For Quick Alerts
ALLOW NOTIFICATIONS  
For Daily Alerts

ಪುರುಷರು ಸಾಧ್ಯವಾದಷ್ಟು ಈ ಒಂದು ಅಭ್ಯಾಸವನ್ನು ಕಂಟ್ರೋಲ್ ಕಡಿಮೆ ಮಾಡಿ!

By Deepu
|

ಹಸ್ತಮೈಥುನವೆoಬುದು ಪ್ರತಿಯೊಬ್ಬ ವ್ಯಕ್ತಿಯೂ ಕೈಗೊಳ್ಳುವ ಒಂದು ಪ್ರಕೃತಿ ಸಹಜವಾದ ವಿದ್ಯಮಾನವಾಗಿದೆ. ಅಂತೆಯೇ, ಈ ವಿದ್ಯಮಾನವು ಕೇವಲ ಮಾನವರಿಗಷ್ಟೇ ಸೀಮಿತವಾಗಿಲ್ಲ. ನಾವೇಕೆ ಹಸ್ತಮೈಥುನವನ್ನು ಮಾಡಿಕೊಳ್ಳುತ್ತೇವೆ ಎಂಬುದಕ್ಕೆ ಉತ್ತರವೇನೆoದರೆ ನೈಸರ್ಗಿಕವಾದ ಈ ಕ್ರಿಯೆಯು, ದೇಹದಲ್ಲಿ ಸ್ರವಿಸುವ ಹಾರ್ಮೋನಿಗೆ ನೀಡುವ ಒಂದು ಪ್ರತಿಕ್ರಿಯೆಯಾಗಿದೆ ಅಷ್ಟೇ. ನಮಗೆ ಒಂದು ರೀತಿಯ ನವಿರಾದ ಭಾವನೆಯನ್ನುoಟು ಮಾಡುವ ಡೋಪಮೈನ್ ಎಂಬ ಹಾರ್ಮೋನು, ಮೆದುಳಿನಲ್ಲಿ ಬಿಡುಗಡೆಯಾಗುತ್ತದೆ. ಹಸ್ತಮೈಥುನದಂತಹ ವಿಚಾರದ ಕುರಿತು ಹೇಳಬೇಕೆಂದರೆ, ಹಸ್ತಮೈಥುನದ ಮೂಲಕ ನಿಮ್ಮನ್ನು ನೀವೇ ಆನಂದಿಸಿಕೊಳ್ಳುವುದು ಖಂಡಿತವಾಗಿಯೂ ತಪ್ಪೇನಲ್ಲ!

ಆದರೆ ಅತಿಯಾದ ಹಸ್ತಮೈಥುನದಿ೦ದ ಪುರುಷರ ಹಾಗೂ ಸ್ತ್ರೀಯರ ಜನನಾ೦ಗಗಳಲ್ಲಿ ಬಾವುಗಳು೦ಟಾಗುತ್ತವೆ ಎ೦ದು ಸ೦ಶೋಧಕರು ಹೇಳುತ್ತಾರೆ. ಅನೇಕ ಸ೦ದರ್ಭಗಳಲ್ಲಿ ಈ ಚಟವು ಮಿತಿಮೀರಿದಾಗ, ಪುರುಷರ ಶರೀರಕ್ಕೆ ವೀರ್ಯಾಣುಗಳನ್ನು ಉತ್ಪಾದಿಸುವುದೂ ಕೂಡ ಕಷ್ಟವಾಗುತ್ತದೆ. ಯಾಕೆ೦ದರೆ, ಅನಿಯಮಿತವಾದ ಹಸ್ತಮೈಥುನವು ವೀರ್ಯಾಣುಗಳ ಸ೦ಖ್ಯೆಯನ್ನು ಕಡಿಮೆ ಮಾಡಬಲ್ಲದು.

ಇನ್ನೊ೦ದು ಗಮನಾರ್ಹ ಸ೦ಗತಿಯೇನೆ೦ದರೆ, ಅತಿಯಾದ ಹಸ್ತಮೈಥುನವು ಅವಧಿಪೂರ್ವ ವೀರ್ಯಸ್ಖಲನಕ್ಕೆ ದಾರಿಮಾಡಿಕೊಡುತ್ತದೆ ಹಾಗೂ ಇದು ನಿಮ್ಮ ಲೈ೦ಗಿಕ ಜೀವನದ ಮೇಲೆ ಗ೦ಭೀರವಾದ ಪರಿಣಾಮವನ್ನು೦ಟು ಮಾಡುತ್ತದೆ. ವಾಸ್ತವದಲ್ಲಿ ಹಸ್ತಮೈಥುನ ಒಂದು ನೈಸರ್ಗಿಕ ಹಾಗೂ ಸ್ವಾಭಾವಿಕ ಕ್ರಿಯೆಯಾಗಿದ್ದು ಇದರ ಮೂಲಕ ಶೀಘ್ರ ನಿದ್ದೆಗೆ ಜಾರಲು, ಮಾನಸಿಕ ಒತ್ತಡ ನಿವಾರಿಸಲು, ಉದ್ವೇಗ ಅಥವಾ ಇತರ ಖಿನ್ನತೆಗಳಿಂದ ಹೊರಬರಲೂ ಸಾಧ್ಯವಾಗುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚಲು, ಪ್ರಾಸ್ಟೇಟ್ ಗ್ರಂಥಿಗಳ ಕ್ಷಮತೆ ಹೆಚ್ಚಿಸಲು ಹಾಗೂ ಮನಸ್ಸಿಗೆ ಮುದನೀಡುವ ಎಂಡಾರ್ಫಿನ್ ಗಳ ಉತ್ಪತ್ತಿಗೂ ನೆರವಾಗುತ್ತದೆ. ಒಂದು ವೇಳೆ ಈ ಕ್ರಿಯೆ ವಿಪರೀತವಾದರೆ ಯಾವ ತೊಂದರೆಗಳು ಎದುರಾಗುತ್ತವೆ ಎಂದು ನೋಡೋಣ....

ಸೂಚನೆ: ಈ ಲೇಖನದಲ್ಲಿ ಒದಗಿಸಲಾಗಿರುವ ಮಾಹಿತಿಗಳು ಹಸ್ತಮೈಥುನ ಕೆಟ್ಟದ್ದು ಎಂದಾಗಲೀ ಯಾವುದೇ ಧಾರ್ಮಿಕ ವಿಧಿಯನ್ನು ವಿರೋಧಿಸುವುದಾಗಲೀ ಯಾವುದನ್ನೂ ಬಿಂಬಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಹಸ್ತಮೈಥುನದ ಬಗ್ಗೆ ಇರುವ ವೈಜ್ಞಾನಿಕ ಮಾಹಿತಿಯನ್ನು ಹಾಗೂ ಇದರ ವೈಪರೀತ್ಯಗಳ ಪರಿಣಾಮವನ್ನು ಮಾತ್ರವೇ ವಿವರಿಸಲಾಗಿದೆ...

ಮೂತ್ರನಾಳದ ಸೋಂಕು ಕಾಡಬಹುದು!

ಮೂತ್ರನಾಳದ ಸೋಂಕು ಕಾಡಬಹುದು!

ಈ ವ್ಯಸನಕ್ಕೆ ತುತ್ತಾದ ವ್ಯಕ್ತಿಗಳು ತಮ್ಮ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥವನ್ನು ಕಳೆದುಕೊಂಡಿರುವುದನ್ನು ಕೆಲವು ಸಂದರ್ಭಗಳಲ್ಲಿ ಗಮನಿಸಲಾಗಿದೆ. ತನ್ಮೂಲಕ ನಾಲ್ಕು ಜನರ ನಡುವೆ ಇದ್ದ ಸಮಯದಲ್ಲಿ ಮೂತ್ರ ಪ್ರಕಟಗೊಂಡು ಮುಜುಗರ ಅನುಭವಿಸಬೇಕಾಗುತ್ತದೆ. ಇತ ಅಡ್ಡಪರಿಣಾಮಗಳಲ್ಲಿ ಅತೀವವಾದ ದೈಹಿಕ ಸುಸ್ತು, ನಪುಂಸಕತೆ, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ, ಅನಿಯಂತ್ರಿತ ವೀರ್ಯಸ್ಖಲನ , ಮಹಿಳೆಯರಲ್ಲಿ ಅನಿಯಂತ್ರಿತ ಯೋನಿಸ್ರಾವ, ಆರ್ದ್ರತೆಯ ಕೊರತೆಯಿಂದಾಗಿ ಒಣಗುವಿಕೆ, ಮೂತ್ರನಾಳದಲ್ಲಿ ಸೋಂಕು ಮೊದಲಾದವು ಎದುರಾಗುತ್ತವೆ.

ಶಕ್ತಿ ಕುಂದುವಂತೆ ಮಾಡುತ್ತದೆ

ಶಕ್ತಿ ಕುಂದುವಂತೆ ಮಾಡುತ್ತದೆ

ಹಸ್ತಮೈಥುನವು ಹಾನಿಕಾರಕವಾದ ಒಂದು ಚಟುವಟಿಕೆ ಎಂದು ಹೇಳಲಾಗುತ್ತದೆ. ಹಸ್ತಮೈಥುನದಲ್ಲಿ ವ್ಯಕ್ತಿ ಹೆಚ್ಚು ಶಕ್ತಿಯನ್ನು ಬಳಸಬೇಕಾಗುತ್ತದೆ. ನಿತ್ಯವೂ ಈ ಕ್ರಿಯೆ ಹಲವು ಬಾರಿ ನಡೆಯುತ್ತಿದ್ದರೆ ಕ್ರಮೇಣವಾಗಿ ದೇಹದಲ್ಲಿರುವ ಶಕ್ತಿಯು ಕುಂದುತ್ತಾ ಬರುತ್ತದೆ. ಜೊತೆಗೆ ಪುರುಷರ ದೌರ್ಬಲ್ಯತೆಗೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು.

ಲಿಂಗ ನಿಮಿರುವಿಕೆಯ ದೋಷ

ಲಿಂಗ ನಿಮಿರುವಿಕೆಯ ದೋಷ

ಅಧಿಕ ಪ್ರಮಾಣದ ಹಸ್ತ ಮೈಥುನದಿಂದ ಉಂಟಾಗುವ ಅಧಿಕ ದುಷ್ಪರಿಣಾಮ ಎಂದರೆ ಅದು ಲಿಂಗ ನಿಮಿರುವಿಕೆಯ ದೋಷವಾಗಿದೆ. ಅತ್ಯಧಿಕ ಬಾರಿಗೆ ಹಸ್ತ ಮೈಥುನ ಮಾಡಿಕೊಳ್ಳುವವರು ಮುಂದೆ ತಮ್ಮ ಲಿಂಗ ನಿಮಿರುವಿಕೆಯಲ್ಲಿ ದೋಷವನ್ನು ಎದುರಿಸುವ ಅಪಾಯ ಹೆಚ್ಚಿರುತ್ತದೆ.

ನರಗಳ ದೌರ್ಬಲ್ಯತೆ

ನರಗಳ ದೌರ್ಬಲ್ಯತೆ

ಅಧಿಕ ಪ್ರಮಾಣದ ಹಸ್ತ ಮೈಥುನದಿಂದ ನರ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ವಯಸ್ಸಾದ ಗಂಡಸರು ಇದರಲ್ಲಿ ತೊಡಗಿಸಿಕೊಂಡಾಗ ಅವರಲ್ಲಿ ತೀವ್ರ ತರಹದ ನರ ಸಂಬಂಧಿ ಸಮಸ್ಯೆಗಳು ಕಂಡು ಬರುತ್ತವೆ.

ಶೀಘ್ರ ವೀರ್ಯ ಸ್ಖಲನ

ಶೀಘ್ರ ವೀರ್ಯ ಸ್ಖಲನ

ಅಧಿಕ ಪ್ರಮಾಣದ ಹಸ್ತಮೈಥುನವು ಶೀಘ್ರ ವೀರ್ಯ ಸ್ಖಲನದ ಜೊತೆಗೆ ತಳಕು ಹಾಕಿಕೊಂಡಿರುತ್ತದೆ. ಅತಿ ಹೆಚ್ಚು ಹಸ್ತ ಮೈಥುನ ಮಾಡಿಕೊಳ್ಳುವವರು ತಮ್ಮ ವೀರ್ಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಪೆನಲ್ ನರವನ್ನು ಹೆಚ್ಚು ಬಾರಿಗೆ ಉದ್ರೇಕಗೊಳಿಸುವುದರಿಂದ ಈ ಸಮಸ್ಯೆಯು ತಲೆದೋರುತ್ತದೆ.

ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ

ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ

ಈ ಅಂಶವು ಹಿಂದೆ ಹೇಳಲಾದ ಅಂಶಕ್ಕೆ ಪೂರಕವಾಗಿ ಬರುತ್ತದೆ. ಅಂದರೆ ಶೀಘ್ರ ವೀರ್ಯ ಸ್ಖಲನ ಸಮಸ್ಯೆಯಿರುವವರು ತಮ್ಮ ಸಂಗಾತಿಯೊಂದಿಗೆ ಉತ್ತಮವಾದ ಲೈಂಗಿಕ ಜೀವನವನ್ನು ನಡೆಸಲು ತೊಂದರೆಯಾಗುತ್ತದೆ. ಮಿಲನ ಸುಖವನ್ನು ಮಹತ್ತರ ಹಂತಕ್ಕೆ ಕೊಂಡೊಯ್ಯುವ ಘಟ್ಟವೇ ವೀರ್ಯ ಸ್ಖಲನ ಅದೇ ಬೇಗ ಆದರೆ ಇನ್ನೂ ಅದರಲ್ಲಿ ಆನಂದ ಎಲ್ಲಿ ಸಿಗುತ್ತದೆ.

ನಿದ್ದೆಯ ಮಂಪರು ಸದಾ ಇರುವಂತೆ ಮಾಡುತ್ತದೆ

ನಿದ್ದೆಯ ಮಂಪರು ಸದಾ ಇರುವಂತೆ ಮಾಡುತ್ತದೆ

ನೀವು ಅಧಿಕ ಪ್ರಮಾಣದಲ್ಲಿ ಹಸ್ತ ಮೈಥುನದಲ್ಲಿ ತೊಡಗಿಸಿಕೊಂಡರೆ, ಅದು ನಿಮ್ಮನ್ನು ನಿದ್ದೆಯ ಮಂಪರಿನಲ್ಲಿರುವಂತೆ ಮಾಡುತ್ತದೆ. ಏಕೆಂದರೆ ಹಸ್ತ ಮೈಥುನವು ಅಧಿಕವಾದಷ್ಟು ಮೆದುಳಿನಲ್ಲಿ ಅಧಿಕ ಪ್ರಮಾಣದ ಡೋಪಮೈನ್ ಬಿಡುಗಡೆಯಾಗುತ್ತದೆ.ಇದರಿಂದ ಮಂಪರು ಆವರಿಸುತ್ತದೆ.

ಕೂದಲು ಉದುರುವಿಕೆ

ಕೂದಲು ಉದುರುವಿಕೆ

ವಿಪರೀತ ಹಸ್ತಮೈಥುನವು ಪುರುಷರಲ್ಲಿ ಕೂದಲು ನಷ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ ನೀವು ವಾರಕ್ಕೆ 6-7 ಬಾರಿ ಹಸ್ತಮೈಥುನ ಮಾಡುತ್ತಿದ್ದರೆ ಮತ್ತು ಕೂದಲನ್ನು ಕಳೆದುಕೊಳ್ಳುತ್ತಿದ್ದರೆ, ನೀವು ಆಶ್ಚರ್ಯ ಪಡುವ ಅಗತ್ಯವಿಲ್ಲ!

ಮರೆವು ಉಂಟಾಗುವುದು!

ಮರೆವು ಉಂಟಾಗುವುದು!

ಅತಿಯಾಗಿ ಹಸ್ತಮೈಥುನ ಮಾಡುವುದರಿಂದ ಮಿದುಳಿನಲ್ಲಿ ಅತಿಯಾದ ಡೋಪಮೈನ್ ಬಿಡುಗಡೆ ಆಗುತ್ತದೆ. ಇದರಿಂದ ಮರೆವು ಉಂಟಾಗುವುದು. ಕಾಲಾಂತರದಲ್ಲಿ ಕ್ರಮೇಣ ಮಿದುಳಿಗೆ ಸಂಬಂಧಿಸಿದ ಅನೇಕ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುವುದು.

ಲೈಂಗಿಕ ಆಸಕ್ತಿ ಕುಂದುವುದು

ಲೈಂಗಿಕ ಆಸಕ್ತಿ ಕುಂದುವುದು

ಅಧಿಕ ಪ್ರಮಾಣದಲ್ಲಿ ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುವವರು ಸ್ವಾಭಾವಿಕವಾದ ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಇವರಿಗೆ ಆ ಕಾಲ್ಪನಿಕ ಲೈಂಗಿಕ ಜೀವನವೇ ಇಷ್ಟವಾಗುತ್ತದೆ. ಜೊತೆಗೆ ಅಧಿಕ ಹಸ್ತ ಮೈಥುನವು ಗಂಡಸರ ದೇಹದಲ್ಲಿರುವ ಟೆಸ್ಟೋಸ್ಟೇರೋನ್ ಎಂಬ ಲೈಂಗಿಕತೆಗೆ ಸಂಬಂಧಿಸಿದ ಹಾರ್ಮೋನ್ ಮೇಲೆ ದುಷ್ಪರಿಣಾಮ ಬೀರುತ್ತದೆ ಇದರಿಂದಾಗಿ ಈ ಸಮಸ್ಯೆ ಕಂಡು ಬರುತ್ತದೆ.

ನಪುಂಸಕತ್ವ ಬರಬಹುದು!

ನಪುಂಸಕತ್ವ ಬರಬಹುದು!

ನಮ್ಮ ದೇಹದ ಎಲ್ಲಾ ಕ್ರಿಯೆಗಳಿಗೂ ಒಂದು ಸಮಯ ಹಾಗೂ ಸಂದರ್ಭ ಇದ್ದೇ ಇರುತ್ತದೆ. ಇದನ್ನು ಮೀರಿ ನಡೆಸುವ ಯಾವುದೇ ಕಾರ್ಯ ಅಪಾಯಕಾರಿಯಾಗಿದೆ. ಉದಾಹರಣೆಗೆ ಬಿಟ್ಟೂ ಬಿಡದೇ ಸತತವಾಗಿ ನೀರು ಕುಡಿಯುತ್ತಲೇ ಇದ್ದರೆ ಏನಾಗುತ್ತದೆ? ಹೊಟ್ಟೆಯ ಸಾಮರ್ಥ್ಯಕ್ಕೂ ಮೀರಿ ನೀರು ಸಂಗ್ರಹಗೊಂಡರೆ ಇದು ಇತರ ಅಂಗಗಳಿಗೆ ಒತ್ತಿ ತೊಂದರೆ ಎದುರಾಬಹುದಲ್ಲವೇ? ಹಾಗೇ ಈ ಕ್ರಿಯೆ ಸಹಾ. ಈ ಕ್ರಿಯೆ ಅತಿಯಾದರೆ ಇದಕ್ಕನುಗುಣವಾಗಿ ಲೈಂಗಿಕ ರಸದೂತಗಳನ್ನೂ

ಅನಿವಾರ್ಯವಾಗಿ ದೇಹ ಉತ್ಪಾದಿಸಬೇಕಾಗುತ್ತದೆ ಅಥವಾ ನರಗಳ ಸಂವಹಕಗಳನ್ನೂ (neurotransmitters) ಹೆಚ್ಚಿಸಬೇಕಾಗುತ್ತದೆ. ಇದರ ಪರಿಣಾಮ ಪ್ರತಿ

ಪುರುಷನಲ್ಲಿಯೂ ಬೇರೆ ಬೇರೆ ರೀತಿಯಲ್ಲಾಗುತ್ತದೆ. ಕೆಲವರಿಗೆ ಸುಸ್ತು, ಕಣ್ಣು ಕತ್ತಲಾಗುವುದು, ಕೂದಲು ಉದುರುವುದು, ವೃಷಣಗಳಲ್ಲಿ ಅಪಾರ ನೋವು, ಸೊಂಟ ಬಗ್ಗಿಸಲೂ ಆಗದಂತಹ ನೋವು ಮೊದಲಾದವು ಎದುರಾಗುತ್ತವೆ. ಮಾನಸಿಕವಾಗಿಯೂ ವ್ಯಕ್ತಿ ಕುಗ್ಗಬಹುದು. ಹಾಗಾಗಿ ಇವುಗಳಲ್ಲಿ ಯಾವುದೊಂದು ಲಕ್ಷಣವೂ ಕಂಡುಬಂದರೆ ತಕ್ಷಣ ಹಸ್ತಮೈಥುನದ ಆವರ್ತನವನ್ನು ಹೆಚ್ಚಿಸಬೇಕು. ಅಗತ್ಯಬಿದ್ದರೆ ವೈದ್ಯರನ್ನು ಕಾಣುವುದೇ ಮೇಲು.

ನಿಮಿರುವಿಕೆ ಸಮಸ್ಯೆ ಕಾಡಬಹುದು

ನಿಮಿರುವಿಕೆ ಸಮಸ್ಯೆ ಕಾಡಬಹುದು

ಪುರುಷರಲ್ಲಿ ಸ್ವಮೈಥುನದ ಪ್ರಮಾಣ ಹೆಚ್ಚಾದರೆ ಎದುರಾಗುವ ಅಡ್ಡಪರಿಣಾಮಗಳಲ್ಲಿ ಇದು ಅತ್ಯಂತ ಘೋರವಾಗಿದೆ. ಮೊದಲ ನಿಮಿರುವಿಕೆಯಲ್ಲಿ ಪುರುಷರಿಗೆ ಅತಿ ಹೆಚ್ಚಿನ ದೃಢತೆ ಸಿಗುತ್ತದೆ. ತದನಂತದರ ನಿಮಿರುವಿಕೆಯಲ್ಲಿ ಹಿಂದಿನಷ್ಟು ದೃಢತೆ ಇರುವುದಿಲ್ಲ ಹಾಗೂ ಕ್ರಮೇಣ ಇದು ಇನ್ನಷ್ಟು ಕಡಿಮೆಯಾಗುತ್ತಾ ಸೌಮ್ಯವಾದ ಸ್ಪಂಜಿನಂತಾಗುತ್ತದೆ. ಆದರೆ ಎಷ್ಟು ಸ್ಖಲನಗಳ ಬಳಿಕ ಹೀಗಾಗುತ್ತದೆ ಎಂಬುದಕ್ಕೆ ಯಾವುದೇ ಖಚಿತ ವಿವರಣೆಯಿಲ್ಲ. ಪ್ರತಿ ಪುರುಷರಿಗೂ ಇದು ಭಿನ್ನವಾಗಿರುತ್ತದೆ. ಅಲ್ಲದೇ ಸತತ ಘರ್ಷಣೆಯಿಂದ ಸೂಕ್ಷ್ಮ ಗೀರುಗಳು, ಚರ್ಮ ಸುಲಿಯುವುದು ಹಾಗೂ ಬಾವು ಕಾಣಿಸಿಕೊಳ್ಳಬಹುದು.

English summary

Is masturbating every day bad for men health?

Here are harmful effects of masturbation in men. Read on to understand...
X
Desktop Bottom Promotion