For Quick Alerts
ALLOW NOTIFICATIONS  
For Daily Alerts

ಸಕ್ಸ್ ವಿಚಾರದಲ್ಲಿರುವ ಕಟ್ಟುಕಥೆಗಳು! ಈ ಸುಳ್ಳುಗಳನ್ನು ಎಂದೂ ನಂಬದಿರಿ!

|

ಭಾರತದಲ್ಲಿ ಲೈಂಗಿಕ ವಿಚಾರದ ಬಗ್ಗೆ ಮಾತನಾಡಿದರೆ ಆಗ ಆತನನ್ನು ಓರೆಗಣ್ಣಿನಿಂದ ನೋಡುವವರ ಸಂಖ್ಯೆಗೇನು ಕಡಿಮೆಯಿಲ್ಲ. ಏನು ಗೊತ್ತಿಲ್ಲದೆ ಕೆಲವು ಮಂದಿ ಸೆಕ್ಸ್ ವಿಚಾರದಲ್ಲಿ ಬಹಳಷ್ಟು ಉಪನ್ಯಾಸ ಕೂಡ ನೀಡುವರು. ಇಂತಹ ಜನರಿಂದಾಗಿಯೇ ಸಮಾಜದಲ್ಲಿ ಲೈಂಗಿಕ ವಿಚಾರದ ಬಗ್ಗೆ ಕೆಲವೊಂದು ಮಿಥ್ಯಗಳು ಹರಡಿವೆ. ಇದನ್ನು ಕೆಲವರು ಸತ್ಯವೆಂದೇ ತಿಳಿದುಕೊಂಡಿರುವರು. ಇಂದಿನ 4 ಜಿ ಯುಗದಲ್ಲಿ ಲೈಂಗಿಕ ವಿಚಾರದ ಬಗ್ಗೆ ನಾವು ತುಂಬಾ ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡಿದ್ದೇವೆ.

ಇಂಟರ್ನೆಟ್ ನಲ್ಲಿ ಜಾಲಾಡುವಾಗ ಸಿಗುವಂತಹ ಕೆಲವು ವಿಡಿಯೋಗಳು ಕೂಡ ಇದಕ್ಕೆ ಕಾರಣ. ಯಾಕೆಂದರೆ ಯಾವುದೇ ಜ್ಞಾನವಿಲ್ಲದವರು ಕೂಡ ಕೆಲವು ಕಮೆಂಟ್ ಹಾಗೂ ಲೈಕ್ ಗೋಸ್ಕರ ಇನ್ನಿಲ್ಲದ ಸುಳ್ಳು ವಿಚಾರಗಳನ್ನು ಹರಡುವರು. ಆದರೆ ಇಂದಿನ ದಿನಗಳಲ್ಲಿ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿರುವುದು ಒಳ್ಳೆಯ ವಿಚಾರ. ಸುಳ್ಳುಗಳು ಯಾವಾಗಲೂ ಸಮಾಜಕ್ಕೆ ಒಳ್ಳೆಯದಲ್ಲ. ಇದರಿಂದ ಪ್ರಗತಿ ಕೂಡ ಕುಂಠಿತವಾಗುವುದು. ಲೈಂಗಿಕ ವಿಚಾರದಲ್ಲೂ ಇಂತಹ ಮಿಥ್ಯಗಳು ಸಮಾಜದಲ್ಲಿ ಹರಡುತ್ತಿದೆ. ಇದು ಯಾವುದೆಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ....

ಶೌಚಾಲಯದ ಸೀಟ್ ನಿಂದ ಲೈಂಗಿಕ ರೋಗ ಬರಬಹುದು!

ಶೌಚಾಲಯದ ಸೀಟ್ ನಿಂದ ಲೈಂಗಿಕ ರೋಗ ಬರಬಹುದು!

ನೀವು ಶೌಚಾಲಯಕ್ಕೆ ಹೋದ ಕೂಡಲೇ ಅದರ ಸೀಟಿಗೆ ಹೋಗಿ ನೀರು ಹಾಕಿ ಒರೆಸುವುದನ್ನು ನಿಲ್ಲಿಸಿ. ಯಾಕೆಂದರೆ ಇದರಿಂದ ಎಸ್ ಟಿಐ (ಲೈಂಗಿಕ ರೋಗ) ಹಬ್ಬುವುದಿಲ್ಲ. ಸೋಂಕು ಬಾಧಿತ ಚರ್ಮದೊಂದಿಗೆ ಸಂಪರ್ಕಕ್ಕೆ ಬಂದರೆ ಇದು ಹರಡುವುದು. ಆದರೆ ಶೌಚಾಲಯದ ಸೀಟಿನಿಂದಲ್ಲ. ಎಸ್ ಟಿಐ ಉಂಟುಮಾಡುವಂತಹ ರೋಗಕಾರಕಗಳು ಮಾನವ ದೇಹದ ಹೊರಗಡೆ ಹೆಚ್ಚು ಹೊತ್ತು ಬದುಕುಳಿಯಲಾರವು. ಇದರಿಂದ ಟಾಯ್ಲೆಟ್ ಸೀಟಿನಿಂದ ನಿಮಗೆ ಎಸ್ ಟಿಐ ಬರಲ್ಲ.

ಮುಖ ಮೈಥುನದಿಂದ ಎಸ್ ಟಿಐ ಬರಬಹುದು!

ಮುಖ ಮೈಥುನದಿಂದ ಎಸ್ ಟಿಐ ಬರಬಹುದು!

ಗುದ ಸೆಕ್ಸ್ ನಿಂದ ಬರುವಷ್ಟು ಲೈಂಗಿಕ ರೋಗವು ಮುಖ ಮೈಥುನದಿಂದ ಬರುವಂತಹ ಸಾಧ್ಯತೆಯು ತುಂಬಾ ಕಡಿಮೆ. ಕೆಲವೊಂದು ಲೈಂಗಿಕ ರೋಗಗಳಾಗಿರುವ ಸಿಫಿಲಿಸ್, ಗೊನೊರಿಯಾ, ಹರ್ಪಿಸ್ ಮತ್ತು ಕ್ಲಮೈಡಿಯವು ಮುಖ ಮೈಥುನದಿಂದ ಬರಬಹುದು. ಮುಖ ಮೈಥುನ ವೇಳೆ ಲೈಂಗಿಕ ರೋಗ ಬರುವುದು ಅಥವ ಹರಡುವುದನ್ನು ತಪ್ಪಿಸಲು ಕಾಂಡೋಮ್ ಅಥವಾ ದಂತಕಟ್ಟು ಬಳಸಬಹುದು.

ಗುದ ಸೆಕ್ಸ್ ನಿಂದ ಮೂಲವ್ಯಾಧಿ ಬರುವುದು

ಗುದ ಸೆಕ್ಸ್ ನಿಂದ ಮೂಲವ್ಯಾಧಿ ಬರುವುದು

ಗುದನಾಳದಲ್ಲಿರುವಂತಹ ರಕ್ತನಾಳಗಳಿಗೆ ಹೆಚ್ಚಿನ ಒತ್ತಡ ಬೀಳುವ ಪರಿಣಾಮವೇ ಮೂಲವ್ಯಾಧಿ ಉಂಟಾಗುವುದು. ಒತ್ತಡದಿಂದಾಗಿ ರಕ್ತನಾಳಗಳು ಊದಿಕೊಂಡು, ನೋವು ಕಾಣಿಸಿಕೊಳ್ಳುವುದು. ಅದರಲ್ಲೂ ನೀವು ಮಲವಿಸರ್ಜನೆಗೆ ಕುಳಿತಾಗ. ಕರುಳಿನಲ್ಲಿ ತುಂಬಾ ಪರಿಶ್ರಮ, ಮಲಬದ್ಧತೆ ಮತ್ತು ಗುದ ಸೋಂಕು ಮೂಲವ್ಯಾಧಿ ಉಂಟಾಗಲು ಕೆಲವು ಪ್ರಮುಖ ಕಾರಣಗಳು. ಗುದ ಸೆಕ್ಸ್ ನಿಂದ ಮೂಲವ್ಯಾಧಿ ಬರುವುದಿಲ್ಲ. ನೀವು ಈ ಕ್ರಿಯೆಯಲ್ಲಿ ತೊಡಗುವ ಮೊದಲು ಗುದವು ಪೂರ್ಣವಾಗಿ ಆರಾಮವಾಗಿರಲಿ. ಈಗಾಗಲೇ ಮೂಲವ್ಯಾಧಿ ಇರುವಂತವರಲ್ಲಿ ಗುದ ಸೆಕ್ಸ್ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವುದು. ಗುದ ಆಟ ಅಥವಾ ಜನನೇಂದ್ರಿಯ ಮಸಾಜ್ ಬಗ್ಗೆ ಆಸಕ್ತಿಯಿದೆಯಾ? ಇದು ನಿಮಿರು ದೌರ್ಬಲ್ಯ ಮತ್ತು ನೋವಿನ ಸ್ಖಲನಕ್ಕೆ ಪರಿಹಾರ ನೀಡುವುದು. ಇದು ನಿಮ್ಮ ಮೂತ್ರ ಹೊರಹೋಗುವುದನ್ನು ಉತ್ತಮಪಡಿಸುವುದು.

ಋತುಚಕ್ರದ ವೇಳೆ ಗರ್ಭಧರಿಸಲು ಸಾಧ್ಯವಿಲ್ಲ

ಋತುಚಕ್ರದ ವೇಳೆ ಗರ್ಭಧರಿಸಲು ಸಾಧ್ಯವಿಲ್ಲ

ಋತುಚಕ್ರದ ವೇಳೆ ಗರ್ಭಧರಿಸಲು ಸಾಧ್ಯವೇ ಇಲ್ಲ. ಅಂಡೋತ್ಪತ್ತಿ ವೇಳೆ ಗರ್ಭಧರಿಸುವಂತಹ ಸಾಧ್ಯತೆಯು ಹೆಚ್ಚಾಗಿರುವುದು ಮತ್ತು ಋತುಚಕ್ರದ ಆವರ್ತನ ವೇಳೆ ಸಣ್ಣ ಮೊಟ್ಟೆಯು ಅಂಡಾಶಯದಿಂದ ನಿಮ್ಮ ಫಾಲೋಪಿಯನ್ ಟ್ಯೂಬ್ ಗೆ ಪ್ರಯಾಣಿಸುವುದು. ಕಡಿಮೆ ಅವಧಿ ಮತ್ತು ಅಸಾಮಾನ್ಯ ಋತುಚಕ್ರವಾಗುವಂತಹವರಲ್ಲಿ ಋತುಚಕ್ರದ ವೇಳೆ ಮೊಟ್ಟೆಯು ಉಳಿದುಕೊಂಡಿರುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಮೊಟ್ಟೆಯು ದೇಹದಲ್ಲಿ ಕೆಲವು ದಿನಗಳ ಕಾಲ ಉಳಿಯಬಹುದು. ಋತುಚಕ್ರದ ಎರಡು ವಾರಗಳ ಮೊದಲು ಎಲ್ಲಾ ಮಹಿಳೆಯರು ಅಂಡೋತ್ಪತ್ತಿ ಮಾಡಲ್ಲ. ಕೆಲವರ ಅಂಡೋತ್ಪತ್ತಿ ಸಮಯವು ಅವರ ಋತುಚಕ್ರಕ್ಕೆ ತುಂಬಾ ಸಮೀಪವಾಗಿರುವುದು.

ಲೈಂಗಿಕ ಕ್ರಿಯೆ ಬಳಿಕ ಸ್ಪ್ರೇ ಮಾಡುವುದು ಅಥವಾ ತೊಳೆಯುವುದು

ಲೈಂಗಿಕ ಕ್ರಿಯೆ ಬಳಿಕ ಸ್ಪ್ರೇ ಮಾಡುವುದು ಅಥವಾ ತೊಳೆಯುವುದು

ಯೋನಿಯು ಸ್ವಸ್ವಚ್ಛಗೊಳಿಸುವಂತಹ ಗುಣ ಹೊಂದಿದೆ ಮತ್ತು ಇದಕ್ಕೆ ಯಾವುದೇ ರೀತಿಯ ಸೋಪ್ ಗಳು ಬೇಕಾಗಿಲ್ಲ. ಸೋಪ್ ಹಾಕಿ ನೀವು ತೊಳೆದರೆ ಆಗ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗುವುದು. ಇದರಿಂದ ಬ್ಯಾಕ್ಟೀರಿಯಾದ ಸಮತೋಲನ ಕೆಡಬಹುದು ಮತ್ತು ಯೋನಿಯ ಸಾಮಾನ್ಯ ಪಿಎಚ್ ಮಟ್ಟಕ್ಕೆ ತೊಂದರೆಯಾಗಬಹುದು. ಯೋನಿಯಲ್ಲಿ ಒಳ್ಳೆಯ ಹಾಗೂ ಕೆಟ್ಟ ಬ್ಯಾಕ್ಟೀರಿಯಾಗಳು ಇವೆ. ಇದರಿಂದ ಸ್ಪ್ರೇ ಅಥವಾ ಬೇರೆ ವಿಧಾನದಿಂದ ತೊಳೆದರೆ ಹಾನಿಯಾಗಬಹುದು.

Most Read: ಪುರುಷರ ಶಿಶ್ನದಲ್ಲಿ ಕಾಣಿಸುವ ಖತರ್ನಾಕ್ ಕಾಯಿಲೆ ಇದು!

ಹಸ್ತಮೈಥುನದಿಂದ ಪರಾಕಾಷ್ಠೆ ತಲುಪಲು ಕಷ್ಟವಾಗಬಹುದು

ಹಸ್ತಮೈಥುನದಿಂದ ಪರಾಕಾಷ್ಠೆ ತಲುಪಲು ಕಷ್ಟವಾಗಬಹುದು

ನಿಯಮಿತವಾಗಿ ಹಸ್ತಮೈಥುನ ಮಾಡಿಕೊಂಡರೆ ನಿಮಗೆ ಆ ಭಾಗದ ಬಗ್ಗೆ ಸೂಕ್ಷ್ಮತೆ ಉಂಟಾಗುವುದು ಮತ್ತು ಇದರಿಂದ ಲೈಂಗಿಕ ಪರಾಕಾಷ್ಠೆ ತಲುಪಲು ಕಷ್ಟವಾಗಬಹುದು. ಇದು ನಿಜವಾಗಿಯು ತಪ್ಪು. ಯಾಕೆಂದರೆ ನಿಯಮಿತವಾಗಿ ಹಸ್ತಮೈಥುನ ಮಾಡಿಕೊಂಡರೆ ಅದರಿಂದ ನೀವು ಲೈಂಗಿಕ ಜೀವನವನ್ನು ಸುಧಾರಿಸಬಹುದು. ಹಾಸಿಗೆಯಲ್ಲಿ ನಿಮಗೆ ಏನು ಬೇಕು ಮತ್ತು ಬೇಡ ಎನ್ನುವುದನ್ನು ನಿರ್ಧರಿಸಬಹುದು. ಇದು ಕೆಟ್ಟ ವಿಚಾರ ಹೇಗೆ ಆಗುವುದು?

Most Read: ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು!

ಮಹಿಳೆಯರು ಸೆಕ್ಸ್ ನಲ್ಲಿ ಭಾಗಿಯಾಗುವುದಕ್ಕೆ ಅನುಗುಣವಾಗಿ ಯೋನಿ ಬಿಗಿ ಅಥವಾ ಸಡಿಲ

ಮಹಿಳೆಯರು ಸೆಕ್ಸ್ ನಲ್ಲಿ ಭಾಗಿಯಾಗುವುದಕ್ಕೆ ಅನುಗುಣವಾಗಿ ಯೋನಿ ಬಿಗಿ ಅಥವಾ ಸಡಿಲ

ಈ ಒಂದು ಸುಳ್ಳು ತುಂಬಾ ಸಾಮಾನ್ಯವಾಗಿದೆ. ಇದು ನಿಜವಾಗಿಯೂ ದೊಡ್ಡ ಮಟ್ಟದ ಸುಳ್ಳು. ಯೋನಿಯು ಒಂದು ಸ್ನಾಯುವಿದ್ದಂತೆ, ಇದು ಇಲಾಸ್ಟಿಕ್ ಬ್ಯಾಂಡ್ ಇದ್ದಂತೆ. ಹಿಗ್ಗುವ ಹಾಗೂ ಕುಗ್ಗುವ ಗುಣ ಹೊಂದಿದೆ. ಮಹಿಳೆಯರು ಕಾಮೋದ್ರೇಕಗೊಂಡಾಗ ಯೋನಿಯ ಗೋಡೆಗಳು ಮೃಧು ಹಾಗೂ ಲಂಬವಾಗುವುದು. ಇದರಿಂದ ನುಗ್ಗುವಿಕೆ ಸುಲಭವಾಗುವುದು. ಭೀತಿ ಅಥವಾ ಮನಸ್ಸಿಲ್ಲದೆ ಇದ್ದರೆ ಆಗ ಇದು ಕುಗ್ಗುವುದು. ಇದರಿಂದ ನುಗ್ಗುವಿಕೆ ಕಠಿಣವಾಗುವುದು. ಲೈಂಗಿಕ ಚಟುವಟಿಕೆಯಲ್ಲಿ ಮಹಿಳೆಯರು ಅತಿಯಾಗಿ ತೊಡಗಿಕೊಂಡರೆ ಮಾತ್ರ ಯೋನಿ ಸಡಿಲವಾಗಿರುವುದು ಎನ್ನುವ ಮಿಥ್ಯವು ಮಹಿಳೆಯರನ್ನು ಅವಮಾನಗೊಳಿಸಲು ನಿರ್ಮಿಸಿರುವುದು. ನೀವು ಎಷ್ಟು ಸೆಕ್ಸ್ ನಲ್ಲಿ ಭಾಗಿಯಾಗುತ್ತಿರಿ ಎನ್ನುವುದು ಯಾವುದೇ ಪರಿಣಾಮ ಬೀರಲ್ಲ. ವಯಸ್ಸು ಮತ್ತು ಮಗುವಿನ ಜನ್ಮ ನೀಡಿದ ಬಳಿಕ ಯೋನಿ ಸಡಿಲವಾಗುವುದು. ನುಗ್ಗುವಿಕೆಯು ಯೋನಿಯು ಶಾಶ್ವತವಾಗಿ ಹಿಗ್ಗುವಂತೆ ಮಾಡುವುದಿಲ್ಲ.

English summary

myths about sexually transmitted infections

Some of them you might know, some of them might shock you, but what is important is that these things are spoken about openly. Ignorance really is not bliss when it comes to your sexual health. These myths are harmful to our progression toward a more sex-positive and informed society. Here are sexual health myth that should no longer be allowed to circulate.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more