For Quick Alerts
ALLOW NOTIFICATIONS  
For Daily Alerts

ನಂಬಿಕೆಯೇ ಬರುತ್ತಿಲ್ಲ!! ಅವಲಕ್ಕಿಯಲ್ಲಿ ಇಷ್ಟೊಂದು ಪ್ರಯೋಜನಗಳಿವೆಯೇ?

|

ಆರೋಗ್ಯದ ಬಗ್ಗೆ ಇರುವ ಒಂದು ಸುಭಾಷಿತವನ್ನು ನೀವು ಕೇಳಿಯೇ ಇದ್ದೀರಿ. "ರಾಜನಂತೆ ಉಪಾಹಾರ ಸೇವಿಸು, ರಾಣಿಯಂತೆ ಮಧ್ಯಾಹ್ನದ ಊಟವನ್ನು ಮಾಡು ಆದರೆ ರಾತ್ರಿಯೂಟವನ್ನು ಮಾತ್ರ ದಿವಾಳಿ ವ್ಯಕ್ತಿಯಂತೆ ಸೇವಿಸು" ಎಂಬ ಸುಭಾಷಿತ ದಿನದ ಆಹಾರಗಳಲ್ಲಿ ಉಪಾಹಾರದ ಮಹತ್ವದ ಬಗ್ಗೆ ತಿಳಿಸುತ್ತದೆ. ಆರೋಗ್ಯಕರ ಉಪಾಹಾರ ಸೇವನೆಯ ಬಗ್ಗೆ ನೀವು ಈಗಾಗಲೇ ಹಲವಾರು ಲೇಖನಗಳನ್ನು ಅಥವಾ ಸಾಕ್ಷ್ಯಚಿತ್ರಗಳನ್ನು ನೋಡಿರಬಹುದು. ದಿನದ ಎಲ್ಲಾ ಆಹಾರಗಳಲ್ಲಿ ಉಪಾಹಾರ ಅತಿ ಪೌಷ್ಟಿಕ ಹಾಗೂ ಉತ್ತಮ ಪ್ರಮಾಣದ್ದಾಗಿರಬೇಕು ಏಕೆಂದರೆ ರಾತ್ರಿಯ ನಿದ್ದೆಯ ಸಮಯದಲ್ಲಿ ದೇಹದ ಹಲವಾರು ಅನೈಚ್ಚಿಕ ಕಾರ್ಯಗಳಿಗೆ ವಿನಿಯೋಗವಾಗಿದ್ದ ಶಕ್ತಿಯನ್ನು ಮರುತುಂಬಿಸಲು ಈ ಉಪಾಹಾರ ಅಗತ್ಯವಾಗಿದೆ ಹಾಗೂ ಇಡಿಯ ದಿನದ ಚಟುವಟಿಕೆಗಳಿಗೆ ಶಕ್ತಿ ನೀಡುತ್ತದೆ.

ಒಂದು ಒಳ್ಳೆಯ ಉಪಾಹಾರ ಸೇವಿಸಿ .ಪ್ರಾರಂಭಿಸಿದ ದಿನ ಚೇತೋಹಾರಿಯಾಗಿಯೂ, ಲವಲವಿಕೆಯಿಂದಿರಲೂ ಸಾಧ್ಯವಾಗುತ್ತದೆ. ಉಪಾಹಾರದಿಂದ ಚುರುಕುಗೊಳ್ಳುವ ಜೀವರಾಸಾಯನಿಕ ಕ್ರಿಯೆಯೇ ಇದಕ್ಕೆ ಕಾರಣ. ಒಂದು ವೇಳೆ ಆರೋಗ್ಯಕರ ಉಪಾಹಾರದ ಬದಲು ಅನಾರೋಗ್ಯಕರ ಸಿದ್ಧ ಆಹಾರಗಳನ್ನು ದಿನದ ಮೊದಲ ಆಹಾರವಾಗಿ ಸೇವಿಸಿದರೆ ಇದು ಆರೋಗ್ಯಕ್ಕೆ ಒಳ್ಳೆಯದು ಮಾಡುವುದಕ್ಕಿಂತ ಅಪಾಯದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅಲ್ಲದೇ, ಕೆಲವೊಮ್ಮೆ, ಸಮಯಾಭಾವದಿಂದ ಹಲವರು ಬೆಳಗ್ಗಿನ ಉಪಾಹಾರವನ್ನು ಬಿಟ್ಟೇ ಹೋಗುತ್ತಾರೆ. ಕಾರಣ ಏನೇ ಇರಲಿ, ಉಪಾಹಾರವನ್ನು ಮಾಡದೇ ಇರುವುದು ಹಲವಾರು ತೊಂದರೆಗಳೊಂದಿಗೆ ತಳಕು ಹಾಕಿಕೊಂಡಿದೆ. ಕಡಿಮೆ ರಕ್ತದೊತ್ತಡ, ಜೀವರಾಸಾಯನಿಕ ಕ್ರಿಯೆ ಕುಂಠಿತಗೊಳ್ಳುವುದು, ಹೃದಯದ ತೊಂದರೆ, ಮಲಬದ್ದತೆ ಮೊದಲಾದವು ಎದುರಾಗುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೂ ಉಪಾಹಾರವನ್ನು ಬಿಡಲೂಬಾರದು, ತಡವಾಗಿಸಲೂಬಾರದು. ಅಲ್ಲದೇ ನಿತ್ಯವೂ ಉಪಾಹಾರಕ್ಕೆಂದು ಸೇವಿಸುವ ಆಹಾರ ಆರೋಗ್ಯಕರವೂ, ಸಮತೋಲನದ ಪ್ರಮಾಣವನ್ನೂ ಹೊಂದಿರಬೇಕು. ಆರೋಗ್ಯಕರ ಉಪಾಹಾರ ಸೇವಿಸುವ ಮೂಲಕ ಮೆದುಳಿನ ಜೀವಕೋಶಗಳಿಗೆ ಗರಿಷ್ಠ ಪ್ರಮಾಣದ ಪೋಷಕಾಂಶಗಳು ದೊರೆತು ಮೆದುಳಿನ ಕ್ಷಮತೆ ಅತ್ಯುತ್ತಮವಾಗಿರುತ್ತವೆ. ತನ್ಮೂಲಕ ದಿನದ ಕೆಲಸಗಳಲ್ಲಿ ಏಕಾತ್ರತೆ ಹಾಗೂ ಚುರುಕುತನವನ್ನು ಪ್ರಕಟಿಸಲು ಸಾಧ್ಯವಾಗುತ್ತದೆ.

ನೂರಾರು ಸಂಸ್ಕೃತಿಗಳ ತವರೂರಾದ ಭಾರತದಲ್ಲಿ ಸಾವಿರಾರು ಬಗೆಯ ಆಹಾರವಿಧಾನಗಳಿವೆ. ಪ್ರತಿ ರಾಜ್ಯದಲ್ಲಿಯೂ ವಿಶಿಷ್ಟವಾದ ರುಚಿಕರ ಖಾದ್ಯಗಳು ದಿನದ ವಿವಿಧ ಹೊತ್ತಿನ ಆಹಾರಗಳಿಗೆಂದೇ ತಯಾರಿಸಲ್ಪಡುತ್ತವೆ. ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ, ಸಂಜೆಯ ತಿಂಡಿ ಹೀಗೆ ವಿವಿಧ ಸಮಯಕ್ಕೆ ಅನುಗುಣವಾಗಿ ಪ್ರತ್ಯೇಕ ಖಾದ್ಯಗಳಿವೆ. ಉತ್ತರ ಭಾರತದಲ್ಲಿ ಗೋಧಿಯ ರೊಟ್ಟಿ ಪ್ರಮುಖ ಆಹಾರವಾಗಿದ್ದು ಇದರೊಂದಿಗೆ ಸೇವಿಸಲು ವಿವಿಧ ಬಗೆಯ ಪಲ್ಯಗಳನ್ನು ಮಾಡಿದರೆ ದಕ್ಷಿಣ ಭಾರತದಲ್ಲಿ ಅನ್ನವೇ ಪ್ರಧಾನ ಆಹಾರವಾಗಿದ್ದು ಇದರೊಂದಿಗೆ ಕಲಸಿಕೊಳ್ಳಲು ವಿವಿಧ ಬಗೆಯ ದ್ರವಾಹಾರಗಳಿವೆ.

ಆದರೆ ನಮ್ಮೆಲ್ಲರ ನೆಚ್ಚಿನ 'ಅವಲಕ್ಕಿ' ಅಥವಾ ದಕ್ಷಿಣ ಭಾರತದ ರಾಜ್ಯಗಳಲ್ಲಿ 'ಅವಲ್' ಎಂದು ಕರೆಯಲ್ಪಡುವ ಈ ಸಿದ್ಧ ಆಹಾರ ಮಹಾರಾಷ್ಟ, ಕರ್ನಾಟಕ, ತೆಲಂಗಾಣ, ದೆಹಲಿ, ಕೇರಳ ಹಾಗೂ ಇನ್ನಿತರ ರಾಜ್ಯಗಳಲ್ಲಿಯೂ ಸೇವಿಸಲ್ಪಡುತ್ತದೆ. ಇಂಗ್ಲಿಷ್ ನಲ್ಲಿ 'ಪೋಹಾ' ಎಂದು ಕರೆಯಲ್ಪಡುವ ಅವಲಕ್ಕಿಯನ್ನು ದಪ್ಪ ಭತ್ತವನ್ನು ನೆನೆಸಿ ಉಪ್ಪುನೀರಿನೊಂದಿಗೆ ಕೊಂಚವೇ ಹುರಿದು ಬಳಿಕ ಅವಲಕ್ಕಿ ಮಿಲ್ಲಿನಲ್ಲಿ ಎರಡು ಕಬ್ಬಿಣದ ಅಥವಾ ರಬ್ಬರಿನ ಚಕ್ರಗಳ ನಡುವೆ ಒತ್ತಿಸಿ ಹರಡಿಸಲಾಗುತ್ತದೆ. ಈ ಕ್ರಿಯೆಯಲ್ಲಿ ಪುಡಿಯಾಗುವ ಹೊಟ್ಟನ್ನು ನಿವಾರಿಸಿದರೆ ಇದೇ ಅವಲಕ್ಕಿ! ಇದು ಎಲ್ಲರ ಮೆಚ್ಚಿನ ಉಪಾಹಾರ ಹಾಗೂ ಸಂಜೆಯ ತಿಂಡಿಯಾಗಿದೆ.

ಒಮ್ಮೆ ಮಾಡಿ, ಸವಿದು ನೋಡಿ-ಪಾಲಕ್ ಅವಲಕ್ಕಿ!

ತೂಕ ಇಳಿಸಲು ಯತ್ನಿಸುತ್ತಿರುವ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ವ್ಯಕ್ತಿಗಳು ಅವಲಕ್ಕಿಯನ್ನು ಪ್ರಯತ್ನಿಸಬಹುದು ಹಾಗೂ ಇದರ ಪರಿಣಾಮವನ್ನು ಶೀಘ್ರದಲ್ಲಿಯೇ ಗಮನಿಸಬಹುದು. ಸಾಮಾನ್ಯವಾಗಿ ಅವಲಕ್ಕಿಯನ್ನು ಚಿಕ್ಕ ಪ್ರಮಾಣದಲ್ಲಿ ನೀಡಲಾಗುತ್ತದೆ. ಏಕೆಂದರೆ ಇಷ್ಟು ಪ್ರಮಾಣದಿಂದ ಹೊಟ್ಟೆ ತುಂಬಿರುವ ಭಾವನೆ ಮೂಡಲು ಸಾಧ್ಯವಾಗುತ್ತದೆ ಹಾಗೂ ಅನಗತ್ಯ ಆಹಾರ ಸೇವಿಸುವುದರಿಂದ ತಡೆಯುತ್ತದೆ. ಇದು ಆರೋಗ್ಯಕರ ಜೀವನಕ್ರಮಕ್ಕೆ ನೆರವಾಗುತ್ತದೆ. ಅವಲಕ್ಕಿಯನ್ನು ಕೊಂಚ ಲಿಂಬೆರಸ, ನೀರುಳ್ಳಿ, ಹಸಿಮೆಣಸು ಮತ್ತು ಒಗ್ಗರಣೆ ಹಾಕಿ ಕಾಯಿತುರಿ ಮಿಶ್ರಣ ಮಾಡಿ ಸೇವಿಸಿದರೆ ಇದರ ರುಚಿಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಅವಲಕ್ಕಿಯ ಜೊತೆಗೇ ಲಿಂಬೆ ಮತ್ತು ತೆಂಗಿನ ಕಾಯಿಯ ಪೋಷಕಾಂಶಗಳೂ ಲಭಿಸುವ ಮೂಲಕ ಇದೊಂದು ಅತ್ಯಂತ ಆರೋಗ್ಯಕರ ಆಹಾರವಾಗುತ್ತದೆ. ಬನ್ನಿ, ಅವಲಕ್ಕಿಯನ್ನು ಉಪಾಹಾರವಾಗಿ ಸೇವಿಸುವುದರಿಂದ ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ಅರಿಯೋಣ.....

ಅವಲಕ್ಕಿ ಸುಲಭವಾಗಿ ಜೀರ್ಣವಾಗುತ್ತವೆ

ಅವಲಕ್ಕಿ ಸುಲಭವಾಗಿ ಜೀರ್ಣವಾಗುತ್ತವೆ

ಭತ್ತವನ್ನು ಮೊದಲೇ ಮುಕ್ಕಾಲು ಪಾಲು ಬೇಯಿಸಿದ್ದ ಕಾರಣ ಅವಲಕ್ಕಿ ಸುಲಭವಾಗಿ ಜೀರ್ಣವಾಗುತ್ತದೆ. ಇದು ಅವಲಕ್ಕಿ ತಿನ್ನಲು ಪ್ರೇರಣೆ ನೀಡುವ ಪ್ರಮುಖ ಪ್ರಯೋಜನವಾಗಿದೆ. ಅವಲಕ್ಕಿಯನ್ನು ಉಪಾಹಾರವಾಗಿ ಸೇವಿಸಿದರೆ ದಿನದ ಉಳಿದ ಅವಧಿಯಲ್ಲಿ ಎಂದೂ ಹೊಟ್ಟೆಯುಬ್ಬರಿಕೆಯುಂಟಾಗುವುದಿಲ್ಲ ಹಾಗೂ ಅನಗತ್ಯ ಆಹಾರ ಸೇವನೆಗೂ ಮನಸ್ಸಾಗುವುದಿಲ್ಲ. ಆದ್ದರಿಂದ ಅವಲಕ್ಕಿಯನ್ನು ಉಪಾಹಾರದಲ್ಲಿ ಸೇವಿಸುವುದು ಉತ್ತಮ ಆಯ್ಕೆಯಾಗಿದೆ.

ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ

ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ

ಬೆಳಗ್ಗಿನ ಉಪಾಹಾರದಲ್ಲಿ ಸೇವಿಸುವ ಆಹಾರ ಮದ್ಯಾಹ್ನದ ಊಟದ ಸಮಯದವರೆಗೂ ಅಗತ್ಯ ಚಟುವಟಿಕೆಗಳಿಗೆ ಅಗತ್ಯ ಇಂಧನ ಪೂರೈಸುವಂತಿರಬೇಕು. ಈ ಅಗತ್ಯತೆಗೆ ಅವಲಕ್ಕಿ ಅತ್ಯಂತ ಸೂಕ್ತವಾದ ಆಯ್ಕೆಯಾಗಿದ್ದು ಮದ್ಯಾಹ್ನದ ಊಟದವರೆಗೂ ಶಕ್ತಿಯ ಕೊರತೆಯುಂಟಾಗದಂತೆ ನೋಡಿಕೊಳ್ಳುತ್ತದೆ. ಅವಲಕ್ಕಿಯಿಂದ ಎಲ್ಲ ಚಟುವಟಿಕೆಗಳಿಗೆ ಅಗತ್ಯ ಶಕ್ತಿ ದೊರಕುವ ಮೂಲಕ ದೈಹಿಕವಾಗಿಯೂ ಮಾನಸಿಕವಾಗಿಯೂ ಉಲ್ಲಸಿತವಾಗಿರಲು ಸಾಧ್ಯವಾಗುತ್ತದೆ.

ಕಬ್ಬಿಣದ ಪ್ರಮಾಣ ಹೆಚ್ಚು

ಕಬ್ಬಿಣದ ಪ್ರಮಾಣ ಹೆಚ್ಚು

ಅವಲಕ್ಕಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಅಂಶವಿದೆ. ಅಂದರೆ ನಿತ್ಯವೂ ಅವಲಕ್ಕಿಯನ್ನು ಉಪಾಹಾರವಾಗಿ ಸೇವಿಸಿದವರಿಗೆ ಎಂದಿಗೂ ರಕ್ತಹೀನತೆ ಎದುರಾಗದು! ಅಲ್ಲದೇ ಕಬ್ಬಿಣದ ಅವಶ್ಯಕತೆ ಹೆಚ್ಚಿರುವ ಗರ್ಭವತಿಯರು, ಬಾಣಂತಿಯರು ಹಾಗೂ ಚಿಕ್ಕ ಮಕ್ಕಳಿಗೂ ಅವಲಕ್ಕಿ ಸೂಕ್ತವಾದ ಉಪಾಹಾರವಾಗಿದೆ. ನಮ್ಮ ರಕ್ತದಲ್ಲಿನ ಹೀಮೋಗ್ಲೋಬಿನ್ ಅಂಶವನ್ನು ಅಗತ್ಯಮಟ್ಟದಲ್ಲಿರಿಸಲು ಕಬ್ಬಿಣ ಅಗತ್ಯವಾದ ಧಾತುವಾಗಿದ್ದು ಇದನ್ನು ಪೂರೈಸುವ ಮೂಲಕ ಅವಲಕ್ಕಿ ಅತ್ಯಂತ ಪೌಷ್ಟಿಕ ಉಪಾಹಾರವಾಗಿದೆ.

ಕಾರ್ಬೋಹೈಡ್ರೇಟುಗಳಿಂದ ಸಮೃದ್ಧವಾಗಿದೆ

ಕಾರ್ಬೋಹೈಡ್ರೇಟುಗಳಿಂದ ಸಮೃದ್ಧವಾಗಿದೆ

ನಿಮ್ಮ ದೇಹದ ಕಾರ್ಬೋಹೈಡ್ರೇಟುಗಳ ಅಗತ್ಯತೆಗೆ ಧಾರಾಳವಾಗಿ ಅವಲಕ್ಕಿಯನ್ನು ಅವಲಂಬಿಸಬಹುದು. ಕಾರ್ಬೋಹೈಡ್ರೇಟುಗಳಿಗಾಗಿ ಇರುವ ಆಹಾರಗಳ ಪಟ್ಟಿಯಲ್ಲಿ ಅವಲಕ್ಕಿ ಪ್ರಥಮ ಸ್ಥಾನದಲ್ಲಿದೆ. ದಿನದ ಇತರ ಅವಧಿಗಳಲ್ಲಿ ತಿನ್ನಲು ಪ್ರೇರೇಪಿಸುವ ಉಪ್ಪಿನಂಶ ಹೆಚ್ಚೇ ಇರುವ ಅನಾರೋಗ್ಯಕರ ಕುರುಕು ತಿಂಡಿಗಳ ಬದಲು ಅವಲಕ್ಕಿಯಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸಿದರೆ ಇನ್ನೂ ಉತ್ತಮ. ನಮ್ಮ ನಿತ್ಯದ ದೈಹಿಕ ಚಟುವಟಿಕೆಗಳಿಗೆ ಕಾರ್ಬೋಹೈಡ್ರೇಟುಗಳು ತುಂಬಾ ಅಗತ್ಯವಾಗಿದೆ. ಅಲ್ಲದೇ ಅವಲಕ್ಕಿಯಲ್ಲಿ ಕರಗದ ನಾರು ಸಹಾ ಸಮೃದ್ದವಾಗಿದ್ದು ಇನ್ನಷ್ಟು ಆರೋಗ್ಯಕರ ಆಹಾರವಾಗಿಸಿದೆ.

ಪೋಷಕಾಂಶಗಳಿಂದ ಸಮೃದ್ಧವಾಗಿದೆ

ಪೋಷಕಾಂಶಗಳಿಂದ ಸಮೃದ್ಧವಾಗಿದೆ

ಅವಲಕ್ಕಿಯ ಖಾದ್ಯದೊಂದಿಗೆ ಕೊಂಚ ತರಕಾರಿಯನ್ನು ಸೇರಿಸಿ ಸೇವಿಸಿದರೆ ಅವಲಕ್ಕಿಯ ಪೋಷಕಾಂಶಗಳಿಗೆ ಹೆಚ್ಚಿನ ಬಲ ಸಿಗುತ್ತದೆ. ಇದರೊಂದಿಗೆ ಶೇಂಗಾಬೀಜ ಅಥವಾ ಮೊಳಕೆಬರಿಸಿದ ಕಾಳುಗಳನ್ನು ಸೇರಿಸಿ ತಯಾರಿಸಿದ ಖಾದ್ಯ ರುಚಿಕರ ಮಾತ್ರವಲ್ಲ, ಪ್ರೋಟೀನ್ ಭರಿತವೂ ಆಗಿರುತ್ತದೆ. ಪ್ರೋಟೀನ್ ಗಾಗಿ ಕೆಲವರು ಅವಲಕ್ಕಿಯಲ್ಲಿ ಮೊಟ್ಟೆಯನ್ನು ಸಹಾ ಸೇರಿಸುತ್ತಾರೆ. ಆಯ್ಕೆ ಯಾವುದೇ ಇರಲಿ, ಎಲ್ಲಾ ಹೆಚ್ಚುವರಿ ಆಹಾರಗಳೊಂದಿಗೆ ಹೊಂದಿಕೊಂಡು ಹೋಗುವ ಕಾರಣದಿಂದಾಗಿಯೇ ಅವಲಕ್ಕಿಯನ್ನು ಮಕ್ಕಳೂ ಇಷ್ಟಪಡುತ್ತಾರೆ ಹಾಗೂ ಇವರ ಮಧ್ಯಾಹ್ನದ ಊಟದ ಡಬ್ಬಿಯಲ್ಲಿ ಹಾಕಿದರೆ ಎಂದಿಗೂ ಖಾಲಿಯಾಗದೇ ಈ ಡಬ್ಬಿ ಹಿಂದಿರುಗುವುದಿಲ್ಲ.

ಗ್ಲುಟೆನ್ ಮಟ್ಟ ಅತಿ ಕಡಿಮೆ

ಗ್ಲುಟೆನ್ ಮಟ್ಟ ಅತಿ ಕಡಿಮೆ

ಗೋಧಿ ಮತ್ತು ಇತರ ಉತ್ಪನ್ನಗಳಲ್ಲಿ ಗೋಂದಿನಂತಹ ಅಂಶವಿರಲು ಇದರಲ್ಲಿರುವ ಗ್ಲುಟೆನ್ ಕಾರಣ. ಕೆಲವು ವ್ಯಕ್ತಿಗಳು ಗ್ಲುಟೆನ್ ಅಂಶವನ್ನು ಜೀರ್ಣಿಸಿಕೊಳ್ಳಲು ಅಸಮರ್ಥರಾಗಿರುತ್ತಾರೆ (gluten intolerent). ಈ ವ್ಯಕ್ತಿಗಳಿಗೆ ಗ್ಲುಟೆನ್ ಅಂಶ ಇಲ್ಲವೆನ್ನುವಷ್ಟು ಕಡಿಮೆ ಇರುವ ಅವಲಕ್ಕಿಯನ್ನು ಸೇವಿಸಲು ವೈದ್ಯರೂ ಸಲಹೆ ಮಾಡುತ್ತಾರೆ. ಅವಲಕ್ಕಿಯಲ್ಲಿ ಸಕ್ಕರೆಯ ಅಂಶ ತೀರಾ ಕಡಿಮೆ ಇರುವ ಕಾರಣದಿಂದಾಗಿ ಮಧುಮೇಹಿಗಳೂ ಯಾವುದೇ ಅಳುಕಿಲ್ಲದೇ ಅವಲಕ್ಕಿಯನ್ನು ಸೇವಿಸಬಹುದು.

ವಿಟಮಿನ್ B1

ವಿಟಮಿನ್ B1

ಅವಲಕ್ಕಿಯಲ್ಲಿ ವಿಟಮಿನ್ B1 ಉತ್ತಮ ಪ್ರಮಾಣದಲ್ಲಿದ್ದು ಇದು ಮಧುಮೇಹಿಗಳಿಗೆ ಅತ್ಯಂತ ಸೂಕ್ತವಾದ ಉಪಾಹಾರವಾಗಿಸಲು ಕಾರಣವಾಗಿದೆ. ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸಲು ಈ ವಿಟಮಿನ್ ನೆರವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಆರೋಗ್ಯ ತಜ್ಞರ ಪ್ರಕಾರ ತೂಕ ಇಳಿಸಲು ಯತ್ನಿಸುವ ವ್ಯಕ್ತಿಗಳಿಗೆ ಈ ಆಹಾರ ಅತ್ಯಂತ ಸೂಕ್ತವಾಗಿದೆ. ಉಪಾಹಾರದಲ್ಲಿ ಅವಲಕ್ಕಿಯನ್ನು ಸೇವಿಸಿದ ಬಳಿಕ ಮಧ್ಯಾಹ್ನದ ಊಟದ ಸಮಯದವರೆಗೂ ಹೊಟ್ಟೆ ತುಂಬಿದಂತಿದ್ದು ಈ ಅವಧಿಯಲ್ಲಿ ಯಾವುದೇ ಅನಾರೋಗ್ಯಕರ ಸಿದ್ದ ಆಹಾರವನ್ನು ತಿನ್ನದಿರಲು ಪ್ರೇರೇಪಿಸದ ಮೂಲಕ ತೂಕ ಹೆಚ್ಚದಂತೆ ನೋಡಿಕೊಳ್ಳುತ್ತದೆ.

ಪ್ರೋಟೀನ್ ಯುಕ್ತವಾಗಿದೆ

ಪ್ರೋಟೀನ್ ಯುಕ್ತವಾಗಿದೆ

ಅವಲಕ್ಕಿಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಪ್ರಮಾಣವಿದೆ. ನಮ್ಮ ಸ್ನಾಯುಗಳ ಬೆಳವಣಿಗೆ ಅಥವಾ ಘಾಸಿಗೊಂಡ ಸ್ನಾಯುಗಳನ್ನು ರಿಪೇರಿಗೊಳಿಸಿ ಹುರಿಗಟ್ಟಿಸಲು ಪ್ರೋಟೀನುಗಳು ಅಗತ್ಯವಾಗಿದೆ. ಹಾಗಾಗಿ ವ್ಯಾಯಾಮದ ಬಳಿಕ ಕೊಂಚ ಹೊತ್ತು ವಿಶ್ರಮಿಸಿ ನಂತರ ಸೇವಿಸುವ ಆಹಾರವಾಗಿ ಅವಲಕ್ಕಿ ಸೂಕ್ತ ಆಯ್ಕೆಯಾಗಿದೆ.

ಮೂಳೆಗಳಿಗೂ ಒಳ್ಳೆಯದು

ಮೂಳೆಗಳಿಗೂ ಒಳ್ಳೆಯದು

ಅವಲಕ್ಕಿಯನ್ನು ಮೊಸರಿನೊಂದಿಗೆ ಸೇವಿಸುವ ಮೂಲಕ ನಮ್ಮ ಮೂಳೆಗಳು ಕ್ಯಾಲ್ಸಿಯಂ ಪ್ರಮಾಣವನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ತನ್ಮೂಲಕ ಮೂಳೆ ಮತ್ತು ಹಲ್ಲುಗಳು ದೃಢ ಹಾಗೂ ಆರೋಗ್ಯಕರವಾಗಿರುತ್ತವೆ.

ಕಬ್ಬಿಣಾ೦ಶದಿ೦ದ ಸ೦ಪನ್ನವಾಗಿದೆ

ಕಬ್ಬಿಣಾ೦ಶದಿ೦ದ ಸ೦ಪನ್ನವಾಗಿದೆ

ಅವಲಕ್ಕಿಯ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು. ಏಕೆ೦ದರೆ, ಇದರಲ್ಲಿ ಕಬ್ಬಿಣಾ೦ಶವು ಸಾಕಷ್ಟು ಪ್ರಮಾಣದಲ್ಲಿದೆ. ಇನ್ನೊ೦ದು ರೀತಿಯಲ್ಲಿ ಹೇಳುವುದಾದರೆ, ಪ್ರತಿದಿನವೂ ನೀವು ಗೊಜ್ಜವಲಕ್ಕಿ (ಪೋಹಾ) ಯನ್ನು ಬೆಳಗಿನ ಉಪಾಹಾರದ ರೂಪದಲ್ಲಿ ಸೇವಿಸಿದ್ದೇ ಆದರೆ, ಕಬ್ಬಿಣಾ೦ಶದ ಕೊರತೆಯಿ೦ದ ನಿಮ್ಮ ಶರೀರವನ್ನು ನೀವು ದೂರವಿರಿಸಿಕೊಳ್ಳಬಹುದು. ಗೊಜ್ಜವಲಕ್ಕಿಯನ್ನು ಗರ್ಭಿಣಿಯರು ಹಾಗೂ ಮಕ್ಕಳೂ ಕೂಡ ಸೇವಿಸಬಹುದು. ಕಬ್ಬಿಣಾ೦ಶವು ಶರೀರದ ಪಾಲಿಗೆ ಒ೦ದು ಪ್ರಮುಖವಾದ ಖನಿಜವಾಗಿದೆ. ಏಕೆ೦ದರೆ, ಕಬ್ಬಿಣದ ಅ೦ಶವು ರಕ್ತದ ಹಿಮೋಗ್ಲೋಬಿನ್ ಮಟ್ಟಗಳನ್ನು ಸಹಜ ಸ್ಥಿತಿಯಲ್ಲಿರಿಸಲು ನೆರವಾಗುತ್ತದೆ. ಅವಲಕ್ಕಿಯ ಪೋಷಕಾ೦ಶ ಸ೦ಬ೦ಧೀ ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದಾಗಿರುತ್ತದೆ.

English summary

Reasons Why Poha Can Be Your Healthiest Choice For Breakfast

Do you know about the health benefits of poha? Well, poha is a breakfast dish made of beaten rice. Considering it as your breakfast option is beneficial for two reasons. This gives it a good taste and also packs it with some additional health benefits offered by lemons. Now, let us take a deeper look
X
Desktop Bottom Promotion