For Quick Alerts
ALLOW NOTIFICATIONS  
For Daily Alerts

ಲಿಂಬೆಸಿಪ್ಪೆ-ಸಂಧಿವಾತದ ಚಿಕಿತ್ಸೆ ಹಾಗೂ ಇತರ ಪ್ರಯೋಜನಗಳು

|

ವಯಸ್ಸು ೪೦ ದಾಟಿದ್ರೆ ಸಾಕು ಮೊಣ ಕಾಲು ಗಂಟು ನೋವು ಶುರುವಾಗುತ್ತೆ. ಇನ್ನೂ ಮನೆಯ ಹಿರಿಯರ ಬಾಯಿಯಿಂದಂತೂ ಮೊಣ ಕಾಲು ನೋವು ಎಂದು ಕೊರಗುವುದು ನೀವು ಕೇಳಿರುತ್ತೀರಿ. ಅಷ್ಟೇ ಅಲ್ಲ ಅವರು ಅದಕ್ಕಾಗಿ ಈಗಾಗಲೇ ಹಲವಾರು ಔಷಧಿಗಳನ್ನ ಬಳಸಿ ಪ್ರಯೋಜನ ಪಡೆಯದೇ ಇದ್ದಿರಬಹದು. ಇನ್ನು ಆ ಚಿಂತೆ ಬಿಡಿ. ನಿಮ್ಮ ಮೊಣಕಾಲು ಗಂಟು ನೋವಿಗೆ ಇಲ್ಲಿದೆ ಮನೆಮದ್ದು. ಯಾವುದೇ ಅಡ್ಡಪರಿಣಾಮವಿಲ್ಲದೇ ಉತ್ತಮ ರಿಸಲ್ಟ್ ನಿಮ್ಮದಾಗಿಸಿಕೊಳ್ಳಬಹುದು.

ಕೀಲು ನೋವನ್ನ ಸಂಧಿವಾತ ಎಂದು ಕರೆಯುತ್ತಾರೆ. ಈ ಪರಿಸ್ಥಿತಿಯಲ್ಲಿ ಎರಡು ಮೂಳೆಗಳ ಮಧ್ಯೆ ತೀವ್ರವಾದ ನೋವು ಹಾಗೂ ಉರಿಯೂತ ಕಾಣಿಸಿಕೊಳ್ಳುತ್ತದೆ. ಗೌಟ್ ಕಾರಣದಿಂದಲೂ ನಿಮಗೆ ಕೀಲು ನೋವು ಕಾಣಿಸಿಕೊಳ್ಳಬಹುದು. ಅಂದರೆ ಕೀಲುಗಳು ಮತ್ತು ಅಂಗಾಂಶಗಳಲ್ಲಿ ಯೂರಿಕ್ ಆಮ್ಲದ ಶೇಖರಣೆಯಾಗಿರುವುದು.

joint pain

ಕೆಲವೊಮ್ಮೆ ಏನಾದ್ರೂ ಚಿಕ್ಕ ಪುಟ್ಟ ಗಾಯಗಳಾದಾಗ ಅದು ಕೂಡಾ ಕೀಲು ನೋವಿಗೆ ಕಾರಣವಾಗುತ್ತದೆ. ನಿಮಗೆ ಗೊತ್ತೆ ಕೇವಲ ನಿಂಬೆ ಹಣ್ಣಿನ ಸಿಪ್ಪೆ ನಿಮ್ಮ ಕೀಲು ನೋವನ್ನ ಶಮನಗೊಳಿಸುತ್ತದೆ. ಇನ್ನೊಂದು ಗುಡ್ ನ್ಯೂಸ್ ಎಂದ್ರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿ ಬಳಕೆಯಿಂದ ನಿಮಗೆ ಅಡ್ಡಪರಿಣಾವಾಗಬಹುದು ಆದ್ರೆ ಈ ಮನೆಮದ್ದಿನಿಂದ ಯಾವುದೇ ಅಡ್ಡ ಪರಿಣಾಮವಿಲ್ಲ.

ನಿಂಬೆ ಸಿಪ್ಪೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ಪೆಕ್ಟಿನ್, ಫೈಬರ್, ಮಿನೆರಲ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ನಿಂಬೆ ಸಿಪ್ಪೆಯಲ್ಲಿ ಇರುವ ಈ ಅಂಶದಿಂದ ನಿಮ್ಮ ಕೀಲು ನೋವು ಶೀಘ್ರವಾಗಿ ಶಮನಗೊಳ್ಳುವುದು. ಇನ್ನ ನೀವು ನಿಂಬೆ ಸಿಪ್ಪೆಯನ್ನ ಸೇವಿಸುದರಿಂದಲೂ ಹಲವಾರು ಪ್ರಯೋಜನ ಪಡೆದುಕೊಳ್ಳಬಹುದು. ಆದ್ರೆ ಕೀಲು ನೋವಿಗೆ ನೀವು ನೋವಿದ್ದ ಜಾಗದಲ್ಲಿ ಹಚ್ಚಿದ್ರೆ ಮಾತ್ರ ಪರಿಣಾಮ ಬೀರುವುದು.

ಈ ಆರ್ಟಿಕಲ್ ನಲ್ಲಿ ನಿಂಬೆ ಸಿಪ್ಪೆಯಿಂದ ಕೀಲು ನೋವನ್ನು ಹೇಗೆ ಶಮನ ಗೊಳಿಸಬಹುದು ಹಾಗೂ ಇನ್ನಿತ್ತರ ಹೆಲ್ತಿ ಪ್ರಯೋಜನಕಾರಿಗಳನ್ನ ನೀಡಲಾಗಿದೆ ಮುಂದಕ್ಕೆ ಓದಿ

ಕೀಲು ನೋವಿಗೆ ನಿಂಬೆ ಹೇಗೆ ಸಹಕಾರಿ:

ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಪ್ರತಿದಿನ ನಮ್ಮ ದೇಹಕ್ಕೆ ಬೇಕಾದ ಶೇಕಡಾ ೩೦ ರಷ್ಟು ವಿಟಮಿನ್ ಸಿ ಡೋಸ್ ನ್ನ ನಿಂಬೆ ನಮ್ಮ ದೇಹಕ್ಕೆ ನೀಡುತ್ತದೆ. ವಿಟಮಿನ್ ಸಿಯು ಅಸ್ಥಿರಜ್ಜುಗಳು, ಸ್ನಾಯುಗಳು ಮತ್ತು ಚರ್ಮದ ರಚನೆಗೆ ಮುಖ್ಯವಾದ ಪ್ರೋಟೀನ್ ರಚನೆಯಾಗಿದೆ.

ಮೂಳೆಗಳಿಗೆ ನಿಂಬೆ ಹೇಗೆ ಮದ್ದು: ಮೂಳೆಗಳ ಚಿಕಿತ್ಸೆಗೆ ನಿಂಬೆ ಸಹಕಾರಿ. ಮೂಳೆಗಳನ್ನು ಜೋಡಿಸುವಂತಹ ಕಾರ್ಟಿಲೆಜ್ ಗಳು ಹಾನಿಗೊಳಗಾದಾಗ ಅದನ್ನ ಸರಿಪಡಿಸಲು ನಿಂಬೆ ಸಹಕಾರಿಯಾಗಿದೆ. ಅಷ್ಟೇ ಅಲ್ಲ ಗಾಯಗಳನ್ನ ಗುಣಪಡಿಸಲು ಕೂಡಾ ನಿಂಬೆ ಸಹಕಾರಿ. ನಿಂಬೆಯು ನಮ್ಮ ಮೂಳೆ, ಕಾರ್ಟಿಲೆಜ್ ಅಷ್ಟೇ ಅಲ್ಲ ಹಲ್ಲುಗಳನ್ನು ಕೂಡಾ ಸ್ಟ್ರಾಂಗ್ ಹಾಗೂ ಹೆಲ್ತಿ ಯಾಗಿರಿಸುತ್ತದೆ

ನಿಂಬೆ ಸಿಪ್ಪೆಯಲ್ಲಿದೆ ಕ್ಯಾಲ್ಸಿಯಂ:

ನಮ್ಮ ಮೂಳೆಗಳಿಗೆ ಬೇಕಾಗಿರುವ ಮತ್ತೊಂದು ಪ್ರಮುಖ ಮಿನರಲ್ಸ್ ಅಂದ್ರೆ ಅದು ಕ್ಯಾಲ್ಸಿಯಂ. ಆಶ್ಚರ್ಯವೆಂದ್ರೆ ನಿಂಬೆ ಸಿಪ್ಪೆಯಲ್ಲೂ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದೆ. ಇದು ಮೂಳೆಗಳ ಆರೋಗ್ಯಕ್ಕೆ ಸಹಕಾರಿಯಾಗಿದೆ.

ನಿಂಬೆಯಿಂದ ಕೀಲು ನೋವಿಗೆ ಮದ್ದು ಹೇಗೆ ತಯಾರಿಸುವುದು:

ಈ ರೆಸಿಪಿಗೆ ಮುಖ್ಯವಾಗಿ ೫ ನಿಂಬೆ ಹಣ್ಣುಗಳು ಬೇಕು. ಜತೆಗೆ ಆಲೀವ್ ಆಯಿಲ್, ಪ್ಲಾಸ್ಟಿಕ್ ಬ್ಯಾಗ್, ಗಾಜ್ಸು, ವುಲನ್ ಶಾಲು, ಹಾಗೂ ಒಂದು ಜಾರು. ನಿಂಬೆ ಹಣ್ಣಿನ ಹೊರಗಿನ ಸಿಪ್ಪೆ ಭಾಗವನ್ನ ಬಿಡಿಸಿ, ಒಂದು ಜಾರಿನಲ್ಲಿ ಹಾಕಿಕೊಳ್ಳಿ. ಆ ಜಾರು ತುಂಬುವ ತನಕ ಆಲೀವ್ ಎಣ್ಣೆ ಹಾಕಿ. ಬಳಿಕ ಗಟ್ಟಿಯಾಗಿ ಮುಚ್ಚಿ. ಈ ಮಿಶ್ರಣವನ್ನ ಕಡಿಮೆ ಅಂದ್ರೂ ೩ ವಾರಗಳ ವರೆಗೆ ಗಾಳಿಯಾಡದ ಜಾಗದಲ್ಲಿ ಇಡಿ.ಮೂರು ವಾರಗಳ ಬಳಿಕ ಕೀಲು ನೋವಿನ ಮದ್ದು ತಯಾರಾಗಿರುತ್ತದೆ.

ಇನ್ನು ಅದನ್ನ ಕೀಲು ನೋವಿಗೆ ಹಚ್ಚಲು ಕೂಡಾ ವಿಧಾನವಿದೆ. ಯಾವಾಗ ನಿಮಗೆ ಕೀಲು ನೋವು ಕಾಣಿಸಿಕೋಳ್ಳುತ್ತದೋ ಆವಾಗ ಈ ಎಣ್ಣೆಗೆ ಗಾಜ್ಸು ಬೆರೆಸಿ ನೋವಿದ್ದ ಜಾಗದಲ್ಲಿ ಹಚ್ಚಿ. ಬಳಿಕ ಪ್ಲಾಸ್ಟಿಕ್ ಬ್ಯಾಗ್ ಆ ಜಾಗದಲ್ಲಿ ಕಟ್ಟಿ ಮೇಲಿನಿಂದ ವುಲನ್ ಶಾಲಿನಿಂದ ಸುತ್ತಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಕೀಲುಗಳು ಎಣ್ಣೆಯಲ್ಲಿನ ನಿಂಬೆ ಸಿಪ್ಪೆಯ ರಸವನ್ನ ಹೀರಿಕೊಳ್ಳುತ್ತದೆ ಹಾಗೂ ಶೀಘ್ರ ಶಮನ ಕೂಡಾ ಆಗುತ್ತದೆ. ಇನ್ನ ಈ ವಿಧಾನವನ್ನ ರಾತ್ರಿ ಮುಲಗುವ ಮುನ್ನ ಮಾಡಿದ್ರೆ ಉತ್ತಮ ಫಲಿತಾಂಶ ನಿಮ್ಮದಾಗುವುದು. ಇನ್ನ ಮರುದಿನ ಬೆಳಗ್ಗೆನೇ ನೀವು ವ್ಯತ್ಯಾಸ ಕಾಣಬಹುದು.

ನಿಂಬೆ ಸಿಪ್ಪೆ ಸೇವನೆ ಹೃದಯಕ್ಕೆ ಒಳ್ಳೆಯದು:

ನಿಂಬೆ ಸಿಪ್ಪೆಯಲ್ಲಿ ಹೆಚ್ಚು ಪೊಟ್ಯಾಶಿಯಂ ಇದೆ. ಹಾಗಾಗಿ ಇದನ್ನು ಸೇವನೆ ಮಾಡುವುದರಿಂದ ಇದು ನಿಮ್ಮ ಕೊಲೆಸ್ಟ್ರಾಲ್ ಲೆವೆಲ್ ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನ ಸಹಜವಾಗಿರಿಸುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:

ನಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ಇದನ್ನ ಸೇವಿಸಿದ್ರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ನೆಗಡಿ, ಜ್ವರ ಗಂಟಲು ನೋವಿನಂತಹ ಸಮಸ್ಯೆಯಿಂದ ನೀವು ಪಾರಾಗಬಹುದು.

ಮಲಬದ್ಧತೆ ಹಾಗೂ ಗ್ಯಾಸ್ ಸಮಸ್ಯೆಗೆ ಬೆಸ್ಟ್ ಮೆಡಿಸನ್:

ನಿಂಬೆ ಸಿಪ್ಪೆಯಲ್ಲಿ ಫೈಬರ್ ಅಂಶವಿರುವುದರಿಂದ ಇದರ ಸೇವನೆಯಿಂದ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಅಲ್ಲದೇ ಮಲಬದ್ಧತೆ ಹಾಘೂ ಗ್ಯಾಸ್‌ನಂತಹ ಸಮಸ್ಯೆಗೆ ಇದು ಬೆಸ್ಟ್ ಮೆಡಿಸನ್.

ತೂಕ ಇಳಿಕೆ:

ನಿಂಬೆ ಸೇವನೆಯಿಂದ ದೇಹ ತೂಕ ಕೂಡಾ ಕಡಿಮೆ ಮಾಡಬಹುದು. ನಿಂಬೆಯಲ್ಲಿರುವ ಪೆಕ್ಟಿನ್ ಅಂಶವು ಕರುಳು ಸಕ್ಕರೆ ಅಂಶವನ್ನ ಹೀರು ಕೊಳ್ಳುವುದನ್ನ ತಡೆಯುತ್ತದೆ. ಇದರಿಂದ ದೇಹ ತೂಕ ಹೆಚ್ಚಾಗದೇ ಇಳಿಕೆಯಾಗುತ್ತದೆ.

ಸಕ್ಕರೆ ಖಾಯಿಲೆಗೆ ಮದ್ದು:

ಸಕ್ಕರೆ ಖಾಯಿಲೆ ಇರೋರು ನಿಂಬೆ ಸೇವಿಸಿದ್ರೆ ಬೆಸ್ಟ್. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನ ಕಂಟ್ರೋಲ್ ನಲ್ಲಿಟ್ಟುಕೊಳ್ಳಲು ನಿಂಬೆ ಬೆಸ್ಟ, ಚಯಾಪಚಯ ಕ್ರಿಯೆಗೂ ನಿಂಬೆ ಸಿಪ್ಪೆ ಸಹಕಾರಿ

ಹೆಲ್ತಿ ಸ್ಕಿನ್:

ಸ್ಕಿನ್ ಸಮಸ್ಯೆಗೆ ನೀವು ಪರಿಹಾರ ಹುಡುಕುತ್ತಿದ್ದರೆ ಅದಕ್ಕೂ ನಿಂಬೆ ಬೆಸ್ಟ್. ನಿಂಬೆ ಸಿಪ್ಪೆಯು ಡಾರ್ಕ್ ಸ್ಪಾಟ್ ನ್ನು ನಿರ್ಮೂಲನೆ ಮಾಡುತ್ತದೆ. ನೆರಿಗೆ ಸೇರಿದಂತೆ ಇನ್ನಿತ್ತರ ವಯೋ ಸಹಜ ಸಮಸ್ಯೆಗೆ ಇದು ಉತ್ತಮ ಔಷಧ. ನೀವು ಇದನ್ನ ನೇರವಾಗಿ ಸೇವಿಸಬಹುದು ಇಲ್ಲ ಚರ್ಮದ ಮೇಲೆ ಲೇಪಿಸಿ, ಉತ್ತಮ ಫಲಿತಾಂಶ ಕಂಡುಕೊಳ್ಳಬಹುದು.

Read more about: health
English summary

Health Benefits For Lemon Peels| Lemon Peels For Joints| How To Get Rid Of Joint Pain, Remedies For Joint Pain

Joint pain is usually called by a condition known as arthritis. In this condition, there is severe pain and inflammation of joints due to friction between joint bones due to wear and tear of cartilage. Lemon peels are rich in calcium, vitamin C, pectin, fibre, minerals. All these ingredients in lemon peel help your body to repair and heal.
Story first published: Monday, April 16, 2018, 18:00 [IST]
X
Desktop Bottom Promotion