For Quick Alerts
ALLOW NOTIFICATIONS  
For Daily Alerts

ಪುರುಷರ ಗುಪ್ತಾಂಗ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸರಳ ಟಿಪ್ಸ್

|

ಪುರುಷರ ದೇಹದಲ್ಲಿ ಶಿಶ್ನ ಕೂಡ ಅತೀ ಅಮೂಲ್ಯವಾದ ಅಂಗವಾಗಿದೆ. ಇದು ದೇಹಕ್ಕೆ ಅಮೋಘವಾದ ಸುಖ ನೀಡುವುದು ಮಾತ್ರವಲ್ಲದೆ ಮನುಷ್ಯನ ಸಂತತಿಯು ಬೆಳೆಯುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುವುದು. ಇದು ಪುರುಷರ ಜೀವನ ಸುಂದರವಾಗಿಸುವುದು ಮತ್ತು ಇದರಿಂದಾಗಿ ಇದಕ್ಕೆ ಹೆಚ್ಚಿನ ಕಾಳಜಿ ಹಾಗೂ ಆರೈಕೆ ಅತೀ ಅಗತ್ಯ. ಸೂರ್ಯನು ಯಾವತ್ತು ಮೂಡದ ಜಾಗದಲ್ಲಿರುವಂತಹ ಶಿಶ್ನದ ಸುತ್ತಲು ಕೂದಲು ಮತ್ತು ಅತಿಯಾಗಿ ಪ್ರತಿಕ್ರಿಯಿಸುವಂತಹ ಬೆವರಿನ ಗ್ರಂಥಿಗಳು ಇವೆ.

ಪುರುಷರ ಜನನೇಂದ್ರೀಯದ ಭಾಗವು ಯಾವಾಗಲೂ ತೇವ ಮತ್ತು ಕತ್ತಲೆ ಜಾಗದಲ್ಲಿ ಇರುವುದು. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರೀಯಗಳಿಗೆ ಒಂದು ರೀತಿಯಲ್ಲಿ ಓಯಾಸಿಸ್ ಇದ್ದಂತೆ. ಸರಿಯಾದ ಸ್ವಚ್ಛತಾ ಕ್ರಮ ತೆಗೆದುಕೊಳ್ಳದೇ ಇದ್ದರೆ ಆಗ ಸಮಸ್ಯೆ ಎದರಿಸಬೇಕಾಗುತ್ತದೆ.

ನಿಮ್ಮ ತೊಡೆಯು ತುರಿಸುತ್ತಾ ಇದ್ದರೆ ಅಥವಾ ಸಂಗಾತಿಯು ಜನನೇಂದ್ರೀಯದ ಭಾಗ ನೋಡಲು ನಿರಾಕರಿಸಿದರೆ ಆಗ ನೀವು ಕೂದಲು ಕತ್ತರಿಸಿಕೊಳ್ಳುವ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಈ ಲೇಖನದಲ್ಲಿ ಕೆಲವು ಸ್ವಚ್ಛತಾ ಕ್ರಮಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದೆ. ಇದನ್ನು ತಿಳಿದು ನೀವು ದೇಹದ ಅತ್ಯಾಮೂಲ್ಯ ಭಾಗವನ್ನು ಆರೋಗ್ಯ ಹಾಗೂ ಸ್ವಚ್ಛವಾಗಿಡಿ....

ಕಾಡು ನಾಶ ಮಾಡಿ!

ಕಾಡು ನಾಶ ಮಾಡಿ!

ಜನನೇಂದ್ರೀಯ ಭಾಗದಲ್ಲಿ ತುಂಬಾ ಕೂದಲು ಇದ್ದರೆ ಆಗ ಬೆವರು ಇದರೊಂದಿಗೆ ಬೆರೆತುಕೊಂಡು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರೀಯಗಳು ಬೆಳೆಯಲು ಇದು ನೆರವಾಗುವುದು. ಈ ಸೂಕ್ಷ್ಮಾಣು ಜೀವಿಗಳು ಈ ಭಾಗದಲ್ಲಿ ನೆಲೆ ನಿಲ್ಲದಂತೆ ಮಾಡಲು ನೀವು ಕೂದಲು ಕತ್ತರಿಸಿ, ವ್ಯಾಕ್ಸ್ ಮಾಡಿ ಅಥವಾ ಶೇವ್ ಮಾಡಿಕೊಳ್ಳಿ.

ಸೌಮ್ಯವಾಗಿರಿ

ಸೌಮ್ಯವಾಗಿರಿ

ಈ ಭಾಗದಲ್ಲಿ ಚರ್ಮವು ತುಂಬಾ ನಯ ಹಾಗೂ ಸೂಕ್ಷ್ಮವಾಗಿರುವುದು. ನೀವು ತುಂಬಾ ಸೌಮ್ಯವಾಗಿ ಜನನೇಂದ್ರೀಯಗಳನ್ನು ತೊಳೆಯಿರಿ. ಇದರಿಂದ ಕಿರಿಕಿರಿ ತಪ್ಪುವುದು. ಸ್ವಚ್ಛವಾಗಿರುವ ಟವೆಲ್ ಅಥವಾ ಶಾವರ್ ಪೌಫ್ ಬಳಸಿಕೊಂಡು ಧೂಳು, ಬೆವರು ಮತ್ತು ಬ್ಯಾಕ್ಟೀರಿಯಾದಿಂದ ಆಗುವ ವಾಸನೆ ತೆಗೆಯಿರಿ.

ಸೂಕ್ತ ಉತ್ಪನ್ನ

ಸೂಕ್ತ ಉತ್ಪನ್ನ

ಜನನೇಂದ್ರೀಯಗಳನ್ನು ತೊಳೆಯಲು ತುಂಬಾ ಹಗುರ ಸೋಪು ಅಥವಾ ಶಾವರ್ ಜೆಲ್ ಬಳಸಿ. ಪುರುಷರ ಚರ್ಮಕ್ಕೆ ಹೊಂದಿಕೆಯಾಗುವ ಉತ್ಪನ್ನ ಬಳಸಿ ಮತ್ತು ಇದರಲ್ಲಿ ಗಡುಸಾದ ರಾಸಾಯನಿಕಗಳಿದ್ದರೆ ಅದರಿಂದ ಚರ್ಮವು ಒಣಗಿ ಕಿರಿಕಿರಿ ಉಂಟು ಮಾಡುವುದು.

ಮುಂಭಾಗದ ಚರ್ಮ ಸ್ವಚ್ಛವಾಗಿಡಿ

ಮುಂಭಾಗದ ಚರ್ಮ ಸ್ವಚ್ಛವಾಗಿಡಿ

ಜನನೇಂದ್ರೀಯ ಸ್ವಚ್ಛಗೊಳಿಸುವ ವೇಳೆ ಪುರುಷರು ಈ ಭಾಗದ ಬಗ್ಗೆ ಹೆಚ್ಚಿನ ಶ್ರಮ ವಹಿಸಬೇಕು. ಶಿಶ್ನ ತೊಳೆಯುವ ವೇಳೆ ಮುಂದೊಗಲನ್ನು ಹಿಂದಕ್ಕೆ ಎಳೆದುಕೊಳ್ಳಿ. ಇದರಿಂದ ಈ ಭಾಗದಲ್ಲಿ ಜಮೆಯಾಗಿರುವ ಸ್ಮೆಗ್ಮಾ ನಿವಾರಣೆ ಮಾಡಿ ವಾಸನೆ ಕಡಿಮೆ ಮಾಡಬಹುದು.

ಸರಿಯಾಗಿ ತೊಳೆಯಿರಿ

ಸರಿಯಾಗಿ ತೊಳೆಯಿರಿ

ನೀವು ಬಿಸಿ ನೀರಿನಿಂದ ತೊಳೆಯಿರಿ ಮತ್ತು ಎಲ್ಲಾ ರೀತಿಯ ಸೋಪು ಚರ್ಮವನ್ನು ಬಿಟ್ಟು ಹೋಗುವಂತೆ ಸರಿಯಾಗಿ ತೊಳೆಯಿರಿ. ಸೋಪ್ ನ ನೀರು ಬೆವರು ಮತ್ತು ಬ್ಯಾಕ್ಟೀರಿಯಾ ಜತೆಗೆ ಸೇರಿದಾಗ ಕೆಟ್ಟ ವಾಸನೆ ಮತ್ತು ಸೋಂಕು ಉಂಟಾಗುವುದು. ಇದರಿಂದ ಸರಿಯಾಗಿ ತೊಳೆಯಿರಿ.

ಸರಿಯಾಗಿ ಒಣಗಿಸಿ

ಸರಿಯಾಗಿ ಒಣಗಿಸಿ

ಸ್ವಚ್ಛವಾಗಿರುವಂತಹ ಟವೆಲ್ ಬಳಸಿಕೊಂಡು ತೊಡೆಯ ಭಾಗವನ್ನು ಸರಿಯಾಗಿ ಒರೆಸಿಕೊಳ್ಳಿ. ಇದರಿಂದ ತೇವಾಂಶ ನಿಲ್ಲುವುದು ಕಡಿಮೆಯಾಗುವುದು ಮತ್ತು ಸೂಕ್ಷ್ಮಾಣು ಜೀವಿಗಳು ಬೆಳೆಯದಂತೆ ಮಾಡುವುದು.

ಪುರುಷರ ಸ್ವಚ್ಛತೆಯ ಉತ್ಪನ್ನಗಳನ್ನು ಬಳಸಿ

ಪುರುಷರ ಸ್ವಚ್ಛತೆಯ ಉತ್ಪನ್ನಗಳನ್ನು ಬಳಸಿ

ಸಂಪೂರ್ಣವಾಗಿ ಒಣಗಿದ ಬಳಿಕ ಪುರುಷರ ಜನನೇಂದ್ರೀಯದ ಭಾಗಗಳಿಗೆ ಪುರುಷರ ಸ್ವಚ್ಛತೆಯ ಉತ್ಪನ್ನಗಳನ್ನು ಬಳಸಿ. ಇದರಿಂದ ಆ ಭಾಗವು ತಾಜಾ ಹಾಗೂ ಶುದ್ಧವಾಗಿರುವುದು. ಹಲವಾರು ರೀತಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರೋಧಿ ಉತ್ಪನ್ನಗಳನ್ನು ಬಳಸಿ. ಪೌಡರ್ ಅಥವಾ ಲೋಷನ್ ಬಳಸಬೇಡಿ. ಇದರಿಂದ ನಿಮಗೆ ಕಿರಿಕಿರಿಯಾಗಬಹುದು.

ಸ್ವಚ್ಛವಾಗಿರುವ ಒಳ ಉಡುಪು ಬಳಸಿ

ಸ್ವಚ್ಛವಾಗಿರುವ ಒಳ ಉಡುಪು ಬಳಸಿ

ಕೊಳಕಾಗಿರುವ ಒಳಉಡುಪನ್ನು ಧರಿಸುತ್ತೀರಾದರೆ ನೀವು ಮಾಡಿರುವ ಸ್ವಚ್ಛತೆ ಮತ್ತು ಸ್ಕ್ರಬ್ ಯಾವುದೇ ಪ್ರಯೋಜನಕ್ಕೆ ಬರಲ್ಲ. ಹತ್ತಿಯಿಂದ ತಯಾರಿಸಿರುವಂತಹ ಒಳ ಉಡುಪನ್ನು ಧರಿಸಿಕೊಳ್ಳಿ. ಇದರಿಂದ ತೇವಾಂಶವು ದೂರವಿರುವುದು.ನಿಮ್ಮ ದೇಹದ ಈ ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಇದಕ್ಕೆ ನೀವು ತಯಾರಾಗಿ. ಇದನ್ನು ಪಾಲಿಸಿಕೊಂಡು ಹೋದರೆ ನಿಮ್ಮ ಅಮೂಲ್ಯ ಅಂಗವು ನಿಮಗೆ ಧನ್ಯವಾದ ಹೇಳುವುದು. ಅದೇ ರೀತಿ ನಿಮ್ಮ ಸಂಗಾತಿಯು....!

ಮಿಲನದ ಬಳಿಕ ಸ್ವಚ್ಛತೆಗೆ ಆದ್ಯತೆ ನೀಡಿ

ಮಿಲನದ ಬಳಿಕ ಸ್ವಚ್ಛತೆಗೆ ಆದ್ಯತೆ ನೀಡಿ

ಸಾಮಾನ್ಯವಾಗಿ ಮಿಲನಕ್ರಿಯೆಯಲ್ಲಿ ಗಲೀಜಾಗುವುದು ಅನಿವಾರ್ಯ. ಆದರೆ ಮಿಲನದ ಬಳಿಕ ಇಬ್ಬರಿಂದಲೂ ಆದ ಮಲಿನವನ್ನು ಸ್ವಚ್ಛಗೊಳಿಸುವುದು ಹಾಗೂ ಮಲಗಿದ ಸ್ಥಳ ಹಾಗೂ ಆಸುಪಾಸಿನ ಸ್ಥಳಗಳನ್ನು ಮೊದಲಿನಂತೆಯೇ ಸ್ವಚ್ಛ ಗೊಳಿಸುವುದು ಮುಖ್ಯವಾಗಿದೆ. ಸಾಮಾನ್ಯವಾಗಿ ಸಂಗಾತಿಯ ಮನ ಗೆಲ್ಲಲು ಮಿಲನಕ್ರಿಯೆಗೂ ಮುನ್ನ ನೀಡುವ ದ್ರವಾಹಾರ ಮೊದಲಾದವುಗಳು ಚೆಲ್ಲಿದ ಬಳಿಕ ಸ್ವಚ್ಛಗೊಳಿಸುವಷ್ಟೇ ಕಾಳಜಿಯನ್ನು ಮಿಲನಕ್ರಿಯೆಯ ಬಳಿಕ ಎದುರಾಗುವ

ಪರಿಸ್ಥಿತಿಯನ್ನು ಸ್ವಚ್ಛಗೊಳಿಸಲೂ ಬಳಸಬೇಕು. ಹಾಗಾಗಿ, ಈ ಪರಿಸ್ಥಿತಿಯನ್ನು ಮುಂಗಂಡು ಇದನ್ನು ಸ್ವಚ್ಛಗೊಳಿಸುವ ಪರಿಕರಗಳು ಕೈಗೆಟುಕುವಂತಿರಿಸುವುದು ಜಾಣತನದ ಕ್ರಮವಾಗಿದೆ. ಇದಕ್ಕಾಗಿ ಟಿಶ್ಯೂ ಕಾಗದ, ವಿಸರ್ಜಿಸಬಹುದಾದ ಬಟ್ಟೆಗಳು, ಸ್ವಚ್ಛಗೊಳಿಸುವ ಮಾರ್ಜಕ ಮೊದಲಾದ ಇತರ ವಸ್ತುಗಳು ಕೈಗೆಟುವಂತಿದ್ದು ಮಿಲನ ಕ್ರಿಯೆಯ ಬಳಿಕ ಸ್ವಚ್ಛಗೊಳಿಸುವತ್ತ ಹೆಚ್ಚಿನ ಕಾಳಜಿ ವಹಿಸಿದರೆ ಈ ಕ್ರಿಯೆಯನ್ನು ನಿಮ್ಮ ಸಂಗಾತಿಯೂ ಮೆಚ್ಚಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ತಳೆಯಲು ಸಾಧ್ಯವಾಗುತ್ತದೆ.

ದಿನಕ್ಕೊಂದು ಗ್ಲಾಸ್ ದಾಳಿಂಬೆ ರಸ ಸೇವಿಸಿ

ದಿನಕ್ಕೊಂದು ಗ್ಲಾಸ್ ದಾಳಿಂಬೆ ರಸ ಸೇವಿಸಿ

ಇದು ಪುರುಷತ್ವ ಹೆಚ್ಚಿಸಲು ಉತ್ತೇಜಕವಾಗಿದೆ. ಶಿಶ್ನಗಳ ವರ್ಧನೆ ಹಾಗೂ ಶಿಶ್ನಕ್ಕೆ ರಕ್ತದ ಹರಿವನ್ನು ಸುಗಮವಾಗಿ ತಲುಪುವಂತೆ ಮಾಡುತ್ತದೆ. ಅಲ್ಲದೆ ಇದು ಶಿಶ್ನದ ಆರೋಗ್ಯ ರಕ್ಷಣೆಗೆ ಸದಾ ಸಿದ್ಧವಾಗಿರುತ್ತದೆ ಎನ್ನಲಾಗುವುದು.

ದಿನಕ್ಕೊಂದು ಸೇಬು ತಿನ್ನಿ

ದಿನಕ್ಕೊಂದು ಸೇಬು ತಿನ್ನಿ

ಸೇಬು ದಿನಕ್ಕೊಂದು ಸೇಬು ತಿಂದರೆ ಅದರಿಂದ ಜನನೇಂದ್ರೀಯ ಆರೋಗ್ಯ ಹಾಗೂ ಸುರಕ್ಷಿತವಾಗಿರುವುದು. ಪುರುಷರಿಗೆ ಇದು ತುಂಬಾ ಒಳ್ಳೆಯ ಆಹಾರವಾಗಿದೆ. ಸೇಬಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಆರೋಗ್ಯಕಾರಿಯಾಗಿ ರಕ್ತವು ಜನನೇಂದ್ರೀಯಗಳಿಗೆ ಸಂಚಾರವಾಗುವಂತೆ ಮಾಡಿ ಕಾಮಾಸಕ್ತಿ ಹೆಚ್ಚಿಸುವುದು. ಇದರಿಂದ ಲೈಂಗಿಕ ಕ್ರಿಯೆ ವೇಳೆ ನಿಮ್ಮ ಪ್ರದರ್ಶನ ಉತ್ತಮವಾಗಿರುವುದು. ಸೇಬಿನಲ್ಲಿ ಕಂಡು ಬರುವಂತಹ ಫ್ಲಾವನಾಯ್ಡ್ ಶಿಶ್ನದ ಒಳಗಡೆ ಮತ್ತು ಸುತ್ತಲು ಗಡ್ಡೆ ಬೆಳೆಯುವುದನ್ನು ತಡೆಯುವುದು.

ಬೀಟ್ ರೂಟ್ ಜ್ಯೂಸ್ ಕುಡಿಯಿರಿ

ಬೀಟ್ ರೂಟ್ ಜ್ಯೂಸ್ ಕುಡಿಯಿರಿ

ಶಿಶ್ನವು ಆರೋಗ್ಯಕಾರಿಯಾಗಿ ಇರಬೇಕೆಂದರೆ ನೀವು ಪ್ರತಿನಿತ್ಯದ ಆಹಾರದಲ್ಲಿ ಬೀಟ್ ರೂಟ್ ನ್ನು ಸಲಾಡ್ ರೂಪದಲ್ಲಿ ತಿನ್ನಿ. ಇದರಲ್ಲಿ ಇರುವಂತಹ ಉನ್ನತ ಮಟ್ಟದ ನೈಟ್ರೇಟ್ ನೈಸರ್ಗಿಕವಾಗಿ ಶಿಶ್ನದ ರಕ್ತನಾಳಗಳನ್ನು ಹಿಗ್ಗಿಸುವಂತಹ ಗುಣ ಹೊಂದಿದೆ. ರಕ್ತನಾಳಗಳು ಹಿಗ್ಗಿದಾಗ ಆಮ್ಲಜನಕವಿರುವ ರಕ್ತವು ಸರಿಯಾಗಿ ಸಂಚಾರವಾಗುವುದು. ಇದರಿಂದ ಕಾಮಾಸಕ್ತಿ ಮತ್ತು ಶಿಶ್ನದ ಆರೋಗ್ಯ ವೃದ್ಧಿಯಾಗುವುದು.

ಕೋಳಿ ಮಾಂಸ ಸೇವಿಸಿ

ಕೋಳಿ ಮಾಂಸ ಸೇವಿಸಿ

ನಿಮ್ಮ ಆಹಾರ ಕ್ರಮಕ್ಕೆ ಕೋಳಿ ಮಾಂಸ ಸೇರಿಸಿದರೆ ಅದರಿಂದ ಹಲವಾರು ಆರೋಗ್ಯ ಲಾಭಗಳು ಇವೆ. ಇದು ಸ್ನಾಯುಗಳು ಬೆಳೆಯಲು, ಕೊಬ್ಬು ವಿಘಟಿಸಲು, ಶಕ್ತಿ ಹೆಚ್ಚಿಸಲು ಇತ್ಯಾದಿಗಳಿಗೆ ನೆರವಾಗುವುದು. ಕೋಳಿಯಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ. ಇದರಲ್ಲಿರುವ ವಿಟಮಿನ್ ಬಿ3 ಶಿಶ್ನಗಳಿಗೆ ರಕ್ತಸಂಚಾರ ಸರಾಗಗೊಳಿಸುವುದು. ಇದರಿಂದ ಜನನೇಂದ್ರೀಯದ ಆರೋಗ್ಯ ಚೆನ್ನಾಗಿರುವುದು ಮತ್ತು ಕಾಮಾಸಕ್ತಿ ಹೆಚ್ಚುವುದು.

English summary

Man Parts Hygiene Tips Every Man Must Know and Follow

The penis is undoubtedly the most valuated body part for most men. Apart from the innumerable pleassures it brings, its is the organ taht is responsible for the continuation of the human species! it gets quite a beauting (pun not intended) over the course of a man's lifetime and thus deserves some tender loving care. Located in a spot where the sun never shines, this hairy fella is loaded with overactive sweat glands. The male nether region is a damp, dark place that can become an oasis for odor-causing bacteria, fungi to infection. If no proper man parts hygiene regimen is followed, disaster.
X
Desktop Bottom Promotion