For Quick Alerts
ALLOW NOTIFICATIONS  
For Daily Alerts

ಡೆಂಗ್ಯೂ- ಚಿಕನ್ ಗುನ್ಯಾದ ಈ ವಿಷ್ಯವನ್ನು ಪ್ರತಿಯೊಬ್ಬರೂ ತಿಳಿಯಲೇ ಬೇಕು

By Hemanth
|

ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ, ಸೊಳ್ಳೆಗಳಿಂದ ಹರಡುವ ರೋಗಗಳಲ್ಲಿ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಪ್ರಮುಖವಾಗಿದೆ. ಏಡೆಸ್ ಈಜಿಪ್ಟಿ ಎನ್ನುವ ಸೊಳ್ಳೆಯಿಂದಾಗಿ ಈ ಕಾಯಿಲೆಗಳು ಹರಡುವುದು. ಕೆಲವೊಂದು ಸಂದರ್ಭಗಳಲ್ಲಿ ಚಿಕನ್ ಗುನ್ಯಾವು ಏಡೆಸ್ ಆಲ್ಬೋಪಿಕ್ಟಸ್ ಎನ್ನುವ ಸೊಳ್ಳೆಯಿಂದಲೂ ಹರಡುವುದು ಇದೆ. ಇದು ನೇರವಾಗಿ ರಕ್ತನಾಳಗಳಿಗೆ ವೈರಸ್ ನ್ನು ಚುಚ್ಚುತ್ತವೆ.

ಉಷ್ಣವಲಯದಲ್ಲಿ ವಾಸಿಸುವಂತಹ ಜನರಲ್ಲಿ ತೇವಾಂಶ ಹಾಗೂ ಮಧ್ಯಮ ಹವಾಮಾನದಲ್ಲಿ ಇದು ಕಂಡುಬರುವುದು. ಅದರಲ್ಲೂ ಮಳೆಗಾಲದಲ್ಲಿ ಹೆಚ್ಚಾಗಿ ಕಲುಷಿತ ನೀರು ನಿಲ್ಲುವಲ್ಲಿ ಈ ಸೊಳ್ಳೆಯಗಳು ಮೊಟ್ಟೆಯನ್ನಿಟ್ಟು ಸಂತಾನೋತ್ಪತ್ತಿ ಮಾಡಿ ರೋಗವನ್ನು ಇನ್ನಷ್ಟು ಹರಡುತ್ತದೆ. ಎರಡು ಜ್ವರಗಳ ಲಕ್ಷಣಗಳಲ್ಲಿ ಸಾಮ್ಯತೆಯಿರುವ ಕಾರಣದಿಂದಾಗಿ ಇದೆರಡು ಒಂದೇ ಎಂದು ವೈದ್ಯಕೀಯ ವಲಯವು ಹೇಳಿದೆ.

ಡೆಂಗ್ಯೂ- ಚಿಕನ್ ಗುನ್ಯಾ ಜ್ವರಗಳಿಗೆ ಇರುವ ವ್ಯತ್ಯಾಸ ಮತ್ತು ಲಕ್ಷಣಗಳು

ಎರಡು ಜ್ವರಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡದ ಹೊರತಾಗಿ ಪ್ರತ್ಯೇಕಿಸುವುದು ತುಂಬಾ ಕಷ್ಟ. ಎರಡು ಜ್ವರಗಳು ಒಬ್ಬ ವ್ಯಕ್ತಿಗೆ ಬರುವುದು ತುಂಬಾ ಅಪರೂಪ. ದೊಡ್ಡ ದುರಂತವೆಂದರೆ ಈ ಜ್ವರಗಳಿಗೆ ಇದುವರೆಗೆ ಸರಿಯಾದ ಔಷಧಿ ಕೂಡ ಕಂಡುಹಿಡಿಯಲಾಗಿಲ್ಲ. ಈ ಜ್ವರಗಳಿಗೆ ನಿರ್ದಿಷ್ಟವಾದ ಔಷಧಿಯಿಲ್ಲ. ಆದರೆ ಇದರ ಲಕ್ಷಣಗಳಾದ ಗಂಟು ನೋವು, ಜ್ವರ ಇತ್ಯಾದಿಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ. ಆದರೆ ವೈರಸ್ ನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ. ಎರಡು ಜ್ವರಗಳಿಗೆ ಇರುವ ವ್ಯತ್ಯಾಸ ಮತ್ತು ಅವುಗಳ ಲಕ್ಷಣಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ...

1. ಡೆಂಗ್ಯೂ-ಚಿಕನ್‌ ಗುನ್ಯಾಕ್ಕೆ ಕಾರಣಗಳೇನು?

1. ಡೆಂಗ್ಯೂ-ಚಿಕನ್‌ ಗುನ್ಯಾಕ್ಕೆ ಕಾರಣಗಳೇನು?

ಡೆಂಗ್ಯೂ: ಫ್ಲೇವಿವೈರೆಡೆ ಕುಟುಂಬದ ಫ್ಲೇವಿವೈರಸ್ ಜಾತಿ ವೈರಸ್ ನಿಂದಾಗಿ ಇದು ಬರುವುದು. ಏಡಿಸ್ ಈಜಿಪ್ಟಿಯ ಹೆಣ್ಣು ಸೊಳ್ಳೆಗಳು ಮಾತ್ರ ಈ ವೈರಸ್ ನ್ನು ಹರಡುವುದು ಮತ್ತು ಡೆಂಗ್ಯೂ ಉಂಟು ಮಾಡುವುದು.

ಚಿಕನ್ ಗುನ್ಯಾ: ತೊಗಾವಿರಿಡೆ ಕುಟುಂಬದ ಆಲ್ಫಾವೈರಸ್ ಜಾತಿಯ ವೈರಸ್ ನಿಂದ ಇದು ಹರಡುವುದು. ಏಡಿಸ್ ಈಜಿಪ್ಟಿ ಸೊಳ್ಳೆಯ ಸೊಳ್ಳೆ ಕಚ್ಚುವ ಮೂಲಕ ಇದು ಹರಡಬಹುದು. ಸಾಮಾನ್ಯವಾಗಿ ಇಂತಹ ಸೊಳ್ಳೆಗಳೇ ಇದನ್ನು ಹರಡುವುದು. ಆದರೆ ಅಪರೂಪದಲ್ಲಿ ಏಡಿಸ್ ಆಲ್ಬೋಪಿಕ್ಟಸ್ ಸೊಳ್ಳೆಗಳು ಇದನ್ನು ಹರಡುವುದು. ಝಿಕಾ ಮತ್ತು ಹಳದಿ ಜ್ವರದ ವೈರಸ್ ನ್ನು ಕೂಡ ಏಡಿಸ್ ಈಜಿಪ್ಟಿ ಸೊಳ್ಳೆಯು ಹರಡುವುದು.

2. ಡೆಂಗ್ಯೂವಿನ ಲಕ್ಷಣಗಳು

2. ಡೆಂಗ್ಯೂವಿನ ಲಕ್ಷಣಗಳು

* ತೀವ್ರ ತಲೆನೋವು

*ವಾಕರಿಕೆ ಅಥವಾ ವಾಂತಿ

* ಹಠಾತ್ ಆಗಿ ತೀವ್ರ ಜ್ವರ 103 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು(ಈಗಾಗಲೇ ಇರುವ ಸೋಂಕಿನಿಂದಾಗಿ ಇದು ಬಂದಿರುವುದಲ್ಲ) 2ರಿಂದ 4 ದಿನಗಳ ಬಳಿಕ ಇದು ಕಡಿಮೆಯಾಗುವುದು ಮತ್ತು ಅತಿಯಾಗಿ ಬೆವರುವಿಕೆ ಉಂಟಾಗುವುದು.

*ಹಣೆಯ ಭಾಗ ಮತ್ತು ಕಣ್ಣಿನ ಹಿಂಭಾಗ(ಕಣ್ಣುಗಳು ಚಲಿಸುವಾಗ ನೋವಾಗುವುದು)ದಲ್ಲಿ ತೀವ್ರ ರೀತಿಯ ನೋವು.

* ದಣಿವಿನ ಭಾವನೆ ಮತ್ತು ನಿಶ್ಯಕ್ತಿ

* ದೇಹ ಮತ್ತು ಗಂಟುಗಳ ನೋವು

* ಉಸಿರಾಟದ ತೊಂದರೆ ಹಾಗೂ ಎದೆಬಡಿತ ಕಡಿಮೆಯಾಗುವುದು

* ರಕ್ತದೊತ್ತಡ ತಗ್ಗುವುದು

* ಕುತ್ತಿಗೆ ಮತ್ತು ತೊಡೆಸಂಧುಗಳಲ್ಲಿ ದುಗ್ಧರಸ ಗ್ರಂಥಿಗಳು ಹಿಗ್ಗುವುದು.

ಜ್ವರವು ತೀವ್ರ ಸ್ವರೂಪ ಪಡೆದುಕೊಂಡಿದ್ದರೆ ಆಗ ಒಸಡು ಹಾಗೂ ಮೂಗಿ(ತುಂಬಾ ಕಡಿಮೆ ಪ್ರಮಾಣ)ನಲ್ಲಿ ರಕ್ತಸ್ರಾವವಾಗುವುದು, ಚರ್ಮ ಕೆಂಪಾಗುವುದು, ಮುಖ, ಕೈಗಳು ಮತ್ತು ಕಾಲಿನಲ್ಲಿ ದದ್ದುಗಳು ಕಾಣಿಸಿಕೊಳ್ಳುವುದು. ಚರ್ಮ ಹಳದಿಯಾಗುವುದು, ನಿದ್ರಾಹೀನತೆ, ಎಲ್ಲಾ ಸಮಯದಲ್ಲಿ ಬಾಯಾರಿಕೆಯಾಗುವುದು, ಹೊಟ್ಟೆಯಲ್ಲಿ ನೋವು ಮತ್ತು ಕಪ್ಪು ಮಲ ಹೊರಹೋಗುವುದು. ಇದರೊಂದಿಗೆ ಪ್ಲೇಟ್ಲೆಟ್ ಎಣಿಕೆ ಕುಸಿಯುವುದು.

3. ಚಿಕನ್ ಗುನ್ಯಾದ ಲಕ್ಷಣಗಳು

3. ಚಿಕನ್ ಗುನ್ಯಾದ ಲಕ್ಷಣಗಳು

*ತಲೆನೋವು

*ಗಂಟಲಿನ ಊತ

* ವಾಕರಿಕೆ ಮತ್ತು ವಾಂತಿ

* ತೀವ್ರ ಜ್ವರ 103 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು.

* ದದ್ದುಗಳು ಮತ್ತು ಬೊಕ್ಕೆಗಳು ಚರ್ಮದಲ್ಲಿ ಮೂಡುವುದು(ವಿಶೇಷವಾಗಿ ಅಂಗೈ, ಮುಖ, ಕೈ ಮತ್ತು ಕಾಲುಗಳಲ್ಲಿ)

* ಕಣ್ಣುಗಳಲ್ಲಿ ಭಾರೀ ನೋವು ಮತ್ತು ಬೆಳಕು ನೋಡಿದಾಗ ಕಿರಿಕಿರಿ ಅಥವಾ ನೋವು ಕಾಣಿಸುವುದು.

* ತೀವ್ರ ಬೆನ್ನು ನೋವು(ಅದರಲ್ಲೂ ಬೆನ್ನಿನ ಕೆಳಭಾಗದಲ್ಲಿ)

* ಸ್ನಾಯು ಮತ್ತು ಗಂಟುನೋವು(ಮೊಣಕೈ, ಹಿಂಗಾಲು, ಕೈ ಮತ್ತು ಕಾಲುಗಳಲ್ಲಿ) ಕೆಲವು ಸಲ ಊತದೊಂದಿಗೆ ಕಾಣಿಸುವುದು. ಬೆಳಗ್ಗೆ ಈ ನೋವು ತೀವ್ರವಾಗಿರುವುದು.

* ದಣಿವಾಗುವುದು.

4 . ಲಕ್ಷಣಗಳು ತೋರಿಸಲು ಎಷ್ಟು ಸಮಯ ಬೇಕು?

4 . ಲಕ್ಷಣಗಳು ತೋರಿಸಲು ಎಷ್ಟು ಸಮಯ ಬೇಕು?

ಡೆಂಗ್ಯೂ: ಇದರ ಲಕ್ಷಣಗಳು ಕಾಣಿಸಿಕೊಳ್ಳಲು 3-7 ದಿನಗಳು ಬೇಕು.

ಚಿಕನ್ ಗುನ್ಯಾ: ಇದರ ಲಕ್ಷಣಗಳು 1-12 ದಿನಗಳಲ್ಲಿ ಕಂಡುಬರುವುದು.

ಜ್ವರ ಎಷ್ಟು ಕಾಲ ಇರುವುದು?

ಡೆಂಗ್ಯೂ: ಇದು 4-7 ವಾರಗಳ ತನಕ ಇರುವುದು.

ಚಿಕನ್ ಗುನ್ಯಾ: ಈ ಜ್ವರ 1-2 ವಾರಗಳ ಕಾಲ ಇರುವುದು. ಆದರೆ ಇದರ ಲಕ್ಷಣಗಳಾದ ಗಂಟುನೋವು ಕಡಿಮೆಯಾಗಲು ವರ್ಷಗಳೇ ಬೇಕಾಗಬಹುದು.

5. ಪ್ರಾಣಹಾನಿ

5. ಪ್ರಾಣಹಾನಿ

ಚಿಕನ್ ಗುನ್ಯಾಕ್ಕಿಂತ ಡೆಂಗ್ಯೂ ಹೆಚ್ಚು ಪ್ರಾಣಹಾನಿ ಮಾಡಬಹುದು ಎಂದು ಪರಿಗಣಿಸಲಾಗಿದೆ. ಡೆಂಗ್ಯೂಗೆ ಚಿಕಿತ್ಸೆ ನೀಡದೆ ಇದ್ದರೆ ಪ್ರಾಣಹಾನಿ ಖಚಿತ. ಕಾಯಿಲೆ ಬಂದಾಗ ಲಕ್ಷಣಗಳು ತೀವ್ರವಾಗಿ ಕಾಡುವುದು. ಕೆಲವೊಂದು ಸಲ ಅತಿಯಾದ ರಕ್ತಸ್ರಾವ, ಉಸಿರಾಟದಲ್ಲಿ ತೀವ್ರ ತೊಂದರೆ ಇತ್ಯಾದಿ ಕಂಡುಬರಬಹುದು. ಲಕ್ಷಣಗಳು ಮತ್ತು ಪ್ಲೇಟ್ಲೇಟ್ ಗಣತಿ ಬಗ್ಗೆ ನಿಗಾವಿಡಬೇಕು.

ಚಿಕನ್ ಗುನ್ಯಾವನ್ನು ಡೆಂಗ್ಯೂವಿನಷ್ಟು ಮಾರಣಾಂತಿಕವಲ್ಲವೆಂದು ಪರಿಗಣಿಸಲಾಗಿದೆ. ಆದರೆ ಕಾಯಿಲೆ ಬಂದಾಗ ಕಾಣಿಸಿಕೊಳ್ಳುವ ಕೆಲವೊಂದು ಲಕ್ಷಣಗಳು ಹಲವಾರು ವರ್ಷಗಳ ಕಾಲ ಇರಬಹುದು. ದೇಹದ ನೋವು ಮಾಯವಾಗಲು ತಿಂಗಳು ಅಥವಾ ವರ್ಷಗಳೇ ಬೇಕಾಗಬಹುದು. ತುಂಬಾ ಅಪರೂಪದಲ್ಲಿ ಇದು ನರದ ಸಮಸ್ಯೆ ಉಂಟು ಮಾಡಬಹುದು.

6. ಸೊಳ್ಳೆಗಳು ನಿಮಗೆ ಕಚ್ಚುವುದು ಯಾಕೆ?

6. ಸೊಳ್ಳೆಗಳು ನಿಮಗೆ ಕಚ್ಚುವುದು ಯಾಕೆ?

ಮೊದಲನೇಯದಾಗಿ ಹೆಣ್ಣು ಸೊಳ್ಳೆಗಳು ಕಚ್ಚುವುದು. ಯಾಕೆಂದು ನೀವು ಕೇಳಿದರೆ, ಹೆಣ್ಣು ಸೊಳ್ಳೆಗಳಿಗೆ ಮೊಟ್ಟೆ ಉತ್ಪತ್ತಿ ಮಾಡಲು ರಕ್ತ ಬೇಕಾಗುವುದು. ಗಂಡು ಸೊಳ್ಳೆಗಳು ಹೂವಿನ ಮಕರಂದ ಹೀರಿಕೊಂಡು ಬದುಕುತ್ತವೆ. ಇದು ಅಪಾಯಕಾರಿಯಲ್ಲ. ಹೆಣ್ಣು ಸೊಳ್ಳೆಯು ನಮಗೆ ಕಚ್ಚಿದಾಗ ಸ್ವಲ್ಪ ಜೊಲ್ಲು ಕೂಡ ಬಿಡುಗಡೆಯಾಗುವುದು. ಇದು ರಕ್ತನಾಳಗಳಿಗೆ ಹರಡಿ ಅದರಿಂದ ವೈರಸ್ ಹರಡುವುದು.

ಎಲ್ಲಾ ಸೊಳ್ಳೆಗಳು ಕಚ್ಚುವುದರಿಂದ ಕಾಯಿಲೆ ಬರುವುದಿಲ್ಲ ಯಾಕೆ? ಎಲ್ಲಾ ಸೊಳ್ಳೆಗಳಲ್ಲಿ ವೈರಸ್ ಇರುವುದಿಲ್ಲ. ಸೊಳ್ಳೆಗಳಲ್ಲಿ ಇರುವಂತಹ ಪ್ರತಿರೋಧಕ ಶಕ್ತಿಯು ವೈರಸ್ ವಿರುದ್ಧ ಹೋರಾಡುವುದು. ವೈರಸ್ ಇರುವಂತಹ ಸೊಳ್ಳೆಗಳು ಕೂಡ ವಿವಿಧ ಕಾರಣಗಳಿಂದಾಗಿ ಜ್ವರ ಹಬ್ಬಬೇಕೆಂದಿಲ್ಲ.

ಹೆಣ್ಣು ಸೊಳ್ಳೆಯು ಅತೀ ಹೆಚ್ಚು ರಕ್ತಹೀರಿದಾಗ ಅದು ನೀರಿನಲ್ಲಿ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಇದರಿಂದ ಮತ್ತೆ ಸೊಳ್ಳೆಗಳು ಉತ್ಪತ್ತಿಯಾಗುವುದು.

7. ಚಿಕನ್ ಗುನ್ಯಾ ಮತ್ತು ಡೆಂಗ್ಯೂ ತಡೆಯುವುದು ಹೇಗೆ?

7. ಚಿಕನ್ ಗುನ್ಯಾ ಮತ್ತು ಡೆಂಗ್ಯೂ ತಡೆಯುವುದು ಹೇಗೆ?

ಈ ರೋಗಗಳನ್ನು ತಡೆಯಬೇಕಾದರೆ ಅದನ್ನು ಹರಡುವಂತಹ ಸೊಳ್ಳೆಗಳನ್ನು ನಾಶ ಮಾಡಬೇಕು. ಮಳೆಗಾಲದಲ್ಲಿ ಕಲುಷಿತ ನೀರು ನಿಲ್ಲದಂತೆ ಮತ್ತು ಇತರ ಸಾಮಗ್ರಿಗಳಲ್ಲಿ ನೀರು ನಿಲ್ಲದಂತೆ ತಡೆಯಲು ಹಲವಾರು ರೀತಿಯ ಕ್ರಮ ಕೈಗೊಳ್ಳಬೇಕೆಂದು ಪ್ರತೀ ವರ್ಷ ಸರ್ಕಾರ ಜಾಹೀರಾತುಗಳು ಮತ್ತು ಭಿತ್ತಿಪತ್ರಗಳನ್ನು ನೀಡುವುದು. ಆದರೆ ಜನರು ಮಾತ್ರ ಇದರ ಕಡೆ ಗಮನಹರಿಸುವುದಿಲ್ಲ.

ಸರ್ಕಾರವು ಇದನ್ನು ಯಾಕೆ ಹೇಳುತ್ತಿದೆ ಮತ್ತು ನಾವು ಇದರ ಬಗ್ಗೆ ಯಾಕೆ ಹೆಚ್ಚು ಗಮನಹರಿಸಬೇಕೆಂದರೆ ನಿಂತ ಕಲುಷಿತ ನೀರಿನಲ್ಲಿ ಸೊಳ್ಳೆ ಸಂತಾನೋತ್ಪತ್ತಿ ಮಾಡುವುದು.

ಹೆಣ್ಣು ಸೊಳ್ಳೆಯು ಒಂದು ಸಲಕ್ಕೆ ಸುಮಾರು 100 ಅಥವಾ ಅದಕ್ಕಿಂತ ಹೆಚ್ಚಿನ ಮೊಟ್ಟೆಗಳನ್ನು ಇಡಬಹುದು. ಎರಡು ಅಥವಾ ಆರು ವಾರಗಳ ಜೀವಿತಾವಧಿಯಲ್ಲಿ ಈ ಸೊಳ್ಳೆಗಳು ಮೂರು ಸಲ ಮೊಟ್ಟೆಯನ್ನಿಡಬಹುದು. ಇದರಿಂದ ಸೊಳ್ಳೆಗಳು ಮೊಟ್ಟೆ ಇಡದಂತೆ ಮಾಡಲು ಕಲುಷಿತ ನೀರು ನಿಲ್ಲದಂತೆ ಕ್ರಮ ತೆಗೆದುಕೊಳ್ಳಬೇಕು.

* ಡಬ್ಬಗಳು ಅಥವಾ ತೆರೆದ ಜಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.

* ಯಾವುದೇ ಗುಜರಿ ಸಾಮಾನುಗಳನ್ನು ಮೈದಾನದಲ್ಲಿ ಎಸೆದರೆ ಅಲ್ಲಿ ನೀರು ನಿಂತು ಸೊಳ್ಳೆಗೆ ವಾಸಸ್ಥಾನವಾಗುವುದು. ಹೀಗೆ ಮಾಡಬೇಡಿ.

* ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಇರುವಂತಹ ಪ್ರದೇಶಗಳಲ್ಲಿ, ಅದರಲ್ಲೂ ಮಳೆಗಾಲದಲ್ಲಿ ನೀವು ದೇಹವನ್ನು ಪುರ್ತಿಯಾಗಿ ಮುಚ್ಚಬಲ್ಲ ಬಟ್ಟೆ ಧರಿಸಿ.

* ಸೊಳ್ಳೆ ನಿವಾರಕ ಕ್ರೀಮ್ ಗಳನ್ನು ಬಳಸಿ.

* ನೀಲಗಿರಿ ಎಣ್ಣೆ ಹಚ್ಚಿಕೊಳ್ಳಿ.

* ಡಿಡಿಟಿ ಸ್ಪ್ರೇ ಬಳಸಿ.

ಈ ಎಲ್ಲಾ ಮುಂಜಾಗೃತ ಕ್ರಮಗಳ ಹೊರತಾಗಿಯೂ ಸೊಳ್ಳೆಗಳು ನಿಮಗೆ ಕಚ್ಚಬಹುದು. ಇದರಲ್ಲಿ ಒಂದು ಅದಕ್ಕಿಂತ ಹೆಚ್ಚಿನ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಆಗ ವೈದ್ಯರನ್ನು ಭೇಟಿಯಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.

English summary

Major Differences Between Dengue And Chikungunya

Dengue fever and chikungunya are two vector-borne diseases wherein the vector is any mosquito under the Aedes aegypti - although there are certain cases of chikungunya spread by the Aedes albopictus - which introduces viruses into the bloodstream.
X
Desktop Bottom Promotion