For Quick Alerts
ALLOW NOTIFICATIONS  
For Daily Alerts

ಸೆಕ್ಸ್ ವೇಳೆ ಪುರುಷರಿಗೆ ಎದುರಾಗುವ ನೋವಿಗೆ ಕಾರಣಗಳೇನು?

By Arshad
|

ದಂಪತಿಗಳ ನಡುವಣ ಲೈಂಗಿಕಕ್ರಿಯೆಯಲ್ಲಿ ನೋವು ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಎದುರಾಗುತ್ತದೆ. ಈ ನೋವು ಲೈಂಗಿಕ ಕ್ರಿಯೆಯನ್ನು ಸಹಜವಾಗಿ ಪೂರ್ಣಗೊಳಿಸಲು ಸಾಧ್ಯವಾಗದೇ ಮಾನಸಿಕ ತೃಪ್ತಿಯೂ ಸಿಗದೇ ಹೋಗುತ್ತದೆ. ಲೈಂಗಿಕ ಅತೃಪ್ತಿ ಹಲವಾರು ಮಾನಸಿಕ ತೊಂದರೆಗಳಿಗೆ ಮೂಲವಾಗಿದ್ದು ಸಂಬಂಧಗಳ ನಡುವೆ ಹುಳಿಯನ್ನೂ ಹಿಂಡಬಹುದು! ಮಾನಸಿಕ ತೊಂದರೆಗಳಲ್ಲಿ ಲೈಂಗಿಕ ಪ್ರವೇಶದ ಬಗ್ಗೆ ಭಯ, ಆತ್ಮವಿಶ್ವಾಸ ಕಳೆದುಕೊಳ್ಳುವುದು, ಜೀವನದಲ್ಲಿ ಬೇಸರ ಮೊದಲಾದವು ಎದುರಾದರೆ ದೈಹಿಕ ತೊಂದರೆಗಳಲ್ಲಿ ನಪುಂಸಕತೆ ಹಾಗೂ ಆರೋಗ್ಯದ ಬಗ್ಗೆ ತಾಳುವ ನಿರಾಸಕ್ತಿ ಮತ್ತು ಅಜಾಗರೂಕತೆ ಮೊದಲಾದವು ಮುಖ್ಯವಾಗಿವೆ.

ಒಂದು ವೇಳೆ ಪುರುಷರಿಗೆ ನೋವು ಎದುರಾಗುತ್ತಿದ್ದರೆ ಈ ಬಗ್ಗೆ ಮೌನವಾಗಿರುವುದು ಸಲ್ಲದು. ಈ ನೋವಿಗೆ ಕೆಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದ ಕೆಲವುಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಇವುಗಳಲ್ಲಿ ಒಂದಾದರೂ ನಿಮಗೆ ಅನುಭವವಾಗಿದ್ದಲ್ಲಿ ವೈದ್ಯರಲ್ಲಿ ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ತಿಳಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ದಾಂಪತ್ಯದ ಸುಖವನ್ನು ಮತ್ತೊಮ್ಮೆ ಪಡೆಯಲು ಸಾಧ್ಯ.

ಲೈಂಗಿಕವಾಗಿ ಹರಡುವ ರೋಗಗಳು (Sexually Transmitted Infections)

ಲೈಂಗಿಕವಾಗಿ ಹರಡುವ ರೋಗಗಳು (Sexually Transmitted Infections)

ಮೇಹರೋಗ, ಹರ್ಪಿಸ್ ಅಥವಾ ಗುಣಪಡಿಸಲಾಗದ ಗೊನೋರಿಯಾ ಮೊದಲಾದ ಲೈಂಗಿಕವಾಗಿ ಹರಡುವ ರೋಗಳಿಂದ ಪುರುಷರಿಗೆ ಲೈಂಗಿಕ ಕ್ರಿಯೆಯಲ್ಲಿ ನೋವು ಎದುರಾಗುತ್ತದೆ. ಒಂದು ವೇಳೆ ನೋವು ಪುರುಷರಿಗೆ ಕಾಣಿಸಿಕೊಂಡಿದ್ದು ಇದಕ್ಕೆ ಲೈಂಗಿಕ ರೋಗವೇ ಕಾರಣವಾಗಿರಬಹುದು ಎಂಬ ಅನುಮಾನ ಎದುರಾದರೆ ತಕ್ಷಣ ವೈದ್ಯರಲ್ಲಿ ಸೂಕ್ತ ಪರೀಕ್ಷೆಗೊಳಪಡಬೇಕು. ಯಾವುದೇ ರೋಗದ ಲಕ್ಷಣ ಈ ನೋವಿನ ರೂಪದಲ್ಲಿ ವ್ಯಕ್ತವಾಗುತ್ತಿದ್ದಿರಬಹುದು ಹಾಗಾಗಿ ಯಾವುದೇ ರೋಗದ ಇರುವಿಕೆಯನ್ನು ಕಂಡುಕೊಳ್ಳಲು ಈ ಪರೀಕ್ಷೆ ಅನಿವಾರ್ಯವೂ ಆಗಿದೆ. ನಿಮಗೆ ಯಾವ ಸೋಂಕು ಉಂಟಾಗಿದೆ ಎಂದು ಎಷ್ಟು ಬೇಗನೇ ಕಂಡುಕೊಳ್ಳಲು ಸಾಧ್ಯವೋ ಅಷ್ಟೂ ಬೇಗನೇ ಚಿಕಿತ್ಸೆಯನ್ನೂ ಪ್ರಾರಂಭಿಸಿ ರೋಗ ಉಲ್ಬಣಗೊಳ್ಳುವುದರಿಂದ ತಡೆಯಬಹುದು.

ಮುಂದೊಗಲಿನ ತೊಂದರೆಗಳು

ಮುಂದೊಗಲಿನ ತೊಂದರೆಗಳು

ಒಂದು ವೇಳೆ ಶಿಶ್ನದ ಮುಂದೊಗಲು (phimosis) ಹಿಂದೆ ಸರಿಯಲು ತೀರಾ ಬಿಗಿ ಎನಿಸಿದರೆ ಅಥವಾ ಹರಿದಿದ್ದರೆ, ಘರ್ಷಣೆ ಅಥವಾ ಉರಿಯೂತ ಮೊದಲಾದವು ಎದುರಾಗಿದ್ದರೆ ಇವೆಲ್ಲವೂ ಅಪಾರ ನೋವಿಗೆ ಕಾರಣವಾಗುತ್ತವೆ. ಈ ತೊಂದರೆಗಳನ್ನು ತಜ್ಞ ವೈದ್ಯರು ಸ್ವತಃ ಪರಿಶೀಲಿಸಿಯೇ ಸೂಕ್ತ ಚಿಕಿತ್ಸಾಕ್ರಮಗಳನ್ನು ಕೈಗೊಳ್ಳುತ್ತಾರೆ. ಹಾಗಾಗಿ ತಾವಾಗಿ ಯಾವುದೇ ಕ್ರಮಕ್ಕೆ ಮುಂದಾಗದೇ ತಕ್ಷಣ ವೈದ್ಯರ ಬಳಿ ಹೋಗುವುದು ಅನಿವಾರ್ಯ.

ಶಿಶ್ನದ ಆಕಾರ-ಗಾತ್ರದಲ್ಲಿ ಬದಲಾವಣೆ

ಶಿಶ್ನದ ಆಕಾರ-ಗಾತ್ರದಲ್ಲಿ ಬದಲಾವಣೆ

hypospadias ಅಥವಾ ಶಿಶ್ನದ ತುದಿಯಲ್ಲಿರಬೇಕಾದ ನಾಳದ ತುದಿ ಬುಡದಲ್ಲಿರುವುದು, ಹಳೆಯ ಗಾಯದ ಕಾರಣ ದೊರಗಾಗಿರುವ ಚರ್ಮ ಅಥವಾ ಯಾವುದಾದರೂ ಸೊಂಕು ಸಹಾ ಸಂಭೋಗಕ್ರಿಯೆಯನ್ನು ನೋವಿನಿಂದ ಕೂಡಿರುವಂತೆ ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಗಡ್ಡೆ ಬೆಳವಣಿಗೆಯ ಹಂತದಲ್ಲಿದ್ದರೆ, ಮೂತ್ರನಾಳದ ಕಲ್ಲುಗಳು ಸಹಾ ಈ ನೋವಿಗೆ ಕಾರಣವಾಗಿರಬಹುದು. ಒಂದು ವೇಳೆ ಮೂತ್ರನಾಳದಲ್ಲಿ ಕಲ್ಲು ಇದ್ದರೆ ಮೂತ್ರಶಾಸ್ತ್ರಜ್ಞರು ಈ ತೊಂದರೆಗೆ ಸೂಕ್ತ ಚಿಕಿತ್ಸೆ ಒದಗಿಸಬಲ್ಲರು. ಇತರ ತೊಂದರೆಗಳಿಗೆ ತಜ್ಞ ವೈದ್ಯರು ಸೂಕ್ತ ಪರೀಕ್ಷೆಗಳ ಬಳಿಕವೇ ಅಗತ್ಯ ಚಿಕಿತ್ಸೆಯ ನಿರ್ಧಾರವನ್ನು ಕೈಗೊಳ್ಳುವರು.

ಇಳಿಯದ ನಿಮಿರುತನ (Priapism)

ಇಳಿಯದ ನಿಮಿರುತನ (Priapism)

ಅಪರೂಪದ ಸಂದರ್ಭಗಳಲ್ಲಿ ಕೆಲವು ಪುರುಷರಿಗೆ ಲೈಂಗಿಕ ಪ್ರಚೋದನೆಯ ಹೊರತಾಗಿಯೂ ಶಿಶ್ನ ನಿಮಿರುತನದ ಸ್ಥಿತಿಯಲ್ಲಿಯೇ ಇದ್ದು ನೋವಿನಿಂದ ಕೂಡಿರುತ್ತದೆ.

ಅಲರ್ಜಿ

ಅಲರ್ಜಿ

ಕೆಲವು ಪುರುಷರಿಗೆ ಕೆಲವು ರಾಸಾಯನಿಕಗಳು ಅಲರ್ಜಿಕಾರಕವಾಗಿರುತ್ತವೆ. ಯೋನಿಯ ದ್ರವ್ಯತೆಗೆ ನೆರವಾಗುವ ರಾಸಾಯನಿಕಗಳು, ಜಾರುಕವಾಗಿ ಬಳಸಲ್ಪಡುವ ದ್ರವ ಅಥವಾ ಗರ್ಭನಿರೋಧಕ ಕ್ರಮಗಳಲ್ಲಿ ಬಳಸಲಾಗುವ ರಾಸಾಯನಿಕಗಳಲ್ಲಿ ಯಾವುದೋ ಒಂದು ಅಲರ್ಜಿ ತರಿಸುತ್ತದೆ. ಕೆಲವರಿಗಂತೂ ಕಾಂಡೋಂನ ಲ್ಯಾಟೆಕ್ಸ್ ರಬ್ಬರ್ ಸಹಾ ಅಲರ್ಜಿಕಾರಕವಾಗಿರುತ್ತದೆ. ತಜ್ಞ ವೈದ್ಯರು ಈ ಅಲರ್ಜಿ ಯಾವ ರಾಸಾಯನಿಕ ಅಥವಾ ಲ್ಯಾಟೆಕ್ಸ್ ನಿಂದ ಉಂಟಾಗಿದೆ ಎಂಬುದನ್ನು ಸೂಕ್ತ ಪರೀಕ್ಷೆಯ ಮೂಲಕ ಕಂಡುಕೊಳ್ಳಬಲ್ಲರು. ಅಗತ್ಯಬಿದ್ದರೆ ವೈದ್ಯರು ಮಿಲನಕ್ರಿಯೆಯ ತಕ್ಷಣವೇ ನಡೆಸುವ post-coital test ಎಂಬ ಪರೀಕ್ಷೆಯನ್ನೂ ನಡೆಸಬಹುದು. ಒಂದು ವೇಳೆ ಅಲರ್ಜಿ ನಿಮ್ಮ ಸಂಗಾತಿಯಲ್ಲಿರುವ ಯಾವುದೋ ಒಂದು ಅಂಶದಿಂದ ಎಂದು ಕಂಡುಬಂದರೆ ಇದನ್ನು ಸರಿಪಡಿಸಲು ಅಲರ್ಜಿ ಪ್ರಕ್ರಿಯೆಯನ್ನು ವಿರುದ್ದದಿಕ್ಕಿಗೆ ತಿರುಗಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಒಂದು ವೇಳೆ ಈ ಅಲರ್ಜಿ ಹೊಂದಿರುವ ಮಹಿಳೆಯನ್ನು ಜೀವನಸಂಗಾತಿಯಾಗುವ ಬಗ್ಗೆ ಚಿಂತಿಸುತ್ತಿದ್ದರೆ ಈ ಅಂಶವನ್ನೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಅತಿಹೆಚ್ಚಿನ ಸಂವೇದನೆ (Hypersensitivity)

ಅತಿಹೆಚ್ಚಿನ ಸಂವೇದನೆ (Hypersensitivity)

ಒಂದು ವೇಳೆ ಸಮಾಗಮದ ಪರಾಕಾಷ್ಠೆ ಹಾಗೂ ಸ್ಖಲನದ ಬಳಿಕ ಪುರುಷನ ಶಿಶ್ನ ಅತಿಯೇ ಎನಿಸುವಷ್ಟು ಸಂವೇದನೆ ಹೊಂದಿದ್ದರೆ ಮುಂದಿನ ಸಮಾಗಮದಲ್ಲಿ ನೋವು ಎದುರಾಗುತ್ತದೆ. ಅಂದರೆ ಸಂಗಾತಿಯೊಂದಿಗೆ ಒಂದು ದಿನದಲ್ಲಿ ಕೂಡುವ ಸಂಖ್ಯೆಗೆ ಮಿತಿ ಹೇರಬೇಕಾಗುತ್ತದೆ. ನೋವು ಹೆಚ್ಚೇ ಇದ್ದರೆ ಸಂಭೋಗದ ಹೊರತಾಗಿ ಇತರ ಕ್ರಮಗಳಿಂದ ಸಂಗಾತಿಯನ್ನು ಸುಖಪಡಿಸುವ ವಿಧಾನಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ.

ನೋವು ಎದುರಾದರೆ ಏನು ಮಾಡಬೇಕು?

ನೋವು ಎದುರಾದರೆ ಏನು ಮಾಡಬೇಕು?

ಒಂದು ವೇಳೆ ಸಂಭೋಗದ ಸಮಯದಲ್ಲಿ ನೋವು ಎದುರಾದರೆ ಕೊಂಚ ತಾಳ್ಮೆ ವಹಿಸಿ ಈ ನೋವನ್ನು ಉಲ್ಬಣಗೊಳ್ಳಲು ಬಿಡದೇ ಆದಷ್ಟೂ ಬೇಗ ವೈದ್ಯರಲ್ಲಿ ಪರೀಕ್ಷೆಗೊಳಪಡಬೇಕು. ಎಲ್ಲಿಯವರೆಗೆ ಸೂಕ್ತ ಚಿಕಿತ್ಸೆ ಫಲಕಾರಿಯಾಗಿ ವೈದ್ಯರು ಮುಂದುವರೆಯಲು ಸೂಚಿಸುವುದಿಲ್ಲವೋ ಅಲ್ಲಿಯವರೆಗೆ ಸಂಭೋಗದಿಂದ ರಜೆ ಪಡೆಯುವುದೇ ಉತ್ತಮ. ಒಂದು ವೇಳೆ ಈ ನೋವು ಯಾವುದೋ ಸೋಂಕಿನ ಕಾರಣದಿಂದ ಉಂಟಾಗಿದ್ದರೆ ಈ ಸೋಂಕನ್ನು ಸಂಗಾತಿಯೂ ಹರಡುವ ಸಾಧ್ಯತೆಗಳಿವೆ.

ವೈದ್ಯರಲ್ಲಿ ತೋರಿಸುವುದು ಅಗತ್ಯ

ವೈದ್ಯರಲ್ಲಿ ತೋರಿಸುವುದು ಅಗತ್ಯ

ಸಾಮಾನ್ಯವಾಗಿ ಯಾವುದೇ ಲೈಂಗಿಕ ತೊಂದರೆಯನ್ನು ಪುರುಷರು ಸುಲಭವಾಗಿ ವೈದ್ಯರ ಬಳಿ ಹೇಳಿಕೊಳ್ಳುವುದಿಲ್ಲ. ಮುಜುಗರ ಎನಿಸಿದರೂ ಸರಿ, ವೈದ್ಯರಲ್ಲಿ ಎಲ್ಲಾ ವಿವರಗಳನ್ನು ಹೇಳುವುದು ಅಗತ್ಯವೂ ಅನಿವಾರ್ಯವೂ ಆಗಿದೆ. ನೆನಪಿರಲಿ, ತಜ್ಞ ವೈದ್ಯರು ಈ ಎಲ್ಲಾ ವಿವರಗಳನ್ನು ಹೊಂದಿರುತ್ತಾರೆ. ಒಂದು ವೇಳೆ ನಿಮಗೆ ಈ ವೈದ್ಯರಲ್ಲಿ ಭರವಸೆ ಇಲ್ಲದೇ ಇದ್ದರೆ ನೀವು ನಂಬಬಹುದಾದ ಬೇರೊಬ್ಬ ವೈದ್ಯರಲ್ಲಿ ತೋರಿಸುವುದು ಅಗತ್ಯ. ಯಾವುದೇ ಕಾರಣಕ್ಕೂ ವೈದ್ಯರಲ್ಲಿ ಈ ಸೂಕ್ಷ್ಮ ವಿಷಯವನ್ನು ಚರ್ಚಿಸದೇ ಇರಬಾರದು.

English summary

Reasons Men Have Pain During Sexual Intercourse

Pain during sexual intercourse isn't a problem limited to women, as many men have pain during sex as well. Experiencing this problem may not only affect sexual performance but sexual pleasure also. It can even have lasting psychological effects, such as fear of penetration, leading to impotence. Not surprisingly, equating pain with intercourse can put a strain on relationships.
X
Desktop Bottom Promotion