆ ಹಾಗೂ ಪರಿಣಿತರಿಂದ ನಡವಳಿಕಾ ಚಿಕಿತ್ಸೆ (behavioural therapy) ಗಳ ಅಗತ್ಯವಿದೆ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಒಂದು ವೇಳೆ ಮಹಿಳೆಯೊಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೃದಯ ಮತ್ತು ಮೆದುಳಿಗೆ ಹರಿಯುವ ರಕ್ತದ ಪ್ರಮಾಣದಲ್ಲಿ ಹೆಚ್ಚಳವಾಗುವ ಕಾರಣ ಇದರಿಂದ ಹೃದಯಾಘಾತದ ಸಾಧ್ಯತೆ ಹೆಚ್ಚುತ್ತದೆ ಎಂಬ ಭೀತಿಯನ್ನು ಇವರು ಹೊಂದಿರುತ್ತಾರೆ. ಈ ಆತಂಕಕ್ಕೆ ವೈಜ್ಞಾನಿಕ ಕಾರಣವೂ ಇದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೃದಯದ ಮೇಲೆ ಹೇರುವ ಭಾರವೂ ಹೆಚ್ಚುತ್ತದೆ ಹಾಗೂ ಇದರಿಂದ ಅಧಿಕ ರಕ್ತದೊತ್ತಡದ ತೊಂದರೆ ಇರುವ ವ್ಯಕ್ತಿಗಳು ಹೃದಯಸ್ತಂಭನಕ್ಕೂ ಒಳಗಾಗಬಹುದು.

ಲೈಂಗಿಕ ರೋಗಗಳು (Sexually Transmitted Diseases)

ಲೈಂಗಿಕ ರೋಗಗಳು (Sexually Transmitted Diseases)

ಗೊನೋರಿಯಾ, ಕ್ಲಾಮೈಡಿಯಾ, ಹೆಪಾಟೈಟಿಸ್ ಮೊದಲಾದ ಲೈಂಗಿಕ ರೋಗಗಳು ಗುಪ್ತಾಂಗದ ಭಾಗದಲ್ಲಿ ಅತೀವವಾದ ನೋವು ಹಾಗೂ ಉರಿಯನ್ನು ತಂದೊಡ್ಡುತ್ತವೆ. ಅಲ್ಲದೇ ತನಗೆ ಒದಗಿರುವ ರೋಗವನ್ನು ತನ್ನ ಸಂಗಾತಿಗೆ ಹರಡಿಸಲು ಇಷ್ಟಪಡದ ಮಹಿಳೆ ಲೈಂಗಿಕ ಕ್ರಿಯೆಗೆ ಒಲ್ಲೆನೆನ್ನಬಹುದು.

ರಸದೂತಗಳ ಏರುಪೇರು

ರಸದೂತಗಳ ಏರುಪೇರು

ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಲೈಂಗಿಕ ಕಾಮನೆಗಳನ್ನು ಪ್ರಚೋದಿಸಲು ಕೆಲವು ರಸದೂತಗಳು ಸ್ರವಿಸಬೇಕಾಗುತ್ತದೆ. ಮಹಿಳೆಯರಲ್ಲಿ ಈಸ್ಟ್ರೋಜೆನ್ ಎಂಬ ರಸದೂತದ ಉತ್ಪಾದನೆ ಕಡಿಮೆಯಾದರೆ ಲೈಂಗಿಕ ಬಯಕೆಯೂ ಕಡಿಮೆಯಾಗುತ್ತದೆ. ಈ ನಿರಾಸಕ್ತಿ ಯಾವುದೇ ವಯಸ್ಸಿನಲ್ಲಿ ಎದುರಾಗಬಹುದು.

ಪತ್ತೆಯಾಗದೆ ಇರುವ ಲೈಂಗಿಕ ರೋಗಗಳು

ಪತ್ತೆಯಾಗದೆ ಇರುವ ಲೈಂಗಿಕ ರೋಗಗಳು

ಯಾವುದೇ ವ್ಯಕ್ತಿಗೆ ಲೈಂಗಿಕ ರೋಗಗಳು ಇದ್ದರೆ ಅದರ ಬಗ್ಗೆ ತಿಳಿಯದೇ ಇದ್ದರೆ ಆತ/ಆಕೆಗೆ ಲೈಂಗಿಕಾಸಕ್ತಿಯು ಕಡಿಮೆಯಾಗಬಹುದು. ಲೈಂಗಿಕ ರೋಗಗಳಾದ ಹಾರ್ಪಿಸ್, ಗೊನೊರಿಯಾ ಇತ್ಯಾದಿಗಳು ಹಾರ್ಮೋನು ಅಸಮತೋಲ ಉಂಟು ಮಾಡುವುದು ಮತ್ತು ಲೈಂಗಿಕ ಕ್ರಿಯೆಯ ವೇಳೆ ಜನನೇಂದ್ರಿಯದ ಭಾಗದಲ್ಲಿ ನೋವುಂಟು ಮಾಡುವುದು. ಇದರಿಂದ ಲೈಂಗಿಕ ರೋಗಗಳ ಬಗ್ಗೆ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ನೀವು ಹಲವಾರು ಮಂದಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದರೆ ಇದು ಅಗತ್ಯ.

English summary

Reasons Why a Woman Doesn't Want to Have Sex

As humans, just like every other living being, we have a number of basic instincts which need to be satisfied from time to time, in order for us to remain healthy and happy, right? For instance, we must drink water when we feel thirsty and we must consume food when we are hungry, etc. If these needs are not met, when we feel the urge, it could lead to a number of problems like dehydration and malnutrition! Here are a few medical reasons why you may not feel like having sex
Story first published: Monday, June 11, 2018, 10:38 [IST]
X
Desktop Bottom Promotion