For Quick Alerts
ALLOW NOTIFICATIONS  
For Daily Alerts

ರಾತ್ರಿ ಪಾಳಿ ಕೆಲಸ ಹೃದಯಾಘಾತ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ತರಬಹುದು!

By Deepu
|

ಜೀವನ ನಿರ್ವಹಣೆಗಾಗಿ ಏನಾದರೊಂದು ಉದ್ಯೋಗ ಮಾಡಲೇಬೇಕಾಗುತ್ತದೆ. ನಾವು ಅನಿಸಿಕೊಂಡಂತೆ ಪ್ರತಿಯೊಂದು ಉದ್ಯೋಗವು ಸಿಗುವುದಿಲ್ಲ. ಕೆಲವೊಂದು ಸಲ ರಾತ್ರಿ ಪಾಳಿಯಲ್ಲಿಯೂ ದುಡಿಯಬೇಕಾಗುತ್ತದೆ. ಆದರೆ ರಾತ್ರಿ ಪಾಳಿಗಳಲ್ಲಿ ದುಡಿಯುವುದರಿಂದ ದೇಹದ ಮೇಲೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುವುದು ಎಂದು ಈಗಾಗಲೇ ಹಲವಾರು ಅಧ್ಯಯನಗಳು ಹೇಳಿವೆ. ಸೂರ್ಯಾಸ್ತದಿಂದ ಸೂರ್ಯೋದಯದ ತನಕ ಕೆಲಸ ಮಾಡುವಂತಹ ಜನರಲ್ಲಿ ಹೃದಯದ ಕಾಯಿಲೆಗಳು, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಕಾಣಿಸಿಕೊಳ್ಳುವುದು ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ದಿನ ಪಾಳಿ ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರ ರಕ್ತದ ಮಾದರಿಯನ್ನು ಅಧ್ಯಯನಕ್ಕಾಗಿ ಪರೀಕ್ಷೆಗೆ ಒಳಪಡಿಸಲಾಯಿತು. ಚಯಾಪಚಾಯ ಕ್ರಿಯೆಯ ಮೇಲೆ ಪರಿಣಾಮ ಬೀರಿರುವುದು ರಾತ್ರಿ ಪಾಳಿ ಉದ್ಯೋಗಿಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ಮಧುಮೇಹ, ಬೊಜ್ಜು ಮತ್ತು ಕ್ಯಾನ್ಸರ್ ನಂತಹ ಸಾಧ್ಯತೆಯು ಹೆಚ್ಚಾಗಿರುವುದು. ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ ಸರ್ರೆ ಯೂನಿವರ್ಸಿಟಿ ಜತೆ ಸೇರಿ ನಡೆಸಿರುವಂತಹ ಅಧ್ಯಯನದ ಪ್ರಕಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಲ್ಲಿ ದೀರ್ಘಕಾಲದ ಕಿಡ್ನಿ ಸಮಸ್ಯೆಯು ಕಂಡುಬರುವುದು. ದೈಹಿಕ ಗಡಿಯಾರವು ಸರಿಯಾಗಿ ಸಿಂಕ್ ಮಾಡದೇ ಇರುವ ಕಾರಣ ತೊಂದರೆಯಾಗಿದೆ.

ಹೆಚ್ಚಿನ ಕೈಗಾರಿಕೆಗಳಲ್ಲಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ಬಿಡುಗಡೆ ಮಾಡಬಹುದು. ರಾತ್ರಿ ಪಾಳಿಗಳಲ್ಲಿ ಸುದೀರ್ಘ ಕಾಲ ಕೆಲಸ ಮಾಡುವಂತಹ ಜನರು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗುವರು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ದೇಹವು ತನ್ನ ನೈಸರ್ಗಿಕ ಲಯಗಳಿಗೆ ವಿರುದ್ಧವಾಗಿ ಕೆಲಸ ಮಾಡುವುದು. ಪ್ರಕೃತಿಯ ದೇಹರಚನೆಯ ವಿರುದ್ಧವಾಗಿ ಈ ಕೆಲಸವಿರುವುದು. ದೀರ್ಘಕಾಲದ ತನಕ ರಾತ್ರಿಪಾಳಿ ಮಾಡುವುದರಿಂದ ದೇಹದ ಆರೋಗ್ಯದ ಮೇಲೆ ಆಗುವ ಪರಿಣಾಮಗಳು ಏನು ಎಂದು ತಿಳಿಯಿರಿ....

ಸಾಮಾನ್ಯ ನಿದ್ರೆಯ ಕ್ರಮಕ್ಕೆ ಅಡ್ಡಿ

ಸಾಮಾನ್ಯ ನಿದ್ರೆಯ ಕ್ರಮಕ್ಕೆ ಅಡ್ಡಿ

ನಿದ್ರೆಯು ದೇಹದ ಸಂಪೂರ್ಣ ಆರೋಗ್ಯಕ್ಕೆ ಅತೀ ಅಗತ್ಯವೆಂದು ನಮಗೆಲ್ಲರಿಗೂ ತಿಳಿದಿದೆ. ನಿದ್ರೆಯಿಂದಾಗಿ ದೇಹದಲ್ಲಿರುವಂತಹ ವಿಷಕಾರಿ ಅಂಶಗಳು ಹೊರಬರುವುದು, ಒತ್ತಡ ಕಡಿಮೆ ಯಾಗುವುದು, ಗಾಯವು ಶಮನವಾಗುವುದು ಮತ್ತು ಪ್ರತಿರೋಧಕ ಶಕ್ತಿ ಹೆಚ್ಚುವುದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದರೆ ಆಗ ಇದೆಲ್ಲದರ ಮೇಲೆ ಅಡ್ಡಪರಿಣಾಮಗಳು ಆಗುವುದು ಮತ್ತು ಅನಾರೋಗ್ಯ ಕಾಣಿಸುವುದು.

ಕ್ಯಾನ್ಸರ್ ಅಪಾಯ

ಕ್ಯಾನ್ಸರ್ ಅಪಾಯ

ಹಿಂದೆ ನಡೆಸಿರುವ ಹಲವಾರು ರೀತಿಯ ಅಧ್ಯಯನಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಿಗೆ ಟೈಪ್ 2 ಮಧುಮೇಹ ಮತ್ತು ಚರ್ಮದ ಕ್ಯಾನ್ಸರ್ ಅಪಾಯವು ಹೆಚ್ಚಾಗಿರುವುದು ಎಂದು ಹೇಳಿದ್ದವು. ದಿನ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗಿಂತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಬರುವ ಅಪಾಯವು ಹೆಚ್ಚಾಗಿರುವುದು. ನೀವು ವಾರದಲ್ಲಿ ಒಂದು ದಿನ ಅಥವಾ ವಾರವಿಡಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದರೂ ಪರಿಣಾಮ ಮಾತ್ರ ಸಮಾನವಾಗಿರುವುದು. ವಿಶ್ವ ಆರೋಗ್ಯ ಸಂಸ್ಥೆಯ ಭಾಗವಾಗಿರುವಂತಹ ದ ಇಂಟರ್ ನ್ಯಾಸನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ನ ವರದಿ ಪ್ರಕಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಕ್ಯಾನ್ಸರ್ ಬರುವುದು. ರಾತ್ರಿ ಪಾಳಿ ಕೆಲಸವು ಸ್ತನದ ಕ್ಯಾನ್ಸರ್ ಮತ್ತು ಇತರ ಕೆಲವು ವಿಧದ ಕ್ಯಾನ್ಸರ್ ಗೆ ಕಾರಣವಾಗಿದೆ. ಮಧುಮೇಹ ಮತ್ತು ನಿದ್ರೆಯ ತೊಂದರೆಯು ಇದರಲ್ಲಿದೆ. ದೇಹದಲ್ಲಿ ಕ್ಯಾಲ್ಸಿಯಂನ್ನು ಹೀರಿಕೊಳ್ಳುವ ಮತ್ತು ಮೂಳೆ ಬೆಳವಣಿಗೆಗೆ ನೆರವಾಗುವ ವಿಟಮಿನ್ ಡಿಯಿಂದ ರಾತ್ರಿ ಪಾಳಿ ಕೆಲಸಗಾರರು ವಂಚಿತರಾಗುವರು. ವಿಟಮಿನ್ ಡಿ ಕೊರತೆಯಿಂದ ಕಾಡುವ ಆಸ್ಟಿಯೋಮಲೇಶಿಯಾದೊಂದಿಗೆ ಕರುಳಿನ ಕ್ಯಾನ್ಸರ್, ಸ್ತನದ ಕ್ಯಾನ್ಸರ್ ಮತ್ತು ಜನನೇಂದ್ರಿಯ ಗ್ರಂಥಿ ಕ್ಯಾನ್ಸರ್ ಬರುವುದು.

ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸೂಕ್ತ ಆಹಾರ ಕ್ರಮ

 ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು

ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಹೃದಯಾಘಾತದ ಸಮಸ್ಯೆಯು ಶೇ. 7ರಷ್ಟು ಹೆಚ್ಚಾಗಿರುವುದು ಎಂದು 2012ರಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್ ಬಿಡುಗಡೆ ಮಾಡಿದ ಅಧ್ಯಯನ ವರದಿಯು ಹೇಳಿದೆ. ನಿದ್ರೆಯ ಕ್ರಮದಲ್ಲಿ ಬದಲಾವಣೆಯಾಗುವುದು ಇದಕ್ಕೆ ಪ್ರಮುಖ ಕಾರಣವೆನ್ನಲಾಗಿದೆ. ನಿದ್ರಾ ಕ್ರಮದಲ್ಲಿ ಬದಲಾವಣೆ ಯಿಂದಾಗಿ ರಕ್ತದೊತ್ತಡ ಮತ್ತು ರಕ್ತಸಂಚಾರದ ಮೇಲೆ ಪರಿಣಾಮ ಬೀರುವುದು. ಹತ್ತು ವರ್ಷ ಅಥವಾ ಅದಕ್ಕಿಂತ ದೀರ್ಘ ಕಾಲ ತನಕ ರೊಟೇಷನ್ ಮಾದರಿಯಲ್ಲಿ ರಾತ್ರಿ ಪಾಳಿ ಮಾಡಿರುವಂತಹ ನರ್ಸ್ ಗಳಲ್ಲಿ ಕೂಡ ದೀರ್ಘಕಾಲ ಹೃದಯದ ಕಾಯಿಲೆಯ ಸಮಸ್ಯೆಯು ಶೇ.15 ಹೆಚ್ಚು ಕಂಡುಬಂದಿದೆ. ಅನಾರೋಗ್ಯಕರ ಆಹಾರ ಮತ್ತು ವ್ಯಾಯಾಮದ ಕೊರತೆ ಕೂಡ ಅಪಾಯ ಹೆಚ್ಚಳವಾಗಲು ಕಾರಣವೆಂದು ಅಧ್ಯಯನಗಳು ಹೇಳಿವೆ. ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದರಿಂದ ರಕ್ತದೊತ್ತಡ ಏರಿಕೆಯಾಗಿ ಪಾರ್ಶ್ವವಾಯು ಉಂಟಾಗಬಹುದು.

ಬೊಜ್ಜು ಮತ್ತು ಮಧುಮೇಹದ ಅಪಾಯ

ಬೊಜ್ಜು ಮತ್ತು ಮಧುಮೇಹದ ಅಪಾಯ

ರಾತ್ರಿಪಾಳಿಯೆಂದರೆ ದಿನವಿಡಿ ಮಲಗಿರುವುದು. ಇದರಿಂದ ಬೊಜ್ಜು ಮತ್ತು ಮಧುಮೇಹ ದೇಹವನ್ನು ಆವರಿಸಿಕೊಳ್ಳುವುದು. ಹಾರ್ಮೋನುಗಳಲ್ಲಿನ ಅಸಮತೋಲನದಿಂದಾಗಿ ರಾತ್ರಿ ಪಾಳಿ ಕೆಲಸಗಾರರಲ್ಲಿ ಈ ಸಮಸ್ಯೆಯು ಕಾಣಿಸಿಕೊಳ್ಳುವುದು. ನಿದ್ರೆಯ ಕ್ರಮದಿಂದಾಗಿ ಸಾಮಾನ್ಯ ಹಾರ್ಮೊನು ಚಕ್ರದ ಮೇಲೆ ಪರಿಣಾಮ ಬೀರುವುದು. ಲೆಪ್ಟಿನ್ ಎನ್ನುವ ಹಾರ್ಮೋನು ತೂಕ, ಇನ್ಸುಲಿನ್ ಮಟ್ಟ ಮತ್ತು ಸಕ್ಕರೆ ಮಟ್ಟ ನಿಯಂತ್ರಣ ದಲ್ಲಿ ಪ್ರಮುಖ ಪಾತ್ರ ವಹಿಸುವುದು. ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದರಿಂದ ಹಾರ್ಮೋನುಗಳ ಉತ್ಪತ್ತಿ ಮೇಲೆ ಪರಿಣಾಮ ಬೀರುವುದು. ಆಹಾರಕ್ರಮವು ಸರಿಯಾಗಿದ್ದರೂ ಹಾರ್ಮೋನು ಅಸಮತೋಲನದಿಂದ ಬೊಜ್ಜು ಮತ್ತು ಮಧುಮೇಹ ಬರುವುದು.

ಜಠರಕರುಳಿನ ಕಾಯಿಲೆಗಳು

ಜಠರಕರುಳಿನ ಕಾಯಿಲೆಗಳು

ದೀರ್ಘಕಾಲದ ತನಕ ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದರಿಂದ ದೇಹದ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ಜಠರಕರುಳಿನ ಸಮಸ್ಯೆಗಳಾದ ಅಲ್ಸರ್ ಮತ್ತು ಅತಿಸಾರ ಕಾಣಿಸಿಕೊಳ್ಳುವುದು. ಇದು ಮತ್ತಷ್ಟು ಗಂಭೀರವಾದ ಸಮಸ್ಯೆಗಳಿಗೆ ಕಾರಣವಾಗಬಹುದು.

ಖಿನ್ನತೆ ಅಪಾಯ

ಖಿನ್ನತೆ ಅಪಾಯ

ರಾತ್ರಿಪಾಳಿ ಕೆಲಸದಿಂದಾಗಿ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಲವಾರು ಅಧ್ಯಯನಗಳ ಪ್ರಕಾರ ಮಸ್ಥಿತಿ ಬದಲಾವಣೆ ಮತ್ತು ಖಿನ್ನತೆಯು ರಾತ್ರಿ ಪಾಳಿ ಕೆಲಸ ಮಾಡುವವರಲ್ಲಿ ಕಂಡುಬಂದಿದೆ. ರಾತ್ರಿಪಾಳಿ ಕೆಲಸ ಮಾಡುವವರಲ್ಲಿ ಕಂಡುಬರುವಂತಹ ಕೆಲವೊಂದು ಸಮಸ್ಯೆಗಳು ಇದಾಗಿದೆ. ನೀವು ತಾತ್ಕಾಲಿಕವಾಗಿ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತಲಿದ್ದರೆ ವೈದ್ಯರನ್ನು ಸಂಪರ್ಕಿಸಿ ಅವರಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಬಹುದೇ ಎಂದು ಕೇಳಿ.

 ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಆಹಾರಕ್ರಮ ಹೀಗಿರಲಿ...

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಆಹಾರಕ್ರಮ ಹೀಗಿರಲಿ...

ಮೊಳಕೆ ಕಾಳುಗಳು

ಮೊಳಕೆ ಕಾಳುಗಳು ಗಮನಾರ್ಹವಾದ ಪ್ರೋಟೀನ್, ವಿಟಮಿನ್ ಹಾಗೂ ಇತರ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವು ನಮ್ಮ ಆರೋಗ್ಯಕ್ಕೆ ಬಹು ಉಪಯುಕ್ತ. ಕುಳಿತಲ್ಲಿ ತಿನ್ನುವಂತಹ ಕುರುಕಲು ತಿಂಡಿ/ಸ್ನ್ಯಾಕ್ಸ್ ಆಗಿಯೂ ಬಳಸಬಹುದು. ಮನೆಯಲ್ಲಿ ಅಡುಗೆಮಾಡಲು ಸಮಯ ಅಭಾವ ಅಥವಾ ಹಾಸ್ಟೆಲ್ ಅಥವಾ ಪಿಜಿ ಯಲ್ಲಿ ಅನಾನುಕೂಲ. ಆದ್ದರಿಂದ ನೆನೆಸಿಟ್ಟು ಬಳಸಬಹುದಾದ ಮೊಳಕೆ ಕಾಳುಗಳು ಈ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಮಿತ್ರ.

ಸರಿಯಾಗಿ ಹಣ್ಣುಗಳನ್ನು ಸೇವಿಸಿ

ಸರಿಯಾಗಿ ಹಣ್ಣುಗಳನ್ನು ಸೇವಿಸಿ

ಹಣ್ಣುಗಳ ಪ್ರಾಮುಖ್ಯತೆಯನ್ನು ಹೇಳಬೇಕಿದೆಯೇ? ಹಣ್ಣುಗಳು ಪ್ರಕೃತಿ ನಮಗೆ ನೀಡಿದ ವರ. ಅದರಲ್ಲೂ ಹಣ್ಣಿನ ರಸ ವಲ್ಲದೆ ಹಣ್ಣನು ಪೂರ್ತಿಯಾಗಿ ಸೇವಿಸಿ. ಅದರಲ್ಲಿನ ನಾರಿನಂಶ ಜೀರ್ಣಶಕ್ತಿಗೆ ಬಹು ಉಪಯೋಗಿ. ಸೇಬು, ಬಾಳೆಹಣ್ಣು, ಆರೆಂಜ್, ಪಪ್ಪಾಯಿ, ಕಲ್ಲಂಗಡಿ, ಕಿವಿ, ಸ್ಟ್ರಾಬೆರ್ರಿ, ಹೇಗೆ ಅನೇಕಾನೇಕ ಆಯ್ಕೆಗಳಿವೆ. ನಿಮ್ಮ ರುಚಿಗೆ ಹಾಗೂ ಕಾಲಕ್ಕೆ ತಕ್ಕಂತೆ ಆಯ್ದು ಸೇವಿಸಿ

ಎನರ್ಜಿ ಡ್ರಿಂಕ್ಸ್ ಗಳನ್ನೆಲ್ಲಾ ಕುಡಿಯಬೇಡಿ

ಎನರ್ಜಿ ಡ್ರಿಂಕ್ಸ್ ಗಳನ್ನೆಲ್ಲಾ ಕುಡಿಯಬೇಡಿ

ಶಕ್ತಿ ಪಾನೀಯಗಳು ಅಥವಾ ಎನರ್ಜಿ ಡ್ರಿಂಕ್ಸ್ ಗಳಲ್ಲಿ ಬಹಳ ಹೆಚ್ಚಿನ ಪ್ರಮಾಣದ ಕೆಫೇನ್ ಇರುತ್ತದೆ. ಇದು ನಿಮಗೆ ರಾತ್ರಿಯ ಹೊತ್ತು ಬಹಳ ಹೆಚ್ಚಿನ ಸಮಯ ಎಚ್ಚರವಾಗಿರಲು ಸಹಾಯ ಮಾಡಬಹುದು ಆದರೆ ನಿಮ್ಮ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಇದು ಖಂಡಿತ ಒಳ್ಳೆಯದಲ್ಲ. ಎನರ್ಜಿ ಡ್ರಿಂಕ್ಸ್ ಬದಲಾಗಿ ಕಾಫಿ ಅಥವಾ ಚಹಾವನ್ನು ಸೇವಿಸಿ. ಇದಕ್ಕೂ ಬದಲಾಗಿ ರಾತ್ರಿ ಪಾಳಿಯಲ್ಲಿ ಎಚ್ಚರವಾಗಿರಲು ಬಹಳ ನೀರು ಕುಡಿಯಿರಿ ಇದರಿಂದಾಗಿ ನಿರ್ಜಲೀಕರಣ ಸಮಸ್ಯೆಯೂ ಬರುವುದಿಲ್ಲ.

English summary

Link Between Night Shift And Diseases

Do you work from dusk to dawn? Then, you should be aware of certain health issues that are likely to crop up if you continue working in night shifts for prolonged periods. This is not just being said to scare you, as a first-of-its kind study has revealed the direct link between working night shifts and an increased risk for stroke, cancer and heart diseases.
X
Desktop Bottom Promotion