For Quick Alerts
ALLOW NOTIFICATIONS  
For Daily Alerts

ಶಿಶ್ನದಲ್ಲಿ ನೋವು ಬರಲು ಕಾರಣವೇನು? ಇದಕ್ಕೆ ಚಿಕಿತ್ಸೆ ಏನು?

By Hemanth
|

ಕೆಲವೊಂದು ಸಲ ಪುರುಷರಲ್ಲಿ ಶಿಶ್ನದ ನೋವು ಕಾಣಿಸಿಕೊಳ್ಳುವುದು. ಇದು ಶಿಶ್ನದ ಮೂಲ, ತಲೆ, ಮತ್ತು ಮುಂದೊಗಲಿನ ಮೇಲೆ ಪರಿಣಾಮ ಬೀರಬಹುದು. ತುರಿಕೆ, ಉರಿ ಮತ್ತು ಮೆದುಸ್ಪರ್ಶ ಸಂವೇದನೆಯು ನೋವಿನೊಂದಿಗೆ ಕಾಣಿಸಿಕೊಳ್ಳುವುದು. ಶಿಶ್ನದ ನೋವು ಅಪಘಾತ ಅಥವಾ ಕಾಯಿಲೆಯಿಂದ ಬರಬಹುದಾಗಿದ್ದು, ಇದು ಯಾವುದೇ ವಯಸ್ಸಿನ ಪುರುಷರಲ್ಲಿ ಕಾಣಿಸಿಕೊಳ್ಳಬಹುದು. ಪರಿಸ್ಥಿತಿ ಮತ್ತು ಕಾಯಿಲೆಗೆ ಅನುಗುಣವಾಗಿ ಶಿಶ್ನದ ನೋವು ಇರುವುದು. ನೀವು ಗಾಯಾಳುವಾಗಿದ್ದರೆ ಆಗ ನೋವು ತೀವ್ರವಾಗಿರಬಹುದು ಮತ್ತು ಹಠಾತ್ ಆಗಿ ಕಾಣಿಸಬಹುದು. ನಿಮಗೆ ಯಾವುದೇ ರೀತಿಯ ರೋಗವಿದ್ದರೆ ಆಗ ನೋವು ಕಡಿಮೆಯಿರುವುದು ಮತ್ತು ನಿಧಾನವಾಗಿ ಇದು ಹೆಚ್ಚಾಗುತ್ತಾ ಹೋಗಬಹುದು.

What causes penis pain?

ಎಲ್ಲಾ ರೀತಿಯ ನೋವುಗಳು ಚಿಂತೆಯ ವಿಚಾರವಾಗಿದ್ದು, ಅದರಲ್ಲೂ ನಿಮಿರುವಿಕೆ, ಮೂತ್ರವಿಸರ್ಜನೆ ಅಥವಾ ವಿಸರ್ಜನೆ, ಕೆಂಪಾಗುವುದು, ಊತದೊಂದಿಗೆ ಉಂಟಾಗುವಂತಹ ನೋವು ತುಂಬಾ ಸಮಸ್ಯೆಯನ್ನು ಉಂಟು ಮಾಡುವುದು.

ಶಿಶ್ನದಲ್ಲಿ ಕಾಣಿಸುವಂತಹ ನೋವಿನ ಸಾಧ್ಯತೆಗಳು ಪೆರೋನಿಯ ರೋಗ

ಶಿಶ್ನದಲ್ಲಿ ಕಾಣಿಸುವಂತಹ ನೋವಿನ ಸಾಧ್ಯತೆಗಳು ಪೆರೋನಿಯ ರೋಗ

ಶಿಶ್ನದ ಅಂಗಾಂಶದ ಮೇಲ್ಭಾಗ ಅಥವಾ ಕೆಳಗಿನ ತುದಿಗಳ ತೆಳುವಾದ ಪದರದಲ್ಲಿ ಉರಿಯೂತವು ಉಂಟಾದಾಗ ಪೆರೋನಿಯಾ ರೋಗವು ಆರಂಭವಾಗುವುದು. ಅಂಗಾಂಶದ ಪಕ್ಕದಲ್ಲಿ ಗಾಯದ ಅಂಗಾಂಶವು ನಿರ್ಮಾಣದ್ದರಿಂದ ಶಿಶ್ನವು ನಿಮಿರುವಿಕೆ ವೇಳೆ ನೆಟ್ಟಗೆ ಆಗಲು ತುಂಬಾ ಕಠಿಣಶ್ರಮ ವಹಿಸುವುದನ್ನು ನೀವು ಗಮನಿಸಬಹುದು. ನೀವು ಶಿಶ್ನವನ್ನು ಬಾಗಿಸಿದಾಗ ಸಂಪರ್ಕದ ಅಂಗಾಂಶ ಕಾಯಿಲೆ ಅಥವಾ ದುಗ್ಧರಸ ವ್ಯವಸ್ಥೆ ಅಥವಾ ರಕ್ತನಾಳಗಳು ಉರಿಯೂತವಿದ್ದರೆ ಆಗ ಶಿಶ್ನದ ಒಳಭಾಗದಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುವುದು. ಇದು ಕುಟುಂಬದ ಕೆಲವರಲ್ಲಿ ಇದ್ದರೆ ಅಥವಾ ಕಾರಣವಿಲ್ಲದೆಯೇ ಬರಬಹುದು.

ಪ್ರಿಯಾಪಿಸಂ

ಪ್ರಿಯಾಪಿಸಂ

ಪ್ರಿಯಾಪಿಸಂನಿಂದಾಗಿ ನೋವಿನ ಅಥವಾ ದೀರ್ಘಕಾಲಿನ ನಿಮಿರುವಿಕೆ ಉಂಟಾಗಬಹುದು. ನಿಮಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲದೆ ಇರುವಾಗ ಕೂಡ ಈ ನಿಮಿರುವಿಕೆಯು ಉಂಟಾಗಬಹುದು. 5ರಿಂದ 10ರ ಹರೆಯದ ಹುಡುಗರು ಮತ್ತು 20-50ರ ಹರೆಯದ ಪುರುಷರಲ್ಲಿ ಈ ರೋಗವು ಸಾಮಾನ್ಯವೆಂದು ಮಯೋ ಕ್ಲಿನಿಕ್ ಹೇಳಿದೆ. ಇದು ಕಾಣಿಸಿಕೊಂಡರೆ ನೀವು ತಕ್ಷಣ ಚಿಕಿತ್ಸೆ ಪಡೆದುಕೊಂಡರೆ ಶಾಶ್ವತವಾಗಿ ಹಾನಿಯಾಗುವುದು ತಪ್ಪುವುದು. ಈ ಸಮಸ್ಯೆಯಿಂದಾಗಿ ಭವಿಷ್ಯದಲ್ಲಿ ನಿಮಗೆ ನಿಮಿರುವಿಕೆ ಉಂಟಾಗದಿರಬಹುದು.

ಪ್ರಿಯಾಪಿಸಂ ಹೇಗೆ ಬರುವುದು

ಪ್ರಿಯಾಪಿಸಂ ಹೇಗೆ ಬರುವುದು

ನಿಮಿರುವಿಕೆ ಸಮಸ್ಯೆಗೆ ತೆಗೆದುಕೊಳ್ಳುವಂತಹ ಔಷಧಿ ಅಥವಾ ಖಿನ್ನತೆಶಮನಕಾರಿ ಔಷಧಿಗಳು ಈ ಸಮಸ್ಯೆ ಉಂಟು ಮಾಡಬಹುದು. ರಕ್ತಹೆಪ್ಪುಗಟ್ಟುವಿಕೆ ಕಾಯಿಲೆ, ಮಾನಸಿಕ ಆರೋಗ್ಯ ಕಾಯಿಲೆ, ರಕ್ತದ ಕಾಯಿಲೆ, ಮದ್ಯಪಾನ, ಡ್ರಗ್ಸ್ ಸೇವನೆ, ಶಿಶ್ನಕ್ಕೆ ಅಥವಾ ಬೆನ್ನುಮೂಳೆಗೆ ಹಾಗಿರುವ ಗಾಯ.

ಬಾಲನಿಟಿಸ್

ಬಾಲನಿಟಿಸ್

ಬಾಲನಿಟಿಸ್ ಸೋಂಕು ಮುಂದೊಗಲು ಮತ್ತು ಶಿಶ್ನದ ತಲೆಯ ಭಾಗದಲ್ಲಿ ಕಂಡುಬರುವುದು. ಮುಂದೊಗಲಿನ ಒಣಭಾಗವನ್ನು ಸರಿಯಾಗಿ ತೊಳೆಯದೆ ಇರುವಂತಹ ಹುಡುಗರು ಹಾಗೂ ಪುರುಷರಲ್ಲಿ ಇಂತಹ ಸಮಸ್ಯೆಯು ಕಾಣಿಸಿಕೊಳ್ಳುವುದು. ಸುನ್ನತಿಗೊಳಗಾಗದೆ ಇರುವವರಲ್ಲಿ, ಸುನ್ನತಿಗೆ ಒಳಗಾದವರಲ್ಲೂ ಇದು ಕಂಡುಬರುವುದು. ಯೀಸ್ಟ್ ಸೋಂಕು ಮತ್ತು ಲೈಂಗಿಕ ರೋಗಗಳು ಅಥವಾ ಸೋಪು, ಪರ್ಫ್ಯೂಮ್ ಅಥವಾ ಇತರ ಉತ್ಪನ್ನಗಳ ಅಲರ್ಜಿಯಿಂದಲೂ ಇದು ಬರಬಹುದು.

ಮೂತ್ರದ ಸೋಂಕುಗಳು(ಯುಟಿಐ)

ಮೂತ್ರದ ಸೋಂಕುಗಳು(ಯುಟಿಐ)

ಮೂತ್ರದ ಸೋಂಕು(ಯುಟಿಐ) ಸಮಸ್ಯೆಯು ಮಹಿಳೆಯರಲ್ಲಿ ಸಾಮಾನ್ಯವಾಗಿರುವುದು. ಆದರೆ ಇದು ಪುರುಷರಲ್ಲೂ ಕಾಣಿಸಿಕೊಳ್ಳಬಹುದು. ಮೂತ್ರನಾಳದೊಳಗೆ ಬ್ಯಾಕ್ಟೀರಿಯಾ ಪ್ರವೇಶಿಸಿ ಸೋಂಕು ಉಂಟು ಮಾಡಿದಾಗ ಯುಟಿಐ ಕಾಣಿಸಿಕೊಳ್ಳುವುದು.

ಸೋಂಕು ಈ ರೀತಿಯಿಂದಲೂ ಕಾಣಿಸಿಕೊಳ್ಳಬಹುದು.

ಸುನ್ನತಿ ಮಾಡದೆ ಇರುವುದರಿಂದ

ಪ್ರತಿರೋಧಕ ಶಕ್ತಿಯು ದುರ್ಬಲವಾಗಿರುವುದು

ಮೂತ್ರನಾಳದಲ್ಲಿ ಸಮಸ್ಯೆ ಅಥವಾ ಬ್ಲಾಕ್ ಇರುವುದು.

ಸೋಂಕಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದು.

ಗುದ ಸೆಕ್ಸ್

ಜನನೇಂದ್ರಿಯ ಗ್ರಂಥಿಯು ಹಿಗ್ಗಿರುವುದು.

ಗಾಯಾಳುವಾಗಿರುವುದು

ಗಾಯಾಳುವಾಗಿರುವುದು

ದೇಹದ ಇತರ ಭಾಗಗಳಂತೆ ಗಾಯಾಳುವಾಗುವುದು ಶಿಶ್ನಕ್ಕೆ ಹಾನಿ ಉಂಟು ಮಾಡಬಹುದು.ಗಾಯಾಳುವಾಗುವುದು ಕಾರಿನಲ್ಲಿ ಆಗುವ ಅಪಘಾತ ಸುಟ್ಟ ಗಾಯ ಗಡಸು ಸೆಕ್ಸ್ ನಿಮಿರುವಿಕೆ ಉಳಿಯಲು ಶಿಶ್ನಕ್ಕೆ ರಿಂಗ್ ಹಾಕುವುದು ಶಿಶ್ನದ ತೂತಿನೊಳಗೆ ಯಾವುದಾದರೂ ಟ್ಯೂಬ್ ಹಾಕುವುದು.

ಕ್ಯಾನ್ಸರ್

ಕ್ಯಾನ್ಸರ್

ಶಿಶ್ನದಲ್ಲಿ ನೋವು ಉಂಟಾಗಲು ಮತ್ತೊಂದು ಕಾರಣವೆಂದರೆ ಅದು ಶಿಶ್ನದ ಕ್ಯಾನ್ಸರ್. ಆದರೆ ಇದು ತುಂಬಾ ಅಪರೂಪ. ಕೆಲವೊಂದು ಕಾರಣಗಳಿಂದಾಗಿ ಕ್ಯಾನ್ಸರ್ ಬರಬಹುದು. ಅದೆಂದರೆ ಧೂಮಪಾನ, ಸುನ್ನತಿ ಮಾಡದೆ ಇರುವುದು, ಪ್ಯಾಪಿಲೋಮವೈರಸ್ ಸೋಂಕು, ಸುನ್ನತಿಯಾಗದೆ ಇರುವವರು ಮುಂದೊಗಲನ್ನು ಸ್ವಚ್ಛ ಮಾಡದೆ ಇರುವುದು, ಸೋರಿಯಾಸಿಸ್ ಗೆ ಚಿಕಿತ್ಸೆ

ಶಿಶ್ನದಲ್ಲಿ ಆಗಿರುವಂತಹ ನೋವಿಗೆ ಚಿಕಿತ್ಸೆಯ ವಿಧಾನಗಳು

ಶಿಶ್ನದಲ್ಲಿ ಆಗಿರುವಂತಹ ನೋವಿಗೆ ಚಿಕಿತ್ಸೆಯ ವಿಧಾನಗಳು

ಕಾಯಿಲೆ ಮತ್ತು ಅದರ ತೀವ್ರತೆಗೆ ಅನುಗುಣವಾಗಿ ಇದರ ಚಿಕಿತ್ಸೆಯು ಭಿನ್ನವಾಗಿರುವದು. ಪೇರೋನಿಸ್ ನಲ್ಲಿ ಇಂಜೆಕ್ಷನ್ ಮೂಲಕ ಪದರವನ್ನು ಮೆತ್ತಗೆ ಮಾಡಬಹುದು ಮತ್ತು ತಜ್ಞ ವೈದ್ಯರು ತೀವ್ರ ಪರಿಸ್ಥಿತಿಯಲ್ಲಿ ಇದನ್ನು ತೆಗೆಯಬಹುದು. ಪ್ರಿಯಾಪಿಸಂ ಇದ್ದರೆ ಆಗ ಸೂಜಿ ಬಳಸಿ ಶಿಶ್ನದಿಂದ ರಕ್ತವನ್ನು ತೆಗೆದರೆ ಆಗ ನಿಮಿರುವಿಕೆ ಕಡಿಮೆಯಾಗುವುದು. ಔಷಧಿಯಿಂದಲೂ ಶಿಶ್ನಕ್ಕೆ ರಕ್ತಸಂಚಾರವನ್ನು ಕಡಿಮೆ ಮಾಡಬಹುದು.

ಆ್ಯಂಟಿಬಯೋಟಿಕ್ ನಿಂದ ಕೆಲವೊಂದು ಯುಟಿಐ ಮತ್ತು ಇನ್ನು ಕೆಲವು ಎಸ್ ಟಿಐ ಗಳಾದ ಕ್ಲಮೈಡಿಯ, ಗೊನೊರಿಯಾ ಮತ್ತು ಸಿಫಿಲಿಸ್ ಗೆ ಚಿಕಿತ್ಸೆ ನೀಡಬಹುದು. ಆ್ಯಂಟಿಬಯೋಟಿಕ್ ಮತ್ತು ಶಿಲೀಂಧ್ರ ವಿರೋಧಿ ಔಷಧಿಗಳು ಬಾಲನಿಟಿಸ್ ನ್ನು ಕಡಿಮೆ ಮಾಡುವುದು ವೈರಲ್ ವಿರೋಧಿ ಔಷಧಿಗಳು ಹರ್ಪಿಸ್ ನ್ನು ಕಡಿಮೆ ಮಾಡುವುದು. ಪಿಮೋಸಿಸ್ ಇದ್ದರೆ ಆಗ ಮುಂದೊಗಲನ್ನು ಕೈಬೆರಳಿನಿಂದ ಎಳೆಯುವುದರಿಂದ ಇದು ಸಡಿಲವಾಗಬಹುದು. ಸ್ಟಿರಾಯ್ಡ್ ಕ್ರೀಮ್ ಹಚ್ಚಿಕೊಂಡರೂ ಇದು ನೆರವಾಗುವುದು. ಕೆಲವೊಂದು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯು ಅನಿವಾರ್ಯವಾಗುವುದು. ಪ್ಯಾರಾಫಿಮೊಸಿಸ್ ನಿಂದಾಗಿ ಶಿಶ್ನದ ತಲೆಭಾಗದಲ್ಲಿ ಊತ ಕಾಣಿಸಿಕೊಂಡಿದ್ದರೆ ಆಗ ಐಸ್ ಇಡಬಹುದು. ಶಿಶ್ನದ ಮೇಲೆ ಒತ್ತಡ ಹಾಕುವಂತ ವೈದ್ಯರು ಹೇಳಬಹುದು. ಇದು ಇಂಗಲು ವೈದ್ಯರು ಇಜೆಂಕ್ಷನ್ ನೀಡಬಹುದು ಅಥವಾ ಮುಂದೊಗಲಿನ ಸಣ್ಣ ತುಂಡು ಕತ್ತರಿಸಿ ಊತ ಕಡಿಮೆ ಮಾಡಬಹುದು.

English summary

Pain in penis: Causes and treatment

Penile pain can affect the base, shaft, or head of the penis. It can also affect the foreskin. An itching, burning, or throbbing sensation may accompany the pain. Penile pain can be a result of an accident or disease, and it can affect males of any age. The pain can vary depending on what underlying condition or disease is causing it. If you have an injury, the pain may be severe and occur suddenly. If you have a disease or condition, the pain may be mild and may gradually get worse.
X
Desktop Bottom Promotion