For Quick Alerts
ALLOW NOTIFICATIONS  
For Daily Alerts

ಸೇಬನ್ನು ಸಿಪ್ಪೆ ತೆಗೆದು ತಿನ್ನಬೇಕೇ? ಸಿಪ್ಪೆ ತೆಗೆಯದೆ ತಿನ್ನಬೇಕೇ?

By Hemanth
|

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುವ ಮಾತಿದೆ. ಸೇಬಿನಲ್ಲಿರುವಂತಹ ಪೋಷಕಾಂಶಗಳು ನಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೇಬಿನಲ್ಲಿರುವ ಕೆಲವೊಂದು ಅಂಶಗಳು ಸಣ್ಣಪುಟ್ಟ ಕಾಯಿಲೆಗಳು ಬರದಂತೆ ತಡೆಯುವುದು. ಇದರಿಂದ ದೇಹವು ತನ್ನ ಆರೋಗ್ಯ ಕಾಪಾಡಿಕೊಳ್ಳುವುದು. ಆದರೆ ಸೇಬನ್ನು ಯಾವ ರೀತಿ ತಿನ್ನಬೇಕು ಎನ್ನುವ ಬಗ್ಗೆ ಗೊಂದಲವು ಜನರಲ್ಲಿ ಈಗಲೂ ಇದೆ. ಯಾಕೆಂದರೆ ಸೇಬನ್ನು ಸಿಪ್ಪೆ ತೆಗೆದು ತಿನ್ನಬೇಕೇ ಅಥವಾ ಸಿಪ್ಪೆ ತೆಗೆಯದೇ ತಿನ್ನಬೇಕೇ ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಕೆಲವರು ಜನರು ಸೇಬಿಗೆ ಹಾಕಿರುವಂತಹ ರಾಸಾಯನಿಕ ಹಾಗೂ ಮೇಣದಿಂದಾಗಿ ಸಿಪ್ಪೆಯೊಂದಿಗೆ ಸೇಬನ್ನು ತಿನ್ನಲು ಹಿಂಜರಿಯುವರು. ಈ ಲೇಖನದಲ್ಲಿ ಸಿಪ್ಪೆ ತೆಗೆದಿರುವ ಸೇಬು ಒಳ್ಳೆಯದೇ ಅಥವಾ ಸಿಪ್ಪೆ ತೆಗೆಯದೇ ಇರುವ ಸೇಬು ಒಳ್ಳೆಯದೇ ಎನ್ನುವ ಬಗ್ಗೆ ತಿಳಿಸಲಿದ್ದೇವೆ.

ಸೇಬಿನಲ್ಲಿ ವಿಟಮಿನ್ ಮತ್ತು ಖನಿಜಾಂಶಗಳಾದ ವಿಟಮಿನ್ ಸಿ, ಪೊಟಾಶಿಯಂ, ನಾರಿನಾಂಶ, ಕಾರ್ಬ್ರೋಹೈಡ್ರೇಟ್ಸ್, ಕ್ವೆರ್ಸೆಟಿನ್, ಕ್ಯಾಟ್ಚಿನ್ ಮತ್ತು ಕ್ಲೋರೊಜೆನಿಕ್ ಆಸಿಡ್ ಕೂಡ ಇದೆ. ಒಂದು ಮಧ್ಯಮ ಗಾತ್ರದ ಸೇಬಿನಲ್ಲಿ ಸುಮಾರು 95 ಕ್ಯಾಲರಿ ಇದೆ.

peeled or unpeeled apples

ಸೇಬಿನಲ್ಲಿರುವಂತಹ ಉನ್ನತ ಮಟ್ಟದ ಫಾಲಿಫಿನಾಲ್ಸ್ ಗಳು ಆ್ಯಂಟಿಆಕ್ಸಿಡೆಂಟ್ ಪರಿಣಾಮ ಬೀರುವುದು. ಈ ಆ್ಯಂಟಿಆಕ್ಸಿಡೆಂಟ್ ಸೇಬಿನ ಸಿಪ್ಪೆಯಲ್ಲಿರುವುದು. ಇದರಿಂದ ಸಿಪ್ಪೆ ತೆಗೆದಿರುವ ಅಥವಾ ಸಿಪ್ಪೆ ತೆಗೆಯದಿರುವ ಸೇಬು ಒಳ್ಳೆಯದೇ ಎಂದು ತಿಳಿಯಲು ಮುಂದಕ್ಕೆ ಓದಿ. ಸೇಬಿನ ಸಿಪ್ಪೆ ತೆಗೆದು ತಿಂದರೆ ಆಗ ಅದರಲ್ಲಿ ಇರುವಂತಹ ಪೋಷಕಾಂಶಗಳು ಕೂಡ ನಾಶವಾಗುವುದು. ಸಿಪ್ಪೆ ತೆಗೆಯದೆ ಸೇಬು ತಿನ್ನಲು ಇಲ್ಲಿ ಕೆಲವು ಬಲವಾದ ಕಾರಣಗಳು ಇವೆ.

1. ಸಿಪ್ಪೆಯಲ್ಲಿ ನಾರಿನಾಂಶ

1. ಸಿಪ್ಪೆಯಲ್ಲಿ ನಾರಿನಾಂಶ

ಒಂದು ಮಧ್ಯಮಗಾತ್ರದ ಸೇಬಿನ ಸಿಪ್ಪೆಯಲ್ಲಿ 4.4 ಗ್ರಾಂ ನಾರಿನಾಂಶವಿದೆ. ಸೇಬಿನ ಸಿಪ್ಪೆಯಲ್ಲಿ ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶವಿದ್ದು, ಇದರಲ್ಲಿ ಶೇ.77ರಷ್ಟು ಹೀರಿಕೊಳ್ಳದ ನಾರಿನಾಂಶವಿದೆ. ಇದು ನೀರಿನೊಂದಿಗೆ ಸೇರಿಕೊಂಡು ಮಲಬದ್ಧತೆ ನಿವಾರಣೆ ಮಾಡಿ, ಜೀರ್ಣಕ್ರಿಯೆಯ ಕಲ್ಮಷವನ್ನು ದೊಡ್ಡ ಕರುಳಿಗೆ ಸಾಗಿಸಲು ಪ್ರಮುಖ ಪಾತ್ರ ವಹಿಸುವುದು. ಹೀರಿಕೊಳ್ಳುವ ನಾರಿನಾಂಶವು ಹೊಟ್ಟೆ ತುಂಬಿದಂತೆ ಮಾಡಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರದಂತೆ ಕಾಪಾಡುವುದು. ಇದರೊಂದಿಗೆ ಪೋಷಕಾಂಶಗಳ ಹೀರಿಕೊಳ್ಳುವಿಕೆ ನಿಧಾನಗೊಳಿಸುವುದು. ಕೊಲೆಸ್ಟ್ರಾಲ್ ನ್ನು ಕೂಡ ತಗ್ಗಿಸುವುದು.

 2. ವಿಟಮಿನ್ ಗಳು ತುಂಬಿದೆ

2. ವಿಟಮಿನ್ ಗಳು ತುಂಬಿದೆ

ಸೇಬಿನ ಸಿಪ್ಪೆಯಲ್ಲಿ 8.4 ಗ್ರಾಮ ವಿಟಮಿನ್ ಸಿ ಮತ್ತು 98 ಐಯುಷ್ಟು ವಿಟಮಿನ್ ಎ ಇದೆ. ಇದರ ಸಿಪ್ಪೆ ತೆಗೆದರೆ ಆಗ ವಿಟಮಿನ್ ಸಿಯು 6.4 ಮಿ.ಗ್ರಾಂ ಮತ್ತು ವಿಟಮಿನ್ ಎ 61 ಐಯು ಆಗುವುದು. ಅರ್ಧದಷ್ಟು ವಿಟಮಿನ್ ಸಿಯು ಸೇಬಿನ ಸಿಪ್ಪೆಯ ಕೆಳಗಿರುವುದು ಎಂದು ನಿಮಗೆ ತಿಳಿದಿದೆಯಾ? ಇದರಿಂದ ಸಿಪ್ಪೆಯೊಂದಿಗೆ ಸೇಬನ್ನು ತಿನ್ನುವುದು ತುಂಬಾ ಒಳ್ಳೆಯದು.

3. ಕ್ಯಾನ್ಸರ್ ನ್ನು ದೂರವಿಡುವುದು

3. ಕ್ಯಾನ್ಸರ್ ನ್ನು ದೂರವಿಡುವುದು

2007ರಲ್ಲಿ ಕೊರ್ನೆಲ್ ವಿಶ್ವವಿದ್ಯಾನಿಲಯವು ನಡೆಸಿರುವ ಅಧ್ಯಯನವು ಸೇಬಿನ ಸಿಪ್ಪೆಯಲ್ಲಿ ಟ್ರೈಟರ್ಪೆನಾಯ್ಡ್ ಎನ್ನುವ ಅಂಶವಿದೆ ಎಂದು ಪತ್ತೆ ಹಚ್ಚಿದೆ. ಈ ಅಂಶವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದು. ಕರುಳು, ಸ್ತನ ಮತ್ತು ಯಕೃತ್ ನ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಸೇಬಿನಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ ಎಂದು ಅಮೆರಿಕಾದ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ಹೇಳಿದೆ. ಈ ಆ್ಯಂಟಿಆಕ್ಸಿಡೆಂಟ್ ಶ್ವಾಸಕೋಶದ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುವುದು.

4. ಸೇಬಿನ ಸಿಪ್ಪೆಯು ಉಸಿರಾಟದ ಸಮಸ್ಯೆ ನಿವಾರಿಸುವುದು

4. ಸೇಬಿನ ಸಿಪ್ಪೆಯು ಉಸಿರಾಟದ ಸಮಸ್ಯೆ ನಿವಾರಿಸುವುದು

ಸೇಬಿನ ಸಿಪ್ಪೆಯಲ್ಲಿ ಕ್ವೆರ್ಸೆಟಿನ್ ಎನ್ನುವ ಫ್ಲಾವನಾಯ್ಡ್ ಇದ್ದು, ಈ ಅಂಶವು ತಿರುಳಿಗಿಂತ ಹೆಚ್ಚು ಸಿಪ್ಪೆಯಲ್ಲಿದೆ. ವಾರದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚಿನ ಸೇಬನ್ನು ತಿನ್ನುವವರ ಶ್ವಾಸಕೋಶವು ಕ್ವೆರ್ಸೆಟಿನ್ ಅಂಶದಿಂದಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವುದು. ಇದರಿಂದ ಅಸ್ತಮಾದ ಅಪಾಯವು ಕಡಿಮೆಯಾಗುವುದು ಎಂದು ವರದಿಗಳು ಹೇಳಿವೆ. 2004ರ ಅಧ್ಯಯನ ಪ್ರಕಾರ ಅಲ್ಝೈಮರ್ ಕಾಯಿಲೆ ಉಂಟುಮಾಡುವ ಹಾನಿಗೀಡಾದ ಮತ್ತು ಕ್ಷೀಣವಾದ ಮೆದುಳಿನ ಕೋಶಗಳು ಇದು ಸರಿಪಡಿಸುವುದು.

5. ಸೇಬಿನ ಸಿಪ್ಪೆಯು ತೂಕ ಕಳೆದುಕೊಳ್ಳಲು ಸಹಕಾರಿ

5. ಸೇಬಿನ ಸಿಪ್ಪೆಯು ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಇಳಿಸಿಕೊಳ್ಳಬೇಕೆಂದು ಬಯಸುವವರು ಸೇಬನ್ನು ಸಿಪ್ಪೆಯೊಂದಿಗೆ ಸೇವನೆ ಮಾಡಬೇಕು. ಸೇಬಿನ ಸಿಪ್ಪೆಯಲ್ಲಿ ರ್ಸಾಲಿಕ್ ಆಮ್ಲವಿದ್ದು, ಇದು ಬೊಜ್ಜಿನ ವಿರುದ್ಧ ಹೋರಾಡುವುದು. ರ್ಸಾಲಿಕ್ ಆಮ್ಲವು ಸ್ನಾಯುಗಳ ಕೊಬ್ಬನ್ನು ಹೆಚ್ಚಿಸುವುದು. ಇದರಿಂದ ಕ್ಯಾಲರಿ ದಹಿಸಲು ನೆರವಾಗುವುದು ಮತ್ತು ಬೊಜ್ಜಿನ ಸಮಸ್ಯೆ ಕಡಿಮೆಯಾಗುವುದು.

6. ಸೇಬಿನ ಸಿಪ್ಪೆಯಲ್ಲಿನ ಇತರ ಪೋಷಕಾಂಶ ಲಾಭಗಳು

6. ಸೇಬಿನ ಸಿಪ್ಪೆಯಲ್ಲಿನ ಇತರ ಪೋಷಕಾಂಶ ಲಾಭಗಳು

ಇಲಿನಾಯ್ಸ್ ವಿಶ್ವವಿದ್ಯಾನಿಲಯದ ಪ್ರಕಾರ ಸೇಬಿನ ಸಿಪ್ಪೆಯಲ್ಲಿ ಕೆಲವೊಂದು ಪ್ರಮುಖ ಖನಿಜಾಂಶಗಳಾಗಿರುವ ಪೊಟಾಶಿಯಂ, ಕ್ಯಾಲ್ಸಿಯಂ, ಫಾಲೆಟ್, ಕಬ್ಬಿನಾಂಶ ಮತ್ತು ಫ್ರೋಸ್ಪರಸ್ ಇದೆ. ಈ ಖನಿಜಾಂಶಗಳು ದೇಹದಲ್ಲಿ ವಿವಿಧ ರೀತಿಯ ಚಟುವಟಿಕೆಗೆ ನೆರವಾಗುವುದು. ಇದು ಕೋಶಗಳನ್ನು ನಿಯಂತ್ರಿಸಿ ಮೂಳೆಗಳನ್ನು ಬಲಪಡಿಸುವುದು ಮತ್ತು ಆರೋಗ್ಯಕರ ಕೆಂಪುರಕ್ತದ ಕಣಗಳನ್ನು ಉತ್ಪತ್ತಿ ಮಾಡುವುದು.

ಸೇಬಿನ ಸಿಪ್ಪೆ ತಿನ್ನುವುದು ಹೇಗೆ?

ಸೇಬಿನ ಸಿಪ್ಪೆ ತಿನ್ನುವುದು ಹೇಗೆ?

ಸಾವಯವ ಅಲ್ಲದೆ ಇರುವಂತಹ ಸೇಬಿನಲ್ಲಿ ಹೆಚ್ಚಾಗಿ ರಾಸಾಯನಿಕ ಸಿಂಪಡಣೆ ಮಾಡಲಾಗಿರುತ್ತದೆ. ಸೇಬನ್ನು ತಿನ್ನುವ ಮೊದಲು ಸರಿಯಾಗಿ ತೊಳೆದುಕೊಂಡರೆ ರಾಸಾಯನಿಕ ಮತ್ತು ಸೇಬು ತಾಜಾವಾಗಿ ಕಾಣಲು ಹಾಕಿರುವ ಮೇಣವನ್ನು ತೆಗೆಯಬಹುದು. ನಿಮಗೆ ಸೇಬಿನ ಸಿಪ್ಪೆ ತಿನ್ನಲು ಇಷ್ಟವಿಲ್ಲದೆ ಇದ್ದರೆ ಬೇಕ್ ಮಾಡಿಕೊಂಡರೆ ಸಿಪ್ಪೆಯು ಮೃಧುವಾಗುವುದು ಮತ್ತು ಸ್ವಾದವು ಹೆಚ್ಚಾಗುವುದು.

ರಕ್ತಹೀನತೆಯನ್ನು ಕಡಿಮೆಗೊಳಿಸುತ್ತವೆ

ರಕ್ತಹೀನತೆಯನ್ನು ಕಡಿಮೆಗೊಳಿಸುತ್ತವೆ

ಸೇಬುಹಣ್ಣನ್ನು ಸಿಪ್ಪೆ ಸಹಿತ ತಿನ್ನುವುದರಿಂದ ಸಿಪ್ಪೆಯಲ್ಲಿ ಹೇರಳವಾಗಿರುವ ಫೋಲಿಕ್ ಆಮ್ಲ ಮತ್ತು ಕಬ್ಬಿಣದ ಅಂಶ ಲಭ್ಯವಾಗುತ್ತದೆ. ಜೊತೆಗೇ ಕ್ಯಾಲ್ಸಿಯಂ, ಫಾಸ್ಪರಸ್, ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಸತು ಮೊದಲಾದ ಖನಿಜಗಳೂ ಲಭ್ಯವಾಗುತ್ತವೆ. ಈ ಎಲ್ಲವೂ ಹೊಸ ರಕ್ತಕಣಗಳ ಬೆಳವಣಿಗೆಗೆ ಪೂರಕವಾಗಿದ್ದು ರಕ್ತಹೀನತೆಯನ್ನು ಕಡಿಮೆಗೊಳಿಸುತ್ತವೆ.

ಕಣ್ಣಿನ ಪೊರೆಯ ಸಮಸ್ಯೆ ನಿವಾರಣೆ ಮಾಡುವುದು

ಕಣ್ಣಿನ ಪೊರೆಯ ಸಮಸ್ಯೆ ನಿವಾರಣೆ ಮಾಡುವುದು

ಸೇಬಿನ ಸಿಪ್ಪೆಯು ಕಣ್ಣಿನ ಪೊರೆಯ ಸಮಸ್ಯೆ ನಿವಾರಣೆ ಮಾಡುವುದು. ನೀವು ನಿಯಮಿತವಾಗಿ ಸೇಬನ್ನು ಅದರ ಸಿಪ್ಪೆ ಜತೆಗೆ ತಿಂದರೆ ಕಣ್ಣಿನ ಆರೋಗ್ಯವು ಉತ್ತಮವಾಗಿರುವುದು. ಇದು ಸೇಬಿನ ಸಿಪ್ಪೆಯ ಅದ್ಭುತ ಆರೋಗ್ಯ ಲಾಭಗಳಲ್ಲಿ ಒಂದಾಗಿದೆ.

English summary

Peeled Or Unpeeled Apple-which one good for health?

How do you eat your apple? Do you peel and eat it or do you consume it with the skin? Some people don't prefer eating the skin on the apple due to the fear of pesticides and the presence of wax on the skin. In this article, we will be writing about whether peeled apple or unpeeled apple is good. Apples contain vitamins and minerals such as Vitamin C, potassium, fibre, carbohydrates and other plant compounds like quercetin, catechin and chlorogenic acid. One medium-sized apple has only 95 calories.
X
Desktop Bottom Promotion