ಮದುವೆಯ ಮೊದಲ ರಾತ್ರಿಯೇ? ಹಾಗಾದರೆ ಇಂತಹ ಆಹಾರಗಳನ್ನು ಸೇವಿಸಿ

Subscribe to Boldsky

ವಿವಾಹ ಬಂಧನಕ್ಕೆ ಒಳಗಾದ ದಂಪತಿಗಳು ಅತಿ ಕಾತುರದಿಂದ ಕಾಯುವ ಕ್ಷಣವೇ ಪ್ರಸ್ತದ ಕ್ಷಣ. ಜೀವಮಾನಪರ್ಯಂತ ಕಾಪಾಡಿ ಕೊಳ್ಳಬೇಕಾದ ದಾಂಪತ್ಯ ಸುಖಕರವಾಗಿರಲು ಆರೋಗ್ಯಕರ ಲೈಂಗಿಕ ಜೀವನದ ತಳಹದಿಯೇ ಪ್ರಸ್ತ. ಈ ಕ್ಷಣವನ್ನು ಯಾವುದೇ ದುಗುಡ, ದುಮ್ಮಾನ, ಒತ್ತಡವಿಲ್ಲದೇ, ಪರಸ್ಪರರು ತಮ್ಮ ಮನಸ್ಸು ದೇಹಗಳನ್ನು ಹಂಚಿಕೊಳ್ಳುವ ಮೂಲಕವೇ ದಾಂಪತ್ಯ ಜೀವನಕ್ಕೆ ಸುಮಧುರ ಪ್ರಾರಂಭ ದೊರಕುತ್ತದೆ. 

ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರಗಳು

ಈ ಕ್ಷಣಕ್ಕಾಗಿ ಪ್ರತಿ ವಧೂ ವರರು ತಮ್ಮ ಹಿಂದಿನ ದಿನಗಳಲ್ಲಿ ಓದಿದ್ದ, ಕೇಳಿದ್ದ ವಿವರಗಳನ್ನು ಈಗ ಸಾಕ್ಷಾತ್ಕಾರ ಗೊಳಿಸಲು ಕಾಯುತ್ತಿರುತ್ತಾರೆ. ಹಾಗಾಗಿ ಈ ಅನುಭವವನ್ನು ಅತ್ಯುತ್ತಮಗೊಳಿಸಲು ಕೆಲವು ಆಹಾರಗಳು ಪೂರಕವಾಗಿದ್ದು ವಧೂವರರಿಗೆ ಹೆಚ್ಚಿನ ಶಕ್ತಿ ಹಾಗೂ ಅತ್ಯಮೂಲ್ಯ ಕ್ಷಣವಾಗಿಸಲು ನೆರವಾಗಲಿವೆ... 

ಈ ಅಹಾರಗಳು ಹೇಗೆ ನೆರವಾಗುತ್ತವೆ?

ಈ ಅಹಾರಗಳು ಹೇಗೆ ನೆರವಾಗುತ್ತವೆ?

ನಿಸರ್ಗ ನೀಡಿರುವ ಕೆಲವು ಆಹಾರಗಳು ಉತ್ತಮ ಕಾಮೋತ್ತೇಜಕವಾಗಿವೆ. ಅಂದರೆ ಇವುಗಳು ಕಾಮಾಸಕ್ತಿಯನ್ನು ವಿಜೃಂಭಿಸಿ ಸಂಗಾತಿಯೊಡನೆ ಕೂಡುವ ಅಭಿಲಾಶೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ರಕ್ತಸಂಚಾರವನ್ನು ಹೆಚ್ಚಿಸಿ ಮೊದಲ ರಾತ್ರಿಯ (ನಂತರದ ವಿಶೇಷ ರಾತ್ರಿಗಳೂ) ಪ್ರಚೋದನೆಯನ್ನು ಹೆಚ್ಚಿಸುತ್ತವೆ. ಈ ಆಹಾರಗಳ ಸೇವನೆಯಿಂದ ಹಾರ್ಮೋನುಗಳ ಪ್ರಮಾಣದಲ್ಲಿ ಏರಿಕೆ, ಮೆದುಳಿಗೆ ತಲುಪುವ ಸಂಕೇತಗಳಾದ ನ್ಯೂರೋ ಟ್ರಾನ್ಸ್ ಮಿಟರ್‌ಗಳ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಮೆದುಳಿಗೆ ತಲುಪುವ, ಮನಸ್ಸಿಗೆ ನಿರಾಳ ಹಾಗೂ ಭಾವೋದ್ವೇಗವನ್ನು ನೀಡಬಲ್ಲ ರಾಸಾಯನಿಕಗಳಲ್ಲಿ ಹೆಚ್ಚಳವಾಗುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.ಈ ಆಹಾರಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು ದೇಹಕ್ಕೆ ಅಗತ್ಯ ಶಕ್ತಿಯನ್ನು ನೀಡುವುದು ಮಾತ್ರವಲ್ಲ, ರಾತ್ರಿಯಿಡೀ ದಂಪತಿಗಳು ಅತ್ಯಂತ ಆತ್ಮೀಯ ಕ್ಷಣಗಳನ್ನು ಸಂತೋಷ ಹಾಗೂ ಸಫಲತೆಯಿಂದ ಕಳೆಯಲು ನೆರವಾಗುತ್ತವೆ. ಈ ಆಹಾರಗಳ ಮಹತ್ವವನ್ನು ಬಹಳ ಹಿಂದಿನಿಂದಲೇ ನಮ್ಮ ಹಿರಿಯರು ಕಂಡುಕೊಂಡಿದ್ದು ಇಂದಿಗೂ ನವವಿವಾಹಿತರಿಗೆ ನೀಡಲಾಗುತ್ತಿದೆ.

ಸುಗಂಧಭರಿತ ಕಸ್ತೂರಿ

ಸುಗಂಧಭರಿತ ಕಸ್ತೂರಿ

ಕಾಮೋತ್ತೇಜಕ ಆಹಾರಗಳ ಪಟ್ಟಿಯಲ್ಲಿ ಕಸ್ತೂರಿ ನಿರ್ವಿವಾದವಾಗಿ ಪ್ರಥಮ ಸ್ಥಾನ ಪಡೆಯುತ್ತದೆ. ಪ್ರಸ್ತಕ್ಕೆ ಕಳಿಸುವ ಮುನ್ನ ನವದಂಪತಿಗಳಿಗೆ ಕಸ್ತೂರಿಯನ್ನು ಬೆರೆಸಿದ ಬಿಸಿಹಾಲನ್ನು ಕುಡಿಸಿ ಶುಭವಾಗಲಿ ಎಂದು ಹಾರೈಸಿ ಕಳಿಸುವ ಸಂಪ್ರದಾಯ ಭಾರತದ ಹಲವು ಧರ್ಮಗಳಲ್ಲಿ ನೂರಾರು ವರ್ಷಗಳಿಂದ ನಡೆದು ಬರುತ್ತಿರುವ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಆದರೆ ಕಸ್ತೂರಿ ತುಂಬಾ ದುಬಾರಿಯಾದ ಸಾಂಬಾರ ವಸ್ತುವಾಗಿರುವ ಕಾರಣ ವಿಶೇಷ ಅಡುಗೆ ಮತ್ತು ಕೆಲವು ಆರೋಗ್ಯ ಕಾರಣಗಳಿಗಾಗಿ ಮಾತ್ರವೇ ಬಳಸಲಾಗುತ್ತಿದೆ. ಇದರ ಕಾಮೋತ್ತೇಜಕ ಗುಣಗಳು ಪ್ರಸ್ತದ ಕ್ಷಣಗಳಿಗಾಗಿ ಅತ್ಯಂತ ಸೂಕ್ತವಾಗಿದ್ದು ವಧೂವರರು ತಪ್ಪದೇ ಸೇವಿಸಬೇಕಾದ ಆಹಾರವಾಗಿದೆ. ಇದರ ಸೇವನೆಯಿಂದ ಮೆದುಳಿಗೆ ತಲುಪುವ ನ್ಯೂರಾನ್ ಸೂಚನೆಗಳಲ್ಲಿ ಹೆಚ್ಚಳ, ಸ್ವಾಭಾವಿಕವಾಗಿ ಎದುರಾಗುವ ಒತ್ತಡ ಮತ್ತು ಉದ್ವೇಗವನ್ನು ನಿವಾರಿಸಿ ದಂಪತಿಗಳು ನಿರಾಳರಾಗಿರಲು ಹಾಗೂ ಮಧುರ ಕ್ಷಣಗಳನ್ನು ಹೆಚ್ಚು ಹೊತ್ತು ತಾಜಾತನದಲ್ಲಿರಿಸಲು ನೆರವಾಗುತ್ತದೆ.

ಕಪ್ಪು ಚಾಕಲೇಟಿನ ಜಾದೂ

ಕಪ್ಪು ಚಾಕಲೇಟಿನ ಜಾದೂ

ಕಪ್ಪು ಚಾಕಲೇಟು ಆರೋಗ್ಯಕ್ಕೆ ಉತ್ತಮ ಎಂದೇ ಹೆಚ್ಚಾಗಿ ಬಳಸಲ್ಪಡುತ್ತಿದೆ. ಆದರೆ ಇದರ ಶಕ್ತಿ ಪ್ರಸ್ತದ ಸಮಯಕ್ಕೂ ಸೂಕ್ತ ಎಂದು ಕೆಲವರು ಮಾತ್ರವೇ ಅರಿತಿದ್ದಾರೆ. ಹಾಗಾಗಿ ಪ್ರಸ್ತದ ಕ್ಷಣಕ್ಕೂ ಮುನ್ನ ಕೊಂಚ ಕಪ್ಪು ಚಾಕಲೇಟು ತಿನ್ನಬಾರದೇಕೆ? ಒಂದು ಅಥವಾ ಎರಡು ಬಾರ್ ಚಾಕಲೇಟು ಸೇವನೆಯಿಂದ, ಸಾಧ್ಯವಾದರೆ ಒಬ್ಬರಿಗೊಬ್ಬರು ತಿನ್ನಿಸುವ ಮೂಲಕ, ಪರಸ್ಪರರ ಪ್ರತಿ ಗೌರವ, ಪ್ರೇಮ, ಆತ್ಮೀಯತೆ, ಬದ್ದತೆಯ ಭಾವನೆಗಳನ್ನು ಬಲಪಡಿಸುವುದು ಮಾತ್ರವಲ್ಲ, ಮುಂದಿನ ಕ್ಷಣಗಳ ರೋಮಾಂಚನವನ್ನು ಇನ್ನಷ್ಟು ಹೆಚ್ಚಾಗಿ ಪಡೆಯಲು ಸಾಧ್ಯ.

ಕಪ್ಪು ಚಾಕಲೇಟಿನ ಜಾದೂ

ಕಪ್ಪು ಚಾಕಲೇಟಿನ ಜಾದೂ

ಕಪ್ಪು ಚಾಕಲೇಟಿನಲ್ಲಿರುವ ಕೋಕೋ ಮತ್ತು ಇತರ ಪೋಷಕಾಂಶಗಳು ದೇಹದಲ್ಲಿ ಉತ್ಪತ್ತಿಯಾಗುವ ಸೆರೋಟೋನಿನ್ ಎಂಬ ರಾಸಾಯನಿಕದ ಪ್ರಮಾಣ ಹೆಚ್ಚಲು ಪ್ರಚೋದನೆ ನೀಡುತ್ತದೆ. ಇದೊಂದು ಮೆದುಳಿಗೆ ಸಂಕೇತ ನೀಡುವ ನ್ಯೂರೋಟ್ರಾನ್ಸ್ ಮಿಟರ್ ಆಗಿದ್ದು ಕಾಮಾಸಕ್ತಿ ಹಾಗೂ ಲೈಂಗಿಕ ಶಕ್ತಿಯನ್ನು ನಿಯಂತ್ರಿಸುತ್ತದೆ. ಈ ಮೂಲಕ ಪ್ರಸ್ತದ ಕ್ಷಣಗಳಲ್ಲಿ ಹೆಚ್ಚಿನ ಗಮನ ನೀಡಲು ಮತ್ತು ನಿರಾಳರಾಗಿರಲು ನೆರವಾಗುತ್ತದೆ.

ರಸಭರಿತ ಸ್ಟ್ರಾಬೆರಿ ಹಣ್ಣುಗಳು

ರಸಭರಿತ ಸ್ಟ್ರಾಬೆರಿ ಹಣ್ಣುಗಳು

ನವವಿವಾಹಿತರು ತಮ್ಮ ಆತ್ಮೀಯ ಕ್ಷಣಗಳನ್ನು ಜೊತೆಯಾಗಿ ಕಳೆಯಲು ಸವಿಯುವ ವಿಶೇಷ ಆಹಾರಗಳಲ್ಲಿ ಈಗತಾನೇ ಕರಗಿರುವ ಚಾಕಲೇಟಿನ ದಪ್ಪ ದ್ರವದಲ್ಲಿ ತಾಜಾ ಹಾಗೂ ರಸಭರಿತ ಸ್ಟ್ರಾಬೆರಿ ಹಣ್ಣುಗಳನ್ನು ಮುಳುಗಿಸಿ ತಿನ್ನುವುದನ್ನು ಮರೆಯಬಾರದು. ಏಕೆ? ಈ ಆಹಾರ ಮುಂದಿನ ಕ್ಷಣಗಳನ್ನು ಹೆಚ್ಚು ಶಕ್ತಿಯುತವಾಗಿಸಲು ನೆರವಾಗುತ್ತವೆ.

ಒಣ ಬಾದಾಮಿ

ಒಣ ಬಾದಾಮಿ

ಹೆಚ್ಚಿನ ಕುಟುಂಬಗಳಲ್ಲಿ ನವವಿವಾಹಿತರಿಗೆ ಪ್ರಸ್ತಕ್ಕೂ ಮೊದಲು ನೀಡಲಾಗುವ ಕಸ್ತೂರಿ ಬೆರೆಸಿದ ಹಾಲಿನ ಜೊತೆಗೇ ಕೊಂಚ ಒಣಬಾದಾಮಿಗಳನ್ನೂ ಪುಡಿಮಾಡಿ ಬೆರೆಸಿ ನೀಡುತ್ತಾರೆ. ಇದಕ್ಕೆ ಸಾಂಪ್ರಾದಾಯಿಕ ಕಾರಣಕ್ಕಿಂತಲೂ ವೈಜ್ಞಾನಿಕ ಕಾರಣವೇ ಹೆಚ್ಚು ಮಹತ್ವದ್ದಾಗಿದೆ. ಬಾದಾಮಿಯಲ್ಲಿ ದೇಹದ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ. ಇದರಲ್ಲಿರುವ ವಿಟಮಿನ್ B2, ಖನಿಜಗಳಾದ ಮ್ಯಾಂಗನೀಸ್ ಹಾಗೂ ತಾಮ್ರ ವಿಶೇಷವಾಗಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಹುರುಪನ್ನೂ ಹೆಚ್ಚಿಸಲು ನೆರವಾಗುತ್ತವೆ.

ಅಪ್ಪಟ ಜೇನು

ಅಪ್ಪಟ ಜೇನು

ಇನ್ನೂ ಹಲವು ಸಂಪ್ರದಾಯಗಳಲ್ಲಿ ಪ್ರಸ್ತಕ್ಕೂ ಮುನ್ನ ನವವಿವಾಹಿತರಿಗೆ ಕುಡಿಯಲು ನೀಡಲಾಗುವ ಹಾಲಿನಲ್ಲಿ ಅಪ್ಪಟ ಜೇನನ್ನು ಬೆರೆಸುವ ಕಾರಣವನ್ನು ನೋಡೋಣ. ಜೇನಿನಲ್ಲಿ ಅತ್ಯಮೋಘವಾದ ಆರೋಗ್ಯಕರ ಗುಣಗಳಿವೆ ಹಾಗೂ ಇದು ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ದಂಪತಿಗಳಲ್ಲಿ ಸಾಮಾನ್ಯವಾಗಿ ಎದುರಾಗುವ ಲೈಂಗಿಕ ನಿಃಶಕ್ತಿಯನ್ನು ದೂರವಾಗಿಸಿ ಪ್ರಸ್ತದ ಕ್ಷಣಗಳನ್ನು ಪರಿಪೂರ್ಣವಾಗಿಸಲು ನೆರವಾಗುತ್ತದೆ.

ಅಪ್ಪಟ ಜೇನು

ಅಪ್ಪಟ ಜೇನು

ಜೇನಿನಲ್ಲಿ ಬೋರಾನ್ ಎಂಬ ಖನಿಜ ಸಮೃದ್ದವಾಗಿದ್ದು ಇದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾಗೂ ಮಹಿಳೆಯರಲ್ಲಿ ಈಸ್ಟ್ರೋಜೆನ್ ರಸದೂತಗಳ ಪ್ರಮಾಣ ಹೆಚ್ಚಿಸಲು ನೆರವಾಗುತ್ತದೆ ಹಾಗೂ ಈ ಮೂಲಕ ಗರಿಷ್ಟ ಭಾವಾವೇಶವನ್ನು ಪಡೆಯಲು ನೆರವಾಗುತ್ತದೆ.

ಸುಹಾಗ್ ರಾತ್ ದಿನ ಹಾಲು ಕುಡಿಯುವುದರ ಮಹತ್ವ

ತಾಜಾ ಪುದಿನಾ ಎಲೆಗಳು

ತಾಜಾ ಪುದಿನಾ ಎಲೆಗಳು

ಈ ಪಟ್ಟಿಯಲ್ಲಿ ಕಡೆಯದಾಗಿ ಬರುವ ಪುದಿನಾ ಎಲೆಗಳು ಸಹಾ ಪ್ರಸ್ತದ ಕ್ಷಣಗಳನ್ನು ಪರಿಪೂರ್ಣವಾಗಿ ಅನುಭವಿಸಲು ನೆರವಾಗುವ ಪೋಷಕಾಂಶಗಳನ್ನು ಹೊಂದಿವೆ. ಇದರಲ್ಲಿ ಅತಿ ಹೆಚ್ಚಿನ ವಿಟಮಿನ್ನುಗಳಿರುವುದು ಮಾತ್ರವಲ್ಲ, ಇದರ ರುಚಿ ಹಾಗೂ ಪರಿಮಳವೂ ನವದಂಪತಿಗಳ ನಡುವಣ ಪ್ರೇಮವನ್ನು ಹೆಚ್ಚಿಸಲು ಪರೋಕ್ಷವಾಗಿ ನೆರವಾಗಬಹುದು. ಬಾಯಿಯ ದುರ್ವಾಸನೆಯನ್ನು ಇಲ್ಲವಾಗಿಸುವ ಹಾಗೂ ಈ ಮೂಲಕ ಪರಸ್ಪರರ ಚುಂಬನವನ್ನು ನಿರಾಕರಿಸಲು ಸಾಧ್ಯವೇ ಇಲ್ಲದಂತಾಗಿಸಿ ಇಬ್ಬರ ನಡುವಣ ಭಾವೋದ್ರಿಕ್ತ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ಪ್ರಸ್ತದ ರಾತ್ರಿ ಪವಡಿಸುವ ಮುನ್ನ ಕೊಂಚ ಪುದಿನಾ ಎಲೆಗಳನ್ನು ಹಸಿಯಾಗಿ ಅಗಿದು ನುಂಗುವ ಮೂಲಕ ದೈಹಿಕವಾಗಿಯೂ, ಮಾನಸಿಕವಾಗಿಯೂ ನವದಾಂಪತ್ಯದ ಪ್ರಥಮ ಕ್ಷಣಗಳನ್ನು ಜೀವನದ ಸ್ಮರಣೀಯ ಕ್ಷಣಗಳಾಗಿಸಲು ಸಾಧ್ಯವಾಗುತ್ತದೆ.

ತಾಜಾ ಪುದಿನಾ ಎಲೆಗಳು

ತಾಜಾ ಪುದಿನಾ ಎಲೆಗಳು

ಒಂದು ವೇಳೆ ಶೀಘ್ರದಲ್ಲಿಯೇ ನೀವು ವಿವಾಹಬಂಧನಕ್ಕೆ ಒಳಗಾಗುವವರಿದ್ದರೆ ಈ ಮಾಹಿತಿ ನಿಮಗೆ ಖಂಡಿತವಾಗಿಯೂ ನೆರವಿಗೆ ಬರಲಿದೆ. ಈ ಎಲ್ಲಾ ವಿಧಾನಗಳು ಸುರಕ್ಷಿತ ಹಾಗೂ ನೂರಾರು ವರ್ಷಗಳಿಂದ ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿರುವ ನೈಸರ್ಗಿಕ ಕಾಮೋತ್ತೇಜಕ ಆಹಾರಗಳಾಗಿವೆ. ಹಾಗಾಗಿ ನಿಮಗೆ ಸೂಕ್ತವಾದುದನ್ನು ಆರಿಸಿಕೊಳ್ಳಲು ಸರ್ವಥಾ ಹಿಂದೇಟು ಹಾಕದಿರಿ. ಪ್ರಸ್ತದ ರಾತ್ರಿಯನ್ನು ಜೀವಮಾನವಿಡೀ ನೆನಪಿನಲ್ಲಿರಿಸುವಂತಾಗಿಸಲು ಈ ಆಹಾರಗಳು ಖಂಡಿತವಾಗಿಯೂ ನೆರವಾಗುತ್ತವೆ.

For Quick Alerts
ALLOW NOTIFICATIONS
For Daily Alerts

    English summary

    Natural and healthy Foods to Spice Up Your First Night

    Are you wondering how you can make the most of your much awaited wedding night? Or perhaps you are getting worried and tensed about how to ignite the passion with your newlywed and keep the fire burning on the bed? Don’t worry! Here is a quick walk-through of everything you need to know about the top 6 super effective food items that will surely help you spice up your first night.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more