For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಒಂದೆರಡು-ನೆನೆಸಿಟ್ಟ ಬಾದಾಮಿ ತಿನ್ನಿ

|

ಬೀಜಗಳಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇರುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಒಂದೊಂದು ಬೀಜಗಳಲ್ಲಿ ಬೇರೆ ಬೇರೆ ರೀತಿಯ ಪೋಷಕಾಂಶಗಳು ಇವೆ. ಇವುಗಳ ಸೇವನೆಯಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬಾದಾಮಿಯಲ್ಲೂ ಹಲವಾರು ರೀತಿಯ ಪೋಷಕಾಂಶಗಳು ನಮಗೆ ಸಿಗುವುದು. ಇಂತಹ ಬಾದಾಮಿಯನ್ನು ನೆನೆಸಿಟ್ಟುಕೊಂಡು ತಿಂದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು ಈ ಲಾಭಗಳು ಯಾವುದು ಎಂದು ಈ ಲೇಖನದಲ್ಲಿ ನಾವು ತಿಳಿದುಕೊಳ್ಳುವ.

ನೆನಸಿಟ್ಟ ಬಾದಾಮಿಯೆಂದರೇನು?

ನೆನಸಿಟ್ಟ ಬಾದಾಮಿಯೆಂದರೇನು?

ಸಾಮಾನ್ಯವಾಗಿರುವಂತಹ ಬಾದಾಮಿಯನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಟ್ಟರೆ ಇದನ್ನು ನೆನೆಸಿರುವಂತಹ ಬಾದಾಮಿ ಎಂದು ಕರೆಯಲಾಗುವುದು. ಹಸಿಯಾಗಿಯೇ ತಿನ್ನುವ ಬದಲು ಇದನ್ನು ನೆನೆಸಿಟ್ಟು ತಿನ್ನುವುದು. ಬಾದಾಮಿಯನ್ನು ನೆನೆಸಿಟ್ಟುಕೊಂಡು ತಿಂದರೆ ಇದರ ಸಿಪ್ಪೆಯಲ್ಲಿ ಇರುವಂತಹ ಅದರ ಪದರ ಮತ್ತು ಆಮ್ಲವನ್ನು ಕಡಿಮೆ ಮಾಡುವುದು. ಇದರಿಂದ ದೇಹಕ್ಕೆ ಬೇಕಾಗಿರುವಂತಹ ಹೆಚ್ಚಿನ ಪೋಷಕಾಂಶವು ಸಿಗುವುದು. ನೆನೆಸಿಟ್ಟ ಬಾದಾಮಿಯಿಂದ ದೇಹವು ಅತೀ ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳಬಹುದು. ಬಾದಾಮಿಯು ಹೀಗೆ ತಿಂದರೆ ಆರೋಗ್ಯಕಾರಿ. ಆದರೆ ನೆನೆಸಿಟ್ಟು ತಿಂದರೆ ಆಗ ಅದರಲ್ಲಿರುವಂತಹ ವಿಟಮಿನ್ ಗಳು ಹಾಗೂ ಖನಿಜಾಂಶಗಳು ದೇಹಕ್ಕೆ ಸಿಗುವುದು ಮಾತ್ರವಲ್ಲದೆ, ಕಿಣ್ವಗಳ ಚಟುವಟಿಕೆಯನ್ನು ಉತ್ತೇಜನಗೊಳಿಸಿ ಜೀರ್ಣಕ್ರಿಯೆ ಸುಧಾರಣೆ ಮಾಡುವುದು. ಇದನ್ನು ವಿವಿಧ ರೀತಿಯ ಖಾದ್ಯಗಳಿಗೆ ಬಳಸಿಕೊಂಡು ತಿನ್ನಲಾಗುವುದು.

ಬಾದಾಮಿ ನೆನೆಸಿಡುವುದು ಹೇಗೆ?

ಬಾದಾಮಿ ನೆನೆಸಿಡುವುದು ಹೇಗೆ?

ಹಸಿ ಬಾದಾಮಿ ಬಿಟ್ಟು ನೆನೆಸಿಟ್ಟ ಬಾದಾಮಿ ತಿನ್ನಬೇಕಾದರೆ ನೀವು ಹೆಚ್ಚು ಚಿಂತಿಸಬೇಕಿಲ್ಲ. ಯಾಕೆಂದರೆ ಅತ್ಯಂತ ಸರಳವಾಗಿ ಇದನ್ನು ನೀವು ತಿನ್ನಬಹುದು. ಇದಕ್ಕಾಗಿ ಎರಡು ಕಪ್ ಬಾದಾಮಿಯನ್ನು ಒಂದು ಪಿಂಗಾಣಿ ನೀರಿಗೆ ಹಾಕಿ ಮತ್ತು ಇದಕ್ಕೆ ಬಿಸಿ ನೀರು ಹಾಕಿ. 12 ಗಂಟೆ ಬಿಟ್ಟು ನೀರನ್ನು ಸೋಸಿಕೊಂಡ ಬಳಿಕ ಇದಕ್ಕೆ ಎರಡು ಚಮಚ ಉಪ್ಪು ಹಾಕಿ. ಇದರ ಬಳಿಕ ಮತ್ತೆ ಬಿಸಿ ನೀರು ಹಾಕಿಕೊಳ್ಳಿ ಮತ್ತು 12 ಗಂಟೆ ಕಾಲ ಹಾಗೆ ಇರಲಿ. 24 ಗಂಟೆ ಬಳಿಕ ನೀವು ಇದರ ಸಿಪ್ಪೆ ತೆಗೆಯಬಹುದು. ಇಂತಹ ಬಾದಾಮಿಯನ್ನು ನೀವು ಒಂದು ವಾರ ತನಕ ಹಾಗೆ ಇಟ್ಟು ತಿನ್ನಬಹುದು. ಇದರಿಂದ ಯಾವುದೇ ರೀತಿಯ ಪೋಷಕಾಂಶ ನಾಶವಾಗದು.

ನೆನೆಸಿಟ್ಟ ಬಾದಾಮಿ ಲಾಭಗಳು

ನೆನೆಸಿಟ್ಟ ಬಾದಾಮಿ ಲಾಭಗಳು

ವಿಟಮಿನ್ ಇ, ಆಹಾರದ ನಾರಿನಾಂಶ ಮತ್ತು ಫಾಲಿಕ್ ಆಮ್ಲವನ್ನು ಹೊಂದಿರುವಂತಹ ನೆನೆಸಿಟ್ಟಿರುವ ಬಾದಾಮಿಯು ಜೀರ್ಣಕ್ರಿಯೆ, ಮಧುಮೇಹ, ಚರ್ಮದ ಕಾಂತಿ ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ತುಂಬಾ ಪರಿಣಾಮಕಾರಿ.

ಚರ್ಮ ಮತ್ತು ಕೂದಲು

ಚರ್ಮ ಮತ್ತು ಕೂದಲು

ವಿಟಮಿನ್ ಒಳಗೊಂಡಿರುವಂತಹ ಬಾದಾಮಿಯು ಕೂದಲು ಮತ್ತು ಚರ್ಮದ ಕಾಂತಿ ವೃದ್ಧಿಸುವುದು. ಹಸಿ ಬಾದಾಮಿಗಿಂತ ನೆನೆಸಿಟ್ಟ ಬಾದಾಮಿಯಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಇ ಲಭ್ಯವಾಗುವುದು ಮತ್ತು ಇದು ಆ್ಯಂಟಿಆಕ್ಸಿಡೆಂಟ್ ನಂತೆ ಕೆಲಸ ಮಾಡಿ ಉರಿಯೂತ ಕಡಿಮೆ ಮಾಡಿ, ಕೂದಲು ಮತ್ತು ಚರ್ಮಕ್ಕೆ ಆಗುವ ಹಾನಿ ತಪ್ಪಿಸುವುದು.

 ಗರ್ಭಧಾರಣೆ

ಗರ್ಭಧಾರಣೆ

ನೆನೆಸಿಟ್ಟ ಬಾದಾಮಿಯಲ್ಲಿ ಹೆಚ್ಚಿನ ಮಟ್ಟದ ಫಾಲಿಕ್ ಆಮ್ಲವಿರುವ ಕಾರಣದಿಂದಾಗಿ ಫಾಲಟೆ ಕೊರತೆಯಿಂದ ಉಂಟಾಗುವಂತಹ ನರಕೊಳವೆ ದೋಷ ತಡೆಯುವುದು.

Most Read:ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಏಕೆ ಇಷ್ಟೊಂದು ಮಹತ್ವ?

ಜೀರ್ಣಕ್ರಿಯೆ

ಜೀರ್ಣಕ್ರಿಯೆ

ಆಹಾರದ ನಾರಿನಾಂಶವು ಹೆಚ್ಚಾಗಿರುವ ಕಾರಣದಿಂದಾಗಿ ನೆನೆಸಿಟ್ಟ ಬಾದಾಮಿ ತಿಂದರೆ ಆಗ ಮಲದ ಚಲನೆಯು ನಿಯಂತ್ರಿಸಲ್ಪಟ್ಟು, ಮಲಬದ್ಧತೆ, ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಸೆಳೆತ ಕಡಿಮೆ ಮಾಡುವುದು.

ತೂಕ ಇಳಿಸಲು

ತೂಕ ಇಳಿಸಲು

ಹಸಿ ಬಾದಾಮಿಗಿಂತ ನೆನೆಸಿಟ್ಟ ಬಾದಾಮಿಯಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇದೆ ಎಂದು ಸೈನ್ಸ್ ಜರ್ನಲ್ ಆಫ್ ಅರ್ಗಿಕಲ್ಚರ್ ರಿಸರ್ಚ್ ಆ್ಯಂಡ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರಕಟವಾಗಿರುವಂತಹವ ಅಧ್ಯಯನಗಳು ಹೇಳಿವೆ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದೆ. ಇದರಲ್ಲಿ ಇರುವಂತಹ ನಾರಿನಾಂಶವು ಜೀರ್ಣ ಕ್ರಿಯೆಗೆ ಸಹಕಾರಿಯಾಗುವುದು ಮಾತ್ರವಲ್ಲದೆ, ಹಸಿವಿನ ಭಾವನೆ ಕಡಿಮೆ ಮಾಡುವುದು. ಇದರಿಂದ ಕಡಿಮೆ ಕ್ಯಾಲರಿ ತಿಂದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ತುಂಬಾ ಸಹಕಾರಿಯಾಗಲಿದೆ.

 ದೀರ್ಘ ಕಾಯಿಲೆಗಳು

ದೀರ್ಘ ಕಾಯಿಲೆಗಳು

ಬಾದಾಮಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸಿ, ದೀರ್ಘ ಕಾಯಿಲೆಗಳಾಗಿರುವ ಕ್ಯಾನ್ಸರ್, ಹೃದಯದ ಕಾಯಿಲೆ ಮತ್ತು ಸಂಧಿವಾತದ ಅಪಾಯ ತಪ್ಪಿಸುವುದು. ನೆನೆಸಿಟ್ಟ ಬಾದಾಮಿಯಲ್ಲಿ ವಿಟಮಿನ್ ಇ ಹೆಚ್ಚಾಗಿದ್ದು, ಇದು ನೆನಪಿಗೆ ಸಂಬಂಧಿಸಿದ ಕಾಯಿಲೆಗಳನ್ನು ನಿವಾರಣೆ ಮಾಡುವುದು ಎಂದು ಪಾಕಿಸ್ತಾನ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಚೇರ್ ಮೆನ್ ಡಾ. ಅನ್ವರ್ ಉಲ್ ಹಸನ್ ಗಿಲಾನಿ ಅವರು ಹೇಳಿದ್ದಾರೆ. ಇದರ ಪ್ರಕಾರ ನೆನೆಸಿಟ್ಟ ಬಾದಾಮಿಯಲ್ಲಿ ಸಿಗುವಂತಹ ವಿಟಮಿನ್ ಇ ಯು ನೆನಪಿಗೆ ಸಂಬಂಧಿಸಿದ ಕೆಲವೊಂದು ಕಾಯಿಲೆಗಳನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಫಲಿತಾಂಶ ಖಚಿತ ಎನ್ನಲಾಗಿದೆ.

ಹೃದಯದ ಆರೋಗ್ಯ

ಹೃದಯದ ಆರೋಗ್ಯ

ಬಾದಾಮಿಯಲ್ಲಿ ಇರುವಂತಹ ಉನ್ನತ ಮಟ್ಟದ ಏಕಪರ್ಯಾಪ್ತ ಮತ್ತು ಬಹುಪರ್ಯಾಪ್ತ ಕೊಬ್ಬಿನಿಂದಾಗಿ ಇದು ಕೊಲೆಸ್ಟ್ರಾಲ್ ನ್ನು ಸಮತೋಲನದಲ್ಲಿಡುವುದು ಮತ್ತು ಹೃದಯಾಘಾತ, ಪಾರ್ಶ್ವವಾಯು ಮತ್ತು ಅಪಧಮನಿ ಕಾಠಿಣ್ಯದ ಸಮಸ್ಯೆ ನಿವಾರಣೆ ಮಾಡುವುದು. ಅಪಧಮನಿ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಬಾದಾಮಿಯು ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುವುದು ಎಂದು ಅಧ್ಯಯನಗಳು ತಿಳಿಸಿವೆ.

ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ

ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ

ಮಾನವನಿಗೆ ಪರಿಚಿತವಾಗಿರುವ ಸ್ಮರಣಶಕ್ತಿಯ ಸ೦ವರ್ಧಕಗಳ ಪೈಕಿ ಒ೦ದು ಯಾವುದೆ೦ದರೆ ಅದು ಬಾದಾಮಿ. ಬಾದಾಮಿ ಕಾಳುಗಳು ಕೊಬ್ಬಿನಾ೦ಶದಿ೦ದ ಸಮೃದ್ಧವಾಗಿದ್ದು, ಇವು ಬುದ್ಧಿಶಕ್ತಿಯ ಹಾಗೂ ಸ್ಮರಣಶಕ್ತಿಯ ಮಟ್ಟಗಳನ್ನು ಸುಧಾರಿಸಲು ನೆರವಾಗುತ್ತವೆ. ಸ್ಮರಣಶಕ್ತಿಯ ಮಟ್ಟವು ಗಮನಾರ್ಹವಾಗಿ ವೃದ್ಧಿಗೊಳ್ಳಬೇಕೆ೦ದಿದ್ದಲ್ಲಿ, ಪ್ರತಿದಿನ ಬೆಳಗ್ಗೆ ನಾಲ್ಕರಿ೦ದ ಆರು ನೆನೆಸಿಟ್ಟ ಬಾದಾಮಿ ಕಾಳುಗಳನ್ನು ಸೇವಿಸುವುದು ಸೂಕ್ತವಾಗಿರುತ್ತದೆ.

Most Read:ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ ಬಾದಾಮಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಮಾಣ ನೆನೆಸಿದ ಬಳಿಕ ಇನ್ನಷ್ಟು ಹೆಚ್ಚುವ ಕಾರಣ ದೇಹದಲ್ಲಿ ಕ್ಯಾನ್ಸರ್‪ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಲು ದೇಹ ಹೆಚ್ಚಿನ ಸಾಮರ್ಥ್ಯ ಪಡೆಯುತ್ತದೆ. ಇದು ಚರ್ಮದಲ್ಲಿ ನೆರಿಗೆ ಮೂಡುವುದನ್ನುತಡವಾಗಿಸಿ ವೃದ್ಧಾಪ್ಯವನ್ನೂ ತಡವಾಗಿಸುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಅಪರೂಪವಾಗಿರುವ ವಿಟಮಿನ್ B17ಎಂಬ ಪೋಷಕಾಂಶ ಬಾದಾಮಿಯಲ್ಲಿದ್ದರೂ ನೆನೆಸಿಟ್ಟ ಬಳಿಕವೇ ಲಭ್ಯವಾಗುತ್ತದೆ. ಈ ಪೋಷಕಾಂಶಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿದ್ದು ಪ್ರತಿದಿನವೂ ನಾಲ್ಕಾರು ನೆನೆಸಿಟ್ಟ ಬಾದಾಮಿಗಳನ್ನು ತಿನ್ನುವ ಮೂಲಕ ಹಲವು ಬಗೆಯ ಕ್ಯಾನ್ಸರ್‌ಗಳಿಂದ ರಕ್ಷಣೆ ಪಡೆಯಬಹುದು.

ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯ೦ತ್ರಿಸುತ್ತದೆ

ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯ೦ತ್ರಿಸುತ್ತದೆ

ಕಡಿಮೆ ಕ್ಯಾಲರಿವುಳ್ಳ ಆಹಾರದೊ೦ದಿಗೆ ನೆನೆಸಿಟ್ಟಿರುವ ಬಾದಾಮಿ ಕಾಳುಗಳನ್ನು ಸೇವಿಸಿದಲ್ಲಿ, ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅ೦ಶ, ಇನ್ಸುಲಿನ್‌ನ ಅ೦ಶ, ಹಾಗೂ ಸೋಡಿಯ೦ನ ಮಟ್ಟಗಳನ್ನು ತಗ್ಗಿಸುತ್ತವೆ ಹಾಗೂ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸ೦ಭಾವ್ಯವನ್ನು ನಿಯ೦ತ್ರಿಸಬಲ್ಲ ಮೆಗ್ನೀಷಿಯ೦ನ ಮಟ್ಟವನ್ನು ಶರೀರದಲ್ಲಿ ಹೆಚ್ಚಿಸುತ್ತವೆ.

English summary

Proven health Benefits Of Soaked Almonds

Soaked almonds are simply almonds that have been soaked overnight, rather than eaten in their raw form. By soaking the almonds, you are able to reduce the number of tannins and acids present in the skin of the nut, which can inhibit nutrient uptake by the body. [1] Essentially, soaking these nuts in water will make more of their bounty bioavailable for use by your body. Almonds are healthy enough on their own, but by soaking these nuts, you will be able to absorb more vitamins and minerals from them, as well as stimulate enzyme activity in the body that can improve digestion
X
Desktop Bottom Promotion